ನಟ ನಟಿಯರ ಖಾಸಗೀ ಬದುಕಿನ ಬಗ್ಗೆ ಜನಸಾಮಾನ್ಯರಲ್ಲೊಂದು ಕುತೂಹಲ ಸದಾ ಇದ್ದೇ ಇರುತ್ತದೆ. ಈ ಕಾರಣದಿಂದಲೇ ಇವರ ಬದುಕುಗಳು ಆಗಾಗ ರೂಮರ್ಗಳಿಗೂ ಆಹಾರವಾಗುತ್ತಲೇ ಇರುತ್ತದೆ. ಆದರೆ ಇಲ್ಲಿನ ಬಹುತೇಕರ ವೈಯಕ್ತಿಕ ಬದುಕು ಅಧ್ವಾನವೆದ್ದುಬಿಟ್ಟಿರುತ್ತೆ. ಇಲ್ಲಿ ಪ್ರೀತಿ, ಪ್ರೇಮ, ಸಂಸಾರ ಸೇರಿದಂತೆ ಯಾವುದೂ ಕೂಡಾ ಹೆಚ್ಚು ದಿನ ಬಾಳಿಕೆ ಬರುವುವಂಥಾದದ್ದಲ್ಲ ಎಂಬ ಮಾತಿದೆ. ಇದಕ್ಕೆ ಅಪವಾದದಂತೆ ಕೆಲವರಿರೋದು ಹೌದಾದರೂ ಮತ್ತುಳಿದವರ ಕಥೆಗಳು ಅದಕ್ಕೆ ಪೂರಕವಾಗಿವೆ. ಅದರಲ್ಲಿಯೂ ನಟಿಯರಂತೂ ಗುಟ್ಟಾಗಿ ಮದುವೆಯಾಗಿ ಸಂಸಾರ ನಡೆಸೋದರಲ್ಲಿ ಫೇಮಸ್ಸು. ಇಲಿಯಾನಾ ಮದುವೆಯಾದ ಸುದ್ದಿ ಇತ್ತೀಚೆಗೆ ಡಿವೋರ್ಸ್ ರೂಮರ್ನೊಂದಿಗೇ ಜಾಹೀರಾಗಿತ್ತು. ಇದೀಗ ಮೈನಾ ಖ್ಯಾತಿಯ ನಿತ್ಯಾ ಮೆನನ್ ಸುತ್ತಲೂ ಮದವೆ ವಿಚಾರವಾಗಿ ಅಂಥಾದ್ದೇ ರೂಮರ್ ಹಬೆಯಾಡಲಾರಂಭಿಸಿದೆ.
ನಿತ್ಯಾ ಮೆಲನನ್ ಮೂಲ ಕೇರಳದವಳೇ ಆದರೂ ಕನ್ನಡದ ಹುಡುಗಿ. ಕನ್ನಡದ ನಟಿಯರೇ ಕನ್ನಡದಲ್ಲಿ ಮಾತಾಡಲು ತಿಮಿರು ತೋರಿಸುವ ಈ ದಿನಮಾನದಲ್ಲಿ ಅರಳು ಹುರಿದಂತೆ ಸ್ಪಷ್ಟವಾಗಿಯೇ ಕನ್ನಡ ಮಾತಾಡೋ ನಿತ್ಯಾ ಕನ್ನಡಿಗರಿಗೆ ಅಚ್ಚುಮೆಚ್ಚಿನ ನಟಿ. ವಿವಾದಗಳಿಂದ ಸಾಕಷ್ಟು ದೂರವಿರಲು ಪ್ರಯತ್ನಿಸುತ್ತಲೇ ಸಿನಿಮಾ ಮೂಲಕ ಮಾತ್ರವೇ ಸದ್ದು ಮಾಡುತ್ತಾ ಬಂದಿದ್ದಾಕೆ ನಿತ್ಯಾ ಮೆನನ್. ಅಫೇರುಗಳ ವಿಚಾರದಲ್ಲಿಯೂ ಸಹ ಈಕೆಯ ಸುತ್ತಾ ರೂಮರ್ಗಳು ಹರಿದಾಡಿದಂತಿಲ್ಲ. ಆದರೀಗ ನಿತ್ಯಾ ಮೆನನ್ ಗುಟ್ಟಾಗಿ ಮದುವೆಯಾಗಿ ಸಂಸಾರ ನಡೆಸುತ್ತಿದ್ದಾಳೆಂಬ ವಿಚಾರವೊಂದು ಕೇರಳದ ತುಂಬಾ ಸುದ್ದಿಯಾಗುತ್ತಿದೆ.
ಕಳೆದ ಕೆಲ ತಿಂಗಳಿಂದಲೇ ನಿತ್ಯಾ ಗುಟಾಗಿ ಮದುವೆಯಾಗಿದ್ದಾಳೆಂಬ ಬಗ್ಗೆ ಕೇರಳದಲ್ಲಿ ಗುಲ್ಲೆದ್ದಿತ್ತು. ಇದೀಗ ಅಲ್ಲಿನ ಪತ್ರಿಕೆಯೊಂದು ನಿತ್ಯಾ ಬಗ್ಗೆ ಬರಹ ಪ್ರಕಟಿಸಿದೆ. ಅದರಲ್ಲಿ ಲೇಖಕರು ಶ್ರೀಮತಿ ನಿತ್ಯಾ ಮೆನನ್ ಎಂದು ಉಲ್ಲೇಖಿಸಿದ್ದಾರೆ. ಇದು ಇಡೀ ಬರವಣಿಗೆಯಲ್ಲಿ ಆಗಾಗ ರಿಪೀಟಾಗಿದೆ. ಈ ಕಾರಣದಿಂದ ನಿತ್ಯಾ ಗುಟ್ಟಾಗಿ ಮದುವೆಯಾಗಿದ್ದಾಳೆಂಬ ಗಾಳಿ ಸುದ್ದಿಗೆ ಮತ್ತಷ್ಟು ರೆಕ್ಕೆ ಪುಕ್ಕ ಮೂಡಿಕೊಂಡಂತಾಗಿದೆ. ಆದರೆ ಈಬಗ್ಗೆ ನಿತ್ಯಾ ಇದುವರೆಗೂ ಪ್ರತಿಕ್ರಿಯಿಸಿಲ್ಲ. ನಿತ್ಯಾ ಕನ್ನಡದಲ್ಲಿ ಮೈನಾ, ಕೋಟಿಗೊಬ್ಬ ಮುಂತಾದ ಅನೇಕ ಚಿತ್ರಗಳಲ್ಲಿ ನಟಿಸಿದ್ದಾಳೆ. ಕೇರಳದಲ್ಲಿಯಂತೂ ಆಕೆ ಥರ ಥರದ ಪಾತ್ರಗಳನ್ನು ನಿರ್ವಹಿಸೋ ಮೂಲಕ ಪ್ರತಿಭಾವಂತ ನಟಿಯಾಗಿ ಗುರುತಿಸಿಕೊಂಡಿದ್ದಾಳೆ. ಇದೀಗ ಆಕೆ ಮದುವೆ ಮ್ಯಾಟರಿನ ಮೂಲಕ ಭಾರೀ ಸುದ್ದಿಯಲ್ಲಿದ್ದಾಳೆ.