ಶಿಕ್ಷಕ ವೃತ್ತಿ ಅನ್ನೋದು ಪವಿತ್ರವಾದ ವೃತ್ತಿಗಳಲ್ಲೊಂದಾಗಿ ಗುರುತಿಸಿಕೊಂಡಿದೆ. ನಮ್ಮ ದೇಶದಲ್ಲಿ ಮಾತ್ರವಲ್ಲದೇ ಬೇರೆಲ್ಲ ದೇಶಗಳಲ್ಲಿಯೂ ಕೂಡಾ ಈ ವೃತ್ತಿಯ ಬಗೆಗೊಂದು ಗೌರವಾಧರ ಇದ್ದೇ ಇದೆ. ಈ ವೃತ್ತಿಯನ್ನು ಕೂಡಾ ಬಹುತೇಕರು ಅಂಥಾ ಗೌರವ ಉಳಿಯುವಂತೆಯೇ ನಿರ್ವಹಿಸಿಕೊಳ್ಳುತ್ತಾ ಬರುತ್ತಿದ್ದಾರೆ. ಆದರೆ ಅತಿರೇಕ ಎಂಬುದು ಯಾರಲ್ಲಿ ಯಾವ ಬಗೆಯಲ್ಲಾದರೂ ಉದ್ಭವಿಸಬಹುದು. ಅಂಥಾದ್ದೇ ಅತಿರೇಕದಿಂದ ಟ್ಯಾಟೂ ಹುಚ್ಚಿಗೆ ಬಿದ್ದಿದ್ದ ಪರ್ಶಿಯಾದ ಶಿಕ್ಷಕನೊಬ್ಬ ಕೇಸು ಜಡಿಸಿಕೊಂಡು ಕೆಲಸವನ್ನೇ ಕಳೆದುಕೊಂಡಿದ್ದಾನೆ.
ಹೀಗೆ ವಿಚಿತ್ರವಾದ ಟ್ಯಾಟೂ ಹುಟ್ಟಿನಿಂದಲೇ ವಿಶ್ವ ವಿಖ್ಯಾತಿ, ಕುಖ್ಯಾತಿ ಗಳಿಸಿಕೊಂಡಿರುವಾತ ಸಿಲ್ವಾಯ್ನ್ ಹೆಲೈನ್. ಈತ ಆರಂಭದಿಂದಲೂ ಸ್ಟೈಲಿಶ್ ಆಸಾಮಿ. ಆದ್ರೆ ಅದೇಕೋ ಶಿಕ್ಷಕ ವೃತ್ತಿಯನ್ನ ಆರಿಸಿಕೊಂಡಿದ್ದ. ಪ್ರತಿಷ್ಟಿತವಾದ ಶಾಲೆಯೊಂದರಲ್ಲಿ ಆತ ಶಿಕ್ಷಕನಾಗಿ ಸೇರಿಕೊಂಡಿದ್ದ. ಒಂದಷ್ಟು ವರ್ಷಗಳ ಕಾಲ ಚೆಂದಗೆ ಆ ವೃತ್ತಿಯನ್ನ ನಿರ್ವಹಿಸಿದ್ದ.
ಇಂಥಾ ಆಸಾಮಿಗೆ ಇತ್ತೀಚೆಗೆ ಅದೇನಾಯ್ತೋ ಗೊತ್ತಿಲ್ಲ, ಇದ್ದಕ್ಕಿದ್ದಂತೆ ಟ್ಯಾಟೂ ಹುಟ್ಟು ಅಂಟಿಕೊಂಡಿತ್ತು. ನಿಧಾನಕ್ಕೆ ದೇಹದ ಒಂದೊಂದೇ ಭಾಗಗಳಿಗೆ ಟ್ಯಾಟೂ ಹಾಕಿಸಲಾರಂಭಿಸಿದೆದ. ಆಡಳಿತ ಮಂಡಳಿ ಟ್ಯಾಟೂ ಬಗ್ಗೆ ಅಷ್ಟಾಗಿಯೇನೂ ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ ಒಂದಷ್ಟು ದಿನ ರಜೆ ಹಾಕಿದವನೇ ಮೈ ತುಂಬಾ ಟ್ಯಾಟೂ ಹಾಕಿಸಿಕೊಂಡು ಅದೇ ಅವತಾರದಲ್ಲಿ ಆತ ಶಾಲೆಗೆ ಬಂದಿದ್ದಾನೆ. ಅದೇನು ಅಂತಿಂಥಾ ಟ್ಯಾಟೂ ಅಲ್ಲ. ಆತನ ದೇಹದ ಪ್ರತೀ ಅಂಗಗಳನ್ನೂ ಟ್ಯಾಟೂಗಳೇ ಕವರ್ ಮಾಡಿದ್ದವು.
ಮುಖ ಮತ್ತು ಕಣ್ಣುಗಳ ಮೇಲೂ ಟ್ಯಾಟೂ ಚಿತ್ತಾರ ಮಾಡಿಕೊಂಡಿದ್ದ. ಕಣ್ಣಿಗೆ ಆಪರೇಷನ್ ಮಾಡಿಸಿ ಬಿಳಿ ಭಾಗವೂ ಕಪ್ಪಾಗುವಂತೆ ಮಾಡಿಕೊಂಡಿದ್ದ. ಥೇಟು ದೆವ್ವದಂತೆ ಕಾಣಿಸೋ ಈತನನ್ನು ಕಂಡು ಮಕ್ಕಳೆಲ್ಲ ಬೆಚ್ಚಿ ಬಿದ್ದಿವೆಯಂತೆ. ಕೆಲ ಮಕ್ಕಳು ಜ್ವರದಿಂದ ಹಾಸಿಗೆ ಹಿಡಿದು ನರಳಾಡಿವೆ. ಈ ಬಗ್ಗೆ ಕೆಲ ಪೋಷಕರು ದೂರು ನೀಡಿ ಆ ಶಿಕ್ಷಕನ ವಿರುದ್ಧ ಕೇಸು ಜಡಿದಿದ್ದಾರೆ. ಇದೀಗ ಆಡಳಿತ ಮಂಡಳಿ ಕೂಡಾ ಆತನನ್ನು ಕೆಲಸದಿಂದ ಕಿತ್ತು ಹಾಕಿದೆ. ಸದ್ಯಕ್ಕೆ ಆತ ಜೈಲುಪಾಲಾಗಿದ್ದಾನಂತೆ!