ಒಂದಾನೊಂದು ಕಾಲದಲ್ಲಿದ್ದ ವಿಚಿತ್ರ ಹುಡುಗಿ!
ಈ ಆನ್ಲೈನ್ ಯುಗದಲ್ಲಿ ನಕಲಿ ಅಚ್ಚರಿಗಳದ್ದೇ ಮೇಲುಗೈ. ವೈದ್ಯಕೀಯ ಲೋಕವೇ ಬೆರಗಾಗುವಂಥಾ ಮಾನವ ರಚನೆಗಳನ್ನು ಈಗ ಸೃಷ್ಟಿಸಿ ಹರಿ ಬಿಡಲಾಗುತ್ತಿದೆ. ಆದರೆ ನಾವಿಲ್ಲಿ ಹೇಳ ಹೊರಟಿರೋ ವಿಚಿತ್ರ ಹುಡುಗಿಯದ್ದು ಸತ್ಯಕಥೆ. ೧೮೬೦ರಲ್ಲಿ ಫ್ರಾನ್ಸ್ನ ಪ್ರದೇಶವೊಂದರಲ್ಲಿ ಹುಟ್ಟಿದ ಬ್ಲಾನ್ಚ್ ಡ್ಯೂಮಸ್ ಎಂಬ ಹುಡುಗಿ ಬಗ್ಗೆ ಈ ಕ್ಷಣಕ್ಕೂ ವೈದ್ಯಲೋಕ ಒಂದು ಅಚ್ಚರಿಯನ್ನು ಕಾಯ್ದಿಟ್ಟುಕೊಂಡಿದೆ. ಯಾಕೆಂದರೆ ಆಕೆ ಇಡೀ ಜಗತ್ತಿನ ಅತ್ಯಂತ್ರ ವಿಚಿತ್ರ ಹೆಣ್ಣು ಮಗಳು. ಆ ಹುಡುಗಿಗೆ ೩ ಕಾಲು, ೪ ಸ್ತನ ಮತ್ತು ೨ ಜನನಾಂಗವಿತ್ತು!
ಸಾಮಾನ್ಯವಾಗಿ ಹೀಗೆ ವಿಚಿತ್ರವಾಗಿ ಹುಟ್ಟುವ ಮಕ್ಕಳು ಹುಟ್ಟಿದ ಕೆಲವೇ ಘಂಟೆಗಳಲ್ಲಿ ಮರಣ ಹೊಂದುತ್ತವೆ. ಆದರೆ ಈ ಹುಡುಗಿ ಮಾತ್ರ ಅಂಥಾದ್ದೊಂದ ಆಘಾತಕರವಾದ ದೇಹರಚನೆ ಇದ್ದರೂ ಕೂಡಾ ಸಾಕಷ್ಟು ವರ್ಷಗಳ ಬದುಕಿದ್ದಳೆಂಬ ಉಲ್ಲೇಖಗಳಿವೆ. ಆಕೆಯ ವಿಚಿತ್ರವಾದ ದೇಹ ರಚನೆಯಲ್ಲಿಯೂ ಕೂಡಾ ಅನೇಕಾರು ಅಚ್ಚರಿಗಳಿವೆ.
ಈಕೆಗೆ ಇದ್ದ ಹೆಚ್ಚುವರಿ ಅಂಗಾಂಗಗಳೆಲ್ಲವೂ ಕೂಡಾ ಮಾಮೂಲಿನಂತೆಯೇ ಬೆಳವಣಿಗೆ ಹೊಂದಿದ್ದವು. ಕಾಲು, ಸ್ತನಗಳೆಲ್ಲವೂ ಸಹಜವಾದ ಬೆಳವಣಿಗೆಯನ್ನೇ ಕಂಡಿದ್ದವು. ಜನನಾಂಗಗಳೂ ಕೂಡಾ ಮಾಮೂಲಿನ ಲಕ್ಷಣಗಳನ್ನೇ ಹೊಂದಿದ್ದವು.
ಇದೀಗ ಪುಸ್ತಕವೊಂದರ ಮೂಲಕ ಜಾಹೀರಾಗಿರೋ ಈ ಸತ್ಯದ ಬಗ್ಗೆ ವಿಶ್ವಾಧ್ಯಂತ ಚರ್ಚೆಗಳಾಗುತ್ತಿವೆ. ವೈದ್ಯ ಲೋಕ ಈ ಹುಡುಗಿಯ ಸುತ್ತಾ ಹರಡಿಕೊಂಡಿರೋ ಕಥೆಗಳ ಸತ್ಯಾ ಸತ್ಯತೆಯ ಬಗ್ಗೆ ಪರಾಮಾರ್ಶೆ ನಡೆಸುತ್ತಿದ್ದಾರೆ. ಅಂತೂ ಈ ಹುಡುಗಿಯ ಮುಂದೆ ಇತ್ತೀಚಿನ ವಿಚಿತ್ರಗಳೂ ಏನೇನೂ ಅಲ್ಲ ಅನ್ನಬಹುದೇನೋ…