ತಾಯಿಯನ್ನು ದೇವರೆಂದೇ ಆರಾಧಿಸಿ, ಗೌರವಿಸುವಂಥಾ ಸಂಪ್ರದಾಯ ನಮ್ಮೆಲ್ಲದ ಜೀವನಕ್ರಮದಲ್ಲಿಯೇ ಅಡಗಿದೆ. ಅಮ್ಮನ ಬಗ್ಗೆ ಅಂಥಾದ್ದೊಂದು ಪ್ರೀತಿ ಪ್ರತಿಯೊಬ್ಬರಿಗೂ ಇದ್ದೇ ಇರುತ್ತೆ. ಅದರ ನಡುವಲ್ಲಿಯೇ ಹೆತ್ತಮ್ಮನನ್ನು ಬೀದಿಯಲ್ಲಿ ಬಿಟ್ಟು ಹೋಗುವ ಮಕ್ಕಳಿದ್ದಾರೆ. ಕನಿಷ್ಠ ಗೌರವವನ್ನೂ ಕೊಡದಂತೆ ಹೀನಾಯವಾಗಿ ನಡೆಸಿಕೊಳ್ಳುವವರಿದ್ದಾರೆ. ಇಂಥವರ ಸಾಲಿಗೆ ಸೇರುವ ರಕ್ಕಸನೋರ್ವ ಎಂಥವರೂ ಬೆಚ್ಚಿ ಬೀಳುವಂಥಾದ್ದೊಂದು ಕೃತ್ಯವೆಸಗಿದ್ದಾನೆ. ಸಣ್ಣ ಪುಟ್ಟದಕ್ಕೂ ತಾಯಿಯೊಂದಿಗೆ ತಗಾದೆ ತೆಗೆದು ಜಗಳ ಮಾಡುತ್ತಿದ್ದ ಮಗನೋರ್ವ ಮೊನ್ನೆದಿನ ಹಲಗೆಯಿಂದ ಹೊಡೆದು ಕೊಂದು ಬಿಟ್ಟಿದ್ದಾನೆ. ಇಂಥಾದ್ದೊಂದು ರಾಕ್ಷಸೀಯ ಕೃತ್ಯ ನಡೆದಿರೋದು ಒಡಿಶಾದ ಕಂದಮಾಲ್ ಜಿಲ್ಲೆಯಲ್ಲಿ. ಮೂವತ್ತು ವರ್ಷ ವಯಸ್ಸಿನ ಜಿತೇಂದ್ರ ಕನರ್ ಎಂಬಾತ ಇಂಥಾದ್ದೊಂದು ಬೀಭತ್ಸ ಕೃತ್ಯವನ್ನೆಸಗಿದ್ದಾನೆ. ಆ ತಾಯಿ ಬಹಳಷ್ಟು ಕಷ್ಟ ಪಟ್ಟು ಮಗನನ್ನು ಬೆಳೆಸಿದ್ದಳು. ಗಂಡ ವರ್ಷಾಂತರಗಳ ಹಿಂದೆಯೇ ತೀರಿಕೊಂಡು ಬದುಕಿಗೆ ಆಸರೆ ಇಲ್ಲದಿದ್ದಾಗಲೂ ತನ್ನ ಮಗನಿಗಾಗಿ ಜೀವವಿಟ್ಟುಕೊಂಡಿದ್ದ ಮಹಾ ತಾಯಿ ಆಕೆ. ಆದರೆ ಮಗ ಮಾತ್ರ ಸಣ್ಣ ವಯಸ್ಸಿನಲ್ಲಿಯೇ ಹಾದಿ ಬಿಟ್ಟಿದ್ದ. ಕುಡಿತದ ಚಟವನ್ನೂ ಆರಂಭಿಸಿದ್ದ. ಹಾಗೆ ಕುಡಿದು ಬಂದನೆಂದರೆ ಬಡಪಾಯಿ ತಾಯಿಗೆ ಕಾಟ…
Author: Santhosh Bagilagadde
ಸದಭಿಪ್ರಾಯ ಕಂಡು ಖುಷಿಗೊಂಡರು ಸುದೀಪ್! ವೀಲ್‌ಚೇರ್ ರೋಮಿಯೋ ಚಿತ್ರ ರಾಜ್ಯಾದ್ಯಂತ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಒಂದೊಳ್ಳೆಯ ಕಥೆ, ಮನಸೆಳೆಯುವಂಥಾ ಸ್ವಂತಿಕೆ ಮತ್ತು ಒಂದೇ ಸಲಕ್ಕೆ ಮನಸಿಗೆ ಲಗ್ಗೆಯಿಟ್ಟು ಕಾಡಿಸುವ ಚೆಂದದ ಡೈಲಾಗುಗಳು… ಇಷ್ಟಿದ್ದು ಬಿಟ್ಟರೆ ಅದು ಖಂಡಿತವಾಗಿಯು ಪ್ರೇಕ್ಷಕರ ಮನಸೆಳೆಯುತ್ತದೆ. ಈವತ್ತಿಗೆ ವೀಲ್‌ಚೇರ್ ರೋಮಿಯೋ ಬಿಡುಗಡೆಗೊಂಡು ಯಶಸ್ವೀ ಪ್ರದರ್ಶನ ಕಾಣುತ್ತಿದೆ ಎಂದರೆ ಅದರ ಹಿಂದಿರುವ ಶಕ್ತಿ ಮೇಲ್ಕಂಡ ಕ್ವಾಲಿಟಿಗಳಷ್ಟೇ. ಇದೀಗ ಎಲ್ಲ ದಿಕ್ಕುಗಳಿಂದಲೂ ಈ ಚಿತ್ರದ ಬಗ್ಗೆ ಸದಭಿಪ್ರಾಯ ಮನೆಮಾಡಿಕೊಂಡಿದೆ. ಎಲ್ಲ ಕಡೆಗಳಿಂದಲೂ ಒಳ್ಳೆಯ ವಿಮರ್ಶೆಗಳು ಕೇಳಿ ಬರುತ್ತಿವೆ. ಇದೆಲ್ಲವನ್ನೂ ಕಂಡು ಕಿಚ್ಚ ಸುದೀಪ್ ಖುಷಿಗೊಂಡು, ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಹೊಸಬರ ಚಿತ್ರಗಳಿಗೆ ಸದಾ ಕಾಲವೂ ಬೆಂಬಲ ನೀಡುತ್ತಾ ಮುಂದುವರೆಯುತ್ತಿರುವವರು ಕಿಚ್ಚ ಸುದೀಪ್. ಸಿನಿಮಾ ರಂಗದ ಆಗು ಹೋಗುಗಳ ಮೇಲೆ ಕಣ್ಣಿಡುತ್ತಾ, ಚೆಂದದ ಚಿತ್ರಗಳನ್ನು ತುಂಬು ಹೃದಯದಿಂದ ಪ್ರೋತ್ಸಾಹಿಸೋದು ಕಿಚ್ಚನ ರೂಢಿ. ಇದೀಗ ವೀಲ್‌ಚೇರ್ ರೋಮಿಯೋನ ಬಗ್ಗೆ ಎಲ್ಲೆಡೆ ಕೇಳಿ ಬರುತ್ತಿರುವ ಒಳ್ಳೆ ಮಾತುಗಳು ಅವರ ಕಿವಿಗೂ ಬಿದ್ದಿವೆ. ಸಕಾರಾತ್ಮಕ ವಿಮರ್ಶೆಗಳನ್ನು…
ಚಿತ್ರೀಕರಣ ಮುಗಿಸಿಕೊಂಡ ೧೯-೨೦-೨೧! ಇದುವರೆಗೂ ನೆಲದ ಘಮಲಿನ ಚಿತ್ರಗಳ ಮೂಲಕವೇ ಮತ್ತೆ ಮತ್ತೆ ಗೆಲ್ಲುತ್ತಾ, ಪ್ರೇಕ್ಷಕರಿಗೆ ಹತ್ತಿರಾಗಿರುವವರು ನಿರ್ದೇಶಕ ಮಂಸೋರೆ. ಆಕ್ಟ್ ೧೯೭೯ ಚಿತ್ರದ ಬಳಿಕ ಮಂಸೋರೇ ಮುಂದಿನ ಹೆಜ್ಜೆಯೇನೆಂಬ ಪ್ರಶ್ನೆಗೆ ಉತ್ತರವಾಗಿ ಘೋಶಣೆಯಾಗಿದ್ದದ್ದು ೧೯ ೨೦ ೨೧ ಟೈಟಲ್. ಆ ಚಿತ್ರದ ಕಥೆ ಏನಿರಬಹುದು? ಈ ಬಾರಿ ಮಂಸೋರೇ ಯಾವ ರೀತಿಯಲ್ಲಿ ಪ್ರೇಕ್ಷಕರನ್ನು ತಾಕುತ್ತಾರೆ ಅಂತೆಲ್ಲ ಹತ್ತಾರು ಪ್ರಶ್ನೆಗಳೆದ್ದು, ಕುತೂಹಲವೆಂಬುದು ಪ್ರೇಕ್ಷಕರ ಮನಸಲ್ಲಿ ಕಿಕ್ಕಿರಿದಿತ್ತು. ಹೊರ ಜಗತ್ತಿನಲ್ಲಿ ಇಂಥಾ ಚರ್ಚೆಗಳು ನಡೆಯುತ್ತಿರುವಾಗ ತಮ್ಮ ಪಾಡಿಗೆ ತಾವು ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದ ಮಂಸೋರೆ, ಇದೀಗ ಸಂಪೂರ್ಣ ಚಿತ್ರೀಕರಣವನ್ನು ಮುಗಿಸಿಕೊಂಡಿದ್ದಾರೆ. ಒಂದು ಕಥೆ ಅವರೊಳಗೆ ಊಟೆಯೊಡೆಯಿತೆಂದರೆ ಅದು ಸ್ಕ್ರಿಪ್ಟ್ ರೂಪಕ್ಕಿಳಿದ, ಮತ್ತೊಂದಷ್ಟು ತಯಾರಿ ನಡೆದು ಚಿತ್ರೀಕರಣ ಕಂಪ್ಲೀಟಾಗೋವರೆಗೂ ಮಂಸೋರೆ ವಿರಮಿಸೋದಿಲ್ಲ. ಅದು ಅವರ ಸ್ಪಷಾಲಿಟಿ. ಬಹುಶಃ ಅವರ ಗೆಲುವಿನ ಗುಟ್ಟೂ ಕೂಡಾ ಅದರಲ್ಲಿಯೇ ಅಡಗಿದ್ದೀತೇನೋ. ಅಂಥಾ ಮನಃಸ್ಥಿತಿ ಇಲ್ಲದೇ ಹೋಗಿದ್ದರೆ ಇಷ್ಟು ಬೇಗನೆ ಚಿತ್ರೀಕರಣ ಮುಗಿಸಿಕೊಂಡ ಶುಭ ಸುದ್ದಿ ಕೊಡಲು ಸಾಧ್ಯವಾಗುತ್ತಿರಲಿಲ್ಲ. ಅವರು ನಿರಂತರವಾಗಿ…
ಈ ಸೃಷ್ಟಿಯಲ್ಲಿ ಅದೆಂತೆಂಥಾ ಅದ್ಭುತಗಳಿವೆಯೋ ಹೇಳಲು ಬರುವುದಿಲ್ಲ. ಅದರಲ್ಲಿಯೂ ಈ ಮನುಷ್ಯನ ಚಿತ್ರವಿಚಿತ್ರ ನಡವಳಿಕೆಗಳು, ವಿಭನ್ನ ಅಕಾರಗಳೆಲ್ಲವೂ ಎಣಿಕೆಗೆ ನಿಲುಕದಂಥಾ ಅಚ್ಚರಿಗಳು. ಇದೆಲ್ಲವನ್ನೂ ಮೀರಿಸುವಂತೆ ಮನುಷ್ಯ ಜೀವಿ ಒಮ್ಮೊಮ್ಮೆ ಚಿತ್ರವಿಚಿತ್ರವಾದ ರೂಪಗಳಲ್ಲಿ ಜನಿಸೋದುಂಟು. ಎರಡು ದೇಹ ಬೆಸೆದುಕೊಂಡ ಸಯಾಮಿ ಅವಳಿಗಳಿಂದ ಹಿಡಿದು ಇದಕ್ಕೊಂದಷ್ಟು ಉದಾಹರಣೆಗಳಿದ್ದಾವೆ. ಆದರೆ ಮಗುವೊಂದು ಶಾಶ್ವತವಾದ ನಗು ಧರಿಸಿಕೊಂಡೇ ಹುಟ್ಟುತ್ತದೆಂದರೆ ಅದಕ್ಕಿಂತಲೂ ಅಚ್ಚರಿ ಬೇರೇನಿದೆ? ಸದ್ಯ ದೂರದ ಆಸ್ಟ್ರೇಲಿಯಾದಲ್ಲಿ ಅಂಥಾದ್ದೊಂದು ಮಗು ಜನಿಸಿದೆ. ನಾವೆಲ್ಲ ನಕ್ಕಾಗ ಮುಖ ಹಿಗ್ಗಿಲಿಸಿಕೊಂಡು, ತುಟಿಯ ಎರಡೂ ಅಂಚು ಅರಳಿಕೊಳ್ಳುತ್ತದಲ್ಲಾ? ನಾವೆಲ್ಲ ನಕ್ಕಾಗ ಮಾತ್ರವೇ ಹಾಗಾಗುತ್ತೆ. ಆದರೆ ಈ ಮಗುವಿನ ಮುಖದ ರಚನೆಯೇ ಸದಾ ಕಾಲವೂ ನಗುತ್ತಿರುವಂತಿದೆ. ಇದಕ್ಕೆ ವೈದ್ಯಕೀಯ ವಿಜ್ಞಾನ ಮ್ಯಾಕ್ರೋಸ್ಟೋಮಿಯಾ ಅಂತ ಹೆಸರಿಟ್ಟಿದೆ. ಇದೊಂದು ಅಪರೂಪದಲ್ಲೇ ಅಪರೂಪದ ದೈಹಿಕ ರಚನೆ. ಈ ಥರದ ದೈಹಿಕ ರಚನೆ ಹೊಂದಿರುವ ಮಕ್ಕಳು ಹುಟ್ಟುವುದೇ ಅಪರೂಪ. ಹೆಚ್ಚೆಂದರೆ ಒಂದು ಲಕ್ಷದಲ್ಲಿ ಒಂದು ಮಗು ಹೀಗೆ ಹುಟ್ಟಿದರದಷ್ಟೇ ಹೆಚ್ಚು. ಈ ಕಾರಣದಿಂದಲೇ ಆಸ್ಟ್ರೇಲಿಯಾದ ಈ ಮಗುವೀಗ ಇಡೀ…
ಭಹಿರಂಗವಾಗಿ ಅಸ್ಪೃಶ್ಯತೆ ಆಚರಿಸಿದ ಫಟಿಂಗ ಪಂಡಿತ! ದೇಶಾದ್ಯಂತ ಜಾತಿ ಧರ್ಮಗಳ ಅಮಲಿನಲ್ಲಿ ಜನಸಾಮಾನ್ಯರಿಗೆ ನಶೆಯೇರಿಸೋ ಕೆಲಸ ನಡೆಯುತ್ತಿವೆ. ಈ ಮೂಲಕ ಜನರನ್ನು ರೊಚ್ಚಿಗೆಬ್ಬಿಸಿ ಆಡಳಿತ ವೈಫಲ್ಯಗಳನ್ನು ಬಚ್ಚಿಟ್ಟುಕೊಳ್ಳುವ ಹುನ್ನಾರವೂ ಇದೆ. ರಾಜಕಾರಣಿಗಳು ಒಂದು ಕಡೆಯಿಂದ ಧರ್ಮ ಧರ್ಮಗಳ ನಡುವೆ ಬೆಂಕಿ ಇಡುತ್ತಿದ್ದರೆ, ಸ್ವಾಮೀಜಿಗಳೆನ್ನಿಸಿಕೊಂಡವರು, ಪುಸಟ್ಟೆ ಧರ್ಮ ಬೋಧಕರು, ಮತೀಯ ಹೋರಾಟಗಾರರೆಲ್ಲ ಆ ಬೆಂಕಿಗೆ ತುಪ್ಪ ಸುರಿಯೋ ಕೆಲಸ ಮಾಡುತ್ತಿದ್ದಾರೆ. ಅದರಲ್ಲಿಯೂ ಕೆಲ ಸನಾತನ ವಾದಿಗಳಂತೂ ಭಾರತವನ್ನು ಮತ್ತೆ ಶಿಲಾಯುಗಕ್ಕೆ ಕೊಂಡೊಯ್ದು ಬಿಡಲು ಟೊಂಕ ಕಟ್ಟಿ ನಿಂತಿದ್ದಾರೆ. ಇಂಥಾ ದುಷ್ಟರಿಗೆಲ್ಲ ಯಾರೊಂದಿಗೋ ಎತ್ತಿಕಟ್ಟಿ ಬಡಿದಾಡುವುದಕ್ಕೆ ಶೂದ್ರರ, ದಲಿತರ ಮಕ್ಕಳು ಬೇಕು. ಆಗೆಲ್ಲ ಹಿಂದೂ ನಾವೆಲ್ಲ ಒಂದು ಅನ್ನುತ್ತಾರೆ. ಆದರೆ ಅದರ ಮರೆಯಲ್ಲಿ ಇಂಥವರ ಮನಸು ಜಾತಿವ್ಯಾಧಿಯಿಂದ, ಶ್ರೇಷ್ಠತೆಯ ವ್ಯಸನದಿಂದ ಪಿತಗುಡುತ್ತಿರುತ್ತದೆ. ಹೀಗೆ ಹಿಂದೂ ನಾವೆಲ್ಲ ಒಂದು ಅನ್ನುವವರ ಅಸಲಿ ಅಜೆಂಡಾ ಮತ್ತು ಮನಸ್ಥಿತಿ ಹೇಗಿರುತ್ತದೆಂಬುದಕ್ಕೆ ತಾಜಾ ಉದಾಹರಣೆಯಂಥವನು ಪಂಡಿತ್ ಧೀರೇಂದ್ರ ಕೃಷ್ಣ ಶಾಸ್ತ್ರಿ. ಈತ ಧಾರ್ಮಿಕ ಬೋಧಕನಾಗಿ, ಪ್ರವಚನಾಕಾರನಾಗಿ ಒಂದಷ್ಟು ಪ್ರಸಿದ್ಧಿ ಪಡೆದುಕೊಂಡಿದ್ದಾನೆ.…
ಈ ಜಗತ್ತಿನಲ್ಲಿ ಎಂತೆಂಥಾ ರಕ್ಕಸರಿದ್ದಾರೋ, ಸಿಟ್ಟಿನ ಕೈಗೆ ಆ ಕ್ಷಣ ಬುದ್ಧಿ ಕೊಟ್ಟು ಎಂತೆಂಥಾ ಅನಾಹುತಗಳನ್ನ ಮಾಡಿಬಿಡುತ್ತಾರೋ ಹೇಳಲು ಬರುವುದಿಲ್ಲ. ಇಂಥಾ ಮಂದಿ ಆ ಕ್ಷಣದಲ್ಲಿ ಯಾರ ಜೀವ ತೆಗೆಯಲೂ ಹೇಸುವುದಿಲ್ಲ. ಸದ್ಯ ಥಾಣೆಯ ಭಿವಂಡಿ ಎಂಬ ಊರಿನಲ್ಲಿ ಅಂಥಾದ್ದೇ ಒಂದು ಘಟನೆ ನಡೆದಿದೆ. ತನಗೆ ಬಾಕಾದ ಸಮಯಕ್ಕೆ ಅನ್ನ ಮಾಡಲಿಲ್ಲ ಎಂಬೊಂದೇ ಕಾರಣ ಮುಂದಿಟ್ಟುಕೊಂಡ ಆಸಾಮಿಯೋರ್ವ ತನ್ನ ಮಡದಿಯನ್ನು ಕೋಲಿನಿಂದ ಹೊಡೆದು ಸಾಯಿಸಿದ್ದಾನೆ! ಭಿವಂಡಿಯಲ್ಲಿ ನಡೆದ ಈ ಘಟನೆ ಕಂಡು ದೇಶದ ನಾನಾ ಭಾಗಗಳ ಮಂದಿ ಕಂಗಾಲಾಗಿ ಹೋಗಿದ್ದಾರೆ. ಎಣ್ಣೆ ಪಾರ್ಟಿಯಾದ ಶಂಕರ್ ವಾಘಮಾರೆ ಎಂಬ ಇಪ್ಪತ್ಮೂರು ವರ್ಷದ ಯುವಕ ಇಂಥಾದ್ದೊಂದು ಅಮಾನವೀಯ ಕೃತ್ಯವೆಸಗಿದ್ದಾನೆ. ಶಂಕರ್ ವಾಘಮಾರೆ ಮಹಾನ್ ಕೋಪಿಷ್ಠ. ಆತನಿಗೆ ಹೊಟ್ಟೆ ತುಂಬಾ ಎಣ್ಣೆ ಸುರುವಿಕೊಳ್ಳುವ ಚಟವೂ ಇತ್ತು. ಈ ಕಾರಣದಿಂದಲೇ ಪ್ರತೀ ದಿನ ಮಡದಿ ಜ್ಯೋತ್ಸ್ನಾಳೊಂದಿಗೆ ಜಗಳ ಕಾಯುತ್ತಿದ್ದ. ಇಂಥವನು ಮೊನ್ನೆ ದಿನ ತಡ ರಾತ್ರಿ ಮನೆಗೆ ಬಂದಾಗ ಅನ್ನವಿನ್ನೂ ರೆಡಿಯಾಗಿರಲಿಲ್ಲ. ಅಷ್ಟಕ್ಕೇ ಕೆಂಡಾಮಂಡಲನಾದ ಶಂಕರ್ ಬೇಗನೆ…
ಆಳುವವರ ಚಿತ್ರ ಕೆಲಸಕ್ಕೆ ಬಾರದ ವಿಚಾರಗಳತ್ತ ಹೊರಳಿಕೊಂಡಿರೋದರಿಂದ ದೇಶಾದ್ಯಂತ ನಿರುದ್ಯೋಗ ಸಮಸ್ಯೆ ಮೇರೆ ಮೀರಿಕೊಂಡಿದೆ. ದರೋಡೆ, ಕಳ್ಳತನದಂಥಾ ಸಮಾಜ ಕಂಟಕ ಕೃತ್ಯಗಳು ದೇಶಾದ್ಯಂತ ವಿಜೃಂಭಿಸುತ್ತಿವೆ. ಇದೀಗ ಹೊಸದಾಗಿ ವೃತ್ತಿ ಆರಂಭಿಸಿರುವ ಹೊಸಾ ಕಳ್ಳರಂತೂ ಆಗಾಗ ಎಲ್ಲರೂ ಬೆರಗಾಗುವಂತೆ ವರ್ತಿಸೋದಿದೆ. ಅಂಥಾದ್ದೇ ಒಂದು ಪ್ರಕರಣ ಗೋವಾದಲ್ಲಿ ನಡೆದಿದೆ. ಅದು ಏಕಕಾಲದಲ್ಲಿಯೇ ಕಾಸು ಕಳೆದುಕೊಂಡ ಮಾಲೀಕರು ಮತ್ತು ಪೊಲೀಸರನ್ನು ಬೇಸ್ತು ಬೀಳಿಸಿವೆ. ಗೋವಾದ ಜನನಿಭಿಡ ಪ್ರದೇಶದಲ್ಲಿಯೇ ಈ ಚಾಲಾಕಿ ಕಳ್ಳರು ಕೈಚಳಕ ತೋರಿಸಿದ್ದಾರೆ. ಅಲ್ಲಿನ ಭಾರೀ ಗಾತ್ರದ ಬಂಗಲೆಯಂಥಾ ಮನೆಯೊಂದನ್ನು ಆಯ್ಕೆ ಮಾಡಿಕೊಂಡಿದ್ದ ಈ ಖದೀಮರು, ಮಾಮೂಲಿ ಕಳ್ಳರು ಉಪಯೋಗಿಸುವಂಥಾ ಟ್ರಿಕ್ಸನ್ನೇ ಬಳಕೆ ಮಾಡಿಕೊಂಡಿದ್ದರು. ಸಾಮಾನ್ಯವಾಗಿ ನಮ್ಮಲ್ಲಿನ ಕಳ್ಳರೂ ಕೂಡಾ ಯಾವ ಮನೆಯವರು ಬೀಗ ಹಾಕಿಕೊಂಡು ಹೊರಡುತ್ತಾರೆಂಬ ಮಾಹಿತಿ ಕಲೆ ಹಾಕಿಯೇ ಕನ್ನ ಹಾಕುತ್ತಾರೆ. ಈ ಕಳ್ಳರೂ ಕೂಡಾ ಆ ಮನೆಯವರು ಎರಡು ದಿನ ಬೇರೆಡೆಗೆ ಹೋಗುತ್ತಾರೆಂಬುದನ್ನು ಪಕ್ಕಾ ಮಾಡಿಕೊಂಡೇ ಅಖಾಡಕ್ಕಿಳಿದಿದ್ದರು. ಹಾಗೆ ಅವರು ನುಗ್ಗಿದ ಮನೆಯಲ್ಲಿ ಸಂಪತ್ತಿನ ಖಜಾನೆಯೇ ಇತ್ತು. ಕ್ಯಾಶು, ಚಿನ್ನಾಭರಣ…
ಹಲವಾರು ಸಿನಿಮಾಗಳಲ್ಲಿ ವಿಲನ್ ಆಗಿ ಅಬ್ಬರಿಸಿ ಹೆಸರುವಾಸಿಯಾಗಿರುವವರು ಸೋನು ಸೂದ್. ಆದರೆ ವಿಲನ್‌ಗಿರಿ ಕೇವಲ ಸಿನಿಮಾಗಷ್ಟೇ ಸೀಮಿತ. ರಿಯಲ್ ಲೈಫಿನಲ್ಲಿ ಅವರೊಬ್ಬ ನಿಜವಾದ ಹೀರೋ ಎಂಬುದು ಕೊರೋನಾ ಕಾಲಘಟ್ಟದಲ್ಲಿಯೇ ಸಾಬೀತಾಗಿದೆ. ತೆರೆಯ ಮೇಲೆ ಹೀರೋಗಳಾಗಿ ಆರ್ಭಟಿಸುತ್ತಾ ಸ್ಟಾರ್‌ಗಳೆನ್ನಿಸಿಕೊಂಡ ಬಹುತೇಕರು ಕೊರೋನಾ ಸಮಯದಲ್ಲಿ ಜನ ಸಂಕಟದಲ್ಲಿದ್ದಾಗ ತಂತಮ್ಮ ಮನೆ ಸೇರಿಕೊಂಡು ಬೆಚ್ಚಗಿದ್ದರು. ಕಷ್ಟದ ಕಾಸಲ್ಲಿ ಸಿನಿಮಾ ನೋಡಿ ತಮಗೆ ಸ್ಟಾರ್‌ಗಿರಿ ತಂದುಕೊಟ್ಟ ಜನರ ಸಂಕಟಗಳಿಗೆ ಹೆಚ್ಚಿನವರು ಮಿಡಿಯಲೇ ಇಲ್ಲ. ಮಿಡಿದವರು ದೇವರಾದರು. ಆ ಸಾಲಿನಲ್ಲಿ ದೇಶ ಮಟ್ಟದಲ್ಲಿ ಸೋನು ಸೂದ್ ಸೇರ್ಪಡೆಯಾದರು. ಇಂಥಾ ಸೂದ್ ಇದೀಗ ಅಪಘಾತದಲ್ಲಿ ಕಾಲು ಕಳೆದುಕೊಂಡು ಒಂದೇ ಕಾಲಿನಲ್ಲಿ ಕುಂಟುತ್ತಾ ಶಾಲೆಗೆ ತೆರಳುತ್ತಿದ್ದ ಪುಟ್ಟ ಹೆಣ್ಣು ಮಗಳಿಗೆ ಆಸರೆಯಾಗಿದ್ದಾರೆ. ಇಡೀ ಭಾರತದ ಹಳ್ಳಿಗಾಡಿನ ಮಕ್ಕಳು ಈವತ್ತಿಗೂ ಕಿಲೋಮೀಟರುಗಟ್ಟಲೆ ನಡೆದುಕೊಂಡೇ ಶಾಲೆಗೆ ತೆರಳುತ್ತಾರೆ. ಬಿಹಾರದ ಹಳ್ಳಿಯೊಂದರ ಪರಿಸ್ಥಿತಿ ಕೂಡಾ ಅದಕ್ಕಿಂತ ಭಿನ್ನವಾಗಿರಲಿಲ್ಲ. ಆ ಹಳ್ಳಿಯಿಂದ ತುಂಬಾ ದೂರದಲ್ಲಿರುವ ಶಾಲೆಗೆ ಹತ್ತು ವರ್ಷದ ಹುಡುಗಿಯೊಬ್ಬಳು ಒಂದೇ ಕಾಲಿನಲ್ಲಿ ಕುಂಟುತ್ತಾ ಹೋಗುವಂಥಾ ದುಃಸ್ಥಿತಿ…
ನೋವೆಲ್ಲವೂ ಇಲ್ಲಿ ನಗುವಾಗಿದೆ! ಕೆಲವೊಮ್ಮೆ ಪ್ರೇಕ್ಷಕರಲ್ಲಿದ್ದ ಅಗಾಧ ನಿರೀಕ್ಷೆ ಸಿನಿಮಾ ಮಂದಿರಗಳಲ್ಲಿ ಮಂಕಾಗುತ್ತೆ. ಅಪರೂಪಕ್ಕೆಂಬಂತೆ ನಿರೀಕ್ಷೆಯನ್ನು ಮೀರಿದ ಅಚ್ಚರಿಗಳು ದೊಡ್ಡ ಪರದೆಯ ಮೇಲೆ ಅಚಾನಕ್ಕಾಗಿ ಸರಿದಾಡುತ್ತವೆ. ಅಂಥಾದ್ದೊಂದು ಅನುಭೂತಿಯನ್ನು ಬೇಷರತ್ತಾಗಿ ಕಟ್ಟಿಕೊಟ್ಟಿರುವ ಚಿತ್ರ ವೀಲ್‌ಚೇರ್ ರೋಮಿಯೋ. ಟ್ರೈಲರ್ ಸೇರಿದಂತೆ ಒಂದಷ್ಟು ರೀತಿಯಲ್ಲಿ ಅದಾಗಲೇ ಪ್ರೇಕ್ಷಕರು ರೋಮಿಯೋನ ಮೋಡಿಗೀಡಾಗಿದ್ದರು. ಈ ಚಿತ್ರದಲ್ಲೇನೋ ಗಹನವಾದದ್ದಿದೆ ಎಂಬ ಭಾವ ಎಲ್ಲರೊಳಗೂ ಮೂಡಿಕೊಂಡಿತ್ತು. ಇದೆಲ್ಲದರ ಒಡ್ಡೋಲಗದಲ್ಲೀಗ ವೀಲ್ ಚೇರ್ ರೋಮಿಯೋ ಪತ್ಯಕ್ಷವಾಗಿದ್ದಾನೆ. ತಾವು ಎಣಿಸಿದ್ದಕ್ಕಿಂತಲೂ ವಿಸ್ತಾರವಾದ ಹರವುಳ್ಳ, ಅತ್ಯಂತ ಮಜವಾಗಿ ಮೂಡಿ ಬಂದಿರುವ ಈ ಚಿತ್ರವನ್ನು ನೋಡಿ ಪ್ರೇಕ್ಷಕರೆಲ್ಲ ಫಿದಾ ಆಗಿದ್ದಾರೆ. ಸಾಮಾನ್ಯವಾಗಿ ಕಥೇ ಎಂಥಾದ್ದೇ ಇದ್ದರೂ ಹೀರೋ ಮಾತ್ರ ಹೀಗೀಗೇ ಇರಬೇಕೆಂಬ ಸಿದ್ಧ ಸೂತ್ರ ನಮ್ಮಲ್ಲಿ ಚಾಲ್ತಿಯಲ್ಲಿದೆ. ಅದನ್ನು ಬ್ರೇಕ್ ಮಾಡುವಂಥಾ ಸಿನಿಮಾಗಳು ವಿರಳವಾಗಿ ಬಂದಿವೆ. ಅದರಲ್ಲಿಯೂ ಈಗಿನ ವಾತಾವರಣದಲ್ಲಿ ಹೀರೋ ಪಾತ್ರವನ್ನು ಅದಕ್ಕೆ ವಿರುದ್ಧವಾಗಿ ಕಟ್ಟಿ ಕೊಡುವುದಕ್ಕೆ ಗುಂಡಿಗೆ ಇರಬೇಕು. ಆ ಪಾತ್ರಕ್ಕೆ ಜೀವ ತುಂಬುವುದಕ್ಕೂ ಗಟ್ಟಿತನದ ಕಲಾಪ್ರೇಮವಿರಬೇಕು. ಈ ನಿಟ್ಟಿನಲ್ಲಿ ನೋಡೋದಾದರೆ ಹೀರೋ…
ಕುರುಡಿ ವೇಶ್ಯೆಯನ್ನು ಆವಾಹಿಸಿಕೊಂಡು… ಬಹುತೇಕ ಎಲ್ಲ ನಟನಟಿಯರ ಪಾಲಿಗೂ ಒಂದಷ್ಟು ಪಾತ್ರಗಳನ್ನು ಮಾಡಿದ ನಂತರವೂ ಕನಸಿನ ಪಾತ್ರವೊಂದು ಕೈ ಹಿಡಿದು ಜಗ್ಗುತ್ತಿರುತ್ತೆ. ಆದರೆ ಅದು ಅಷ್ಟು ಸಲೀಸಾಗಿ ಒಲಿದು ಬರುವಂಥಾದ್ದಲ್ಲ. ಮತ್ತೆ ಕೆಲ ಮಂದಿ ಅಪರೂಪದ ಪಾತ್ರವೊಂದು ಮನೆ ಬಾಗಿಲಿಗೇ ಹುಡುಕಿ ಬಂದರೂ ಕದ ಹಾಕಿಕೊಳ್ಳುತ್ತಾರೆ. ಆ ಪಾತ್ರವನ್ನ ಬೇರೊಬ್ಬರು ಮಾಡಿದ ನಂತರ ಹೊಟ್ಟೆ ಉರಿದುಕೊಳ್ಳುತ್ತಾರೆ. ಆದರೆ, ಅಶ್ವಿನಿ ನಕ್ಷತ್ರ ಖ್ಯಾತಿಯ ನಟಿ ಮಯೂರಿ ಅವರೆಲ್ಲರಿಗಿಂತಲೂ ಭಿನ್ನ. ಅವರಿಗೆ ಪಾತ್ರವೊಂದನ್ನು ಯಾವ ದೃಷ್ಟಿಕೋನದಲ್ಲಿ ದಿಟ್ಟಿಸಬೇಕು, ಅದು ತಂದೊಡ್ಡುವ ಸವಾಲುಗಳನ್ನು ಯಾವ್ಯಾವ ರೀತಿಯಲ್ಲಿ ಎದುರಿಸಬೇಕೆಂಬ ಪ್ರೌಢಿಮೆಯಿದೆ. ಅದಿಲ್ಲದೇ ಹೋಗಿದ್ದರೆ ಅವರು ವೀಲ್‌ಚೇರ್ ರೋಮಿಯೋ ಚಿತ್ರದ ಕಣ್ಣು ಕಾಣದ ವೇಶ್ಯೆಯ ಪಾತ್ರವನ್ನು ಆವಾಹಿಸಿಕೊಂಡು ಈ ಪರಿಯಾದ ಮೆಚ್ಚುಗೆಗೆ ಪಾತ್ರರಾಗಲು ಸಾಧ್ಯವಾಗುತ್ತಿರಲಿಲ್ಲ. ಈ ಚಿತ್ರದ ಟ್ರೈಲರ್ ಸೇರಿದಂತೆ ಒಂದಷ್ಟು ಸುಳಿವುಗಳನ್ನು ಗಮನಿಸಿದವರೆಲ್ಲ ಮಯೂರಿ ನಿರ್ವಹಿಸಿರೋ ಪಾತ್ರದ ಬಗ್ಗೆ ಅಚ್ಚರಿಗೀಡಾಗಿದ್ದಾರೆ. ಯಾಕೆಂದರೆ, ಅಂಥಾ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಗಟ್ಟಿಯಾದ ಮನಸ್ಥಿತಿ ಹೊಂದಿರಬೇಕು. ನಿಜವಾದ ಕಲಾಸಕ್ತಿ, ಗೌರವ ಇರುವವರು…