ಇಡೀ ಜಗತ್ತಿನ ತುಂಬೆಲ್ಲ ವಯೋಮಾನದ ಹಂಗಿಲ್ಲದೆ ಕೊರೋನಾ ವೈರಸ್ ಜೀವ ಭಯ ಹುಟ್ಟಿಸಿದೆ. ಅದರಲ್ಲಿಯೂ ವಯೋವೃದ್ಧರ ದೇಹಕ್ಕೆ ಈ ವೈರಸ್ ಹೊಕ್ಕರೆ ಬಚಾವಾಗೋದು ಕಷ್ಟ ಎಂಬ ಭೀತಿಯಂತೂ ವ್ಯಾಪಕವಾಗಿದೆ. ದೇಹದೊಳಗೆ ರೋಗ ನಿರೋಧಕ ಶಕ್ತಿಯಿರೋ ವಯಸ್ಸಿನವರೇ ಈ ವೈರಸ್ ಮುಂದೆ ಮಂಡಿಯೂರಿದ ಉದಾಹರಣೆಗಳಿದ್ದಾವೆ. ಹಾಗಿರುವಾಗ ಇಳಿ ಸಂಜೆಯಲ್ಲಿರುವ, ವಯೋಸಹಜ ಖಾಯಿಲೆ ಕಸಾಲೆಗಳಿಂದ ಹೈರಾಣುಗೊಂಡಿರುವ ವೃದ್ಧರು ಈ ವೈರಸ್ಸನ್ನು ಜಯಿಸಿಕೊಳ್ಳೋದು ಕಿಷ್ಟ ಅಂತ ವೈದ್ಯಕೀಯ ಲೋಕವೇ ಷರಾ ಬರೆದಿತ್ತು. ಆದರೆ ಆತ್ಮಸ್ಥೈರ್ಯವೊಂದಿದ್ದರೆ ಯಾವ ವಯೋಮಾನದಲ್ಲಿಯೂ ಇಂಥಾ ವೈರಸ್ಸುಗಳ ಬಾಧೆಯನ್ನು ಬಗ್ಗು ಬಡಿಯಬಹುದೆಂಬುದನ್ನು ಸ್ಪೇನ್ ದೇಶದ ವೃದ್ಧೆಯೊಬ್ಬರು ತೋರಿಸಿಕೊಟ್ಟಿದ್ದಾರೆ. ಹಾಗೆ ಕೊರೋನಾದಿಂದ ಬಚಾವಾಗಿದ್ದ ಆಕೆಗೀಗ ವಿಶ್ವದ ಅತ್ಯಂತ ಹಿರಿಯ ನಾಗರಿಕಳೆಂಬ ಗೌರವವೂ ಸಿಕ್ಕಿದೆ.
ಈಕೆ ಕೊರೋನಾ ವಿರುದ್ಧ ಹೋರಾಡಿ ಗೆಲುವಿನ ನಗೆ ಬೀರಿದ ಕಥೆ ನಿಜಕ್ಕೂ ರೋಚಕವಾಗಿದೆ. ಅಂದಹಾಗೆ, ಇಡೀ ಜಗತ್ತೇ ಅಚ್ಚರಿಗೊಳ್ಳುವಂತೆ ಕೋವಿಡ್ 19ನಿಂದ ಬಚಾವಾದ ಈ ವೃದ್ಧೆ ಮರಿಯಾ ಬನ್ಯಾಸ್. ಆಕೆಯ ವಯಸ್ಸು ಭರ್ತಿ ನೂರಾ ಹದಿಮೂರು ವರ್ಷವಾಗಿತ್ತು. ಈ ಕಾರಣದಿಂದಲೇ ಕೊರೋನಾ ಮಹಾಮಾರಿಯಿಂದ ಪಾರಾದ ವಿಶ್ವದ ಅಷ್ಟೂ ರೋಗಿಗಳಲ್ಲಿ ಅತ್ಯಂತ ಹಿರೀಕಳಾಗಿ ಮರಿಯಾ ಗುರುತಿಸಿಕೊಂಡಿದ್ದಾರೆ. ಈ ಮೂಲಕ ಬರೀ ಅಚ್ಚರಿಯನ್ನು ಮಾತ್ರವಲ್ಲದೆ, ಆತ್ಮಸ್ಥೈರ್ಯದಿಂದ ಕೊರೋನಾವನ್ನು ಹಿಮ್ಮೆಟ್ಟಿಸಬಹುದೆಂಬ ಸ್ಫೂರ್ತಿಯನ್ನೂ ವಿಶ್ವಕ್ಕೆ ಪಸರಿಸಿದ್ದಾರೆ.
ನೂರಾ ಹದಿಮೂರು ವರ್ಷದ ಮರಿಯಾ ವಿಶ್ವವನ್ನು ಬಾಧಿಸಿದ ಬಹುತೇಕ ದುರಂತಗಳನ್ನು ಕಂಡಿದ್ದಾರೆ. ವಿಶ್ವ ಯುದ್ಧಗಳನ್ನು ನೋಡಿದ್ದಾರೆ. ಕೋಟಿ ಕೋಟಿ ಜನರನ್ನು ಬಲಿ ಪಡೆದುಕೊಂಡ ಸಾಂಕ್ರಾಮಿಕಗಳನ್ನೂ ಮರಿಯಾ ನೋಡಿದ್ದಾರೆ. ಇಂಥಾ ವೃದ್ಧೆ ನೂರಾ ಹದಿಮೂರನೇ ವಯಸ್ಸಿನಲ್ಲಿಯೂ ಕ್ರಿಯಾಶೀಲರಾಗಿದ್ದರು. ವಯೋಸಹಜವಾದ ದಣಿವನ್ನು ಹೊರತಾಗಿಸಿದರೆ ಹೇಳಿಕೊಳ್ಳುವಂಥಾ ಯಾವ ಕಾಯಿಲೆಗಳೂ ಆಕೆಯ ಹತ್ತಿರ ಸುಳಿದಿರಲಿಲ್ಲ. ಇತ್ತೀಚಿನ ತಿಂಗಳಲ್ಲಿ ಮೂತ್ರ ಸೋಂಕು ಆಕೆಯನ್ನು ಕೊಂಚ ಬಾಧಿಸಿತ್ತು.
ಆದರೆ ಈ ಹಣ್ಣಣ್ಣು ಮುದುಕಿಗೆ ಕೊರೋನಾ ವೈರಸ್ ತಗುಲಿದ ವಿಚಾರ ತಿಳಿದ ಎಲ್ಲರೂ ಇಲ್ಲಿಗೆ ಆಕೆಯ ಆಯಸ್ಸು ಮುಗಿಯಿತೆಂದೇ ಅಂದುಕೊಂಡಿದ್ದರಂತೆ. ಚಿಕ್ಕ ವಯಸ್ಸಿನವರೇ ಅದೆμÉೂ್ಟೀ ಸಂಖ್ಯೆಯಲ್ಲಿ ಕೊರೋನಾ ವೈರಸ್ಸಿನ ಭಯದಿಂದಲೇ ಇಲ್ಲವಾಗಿದ್ದಾರೆ. ಹಾಗಿರುವಾಗ ಈ ಅಜ್ಜಿ ಅದರಿಂದ ಪಾರಾಗುತ್ತಾರೆಂಬ ಭರವಸೆ ಯಾರಲ್ಲಿಯೂ ಉಳಿದಿರಲಿಲ್ಲ. ಈ ವೃದ್ಧೆ ಮಾತ್ರ ಎಲ್ಲರ ಎಣಿಕೆಯನ್ನೂ ಉಲ್ಟಾ ಮಾಡುವಂತೆ, ವೈದ್ಯರೇ ಚಕಿತಗೊಳ್ಳುವಂತೆ ಚಿಕಿತ್ಸೆಗೆ ಸ್ಪಂದಿಸಿದ್ದರು. ಆತ್ಮವಿಶ್ವಾಸದಿಂದಲೇ ಚಿಕಿತ್ಸೆಯನ್ನೂ ಪಡೆದುಕೊಂಡು ಬಹುಬೇಗನೆ ಚೇತರಿಸಿಕೊಂಡಿದ್ದರು.
ಈ ಅಜ್ಜಿಯ ಕಥೆ ಕೊರೋನಾ ಮಹಾಮಾರಿಯ ವಿರುದ್ಧ ಹೋರಾಡಿ ಜಯಿಸಲು ಟ್ರೀಟ್ಮೆಂಟಿನ ಜೊತೆಗೆ ಆತ್ಮವಿಶ್ವಾಸವೂ ಪ್ರಧಾನ ಪಾತ್ರ ವಹಿಸುತ್ತದೆಂಬುದಕ್ಕೆ ಜೀವಂತ ಸಾಕ್ಷಿಯಂತಿದ್ದಾರೆ. ಇದೀಗ ಮನೆಗೆ ತೆರಳಿ ಮತ್ತದೇ ಉತ್ಸಾಹದಿಂದ ಜೀವಿಸುತ್ತಿರೋ ಮರಿಯಾ ನೂರಾ ಹದಿಮೂರನೇ ಹುಟ್ಟುಹಬ್ಬವನ್ನೂ ಕುಟುಂಬಿಕರ ಜೊತೆ ಆಚರಿಸಿಕೊಂಡಿದ್ದಾರೆ.ರೋಗ್ಯದಲ್ಲಿ ಒಂದಿನಿತೂ ಏರುಪೇರಾಗದಂತೆ ನೋಡಿಕೊಂಡಿದ್ದಾರೆ. ಕೊರೋನಾ ಬಂದರೆ ಸಾವೇ ಗತಿಯೆಂಬ ಸನ್ನಿ ಎಲ್ಲರನ್ನೂ ಆವರಿಸಿಕೊಂಡಿರೋ ಈ ಹೊತ್ತಿನಲ್ಲಿ ಮರಿಯಾ ಕಥೆ ಎಲ್ಲರಿಗೂ ಆತ್ಮಬಲ ತುಂಬುವಂತಿರೋದು ಸುಳ್ಳಲ್ಲ. ಆಕೆಗೀಗ ಭರ್ತಿ 115 ವರ್ಷ ವಯಸ್ಸು. ಗಟ್ಟಿಮುಟ್ಟಾಗಿರುವ ಈ ಅಜ್ಜಿಗೆ ಹೇಳಿಕೊಳ್ಳುವಂಥಾ ಯಾವ ಕಾಯಿಲೆ ಕಸಾಲೆಗಳೂ ಇಲ್ಲ. ಆಕ್ಟೀವ್ ಆಗಿದ್ದುಕೊಂಡು, ಆಸುಪಾಸಿನವರೊಂದಿಗೆ ಬೆರೆತು ಬದುಕುತ್ತಿರುವ ಈಕೆಯೀಗ ಇಡೀ ಜಗದ ಅಚ್ಚರಿಯಾಗಿದ್ದಾರೆ. ಮೂವತ್ತರ ಆಸಪಾಸಿನ ಜೀವಗಳೇ ಉದುರಿಕೊಳ್ಳುತ್ತಿರುವ ಈ ದಿನಮಾನದಲ್ಲಿ, ಈ ಅಜ್ಜಿ ಒಂದಷ್ಟು ಭರವಸೆ ಮೂಡಿಸಿರೋದಂತೂ ಸತ್ಯ!