ಕೊರೋನಾ (corona) ಕರಾಳ ಪರ್ವವೊಂದನ್ನು ಪ್ರಯಾಸ ಪಟ್ಟು ದಾಟಿಕೊಂಡ ಖುಷಿ ದೇಶವಾಸಿಗಳನ್ನು ಆವರಿಸಕೊಂಡಿದೆ. ಬಹುತೇಕ ಎಲ್ಲರೂ ಕೂಡಾ ಈ ಮಹಾಮಾರಿ ಶಾಶ್ವತವಾಗಿ ತೊಲಗಿತೆಂಬಂತೆ ನಿರಾಳವಾಗಿದ್ದಾರೆ. ಆದರೆ, ಆಗಾಗ ಕೊರೋನಾ ಮಾರಿ (pendamic) ನಾನಾ ಸ್ವರೂಪಗಳಲ್ಲಿ ತನ್ನ ಇರುವಿಕೆಯನ್ನು ಸಾಬೀತು ಪಡಿಸುತ್ತಿದೆ. ಈ ಮೂಲಕ ಮತ್ತೆ ಭಯದ ನಗಾರಿ ಹೊಡೆದುಕೊಳ್ಳುವಂತೆ ಮಾಡುತ್ತಿದೆ. ಕೆಲವೊಮ್ಮೆ ಬೇರ್ಯಾವ ಸುದ್ದಿಗಳಿಗೂ ದಿಕ್ಕಿಲ್ಲದಿದ್ದಾಗ ಮಾಧ್ಯಮ (media) ಮಂದಿ ಕೊರೋನಾ ಹುಳ ಬಿಡುತ್ತಾರೆಂಬ ಆರೋಪವೂ ಸಾರ್ವಜನಿಕ ವಲಯದಲ್ಲಿದೆ. ಆದರೀಗ ದೆಹಲಿಯಲ್ಲಿ ಕೊರೋನಾ (corona virus) ಪೀಡಿತರ ಸಂಖ್ಯೆ ಏರುಗತಿ ಕಾಣುತ್ತಿರೋದು ಇಡೀ ದೇಶವನ್ನೇ ದಿಗಿಲಾಗಿಸಿಬಿಟ್ಟಿದೆ. ಇದೀಗ ದೆಹಲಿಯಲ್ಲಿ (delhi) ಸಾವಿನ ಸಂಖ್ಯೆಯಲ್ಲಿಯೂ ತೀವ್ರಗತಿಯಲ್ಲಿ ಏರಿಕೆ ಕಂಡಿದೆ!
ದೆಹಲಿಯಲ್ಲಿ ಆಗಾಗ ಕೊರೋನಾ ಪ್ರಕರಣಗಳು ಕಾಣಿಸಿಕೊಳ್ಳುತ್ತಾ ಬಂದಿದ್ದಾವೆ. ಆದರೆ ಈಗ ಕಂಡು ಬಂದಿರುವಷ್ಟು ಪ್ರಮಾಣದ ಪೀಡಿತರ ಸಂಖ್ಯೆ ಲಾಕ್ಡೌನ್ ಮುಗಿದ ನಂತಗರದಲ್ಲಿ ಹಿಂದ್ಯಾವತ್ತೂ ಕಾಣಿಸಿರಲಿಲ್ಲ. ಈಗ್ಗೆ ತಿಂಗಳಿಂದೀಚೆಗೆ ಕೊರೋನಾ ಕಾಣಿಸಿಕೊಂಡಿತ್ತಾದರೂ, ಇತ್ತೀಚೆಗೆ ಒಂದೇ ದಿನದಲ್ಲಿ ದೆಹಲಿ ನಗರದಲ್ಲಿ ಸಾವಿದರ ಆರುನೂರಕ್ಕೂ ಹೆಚ್ಚು ಪ್ರಕರಣಗಳು ಕಾಣಿಸಿಕೊಂಡಿವೆ. ಈ ಮೂಲಕ ಪಾಸಿಟಿವಿಟಿ ರೇಟ್ ಕೂಡಾ ಏಕಾಏಕಿ ಏರುಗತಿ ಕಂಡಿದೆ.
ಹೇಳಿಕೇಳಿ ದೆಹಲಿ ಆಗಾಗ ಹಲವಾರು ಹವಾಮಾನ ವೈಪರೀತ್ಯಗಳಿಂದ ಕಂಗಾಲಾಗುವ ನಗರ. ಆದರೀಗ ಅಲ್ಲಿಮ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಬಿಸಿಲ ಝಳವಿದೆ. ಇಂಥಾ ಹೊತ್ತಿನಲ್ಲಿ ನಾನಾ ಥರದ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳೋದು ಮಾಮೂಲು. ಅದರಲ್ಲಿ ಜ್ವರವಂತೂ ತೀರಾ ಸಾಮಾನ್ಯ ಕಾಯಿಲೆಯಂತಾಗಿದೆ. ಆದರೆ ದೆಹಲಿ ಮಂದಿಯಲ್ಲಿ ಕಾಣಿಸಿಕೊಂಡ ಜ್ವರ ಅಷ್ಟ ಸಲೀಸಾಗಿ ಜಗ್ಗದೆ ವಾರಗಟ್ಟಲೆ ಳಿದುಕೊಂಇದೆ. ಅದರಲ್ಲನೇಕರನ್ನು ಅನುಮಾನದಿಂದ ತಪಾಸಣೆಗೊಳಪಡಿಸಿದಾಗ ಹೆಚ್ಚಿನ ಮಂದಿ ಕೊರೋನಾ ಬಾಧಿತರಾಗಿರೋದು ಜಾಹೀರಾಗಿದೆ. ಸದ್ಯಕ್ಕೆ ಕೇಜ್ರಿವಾಲ್ ಸರ್ಕಾರಕ್ಕೆ ಕೊರೋನಾ ಸವಾಲೆಸೆದಿದೆ. ಅದರ ಬೆನ್ನಲ್ಲಿಯೇ ರಾಷ್ಟ್ರ ರಾಜಧಾನಿಯಿಂದ ಈ ವೈರಸ್ಸು ಎಲ್ಲ ರಾಜ್ಯಗಳಿಗೂ ಹಬ್ಬಿಕೊಳ್ಳುವ ಭೀತ ವಾತಾವರಣ ಸೃಷ್ಟಿಯಾಗಿದೆ.