ಟೊಮ್ಯಾಟೋ ಕೆಚಪ್ ಅಂದ್ರೆ ಬಹುತೇಕರ ಬಾಯಲ್ಲಿ ನೀರೂರುತ್ತೆ. ಅದು ನಾನಾ ಆಹಾರಗಳಿಗೆ ಬೆಸ್ಟ್ ಕಾಂಬಿನೇಷನ್ ಅಂತಲೇ ಈವತ್ತಿಗೆ ಫೇಮಸ್ಸು. ಅದರ ಕಾರಣದಿಂದಲೇ ನಾನಾ ತಿನಿಸುಗಳ ರುಚಿ ದುಪ್ಪಟ್ಟಾಗುತ್ತೆ. ಈ ರುಚಿಯ ಕಾರಣದಿಂದಲೇ ಕೆಚಪ್ ಅನ್ನೋದು ವಿಶ್ವಾದ್ಯಂತ ಆಹಾರಪ್ರಿಯರ ಹಾಟ್ ಫೇವರಿಟ್ ಆಗಿ ಬಿಟ್ಟಿದೆ. ಹೀಗೆ ನಾವೆಲ್ಲ ಚಪ್ಪರಿಸಿ ತಿನ್ನೋ ಕೆಚಪ್ ಹಿಂದೆ ಅಚ್ಚರಿದಾಯಕ ಹಿಸ್ಟರಿಯಿದೆ. ಯಾರಿಗೇ ಆದ್ರೂ ನಂಬಲು ತುಸು ಕಷ್ಟವಾಗುವಂಥ ಒಂದಷ್ಟು ಇಂಟರೆಸ್ಟಿಂಗ್ ವಿಚಾರಗಳೂ ಇದ್ದಾವೆ.
ಈಗ ನಮ್ಮ ಆಹಾರದ ಭಾಗವಾಗಿರೋ ಟೊಮ್ಯಾಟೋ ಕೆಚಪ್ ಒಂದು ಕಾಲದಲ್ಲಿ ನಾನಾ ಕಾಯಿಲೆಗಳಿಗೆ ಔಷಧಿಯಂತೆ ಬಳಕೆಯಾಗ್ತಿತ್ತಂತೆ.ಅದುವರೆಗೂ ಆಹಾರವಾಗಿದ್ದ ಟೊಮ್ಯಾಟೋಗೆ ಔಷಧಿಯ ಖದರ್ ತಂದು ಕೊಟ್ಟಾತ ಡಾ. ಜಾನ್ ಕೂಕ್ ಬೆನೆಟ್ ಎಂಬಾತ. 1834ರಲ್ಲಿ ಬೆನೆಟ್ ನಾನಾ ರೋಗಗಳಿಗೆ ಮದ್ದಾಗಿ ಟೊಮ್ಯಾಟೋ ಕೆಚಪ್ ಅನ್ನು ಸಿದ್ಧಪಡಿಸಿದ್ದನಂತೆ. ಅದರಲ್ಲಿ ವಿಟಮಿನ್ಸ್ ಮತ್ತು ಆಂಟಿ ಆಕ್ಸಿಡೆಂಟ್ಸ್ ಇರೋದ್ರಿಂದ ಅದು ಹಲವು ಖಾಯಿಲೆಗಳಿಗೆ ರಾಮಬಾಣ ಅಂತ ಬೆನೆಟ್ ಪ್ರತಿಪಾದಿಸಿದ್ದ. ಅದರಿಂದಲೇ ಡಯೇರಿಯಾ, ಜಾಂಡೀಸ್ನಂಥಾ ಕಾಯಿಲೆಯನ್ನೂ ಗುಣಪಡಿಸಿದ್ದ.
ಬಹುಶಃ ಯಾರೋ ಐನಾತಿ ರೋಗಿಯೊಬ್ಬ ಕೆಚಪ್ ಔಷಧಿಯನ್ನು ಆಹಾರದೊಂದಿಗೆ ನೆಂಚಿಕೊಂಡನೇನೋ. ಆ ಕಾಂಬಿನೇಷನ್ನು ರುಚಿಯೆನ್ನಿಸಿ ಕ್ರಮೇಣ ಅದೇ ಒಂದು ಆಹಾರ ವಸ್ತುವಾಗಿ ರೂಪಾಂತರ ಹೊಂದಿದ್ದರೂ ಇರಬಹುದು. ಅಂತೂ ಎಲ್ಲರಿಗೂ ಪ್ರಿಯವಾದ ಟೊಮ್ಯಾಟೋ ಕೆಚಪ್ ಔಷಧೀಯ ಗುಣ ಹೊಂದಿದೆ ಅನ್ನೋದ್ರಲ್ಲಿ ಯಾವ ಅನುಮಾನವೂ ಇಲ್ಲ.