ಎಲ್ಲವೂ ರಾಸಾಯನಿಕ ಮಯವಾಗಿರುವ ಈ ದಿನಮಾನದಲ್ಲಿ ಯಾವುದೆಂದರೆ ಯಾವ ಆಹಾರವೂ ಅಸಲೀ ಗುಣಗಳನ್ನು ಉಳಿಸಿಕೊಂಡಿಲ್ಲ. ಹಾಗಿರುವಾಗ ನಾನಾ ಮೆಡಿಸಿನ್ನುಗಳನ್ನು ನೀಡಿ ನಲವತ್ತೆರಡು ದಿನದೊಳಗೆ ಮೂರ್ನಾಲಕ್ಕು ಕೇಜಿ ತೂಗುವಂತೆ ಮಾಡೋ ಫಾರಂ ಕೋಳಿಗಳಿಂದ ಆರೋಗ್ಯಕ್ಕೆ ಒಳಿತಾಗಲು ಸಾಧ್ಯವೇ? ಇಂಥಾ ವಿಷಗಳ ಕಟಾಂಜನದಂತಿರೋ ಫಾರಂ ಕೋಳಿಗಳಲ್ಲಿ ಆಗಾಗ ಭೀಕರ ರೋಗಗಳು ಕಂಡು ಬರುತ್ತವೆ. ಇದೀಗ ವಿಜ್ಞಾನಿಗಳ ತಂಡವೊಂದು ತಿಂದವರ ಜೀವಕ್ಕೆ ಎರವಾಗಬಲ್ಲ ಡೆಡ್ಲಿ ಬ್ಯಾಕ್ಟೀರಿಯಾವೊಂದನ್ನು ಕೋಳಿಗಳ ದೇಹದಲ್ಲಿ ಪತ್ತೆಹಚ್ಚಿದೆ.
ಅಂದಹಾಗೆ, ವಿಜ್ಞಾನಿಗಳ ತಂಡ ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಪ್ರದೇಶದಲ್ಲಿ ಇಂಥಾದ್ದೊಂದು ಸಂಶೋಧನೆ ನಡೆಸಿದೆ. ಹಲವಾರು ದಿನಗಳ ಕಾಲ ನಿರಂತರವಾಗಿ ಫಾರಂ ಕೋಳಿಗಳನ್ನು ನಿಗಾವಣೆಯಲ್ಲಿಡುವ ಮೂಲಕ ಬ್ಯಾಕ್ಟೀರಿಯಾವನ್ನು ಪತ್ತೆಹಚ್ಚಿದೆ. ಆ ಬ್ಯಾಕ್ಟೀರಿಯಾದಿಂದ ಮಾನವನ ದೇಹದಲ್ಲಾಗಬಹುದಾದ ವ್ಯತಿರಿಕ್ತ ಪರಿಣಾಮಗಳನ್ನೂ ಮನನ ಮಾಡಿಕೊಂಡಿದೆ. ಆ ವಿವರಗಳು ನಿಜಕ್ಕೂ ಬೆಚ್ಚಿಬೀಳುವಂತಿವೆ!
ಆ ಕೋಳಿಗಳಲ್ಲಿ ಪತ್ತೆಯಾಗಿರುವ ಬ್ಯಾಕ್ಟೀರಿಯಾ ಮನುಷ್ಯನ ದೇಹ ಹೊಕ್ಕರೆ ಔಷಧಿಗಳೇ ಕಾರ್ಯನಿರ್ವಹಿಸದಂಥಾ ಸ್ಥಿತಿಯನ್ನು ತಂದೊಡ್ಡುತ್ತದೆ. ಇದರಿಂದಾಗಿ ನ್ಯುಮೋನಿಯಾದಂಥಾ ಕಾಯಿಲೆಗಳಿಗೂ ತುತ್ತಾಗೋದು ಪಕ್ಕಾ. ಇಂಥಾ ವೈರಸ್ ಕೋಳಿಯ ದೇಹದಲ್ಲಿ ಪತ್ತೆಯಾಗಿರೋದು ಇದೇ ಮೊದಲು. ಹಾಗಂತ ಅದು ಒಂದು ಭಾಗಕ್ಕೆ ಮಾತ್ರವೇ ಸೀಮಿತವಲ್ಲ. ಆ ಬ್ಯಾಕ್ಟೀರಿಯಾ ಇಡೀ ದೇಶದಲ್ಲಿ ಪ್ರತೀ ದಿನ ಉತ್ಪಾದನೆಯಾಗುವ ಕೋಳಿಗಲ್ಲಿಯೂ ಇರಬಹುದು. ಒಂದು ವೇಳೇ ಹಾಗಾದರೆ, ಅದು ಖಂಡಿತವಾಗಿಯೂ ಕುಕ್ಕುಟೋದ್ಯಮಕ್ಕೆ ಚೇತರಿಸಿಕೊಳ್ಳಲಾರದಂಥಾ ಪೆಟ್ಟಿ ಕೊಡಲಿದೆ!