ಕನ್ನಡ ಕಿರುತೆರೆ ಜಗತ್ತಿನ ಮಹತ್ವದ ಮೈಲಿಗಲ್ಲಿನಂಥಾ ಒಂದಷ್ಟು ಕಾರ್ಯಕ್ರಮಗಳಿವೆ. ಬರೀ ಟಿಆರ್‍ಪಿ ಮೇಲೆ ಕಣ್ಣಿಟ್ಟ ಕೆಲ ಕೊಳಕು ರಿಯಾಲಿಟಿ ಶೋಗಳು ಪ್ರೇಕ್ಷಕರಲ್ಲೊಂದು ರೇಜಿಗೆ ಹುಟ್ಟಿಸಿದ್ದರೆ, ಮತ್ತೆ ಕೆಲ ಕಾರ್ಯಕ್ರಮಗಳು ಪ್ರೇಕ್ಷಕರನ್ನೆಲ್ಲ ಬೇಷರತ್ತಾಗಿ ಹಿಡಿದಿಟ್ಟುಕೊಂಡಿವೆ. ಅಂಥಾ ಸಕಾರಾತ್ಮಕ ಕಾರ್ಯಕ್ರಮಗಳಲ್ಲಿ ನಿಸ್ಸಂದೇಹವಾಗಿಯೂ ವೀಕೆಂಡ್ ವಿತ್ ರಮೇಶ್ ಸೇರಿಕೊಳ್ಳುತ್ತೆ. ನಟ ರಮೇಶ್ ಆ ಕಾರ್ಯಕ್ರಮವನ್ನು ನಡೆಸಿಕೊಡುತ್ತಿರುವ ರೀತಿ, ನಾನಾ ಕ್ಷೇತ್ರಗಳ ಸಾಧಕ ಬದುಕಿನ ಪ್ರತೀ ಮಗ್ಗುಲನ್ನು ತೆರೆದಿಡವ ಪರಿಗಳೆಲ್ಲವೂ ಭಾರೀ ಜನಪ್ರಿಯತೆ ಗಳಿಸಿಕೊಂಡಿವೆ. ಒಂದು ಸುದೀರ್ಘ ಅಂತರದ ನಂತರ ವೀಕೆಂಡ್ ವಿಥ್ ರಮೇಶ್ ಮತ್ತೆ ಶುರುವಾಗುತ್ತಿದೆ. ಇದೇ ತಿಂಗಳ ಇಪ್ಪತೈದನೇ ತಾರೀಕಿನಿಂದ ಈ ಕಾರ್ಯಕ್ರಮ ಮತ್ತೆ ಪ್ರಸಾರವಾಗಲಿದೆ. ಆ ದಿನ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಐದನೇ ಆವೃತ್ತಿಗೆ ಚಾಲನೆ ಸಿಗಲಿದೆ. ಹೀಗೆ ತಮ್ಮ ನೆಚ್ಚಿನ ಕಾರ್ಯಕ್ರಮಕ್ಕೆ ವಾರವಿವೊಂದು ಬಾಕಿ ಇರುವಾಗಲೇ ಪ್ರೇಕ್ಷಕರೆಲ್ಲರೊಳಗೂ, ಸಾಧಕರ ಸೀಟಿನಲ್ಲಿ ಯಾರ್ಯಾರು ಮಿರುಗಲಿದ್ದಾರೆ? ಈ ಸೀಜನ್ನಿನ ಮೊದಲ ಅತಿಥಿಯಾಗಿ ಯಾರು ಬರಲಿದ್ದಾರೆ ಅಂತೆಲ್ಲ ಪ್ರಶ್ನೆಗಳಿವೆ. ಈ ಹಿಂದೆ ಪ್ರಭುದೇವ ಮೊದಲ…
Author: Santhosh Bagilagadde
ಕನ್ನಡ ಚಿತ್ರರಂಗದಲ್ಲೀಗ ಹೊಸತನದ ತರಂಗಗಳ ಮಾರ್ಧನಿ ಶುರುವಾಗಿದೆ. ಅದರ ಭಾಗವಾಗಿಯೇ ಒಂದಷ್ಟು ಭಿನ್ನ ಪ್ರಯತ್ನಗಳು ನಡೆಯುತ್ತಿವೆ; ಜನಮಾನಸವನ್ನು ಗೆಲ್ಲುತ್ತಿವೆ. ಸದ್ಯದ ಮಟ್ಟಿಗೆ ಅದೇ ಹಾದಿಯಲ್ಲಿರುವ ಚಿತ್ರ `ಪೆಂಟಗನ್’. ಈಗಾಗಲೇ ಈ ಸನಿಮಾ ಅದೆಂಥಾ ಪ್ರಯೋಗಾತ್ಮಕ ಗುಣಗಳನ್ನು ಹೊಂದಿದೆ ಎಂಬ ವಿಚಾರ ಸ್ಪಷ್ಟವಾಗಿಯೇ ಜಾಹೀರಾಗಿದೆ. ಒಂದಷ್ಟು ಹೊಸಾ ಸಾಹಸಗಳನ್ನು ಮಾಡುತ್ತಾ, ತಮ್ಮ ನಿರ್ಮಾಣ ಸಂಸ್ಥೆಯ ಮೂಲಕ ಹೊಸಬರಿಗೆ ಅವಕಾಶ ಮಾಡಿ ಕೊಡುತ್ತಿರುವ ನಿರ್ದೇಶಕ ಗುರು ದೇಶಪಾಂಡೆ, ಆ ಪರಂಪರೆಯನ್ನು ಪೆಂಟಗನ್ ಮೂಲಕ ಮುಂದುವರೆಸಿದ್ದಾರೆ. ನಿರ್ಮಾಣದ ಜೊತೆಗೆ ಐದು ಕಥೆಗಳಲ್ಲಿ ಒಂದನ್ನು ಖುದ್ದು ತಾವೇ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ನಾನಾ ದಿಕ್ಕುಗಳಲ್ಲಿ ಕುತೂಹಲದ ದೊಂದಿ ಹಚ್ಚಿರುವ ಪೆಂಟಗನ್, ಈಗಾಗಲೇ ಟೀಸರ್ ಮತ್ತು ಟ್ರೈಲರ್, ಹಾಡುಗಳ ಮೂಲಕ ಸಖತ್ ಸದ್ದು ಮಾಡಿದೆ. ತಾನೇತಾನಾಗಿ ಬಿಡುಗಡೆಯ ನಿರೀಕ್ಷೆ ನಿಗಿನಿಗಿಸುವಂತೆ ಮಾಡಿಬಿಟ್ಟಿದೆ. ಅದರ ಭಾಗವಾಗಿಯೇ ಪೆಂಟಗನ್ ಯಾವಾಗ ರಿರೀಸಾಗುತ್ತೆ ಅಂತೊಂದು ಕುತೂಹಲ ಮೂಡಿಕೊಂಡಿತ್ತಲ್ಲಾ? ಅದಕ್ಕೀಗ ಉತ್ತರ ಸಿಕ್ಕಿದೆ. ಈ ಚಿತ್ರ ಇದೇ ಏಪ್ರಿಲ್ ಏಳನೇ ತಾರೀಕಿನಂದು ಅದ್ದೂರಿಯಾಗಿ ತೆರೆಗಾಣಲಿದೆ.…
ಥೇಟರ್ ತುಂಬಾ ಕಬ್ಜಾ ಕಜ್ಜಾಯ ಸೀದು ಹೋದ ಘಾಟು! ಹೊಸಾ ವರ್ಷ ಆಗಮಿಸುತ್ತಲೇ ಕನ್ನಡ ಚಿತ್ರರಂಗದಲ್ಲಿ ಬಹುದೊಡ್ಡ ಕ್ರೇಜ್ ಸೃಷ್ಟಿಸಿದ್ದ ಚಿತ್ರ `ಕಬ್ಜಾ’. ಆರಂಭದಲ್ಲಿ ಇಂಥಾದ್ದೊಂದು ರಗಡ್ ಟೈಟಲ್ಲಿನೊಂದಿಗೆ ನಿರ್ದೇಶಕ ಆರ್.ಚಂದ್ರು ಪ್ರತ್ಯಕ್ಷರಾದಾಗ ಹೇಳಿಕೊಳ್ಳುವಂಥಾ ನಿರೀಕ್ಷೆಗಳಿರಲಿಲ್ಲ. ಯಾಕೆಂದರೆ, ನಾಕಾಣೆ ಕೆಲಸ ಮಾಡಿ ಹನ್ನೆರಡಾಣೆ ಪೋಸು ಕೊಡೋದು ಕೇಶಾವರ ಚಂದ್ರುವಿನ ಹುಟ್ಟು ಜಾಯಮಾನ. ಆದರೆ, ಆರಂಭದಿಂದ ಇಲ್ಲಿಯವರೆಗೂ ಲವ್ ಸ್ಟೋರಿಗಳ ಗುಂಗು ಹತ್ತಿಸಿಕೊಂಡಂತಿದ್ದ ಚಂದ್ರು, ಏಕಾಏಕಿ ರಾ ಸಬ್ಜೆಕ್ಟಿನ ಸುಳಿವು ನೀಡಿದಾಗ ಒಂದು ಥರದ ಸಂಚಲನ ಸೃಷ್ಟಿಯಾಗಿದ್ದು ನಿಜ. ಆ ನಂತರ ಟೀಸರ್ ಮತ್ತು ಟ್ರೈಲರ್‍ಗಳು ಲಾಂಚ್ ಆದವು ನೋಡಿ? ಚಂದ್ರು ಕಡೆ ಒಂದಷ್ಟು ಮಂದಿ ಅಚ್ಚರಿಯಿಂದ ನೋಡಿದ್ದರು. ಕೆಲ ಮಂದಿ `ಅರರರೇ ಇದು ಚಂದ್ರು ಸಿನಿಮಾನಾ’ ಎಂಬಂತೆ ಶಾಕ್ ಆಗಿದ್ದರು. ಅದರ ಬೆನ್ನಲ್ಲಿಯೇ ಇದು ಕೆಜಿಎಫ್ ಸರಣಿಯ ಮಕ್ಕಿಕಾಮಕ್ಕಿ ಕಾಪಿ ವರ್ಷನ್ ಎಂಬಂಥಾ ಆರೋಪಗಳೂ ಕೇಳಿ ಬಂದಿದ್ದವು. ಇಂಥಾ ವಾತಾವರಣದಲ್ಲಿಯೇ ಇದೀಗ ಕಬ್ಜಾ ಬಿಡುಗಡೆಗೊಂಡಿದೆ! ಕನ್ನಡವೂ ಸೇರಿದಂತೆ ಒಂದಷ್ಟುಯ ಭಾಷೆಗಳಲ್ಲಿ ತಯಾರಾಗಿ,…
ಕೆಲವೊಮ್ಮೆ ಒಂದರ ಹಿಂದೊಂದರಂತೆ ಸಮಸ್ಯೆಗಳ ಅಮರಿಕೊಂಡು ಮನುಷ್ಯನನ್ನು ಹೈರಾಣು ಮಾಡಿ ಹಾಕುತ್ತವೆ. ಅದಕ್ಕೆ ಪಕ್ಕಾದವರು ಸಾಮಾನ್ಯರಿರಲಿ; ಸೆಲೆಬ್ರಿಟಿಗಳೇ ಆಗಿದ್ದರೂ ಬದುಕು ಹಠಾತ್ತನೆ ಬೀಸಿದ ಏಟಿನಿಂದ ಅಕ್ಷರಶಃ ಜರ್ಝರಿತರಾಗಿ ಬಿಡುತ್ತಾರೆ. ಸದ್ಯಕ್ಕೆ ಅಂಥಾದ್ದೊಂದು ಸರಣಿ ಆಘಾತಗಳಿಗೀಡಾಗಿ, ಮೆಲ್ಲಗೆ ಚೇತರಿಸಿಕೊಳ್ಳುತ್ತಿರುವಾಕೆ ದಕ್ಷಿಣ ಭಾರತೀಯ ಚಿತ್ರರಂಗದ ಬಹುಬೇಡಿಕೆಯ ನಟ ಸಮಂತಾ. ಅತ್ತ ಸಮಂತಾಳ ಖಾಸಗೀ ಬದುಕಿನಲ್ಲಿ ಬಿರುಗಾಳಿ ಬೀಸಿತ್ತು. ಅದರ ಮುಂದೆ ಗಂಡನೆಂಬ ಗಾಢ ಸಬಂಧವೇ ತರಗೆಲೆಯಂತೆ ದೂರ ಸರಿದಿತ್ತು. ಹಾಗೆ ಏಕಾಂಗಿಯಾಗಿ ನಿಂತ ಘಳಿಗೆಯಲ್ಲಿಯೇ ಸಮಂತಾಳನ್ನು ಮಯೋಸೈಸಿಟ್ ಎಂಬ ವಿಚಿತ್ರ ಖಾಯಿಲೆಯೊಂದು ಆವರಿಸಿಕೊಂಡಿತ್ತು. ಆ ಎಲ್ಲ ಯಾತನೆಗಳಿಂದ ಬಸವಳಿದು, ಮೆತ್ತಗೆ ಮೇಲೆದ್ದು ನಿಂತಿರುವ ಸಮಂತಾ ಈಗ, ಶಾಕುಂತಲೆಯಾಗಿ ಅಭಿಮಾನಿಗಳನ್ನು ಮುಖಾಮುಖಿಯಾಗುವ ಸಂಭ್ರಮದಲ್ಲಿದ್ದಾಳೆ! ಸಮಂತಾ ಶಾಕುಂತಲಂ ಎಂಬೊಂದು ಚಿತ್ರದಲ್ಲಿ ನಟಿಸುತ್ತಿರುವ ಬಗ್ಗೆ ವರ್ಷಗಳ ಹಿಂದೆಯೇ ಸುದ್ದಿಯಾಗಿತ್ತು. ಅದೊಂದು ಪೌರಾಣಿಕ ಚಿತ್ರ. ಅದರಲ್ಲಿ ರಾಜಕುಮಾರಿಯಾಗಿ ಸಮಂತಾ ಮಿಂಚಿದ್ದಳು. ಆ ಸಿನಿಮಾದಲ್ಲಿನ ಕೆಲ ಮುದ್ದಾಗಿರೋ ಫೋಸ್ಟರ್, ಫಸ್ಟ್ ಲುಕ್ಕಿನ ಮೂಲಕ ಸಮಂತಾ ಕಂಗೊಳಿಸಿದ್ದಳು. ಯಾವಾ ಈ ಸಿನಿಮಾ ಚಿತ್ರೀಕರಣ…
ಇದೀಗ ಕನ್ನಡದ ಸಿನಿಮಾಸಕ್ತರನ್ನು ಕೆಜಿಎಫ್ ಮತ್ತು ಕಾಂತಾರ ಪ್ರಭೆ ಆವರಿಸಿಕೊಂಡಿದೆ. ವಿಶೇಷವೆಂದರೆ, ಅಂಥಾ ಅಲೆಯ ನಡುವೆಯೇ ಒಂದು ಹೊಸತನದ, ಸದಭಿರುಚಿಯ, ಪ್ರಯೋಗಾತ್ಮಕ ಚಿತ್ರಗಳೂ ತಯಾರುಗೊಂಡಿವೆ. ಬಿಡುಗಡೆಯ ಸರತಿಯಲ್ಲಿ ನಿಂತಿವೆ. ಸದ್ಯದ ಮಟ್ಟಿಗೆ ಆ ಸಾಲಿನಲ್ಲಿ ಮುಂಚೂಣಿಯಲ್ಲಿರುವ ಚಿತ್ರ `ಮಾವು ಬೇವು’. ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ನಟರಾಗಿದ್ದುಕೊಂಡು ತಮ್ಮದೇ ಚಾಪು ಮೂಡಿಸಿರುವ ಸುಚೇಂದ್ರ ಪ್ರಸಾದ್ ಈ ಚಿತ್ರದ ಮತ್ತೆ ನಿರ್ದೇಶಕರಾಗಿದ್ದಾರೆ. ತಮ್ಮ ವಿಭಿನ್ನ ಶೈಲಿಯ ನಟನೆ, ಅದ್ಭುತ ಅನ್ನಿಸುವಂಥಾ, ಸುಸ್ಪಷ್ಟವಾದ ಕನ್ನಡ ಭಾಷಾ ಬಳಕೆಗಳಿಂದ ಈಗಾಗಲೇ ಸುಚೇಂದ್ರ ಪ್ರಸಾದ್ ಗಮನ ಸೆಳೆದಿದ್ದಾರೆ. ಅವರು ನಿರ್ದೇಶ£ ಮಾಡಿದ್ದಾರೆಂದರೆ, ಆ ಸಿನಿಮಾ ಬಗ್ಗೆ ಕುತೂಹಲ ಮೂಡಿಕೊಳ್ಳದಿರಲು ಸಾಧ್ಯವೇ? ಇದೀಗ ಮಾವು ಬೇವು ಎಲ್ಲ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡು ಬಿಡುಗಡೆಗೆ ಅಣಿಯಾಗಿದೆ. ಇದೇ ಹೊತ್ತಿನಲ್ಲಿ ಚಿತ್ರತಂಡ ಖುಷಿಯಬ ಸುದ್ದಿಯೊಂದನ್ನು ಹಂಚಿಕೊಂಡಿದೆ. ಅದರನ್ವಯ ಹೇಳೋದಾದರೆ, ಮಾವು ಬೇವು ಚಿತ್ರ 14ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ಪ್ರವೇಶ ಪಡೆದುಕೊಂಡಿದೆ. ಈ ಸಿನಿಮೋತ್ಸವದ ಭಾರತೀಯ ಚಿತ್ರ ವಿಭಾಗದಲ್ಲಿ ಮಾವು ಬೇವು ಚಿತ್ರ…
ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಹುಟ್ಟುಹಬ್ಬ ಹತ್ತಿರಾಗಿದೆ. ತಮ್ಮ ಆರಾಧ್ಯ ನಟನ ಅನುಪಸ್ಥಿತಿಯಲ್ಲಿ ಹುಟ್ಟುಹಬ್ಬ ಆಚರಿಸಬೇಕಾದ ಸಂಕಟವನ್ನು ಎದೆಯಲ್ಲಿಟ್ಟುಕೊಂಡೇ ಅಭಿಮಾನಿಗಳೆಲ ಪುನೀತ್ ಬರ್ತ್‍ಡೇಗೆ ಅಣಿಗೊಳ್ಳುತ್ತಿದ್ದಾರೆ. ಇದೇ ಹೊತ್ತಿನಲ್ಲಿ ಅಪ್ಪು ಕನಸಿನ ಕೂಸಿನಂತಿದ್ದ, ಅವರ ಭಿನ್ನ ಅಭಿರುಚಿಗಳ ಧ್ಯೋತಕದಂತಿದ್ದ ಗಂಧದ ಗುಡಿ ಸಾಕ್ಷ್ಯ ಚಿತ್ರ ಓಟಿಟಿಗೆ ಆಗಮಿಸೋ ಕ್ಷಣಗಳೂ ಹತ್ತಿರಾಗುತ್ತಿವೆ. ಅಪ್ಪು ಹುಟ್ಟಿದ ದಿನದಂದು ಅಂದರೆ, ಇದೇ ತಿಂಗಳ ಹದಿನೇಳರಿಂದ ಗಂಧದ ಗುಡಿ ಓಟಿಟಿ ಪ್ಲಾಟ್ ಫಾರ್ಮಿಗೆ ಎಂಟರಿ ಕೊಡಲಿದೆ. ಇನ್ನು ಮುಂದೆ ಕಣ್ಣಂಚು ದಾಟಿ ಗಂಧದ ಗುಡಿಯ ಕಾಡಿನಲ್ಲಿ ಲೀನವಾದ ಅಪ್ಪು ನೆನಪುಗಳನ್ನು ಬೆರಳ ಮೊನೆಯಲ್ಲಿಯೇ ನೇವರಿಸಬಹುದು; ಪದೇ ಪದೆ ಸಂಭ್ರಮಿಸಬಹುದು! ಇದು ಆಧುನೀಕರಣದ ಭರಾಟೆಗೆ ಸಿಕ್ಕು ಕಾಡುಗಳೆಲ್ಲ ನಾಮಾವಶೇಷ ಹೊಂದುತ್ತಿರುವ ಕಾಲಮಾನ. ಮತ್ತೊಂದೆಡೆಯಿಂದ, ಅಳಿದುಳಿದ ಕಾಡುಗಳೂ ಕೂಡಾ ಮೋಜು ಮಸ್ತಿಯ ಕೇಂದ್ರವಾಗಿ, ಟ್ರಕ್ಕಿಂಗಿನ ಹೆಸರಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳ ಡಂಪಿಂಗ್ ಯಾರ್ಡಿನಂತಾಗಿವೆ. ಇಂಥಾ ವಾತಾವರಣದಲ್ಲಿ, ಕರ್ನಾಟಕದ ಕಾಡು, ಮೇಡು ಪ್ರಾಕೃತಿಕ ಸೌಂದರ್ಯದತ್ತ ಫೋಕಸ್ಸು ಮಾಡುತ್ತಾ, ನಿರ್ದೇಶಕ ಅಮೋಘವರ್ಷರ ಜೊತೆ ಸಹಜವಾಗಿ ಹೆಜ್ಜೆ…
ಈ ಬಿಜೆಪಿ ಮಂದಿ ಜನರ ಗಮನವನ್ನು ಬೇರೆಡೆ ಸೆಳೆದುಕೊಂಡು, ಆ ಮೂಲಕ ಹುಳುಕು ಮುಚ್ಚಿಟ್ಟುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಅಂತೊಂದು ಘನ ಗಂಭೀರವಾದ ಆರೋಪವಿದೆ. ಆ ಮಾತಿಗೆ ಸಾಕ್ಷಿಯೆಂಬಂತೆ ಇದೀಗ ನಂಜೇಗೌಡ, ಉರಿ ಗೌಡನೆಂಬ ಕಪೋಲಕಲ್ಪಿತ ವೀರರನ್ನು ಹುಟ್ಟುಹಾಕಿಯಾಗಿದೆ. ವಿನಾಯಕ ದಾಮೋದರ ಸಾವರ್ಕರ್ ಬಿಜೆಪಿ ಬತ್ತಳಿಕೆಯಿಂದ ಚಿಮ್ಮಿದ್ದ ಹಳೇ ಬಾಣ. ಒಂದು ಬಣದ ವೀರನೆನ್ನಿಸಿಕೊಂಡಿರೋ ಸಾವರ್ಕರ್ ಬಗೆಗಿನ ಪ್ರೇಮವನ್ನು ಮತ್ತಷ್ಟು ಗಟ್ಟಿಯಾಗಿಸುವ ನಿಟ್ಟಿನಲ್ಲಿ ವೀರ್ ಸಾವರ್ಕರ್ ಅಂತೊಂದು ಸಿನಿಮಾ ರೆಡಿಯಾಗುತ್ತಿದೆ. ಅದರಲ್ಲಿ ಸವಕಲು ಹೀರೋ ಸುನೀಲ್ ರಾವ್ ನಟಿಸುತ್ತಿರೋದೂ ಪಕ್ಕಾ ಆಗಿತ್ತು. ಇದೀಗ ಆ ಸಿನಿಮಾದ ನಾಯಕಿಯಾಗಿ, ಸಾವರ್ಕರ್ ಹೆಂಡತಿಯ ಪಾತ್ರಕ್ಕೆ ಜಾನ್ವಿಕಾ ಕಲಕೇರಿ ಆಯ್ಕೆಯಾಗಿದ್ದಾಳೆ! ರವಿಚಂದ್ರನ್ ಪುತ್ರ ಮನೋರಂಜನ್ ನಾಯಕನಾಗಿ ನಟಿಸಿದ್ದ ಪ್ರಾರಂಭ ಎಂಬ ಚಿತ್ರದ ಮೂಲಕ ನಾಯಕಿಯಾಗಿ ಆಗಮಿಸಿದ್ದಾಕೆ ಜಾನ್ವಿಕಾ ಕಲಕೇರಿ. ಆರಂಭಿಕವಾಗಿ ಕೀರ್ತಿ ಕಲಕೇರಿ ಎಂಬ ಹೆಸರಿನಿಂದ ಗುರುತಿಸಿಕೊಂಡಿದ್ದ ಈಕೆ, ಇದೀಗ ಹೆಸರು ಬದಲಿಸಿಕೊಂಡು ಅದೃಷ್ಟ ಪರೀಕ್ಷೆಗಿಳಿದಂತಿದೆ. ಸನಾದಿ ಅಪ್ಪಣ್ಣನವರ ವಂಶದ ಕುಡಿಯಾದ ಜಾನ್ವಿಕಾ, ಆ ನಂತರದಲ್ಲಿ ಶಶಿಕುಮಾರ್…
ನವರಸ ನಾಯಕ ಜಗ್ಗೇಶ್ ಸಹೋದರ ಕೋಮಲ್ ಕುಮಾರನ ಲಕ್ಕು ಕುದುರುವ ಲ್ಷಣಗಳು ಸಣ್ಣಗೆ ಹೊಳೆಯಲಾರಂಭಿಸಿವೆ. ಹಾಸ್ಯ ಕಲಾವಿದನಾಗಿ ಬಹು ಬೇಡಿಕೆಯಲ್ಲಿರುವಾಗಲೇ, ಹೀರೋ ಆಗುವ ತಲುಬು ಹತ್ತಿಸಿಕೊಂಡು ಹೊರಟಿದ್ದವರು ಕೋಮಲ್. ಆತ ಹಾಗೊಂದು ನಿರ್ಧಾರ ಪ್ರಕಟಿಸಿದಾಗ ಬಹುತೇಕರು `ಈ ಆಸಾಮಿಗಿದು ಬೇಕಿತ್ತಾ’ ಅಂದುಕೊಂಡಿದ್ದರು. ಆ ನಂತರದಲ್ಲಿ ಕೋಮಲ್ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದರಾದರೂ ಪುಷ್ಕಳವಾದೊಂದು ಗೆಲುವು ಸಿಕ್ಕಿರಲಿಲ್ಲ. ಪ್ರೇಕ್ಷಕರು ಕೋಮಲನನ್ನು ಹೀರೋ ಆಗಿ ಅರಗಿಸಿಕೊಳ್ಳುವಂಥಾ ಮನಸು ಮಾಡಲಿಲ್ಲ. ಆ ನಂತರದ ಅಜ್ಞಾತವಾಸ, ಪಡಿಪಾಟಲುಗಳಲ್ಲಿ ಕಳೆದು ಹೋಗಿದ್ದ ಕೋಮಲ್ ಇದೀಗ ಮತ್ತೊಂದಷ್ಟು ಭರವಸೆ, ಹುರುಪು ತುಂಬಿಕೊಂಡು ಪ್ರತ್ಯಕ್ಷರಾಗಿದ್ದಾರೆ! ಇನ್ನೇನು ನೇಪಥ್ಯಕ್ಕೆ ಸರಿದೇ ಬಿಟ್ಟರು ಎಂಬಂತಿದ್ದ ಕೋಮಲ್, ಕೊರೋನಾ ಕಾಲಘಟ್ಟದ ಒಂದಷ್ಟು ನೋವುಗಳನ್ನುಂಡು ಮತ್ತೆ ಮೇಲೆದ್ದು ನಿಂತಿದ್ದಾರೆ. ಅದರ ಭಾಗವಾಗಿಯೇ ಒಂದೆರಡು ಸಿನಿಮಾಗಳಲ್ಲಿ ಮತ್ತೆ ನಾಯಕನಾಗಿ ನಟಿಸುತ್ತಿರುವ ಅವರೀಗ, ಮತ್ತೊಂದು ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಆ ಚಿತ್ರಕ್ಕೆ `ಯಲಾ ಕುನ್ನಿ’ ಎಂಬ ಟೈಟಲ್ ಕೂಡಾ ನಿಕ್ಕಿಯಾಗಿದೆ. ಯಲಾ ಕುನ್ನಿ ಎಂಬ ಡೈಲಾಗು ಕೇಳುತ್ತಲೇ ಥಟ್ಟನೆ ಕನ್ನಡ ಸಿನಿಮಾ ಪ್ರೇಮಿಗಳಿಗೆಲ್ಲ…
ಸದ್ಯಕ್ಕೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಾ, ಅತ್ಯಂತ ಬ್ಯುಸಿಯಾಗಿರುವ ನಟರಲ್ಲಿ ನೀನಾಸಂ ಸತೀಶ್ ಕೂಡಾ ನಿಸ್ಸಂದೇಹವಾಗಿ ಸೇರಿಕೊಳ್ಳುತ್ತಾರೆ. ಆರಂಭದಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಮಾಡುತ್ತಾ, ನೋಡ ನೋಡುತ್ತಲೇ ಮುಖ್ಯ ನಾಯಕನಾಗಿ ಬೆಳೆದು ನಿಂತ ನೀನಾಸಂ ಸತೀಶ್‍ರದ್ದು ಸ್ಫೂರ್ತಿದಾಯಕ ವ್ಯಕ್ತಿತ್ವವೂ ಹೌದು. ಈ ಹಾದಿಯಲ್ಲಿ ಹಿಂತಿರುಗಿ ನೋಡಲೂ ಪುರಸೊತ್ತಿಲ್ಲದಂತೆ ಬ್ಯುಸಿಯಾಗಿರುವ ಅವರೀಗ ಏಕಕಾಲದಲ್ಲಿಯೇ ಮೂರು ಚಿತ್ರಗಳಲ್ಲಿ ನಾಯಕನಾಗಿದ್ದಾರೆ. ಇದೇ ಹೊತ್ತಿನಲ್ಲಿ ನಿರ್ದೇಶಕ ದುನಿಯಾ ಸೂರಿ ಗರಡಿ ಸೇರಿಕೊಳ್ಳುವ ಮೂಲಕ ಮತ್ತೊಂದು ಮಹತ್ವದ ಚಿತ್ರ ಆರಂಭವಾಗಿರುವ ಸುಳಿವು ನೀಡಿದ್ದಾರೆ! ನೀನಾಸಂ ಸತೀಶ್ ಸುಕ್ಕಾ ಸೂರಿಯ ಪಕ್ಕದಲ್ಲಿ ನಿಂತಿರೋ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಆ ಹಿನ್ನೆಲೆಯಲ್ಲಿ ಹತ್ತಾರು ದಿಕ್ಕಿನಿಂದ ಒಂದಷ್ಟು ಚರ್ಚೆಗಳು ಹುಟ್ಟಿಕೊಂಡಿದ್ದವು. ಕಡೇಗೂ ಈ ಬಗ್ಗೆ ಖುದ್ದು ಸತೀಶ್ ಅವರೇ ಸ್ಪಷ್ಟೀಕರಣ ಕೊಟ್ಟಿದ್ದಾರೆ. ಅದರನ್ವಯ ಹೇಳೋದಾದರೆ, ಸತೀಶ್ ಮತ್ತು ಸೂರಿ ಕಾಂಬಿನೇಷನ್ನಿನಲ್ಲೊಂದು ಸಿನಿಮಾ ಶುರುವಾಗೋದು ಪಕ್ಕಾ. ಹಾಗಂತ ಈ ಹೊಸಾ ಸಿನಿಮಾವನ್ನು ಸೂರಿ ನಿರ್ದೇಶನ ಮಾಡುತ್ತಿಲ್ಲ. ಬದಲಾಗಿ, ಅವರ ಗರಡಿಯಲ್ಲಿ ಬಹುಕಾಲದಿಂದ ಪಳಗಿಕೊಂಡಿರುವ ಪ್ರತಿಭಾನ್ವಿತ…
ಕನ್ನಡ ಚಿತ್ರರಂಗದ ಭಿನ್ನ ಅಭಿರುಚಿಯ ನಿರ್ದೇಶಕರ ಸಾಲಿನಲ್ಲಿ ಮುಂಚೂಣಿಯಲ್ಲಿರುವವರು ರಿಷಭ್ ಶೆಟ್ಟಿ. ಕಾಂತಾರ ಚಿತ್ರದ ನಂತರವಂತೂ ರಿಷಭ್‍ರ ಪ್ರಭೆ ದೇಶಾದ್ಯಂತ ಹಬ್ಬಿಕೊಂಡಿದೆ. ಈ ಸಮ್ಮೋಹಕ ಗೆಲುವಿನ ನಂತರದಲ್ಲಿ ರಿಷಭ್ ಏನು ಮಾಡುತ್ತಿದ್ದಾರೆ? ಅವರ ಕಾರ್ಯವೈಖರಿ ಹೇಗಿದೆ ಎಂಬಿತ್ಯಾದಿ ಪ್ರಶ್ನೆಗಳು ಪ್ರೇಕ್ಷಕ ವಲಯದಲ್ಲಿದೆ. ಸದ್ಯದವರೆಗೆ ಅದಕ್ಕುತ್ತರವಾಗಿ ಎದುರಾಗುತ್ತಿದ್ದದ್ದು ಕಾಂತಾರ 2ಗಾಗಿನ ತಯಾರಿಯ ವಿಚಾರ. ಅದರಲ್ಲಿ ನಿಜವೂ ಇದೆ. ರಿಷಭ್ ಇದೀಗ ಆ ಕೆಲಸದಲ್ಲಿ ಬ್ಯುಸಿಯಾಗಿದ್ದರೂ ಕೂಡಾ, ಅದೇ ಹೊತ್ತಿನಲ್ಲಿ ನಿರ್ಮಾಪಕರಾಗಿಯೂ ಬಹಳಾ ಬ್ಯುಸಿಯಾಗಿಬಿಟ್ಟಿದ್ದಾರೆ. ಅವರ ಸಂಸ್ಥೆಯ ಕಡೆಯಿಂದ ನಿರ್ಮಾಣಗೊಂಡಿರುವ ಒಂದಷ್ಟು ಸಿನಿಮಾಗಳೀಗ ಚಿತ್ರೀಕರಣ ಮುಗಿಸಿಕೊಂಡಿವೆ! ಇತ್ತೀಚೆಗಷ್ಟೇ ರಿಷಭ್ ನಿರ್ಮಾಣದ `ಲಾಫಿಂಗ್ ಬುದ್ಧ’ ಎಂಬ ಚಿತ್ರ ಶುಭಾರಂಭಗೊಂಡಿತ್ತು. ಪಕ್ಕಾ ಕಂಟೆಂಟ್ ಓರಿಯಂಟೆಡ್ ಆಗಿರೋ ಈ ಸಿನಿಮಾದ್ಲಿ ಪ್ರಮೋದ್ ಶೆಟ್ಟಿ ಮುಂತಾದವರು ನಟಿಸಿದ್ದಾರೆಂಬ ಸುದ್ದಿಯೂ ಹೊರಬಿದ್ದಿತ್ತು. ಆ ಸಿನಿಮಾ ಬಗೆರಗಿನ ಕುತೂಹಲವಿನ್ನೂ ಚಾಲ್ತಿಯಲ್ಲಿರುವಾಗಲೇ `ವಾಘಚಿಪಾಣಿ’ ಅಂತೊಂದು ಸಿನಿಮಾ ಸುದ್ದಿ ಕೇಂದ್ರದಲ್ಲಿದೆ. ಶೀರ್ಷಿಕೆಯಲ್ಲಿಯೇ ಗಾಢ ಕೌತುಕವನ್ನು ಬಚ್ಚಿಟ್ಟುಕೊಂಡಂತಿರುವ ಈ ಸಿನಿಮಾವೀಗ ಚಿತ್ರೀಕರಣ ಮುಗಿಸಿಕೊಂಡಿದೆ. ಯಾವ ಸದ್ದುಗದ್ದಲವೂ ಇಲ್ಲದೆ…