ಶೋಧ ಮ್ಯೂಸ್ ಡೆಸ್ಕ್: ಬ್ರಿಟನ್ ಅನ್ನು ಅತ್ಯಂತ ಸುದೀರ್ಘಾವಧಿಯವರೆಗೆ ಆಳಿದ್ದ, ಪೊರೆದಿದ್ದ ರಾಣಿ ಎಲೆಜಬೆತ್ ತೊಂಬತ್ತಾರನೇ ವರ್ಷದಲ್ಲಿ ನಿಧನರಾಗಿದ್ದಾರೆ. ಆಕೆಯ ಅಂತ್ಯಕ್ರಿಯೆ ಕೂಡಾ ಅತ್ಯಂತ ಗೌರವಪೂರ್ವಕವಾಗಿ, ವಿಶ್ವದ ನಾನಾ ದೇಶಗಳ ನಾಯಕರುಗಳ ಸಮ್ಮುಖದಲ್ಲಿ ನೆರವೇರಿzಶ್ವೀ ಮೂಲಕ ಜಗತ್ತು ಕಂಡ ರಾಜಮನೆತನಗಳ ಅತ್ಯಂತ ಹಿರಿಯ ಕೊಂಡಿಯೊಂದು ಕಳಚಿದಂತಾಗಿದೆ. ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ಬ್ರಿಟನ್ ರಾಣಿಯಾಗಿ ಪಟ್ಟಕ್ಕೇರಿದ್ದ ಎಲಿಜಬೆತ್ ಒಂದು ಥರದಲ್ಲಿ ದಂತಕಥೆ ಇದ್ದಂತೆಂದರೂ ತಪ್ಪೇನಿಲ್ಲ.
ಎಜಿಜಬೆತ್ ಕೊನೆಯುಸಿರೆಳೆದಾಕ್ಷಣದಿಂದಲೇ ಆಕೆಯ ಬಗ್ಗೆ ಇಂಟರೆಸ್ಟಿಂಗ್ ಎಂಬಂಥಾ ಒಂದಷ್ಟು ವಿಚಾರಗಳು ಜಾಹೀರಾಗುತ್ತಿವೆ.
ಓರ್ವ ಮಹಿಳೆ ಒಂದು ದೇಶವನ್ನೇ ರಾಣಿಯಾಗಿ ಮುನ್ನಡೆಸೋದೆಂದರೆ ಅದು ಸಾಮಾನ್ಯದ ಸಂಗತಿಯೇನಲ್ಲ. ಈ ಹಾದಿಯ ತುಂಬ ತನ್ನದೇ ಆದ ಹೆಜ್ಜೆ ಗುರುತುಗಳನ್ನು ಮೂಡಿಸಿರುವಾಕೆ ರಾಣಿ ಎಲಿಜಬೆತ್. ವಿಶೇಷವೆಂದರೆ, ತೊಂಭತ್ತಾರನೇ ವಯಸ್ಸಿನಲ್ಲಿ ಅಸನೀಗಿದ ಈ ರಾಣಿಯ ಶವ ಪೆಟ್ಟಿಗೆಯ ಸುತ್ತಾ ಇದೀಗ ಒಂದಷ್ಟು ಇಂಟರೆಸ್ಟಿಂಗ್ ಸಂಗತಿಗಳು ಗರಿಬಿಚ್ಚಿಕೊಳ್ಳಲಾರಂಭಿಸಿವೆ. ಸಾಮಾನ್ಯವಾಗಿ, ಇಂಥಾ ಜನಪ್ರಿಯರ ಅಂತಿಮ ವಿಧಿ ವಿಧಾನಗಳ ಸುತ್ತಾ ಒಂದಷ್ಟು ವಿಶೇಷತೆಗಳು ಹಬ್ಬಿಕೊಂಡಿರುತ್ತವೆ. ಹಾಗಿರುವಾಗ ರಾಣಿ ಎಲಿಜಬೆತ್ ಅದರಿಂದ ಹೊರತಾಗಿರಲು ಸಾಧ್ಯವೇ?
ಒಂದು ಮೂಲದ ಪ್ರಕಾರ ವಯೋವೃದ್ಧ ರಾಣಿ ಎಲಿಜಬೆತ್ಗಾಗಿ ಈಗ್ಗೆ ಮೂರು ದಶಕಗಳಷ್ಟು ಹಿಂದೆಯೇ ಶವ ಪೆಟ್ಟಿಗೆಯೊಂದನ್ನು ತಯಾರಿಸಲಾಗಿತ್ತಂತೆ. ಅತ್ಯಂತ ಅಪರೂಪದ ಓಕ್ ಮರದಿಂದ, ವಿಶಿಷ್ಟವಾದ ಸಾಂಪ್ರದಾಯಿಕ ಕೆತ್ತನೆಗಳಿಂದ ತಯಾರಿಸಲ್ಪಟ್ಟಿದ್ದ ಈ ಶವಪೆಟ್ಟಿಗೆಯ ಬಗ್ಗೆ ಹೊರಜಗತ್ತಿಗೆ ಗೊತ್ತಾಗದಂತೆ ಗೌಪ್ಯತೆ ಕಾಪಾಡಲಾಗಿತ್ತಂತೆ. ಇಷ್ಟೊಂದು ವೈಭವೋಪೇತವಾಗಿ ಬದುಕಿದ್ದ ಈ ರಾಣಿಯ ಶವಪೆಟ್ಟಿಗೆ ಕೂಡಾ, ಆ ಶ್ರೀಮಂತಿಕೆಯ ಪ್ರತಿರೂಪದಂತಿದೆ. ಹೊರಡುವಾಗಲೂ ವೈಭವದಿಂದಲೇ ನಿಘಮಿಸಬೇಕೆಂಬ ಇಂಗಿತದಿಂದ, ಖುದ್ದು ರಾಣಿಯ ಆದೇಶದಂತೆಯೇ ಈ ಶವ ಪೆಟ್ಟಿಗೆಯನ್ನು ಅತ್ಯಂತ ವ್ಯವಸ್ಥಿತವಾಗಿ ಸಿದ್ಧಗೊಳಿಸಲಾಗಿತ್ತಂತೆ.