ಆಧುನಿಕತೆಯ ಭರಾಟೆಯಲ್ಲಿ ಒಂದಿಡೀ ವಿಶ್ವವೇ ತೀರಾ ಪುಟ್ಟದೆನಿಸುತ್ತೆ. ಎಲ್ಲವೂ ಈಗ ಬೆರಳ ಮೊನೆಯಲ್ಲಿಯೇ ಇದೆ. ಇಲ್ಲಿ ಯಾವುದೂ ಅಸಾಧ್ಯವಲ್ಲ. ಎಂಥಾ ಅದ್ಭುತವೂ ಅಚ್ಚರಿಯಾಗುಳಿದಿಲ್ಲ. ಕಾಸೊಂದಿದ್ದರೆ ಯಾವ ಊರಿಗಾದರೂ ಪಾದವೂರ ಬಹುದು. ಕೈಗೆಟುಕದ್ದನ್ನೂ ಮುಟ್ಟಿ ಸಂಭ್ರಮಿಸಬಹುದು. ಆದರೆ ಇಡೀ ವಿಶ್ವದ ನಾನಾ ಭಾಗಗಳಲ್ಲಿ ಚಾಲ್ತಿಯಲ್ಲಿರುವ ರೀತಿ ರಿವಾಜುಗಳನ್ನು, ಚಿತ್ರವಿಚಿತ್ರವಾದ ಆಚರಣೆಗಳನ್ನು ಮಾತ್ರ ಅಷ್ಟು ಸಲೀಸಾಗಿ ಅರಗಿಸಿ ಕೊಳ್ಳಲು ಸಾಧ್ಯವೇ ಇಲ್ಲ. ಹಾಗಿದೆ ಅಂಥಾ ಆಚರಣೆಗಳ ಆಳ, ವಿಸ್ತಾರ.
ನಮ್ಮ ದೇಶದಲ್ಲಿ ಚಾಲ್ತಿಯಲ್ಲಿರೋ ಎಲ್ಲಾ ಆಚರಣೆಗಳನ್ನ ಅರಗಿಸಿಕೊಳ್ಳೋದಕ್ಕೆ, ಅವುಗಳ ಬಗ್ಗೆ ಕೊಂಚ ತಿಳಿದುಕೊಳ್ಳೋದಕ್ಕೆ ಒಂದು ಜನುಮ ಸಾಲದೇನೋ. ಆದ್ರೆ ಇಡೀ ದೇಶಕ್ಕೆ ಅನ್ವಯ ವಾಗುವಂಥಾ ಕೆಲವಾರು ಆಚರಣೆಇಗಳು ಇದ್ದಾವೆ. ಅದರಲ್ಲಿ ಒಬ್ಬರಿಗೆ ಒಂದೇ ಮದುವೆ ಅನ್ನೋ ರಿವಾಜೂ ಒಂದಾಗಿದೆ. ಒಂದು ವೇಳೆ ನಮ್ಮಲ್ಲಿ ಯಾರಾದರೂ ಅದನ್ನು ಬ್ರೇಕ್ ಮಾಡಿ ಮತ್ತೊಂದು ಮದುವೆಯಾದ್ರೆ ಅಂಥವರ ಬಗ್ಗೆ ರಂಗು ರಂಗಾದ ಕಥೆಗಳು ಹುಟ್ಟಿಕೊಳ್ಳುತ್ತವೆ. ಕಾನೂನುಗಳೂ ಕೂಡಾ ಅದನ್ನು ಮಾನ್ಯ ಮಾಡೋದಿಲ್ಲ.
ಆದರೆ ಚೀನಾದ ಒಂದೂರಿನಲ್ಲಿ ಒಬ್ಬ ಹುಡುಗ ಮೂವರು ಹುಡುಗೀರನ್ನು ಸಲೀಸಾಗಿ ಮದುವೆಯಾಗೋ ಅವಕಾಶ ಇದೆಯಂತೆ. ಅಂಥಾದ್ದೊಂದು ವಿಚಿತ್ರ ಪದ್ಧತಿ ಚಾಲ್ತಿಯಲ್ಲಿರೋದು ಚೀನಾದ ಡೊಂಗುವಾಲ್ ಅನ್ನೋ ಊರಿನಲ್ಲಿ. ಇಲ್ಲಿ ಹುಡುಗರಿಗಿಂತಲೂ ಹುಡುಗೀರ ಸಂಖ್ಯೆ ಹೆಚ್ಚಿದೆ. ಆದ ಕಾರಣ ಓರ್ವ ಹುಡುಗನನ್ನು ಮದುವೆಯಾಗೋಕೆ ಹುಡುಗೀರು ಕ್ಯೂ ನಿಲ್ತಾರಂತೆ. ಒಈ ಕಾರಣದಿಂದಲೇ ಹುಡುಗರಿಗೆ ಮೂವರು ಹುಡುಗೀರನ್ನ ಕಟ್ಟಿಕೊಳ್ಳೋ ಅವಕಾಶ ಸಿಕ್ಕಿದೆ. ಒಂದು ವೇಳೆ ಹುಡುಗ ಸಿಗದಿದ್ದರೂ ಇಲ್ಲಿನ ಹುಡುಗೀರು ಬೇರೆ ಪ್ರದೇಶದ ಹುಡುಗರನ್ನ ಮದುವೆಯಾಗೋದಿಲ್ವಂತೆ!