ಈ ಜಗತ್ತಿನ ಯಾವ ಜೀವಿಗಳಲ್ಲಿ ಅಂತೆಂಥಾ ಅದ್ಭುತ ಶಕ್ತಿ ಅಡಗಿದೆಯೋ ಹೇಳಲು ಬರುವುದಿಲ್ಲ. ನಮ್ಮ ಕಣ್ಣ ಮುಂದೆ ಸಣ್ಣ ಸಣ್ಣದಾಗಿ ಅಡ್ಡಾಡುವ ಕೂಡಾ ಪ್ರಕೃತಿ ಮಹತ್ತರವಾದ ಶಕ್ತಿಯನ್ನ ಕರುಣಿಸಿರುತ್ತೆ. ಆದರೆ ಅದು ಬರಿಗಣ್ಣಿಗೆ ಕಾಣಿಸೋದಿಲ್ಲ. ಕಂಡರೂ ಕೂಡಾ ಅದು ಒಟ್ಟಾರೆ ಶಕ್ತಿಯ ಒಂದು ಬಿಂದು ಮಾತ್ರವೇ ಆಗಿರುವ ಸಾಧ್ಯತೆಗಳಿದ್ದಾವೆ.
ನಮ್ಮೆಲ್ಲರಿಗೂ ಕೂಡಾ ಜೇನು ನೊಣಗಳ ಬಗ್ಗೆ ಗೊತ್ತೇ ಇದೆ. ಗೊತ್ತಿದೆ ಅಂದ್ರೆ ಎಲ್ಲ ಗೊತ್ತಿದೆ ಅಂದುಕೊಳ್ಳಲಾಗೋದಿಲ್ಲ. ಜೇನು ತುಪ್ಪ, ಅದರ ಚೆಂದದ ರುಚಿ ಮತ್ತು ಅದರ ಔಷಧೀಯ ಗುಣಗಳ ಬಗ್ಗೆ ಗೊತ್ತಿರುತ್ತದೆಯಷ್ಟೆ. ಅದರಾಚೆಗೆ ಅವುಗಳ ಪರಿಶ್ರಮ ಮತ್ತು ಜೀವನ ಕ್ರಮಗಳಂತೂ ನಿಬ್ಬೆರಗಾಗುವಂತಿವೆ. ಆದ್ರೆ ಈಗ ಹೇಳ ಹೊರಟಿರೋ ವಿಚಾರ ಅದನ್ನೂ ಮೀರಿಸುವಂಥಾದ್ದು.
ಜೇನು ನೊಣಗಳು ರಕ್ಕಸ ಬಾಂಬುಗಳನ್ನ ಕಂಡು ಹಿಡಿಯುವಂಥಾ ಶಕ್ತಿಯನ್ನೂ ಹೊಂದಿವೆಯಂತೆ. ಈ ವಿಚಾರವನ್ನು ಜಗತ್ತಿನ ಒಂದಷ್ಟು ಕೀಟ ಸಸ್ತ್ರಜ್ಞರೂ ಕೂಡಾ ಅಂಗೀಕರಿಸಿದ್ದಾರೆ. ಮೆಕ್ಸಿಕೋದ ಲಾಸ್ ಅಲಾಮಸ್ ವಿಜ್ಞಾನಿಗಳು ಬಾಂಬ್ ಡಿಕ್ಟೇಟರ್ ಬಗ್ಗೆ ಆಳವಾದ ಸಂಶೋಧನೆ ನಡೆಸಿದ್ರು. ಅದಕ್ಕಾಗಿ ಜೇನು ನೊಣಗಳನ್ನ ಬಳಸಿಕೊಂಡಿದ್ರು.
ವಿಜ್ಞಾನಿಗಳೆಲ್ಲ ಅಂದುಕೊಂಡದ್ದಕ್ಕಿಂತಲೂ ಹೆಚ್ಚಾಗಿ ಜೇನು ನೊಣಗಳು ಶೌರ್ಯ ಪ್ರದರ್ಶಿಸಿವೆಯಂತೆ. ಕೀಟ ಶಾಸ್ತ್ರಜ್ಞರಿಂದ ತರಬೇತಿ ಪದೆಡ ಜೇನು ನೊಣಗಳು ಬಾಂಬ್ ಕಂಡು ಹಿಡಿಯುವಲ್ಲಿ ಚಾಣಾಕ್ಷತೆ ಮೆರೆದಿವೆ. ಬಾಂಬಿನಲ್ಲಿರೋ ಹಲವಾರು ರಾಸಾಯನಿಕ ವಸ್ತುಗಳನ್ನು ಲೀಲಾಜಾಲವಾಗಿ ಕಂಡು ಹಿಡಿದು ಬಾಂಬಿರುವ ಪ್ರದೇಶವನ್ನ ಜೇನು ನೊಣಗಳು ಪತ್ತೆ ಹಚ್ಚಿವೆಯಂತೆ.