ಈವತ್ತಿನ ಸ್ಥಿತಿಯಲ್ಲಿ ಮೊಬೈಲ್ ಎಂಬೋ ಮಾಯೆಯನ್ನು ಒಂದೆರಡು ಘಂಟೆ ಬಿಟ್ಟಿರೋದನ್ನೂ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆ ತೆರೆನಾಗಿ ಎಲ್ಲರನ್ನೂ ಆವರಿಸಿಕೊಂಡಿರೋ ಈ ಮೊಬೈಲ್ ಸೇರಿದಂತೆ ಸಾಮಾಜಿಕ ಜಾಲತಾಣಗಳನ್ನು ತೊರೆದು ಬದುಕೋದೆಂದರೆ ಆಧುನಿಕ ಸನ್ಯಾಸವಿದ್ದಂತೆ. ಅಂಥಾದ್ದರಲ್ಲಿ ವಿಶ್ವಾಧ್ಯಂತ ಅಭಿಮಾನಿಗಳನ್ನು ಹೊಂದಿರೋ ಸೆಲೆಬ್ರಿಟಿಯೊಬ್ಬ ಅಖಂಡ ಎರಡು ವರ್ಷಗಳಿಂದ ಮೊಬೈಲ್ ತೊರೆದು ಬದುಕಿದ್ದಾನೆಂದರೆ ನಂಬಲು ತುಸು ಕಷ್ಟವಾದೀತು.
ಆದರೆ ಎಡ್ ಶಿರನ್ ಇಂಗ್ಲಿಷ್ನ ಖ್ಯಾತ ಗಾಯಕ, ಗೀತರಚನೆಕಾರ ಮತ್ತು ಗಿಟಾರ್ ವಾದಕನ ವಿಚಾರದಲ್ಲಿ ಈ ಅಚ್ಚರಿಯನ್ನು ನಂಬದಿರಲು ಸಾಧ್ಯವೆ ಇಲ್ಲ. ಎಡ್ ಹಾಡುಗಳಿಗೆ ಹುಚ್ಚೇಳೋ ಅಭಿಮಾನಿ ವಲಯ ವಿಶ್ವಾಧ್ಯಂತ ಇದೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಈತ ಸೆಲೆಬ್ರಿಟಿಯೇ. ಒಂದು ಕಾಲದಲ್ಲಿ ಸಾಮಾಜಿಕ ಜಾಲತಾಣದ ಮೂಲಕವೇ ಅಭಿಮಾನಿಇಗಳ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದ ಈತ ಈಗ್ಗೆ ಎರಡು ವರ್ಷಗಳ ಹಿಂದೆ ಸರಿಯಾಗಿ ಡಿಸೆಂಬರ್ ೧೯ನೇ ತಾರೀಕಿನಂದು ತಾನು ಇನ್ನು ಮುಂದೆ ಮೊಬೈಲ್ ಬಳಸೋದಿಲ್ಲ, ಟ್ವಿಟರ್, ಈ ಮೇಲ್ ಯಾವುದನ್ನೂ ಬಳಸೋದಿಲ್ಲ ಅಂತ ಘೋಶಿಸಿದ್ದ. ಆದರೆ ಅಭಿಮಾನಿಗಳು ಇದನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ.
ಆದರೆ ಎಡ್ ಹಾಗೊಂದು ನಿರ್ಧಾರ ತೆಗೆದುಕೊಂಡವನು ಉಆವ ಕಾರಣಕ್ಕೂ ಮೊಬೈಲ್ ಬಳಸಿಲ್ಲವಂತೆ. ಈತನ ಮೊಬೈಲ್ ಸನ್ಯಾಸಕ್ಕೀಗ ಭರ್ತಿ ಎರಡು ವರ್ಷ ತುಂಬಿದೆ. ಈ ಅವಧಿಯ ತುಂಬಾ ತನ್ನೊಂದಿಗೆ ತಾನು ಗೆಚ್ಚು ಕಾಲ ಕಳೆದು ಕ್ರಿಯೇಟೀವ್ ಆಗಿ ಆಲೋಚಿಸಿ ಮುಂದುವರೆಯಲು ಸಾಧ್ಯವಾಯ್ತು ಅಂತ ಎಡ್ ಹೆಳಿಕೊಂಡಿದ್ದಾನಂತೆ. ಅಂದಹಾಗೆ, ಮೊಬೈಲ್ ಇಲ್ಲದೆ ಆರಾಮಾಗಿರೋ ಎಡ್ ಅದನ್ನೇ ಮುಂದುವರೆಸೋ ನಿರ್ಧಾರ ರಳೆದಿದ್ದಾನಂತೆ!