ಸಣ್ಣ ಸಣ್ಣ ಕೊರತೆಗಳಿಗೂ ಕೊರಗುತ್ತಾ ಕೂತಲ್ಲೇ ಕೊಳೆಯುತ್ತಿರೋ ಅದೆಷ್ಟು ಬದುಕುಗಳಿವೆಯೋ ಜಗತ್ತಿನಲ್ಲಿ? ಆದರೆ ಈ ಜಗತ್ತು ಚೆಂದ ಅನ್ನಿಸೋದು ಬದುಕಲು ಸಾಧ್ಯವೇ ಇಲ್ಲ ಎಂಬಂಥಾ ಕೊರತೆಗಳಿದ್ದರೂ ಏನಾದರೊಂದನ್ನು ಸಾಧಿಸೋ ಬಯಕೆಯ ಜೀವಗಳಿಂದ. ಸಾಧಿಸೋ ಛಲಕ್ಕೆ ಸ್ಫೂರ್ತಿಯಂತಿರೋ ಇಂಥವರ ಬದುಕಿನ ಪುಟಗಳೂ ರೋಚಕ!
ಇಂಥಾದ್ದೇ ಅಪರೂಪದ ವ್ಯಕ್ತಿ ರಿಚಿ ಪಾರ್ಕರ್. ಯುಎಸ್ ಮೂಲದ ಪ್ರಖ್ಯಾತ ಕಾರು ತಯಾರಿಕಾ ಸಂಸ್ಥೆಯಾದ ಓಂSಅಂಖ ನಲ್ಲಿ ಎಂಜಿನೀಯರ್ ಆಗಿರೋ ರಿಚಿ ಪಾರ್ಕರ್ ಕಾರಿನ ನವೀನ ಡಿಸೈನ್ಗಳಲ್ಲಿ ಪಳಗಿದಾತ. ಎಂಥವರೂ ಅಚ್ಚರಿಗೊಳ್ಳುವಂಥಾ ಕ್ರಿಯೇಟಿವಿಟಿಯ ಮೂಲಕವೇ ಇದುವರೆಗೂ ಸಾಕಷ್ಟು ಡಿಸೈನ್ಗಳ ರೂವಾರಿಯಾಗಿರೋ ಈತನಿಗೆ ಎರಡೂ ಕೈಗಳಿಲ್ಲ!
ಹುಟ್ಟುತ್ತಲೇ ಎರಡೂ ಕೈಯಿಲ್ಲದ ರಿಚಿ ಪಾರ್ಕರ್ ಆತ್ಮವಿಶ್ವಾಸ ತುಂಬಿಕೊಂಡು ಬೆಳೆದು ನಿಲ್ಲುವಂತೆ ಮಾಡಿದ್ದು ಹೆತ್ತವರು ಮತ್ತು ಮನೆ ಮಂದಿ. ಕೈ ಇಲ್ಲ ಎಂಬ ಕೊರಗನ್ನೂ ಮೀರಿಕೊಂಡು ಬದುಕೋ ಕಲೆಯನ್ನು ಮನೆಯವರಿಂದಲೇ ಕಲಿತುಕೊಂಡ ರಿಚಿಗೆ ಆರಂಭದಿಂದಲೂ ವಿಪರೀತವಾದ ಕಾರಿನ ಹುಚ್ಚು. ಎರಡೂ ಕೈಗಳಿದ್ದಿದ್ದರೆ ಥರ ಥರದ ಕಾರುಗಳನ್ನು ಡ್ರೈ ಮಾಡುತ್ತಿದ್ದೆ ಅಂತ ಆಗಾಗ ಮೌನಕ್ಕೆ ಜಾರುತ್ತಿದ್ದ ರಿಚಿ ಕಡೆಗೂ ರ್ಯಾಂಕ್ನಲ್ಲಿ ಇಂಜಿನೀರಿಂಗ್ ಮುಗಿಸಿಕೊಂಡು ಕೆಲಸಕ್ಕೆ ಸೇರಿಕೊಂಡಿದ್ದು ಓಂSಅಂಖ ಸಂಸ್ಥೆಗೆ.
ಆರಂಭದಲ್ಲಿ ಸಹೋದ್ಯೋಗಿಗಳೇ ಎರಡೂ ಕೈ ಇಲ್ಲದ ರಿಚಿ ಅದು ಹೇಗೆ ಕೆಲಸ ಮಾಡುತ್ತಾನೆಂಬ ಅಚ್ಚರಿ ಹೊಂದಿದ್ದರು. ಆದರೆ ದಿನ ಕಳೆಯುತ್ತಲೇ ಆತನ ಅಗಾಧ ಕ್ರಿಯೇಟಿವಿಟಿ ಎಲ್ಲರನ್ನೂ ಹತ್ತಿರ ಸೆಳೆದಿತ್ತು. ಬರ ಬರುತ್ತಾ ರಿಚಿ ಎಲ್ಲರ ಸಹಕಾರದೊಂದಿಗೆ ಚೆಂದದ ಕಾರು ಡಿಸೈನಿಂಗ್ ಮೂಲಕ ಇಡೀ ಸಂಸ್ಥೆಯ ಮುಖ್ಯ ವುಕ್ತಿಯಾದ. ಆತನ ಉತ್ಸಾಹ ಕಂಡು ಇತರೇ ಸಹೋದ್ಯೋಗಿಗಳೇ ಸ್ಫೂರ್ತಿ ಹೊಂದಿದ್ದಾರೆ. ಇದೀಗ ರಿಚಿ ಕೆಲಸ ಕೊಟ್ಟ ಸಂಸ್ಥೆಗೇ ಆಸ್ತಿ ಎಂಬಂತೆ ಬೆಳೆದು ನಿಂತಿದ್ದಾನೆ. ಹೆಂಡತಿ, ಮಗುವಿನೊಂದಿಗೆ ಸಂತಸದಿಂದಿರೋ ರಿಚಿ ಇದೀಗ ತನ್ನ ಕಾರ್ಯಕ್ಷಮತೆಯ ಮೂಲಕವೇ ಜಗತ್ತಿನ ಗಮನ ಸೆಳೆದಿದ್ದಾನೆ!