ಆಧುನಿಕತೆಯ ಭರಾಟೆಯಲ್ಲಿ ಎಲ್ಲವೂ ಶೋಕಿಯ ವಸ್ತುಗಳಾಗಿ ಹೋಗಿವೆ. ಕಾಫಿ, ಟೀ, ಪಾನಕಗಳ ಜಾಗವನ್ನು ಆಕರ್ಷಕ ಪಾನೀಯಗಳು ಒಂದೇ ಸಮನೆ ಓವರ್ಟೇಕ್ ಮಾಡಿ ಬಿಟ್ಟಿವೆ. ಸಿ, ಕೋಕಕೋಲಾದಂಥಾ ಪಾನೀಯಗಳಿಗೆ ಜನ ಮನಸೋತಿದ್ದಾರೆ. ತೀರಾ ಊಟ ತಿಂಡಿಯ ಸಂದರ್ಭದಲ್ಲಿಯೂ ಅವುಗಳನ್ನೇ ಗುಟುಕರಿಸುವಷ್ಟು ಅಡಿಕ್ಟ್ ಆಗಿಬಿಟ್ಟಿದ್ದಾರೆ.
ನಮ್ಮ ನಡುವೆ ಜಂಕ್ ಫುಡ್ ಕಲ್ಚರ್ ಬೆಳೆದುಕೊಂಡಿದೆಯಲ್ಲಾ? ಅದಕ್ಕೆ ಇಂಥ ಪಾನೀಯಗಳು ಪಕ್ಕಾ ಸಾಥ್ ಕೊಡುತ್ತಿವೆ. ಅದೇ ಹೊತ್ತಲ್ಲಿ ಈ ಪಾನೀಯಗಳು ಅದೆಷ್ಟು ಡೇಂಜರಸ್ ಅನ್ನೋದರ ಬಗ್ಗೆಯೂ ಶೋಧನೆಗಳು ನಡೆದಿವೆ. ಹಲವಾರು ಪ್ರಯೋಗಗಳ ಮೂಲಕ ಅವುಗಳ ಭೀಕರ ಸ್ವರೂಪವನ್ನು ಜಾಹೀರು ಮಾಡಲಾಗಿದೆ. ಆದರೂ ಜನ ಮಾತ್ರ ಅದರ ಗುಂಗಿನಿಂದ ಹೊರಬಂದಿಲ್ಲ.
ಹೀಗೆ ಜನರನ್ನು ಮೋಡಿಗೀಡು ಮಾಡಿರೋ ಪಾನೀಯಗಳಲ್ಲಿ ಮೌಂಟೈನ್ ಡಿವ್ ಕೂಡಾ ಸೇರಿಕೊಂಡಿದೆ. ಆನ ಈ ಪಾನೀಯಾಕ್ಕೂ ಮಾರು ಹೋಗಿದ್ದಾರೆ. ಅದರ ಭೀಕರ ಸ್ವರೂಪ ಎಂಥಾದ್ದೆಂಬುದನ್ನು ಇದೀಗ ಸಂಶೋಧಕರೇ ತೆರೆದಿಟ್ಟಿದ್ದಾರೆ. ಈ ಪಾನೀಯದಲ್ಲಿ ಕಟ್ಟುಮಸ್ತಾದ ಇಲಿಯನ್ನು ನೆನೆಸಿಟ್ಟರೆ ಅದು ನೋಡ ನೋಡುತ್ತಲೇ ಸಂಪೂರ್ಣವೆಂಬಂತೆ ಕರಗಿ ಹೋಗುತ್ತೆ. ಹಾಗಾದ್ರೆ ಅದರಲ್ಲಿ ಅದಿನ್ನೆಂಥಾ ಕೆಮಿಕಲ್ಗಳಿರಬಹುದೋ ಯೋಚಿಸಿ.