ಕರ್ನಾಟಕವೀಗ ವಿಧಾನಸಭಾ ಚುನಾವೆಯ ಹೊಸ್ತಿಲಿನಲ್ಲಿ ನಿಂತಿದೆ. ಇದರ ಭಾಗವಾಗಿಯೇ ಜನಸಾಮಾನ್ಯರ ಆ ಕ್ಷಣದ ಅನಿವಾರ್ಯತೆಗಳನ್ನು ಬಳಸಿಕೊಂಡು, ಮುಲಾಜಿಗೆ ಕೆಡವಿಕೊಳ್ಳುವ ರಾಜಕಾರಣದ ಮೇಲಾಟಗಳೂ ಕೂಡಾ ಜೋರಾಗಿಯೇ ನಡೆಯುತ್ತಿವೆ. ಜನಸಾಮಾನ್ಯರೇ ಹೀಗೆ ಆಮಿಷಗಳಿಗೆ ಗುರಿಯಾಗಿಬಿಟ್ಟರೆ, ಪ್ರಜಾಪ್ರಭತ್ವದ ಹೆಸರಲ್ಲಿ ಲೂಟಿ ಹೊಡೆಯುತ್ತಿರುವ ಖದೀಮರಿಗೆಲ್ಲ ಪರವಾನಗಿ ಸಿಕ್ಕಂತಾಗುತ್ತದೆ. ಇಂಥಾ ಘಳಿಗೆಯಲ್ಲಿ ಪ್ರಭಾವಶಾಲಿ ಮಾಧ್ಯಮವಾದ ಸಿನಿಮಾ ಮೂಲಕ ಮತದಾರರಲ್ಲಿ ಅರಿವು ಮೂಡಿಸುವ ಕೆಲಸ ಮಾಡೋದಿದೆಯಲ್ಲಾ? ಅದು ನಿಜಕ್ಕೂ ಪ್ರಜಾಪ್ರಭುತ್ವದ ಅಸಲೀ ಮೌಲ್ಯ ಉಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿ ದಾಖಲಾಗುತ್ತದೆ. ಅದೇ ಆಶಯಗಳನ್ನು ಹೊಂದಿರುವ `ಪ್ರಭುತ್ವ’ ಚಿತ್ರದ ಟ್ರೈಲರ್ ಇದೀಗ ದೊಡ್ಡ ಮಟ್ಟದಲ್ಲಿಯೇ ಸದ್ದು ಮಾಡುತ್ತಿದೆ! ಅಂದಹಾಗೆ, ಇದು ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ಚೇತನ್ ಚಂದ್ರ ನಾಯಕನಾಗಿ ನಟಿಸಿರುವ ಚಿತ್ರ. ಇತ್ತೀಚಿನ ದಿನಗಳಲ್ಲಿ ಗಟ್ಟಿ ಕಂಟೆಂಟಿನ ಸಿನಿಮಾಗಳು ಸಾಲು ಸಾಲಾಗಿ ಬರುತ್ತಿವೆ. ಅದರ ಮುಂದುವರೆದ ಭಾಗವಾಗಿಯೇ, ಭಿನ್ನ ಕಥಾನಕವನ್ನೊಳಗೊಂಡಿರುವ ಚಿತ್ರ ಪ್ರಭುತ್ವ. ರವಿರಾಜ್ ಎಸ್ ಕುಮಾರ್ ಪ್ರಭುತ್ವವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ನಿರ್ಮಾಪಕ ರವಿರಾಜ್ ಅವರ ತಂದೆ ಡಾ.ಮೇಘಡಹಳ್ಳಿ…
Author: Santhosh Bagilagadde
ಪ್ರತಿಭೆ ಮತ್ತು ಪೊರಿಶ್ರಮವೆಂಬುದಿದ್ದರೆ, ಚಿತ್ರರಂಗದಲ್ಲಿನ ಪುಟ್ಟ ಹೆಜ್ಜೆಯೂ ರಾಜಮಾರ್ಗವಾಗಿ ಬದಲಾಗಿ ಬಿಡುತ್ತೆ. ಅವಕಾಶಗಳ ಹಿಂದೆ ಅವಕಾಶಗಳ ಸಂತೆ ನೆರೆದು ಮತ್ಯಾವುದೋ ಎತ್ತರಕ್ಕೇರಿಸುತ್ತೆ. ಈ ಮಾತಿಗೆ ಉದಾಹರಣೆಯಂಥಾ ಒಂದಷ್ಟು ಪ್ರತಿಭಾನ್ವಿತರು ಕನ್ನಡ ಚಿತ್ರರಂಗದಲ್ಲಿದ್ದಾರೆ. ಆ ಯಾದಿಯಲ್ಲಿ ಇತ್ತೀಚಿನ ಸೇರ್ಪಡೆಯಂತಿರುವವರು ಧರ್ಮಣ್ಣ ಕಡೂರು. ರಾಮಾ ರಾಮಾ ರೇ ಎಂಬ ಚಿತ್ರದ ಮೂಲಕ ನಟನಾಗಿ ಎಡಂಟ್ರಿ ಕೊಟ್ಟಿದ್ದ ಧರ್ಮಣ್ಣ, ಆ ನಂತರದಲ್ಲಿ ಅನೇಕ ಚಿತ್ರಗಳಲ್ಲಿ ಕಾಮಿಡಿ ನಟನಾಗಿ ಮಿಂಚಿದ್ದರು. ಇದೀಗ ಅವರ ಮುಂದೆ ಅಕ್ಷರಶಃ ರಾಜಯೋಗ ಅವತರಿಸಿದೆ! ಸಿಕ್ಕ ಪಾತ್ರಗಳನ್ನು ಕಣ್ಣಿಗೊತ್ತಿಕೊಂಡು ನಟಿಸೋ ಮನಃಸ್ಥಿತಿ ಹೊಂದಿರುವವರು ಧರ್ಮಣ್ಣ. ರಾಮಾ ರಾಮಾ ರೇ ಚಿತ್ರದಲ್ಲಿ ಈ ಹುಡುಗ ನಟಿಸಿದ್ದ ಪರಿ ಕಂಡು ಚಿತ್ರಪ್ರೇಮಿಗಳೆಲ್ಲ ಅಚ್ಚರಿಗೊಂಡಿದ್ದರು. ಭಿನ್ನ ಬಗೆಯದ್ದಾಗಿದ್ದ ಆ ಚಿತ್ರದ ಜೀವಾಳವೇ ಈ ಪಾತ್ರ ಎಂಬಷ್ಟರ ಮಟ್ಟಿಗೆ ಧರ್ಮಣ್ಣನ ಖ್ಯಾತಿ ಹಬ್ಬಿಕೊಂಡಿತ್ತು. ಹಾಗೆ ರಾಮ ರಾಮಾ ರೇ ಚಿತ್ರದಲ್ಲಿನ ಆ ಪಾತ್ರ ಕಂಡವರೆಲ್ಲ, ಈ ಹುಡುಗ ನಟನಾಗಿ ನೆಲೆ ಕಂಡುಕೊಳ್ಳುತ್ತಾನೆಂಬ ಭವಿಷ್ಯ ನುಡಿದಿದ್ದರು. ಅದು ನಿಜವಾಗಿ ವರ್ಷಗಳೇ…
ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರಾಗಿದೆ. ಬಹುತೇಕ ಎಲ್ಲಾ ಪಕ್ಷಗಳೊಳಗೂ ಚುರುಕಿನ ವಿದ್ಯಮಾನ ಚಾಲ್ತಿಯಲ್ಲಿದೆ. ನಾಯಕರೆನ್ನಿಸಿಕೊಂಡವರ ಮುನಿಸಿ, ಕೆಸರೆರಚಾಟ, ನಾಲಿಗೆಯ ಮೇಲೆ ಕಂಟ್ರೋಲು ಕಳಕೊಂಡವರ ಮೇಲಾಟಗಳೆಲ್ಲವೂ ಸಾಂಘವಾಗಿಯೇ ನೆರವೇರುತ್ತಿದೆ. ಈ ನಡುವೆ ಒಂದಷ್ಟು ಮಹತ್ವದ ರಾಜಕೀಯ ವಿದ್ಯಮಾನಗಳು, ಗೆಲುವನ್ನೇ ಗುರಿಯಾಗಿಸಿಕೊಂಡ ಪಟ್ಟುಗಳೆಲ್ಲವೂ ಯಥೇಚ್ಚವಾಗಿಯೇ ಪ್ರದರ್ಶನಗೊಳ್ಳುತ್ತಿವೆ. ಇದೆಲ್ಲದರ ನಡುವೆ ಮಂಡ್ಯ ಕ್ಷೇತ್ರದ ಲೋಕಸಭಾ ಸದಸ್ಯೆ ಸುಮಲತಾರ ರಾಜಕೀಯ ನಡೆಯೀಗ ಒಂದಷ್ಟು ಚರ್ಚೆಗೆ, ಮತ್ತೊಂದಷ್ಟು ವಿವಾದಗಳಿಗೆ ಗ್ರಾಸವಾಗಿವೆ. ಯಾವ ಜನ ಅಂಬಿ ಮೇಲೆನ ಸೆಂಟಿಮೆಂಟಿನಿಂದ, ಅದೊಂದು ತೆರನಾದ ಅನುಕಂಪದಿಂದ ಸುಮಲತಾರನ್ನು ಪಕ್ಷಾತೀತವಾಗಿ ಗೆಲ್ಲಿಸಿದ್ದರೋ, ಅದೇ ಜನ ಈವತ್ತಿಗೆ ಸಿಟ್ಟಾಗಿ ಕುದಿಯಲಾರಂಭಿಸಿದ್ದಾರೆ! ಅಷ್ಟಕ್ಕೂ, ಸುಮಲತಾರನ್ನು ಗೆಲ್ಲಿಸಿದ ಮಂದಿ ಅವರ ಕಡೆಯಿಂದ ನಾನಾ ನಿರೀಕ್ಷೆಗಳನ್ನಿಟ್ಟುಕೊಂಡಿದ್ದರು. ಆದರೆ ಆಕೆ ಬೆಂಗಳೂರಿಂದ ದೆಹಲಿಗೆ ಸರ್ಕೀಟು ನಡೆಸೋದರಲ್ಲಿಯೇ ಇದುವರೆಗಿನ ಅವಧಿಯನ್ನು ಸವೆಸಿದ್ದಾರೆಂಬಂಥಾ ಆರೋಪವೊಂದು ಮಂಡ್ಯ ಸೀಮೆಯಲ್ಲಿ ಹರಿದಾಡುತ್ತಿದೆ. ಕೆಲವಾರು ಸಂದರ್ಭಗಳಲ್ಲಿ ಕ್ಷೇತ್ರಕ್ಕೆ ಭೇಟಿ ಕೊಟ್ಟು, ಅದರ ಸುತ್ತ ಮಣಗಟ್ಟಲೆ ಪೋಸು ಕೊಟ್ಟಿದ್ದನ್ನು ಬಿಟ್ಟರೆ ಸುಮಲತಾರ ಕಡೆಯಿಂದ ಇದುವರೆಗೂ ಹೇಳಿಕೊಳ್ಳುವಂಥಾ ಘನಂಧಾರಿ ಕೆಲಸಗಳೇನೂ ಆಗಿಲ್ಲ.…
ಇದು ಹಠಾತ್ತನೇ ಅಖಾಡಕ್ಕಿಳಿದು ರಾತ್ರಿ ಕಳೆದು ಬೆಳಗಾಗೋದರೊಳಗೆ ಪ್ರಖ್ಯಾತಿ ಗಳಿಸುವ ಕಾಲಮಾನ. ವಾಸ್ತವವೆಂದರೆ, ಸಾಮಾಜಿಕ ಜಾಲತಾಣಗಳನ್ನೇ ನೆಚ್ಚಿಕೊಂಡು ಮೆರೆಯುವ ಇಂಥಾ ಮಂದಿ ಬಹುಬೇಗನೆ ಮೂಲೆಗೆ ಸರಿದು ಬಿಡುತ್ತಾರೆ. ಆ ಕ್ಷಣಕ್ಕೆ ಯಾವುದಕ್ಕೆ ಮೈಲೇಜ್ ಇದೆಯೋ, ಅದೇ ವೇಷ ಧರಿಸಿ ಹೊರಡೋ ಇಂಥಾ ಮಂದಿಯ ಹಕೀಕತ್ತುಗಳೆಲ್ಲ ಜನರಿಗೆ ಸ್ಪಷ್ಟವಾಗಿಯೇ ಗೊತ್ತಾಗುತ್ತೆ. ಆಗಾಗ ಸಾಮಾಜಿಕ ಹೋರಾಟಗಾರನಂತೆ ಗೆಟಪ್ಪು ಬದಲಿಸುತ್ತಾ, ಅದೇ ಬಲದೊಂದಿಗೆ ಬಿಗ್‍ಬಾಸ್ ಶೋಗೂ ಹೋಗಿ ಬಂದಿರುವ ಪ್ರಶಾಂತ್ ಸಂಬರ್ಗಿ ನಿಸ್ಸಂದೇಹವಾಗಿಯೂ ಆ ಸಾಲಿಗೆ ಸೇರಿಕೊಳ್ಳುವ ಆಸಾಮಿ. ಜಟ್ಕಾ, ಹಲಾಲ್ ಕಟ್ ಅಂತೆಲ್ಲ ಜುಟ್ಟು ಕೆದರಿಕೊಂಡು ಕುಣಿದಾಡಿದ್ದ ಸಂಬರ್ಗಿ ಇದೀಗ ಮತ್ತೊಂದು ಹೊಸಾ ಅವತಾರವೆತ್ತಿದ್ದಾರೆ! ಬಿಗ್ ಬಾಸ್ ಶೋನ ಸಂದರ್ಭದಲ್ಲಿಯೇ ಸಂಬರ್ಗಿಯ ಶಕುನಿಯ ಅವತಾರವೊಂದು ಪಟ್ಟಂಪೂರಾ ಜಾಹೀರಾಗಿತ್ತು. ಒಂದಷ್ಟು ದಿನಗಳ ಕಾಲ ಆತನ ಆಟ, ಅಟಾಟೋಪಗಳನ್ನು ಗಮನಿಸಿದ್ದ ಮಂದಿ ಸಂಬರ್ಗಿ ರಾಜಕಾರಣಿಯಾಗಲು ಲಾಯಕ್ಕಾದ ಆಸಾಮಿ ಎಂಬ ಅಭಿಪ್ರಾಯಕ್ಕೆ ಬಂದಿದ್ದರು. ಕಡೆಗೂ ಇದೀಗ ಏಕಾಏಕಿ ಸಂಬರ್ಗಿ ರಾಜಕಾರಣಿಯಾಗಿದ್ದಾರೆ. ಹಾಗಂತ, ಅದು ನಿಜ ಜೀವನದಲ್ಲಿ ಅಂದುಕೊಳ್ಳಬೇಕಿಲ್ಲ. ಧಾರಾವಾಹಿ…
ಕೆಲ ಮಂದಿಗೆ ಅದ್ಯಾತರ ತೆವಲುಗಳು ಮೆತ್ತಿಕೊಂಡಿರುತ್ತವೋ ಗೊತ್ತಿಲ್ಲ; ಒಂದಾದ ಮೇಲೊಂದರಂತೆ ಸಂಬಂಧಗಳಿಗಾಗಿ ಕೈ ಚಾಚುತ್ತಾರೆ. ತಮ್ಮ ವಿಕೃತಿಗಳ ಮೂಲಕವೇ ಹತ್ತಿರದ ಬಂಧಗಳನ್ನು ಎಡಗಾಲಿನಲ್ಲಿ ಒದ್ದು ದೂರ ಸರಿಸುತ್ತಾರೆ. ತೆಲುಗು ಚಿತ್ರರಂಗದ ತುಂಬಾ ಚೂಲು ಆಸಾಮಿಯೆಂದೇ ಜನಜನಿತವಾಗಿರುವಾತ ನರೇಶ್ ಮೇಲ್ಕಂಡ ಕಾಯಿಲೆಯ ಬ್ರಾಂಡ್ ಅಂಬಾಸಡರ್ ಇದ್ದಂತೆ. ಕೈ ತುಂಬಾ ಕಾಸು, ಮೈತುಂಬಾ ಖಯಾಲಿಗಳನ್ನು ಅಂಟಿಸಿಕೊಂಡಿರುವ ಈ ಆಸಾಮಿಗೆ ಕನ್ನಡದ ನಟಿ ಪವಿತ್ರಾ ಅದೇಕೆ ಆಕರ್ಷಿತರಾದರೋ ಭಗವಂತನೇ ಬಲ್ಲ. ಈ ಸಂಬಂಧದ ವಿಚಾರವಾಗಿ ಹಾದಿರಂಪ ಬೀದಿರಂಪವಾಗಿ, ಕಡೆಗೂ ಇದೀಗ ನರೇಶ್ ಮತ್ತು ಪವಿತ್ರಾ ಕಲ್ಯಾಣ ಸುಸೂತ್ರವಾಗಿ ನೆರವೇರಿದೆ! ಇಂದು ನರೇಶ್ ತನ್ನ ಟ್ವಿಟ್ಟರ್ ಅಕೌಂಟಿನ ಮೂಲಕ ಮದುವೆಯ ಮಾಹಿತಿಯನ್ನು ಬಿಚ್ಚಿಟ್ಟಿದ್ದಾನೆ. ಮದುವೆ ವೀಡಿಯೋವನ್ನು ಹಂಚಿಕೊಂಡಿರುವ ನರೇಶ್ ಆಶೀರ್ವದಿಸುವಂತೆ ಕೇಳಿಕೊಂಡಿದ್ದಾನೆ. ಈ ಮೂಲಕ ಸಾಕಷ್ಟು ಸಮಯಗಳಿಂದ ರಂಪ ರಾಮಾಯಣಗಳಿಗೆ ಕಾರಣವಾಗಿದ್ದ, ಎರಡು ಕುಟುಂಬಗಳ ನಂಬಿಕೆಗೆ ಎರವಾಗಿದ್ದ ಈ ಪ್ರಕರಣ ನಿರ್ಣಾಯಕ ಘಟ್ಟ ತಲುಪಿಕೊಂಡಂತಾಗಿದೆ. ಕುಹಕಗಳು, ಮೂದಲಿಕೆಗಳು ಏನೇ ಇದ್ದರೂ, ಆರಂಭದಲ್ಲಿಯೇ ಈ ಜೋಡಿ ಇಂಥಾದ್ದೊಂದು ನಿರ್ಧಾರಕ್ಕೆ…
ಇದೀಗ ಕನ್ನಡ ಚಿತ್ರರಂಗ ಹೊಸಬರ ಆಗಮದಿಂದ, ಹೊಸಾ ಬಗೆಯ ಕಥಾನಕಗಳಿಂದ ಕಳೆಗಟ್ಟಿಕೊಳ್ಳುತ್ತಿದೆ. ಹೀಗೆ ಆಗಮಿಸುವ ಹೊಸಾ ತಂಡಗಳ ಬಗ್ಗೆ ಪ್ರೇಕ್ಷಕರ ವಲಯದಲ್ಲಿಯೂ ಅನೂಹ್ಯವಾದೊಂದು ಪ್ರೀತಿ ಇದ್ದೇ ಇದೆ. ಹೆಚ್ಚೇನೂ ಅಬ್ಬರವಿಲ್ಲದೆ, ಕೇಲವ ಕಂಟೆಂಟಿನ ಕಸುವಿನಿಂದಲೇ ಇಂಥಾ ಒಂದಷ್ಟು ಸಿನಿಮಾಗಳು ಪ್ರೇಕ್ಕರಿಗೆ ಹಿಡಿಸುತ್ತಿವೆ. ಒಂದಿ ಮಟ್ಟಿನ ಗೆಲುವನ್ನೂ ದಾಖಲಿಸುತ್ತಿವೆ. ಆರಂಭದಿಂದಲೂ ಇಂಥಾದ್ದೊಂದು ಪಾಸಿಟಿವ್ ವಾತಾವರಣದಲ್ಲಿ ಸಾಗಿ ಬಂದಿದ್ದ ಚಿತ್ರ ಒಂದು ರಾಬರಿ ಕಥೆ. ಗೋಪಾಲ್ ಹಳ್ಳೇರ ಹೊನ್ನಾವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರವೀಗ ಬಿಡುಗಡೆಗೊಂಡಿದೆ. ಅಲ್ಲಲ್ಲಿ ಮೆಚ್ಚುಗೆ ಗಳಿಸುತ್ತಾ, ಮತ್ತೆ ಕೆಲವೊಂದು ಬಿಂದುಗಳಲ್ಲಿ ರೇಜಿಗೆ ಹುಟ್ಟಿಸುವಂಥಾ ಮಿಶ್ರ ಭಾವವೊಂದು ನೋಡುಗರನ್ನು ಆವರಿಸಿಕೊಂಡಿದೆ! ನಿರ್ದೇಶಕರು ಅತ್ಯಂತ ನಾಜೂಕಿನಿಂದ, ಜಾಣ್ಮೆಯಿಂದ ಈ ಸಿನಿಮಾವನ್ನು ಪ್ರೇಕ್ಷಕರ ಮನಸಲ್ಲಿ ಪ್ರತಿಷ್ಟಾಪಿಸಿದ್ದರು. ಆ ನಂತರ ಒಂದಷ್ಟು ರೀತಿಯಲ್ಲಿ ನಾನಾ ಹೊಳಹುಗಳನ್ನು ಹೊಮ್ಮಿಸುತ್ತಾ, ಈ ಚಿತ್ರ ತಾನೇತಾನಾಗಿ ಪ್ರೇಕ್ಷಕರನ್ನು ಆವರಿಸಿಕೊಂಡಿತ್ತು. ಅದರಲ್ಲಿಯೂ ಇದೊಂದು ಸತ್ಯ ಘಟನೆಯಾಧಾರಿತ ಚಿತ್ರ ಎಂಬ ಅಂಶ ಜಾಹೀರಾಗುತ್ತಲೇ ರೋಚಕ ಕೌತುಕವೊಂದು ಎಲ್ಲರ ಎದೆತಬ್ಬಿಕೊಂಡಿತ್ತು. ಇಂಥಾ ಒಂದು…
ಸಾಮಾಜಿಕ ಜಾಲತಾಣದಲ್ಲಿ ಹೆಂಗಳೆಯರನ್ನು ಪರಿ ಪರಿಯಾಗಿ ಕಾಡುವ, ಹೀನಾಯವಾಗಿ ಕಮೆಂಟ್ ಮಾಡುವ ಮೂಲಕ ತಮ್ಮೊಳಗಿನ ವಿಕೃತಿಯನ್ನು ಕಾರಿಕೊಳ್ಳುವ ಒಂದು ದಂಡೇ ಇದೆ. ಇಂಥವರೆಲ್ಲ ಹೆಚ್ಚಿನ ಸಂದರ್ಭಗಳಲ್ಲಿ ಸಂಸ್ಕøತಿ, ಧರ್ಮ ರಕ್ಷಕರೆಂಬ ಸೋಗಿನಲ್ಲಿರುತ್ತಾರೆ. ಈ ಮಂದಿಗೆ ಮಾಡಲು ಬೇರೆ ಕಸುಬಿಲ್ಲವೋ, ತೀಟೆ ತೀರಿಸಿಕೊಳ್ಳಲು ಬೇರೆ ದಾರಿಗಳಿಲ್ಲವೋ ಭಗವಂತನೇ ಬಲ್ಲ. ಯಾರೋ ಹುಡುಗಿ ತನ್ನಿಷ್ಟದ ಬಟ್ಟೆ ಹಾಕಿದರೆ, ತನಗೆ ಬೇಕಾದಂತೆ ಬದುಕುವ ಸುಳಿವು ಕೊಟ್ಟರೆ ಇಂಥಾ ಹುಳುಗಳೆಲ್ಲ ಅದೆಲ್ಲಿದ್ದರೂ ಕಮೆಂಟ್ ಬಾಕ್ಸ್‍ನತ್ತ ತೆವಳಿ ಬರುತ್ತವೆ. ತಮಗೆ ತೋಚಿದಂತೆ ಉಪದೇಶ ನೀಡಿ ಉಗಿಸಿಕೊಳ್ಳುತ್ತವೆ. ಇಂಥಾ ಹಿಂಡಿನ ಮೇಲೀಗ ಪುಟ್ ಗೌರಿ ಮದುವೆ ಖ್ಯಾತಿಯ ಸಾನ್ಯಾ ಅಯ್ಯರ್ ಕೆಂಡವಾಗಿದ್ದಾಳೆ! ಕೆಲ ದಿನಗಳ ಹಿಂದೆ ಸಾನ್ಯಾ ಅಯ್ಯರ್ ತಾಯಿ ದೀಪಾ ಅಯ್ಯರ್ ಹುಟ್ಟುಹಬ್ಬವಿತ್ತು. ಈ ದೀಪಾ ಕೂಡಾ ಡಬ್ಬಿಂಗ್ ಆರ್ಟಿಸ್ಟ್ ಆಗಿರುವವರು. ಅದರ ಜೊತೆ ಜೊತೆಗೇ ಸೀರಿಯಲ್ಲುಗಳಲ್ಲಿಯೂ ನಟಿಸುತ್ತಿರುವವರು. ಸದ್ಯಕ್ಕೆ ಲಕ್ಷಣ ಎಂಬ ಸೀರಿಯಲ್ಲಿನ ಮುಖ್ಯ ಪಾತ್ರವೊಂದರ ಮೂಲಕ ದೀಪಾ ಕಿರುತೆರೆ ಪ್ರೇಕ್ಷಕರ ಮನಗೆದ್ದಿದ್ದಾರೆ. ಹೀಗೆದ ಸೀರಿಯಲ್ ಜಗತ್ತಿನಲ್ಲಿರುವ…
ರಿಷಬ್ ಶೆಟ್ಟಿ ಇದೀಗ ಕಾಂತಾರ2 ಕಥೆ ಸೃಷ್ಟಿಸುವ ಕಾರ್ಯದಲ್ಲಿ ಮಗ್ನರಾಗಿದ್ದಾರೆಂಬ ಸುದ್ದಿಗಳು ಹರಿದಾಡುತ್ತಿವೆ. ಕಾಂತಾರದ ಭರ್ಜರಿ ಯಶಸ್ಸಿನ ನಂತರ ಭಾರೀ ಪ್ರಚಾರ ಪಡೆದುಕೊಂಡಿರುವ ರಿಷಭ್, ಕಥೆ ಸಿದ್ಧಗೊಳಿಸುವ ಕಾರ್ಯದ ನಡುವೆಯೂ ಆಗಾಗ, ಬೇರೆ ಬೇರೆ ರೀತಿಯಲ್ಲಿ ಸುದ್ದಿ ಕೇಂದ್ರದಲ್ಲಿರುತ್ತಾರೆ. ಇದೀಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಭೇಟಿಯಾಗಿ, ಮನವಿ ಪತ್ರವೊಂದನ್ನು ಸಲ್ಲಿಸುವ ಮೂಲಕ ಮತ್ತೆ ಚರ್ಚೆ ಹುಟ್ಟು ಹಾಕಿದ್ದಾರೆ. ಅದರಲ್ಲಿಯೂ, ಸಿನಿಮಾದಾಚೆಗೆ ದೃಷ್ಟಿ ಹೊರಳಿಸಿ ಸಾಮಾಜಿಕ ಕಳಕಳಿಯ ಮೂಲಕ ರಿಷಭ್ ಮೆಚ್ಚುಗೆಯನ್ನೂ ಪಡೆದುಕೊಂಡಿದ್ದಾರೆ. ಕಾಂತಾರ ಚಿತ್ರೀಕರಣ ಮತ್ತು ಕಥೆಯ ಭಾಗವಾಗಿ ರಿಷಭ್ ಕಾಡಂಚಿನ ಪ್ರದೇಶಗಳಲ್ಲಿ ತಿಂಗಳುಗಟ್ಟಲೆ ಸುತ್ತಾಡಿದ್ದರು. ಅಲ್ಲಿನ ಜನರ ಬದುಕು, ಬವಣೆಗಳನ್ನು ಕಣ್ಣಾರೆ ಕಂಡಿದ್ದರು. ಅದರ ಜೊತೆಯಲ್ಲಿಯೇ, ವನ ರಕ್ಷಕರ ತೊಂದರೆ, ತಾಪತ್ರಯಗಳನ್ನೆಲ್ಲ ಅರಿತುಕೊಂಡಿದ್ದರು. ಸಾಮಾನ್ಯವಾಗಿ ಚಿತ್ರತಂಡಗಳು ಹೀಗೆ ಜನರ ನಡುವೆ ಬೆರೆತರೂ ಕೂಡಾ ಸಿನಿಮಾದಾಚೆಗೆ ಅವರ ಬದುಕಿನ ಬಗ್ಗೆ ಆಲೋಚಿಸೋದು ವಿರಳ. ಆದರೆ, ರಿಷಬ್ ಕಾಡಂಚಿನ ಜನರ ಬವಣೆ ನೀಗಿಸಿ, ವನಪಾಲಕರತ್ತಲೂ ಗಮನ ಹರಿಸುವಂತೆ ಕೋರಿ ಸಿಎಂಗೆ ಮನವಿ ಸಲ್ಲಿಸಿದ್ದಾರೆ.…
ಡಾಲಿ ಧನಂಜಯ್ ನಾಯಕನಾಗಿ ನಟಿಸಿರುವ `ಹೊಯ್ಸಳ’ ಚಿತ್ರ ನಾನಾ ವಿಧಗಳಲ್ಲಿ ಆರಂಭದಿಂದಲೂ ಸುದ್ದಿ ಮಾಡುತ್ತಿದೆ. ಅಷ್ಟಕ್ಕೂ ಹೊಯ್ಸಳ ಎಂಬ ಶೀರ್ಷಿಕೆಯಲ್ಲಿಯೇ ಒಂದು ತೆರನಾದ ಖದರ್ ಇದೆ. ಅದಕ್ಕೆ ತಕ್ಕುದಾದಂಥಾ ಪಾತ್ರದಲ್ಲಿ ಡಾಲಿ ಕಾಣಿಸಿಕೊಂಡಿರುವ ವಿಚಾರ ಈಗಾಗಲೇ ಟ್ರೈಲರ್ ಮೂಲಕ ಜಾಹೀರಾಗಿದೆ. ಯಾವ ನಟರ ಪಾಲಿಗಾದರೂ ಇಪ್ಪತೈದನೇ ಚಿತ್ರವೆಂಬುದು ಮಹತ್ವದ ಘಟ್ಟ. ಹೊಯ್ಸಳ ಮೂಲಕ ಡಾಲಿ ಧನಂಜಯ್ ಆ ಹಂತ ತಲುಪಿಕೊಂಡಿರುತ್ತಾರೆ. ಇಪ್ಪತೈದನೇ ಚಿತ್ರವೆಂದ ಮೇಲೆ ಒಂದಷ್ಟು ವಿಶೇಷತೆಗಳಿರಲೇಬೇಕೆಂದು ಪ್ರೇಕ್ಷಕರು ನಿರೀಕ್ಷಿಸುತ್ತಾರಲ್ಲಾ? ಅದನ್ನೆಲ್ಲ ಗಮನದಲ್ಲಿಟ್ಟುಕೊಂಡೇ ನಿರ್ದೇಶಕರು ಈ ಸಿನಿಮಾವನ್ನು ಪೊರೆದಿದ್ದಾರೆ. ಇದೀಗ ಹೊಯ್ಸಳ ಚಿತ್ರದ ಭಾವಪರವಶಗೊಳಿಸುವ ಹಾಡೊಂದು ಬಿಡುಗಡೆಗೊಂಡಿದೆ! ಹೊಯ್ಸಳ ವಿಜಯ್ ಎನ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರ. ಆಕ್ಷನ್, ರೊಮ್ಯಾನ್ಸ್ ಸೇರಿದಂತೆ ಎಲ್ಲ ಗುಣಲಕ್ಷಣಗಳನ್ನು ಬೆರೆಸಿಯೇ ಅವರು ಈ ಸಿನಿಮಾವನ್ನು ರೂಪಿಸಿದ್ದಾರೆ. ಇದೀಗ ಹೊರ ಬಂದಿರುವ ಹಾಡನ್ನು ನೋಡಿದವರಂತೂ ಹೊಯ್ಸಳನ ಮೇಲೆ ಮತ್ತಷ್ಟು ಆಕರ್ಷಿತರಾಗಿದ್ದಾರೆ. `ಅರೇ ಇದು ಎಂಥ ಭಾವನೆ, ಬರೀ ಸುಡುವಂಥ ಕಾಮನೆ’ ಎಂಬ ಈ ಹಾಡನ್ನು ಯೋಗರಾಜ್ ಭಟ್…
ಕಿರುತೆರೆಯಲ್ಲಿ ಒಂದಷ್ಟು ಮಿಂಚಿದ ಬಳಿಕ ನಟ ನಟಿಯರು ಹಿರಿತೆರೆಯತ್ತ ಸಾಗಿ ಬರುವುದೇನು ಅಚ್ಚರಿದಾಯಕ ವಿದ್ಯಮಾನವಲ್ಲ. ಈಗಾಗಲೇ ಹಾಗೆ ಬಂದ ಒಂದಷ್ಟು ಮಂದಿ ಹಿರಿತೆರೆಯಲ್ಲಿಯೂ ಮಿಂಚಿ, ನೆಲೆ ಕಂಡುಕೊಂಡಿದ್ದಾರೆ. ಮತ್ತೊಂದಷ್ಟು ಜನ ಮುಕ್ಕರಿದರೂ ಯಶಸ್ಸನ್ನು ದಕ್ಕಿಸಿಕೊಳ್ಳಲಾಗದೆ ಮತ್ತೆ ಕಿರುತೆರೆಗೆ ಮರಳಿದ್ದಾರೆ. ಮತ್ತೂ ಒಂದಷ್ಟು ಮಂದಿ ಅಲ್ಲಿಯೂ ಸಲ್ಲದೆ, ಎಲ್ಲಿಯೂ ನೆಲೆ ನಿಲ್ಲದೆ ಅಂತರ್ ಪಿಶಾಚಿಗಳಂತೆ ಅಂಡಲೆಯುತ್ತಿದ್ದಾರೆ. ಇಂಥಾ ವಾಸ್ತವಗಳಾಚೆಗೆ, ಸಿನಿಮಾ ರಂಗಕ್ಕೆ ಕಿರುತೆರೆ ಲೋಕದಿಂದ ಆಗಮಿಸುವವರು ಸಂಖ್ಯೆಗೇನೂ ಕೊರತೆಯಾಗಿಲ್ಲ. ಇದೀಗ ಸುಂದರಿ ಅಂತೊಂದು ಧಾರಾವಾಹಿಯ ಮೂಲಕ ಹೆಸರು ಸಂಪಾದಿಸಿದ್ದ ಅಮೂಲ್ಯಾ ಗೌಡರ ಸರದಿ! ಈಗಾಗಲೇ ಒನ್ ವೇ ಎಂಬ ಚಿತ್ರದಲ್ಲಿ ನಟಿಸುವ ಮೂಲಕ ಗಮನ ಸೆಳೆದಿದ್ದ ಕಿರಣ್ ರಾಜ್ ಇದೀಗ ಕುರುಡು ಕಾಂಚಾಣ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈಗೊಂದಷ್ಟು ದಿನಗಳಿಂದ ಸುದ್ದಿಯಲ್ಲಿರುವ ಈ ಚಿತ್ರಕ್ಕೆ ಅಮೂಲ್ಯ ಗೌಡ ಎಂಟ್ರಿ ಕೊಟ್ಟಿದ್ದಾರೆ. ಆಕೆ ನಾಯಕಿಯಾಗಿ ನಿಕ್ಕಿಯಾಗಿದ್ದಾರೆ. ಪ್ರದೀಪ್ ವರ್ಮಾ ನಿರ್ದೇಶನದ ಈ ಚಿತ್ರ ಓಟಿಟಿ ಪ್ಲಾಟ್‍ಫಾರ್ಮ್ ಅನ್ನೇ ದೃಷ್ಟಿಯಲ್ಲಿಟ್ಟುಕೊಂಡು ತಯಾರಾಗುತ್ತಿದೆ. ಅದು ಏಕಕಾಲದಲ್ಲಿಯೇ ಕನ್ನಡ,…