ಜೀವ ಉಳಿಸೋ ವೈದ್ಯ ವೃತ್ತಿಗೆ ಅಪಮಾನ ಎಸಗುವ ಕೆಲಸ ಮಾಡೋ ಒಂದಷ್ಟು ವೈದ್ಯರು ದೇಶಾಧ್ಯಂತ ತುಂಬಿ ಹೋಗಿದ್ದಾರೆ. ಸಮಸ್ಯೆ ಹೊತ್ತು ಬಂದ ರೋಗಿಗಳನ್ನು ಬೆದರಿಸಿ, ಸುಳ್ಲು ಹೇಳಿ ಕಾಸು ಪೀಕೋ ಕಸುಬು ಮಾಡೋ ಮೂಲಕ ಕೆಲ ವೈದ್ಯರು ವೃತ್ತಿ ಪಾವಿತ್ರ್ಯಕ್ಕೇ ಮಸಿ ಬಳಿಯುತ್ತಿದ್ದಾರೆ. ಆದರೆ ಮುಂಬೈನಲ್ಲಿ ಪೊಲೀಸರು ಬಂಧಿಸಿರೋ ಈ ಆಯುರ್ವೇದ ವೈದ್ಯ ಮಾಡುತ್ತಿದ್ದದ್ದು ಮಾತ್ರ ರಂಥವರನ್ನೂ ಬೆಚ್ಚಿ ಬೀಳಿಸುವಂಥಾ ಅಸಹ್ಯದ ಕೆಲಸ.
ಮುಂಬೈನ ಪೂರ್ವ ಮಹಿಮ್ ಪ್ರದೇಶದ ಮೀನುಗಾರರ ಕಾಲೊನಿಯಲ್ಲಿ ಲ್ಲಿನಿಕ್ ಇಟ್ಟುಕೊಂಡಿದ್ದ ಡಾ ಜನಾರ್ಧನ್ ನರಸಯ್ಯ ಎಂಬಾತ ಈ ಅಸಹ್ಯದ ರೂವಾರಿ. ಈತ ಆಯುರ್ವೇದದ ಕ್ಲಿನಿಕ್ ನಡೆಸುತ್ತಾ ಮಹಿಳೆಯರ ಗುಪ್ತ ಸಮಸ್ಯೆಗಳಿಗೆ ಔಷಧ ಕೊಡೋ ಅವತಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ. ಆದರೆ ಅರವತ್ತೆರಡು ವರ್ಷದ ಈತ ಇತ್ತೀಚೆಗೆ ಮಾತ್ರ ಹೈಟೆಕ್ ವೇಶ್ಯಾ ದಂಧೆ ನಡೆಸುತ್ತಾ ಭರಪೂರವಾಗಿ ಕಾಸು ಬಾಚಲಾರಂಭಿಸಿದ್ದ. ಈತ ತನ್ನಲ್ಲಿಗೆ ರೋಗಿಗಳಾಗಿ ಬರೋ ಮಹಿಳೆಯರನ್ನು ಪಳಗಿಸಿಕೊಂಡು ಹಣದಾಸೆ ತೋಎಇಸಿ ವೇಶ್ಯಾವಾಟಿಕೆ ನಡೆಸಲಾರಂಭಿಸಿದ್ದ. ತನ್ನ ಕ್ಲಿನಿಕ್ ನ ಕಮೆಳ ಭಾಗದಲ್ಲಿದ್ದ ೫೦೦ ಚದರಡಿಯ ರೂಮನ್ನು ಮೂರು ಕೋಣೆಗಳಾಗಿ ವಿಂಗಡಿಸಿ ಅಲ್ಲಿಗೇ ವಿಟರನ್ನು ಕರೆಸಿಕೊಂಡು ದಂಧೆ ನಡೆಸುತ್ತಿದ್ದ. ಇದಕ್ಕಾಗಿ ಈ ವೈದ್ಯ ನೆಚ್ಚಿಕೊಂಡಿದ್ದದ್ದು ವಾಟ್ಸಾಪ್ ಅನ್ನು.
ವಾಟ್ಸಾಪ್ನಲ್ಲಿ ಮೂರು ಗ್ರೂಪ್ ಮಾಡಿಕೊಂಡಿದ್ದ ಈತ ಈ ಮೂಲಕವೇ ತಾನು ಪಳಗಿಸಿಕೊಂಡ ಹೆಂಗಸರ ಫೋಟೋ ಹಾಕಿ ಡೀಲು ಕುಡುರಿಸುತ್ತಿದ್ದ. ಹಾಗೆ ಬಂದ ವಿಟರಿಗೆ ತನ್ನ ಶಾಪ್ನ ಕೆಳ ಭಾಗದ ಕೋಣೆಯಲ್ಲಿ ಸರ್ವ ಸೇವೆಯನ್ನೂ ಒದಗಿಸಿ ಚೆನ್ನಾಗಿ ಕಾಸು ಪೀಕುತ್ತಿದ್ದ. ಈತ ಇಲ್ಲಿ ಇಂಥಾದ್ದೊಂದು ದಂಧೆ ನಡೆಸುತ್ತಿರೋ ಬಗ್ಗೆ ಅನುಮಾನಗೊಂಡಿದ್ದ ಸ್ಥಳೀಯರು ಇತ್ತೀಚೆಗೆ ಪೊಲೀಸರಿಗೆ ದೂರು ನೀಡಿದ್ದರು. ಇದರನ್ವಯ ರೇಡು ನಡೆಸಿದ ಪೊಲೀಸರು ಈತನನ್ನು ಬಂಧಿಸಿ ವಿಟರ ಜೊತೆಗಿದ್ದ ಇಬ್ಬರು ಮಹಿಳೆಯರನ್ನು ಎಕ್ಷಿಸಿದ್ದಾರೆ. ಇದೀಗ ಪೊಲೀಸರು ಪಿಂಪ್ ಕಂ ವೈದ್ಯನನ್ನು ಮೂವತ್ತೆರಡು ಸಾವಿರ ನಗದಿನ ಸಮೇತ ಒದ್ದು ಎಳೆದೊಯ್ದು ತನಿಖೆ ನಡೆಸುತ್ತಿದ್ದಾರೆ!