ಎಲ್ಲಿ ಮಡಿವಂತಿಕೆ ಅಧಿಕವಾಗಿರುತ್ತೋ ಅಲ್ಲಿಯೇ ನಾನಾ ಬಯಕೆಗಳು ಥರ ಥರದ ಮುಖವಾಡ ತೊಟ್ಟು ಕೂತಿರುತ್ವೆ. ಭಾರತದಲ್ಲಿಯಂತೂ ನಾನಾ ವಿಚಾರಗಳಲ್ಲಿ ಇಂಥಾ ಮಡಿವಂತಿಕೆ ತೀವ್ರವಾಗಿದೆ. ಹಾಗಿರುವಾಗ ಕಾಮದ ಬಗ್ಗೆ ಇಲ್ಲಿ ಬಿಡು ಬೀಸಾಗಿ ಮಾತಾಡೋದು ಕೊಂಚ ಕಷ್ಟ. ಆದ್ರೆ ಜನಸಂಖ್ಯೆ ಮಾತ್ರ ಇಡೀ ವಿಶ್ವಕ್ಕೇ ಸೆಡ್ಡು ಹೊಡೆಯುವಂತೆ ಬೆಳೆಯುತ್ತಲೇ ಇದೆ. ಇದರಾಚೆಗೆ ಮೈಥುನದ ಬಗ್ಗೆ ಅತೀವ ಆಸಕ್ತಿ ಹೊಂದಿರೋ ಮಂದಿಯ ಪಾಲಿಗೆ ಇತ್ತೀಚಿನ ದಿನಗಳಲ್ಲಿ ನೀಲಿ ಚಿತ್ರಗಳು ವರದಾನವಾಗಿವೆ.
ಇಂಥಾ ನೀಲಿ ಚಿತ್ರಗಳನ್ನ ಹುಕಾಡಿ ನೋಡೋ ದೇಶಗಳ ಲಿಸ್ಟಿನಲ್ಲಿ ನಮಗೂ ಅಗ್ರ ಸ್ಥಾನವಿದೆ. ಅದರಲ್ಲಿ ಲಿಂಗಾಧಾರಿತ ಸರ್ವೆಗಳು ನಡೆದಾಗ ಹೆಂಗಳೆಯ ಪಾಲೂ ಮಹತ್ತರವಾಗಿರೋ ವಿಚಾರ ಬಯಲಾಗಿದೆ. ಅದರರ್ಥ ನೀಲಿ ಚಿತ್ರಗಳತ್ತ ವಯೋಮಾನದ ಹಂಗಿಲ್ಲದೆ ಜನ ವಾಲಿಕೊಂಡಿದ್ದಾರನ್ನೋದು. ಹೀಗೆ ನೀಲಿ ಚಿತ್ರಗಳನ್ನ ನೋಡೋದನ್ನೇ ಚಟವಾಗಿಸಿಕೊಂಡರೆ ಅದರಿಂದ ಮನೋ ದೈಹಿಕವಾಗಿ ಒಂದಷ್ಟು ಅಡ್ಡಪರಿಣಾಮಗಳಾಗುತ್ತವೆ.
ಹಾಗಂತ ನೀಲಿ ಚಿತ್ರಗಳಿಂದ ಮನಸಿಗೆ, ದೇಹಕ್ಕೆ ಮಾತ್ರವೇ ಪರಿಣಾಮವಾಗುತ್ತೆ ಅಂದುಕೊಳ್ಳುವಂತಿಲ್ಲ. ಅದರಿಂದ ನಿಮ್ಮ ಮೊಬೈಲು, ಕಂಪ್ಯೂಟರ್, ಲ್ಯಾಪ್ಟಾಪ್ಗಳು ವೈರಸ್ ದಾಳಿಗೀಡಾಗಬಹುದು. ನಿಮ್ಮ ಫೈಲುಗಳೆಲ್ಲ ಸರ್ವನಾಶವಾಗಿ ಜುಟ್ಟು ಕೆದರಿಕೊಳ್ಳುವ ಸ್ಥಿತಿಯೂ ಎದುರಾಗಬಹುದು. ಇತ್ತೀಚೆಗೆ ನಡೆದಿರೋ ಕೆಲ ಶೋಧನೆಗಳು ಇಂಥಾದದ್ದೊಂದು ಎಚ್ಚರಿಕೆಯನ್ನ ರವಾನಿಸಿವೆ.
ಇಂಥಾ ಪಾರ್ನ್ ಸೈಟ್ಗಳು ನಾಯಿ ಕೊಡೆಗಳಂತೆ ಹಬ್ಬಿಕೊಂಡಿವೆ. ಅಂಥವೆಲ್ಲ ಭಾರೀ ಪ್ರಮಾಣದಲ್ಲಿ ಕಮಾಯಿಯನ್ನೂ ಮಾಡಿಕೊಳ್ಳುತ್ತಿವೆ. ಇಂಥವಕ್ಕೆ ಕಾನೂನು ಕಟ್ಟಳೆಗಳ ಬಂಧವಿದ್ದರೂ ಬಿಂದಾಸಾಗಿಯೇ ಕಾರ್ಯ ನಿರ್ವಹಿಸುತ್ತಿವೆ. ಇಂಥವೆಲ್ಲ ಬೇಕೆಂದೇ ವೈರಸ್ ಹಬ್ಬಿಸೋ ಕೆಲಸವನ್ನೂ ಮಾಡ್ತಿವೆಯಂತೆ. ಈ ಮೂಲಕವೇ ಆಂಟಿ ವೈರಸ್ ಕಂಪೆನಿಗಳಿಗೆ ಸಹಕಾರಿಯಾಗಿಯೂ ನಡೆದುಕೊಳ್ತಿವೆಯಂತೆ. ಇಂಥಾ ಪಾರ್ನ್ ವೆಬ್ಸೈಟ್ಗಳಲ್ಲಿ ಕೆಲವೊಮ್ಮೆ ಸಿಸ್ಟಮ್ ಅನ್ನು ಸರ್ವನಾಶ ಮಾಡಿ ಬಿಡಬಲ್ಲ ರಕ್ಕಸ ವೈರಸ್ಗಳೂ ದಾಳಿಯಿಡುತ್ತವೆ ಅಂತ ವರದಿಗಳು ಹೇಳುತ್ತಿವೆ.