ರಣ ಬೇಸಗೆಯೊಂದು (summer season) ಕಡೆಗಾಲದತ್ತ ಹೆಜ್ಜೆ ಹಾಕುತ್ತಿರುವ ಕಾಲಮಾನವಿದು. ಥರ ಥರದ ಖಾಯಿಲೆ, ವಾರಗಟ್ಟಲೆ ಹೈರಾಣು ಮಾಡಿ ಹಾಕುವ ವಿಕ್ಷಿಪ್ತ (fever) ಜ್ವರದ ಬಾಧೆಯಿಂದ ಜನ ಕಂಗಾಲಾಗಿದ್ದಾರೆ. ಬೇರೇನೂ ಗತಿಯಿಲ್ಲದ ಘಳಿಗೆಯಲ್ಲಿ ಕೊರೋನಾ ವೈರಸ್ಸಿನ ಹುಳ ಬಿಡುವ ಮಾಧ್ಯಮಗಳು, ಬೇರೆ ಸರಕುಗಳನ್ನು ಜಗಿಯುತ್ತಿರುವಾಗಲೇ, ಕೊರೋನಾ ಕೇಸುಗಳ ಸಂಖ್ಯೆಯೂ ಏರುಗತಿ ಕಾಣುತ್ತಿದೆ. ಹಾಗಂತ ಇಂಥಾ ವಿದ್ಯಮಾನಗಳು ಕೇವಲ ನಮ್ಮ ದೇಶಕ್ಕ ಮಾತ್ರವ ಸೀಮಿತವಾಗಿದೆ ಅಂದುಕೊಳ್ಳುವಂತಿಲ್ಲ. ಯಾಕೆಂದರೆ, ಜಗತ್ತಿನ ಅದೆಷ್ಟೋ ದೇಶಗಳು ಈ ಕ್ಷಣದಲ್ಲಿ ಚಿತ್ರ ವಿಚಿತ್ರವಾದ, (corona virus) ಕೊರೋನಾಕ್ಕಿಂತಲೂ ಭೀಕರವಾದ ವೈರಸ್ಸುಗಳ ಕಾಟದಿಂದ ಕಂಗಾಲಾಗಿವೆ!
ಸದ್ಯಕ್ಕೆ ಅತ್ಯಂತ ಹೆಚ್ಚು ಬಡತನದ ಬೇಗೆ ಹೊಂದಿರುವ ಆಫ್ರಿಕಾದಲ್ಲಿ ವಿಚಿತ್ರವಾದೊಂದು ವೈರಸ್ ಹಾವಳಿ ವಿಪರೀತಕ್ಕಿಟ್ಟುಕೊಂಡಿದೆ. ತಲೆ ನೋವು, ವಾಂತಿಯಂಥಾದ್ದೆಲ್ಲ ತೀರಾ ಮಾಮೂಲಿ ಆರೋಗ್ಯ ಸಮಸ್ಯೆಗಳೆಂದೇ ಬಿಂಬಿಸಿಕೊಂಡಿವೆ. ಆದರೆ, ಆಫ್ರಿಕಾದ ಕೆಲ ಭಾಗಗಳಲ್ಲಿ ಮಾತ್ರ ಅಂಥಾ ಲಕ್ಷಣಗಳು ಕಂಡು ಬಂತೆಂದರೆ ಜನ ತತ್ತರಿಸಿ ಹೋಗುತ್ತಿದ್ದಾರೆ. ಯಾಕೆಂದರೆ, ಅಲ್ಲಿ ಹಬ್ಬಿಕೊಂಡಿರುವ ಅನಾಹುತಕಾರಿ ವೈರಸ್ಸೊಂದರ ಆರಂಭಿಕ ಚಿನ್ಹೆಗಳಾಗಿ ವಿಪರೀತ ತಲೆನೋವು, ವಾಂತಿ ಮತ್ತು ಯಾವ ಔಷಧಿಗೂ ಜಗ್ಗದ ಮೂಗು ಸೋರುವಿಕೆಗಳು ಗುರುತಿಸಿಕೊಂಡಿವೆ. ಒಂದೇ ದಿನ ರಾತ್ರಿ ಬೆಳಗಾಗೋದರೊಳಗೆ ಒಂದಷ್ಟು ಮಂದಿಯ್ನು ಸದರಿ ವೈರಸ್ಸು ಬಲಿ ಪಡೆದುಕೊಂಡಿದೆ.
ಆಫ್ರಿಕಾದ ಬುರುಂಡಿ ಅಂತೊಂದು ಪಟ್ಟಣದಲ್ಲಿ ಆರಂಭಿಕವಾಗಿ ಇಂಥಾ ನಿಗೂಢ ವೈರಸ್ಸು ಕಾಣಿಸಿಕೊಂಡಿತ್ತು. ಸ್ಥಳೀಯ ವೈದ್ಯರು ಅದನ್ನೊಂದು ಮಾಮೂಲಿ ನೆಗಡಿ, ಜ್ವರವೆಂದು ಪರಿಗಣಿಸಿ ಉಪಚಾರ ಮಾಡಿ ಕಳಿಸಿದ್ದರು. ಆದರೆ ಹಾಗೆಚಿಕಿತ್ಸೆ ಪಡೆದು ಮನೆಗೆ ತೆರಳಿದ್ದ ಅನೇಕ ಮಂದಿ ಬೆಳಗಾಗುವ ಹೊತ್ತಿಗೆಲ್ಲ ಮಸಣ ಸೇರಿದ್ದಾರೆ. ಶೀತದಿಂದ ಸೋರುವ ಮೂಗಿನಲ್ಲಿ ರಕ್ತ ಕಾರಿಕೊಂಡು ಅನೇಕರು ಸತ್ತಿದ್ದಾರೆ. ಇದೀಗ ಆ ನಿಗೂಢ ವೈರಸ್ಸು ಯಾವುದೆಂಬ ಬಗ್ಗೆ ತಜ್ಞರ ತಂಡ ತಲಾಶಿಗಿಳಿದಿದೆ. ಅದು ಕೂಡಾ ಕೊರೋನಾದಂಥಾ ಸಾಂಕ್ರಾಮಿಕವಾ? ಅದರ ಹಿಂದೆಯೂ ಅಂತಾರಾಷ್ಟ್ರೀಯ ಮೆಡಿಕಲ್ ಮಾಫಿಯಾದ ಕೈವಾಡವಿದೆಯಾ ಎಂಬಿತ್ಯಾದಿ ಪ್ರಶ್ನೆಗಳಿಗೂ ಉತ್ತರ ನಿಗೂಢವಾಗಿದೆ.