ಹುಟ್ಟೋ ಮಗು ಏನಿಲ್ಲವೆಂದರೂ ಎರಡು ಕೇಜಿ ಮೇಲಿರುತ್ತೆ ಅನ್ನೋದು ಸಾಮಾನ್ಯ ವಿಚಾರ. ಇದಕ್ಕಿಂತ ತೂಕ ಕೊಂಚ ಕಡಿಮೆ ಇದ್ದರೂ ಅಂಥಾ ಕೂಸು ಉಸಿರುಳಿಸಿಕೊಳ್ಳೋದು ಕಷ್ಟ. ಆದರೆ ಅಂಥಾ ನಂಬಿಕೆಯನ್ನೆಲ್ಲ ಸುಳ್ಳು ಮಾಡುವಂಥಾ ಮಗುವೊಂದು ಅರಬ್ ರಾಷ್ಟ್ರದಲ್ಲಿ ಹುಟ್ಟಿ ವೈದ್ಯಲೋಕವೇ ಅಚ್ಚರಿಗೊಳ್ಳುವಂತೆ ಮಾಡಿದೆ.
ಈ ಮಗು ಹುಟ್ಟಿದಾಗ ಇದರ ತೂಕ ಇದ್ದದ್ದು ಕೇಲವ ೬೩೧ ಗ್ರಾಂ ಮಾತ್ರ. ಅಂದರೆ ಪುಟ್ಟದೊಂದು ಐಪಾಡ್ನ ತೂಕದಷ್ಟಿದ್ದ ಈ ಮಗುವನ್ನು ಪವಾಡ ಸದೃಷವಾಗೇ ಉಳಿಸಿಕೊಂಡ ಸಂಪೂರ್ಣ ಮೆಚ್ಚುಗೆ ಕರ್ನಾಟಕ ಮೂಲದ ವೈದ್ಯ ಡಾ.ಗೋವಿಂದ ಶೇಣೈ ಅವರಿಗೆ ಸಲ್ಲುತ್ತದೆ. ಅಬುದಾಬಿಯ ಒeಜeoಡಿ೨೪x೭ ಎಂಬ ಆಸ್ಪತ್ರೆಯಲ್ಲಿ ಈ ಮಗು ಜನಿಸಿದೆ. ಇದರ ತಾಯಿ ಈ ಆಸ್ಪತ್ರೆಗೆ ದಾಖಲಾಗುತ್ತಲೇ ನಾನಾ ಅಪೌಷ್ಟಿಕತೆಯಿಂದ ಬಳಲುತಿದ್ದಳು. ಗರ್ಭಾವಸ್ಥೆಯಲ್ಲಿ ಬರುವ ಪ್ರೀಕ್ಲಂಸಿಯಾ ಎಂಬ ಖಾಯಿಲೆಯಿಂದ ಬಳಲುತಿದ್ದ ಆ ತಾಯಿಗೆ ಶೆಣೈ ದೇಖಾರೇಖಿಯಲ್ಲಿ ಗೆರಿಗೆ ಮಾಡಿಸಲಾಗಿತ್ತು. ಆದರೆ ಗುಟ್ಟಿದ್ದು ಅಂಗೈಯಗಲದ ಕೂಸು.
ಇದನ್ನು ಸವಾಲಗಿ ಸ್ವೀಕರಿಸಿದ ವೈದ್ಯರ ತಂಡ ಈ ಮಗುವನ್ನು ನಿಗಾದಲ್ಲಿಟ್ಟು ನಿರಂತರವಾದ ಚಿಕಿತ್ಸೆ ನೀಡಿ ಉಳಿಸಿಕೊಂಡಿದ್ದಾರೆ. ಒಂದು ತಿಂಗಳು ಕಳೆಯುವಷ್ಟರಲ್ಲಿಯೇ ಈ ಮಗುವಿನ ತೂಕ ಎರಡು ಕೇಜಿ ದಾಟಿದೆ. ತಾಯಿ ಮಗು ಆರೋಗ್ಯವಾಗಿದ್ದಾರಂತೆ!