ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸಿದೆ. ಈ ಹೊತ್ತಿನಲ್ಲಿ ರಾಜಕೀಯ ಪಡಸಾಲೆಯ ತುಂಬಾ ನಾನಾ ಲಾಬಿಗಳು, ಟಿಕೇಟು ಗಿಟ್ಟಿಸುವ ಪೈಪೋಟಿಗಳೆಲ್ಲ ಚಾಲ್ತಿಗೆ ಬಂದಿವೆ. ಇಂಥಾ ಸಮಯದಲ್ಲಿ ಬೇರೆ ಬೇರೆ ಸೋಗಿನಲ್ಲಿದ್ದುಕೊಂಡು, ಎಮ್ಮೆಲ್ಲೆ ಆಗುವ ಕನಸಿಟ್ಟುಕೊಂಡಿರುವ ಒಂದಷ್ಟು ಮಂದಿ ನಾನಾ ಸ್ವರೂಪದಲ್ಲಿ ಲಗಾಟಿ ಹೊಡೆಯಲಾರಂಭಿಸಿದ್ದಾರೆ. ಅಂಥಾ ಗುಪ್ತ ಕ್ಯಾಂಡಿಡೇಟುಗಳಲ್ಲಿ ಕೆಲವರು ಸಮಾನತೆ ಅಂತೆಲ್ಲ ಬೊಂಬಡಾ ಬಜಾಯಿಸುತ್ತಿದ್ದಾರೆ. ಮತ್ತೆ ಕೆಲ ಮಂದಿ ದೇಶಪ್ರೇಮ, ಸಂಸ್ಕøತಿ ಎಂಬಿತ್ಯಾದಿ ಸವಕಲು ಸರಕುಗಳೊಂದಿಗೆ ಅಖಾಡಕ್ಕಿಳಿದಿದ್ದಾರೆ. ಹೊಸ ವರ್ಷದ ಆಸುಪಾಸಿನಲ್ಲಿ ಏಕಾಏಕಿ ಕೇಸರಿ ಶಾಲು ಹೊದ್ದು ಪಾದಯಾತ್ರೆ ಆರಂಭಿಸಿದ್ದ ನಟಿ, ನಿರ್ದೇಶಕಿ ರೂಪಾ ಅಯ್ಯರ್ ಕೂಡಾ ಆ ಸಾಲಿಗೆ ಸೇರಿಕೊಂಡಿರುವ ಕುರುಹುಗಳು ಸ್ಪಷ್ಟವಾಗಿಯೇ ಗೋಚರಿಸಲಾರಂಭಿಸಿವೆ!
ಅಷ್ಟಕ್ಕೂ ದೇಶಪ್ರೇಮವೆಂಬುದು ರಾಜಕೀಯ ಸರಕಾಗಿ ಯಾವುದೋ ಕಾಲವಾಗಿದೆ. ದೇಶಭಕ್ತಿಯನ್ನು ಒಂದಷ್ಟು ಮಂದಿ ಗುತ್ತಿಗೆ ಹಿಡಿದವರಂತಾಡುತ್ತಿದ್ದಾರೆ. ಈಗೊಂದಷ್ಟು ಕಾಲದಿಂದ ಅಂಥಾ ಪಟಾಲಮ್ಮಿನ ಪರವಾಗಿ ಬ್ಯಾಟಿಂಗು ನಡೆಸುತ್ತಾ, ಸುದ್ದಿ ಕೇಂದ್ರದಲ್ಲಿದ್ದಾಕೆ ರೂಪಾ ಅಯ್ಯರ್. ತನ್ನನ್ನು ತಾನು ಭರತನಾಟ್ಯ ಕಲಾವಿದೆಯಾಗಿ, ನಿರ್ದೇಶಕಿಯಾಗಿ, ನಟಿಯಾಗಿ ಗುರುತಿಸಿಕೊಂಡಿರುವ ರೂಪಾ ಅಯ್ಯರ್ ಬಗ್ಗೆ ಗಾಂಧಿನಗರದಲ್ಲಿ ಥರ ಥರದ ಆರೋಪಗಳಿದ್ದಾವೆ. ಕಲೆಯ ಪ್ರಭೆಯಲ್ಲಿಯೇ ಆರ್ಥಿಕ ಲಾಭ ಗಿಟ್ಟಿಸಿಕೊಳ್ಳಲು ಹವಣಿಸುತ್ತಾರೆಂಬ ಆಪಾದನೆಯೂ ಅವರ ಮೇಲಿದೆ. ಸರ್ಕಾರದ ಕಡೆಯಿಂದ ನಡೆದಿದ್ದ ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಲಾಭಿ ನಡೆಸಿ ಫಾಯಿದೆ ಗಿಟ್ಟಿಸಿಕೊಂಡಿರುವ ರೂಮರುಗಳೂ ಇದ್ದಾವೆ. ಇಂಥಾ ರೂಪಾ ಅಯ್ಯರ್ ಇದ್ದಕ್ಕಿದ್ದಂತೆ ಸಂಸ್ಕøತಿ ರಕ್ಷಕಿಯ ಅವತಾರದಲ್ಲಿ ಬೊಬ್ಬಿರಿದಿರೋದನ್ನು ಕಂಡು ಒಂದಷ್ಟು ಮಂದಿ ಆಶ್ಚರ್ಯಚಕಿತರಾಗಿದ್ದಾರೆ!
ಅದ್ಯಾವುದೇ ಸರ್ಕಾರಗಳಿದ್ದರೂ ಲಾಬಿ ನಡೆಸಿ ಲಾಭ ಗಿಟ್ಟಿಸಿಕೊಳ್ಳೋದರಲ್ಲಿ ರೂಪಾ ಅಯ್ಯರ್ರದ್ದು ಎತ್ತಿದ ಕೈ. ಈ ಹಿಂದೆ ಅಕ್ಕ ಸಮ್ಮೇಳನದ ವಾರಸೂದಾರಿಕೆ ಹೊತ್ತು ಮೆರೆದದ್ದು ಕೂಡಾ ಆ ಕಲೆಯ ಬಲದಿಂದಲೇ. ಈ ಅಕ್ಕ ಸಮ್ಮೇಳನದ ಅಕ್ಕಪಕ್ಕದಲ್ಲಿಯೇ ರೂಪಾ ಮೇಲೆ ಒಂದಷ್ಟು ಆರೋಪಗಳು ಕೇಳಿ ಬಂದಿದ್ದವು. ಅದೆಲ್ಲ ಹಾಗಿರಲಿ, ಇದೀಗ ರೂಪಾ ಅಯ್ಯರ್ ಹೊಸಾ ವರ್ಷದ ಹೊಸ್ತಿಲಲ್ಲಿಯೇ ಸಂಕ್ಸøತಿ ರಕ್ಷಕಿಯಾಗಿ ಗೆಟಪ್ಪು ಬದಲಿಸಿರೋದರ ವಿಚಾರಕ್ಕೆ ಬರೋಣ. ಇದೀಗ ಈಕೆ ವಿಶ್ವ ಹಿಂದೂ ಮಹಿಳಾ ಪ್ರತಿಷ್ಠಾನ ಟ್ರಸ್ಟ್ ಅಂತೊಂದನ್ನು ಸ್ಥಾಪಿಸಿದ್ದಾರಂತೆ. ಅದರ ನೆರಳಲ್ಲಿಯೇ ವಿದೇಶಿ ಪದ್ಧತಿಯ ಹೊಸಾ ವರ್ಷಾಚರಣೆ, ಪಾರ್ಟಿ ಮುಂತಾದವುಗಳನ್ನು ವಿರೋಧಿಸಿ ಬೀದಿಗಿಳಿದಿದ್ದಾರೆ. ಈ ಅಮೋಘ ಹೋರಾಟಕ್ಕೆ ಬ್ರಹ್ಮಾಂಡ ಗುರೂಜಿ ಎಂದೇ ಹೆಸರಾಗಿರುವ ಅವಿವೇಕಿಯೊಬ್ಬ ಸಾಥ್ ಕೊಟ್ಟಿದ್ದಾನೆ. ಬಾಯಿ ಬಿಟ್ಟರೆ ಕೆಟ್ಟಾ ಕೊಳಕು ಮಾತಾಡುವ, ತೀರಾ ಹೆಂಗಸರಿಗೂ ಹೀನಾಯವಾಗಿ ಬಯ್ಯುವ ಈ ಅಸಹ್ಯ ಆಸಾಮಿಯನ್ನು ಪಕ್ಕದಲ್ಲಿಟ್ಟುಕೊಂಡು, ರೂಪಾ ಅಯ್ಯರ್ ಸಂಸ್ಕøತಿಯ ಬಗ್ಗೆ ಮಾತಾಡೋದೇ ಹಾಸ್ಯಾಸ್ಪದ.
ಇದೀಗ ಟೀವಿ ಚಾನೆಲ್ಲುಗಳಲ್ಲಿ ಬಂಡಲ್ ಜ್ಯೋತಿಷಿಗಳದ್ದೊಂದು ದಂಡೇ ಇದೆ. ಆ ಫಟಿಂಗರ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲುವಾತ ಬೊಗಳೆ ಬ್ರಹ್ಮಾಂಡ. ವರ್ಷಗಳ ಹಿಂದೆ ಅದ್ಯಾವುದೋ ಬರಗೆಟ್ಟ ಚಾನೆಲ್ ಒಂದರಲ್ಲಿ ಕೂತು ಪ್ರಳಯವಾಗಿ ಬಿಡುತ್ತದೆಂಬಂತೆ ಹುಳಬಿಟ್ಟಿದ್ದವನು ಇದೇ ಬ್ರಹ್ಮಾಂಡ. ಐದೆಣ್ಣೆ ದೀಪ ಹಚ್ಚಿದರೆ ಪ್ರಳಯದಿಂದ ಬಚಾವಾಗಬಹುದೆಂಬ ನಾನ್ಸೆನ್ಸ್ ಪರಿಹಾರ ಸೂಚಿಸಿದ್ದವನೂ ಇದೇ ಬ್ರಹ್ಮಾಂಡ. ಜ್ಯೋತಿಷ್ಯ ಶಾಸ್ತ್ರವನ್ನು ತನ್ನ ತೀಟೆಗೆ ಬಳಸಿಕೊಳ್ಳುತ್ತಿರುವ ಈತನ ಸಂಸ್ಕøತಿ ಎಂಥಾದ್ದು, ಹೆಣ್ಣುಮಕ್ಕಳಿಗೀತ ಹೇಗೆಲ್ಲಾ ಗೌರವ ಕೊಡುತ್ತಾನೆಂಬುದು ಇಡೀ ಕರುನಾಡಿಗೇ ಗೊತ್ತಿದೆ. ಇಂಥವನ ಪಕ್ಕದಲ್ಲಿ ನಿಂತು ಸಂಸ್ಕøತಿಯ ಬಗ್ಗೆ ವೀರಾವೇಶದಿಂದ ಒದರಿದ ವೀರವನಿತೆ ರೂಪಾರನ್ನು ಕಂಡು ಪ್ರಜ್ಞಾವಂತರೆಲ್ಲ ಉಳ್ಳಾಡಿ ನಕ್ಕಿದ್ದಾರೆ. ಹೊಸಾ ವರ್ಷದ ಆರಂಭದಲ್ಲಿಯೇ ಭರ್ಜರಿ ಕಾಮಿಡಿ ಪ್ರೋಗ್ರಾಮೊಂದನ್ನು ನೋಡಿದಂತೆ ಸಂಭ್ರಮಿಸಿ ನಿರಾಳವಾಗಿದ್ದಾರೆ!
ಹಾಗಾದರೆ, ರೂಪಾ ಅಯ್ಯರ್ ಏಕಾಏಕಿ ಇಂತಾದ್ದೊಂದು ಗೆಟಪ್ಪು ಬದಲಿಸಲು ಕಾರಣವೇನು? ಪಾದಯಾತ್ರೆಯಂಥಾದ್ದರ ಮೂಲಕ ಮೈಲೇಜು ಗಿಟ್ಟಿಕೊಂಡಿದ್ದರ ಹಿಂದಿರುವ ಹಕೀಕತ್ತೇನು? ಇಂಥಾ ನಾನಾ ಪ್ರಶ್ನೆಗಳು ಎದುರಾಗುತ್ತವೆ. ಇದೆಲ್ಲವಕ್ಕೂ ಉತ್ತರವಾಗಿ ನಿಲ್ಲೋದು, ಕಣ್ಣಳತೆಯಲ್ಲೇ ಇರುವ ವಿಧಾನಸಭಾ ಚುನಾವಣೆ. ಒಂದು ಮೂಲದ ಪ್ರಕಾರ, ರೂಪಾ ಅಯ್ಯರ್ ಬಹು ವರ್ಷಗಳಿಂದಲೂ ರಾಜಕೀಯಕ್ಕೆ ಎಂಟ್ರಿ ಕೊಡಲು ತಯಾರಿ ನಡೆಸಿದ್ದರು. ಕಳೆದ ವಿಧಾನಸಭಾ ಚುನಾವಣೆಯ ಹಿಂಚುಮುಂಚಿನಲ್ಲಿಯೇ ಅದಕ್ಕೆ ಪ್ರಯತ್ನಿಸಿದ್ದರು. ಆದರೆ, ಈ ಬಾರಿ ಹೇಗಾದರೂ ಮಾಡಿ ಅದರಲ್ಲಿ ಯಶ ಕಾಣುವ ದಿಶೆಯಲ್ಲಿಯೇ ಈ ಹರತಾಳ ಆರಂಭಿಸಲಾಗಿದೆ ಅನ್ನಲಾಗುತ್ತಿದೆ.
ಸದ್ಯಕ್ಕೆ ರೂಪಾ ಅಯ್ಯರ್ ಬಿಜೆಪಿ ಪಕ್ಷದತ್ತ ಒಲವು ಹೊಂದಿರುವಂತಿದೆ. ಇಂಥಾ ಸಂಸ್ಕøತಿ ರಕ್ಷಕರ ಪಾಲಿಗೆ ಯಾವತ್ತಿಗೂ ಬಿಜೆಪಿಯಲ್ಲೊಂದು ಸ್ಥಾನ ಇದ್ದೇ ಇದೆ. ಹೇಳಿಕೇಳಿ ರೂಪಾ ಅಯ್ಯರ್ ಒಂದಷ್ಟು ನೇಮುಫೇಮು ಹೊಂದಿರುವಾಕೆ. ಹೀಗಿರೋದರಿಂದಲೇ, ಒಂದಷ್ಟು ಪ್ರಯತ್ನ ಪಟ್ಟರೆ ಬಿಜೆಪಿ ಟಿಕೇಟು ಸಿಗೋದು ಕಷ್ಟವೇನಲ್ಲ ಎಂಬ ಮನಃಸ್ಥಿತಿ ರೂಪಾರಲ್ಲಿದ್ದಂತಿದೆ. ಯಾವ ಕ್ಷೇತ್ರದಲ್ಲಿ ಟಿಕೆಟು ಸಿಕ್ಕರೂ ಸೈ ಎಂಬಂತಿರುವ ಆಕೆಯ ಪ್ರಧಾನ ಒಲವಿರೋದು ಬೆಗಳೂರು ಸೀಮೆಯಲ್ಲಿಯೇ. ಬೆಂಗಳೂರಿನ ಯಾವುದಾದರೂ ಕ್ಷೇತ್ರದಲ್ಲಿ ಕಣಕ್ಕಿಳಿಯುವ ಅವಕಾಶ ಸಿಕ್ಕರೂ ಸರಿ, ಬೇರೆ ಕ್ಷೇತ್ರವಾದರೂ ಓಕೆ ಎಂಬಂತಿದೆ ರೂಪಾ ನಡೆ.
ಎಲ್ಲವೂ ವರ್ಕೌಟ್ ಆದರೆ ರೂಪಾ ಅಯ್ಯರ್ಗೆ ಬಿಜೆಪಿ ಟಿಕೆಟು ಸಿಕ್ಕರೂ ಅಚ್ಚರಿಯೇನಿಲ್ಲ. ಅದರಲ್ಲಿ ತಪ್ಪು ಅನ್ನುವಂಥಾದ್ದೇನೂ ಇಲ್ಲ. ಆದರೆ, ಟಿಕೆಟಿನಾಸೆಗಾಗಿಯೇ ಇಂಥಾ ವೇಷ ಧರಿಸಿದ್ದರೆ ಮಾತ್ರ ಅದಕ್ಕಿಂತಲೂ ತಪ್ಪು ಬೇರೇನಿಲ್ಲ. ನಮ್ಮ ಸನಾತನ ಸಂಸ್ಕøತಿ ರಕ್ಷಣೆ ರೂಪಾರ ಪ್ರಧಾನ ಆಧ್ಯತೆ. ಮನೆಯಲ್ಲಿಯೇ ಹೆಣ್ಣುಮಕ್ಕಳಿಗೆ ಸರಿಯಾದ ಸಂಸ್ಕøತಿ ಕಲಿಸಬೇಕೆಂಬುದು ಈಕೆಯ ಪ್ರತಿಪಾದನೆ. ಅಂಥಾದ್ದೊಂದು ಅಭಿಯಾನವನ್ನು ರೂಪಾ ತನ್ನ ಕುಟುಂಬದಿಂದಲೇ ಕಾರ್ಯಗತಗೊಳಿಸುವ ಜರೂರತ್ತಿದೆ. ನಿಮಗೆ ಈ ಸೀಜನ್ನಿನ ಬಿಗ್ಬಾಸ್ ಸ್ಪರ್ಧಿಯಾಗಿದ್ದ ಸಾನ್ಯಾ ಅಯ್ಯರ್ ಗುರುತಿರಬಹುದು. ಆಕೆ ಚೆಂಗಲು ಚೆಂಗಲಾಗಿ ನಡೆದುಕೊಳ್ಳುತ್ತಿದ್ದ ರೀತಿ, ಆಕೆ ಹಾಕಿಕೊಳ್ಳುತ್ತಿದ್ದ ಅರೆಬರೆ ಬಟ್ಟೆಗಳ ಬಗ್ಗೆ ಪ್ರೇಕ್ಷಕರ ವಲಯದಲ್ಲಿಯೇ ಚರ್ಚೆಯಾಗಿದ್ದವು. ಆ ಸಾನ್ಯಾ ಈ ರೂಪಾ ಅಯ್ಯರ್ ಅವರ ಸ್ವಂತ ತಂಗಿ ಮಗಳು. ಊರಿಗೆಲ್ಲ ಬುದ್ಧಿ ಹೇಳ ಹೊರಡುವ ಮುನ್ನ ತಮ್ಮ ಮನೆಯ ಪಡಸಾಲೆಯತ್ತ ಒಮ್ಮೆ ಕಣ್ಣು ಹಾಯಿಸೋದು ಅವಶ್ಯಕ ನಡೆ. ಆ ನಿಟ್ಟಿನಲ್ಲಿ ರೂಪಾ ಗಮನ ಹರಿಸಲಿ. ಆ ನಂತರ ಸಂಸ್ಕøತಿ ರಕ್ಷಣೆಯ ಕಾರ್ಯ ಸಾಂಘವಾಗಿ ನೆರವೇರಲಿ!