ಗಾಂಜಾ ಮುಂತಾದ ನಶೆಯ ಪದಾರ್ಥಗಳಿಂದು ಇಡೀ ದೇಶವನ್ನೇ ವ್ಯಾಪಿಸಿವೆ. ನಮ್ಮ ಕರ್ನಾಟಕವೂ ಸೇರಿದಂತೆ ನಾನಾ ರಾಜ್ಯಗಳಲ್ಲಿ ಇಂಥಾ ಡ್ರಗ್ಸ್ ಮಾಫಿಯಾವನ್ನು ಮಟ್ಟ ಹಾಕುವ ಅವಿರತ ಪ್ರಯತ್ನಗಳು ನಡೆಯುತ್ತಿವೆ. ಆದರೆ, ಸಂದಿಗೊಂದಿಗಳಲ್ಲಿ ಪಿತಗುಡುತ್ತಿರುವ ಡ್ರಗ್ ಪೆಡ್ಲರ್‍ಗಳು ಸಿಕ್ಕಿಕೊಳ್ಳುತ್ತಿದ್ದಾರೇ ಹೊರತು, ಕಿಂಗ್‍ಪಿನ್‍ಗಳನ್ನು ಬಂಧಿಸಿ ಈ ದಂಧೆಯ ನಡ ಮುರಿಯುವ ಉತ್ಸಾಹವನ್ನು ಪೊಲೀಸರು ತೋರುತ್ತಿಲ್ಲವೆಂಬ ಅಸಹನೆ ನಾಗರಿಕರಲ್ಲಿದೆ. ಈ ನಡುವೆ ಹೈದ್ರಾಬಾದ್‍ನಲ್ಲಿ ಡ್ರಗ್ಸ್ ಮಾರಾಟಗಾರನೊಬ್ಬನನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಹೈದ್ರಾಬಾದ್‍ನ ಒಂದಷ್ಟು ಪ್ರದೇಶಗಳಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಈತನ ಮೇಲೆ ಹಲವಾರು ದಿನಗಳಿಂದ ಪೊಲೀಸರು ಕಣ್ಣಿಟ್ಟಿದ್ದರು. ಇದೀಗ ಮಾಲಿನ ಸಮೇತ ದಂಧೆಕೋರನನ್ನು ಬಂಧಿಸಲಾಗಿದೆ. ಈತನಿಂದ ಇಪ್ಪತ್ನಾಲಕ್ಕು ಕೇಜಿ ಗಾಂಜಾ ಮತ್ತುಯ ಹದಿನೈದು ಲಕ್ಷದಷ್ಟು ನಗದನ್ನು ವಶಪಡಿಸಿಕೊಳ್ಳಲಾಗಿದೆ. ಈ ಭಾಶಗದಲ್ಲಿ ದೊಡ್ಡ ನೆಟ್‍ವರ್ಕ್ ಹೊಂದಿದ್ದ ಈ ಕ್ರಿಮಿಗೆ ವಿದ್ಯಾರ್ಥಿಗಳು, ಪ್ರತಿಷ್ಠಿತರು ಸೇರಿದಂತೆ ಅನೇಕರ ಸಂಪರ್ಕವಿದೆ. ಆತನ ಮಾಹಿತಿ ಆಧರಿಸಿ ಈ ದಂಧೆಯ ಬೇರುಗಳನ್ನು ಬುಡದಿಂದಲೇ ಕಿತ್ತು ಹಾಕಲು ಹೈದ್ರಾಬಾದ್ ಪೊಲೀಸರು ಮುಂದಾಗಿದ್ದಾರೆ. ಸದ್ಯಕ್ಕೆ ಹೈದ್ರಾಬಾದ್ ಪಟ್ಟಣ ಡ್ರಗ್ಸ್…
Author: Santhosh Bagilagadde
ಬೇಸಿಗೆಯ ಸುಡು ಪಾದಗಳು ಊರುಗಳ ಎದೆ ಮೆಟ್ಟುತ್ತಲೇ ಚಿರತೆ, ಹುಲಿ, ಆನೆಯಂಥಾ ಕಾಡುಪ್ರಾಣಿಗಳು ಊರಿಗೆ ಲಗ್ಗೆಯಿಡುವ ಸುದ್ದಿಗಳು ಹರಡಿಕೊಳ್ಳುತ್ತವೆ. ಅವುಗಳಿಂದಾಗುವ ನಾಶಗಳ ಬಗ್ಗೆ ಪುಂಖಾನುಪುಂಖವಾಗಿ ಎದುರುಗೊಳ್ಳೋ ಸುದ್ದಿಗಳು, ಅವುಗಳ ನೆಮ್ಮದಿ ನಾಶವಾಗಿದ್ದರ ಬಗ್ಗೆ ಕುರುಡಾಗುತ್ತವೆ. ಕಾಡುಗಳ ನಾಶದಿಂದಾಗಿ ಕುಡಿಯಲು ನೀರಿಲ್ಲದೆ, ಆಹಾರವಿಲ್ಲದೆ ಇಂಥಾ ಪ್ರಾಣಿಗಳು ನಾಡಿಗೆ ಲಗ್ಗೆಯಿಡುತ್ತಿರೋದು ವಾಸ್ತವ. ಇನ್ನೂ ಒಂದಷ್ಟು ಪಕ್ಷಿಗಳು, ಪ್ರಾಣಿಗಳು ನಗರದ ಜನರೊಂದಿಗೆ ಹೊಂದಿಕೊಂಡು ಬದುಕಲು ಪ್ರಯಾಸ ಪಡುತ್ತಿವೆ. ಆದರೆ ಈ ಜಗತ್ತಿನಲ್ಲಿ ಅವುಗಳಿಗೂ ನೆಮ್ಮದಿ ಎಂಬುದಿಲ್ಲ! ಹಾಗೆ ಮನುಷ್ಯರ ಕಣ್ಣಳತೆಯಲ್ಲೇ ನರರಗಳಲ್ಲಿಯೂ ಬದುಕುತ್ತಿರುವ ಜೀವಿಗಳಲ್ಲಿ ಪಾರಿವಾಳಗಳೂ ಸೇರಿಕೊಳ್ಳುತ್ತವೆ. ಆದರೆ, ಕಿಟಕಿಗಳೂ ಸೇರಿದಂತೆ ಕಂಡಲ್ಲಿ ಗೂಡು ಕಟ್ಟಿಕೊಂಡು, ಅಲ್ಲಿಯೇ ಸಂತಾನಾಭಿವೃದ್ಧಿ ಮಾಡಿಕೊಂಡು ಬದುಕೋ ಪಾರಿವಾಳಗಳು ಒಂದಷ್ಟು ರೇಜಿಗೆ ಹುಟ್ಟಿಸೋದೂ ಇದೆ. ಅದೆಲ್ಲದರಾಚೆಗೆ ತಮ್ಮ ಸುತ್ತಲಿರುವ ಪಾರಿವಾಳಗಳಿಗೆ ಒಂದಷ್ಟು ಆಹಾರ, ಕಾಳು ಕಡ್ಡಿ ಹಾಕುವ ಜೀವ ಪರ ಮನಸುಗಳೂ ಇಲ್ಲಿವೆ. ಅವರ ದಯೆಯಿಂದಲೇ ಆ ಜೀವಿಗಳು ಹೇಗೋ ಬದುಕಿಕೊಂಡಿವೆ. ಮಹಾರಾಷ್ಟ್ರದ ಥಾಣೆಯಲ್ಲಿಯೂ ಇಂಥವೇ ಒಂದಷ್ಟು ಪಾರಿವಾಳಗಳಿವೆ. ಆದರೆ, ಅವುಗಳಿಗೆ…
ದುನಿಯಾ ಸೂರಿ ನಿರ್ದೇಶನದ `ಕೆಂಡಸಂಪಿಗೆ’ ಚಿತ್ರದ ಮೂಲಕ ನಟಿಯಾಗಿ ಆಗಮಿಸಿದ್ದವರು ಮಾನ್ವಿತಾ. ಅದು ಪಕ್ಕಾ ಸೂರಿ ಫ್ಲೇವರಿನ ಚಿತ್ರ. ಚೆಂದದ ನಿರೂಪಣೆ, ಎಲ್ಲರಿಗೂ ತಾಕುವ ಕಥೆ ಮತ್ತು ಬಹುಕಾಲ ಮನಸಲ್ಲುಳಿಯುವ ಪಾತ್ರಗಳೊಂದಿಗೆ ಕೆಂಡಸಂಪಿಗೆ ಕಂಪು ಬೀರಿತ್ತು. `ಇಂತಿ ನಿನ್ನ ಪ್ರೀತಿಯ’ ಎಂಬ ನವಿರಾದ ಕಥನದ ನಂತರದಲ್ಲಿ ಹಳೇ ಪಾತ್ರ ಹಳೇ ಕಬುಣ ಎಂಬಂಥಾ ಜಾಡು ಹಿಡಿದಿದ್ದ ಸೂರಿ, ಕೆಂಡಸಂಪಿಗೆ ಮೂಲಕ ಮತ್ತೆ ಹಳೇ ಜಾಡು ಹಿಡಿದಿದ್ದರು. ಈ ಮೂಲಕ ನಾಯಕಿಯಾಗಿ ಪಾದಾರ್ಪಣೆ ಮಾಡಿ, ಪ್ರೇಕ್ಷಕರನ್ನೆಲ್ಲ ಸೆಳೆದುಕೊಂಡಿದ್ದಾಕೆ ಮಾನ್ವಿತಾ ಕಾಮತ್! ಅದೇಕೋ, ಆ ನಂತರದಲ್ಲಿ ಹೇಳಿಕೊಳ್ಳುವಂಥಾ ಗೆಲುವು ಆಕೆಯ ಕೈ ಹಿಡಿದಿರಲಿಲ್ಲ. ಮಂಗಳೂರು ಸೀಮೆಯಲ್ಲಿ ಒಂದು ಕಾಲಕ್ಕೆ ರೇಡಿಯೋ ಜಾಕಿಯಾಗಿದ್ದ ಮಾನ್ವಿತಾಗೆ, ಮತ್ತದೇ ವೃತ್ತಿ ಗಟ್ಟಿ ಎಂಬಂಥಾ ಸ್ಥಿತಿಯೂ ನಿರ್ಮಾಣಗೊಂಡಿತ್ತು.Á ನಂತರದಲ್ಲಿ ಅದೇ ಸೂರಿ `ಟಗರು’ ಮೂಲಕ ಮತ್ತೆ ಮಿಂಚಿದ್ದರಲ್ಲಾ? ಆ ಸಿನಿಮಾದ ನಾಯಕಿಯಾಗಿ ಮಾನ್ವಿತಾಗೆ ಮತ್ತೊಂದು ಬ್ರೇಕ್ ಸಿಕ್ಕಿತ್ತು. ಆದರೆ, ಅಂಥಾದ್ದೊಂದು ಗೆಲುವಿನ ಬಳಿಕವೂ ಆಕೆಯ ವೃತ್ತಿ ಬದುಕು ಟೇಕಾಫ್ ಆಗಲೇ…
ಸಿನಿಮಾ ಎಂಬುದು ಅನಕ್ಷರಸ್ಥರನ್ನೂ ನೇರವಾಗಿ ತಲುಪಿಕೊಳ್ಳಬಲ್ಲ ಪರಿಣಾಮಕಾರಿ ಮಾಧ್ಯಮ. ದುರಂತವೆಂದರೆ, ಕೆಲವೊಂದಷ್ಟು ಸಿನಿಮಾಗಳ ಬಿಟ್ಟರೆ ಕನ್ನಡದಂಥಾ ಭಾಷೆಗಳ ಬಹುತೇಕ ಎಲ್ಲ ಸಿನಿಮಾಗಳೂ ಕೂಡಾ ಕಮರ್ಶಿಯಲ್ ಕಂಟೆಂಟುಗಳ ಸುತ್ತವೆ ಗಿರಕಿ ಹೊಡೆಯುತ್ತಿರುತ್ತವೆ. ಇದೆಲ್ಲದರ ನಡುವೆ ಕ್ರಾಂತಿಯಂಥಾ ಸಾಮಾಜಿಕ ಕಥನದ ಚಿತ್ರ ಬಂದರೂ ಕೂಡಾ, ಅದರ ಮೇಲೆ ನಿರೀಕ್ಷೆಯಿಟ್ಟುಕೊಂಡಿದ್ದೇ ಭ್ರಾಂತಿ ಅನ್ನಿಸಿಬಿಡುತ್ತೆ. ಇಂಥಾ ವಾತಾವರಣದಲ್ಲಿ ಚಿತ್ರವೊಂದು ಅಪ್ಪಟ ಸಾಮಾಜಿಕ ಕಥಾ ಹಂದರದೊಂದಿಗೆ ರೂಪುಗೊಂಡಿದೆಯೆಂದರೆ, ರಾಜಕಾರಣದ ಸ್ಥಿತಿಗತಿಗಳತ್ತ ಕಣ್ಣು ಹಾಯಿಸಿದೆ ಎಂದರೆ ಅಚ್ಚರಿ ಮೂಡಿಕೊಳ್ಳದಿರಲು ಸಾಧ್ಯವೇ? ಈ ಕಾರಣದಿಂದಲೇ ಒಂದಷ್ಟು ಗಮನ ಸೆಳೆದಿದ್ದ ಚಿತ್ರ `ಪ್ರಜಾರಾಜ್ಯ’. ಒಂದು ಮಟ್ಟಿಗೆ ಸಾಮಾಜಿಕ ಕಾಳಜಿ ಹೊಂದಿರುವ ಕಥಾ ವಸ್ತುವನ್ನು ನಿರ್ದೇಶಕ ವಿಜಯ್ ಭಾರ್ಗವ್ ಮುಟ್ಟಿದ್ದಾರೆ. ಇದಕ್ಕೆ ಕಥೆ ಒದಗಿಸಿ, ಮುಖ್ಯ ಪಾತ್ರದಲ್ಲಿ ವರದರಾಜ್ ನಟಿಸಿದ್ದಾರೆ. ಈಗಿನ ಸ್ಥಿತಿಗತಿಗಳನ್ನೊಮ್ಮೆ ಗಮನಿಸಿದರೆ ಪ್ರಜಾಪ್ರಭುತ್ವದ ನೆರಳಲ್ಲಿ ಕಳ್ಳ ಕಾಕರೇ ನಾಯಕರಾಗಿ ಮೆರೆಯುತ್ತಿದ್ದಾರೆ. ಜನರಿಗೆ ವರವಾಗಬಲ್ಲ ಅಧಿಕಾರದ ಮರೆಯಲ್ಲಿ ಸಿಕ್ಕಿದ್ದನ್ನೆಲ್ಲ ಕೆರೆದು ಸ್ವಂತ ತಿಜೋರಿ ತುಂಬಿಸಿಕೊಳ್ಳುವ ಖದೀಮರೇ ಮೆರೆಯುತ್ತಿದ್ದಾರೆ. ಆಳುವವರೂ ಅಂಥವರೇ, ಅವರ ಕೈಕೆಳಗೆ…
ಇದೀಗ ಎಲ್ಲೆಡೆಯಲ್ಲೂ ಭಾರೀ ಸದ್ದು ಮಾಡುತ್ತಿರುವ ಚಿತ್ರ ಇನಾಮ್ದಾರ್. ಸಂದೇಶ್ ಶೆಟ್ಟಿ ಆಜ್ರಿ ನಿರ್ದೇಶನದಲ್ಲಿ ಮೂಡಿ ಬಂದಿರೋ ಈ ಚಿತ್ರದ ಟ್ರೈಲರ್ ಕಂಡವರೆಲ್ಲ, ಕಾಂತಾರದ ನಂತರ ಇದು ಮಹಾ ಗೆಲುವನ್ನು ತನ್ನದಾಗಿಸಿಕೊಳ್ಳಲಿದೆ ಎಂಬಂತೆ ಭವಿಷ್ಯ ನುಡಿಯುತ್ತಿದ್ದಾರೆ. ಆ ಟ್ರೈಲರ್‍ನ ಕಾವಾರುವ ಮುನ್ನವೇ, ಪಡ್ಡೆ ಹೈಕಳೊಳಗೆ ಮತ್ತೆ ಕಾವೇರಿಸುವಂಥಾ ವೀಡಿಯೋ ಸಾಂಗ್ ಲಾಂಚ್ ಆಗಿತ್ತು. ಸಿಲ್ಕು ಮಿಲ್ಕು ಎಂಬ ಟೈಟಲ್ಲಿನೊಂದಿಗೆ ಪ್ರಸಿದ್ಧಿ ಪಡೆದುಕೊಳ್ಳುತ್ತಾ ಸಾಗಿದ್ದ ಈ ವೀಡಿಯೋ ಸಾಂಗ್ ಈಗ ಎಲ್ಲ ಮನಸೆಳೆದುಕೊಂಡು, ಸೂಪರ್ ಹಿಟ್ ಆಗಿ ದಾಖಲಾಗಿದೆ! ಶ್ರೀ ಕುಂತಿಯಮ್ಮ ಪ್ರೊಡಕ್ಷನ್ ಮತ್ತು ತಸ್ಮೈ ಪ್ರೊಡಕ್ಷನ್ಸ್ ಬ್ಯಾನರಿನಡಿಯಲ್ಲಿ ನಿರಂಜನ್ ಶೆಟ್ಟಿ ತಲ್ಲೂರು ನಿರ್ಮಾಣ ಮಾಡಿರುವ ಚಿತ್ರ ಇನಾಮ್ದಾರ್. ಟ್ರೈಲರಿನ ಚಹರೆಗಳನ್ನು ಕಂಡವರೆಲ್ಲ ಥ್ರಿಲ್ ಆಗಿ ಕಾಯುತ್ತಿರುವಾಗಲೇ, ಅಚ್ಚರಿಯೆಂಬಂತೆ ಈ ಸಿಲ್ಕು ಮಿಲ್ಕು ಹಾಡು ಬಿಡುಗಡೆಗೊಂಡಿತ್ತು. ಕುಂಟೂರು ಶ್ರೀಕಾಂತ್ ಸಾಹಿತ್ಯವಿರುವ ಈ ಹಾಡಿಗೆ ರಾಕೇಶ್ ಆಚಾರ್ಯ ಸಂಗೀತ ಸಂಯೋಜನೆ ಮಾಡಿದ್ದರು. ರವೀಂದ್ರ ಸೊರಗಾವಿ ಮತ್ತು ಇಂದೂ ನಾಗರಾಜ್ ಈ ಹಾಡನ್ನು ಚೆಂದಗೆ ಹಾಡಿದ್ದರು.…
ಭಾರ್ಗವ ಪಟೇಲ್ ವರುಣ್ ರಾಜ್ ನೆಲೆ ನಿಲ್ಲೋದು ಗ್ಯಾರೆಂಟಿ!ವರ್ಷದ ಮೇಲೆ ವರ್ಷಗಳು ಮಗುಚಿಕೊಂಡರೂ, ಸಿನಿಮಾವೊಂದರತ್ತ ಕೌತುಕವೊಂದು ಮುಕ್ಕಾಗದಂತೆ ಉಳಿದುಕೊಳ್ಳೋದಿದೆಯಲ್ಲಾ? ಅದು ಅಪರೂಪದಲ್ಲೇ ಅಪರೂಪದ ವಿದ್ಯಮಾನ. ಸುಧೀರ್ಘ ಕಾಲದವರೆಗೂ ಅಂಥಾ ಭಾವವನ್ನು ಪ್ರೇಕ್ಷಕರ ಮನಸಲ್ಲಿ ಕಾಯ್ದಿಟ್ಟುಕೊಳ್ಳೋದು ಹೆಚ್ಚಿನ ಚಿತ್ರಗಳಿಗೆ ಸಾಧ್ಯವಾಗೋದಿಲ್ಲ. ಆ ದಿಸೆಯಿಂದ ನೋಡ ಹೋದರೆ ಪನ್ನಗ ಸೋಮಶೇಖರ್ ನಿರ್ದೇಶನದ `ಕಡಲ ತೀರದ ಭಾರ್ಗವ’ ಚಿತ್ರದ್ದು ನಿಜಕ್ಕೂ ಅಚ್ಚರಿದಾಯಕ ಹೆಜ್ಜೆಗಳೇ. ಟೀಸರ್, ಟ್ರೈಲರ್‍ನಲ್ಲಿ ಕಥೆಯ ಬಗ್ಗೆ ಸಣ್ಣ ಸುಳಿವುನ್ನೂ ಬಿಟ್ಟು ಕೊಡದೆಯೂ, ಕ್ರೇಜ್ ನಿಗಿನಿಗಿಸುವಂತೆ ಮಾಡಿದ ಹೆಗ್ಗಳಿಕೆಯೂ ಭಾರ್ಗವನಿಗೆ ಸಲ್ಲುತ್ತದೆ. ಇಂಥಾ ಚಿತ್ರವೀಗ ಬಿಡುಗಡೆಗೊಂಡಿದೆ. ಕಡಲಿನಷ್ಟೇ ಹರವುಳ್ಳ ಸಂಕೀರ್ಣ ಕಥೆಯೊಂದನ್ನು ನಿರ್ದೇಶಕರು ಈ ಮೂಲಕ ಪ್ರೇಕ್ಷಕರ ಮುಂದೆ ಹರವಿದ್ದಾರೆ… ಅಷ್ಟಕ್ಕೂ ಮನಸಿಗೆ ಸಂಬಂಧಿಸಿದ ವಿಚಾರಗಳೇ ಇಂಟರೆಸ್ಟಿಂಗ್ ಅನ್ನಿಸಿಕೊಳ್ಳುತ್ತವೆ. ಅದರ ಒಡಲಿನಲ್ಲಿರುವ ಭಾವಗಳು, ತುಡಿತ, ಸಿಟ್ಟು ದ್ವೇಷ ಮತ್ತು ಯಾವ ನಿಲುಕಿಗೂ ಸಿಗದಂಥಾ ನಾನಾ ವ್ಯಾಧಿಗಳಿಗೆ ಕಣ್ಣಾದ ಒಂದಷ್ಟು ಚಿತ್ರಗಳು ಈವರೆಗೂ ತೆರೆಕಂಡಿವೆ. ಆದರೆ, ಕಡಲ ತೀರದ ಭಾರ್ಗವ ಚಿತ್ರದ ವಿಚಾರದಲ್ಲಿ ನಿರ್ದೇಶಕರು ಮನೋಲೋಕದಲ್ಲಿ…
ಇತ್ತೀಚೆಗಂತೂ ಧರ್ಮ, ದೇವರು, ಬಣ್ಣಗಳನ್ನು ಸಾರಾಸಗಟಾಗಿ ಗುತ್ತಿಗೆಗೆ ತೆಗೆದುಕೊಂತಾಡುವವರ ಹಾವಳಿ ವಿಪರೀತಕ್ಕಿಟ್ಟುಕೊಂಡಿದೆ. ಹೀಗೆ ಕೆದರಿಕೊಂಡಿರುವ ಧರ್ಮದ ಪಿತ್ಥವೆಂಬುದು ದಿನ ದಿನಕ್ಕೂ ರೂಪಾಂತರ ಹೊಂದುತ್ತಾ ಮುಂದುವರೆಯುತ್ತಿದೆ. ಈಗ್ಗೆ ಒಂದಷ್ಟು ಕಾಲದಿಂದ ಶುರುವಾಗಿರುವ ಸಿನಿಮಾ ಬಾಯ್ಕಾಟ್ ಪ್ರವೃತ್ತಿ ಎಂಬುದು ಆ ಧರ್ಮದಮಲಿನ ಕೂಸೆಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಬೆನ್ನ ಹುರಿಯೇ ನೆಟ್ಟಗಿಲ್ಲದ ಕೆಲ ಚಿತ್ರಗಳ ನೆಲಕಚ್ಚುತ್ತಲೇ ಈ ಬಾಯ್ಕಾಟ್ ವೀರರು ಅದು ನಮ್ಮದೇ ಪ್ರಭಾವ ಎಂಬಂತೆ ಕಾಲರ್ ಎಗರಿಸುತ್ತಾ ಬಂದಿದ್ದಾರೆ. ಆದರೆ ಶಾರೂಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ನಟಿಸಿದ್ದ `ಪಠಾಣ್’ ವಿಚಾರದಲ್ಲಿ ಮಾತ್ರ ಬಾಯ್ಕಾಟ್ ಕಲ್ಚರಿನ ಅಸಲೀ ಶಕ್ತಿ ಜಗಜ್ಜಾಹೀರಾಗಿಬಿಟ್ಟಿದೆ! ನಿಮಗೆ ಮರೆತು ಹೋಗಿರಲಿಕ್ಕಿಲ್ಲ; ಪಠಾಣ್ ವಿರುದ್ಧ ಸಮರ ಸಾರಲು ತುದಿಗಾಲಲ್ಲಿ ನಿಂತು ಕಾಯುತ್ತಿದ್ದವರಿಗೆ, ಆ ಸಿನಿಮಾ ಕಡೆಯಿಂದಲೇ ಒಂದು ಸರಿಕಟ್ಟಾದ ಸರಕು ಸಿಕ್ಕಂತಾಗಿತ್ತು. ಅದರ ಬೇಷರಮ್ ರಂಗ್ ಎಂಬ ವೀಡಿಯೋ ಸಾಂಗ್ ಹೊರ ಬಂದಿದ್ದೇ ಈ ಪಟಾಲಮ್ಮು ಮಗಿಬಿದ್ದುಬಿಟ್ಟಿತ್ತು. ಆ ಹಾಡಿನಲ್ಲಿ ಎಂದಿನಂತೆ ಶರ್ಟು ಬಿಚ್ಚಿ ನಿಂತಿದ್ದ ಶಾರೂಖ್ ಖಾನ್, ಲಂಗೋಟಿಯಂಥಾದ್ದೊಂದು…
ನೆಲಮೂಲದ ಕಥೆಗಳನ್ನು ಹೆಕ್ಕಿ ತಂದು, ಅದಕ್ಕೆ ತಮ್ಮದೇ ಧಾಟಿಯಲ್ಲಿ ಸಿನಿಮಾ ಫ್ರೇಮು ಹಾಕಿ, ಪ್ರೇಕ್ಷಕರ ಮುಂದಿಡುತ್ತಾ ಅಡಿಗಡಿಗೆ ಅಚ್ಚರಿ ಮೂಡಿಸುತ್ತಿರುವವರು ನಿರ್ದೇಶಕ ಮಂಸೋರೆ. ಇಂಥಾ ಗುಣಗಳಿಂದಲೇ ಕನ್ನಡ ಮಟ್ಟಿಗೆ ಅಪರೂಪದ ನಿರ್ದೇಶಕರೆನ್ನಿಸಿಕೊಂಡಿರುವ ಮಂಸೋರೆ, 19.20.21 ಅಂತೊಂದು ಸಿನಿಮಾಗೆ ಸಜ್ಜಾದಾಗಲೂ ವಿಭಿನ್ನ ಕಥಾನಕವೊಂದರ ನಿರೀಕ್ಷೆಯಿತ್ತು. ಆ ನಂತರದಲ್ಲಿ ಹೆಜ್ಜೆ ಹೆಜ್ಜೆಗೂ ತಾನೇ ತಾನಾಗಿ ಸುದ್ದಿ ಮಾಡುತ್ತಾ ಸಾಗಿ ಬಂದಿದ್ದ ಈ ಚಿತ್ರವೀಗ ಬಿಡುಗಡೆಗೊಂಡಿದೆ. ಕಾಡಿನೊಂದಿಗೆ ನಿಕಟ ನಂಟಿಟ್ಟುಕೊಂಡು, ಅದನ್ನೇ ಜಗತ್ತಾಗಿಸಿಕೊಂಡ ಜನರ ಒಡಲ ಸಂಕಟ, ಅಧಿಕಾರಸ್ಥರ ಬೂಟುಗಾಲುಗಳ ಭರ್ಬರ ನಡೆ ಮತ್ತು ಬದುಕಿನ ನೆಲೆಯನ್ನೇ ಕಳೆದುಕೊಳ್ಳುವ ಬೀತಿಯಲ್ಲಿರುವ ಅಮಾಯಕ ಜೀವಗಳ ಆರ್ತ ಸ್ಥಿತಿ… ಇಂಥಾ ಗಟ್ಟಿ ಕಥಾನಕದೊಂದಿಗೆ ಈ ಸಿನಿಮಾ ಪ್ರೇಕ್ಷಕರನ್ನು ದಾಟಿಕೊಂಡು ಮನಸಿಗಿಳಿಯುವಲ್ಲಿ ಯಶ ಕಂಡಿದೆ. ಮಂಸೋರೇ ಸಿನಿಮಾಗಳೆಂದ ಮೇಲೆ ಅದರ ಪ್ರತೀ ದೃಷ್ಯ, ಪಾತ್ರಗಳೂ ನೈಜ ಚಹರೆಗಳನ್ನು ಹೊಂದಿರುತ್ತವೆ. ಸಂಭಾಷಣೆಗಳು ನಮ್ಮೊಡಲಿಂದಲೇ ತೂರಿ ಬಂದವೇನೋ ಎಂಬಂತೆ ಭಾಸವಾಗುತ್ತದೆ. ಈ ಚಿತ್ರದಲ್ಲಿಯೂ ತಮ್ಮ ಒರಿಜಿನಲ್ ಫ್ಲೇವರ್ ಅನ್ನು ಕಾಪಿಟ್ಟುಕೊಂಡೇ ಅವರು ಮನಮುಟ್ಟುವಂಥಾದ್ದೊಂದು…
ಕನ್ನಡ ಚಿತ್ರರಂಗದ ಮಟ್ಟಿಗಿದು ಹೊಸಾ ಅನ್ವೇಷಣೆಯ ಪರ್ವ ಕಾಲ. ಅದಾಗಲೇ ಆ ದಿಸೆಯಲ್ಲಿ ತಯಾರುಗೊಂಡಿರುವ ಒಂದಷ್ಟು ಸಿನಿಮಾಗಳು ತೆರೆಗಾಣಲು ಸಜ್ಜಾಗಿವೆ. ಮತ್ತೊಂದಷ್ಟು ಸಿನಿಮಾಗಳು ಕೊರೋನಾ ಕಂಟಕದಿಂದ ಸಾಕಷ್ಟು ಪಡಿಪಾಟಲು ಪಟ್ಟು, ಎಲ್ಲ ಸವಾಲುಗಳನ್ನೂ ಮೀರಿಕೊಂಡು, ಸಾವರಿಸಿಕೊಂಡು ಇದೀಗ ಸಿನಿಮಾ ಮಂದಿರಗಳತ್ತ ಮುಖ ಮಾಡಿವೆ. ಅಂಥಾ ಸಿನಿಮಾಗಳಲ್ಲಿ ನಿಸ್ಸಂದೇಹವಾಗಿಯೂ `ನಾಕು ಮುಖ’ ಸೇರಿಕೊಳ್ಳುತ್ತದೆ. ಪ್ರತಿಭಾನ್ವಿತರಾದ ಕುಶನ್ ಗೌಡ ನಿರ್ದೇಶನ ಮಾಡಿ ನಟಿಸಿರುವ ಈ ಸಿನಿಮಾ ನಿಮ್ಮ ಮುಂದೆ ಅವತರಿಸಲು ಕೆಲವೇ ಘಂಟೆಗಳು ಮಾತ್ರವೇ ಬಾಕಿ ಉಳಿದುಕೊಂಡಿವೆ. ಹಾಗೆ ನೋಡಿದರೆ, ಕಲಾ ಜಗತ್ತಿನ ಒಂದೊಂದು ವಿಭಾಗಗಳಲ್ಲಿ ಪಳಗಿಕೊಳ್ಳುವುದೇ ಕಷ್ಟ. ಅದನ್ನು ನಿಭಾಯಿಸುವುದೂ ಕೂಡಾ ತ್ರಾಸದಾಯಕ ಕೆಲಸ. ಅಂಥಾದ್ದರಲ್ಲಿ ಬರವಣಿಗೆ, ನಿರ್ದೇಶನ ಮತ್ತು ನಟನೆಗೂ ರೆಡಿ ಅಂತ ನಿಂತು ಬಿಡುವುದೊಂದು ದುಃಸ್ಸಾಹಸ. ಅದು ಕೆಲವೇ ಕೆಲ ಮಂದಿಗೆ ಮಾತ್ರವೇ ಸಾಧ್ಯವಾಗುತ್ತೆ. ಸಿಕ್ಕ ಸಿಕ್ಕವ ತಲೆ ಸವರಿ ಅವರಿಂದ ಟ್ರಿಮ್ ಮಾಡಿಸಿಕೊಂಡು ಕಥೆಗಾರರೆನ್ನಿಸಿಕೊಳ್ಳುವ ತಲುಬು ಹೊಂದಿರುವವರು, ಬರಹಗಾರ ಅನ್ನಿಸಿಕೊಳ್ಳುವ ಹುಚ್ಚಿರುವವರು ಮತ್ತು ನಿರ್ದೇಶನದ ಕನಸು ಕಾಣುವವರು ಗಾಂಧಿನಗರದ…
ಹದಿಹರೆಯದ ತಲ್ಲಣಗಳನ್ನು ಪಕ್ಕಾ ಬೋಲ್ಡ್ ಆಗಿ ದಾಖಲಿಸೋದರಲ್ಲಿ ನಿರ್ದೇಶಕ ಯೋಗರಾಜ ಭಟ್ ಅವರದ್ದು ಎತ್ತಿದ ಕೈ. ಭಾವ ತೀವ್ರತೆಯನ್ನೂ ಕೂಡಾ ಭೋಳೇ ಶೈಲಿಯಲ್ಲಿ ದಾಟಿಸಬಲ್ಲ ಚಾಕಚಕ್ಯತೆಯೇ ಅವರ ಗೆಲುವಿನ ಗುಟ್ಟೆಂದರೂ ಅತಿಶಯವೇನಲ್ಲ. ಅಂಥಾ ಯೋಗರಾಜ್ ಭಟ್ `ಪದವಿಪೂರ್ವ’ ಎಂಬ ಶೀರ್ಷಿಕೆಯಿಟ್ಟುಕೊಂಡು ನಿರ್ಮಾಣಕ್ಕಿಳಿದಾಗ ತಾನೇ ತಾನಾಗಿ ಅದರತ್ತ ಪ್ರೇಕ್ಷಕರ ಗಮನ ಕೇಂದ್ರೀಕರಿಸಿತ್ತು. ಆರಂಭದಲ್ಲೇ ಸುದ್ದಿಯಾಗುತ್ತಾ, ಹೆಜ್ಜೆ ಹನೆಜ್ಜೆಯಲ್ಲೂ ನಿರೀಕ್ಷೆ ಮೂಡಿಸಿದ್ದ ಈ ಚಿತ್ರ ಕಳೆದ ವರ್ಷದ ಕಡೇಯ ಭಾಗದಲ್ಲಿ ಬಿಡುಗಡೆಗೊಂಡಿತ್ತು. ಒಂದಷ್ಟು ನಿರೀಕ್ಷೆಯನ್ನೂ ಮೂಡಿಸಿತ್ತು. ಇದೀಗ ಪದವಿ ಪೂರ್ವ ಚಿತ್ರ ಸನ್ ನೆಕ್ಸ್ಟ್ ಮೂಲಕ ಓಟಿಟಿಗೆ ಲಗ್ಗೆಯಿಡುತ್ತಿದೆ! ಇದೇ ಮಾರ್ಚ್ ಮೂರನೇ ತಾರೀಕಿನಿಂದ ಪದವಿ ಪೂರ್ವ ಚಿತ್ರ ಸನ್ ನೆಕ್ಸ್ಟ್ ಓಟಿಟಿ ಪ್ಲಾಟ್ಫಾರ್ಮಿನಲ್ಲಿ ಪ್ರದರ್ಶನ ಶುರು ಮಾಡಲಿದೆ. ಇಲ್ಲಿಯೂ ಕೂಡಾ ಪ್ರೇಕ್ಷಕರ ಕಡೆಯಿಂದ ಉತ್ತಮ ಪ್ರತಿಕ್ರಿಯೆ ಮೂಡಿಕೊಳ್ಳುವ ನಿರೀಕ್ಷೆ ಚಿತ್ರ ತಂಡದಲ್ಲಿದೆ. ಸಿನಿಮಾದಿಂದ ಸಿನಿಮಾಕ್ಕೆ ಹೊಸಾ ಕಾನ್ಸೆಪ್ಟುಗಳೊಂದಿಗೆ ಎದುರಾಗುವ ಯೋಗರಾಜ್ ಭಟ್, ನಿರ್ಮಾಪಕರಾಗಿ ಈ ಚಿತ್ರವನ್ನೂ ಕೂಡಾ ಹೊಸಾ ಬಗೆಯಲ್ಲಿ ಕಟ್ಟಿ ಕೊಟ್ಟಿದ್ದಾರೆ.…