ಭಾರತದಲ್ಲಿ ಆಗಾಗ ಗೋ ಮೂತ್ರದ ಅಗಾಧ ಔಷಧೀಯ ಗುಣಗಳ ಬಗ್ಗೆ ಚರ್ಚೆಗಳಾಗುತ್ತಿರುತ್ವೆ. ಈಗಂತೂ ಅದು ಹಲವಾರು ರೀತಿಯಲ್ಲಿ ಬಳಕೆಯಾಗುತ್ತಿದೆ. ಇದೇ ಹೊತ್ತಿನಲ್ಲಿ ಜಗತ್ತಿನ ನಾನಾ ಭಾಗಗಳ ಮಂದಿ ಸ್ವ ಮೂತ್ರದಲ್ಲಿಯೇ ಬಗೆ ಬಗೆಯ ಮದ್ದು ಹುಡುಕ್ತಿದ್ದಾರೆ. ಅಷ್ಟಕ್ಕೂ ಮನುಷ್ಯನ ಮೂತ್ರದಲ್ಲಿಯೂ ಒಂದಷ್ಟು ಚಿಕಿತ್ಸಕ ಗುಣಗಳಿರೋದು ವೈಜ್ಞಾನಿಕ ಸತ್ಯ. ಅದಕ್ಕೆ ಪೂರಕವಾಗಿಯೇ ಮನುಷ್ಯ ಮೂತ್ರ ನಾನಾ ಬಗೆಯಲ್ಲಿ ಬಳಕೆಯಲ್ಲಿದೆ.
ನಮ್ಮಲ್ಲಿ ಯಾವುದಾದ್ರೂ ಗಾಯವಾದಾಗ ಅದಕ್ಕೆ ಮೂತ್ರ ಹೊಯ್ಯುವ ರೂಢಿ ಒಂದಷ್ಟು ಕಡೆ ಚಾಲ್ತಿಯಲ್ಲಿದೆ. ಅದರ ಪರಿಣಾಮಕಾರಿ ಗುಣಗಳೂ ಕೂಡಾ ಇಲ್ಲಿನ ಜೀವನ ಶೈಲಿಗೆ ಪರಿಚಿತ. ಆದರೂ ಸ್ವಮೂತ್ರದ ಬಗ್ಗೆ ಒಂದಷ್ಟು ಅನುಮಾನ, ಮುಜುಗರ ಇದ್ದೇ ಇದೆ. ಆದ್ರೆ ರೋಮನ್ನರು ಮಾತ್ರ ತಂತಮ್ಮ ಮೂತ್ರವನ್ನ ತಮ್ಮದೇ ಆದ ರೀತಿಯಲ್ಲಿ ಬಳಸಿಕೊಳ್ತಿದ್ದಾರಂತೆ. ಹೆಚ್ಚಿನ ರೋಮನ್ನರು ಹಲ್ಲುಜ್ಜೋದಕ್ಕೂ ಮೂತ್ರವನ್ನೇ ಬಳಸುತ್ತಾರೆಂಬುದು ಅಚ್ಚರಿಯಾದ್ರೂ ಸತ್ಯ.
ಈಗ ಮಾರುಕಟ್ಟೆಯಲ್ಲಿ ಬಗೆ ಬಗೆಯ ಟೂತ್ ಪೇಸ್ಟುಗಳಿದ್ದಾವೆ. ಆದರೆ ದಂತ ಸಂಬಂಧಿ ಖಾಯಲೆಗಳೂ ಕೂಡಾ ಅದಕ್ಕೆ ಪೈಪೋಟಿ ಕೊಡುವಂತೆ ಬೆಳೆಯುತ್ತಿದೆ. ಬರೀ ಹುಳುಕು ಹಲ್ಲು ಮಾತ್ರವಲ್ಲದೇ ಅದರ ಸುತ್ತ ಕಿತ್ತು ತಿನ್ನುವ ಅನೇಕ ಉಪ ಖಾಯಿಲೆಗಳೂ ಮಾಮೂಲಾಗಿವೆ. ಆದ್ರೆ ರೋಮನ್ನರ ಪಾಲಿಗೆ ಅಂಥಾ ಯಾವ ಹಲ್ಲಿನ ಖಾಯಿಲೆಗಳ ಭಯವೂ ಇಲ್ಲವಂತೆ. ವರ ಹಲ್ಲುಗಳೂ ಹೊಳಪಾಗಿರುತ್ತವೆ. ಹಾಗೆ ಅವರು ನಿರಾಳವಾಗಿರೋದಕ್ಕೆ ಸ್ವಮೂತ್ರವಲ್ಲದೇ ಬೇರ್ಯಾವ ಕಾರಣವೂ ಇಲ್ಲ. ಹಾಗಂತ ರೋಮನ್ನರು ನಂಬಿಕೊಂಡಿದ್ದಾರೆ.