ಇದೀಗ ಕನ್ನಡದ ಸಿನಿಮಾಸಕ್ತರನ್ನು ಕೆಜಿಎಫ್ ಮತ್ತು ಕಾಂತಾರ ಪ್ರಭೆ ಆವರಿಸಿಕೊಂಡಿದೆ. ವಿಶೇಷವೆಂದರೆ, ಅಂಥಾ ಅಲೆಯ ನಡುವೆಯೇ ಒಂದು ಹೊಸತನದ, ಸದಭಿರುಚಿಯ, ಪ್ರಯೋಗಾತ್ಮಕ ಚಿತ್ರಗಳೂ ತಯಾರುಗೊಂಡಿವೆ. ಬಿಡುಗಡೆಯ ಸರತಿಯಲ್ಲಿ ನಿಂತಿವೆ. ಸದ್ಯದ ಮಟ್ಟಿಗೆ ಆ ಸಾಲಿನಲ್ಲಿ ಮುಂಚೂಣಿಯಲ್ಲಿರುವ ಚಿತ್ರ `ಮಾವು ಬೇವು’. ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ನಟರಾಗಿದ್ದುಕೊಂಡು ತಮ್ಮದೇ ಚಾಪು ಮೂಡಿಸಿರುವ ಸುಚೇಂದ್ರ ಪ್ರಸಾದ್ ಈ ಚಿತ್ರದ ಮತ್ತೆ ನಿರ್ದೇಶಕರಾಗಿದ್ದಾರೆ. ತಮ್ಮ ವಿಭಿನ್ನ ಶೈಲಿಯ ನಟನೆ, ಅದ್ಭುತ ಅನ್ನಿಸುವಂಥಾ, ಸುಸ್ಪಷ್ಟವಾದ ಕನ್ನಡ ಭಾಷಾ ಬಳಕೆಗಳಿಂದ ಈಗಾಗಲೇ ಸುಚೇಂದ್ರ ಪ್ರಸಾದ್ ಗಮನ ಸೆಳೆದಿದ್ದಾರೆ. ಅವರು ನಿರ್ದೇಶ£ ಮಾಡಿದ್ದಾರೆಂದರೆ, ಆ ಸಿನಿಮಾ ಬಗ್ಗೆ ಕುತೂಹಲ ಮೂಡಿಕೊಳ್ಳದಿರಲು ಸಾಧ್ಯವೇ?
ಇದೀಗ ಮಾವು ಬೇವು ಎಲ್ಲ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡು ಬಿಡುಗಡೆಗೆ ಅಣಿಯಾಗಿದೆ. ಇದೇ ಹೊತ್ತಿನಲ್ಲಿ ಚಿತ್ರತಂಡ ಖುಷಿಯಬ ಸುದ್ದಿಯೊಂದನ್ನು ಹಂಚಿಕೊಂಡಿದೆ. ಅದರನ್ವಯ ಹೇಳೋದಾದರೆ, ಮಾವು ಬೇವು ಚಿತ್ರ 14ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ಪ್ರವೇಶ ಪಡೆದುಕೊಂಡಿದೆ. ಈ ಸಿನಿಮೋತ್ಸವದ ಭಾರತೀಯ ಚಿತ್ರ ವಿಭಾಗದಲ್ಲಿ ಮಾವು ಬೇವು ಚಿತ್ರ ಎಂಟ್ರಿ ಕೊಟ್ಟಿದೆ. ಇದೊಂದು ರೀತಿಯಲ್ಲಿ ಆರಂಭಿಕ ಗೆಲುವು. ಯಾಕೆಂದರೆ, ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ಕನ್ನಡ ಚಿತ್ರವೊಂದು ಪ್ರವೇಶ ಪಡೆದುಕೊಳ್ಳೋದೇ ಹೆಮ್ಮೆಯ ಸಂಗತಿ. ಅದರಲ್ಲಿಯೂ ನಿರ್ದೇಶಕ ಸಚೇಂದ್ರ ಪ್ರಸಾದ್ ಪಾಲಿಗಂತೂ ಇದು ಅಕ್ಷರಶಃ ಸಂಭ್ರಮದ ಸಂಗತಿ.
ಮಾವು ಬೇವು ಸಿನಿಮಾಕ್ಕೂ ಎಂಭತ್ತರ ದಶಕದ ಆಚೀಚಿಗಿನ ಸಾಂಸ್ಕøತಿಕ ಜಗತ್ತಿನ ಸಮೃದ್ಧ ಇತಿಹಾಸಕ್ಕೂ ನೇರಾನೇರ ಸಂಬಂಧವಿದೆ. ಯಾಕೆಂದರೆ, ಆ ಕಾಲದಲ್ಲಿ ಸಂಗೀತ, ಸಾಹಿತ್ಯ ಜಗತ್ತಿನ ಸಾಮ್ರಾಟರಂತಿದ್ದ ಸಾಹಿತಿ ದೊಡ್ಡರಂಗೇಗೌಡ, ಸಂಗೀತ ನಿರ್ದೇಶಕ ಸಿ.ಅಶ್ವತ್ಥ್, ಎಲ್.ವೈದ್ಯನಾಥ್ ಮತ್ತು ಗಾಯಕ ಎಸ್.ಪಿ ಬಾಲಸುಬ್ರಹ್ಮಣ್ಯಂ ಸಹಯೋಗದಲ್ಲಿ ಹತ್ತು ಹಾಡುಗಳ `ಮಾವು ಬೇವು’ ಎಂಬ ಹಾಡುಗಳ ಆಲ್ಬಮ್ ಒಂದು ಜನಪ್ರಿಯಗೊಂಡಿತ್ತು. ಸರ್ವ ಕಾಲಕ್ಕೂ ಸಲ್ಲುವ ಆ ಹಾಡುಗಳ ಅಂತಃಸತ್ವಕ್ಕೆ ಸರಿ ಹೊಂದುವಂಥಾ ಕಥೆಯೊಂದನ್ನು ಸಿಡ್ಡಪಡಿಸಿಕೊಂಡಿದ್ದ ಸುಚೇಂದ್ರ ಪ್ರಸಾದ್, ಅದಕ್ಕೆ ಪರಿಣಾಮಕಾರಿಯಾಗಿ ದೃಷ್ಯ ರೂಪ ನೀಡಿದ್ದಾರೆ.
ನಾವು ಈ ಕಾಲಘಟ್ಟದಲ್ಲಿ ನಿಂತು ಮತ್ಯಾವುದೋ ಮೋಹಕ ಫ್ಲೇವರ್ ಭಿನ್ನ ಅಭಿರುಚಿಯ ಒಂದಷ್ಟು ಮನಸುಗಳು ಈ ಚಿತ್ರದ ವಿಚಾರದಲ್ಲಿ ಸುಚೇಂದ್ರ ಪ್ರಸಾದ್ ಅವರಿಗೆ ಸಾಥ್ ಕೊಟ್ಟಿವೆ. ಅನಿವಾಸಿ ಭಾರತೀಯರಾದ ದೀಪಕ್ ಪರಮಶಿವಯ್ಯ ಸಣ್ಣ ಪಾತ್ರವೊಂದನ್ನು ನಿಭಾಯಿಸುತ್ತಲೇ ಸಂಗೀತ ಸಂಯೋಜನೆಯನ್ನೂ ಮಾಡಿದ್ದಾರೆ. ನಾಗರಾಜ ಅಡ್ವಾನಿ ಛಾಯಾಗ್ರಹಣ ಈ ಚಿತ್ರಕ್ಕಿದೆ. ಡ್ಯಾನಿ ಕುಟ್ಟಪ್ಪ್ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನೀನಾಸಂ ಸಂದೀಪ್, ಗಾಯಕಿ ಚೈತ್ರಾ, ಸುಪ್ರಿಯಾ ಎಸ್ ರಾವ್, ರಂಜಿತಾ, ಸಿತಾರಾ ಚಕ್ರವರ್ತಿ, ರಂಜನ್ ಮುಂತಾದವರ ತಾರಾಗಣವಿದೆ.