ತ್ರಿವೇಣಿ ಸಂಗಮದ ಸ್ಥಳದಲ್ಲಿ ಈ ವರ್ಷವೂ ಜನವರಿ ಎರಡನೇ ತಾರೀಕಿನಿಂದ ಮಾಘ ಮೇಳ ನಡೆಯುತ್ತಿದೆ. ಭಾರತೀಯ ಸಂಸ್ಕೃತಿಯಲ್ಲಿ ಅತ್ಯಂತ ಪ್ರಾಧಾನ್ಯತೆ ಪಡೆದುಕೊಂಡಿರೋ ಈ ಮೇಳ ನಾಗಾ ಸಾಧುಗಳ ಪಾಲಿಗೂ ಪುಣ್ಯದ ಆಚರಣೆ. ಒಂದರ್ಥದಲ್ಲಿ ಈ ನಾಗಾ ಸಾಧುಗಳೇ ಈ ಮೇಳದ ಪ್ರಧಾನ ಆಕರ್ಷಣೆ. ಇಂಥಾ ನಾಗಾ ಸಾಧುಗಳು ಅತೀಂದ್ರಿಯ ಶಕ್ತಿ ಸಾಧನೆಗಳ ಮೂಲಕ, ಮನುಷ್ಯ ಸಹಜ ವಾಂಛೆಗಳನ್ನು ಮೀರಿ ನಿಲ್ಲುವ ಹಠ ಯೋಗದ ಮೂಲಕ ಗಮನ ಸೆಳೆಯುತ್ತಾರೆ. ಆದರೆ ಈ ನಾಗಾ ಸಾಧುಗಳಲ್ಲೇ ಹಿರೀ ವಯಸ್ಸಿನ ಸಾಧುವೊಬ್ಬ ತನ್ನ ಗುಪ್ತಾಂಗದ ಬಲ ಪ್ರಯೋಗದ ಮೂಲಕವೇ ಲೋಡಾಗಿ ನಿಂತಿರೋ ಮಿನಿ ಟ್ರಕ್ಕುಗಳನ್ನು ಎಳೆಯೋ ಮೂಲಕ ಎಲ್ಲರನ್ನೂ ದಂಗಾಗಿಸಿದ್ದಾನೆ!
ಈ ನಾಗಾ ಸಾಧುಗಳು ಮೈ ಮೇಲೆ ಬಟ್ಟೆ ಧರಿಸೋದಿಲ್ಲ. ಹುಟ್ಟುಡುಗೆಯಲ್ಲೇ ಓಡಾಡಿಕೊಂಡಿರೋ ಈ ಸಾಧುಗಳ ಪಾಲಿಗೆ ಮನುಷ್ಯರನ್ನು ಕ್ಷಣ ಕ್ಷಣವೂ ಕಾಡುವ ಕಾಮವೇ ಚಾಮಲೆಂಜಿಂಗ್ ವಿಚಾರ. ಸಾಮಾನ್ಯವಾಗಿ ಬೆತ್ತಲೆ ಎಂಬುದು ಕಾಮ, ಪ್ರಚೋದಕ. ಆದರೆ ಹಠ ಯೋಗದ ಮೂಲಕ ಅಂಥಾ ಕಾಮ ವಾಂಚೆಗಳನ್ನು ಮೀರಿಕೊಂಡಿರೋದು ನಾಗಾ ಸಾಧುಗಳ ಅಸಲೀ ಶಕ್ತಿ. ಅಂಥಾದ್ದೇ ಸಾಧನೆ ಮಾಡಿರೋ ಈ ವಯೋವೃದ್ಧ ಸಾಧು ತನ್ನ ಗುಪ್ತ ಅಂಗದ ಅಸಲೀ ಪವರ್ರನ್ನು ತುಂಬಿದ ಟ್ರಕ್ ಎಳೆಯೋ ಮೂಲಕ ಜಾಹೀರುಗೊಳಿಸಿದ್ದಾನೆ.
ಲೋಡು ತುಂಬಿರೋ ಟ್ರಕ್ಕು ಕೆಟ್ಟು ನಿಂತರ ಅದರ ಗಾಲಿ ಕದಲಿಸಲು ಹತ್ತಾರು ಜನರ ಶಕ್ತಿ ಪ್ರಯೋಗ ಬೇಕಾಗುತ್ತೆ. ಅಂಥಾದ್ದರಲ್ಲಿ ಈ ಸಾಧು ಸಮತಟ್ಟಾದ ಪ್ರದೇಶದಲ್ಲಿ ನಿಲ್ಲಿಸಿದ ತುಂಬಿದ ಟ್ರಕ್ಕಿಗೆ ಹಗ್ಗದ ಒಂದು ತುದಿ ಕಟ್ಟಿ ಇನ್ನೊಂದು ತುದಿಯನ್ನು ತನ್ನ ಗುಪ್ತಾಂಗಕ್ಕೆ ಕಟ್ಟಿ ಸಲೀಸಾಗಿ ಎಳೆದೊಯ್ಯೋ ಮೂಲಕ ಎಲ್ಲರೂ ಹೌಹಾರುವಂತೆ ಮಾಡಿದ್ದಾನೆ. ಈ ಸಾಧು ಗುಪ್ತಾಂಗದ ಮೂಲಕ ಟ್ರಕ್ಕು ಎಳೆದ ಕಥೆ ಕೇಳಿಯೇ ಹೌಹಾರಿದರೆ, ಕಳೆದ ವರ್ಷ ಈ ಮೇಳದಲ್ಲಿ ಸಾಧುವೊಬ್ಬ ತನ್ನ ಗುಪ್ತಾಂಗದ ಬಲದಿಂದ ಹೆಲಿಕಾಫ್ಟರನ್ನೇ ಎಳೆದಿದ್ದನಂತೆ. ಬಹುಶಃ ಜನ ಸಾಮಾನ್ಯರ ಈ ಅಂಗಕ್ಕೂ ಇಂಥಾದ್ದೇ ಶಕ್ತಿ ಇದ್ದಿರ ಬಹುದೇನೋ. ಆದರೆ ಪಾಮರರಾದ ಮಂದಿ ಅದರ ಶಕ್ತಿಯನ್ನು ಬೇರೆ ಬೇರೆ ರೀತಿಯಲ್ಲಿ ಪ್ರಯೋಗ ಮಾಡಿ ‘ಅದ’ರ ತಾಕತ್ತೆಲ್ಲವೂ ಎಲ್ಲೆಲ್ಲಿಯೋ ಇಂಗಿ ಹೋಗುತ್ತಿದೆ. ಆದರೆ ಕಾಮವನ್ನೇ ಗೆದ್ದು ‘ಅದ’ನ್ನು ಪಳಗಿಸಿಕೊಂಡಿರೋ ನಾಗಾ ಸಾಧುಗಳು ಆ ಭಾಗದ ಅಸಲೀ ಶಕ್ತಿಯನ್ನು ಜಾಹೀರು ಮಾಡಿದ್ದಾರೆ!