ಕಾಮನಬಿಲ್ಲು ಎಂಬುದು ಅದರ ಬಣ್ಣಗಳಷ್ಟೇ ಆಕರ್ಷಣೆ ಹೊಂದಿರುವ ಪ್ರಾಕೃತಿಕ ಅಚ್ಚರಿ. ಅದು ನಾನಾ ರೂಪದಲ್ಲಿ ಇಡೀ ಜಗತ್ತಿನ ಜನಜೀವನದಲ್ಲಿ ಹಾಸುಹೊಕ್ಕಾಗಿದೆ. ಅದನ್ನು ಕನಸುಗಳಿಗೆ ಉಪಮೆಯಂತೆ ಬಳಕೆಯಾಗುತ್ತೆ. ಈಬುರು ಮಳೆ ಮತ್ತು ಬಿಸಿಲು ಸಂಗಮಿಸಿದಾಗ ಕಮಾನು ಸ್ವರೂಪದಲ್ಲಿ ಸೃಷ್ಟಿಯಾಗೋ ಬಣ್ಣಗಳ ರೇಖೆಗಳನ್ನು ಕಣ್ತುಂಬಿಕೊಳ್ಳಲು ಜನ ಸದಾ ತಯಾರಾಗಿರ್ತಾರೆ. ಅದರ ಮುಂದೆ ಎಲ್ಲರೂ ಮಕ್ಕಳಂತೆ ಸಂಭ್ರಮಿಸಿಸ್ತಾರೆ.
ಇಂಥಾ ಕಾಮಬಿಲ್ಲು ಮಳೆ ಮತ್ತು ಬಿಸಿಲಿನ ಮಹಾ ಸಂಗಮವಾದಾಗ ಹಗಲು ಹೊತ್ತಿನಲ್ಲಿ ಮಾತ್ರವೇ ಕಾಣಿಸಿಕೊಳ್ಳುತ್ತೆ. ಅದು ಬೇರ್ಯಾವ ಪ್ರಾಕೃತಿಕ ಪಲ್ಲಟಗಳಲ್ಲಿಯೂ ಕಾಣಿಸಿಕೊಳ್ಳಲು ಸಾಧ್ಯವೇ ಇಲ್ಲ ಅಂತ ನಾವೆಲ್ಲ ಅಂದುಕೊಂಡಿರುತ್ತೇವೆ. ಅದನ್ನೇ ಬಲವಾಗಿ ನಂಬಿಕೊಂಡಿದ್ದೇವೆ. ಆದರೆ ಕತ್ತಲೆಯಲ್ಲಿಯೂ ಕಾಮನಬಿಲ್ಲು ಮೂಡಿಕೊಳ್ಳುತ್ತೆ. ಈ ವಿಚಾರವನ್ನು ವಿಜ್ಞಾನಿಗಳೇ ಸ್ಪಷ್ಟಪಡಿಸಿದ್ದಾರೆ. ಆದರೆ ಅದನ್ನು ನೋಡೋದು ಅಷ್ಟೊಂದು ಸಲೀಸಾದ ಸಂಗತಿಯಲ್ಲ. ಅದರ ಬಣ್ಣಗಳನ್ನು ಹಗಲಿನಷ್ಟು ಸ್ಪಷ್ಟವಾಗಿ ಕಂಡು ಹಿಡಿಯೋದೂ ಸಾಧ್ಯವಿಲ್ಲ.
ಅಂದಹಾಗೆ, ಅದನ್ನು ಮೂನ್ಬೋ ಅಂತ ಕರೆಯಲಾಗುತ್ತೆ. ಮಳೆ ಮತ್ತು ಬೆಳುದಿಂಗಳು ಒಟ್ಟಾದರೆ ಅದು ಸಂಭವಿಸಬಹುದು. ಆದರೆ ಅವೆರಡು ಸಂಗಮಿಸೋದು ಕಷ್ಟ ಸಾಧ್ಯ. ಹಾಗಂತ ಅದನ್ನು ನೋಡಲು ಸಾಧ್ಯವೇ ಇಲ್ಲ ಅಂತೇನಿಲ್ಲ. ಯಾಕಂದ್ರೆ ಜಲಪಾತದ ಅಂಚಿನಲ್ಲಿರೋ ಪ್ರದೇಶಗಳಲ್ಲಿ ಮೂನ್ಬೋವನ್ನ ಕಣ್ತುಂಬಿಕೊಳ್ಳಬಹುದು. ರಾತ್ದರಿ ಹೊತ್ತಿನ ವಾತಾವರಣದಲ್ಲಿಯೇ ಮೂನ್ಬೋ ಗೋಚರಿಸುತ್ತೆ. ಆದರೆ ಆ ಕಮಾನು ಬಿಳಿಯಾಗಿಯೇ ಗೋಚರಿಸುತ್ತದೆಯಂತೆ. ಇದನ್ನು ನೋಡಿದವರು ವಿರಳ.