ಪ್ರದ್ಮನಾಭ ನಗರದ ದಿಕ್ಕಿನಲ್ಲಿ ರಾಜಕೀಯ ಸಂಚಲನ! ರಾಜ್ಯ ವಿಧಾನಸಭಾ ಚುನಾವಣೆ ಸನ್ನಿಹಿತವಾಗಿದೆ. ಇದೀಗ ಯಾವ ಕ್ಷೇತ್ರದಿಂದ ಯಾರು ಕಣಕ್ಕಿಳಿಯುತ್ತಾರೆ, ಯಾವ ಪಕ್ಷದಿಂದ ಯಾರಿಗೆ ಟಿಕೇಟು ಸಿಕ್ಕುತ್ತದೆ ಎಂಬುದರ ಸುತ್ತ ಚರ್ಚೆಗಳು ಆರಂಭವಾಗಿವೆ. ಹಾಗಂತ ಕರ್ನಾಟಕದ ಅಷ್ಟೂ ವಿಧಾನಸಭಾ ಕ್ಷೇತ್ರಗಳ ಮೇಲೆಯೂ ಇಂಥಾದ್ದೇ ಕುತೂಹಲವಿದೆ ಅಂದುಕೊಳ್ಳಬೇಕಿಲ್ಲ. ನಾನಾ ಕಾರಣಗಳಿಂದಾಗಿ ಕೆಲವೊಂದಷ್ಟು ಕ್ಷೇತ್ರಗಳು ಮುಖ್ಯವಾಗಿ ಬಿಂಬಿಸಿಕೊಂಡಿವೆ. ಅಂಥಾ ಕ್ಷೇತ್ರಗಳಲ್ಲಿ ಬೆಂಗಳೂರಿನ ಪದ್ಮನಾಭ ನಗರವೂ ಒಂದಾಗಿ ದಾಖಲಾಗುತ್ತದೆ. ಇಲ್ಲಿ ಈಗೊಂದಷ್ಟು ವರ್ಷಗಳಿಂದೀಚೆಗೆ ಪದ್ಮನಾಭ ನಗರಕ್ಕೆ ಭಾರತೀಯ ಜನತಾ ಪಾರ್ಟಿಯ ಆರ್. ಅಶೋಕ್ ಅನಭಿಷಿಕ್ತ ದೊರೆಯಂತೆ, ಅಕ್ಷರಶಃ ಸಾಮ್ರಾಟನಂತೆ ಮೆರೆಯುತ್ತಿದ್ದಾರೆ. ಅಭಿವೃದ್ಧಿಯ ಮಾನದಂಡಗಳಾಚೆಗೂ ಅಶೋಕ್ ಈ ಕ್ಷೇತ್ರದಲ್ಲಿ ಸಲೀಸಾಗಿ ಸಡಿಲಾಗದಂತೆ ತಮ್ಮ ರಾಜಕೀಯ ಬೇರುಗಳನ್ನು ಇಳಿಬಿಟ್ಟಿದ್ದಾರೆ. ಆದರೆ, ಈ ಬಾರಿ ಮಾತ್ರ ಅಶೋಕ್‍ಗೆ ಸಾಲು ಸಾಲು ಸವಾಲುಗಳಿದ್ದಾವೆ. ನಟಿ ರಮ್ಯಾರನ್ನು ಕಾಂಗ್ರೆಸ್ ಒಂದುವೇಳೆ ಪದ್ಮನಾಭ ನಗರದಿಂದ ಕಣಕ್ಕಿಳಿಸಿದರೆ ಅಶೋಕನ ಸಾಮ್ರಾಜ್ಯದ ಎದೆಯಲ್ಲಿ ನಡುಕ ಹುಟ್ಟೋದಂತೂ ಖರೇ! ಹಾಗೆ ನೋಡಿದರೆ, ಅಶೋಕ್ ನಾಗಾಲೋಟಕ್ಕೆ ಬ್ರೇಕ್ ಹಾಕಲು ದೇವೇಗೌಡರ ಪಾಳೆಯದಿಂದಲೇ…
Author: Santhosh Bagilagadde
ಕಡು ಬೇಸಗೆಯ ರಣ ಬಿಸಿಲಿಗೇ ಸವಾಲೊಡ್ಡುವಂತೆ ರಾಜ್ಯಾದ್ಯಂತ ಚುನಾವಣೆಯ ಕಾವೇರಿಕೊಂಡಿದೆ. ಬಹುತೇಕ ಪಕ್ಷಗಳು, ರಾಜಕಾರಣಿಗಳು ನಾನಾ ಆಮಿಷಗಳನ್ನೊಡ್ಡುತ್ತಾ ಮತದಾರರನ್ನು ಮರುಳು ಮಾಡುವ ನಿಟ್ಟಿನಲ್ಲಿ ಪೈಪೋಟಿಗೆ ಬಿದ್ದಿದ್ದಾರೆ. ಇದೇ ಹೊತ್ತಿನಲ್ಲಿ ಸದ್ಯ ಅಧಿಕಾರ ಕೇಂದ್ರದಲ್ಲಿರುವ ಬಿಜೆಪಿ ಮಂದಿ ಅಭಿವೃದ್ಧಿ ತೋರಿಸಿ ಮತ ಕೇಳುವ ಯೋಗ್ಯತೆ ಇಲ್ಲದೆ ನಾನಾ ಆಟ ಕಟ್ಟುತ್ತಿದ್ದಾರೆಂಬ ಅಸಹನೆ ಮತದಾರರಲ್ಲಿಯೇ ಇದೆ. ಕಪೋಲ ಕಲ್ಪಿತ ಇಹಿಹಾಸ ಕೆದಕುತ್ತಾ, ಆ ಹುದುಲಿನಿಂದ ನಾನಾ ನಮೂನೆಯ ಹೀರೋಗಳನ್ನು, ವೀರಾಧಿ ವೀರರನ್ನು ಉತ್ಖನನ ಮಾಡುವಲ್ಲಿ ಬಿಜೆಪಿ ಮಂದಿ ನಿಸ್ಸೀಮರು. ಅಂಥಾ ದಂಡಿನ ದಂಡನಾಯಕನಂತಿರುವಾತ ಸಿ.ಟಿ ರವಿ! ಚುನಾವಣೆಗೆ ಒಂದಷ್ಟು ಸಮಯ ಇರುವಾಗಲೇ ಸಿ.ಟಿ ರವಿ ಉರಿಗೌಡ ನಂಜೇಗೌಡರ ಹೆಸರನ್ನು ಮಂತ್ರವೆಂಬಂತೆ ಪಠಿಸಲಾರಂಭಿಸಿದ್ದ. ಈ ಹುನ್ನಾರಕ್ಕೆ ಬಿಜೆಪಿ ಅಜೆಂಡಾಗಳ ಸಂಪೂರ್ಣ ಬೆಂಬಲ ಸಿಕ್ಕಿದ್ದರಿಂದ ರವಿಯ ಉರಿ ಮತ್ತು ನಂಜು ಮತ್ತಷ್ಟು ಉಲ್ಬಣಗೊಂಡಿತ್ತು. ಹಾಗೊಂದು ಉತ್ತೇಜನ ಸಿಕ್ಕಿದ್ದೇ ಸಿಟಿ ರವಿ ಸಾಹೇಬರು ಪಟ್ಟಾಗಿ ಕೂತು ಸಂಶೋಧನೆ ನಡೆಸುತ್ತಾ, ಉರಿ ಮತ್ತು ನಂಜೇಗೌಡರನ್ನು ಟಿಪ್ಪುವನ್ನು ಕೊಂದ ಮಂಡ್ಯ ಸೀಮೆಯ…
ರಮೇಶ್ ಅರವಿಂದ್ ಸಾರಥ್ಯದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಐದನೇ ಆವೃತ್ತಿ ಶುರುವಾಗಿದೆ. ಕಳೆದ ಸೀಜನ್ನಿನ ಒಂದಷ್ಟು ಅಧ್ವಾನಗಳನ್ನು ಕಂಡಿದ್ದವರಿಗೆಲ್ಲ ಈ ಶೋನ ಮೇಲೆ ಹೇಳಿಕೊಳ್ಳುವಂಥಾ ಮೋಹ ಉಳಿದುಕೊಂಡಿರಲಿಲ್ಲ. ರಮೇಶ್ ಅರವಿಂದ್ ಆ ಕಾರ್ಯಕ್ರಮ ನಡೆಸಿ ಕೊಡುವ ರೀತಿ, ಸಾಧಕರೆನ್ನಿಸಿಕೊಂಡವರ ಬದುಕಿನ ಸೂಕ್ಷ್ಮಗಳನ್ನು ಕಲೆ ಹಾಕಿ ಅವರನ್ನೇ ಅಚ್ಚರಿಗೀಡು ಮಾಡುವ ಕಸುಬುದಾರಿಕೆಗಳೆಲ್ಲ ಒಂದಷ್ಟು ಆಕರ್ಷಣೆ ಉಳಿಸಿಕೊಂಡಿದ್ದದ್ದು ನಿಜ. ಝೀ ಕನ್ನಡದ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರ ಈ ಬಾರಿ ಅದೇನೋ ಹೊಸತನ ತುಂಬಿರುತ್ತಾರೆ, ಈ ಕಾರ್ಯಕ್ರಮ ಮತ್ತೊಂದಷ್ಟು ಹೊಳಪುಗಟ್ಟಿಕೊಂಡು ಬರುತ್ತದೆಂಬಂಥಾ ಕೃಶವಾದ ನಿರೀಕ್ಷೆಗಳೂ ಇದ್ದವು. ಇದೆಲ್ಲದರ ಒಡ್ಡೋಲಗದಲ್ಲೀಗ ವೀಕೆಂಡ್ ವಿತ್ ರಮೇಶ್ ಶುರುವಾಗಿದೆ. ಆರಂಭದ ಎಪಿಸೋಡಿಗೆ ಪ್ರೇಕ್ಷಕರ ಮುನಿಸು ಮುತ್ತಿಕೊಂಡಿದೆ! ಈ ಕಾರ್ಯಕ್ರಮವನ್ನು ಪ್ರೀತಿಯಿಂದ ನೋಡುವ ಪ್ರೇಕ್ಷಕರಲ್ಲಿಯೇ ಇಂಥಾದ್ದೊಂದು ಮುನಿಸು ಮಡುಗಟ್ಟಿಕೊಳ್ಳಲು ಪ್ರಧಾನ ಕಾರಣವಾಗಿರುವಾಕೆ ಪುರಾತನ ನಟಿ ರಮ್ಯಾ. ನಟಿಸಿರೋದು ಸಲೀಸಾಗಿ ಲೆಕ್ಕವಿಟ್ಟುಕೊಳ್ಳುವಷ್ಟೇ ಚಿತ್ರಗಳಲ್ಲಾದರೂ, ಈಕೆ ಸಂಪಾದಿಸಿಕೊಂಡ ಅಭಿಮಾನಿ ಬಳಗ ನಿಜಕ್ಕೂ ಅಚ್ಚರಿ ಮೂಡಿಸುತ್ತೆ. ಬಹುಶಃ ಕನ್ನಡ ಮಟ್ಟಿಗೆ ನಟಿಯೊಬ್ಬಳು ಸೃಷ್ಟಿಸಿದ…
ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಎಲ್ಲ ಪಕ್ಷಗಳಲ್ಲಿಯೂ ಇದೀಗ ಟಿಕೆಟ್ ಹಂಚಿಕೆಯ ಭರಾಟೆ ಮೇರೆ ಮೀರಿದೆ. ಬಹುತೇಕ ಎಲ್ಲ ಪಕ್ಷಗಳಲ್ಲಿಯೂ ಕೂಡಾ ಈ ಅಭ್ಯರ್ಥಿ ಆಯ್ಕೆಯ ವಿಚಾರದಲ್ಲಿ ಪ್ರಧಾನವಾಗಿ ಮಾನದಂಡವಾಗಿರುವುದು ಜಾತಿ ಲೆಕ್ಕಾಚಾರವೇ ಎಂಬುದು ದುರಂತ ಸತ್ಯ. ಅದೆಷ್ಟೋ ಶತಮಾನಗಳಿಂದಲೂ ಜಾತಿ ವಿಮೋಚನೇ ಚಳುವಳಿಗಳು ನಾನಾ ರೂಪ ಧರಿಸಿ ಹೋರಾಟ ನಡೆಸಿದ್ದವಲ್ಲಾ? ಅಂಥಾ ಎಲ್ಲ ಚಳವಳಿಗೂ ರಾಜಕೀಯ ಲೆಕ್ಕಾಚಾರಗಳ ನಡುವೆ ಉಸಿರುಗಟ್ಟಿ ಒದ್ದಾಡುತ್ತಿವೆ. ಬೇರೆಲ್ಲ ಪಕ್ಷಗಳ ಕಥೆ ಹಾಗಿರಲಿ; ಸಮಾಜನತೆ, ಜಾತ್ಯಾತೀತತೆ ಮತ್ತು ಪ್ರಗತಿಪರ ಆಶಗಳನ್ನು ಹೊಂದಿರುವಂತೆ ಪೋಸು ಕೊಡುವ ಕಾಂಗ್ರೆಸ್ ಪಡಸಾಲೆಯಲ್ಲಿಯೇ ಜಾತಿ ಕೇಂದ್ರಿತ ರಾಜಕಾರಣ ಮೇರೆ ಮೀರಿದೆ. ಕಾಂಗ್ರೆಸ್ ಮಂದಿಗೆ ಅದ್ಯಾವ ಪರಿಯಾಗಿ ಜಾತಿ ಪಿತ್ಥ ಅಡರಿಕೊಂಡಿದೆಯೆಂದರೆ, ಟಿಕೆಟಿನ ವಿಚಾರ ಬಂದಾಗ ತೊಂಬತ್ತೆರಡರ ಹಣ್ಣಣ್ಣು ಮುದುಕರೂ ನವ ಯುವಕರಂತೆ ಕಾಣಿಸಲಾರಂಭಿಸಿದ್ದಾರೆ! ಹಾಗೊಂದು ವ್ಯಾಧಿ ಕಾಂಗ್ರೆಸ್ ನರನಾಡಿಗಳಿಗೆ ಹಬ್ಬಿಕೊಳ್ಳದೇ ಹೋಗಿದ್ದರೆ, ಶಾಮನೂರು ಶಿವಶಂಕರಪ್ಪನವರಿಗೆ ಈ ಬಾರಿ ಟಿಕೆಟು ಸಿಗಲು ಸಾಧ್ಯವಾಗುತ್ತಿರಲಿಲ್ಲ. ಅಷ್ಟಕ್ಕೂ ಎಲ್ಲವನ್ನು ದಾಟಿಕೊಂಡು ಬಂದು ಜಾತಿ ಕೊಚ್ಚೆಯಲ್ಲಿ ಲಂಗರು ಹಾಕುವುದು…
ಗಾಂಜಾ ಮುಂತಾದ ನಶೆಯ ಪದಾರ್ಥಗಳಿಂದು ಇಡೀ ದೇಶವನ್ನೇ ವ್ಯಾಪಿಸಿವೆ. ನಮ್ಮ ಕರ್ನಾಟಕವೂ ಸೇರಿದಂತೆ ನಾನಾ ರಾಜ್ಯಗಳಲ್ಲಿ ಇಂಥಾ ಡ್ರಗ್ಸ್ ಮಾಫಿಯಾವನ್ನು ಮಟ್ಟ ಹಾಕುವ ಅವಿರತ ಪ್ರಯತ್ನಗಳು ನಡೆಯುತ್ತಿವೆ. ಆದರೆ, ಸಂದಿಗೊಂದಿಗಳಲ್ಲಿ ಪಿತಗುಡುತ್ತಿರುವ ಡ್ರಗ್ ಪೆಡ್ಲರ್‍ಗಳು ಸಿಕ್ಕಿಕೊಳ್ಳುತ್ತಿದ್ದಾರೇ ಹೊರತು, ಕಿಂಗ್‍ಪಿನ್‍ಗಳನ್ನು ಬಂಧಿಸಿ ಈ ದಂಧೆಯ ನಡ ಮುರಿಯುವ ಉತ್ಸಾಹವನ್ನು ಪೊಲೀಸರು ತೋರುತ್ತಿಲ್ಲವೆಂಬ ಅಸಹನೆ ನಾಗರಿಕರಲ್ಲಿದೆ. ಈ ನಡುವೆ ಹೈದ್ರಾಬಾದ್‍ನಲ್ಲಿ ಡ್ರಗ್ಸ್ ಮಾರಾಟಗಾರನೊಬ್ಬನನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಹೈದ್ರಾಬಾದ್‍ನ ಒಂದಷ್ಟು ಪ್ರದೇಶಗಳಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಈತನ ಮೇಲೆ ಹಲವಾರು ದಿನಗಳಿಂದ ಪೊಲೀಸರು ಕಣ್ಣಿಟ್ಟಿದ್ದರು. ಇದೀಗ ಮಾಲಿನ ಸಮೇತ ದಂಧೆಕೋರನನ್ನು ಬಂಧಿಸಲಾಗಿದೆ. ಈತನಿಂದ ಇಪ್ಪತ್ನಾಲಕ್ಕು ಕೇಜಿ ಗಾಂಜಾ ಮತ್ತುಯ ಹದಿನೈದು ಲಕ್ಷದಷ್ಟು ನಗದನ್ನು ವಶಪಡಿಸಿಕೊಳ್ಳಲಾಗಿದೆ. ಈ ಭಾಶಗದಲ್ಲಿ ದೊಡ್ಡ ನೆಟ್‍ವರ್ಕ್ ಹೊಂದಿದ್ದ ಈ ಕ್ರಿಮಿಗೆ ವಿದ್ಯಾರ್ಥಿಗಳು, ಪ್ರತಿಷ್ಠಿತರು ಸೇರಿದಂತೆ ಅನೇಕರ ಸಂಪರ್ಕವಿದೆ. ಆತನ ಮಾಹಿತಿ ಆಧರಿಸಿ ಈ ದಂಧೆಯ ಬೇರುಗಳನ್ನು ಬುಡದಿಂದಲೇ ಕಿತ್ತು ಹಾಕಲು ಹೈದ್ರಾಬಾದ್ ಪೊಲೀಸರು ಮುಂದಾಗಿದ್ದಾರೆ. ಸದ್ಯಕ್ಕೆ ಹೈದ್ರಾಬಾದ್ ಪಟ್ಟಣ ಡ್ರಗ್ಸ್…
ಎರಡೆರಡು ಸಲ ಬಿಗ್‍ಬಾಸ್ ಶೋಗೆ ಹೋಗಿ ಬಂದು, ಅಲ್ಲಿಯೂ ನಾನಾ ರಂಖಲುಗಳನ್ನು ಸೃಷ್ಟಿಸಿಕೊಂಡಿದ್ದಾತ ಪ್ರಶಾಂತ್ ಸಂಬರ್ಗಿ. ಹಾಗೆ ನೋಡಿದರೆ, ಈ ಆಸಾಮಿಗೆ ಇಂಥಾದ್ದಲ್ಲದೇ ಬೇರ್ಯಾವ ರೀತಿಯಲ್ಲಿಯೂ ಸುದ್ದಿ ಮಾಡುವ ಕಿಮ್ಮತ್ತಿಲ್ಲ. ಒಂದೋ ಬಿಗ್ ಬಾಸ್‍ನಂಥಾ ಶೋಗಳಿಗೆ ಸ್ಪರ್ಧಿಯಾಗಿ ಹೋಗಬೇಕು, ಇಲ್ಲದಿದ್ದರೆ ಬಾಯಿಗೆ ಬಂದಂತೆ ಒದರಾಡುತ್ತಾ ತನ್ನನ್ನು ತಾನೇ ಹೋರಾಟಗಾರನೆಂಬಂತೆ ಬಿಂಬಿಸಿಕೊಳ್ಳಬೇಕು. ಇದೀಗ ಬಿಗ್‍ಬಾಸ್ ಶೋ ನಂತರ ಪ್ರಚಾರಕ್ಕೆ ತತ್ವಾರ ಅನುಭವಿಸಿದ್ದ ಸಂಬರ್ಗಿ ಮತ್ತೊಂದು ವಿವಾದದ ಮೂಲಕ ಸುದ್ದಿಯಾಗಿದ್ದಾನೆ; ಯಾರನ್ನೋ ಹಣಿಯಲು ಹೋಗಿ, ಮತ್ಯಾರ ಹೆಸರನ್ನೋ ಬಳಸಿಕೊಂಡು, ಒಂದಿಡೀ ಸಮುದಾಯದ ವಿರೋಧ ಕಟ್ಟಿಕೊಳ್ಳುವ ಮೂಲಕ! ಪ್ರಧಾನಿ ಮೋದಿಯನ್ನು ಹಳಿದ ಕಾರಣಕ್ಕೆ ರಾಹುಲ್ ಗಾಂಧಿಗೆ ಎರಡು ವರ್ಷ ಶಿಕ್ಷೆಯಾಗಿದ್ದು, ಆತನ ಸಂಸತ್ ಸದಸ್ಯತ್ವವನ್ನು ಕೇಂದ್ರ ಸರ್ಕಾರ ಅನರ್ಹಗೊಳಿಸಿದ ವಿಚಾರ ಗೊತ್ತೇ ಇದೆ. ಅದರ ಸುತ್ತ ಪರ ವಿರೋಧಗಳ ಚರ್ಚೆ ಕಾವೇರಿಕೊಂಡಿದೆ. ಅದರ ನಡುವೆ ನಂದೆಲ್ಲಿಡ್ಲಿ ಎಂಬಂತೆ ಟ್ವಿಟರ್ ಮೂಲಕ ಪ್ರತ್ಯಕ್ಷನಾದಾತ ಪ್ರಶಾಂತ್ ಸಂಬರ್ಗಿ. ಇಂಥಾ ಸರಕು ಸಿಕ್ಕಾಕ್ಷಣ ಥೇಟು ವೀರಾಗ್ರಣಿಯಂತೆ ಎಂಟ್ರಿ ಕೊಟ್ಟು, ತಲೆಬುಡವಿಲ್ಲದ…
ಕೊರೋನಾ ವೈರಸ್ಸು ಬಹುತೇಕರ ಬದುಕನ್ನೇ ಬರ್ಬಾದಾಗಿಸಿದ್ದೀಗ ಕರಾಳ ಇತಿಹಾಸವಾಗಿ ದಾಖಲಾಗಿದೆ. ನಾನಾ ಕ್ಷೇತ್ರದಲ್ಲೂ ಕೂಡಾ ಇದಕ್ಕೆ ಬಲಿಬಿದ್ದ ದುರಂತಗಾಥೆಗಳು ದಂಡಿ ದಂಡಿಯಾಗಿವೆ. ಅದರಲ್ಲಿಯೂ, ಸಿನಿಮಾ ರಂಗದಲ್ಲಂತೂ ದುರಂತದ ಗಡಿ ದಾಟಿಕೊಂಡ ದಾರುಣ ಕಥೆಗಳಿದ್ದಾವೆ. ಅದೆಷ್ಟೋ ಸಿನಿಮಾಗಳು ಗೆಲ್ಲುವ ತಾಕತ್ತಿದ್ದರೂ, ಎದ್ದು ನಿಲ್ಲಲಾಗದೆ ಮರೆಯಾಗಿವೆ. ಅದೆಷ್ಟೋ ಸಿನಿಮಾಗಳು ಬಿಡುಗಡೆಯ ಭಾಗ್ಯ ಕಾಣದೆ ಕಂಗಾಲಾಗಿವೆ. ಗೆಲ್ಲಬಲ್ಲ ಎಲ್ಲ ಲಕ್ಷಣಗಳಿದ್ದರೂ ಕೂಡಾ ವಿಧಿಯಾಟಕ್ಕೆ ಸಿಕ್ಕು, ಮರೆಗೆ ಸರಿಯುವ ಸಂಕಟವಿದೆಯಲ್ಲಾ? ಅದನ್ನು ಒಂದು ಹಂತದಲ್ಲಿ ದೊಡ್ಡ ಮಟ್ಟದಲ್ಲಿಯೇ ಸದ್ದು ಮಾಡಿದ್ದ `ಕೊಡೆಮುರುಗ’ ಚಿತ್ರತಂಡ ಸರಿಯಾಗಿಯೇ ಅರಿತುಕೊಂಡಿತ್ತು. ಕೊರೋನಾ ಅಬ್ಬರದಿಂದಲೇ ಚಿತ್ರಮಂದಿರಗಳಿಂದ ಮರೆಯಾಗಿದ್ದ ಈ ಚಿತ್ರ ಪ್ರೇಕ್ಷಕರ ಮನಸಲ್ಲುಳಿದಿದೆ. ಅದು ನಿಜವಾದ ಸಾರ್ಥಕ್ಯ! ಕೊಡೆಮುರುಗ ಚಿತ್ರದ ಬಗ್ಗೆ ಈಗ ಏಕಾಏಕಿ ಪ್ರಸ್ತಾಪಿಸುತ್ತಿರೋದಕ್ಕೆ ಬಲವಾದ ಕಾರಣವಿದೆ. ಆ ಚಿತ್ರದ ಚೆಂದದ ವೀಡಿಯೋ ಸಾಂಗ್ ಇದೀಗ ಆನಂದ್ ಆಡಿಯೋ ಮೂಲಕ ಬಿಡುಗಡೆಗೊಂಡಿದೆ. ಅದಕ್ಕೆ ಸಿಗುತ್ತಿರುವ ವೀಕ್ಷಣೆ ಮತ್ತು ಭರಪೂರ ಪ್ರತಿಕ್ರಿಯೆಗಳ ಪ್ರಭೆಯಲ್ಲಿ ಕೊಡೆಮುರುಗ ಮತ್ತೊಮ್ಮೆ ಪ್ರೇಕ್ಷಕರ ಮೈ ಮನಸುಗಳನ್ನು ಆವರಿಸಿಕೊಂಡಿದ್ದಾನೆ. ಹೀಗೆ…
ಕಳೆದ ವರ್ಷದ ಕಡೇಯ ಭಾಗದಿಂದ ಮೊದಲ್ಗೊಂಡು, ಇಲ್ಲಿಯ ವರೆಗೂ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಾ, ಅಡಿಗಡಿಗೆ ಪ್ರೇಕ್ಷಕರನ್ನು ಸೆಳೆಯುತ್ತಾ ಸಾಗಿ ಬಂದಿದ್ದ ಚಿತ್ರ `ಪೆಂಟಗನ್’. ಖ್ಯಾತ ನಿರ್ದೇಶಕ ಗುರು ದೇಶಪಾಂಡೆ ತಮ್ಮದೇ ಸ್ವಂತ ಬ್ಯಾನರಿನಡಿಯಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಹೊಸತನದ ಕಥೆಗಳಿಗೆ ದೃಷ್ಯರೂಪ ಕೊಡುವ ಸದುದ್ದೇಶದೊಂದಿಗೆ ನಿರ್ಮಾಣ ಸಂಸ್ಥೆ ಆರಂಭಿಸಿದ್ದ ಗುರು ದೇಶಪಾಂಡೆ ಅವರ ಇಂಗಿತವನ್ನು ಸಾರ್ಥಕಗೊಳಿಸುವಂತೆ ಮೂಡಿ ಬಂದಿರುವ ಚಿತ್ರ `ಪೆಂಟಗನ್’. ಇದೀಗ ಈ ಚಿತ್ರದ ಪೊಗದಸ್ತಾದ ಟ್ರೈಲರ್ ಲಾಂಚ್ ಆಗಿದೆ. ನಿಗಿನಿಗಿಸುತ್ತಿದ್ದ ನಿರೀಕ್ಷೆಗಳೆಲ್ಲ ಖುಷಿಗೊಂಡು ಧಗಧಗಿಸುವಂತೆ ಮಾಡುವ ಕಂಟೆಂಟಿನ ಸುಳಿವೊಂದು, ಈ ಟ್ರೈಲರ್ ಮೂಲಕ ಸ್ಪಷ್ಟವಾಗಿಯೇ ಸಿಕ್ಕಿದೆ! ಅದೆಂಥಾದ್ದೇ ಅಲೆಯಿರಲಿ; ಒಂದೊಳ್ಳೆ ಕಂಟೆಂಟು ಹೊಂದಿರುವ, ಪ್ರಯೋಗಾತ್ಮಕ ಗುಣಗಳಿಂದ ಮೈ ಕೈ ತುಂಬಿಕೊಂಡಿರುವ ಸಿನಿಮಾಗಳತ್ತ ಕತ್ತನಡ ಪ್ರೇಕ್ಷಕರು ಸದಾ ಕಾಲವೂ ಕಣ್ಣಿಟ್ಟಿರುತ್ತಾರೆ. ಅಂಥಾ ಚಿತ್ರಗಳನ್ನು ವಿಶೇಷವಾದ ಅಕ್ಕರಾಸ್ಥೆಗಳಿಂದ ಗೆಲ್ಲಿಸುತ್ತಾರೆ. ಈ ಮಾತಿಗೆ ಉದಾಹರಣೆಯಂಥಾ ಅದೆಷ್ಟೋ ಚಿತ್ರಗಳಿದ್ದಾವೆ. ಆ ಸಾಲಿಗೆ ಪೆಂಟಗನ್ ಕೂಡಾ ಸೇರ್ಪಡೆಗೊಳ್ಳುವಂಥಾ ಸ್ಪಷ್ಟ ಕುರುಹುಗಳು ಈ ಟ್ರೈಲರ್…
ಹಾಸ್ಯ ನಟನಾಗಿ ಪ್ರಖ್ಯಾತಿ ಪಡೆದು, ಆ ನಂತರ ನಾಯಕ ನಟನಾಗಿಯೂ ನಗುವಿನ ಪಥದಲ್ಲಿಯೇ ಮುಂದುವರೆದಿದ್ದವರು ಕೋಮಲ್. ಒಂದಷ್ಟು ಕಾಲ ಅವರು ನೇಪಥ್ಯಕ್ಕೆ ಸರಿದಂತಾದಾಗ, ಅಪಾರ ಸಂಕ್ಯೆಯ ಪ್ರೇಕ್ಷಕರು ಕೋಮಲ್‍ರನ್ನು ಮಿಸ್ ಮಾಡಿಕೊಂಡಿದ್ದದ್ದು ನಿಜ. ಆದರೀಗ ಅವರು ಹೊಸಾ ಚೈತನ್ಯದಿಂದ ಮೈಕೊಡವಿಕೊಂಡು ಮೇಲೆದ್ದು ನಿಂತಿದ್ದಾರೆ. ಅವರು ನಟಿಸುತ್ತಿರುವ ಚಿತ್ರಗಳ ಬಗ್ಗೆ ಸುದ್ದಿಯಾಗುತ್ತಲೇ, ನಟಿಸಿಯಾಗಿರುವ ಸಿನಿಮಾಗಳೂ ಕೂಡಾ ಸಂಚಲನ ಸೃಷ್ಟಿಸುತ್ತಿವೆ. ಅದರ ಭಾಗವಾಗಿಯೇ ಇದೀಗ `ಉಂಡೆನಾಮ’ ಎಂಬ ಶೀರ್ಷಿಕೆಯ ಸಿನಿಮಾ ಕೂಡಾ ಪ್ರೇಕ್ಷಕರ ಆಸಕ್ತಿ ಕೇಂದ್ರಕ್ಕೆ ಬಂದು ನಿಂತಿದೆ. ಸದ್ದೇ ಇಲ್ಲದೆ ಚಿತ್ರೀಕರಣಗೊಂಡಿದ್ದ ಉಂಡೆನಾಮ ಇದೇ ಏಪ್ರಿಲ್ 14ರಂದು ತೆರೆಗಾಣಲಿದೆ. ಈ ಶೀರ್ಷಿಕೆ, ಕೋಮಲ್ ಕಾಂಬಿನೇಷನ್ ಮತ್ತು ನಿರ್ದೇಶಕರ ಹಿನ್ನೆಲೆಗಳೆಲ್ಲವನ್ನೂ ಒಟ್ಟುಗೂಡಿಸಿ ನೋಡಿದರೆ, ಉಂಡೆನಾಮದ ಮೂಲಕ ಭರ್ಜರಿ ನಗುವಿನ ಹಬ್ಬದ ಮುನ್ಸೂಚನೆ ಸಿಗುತ್ತಿದೆ. ಅಂದಹಾಗೆ ಇದು ಕೆ.ಎಲ್ ರಾಜಶೇಖರ್ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಚಿತ್ರ. ರಾಜಶೇಖರ್ ಸೃಜನ್ ಲೋಕೇಶ್ ಸಾರಥ್ಯದ ಮಜಾ ಟಾಕೀಸ್ ಶೋ ಮೂಲಕ ಹೆಚ್ಚು ಪ್ರಚಲಿತಕ್ಕೆ…
ರಾಜ್ಯದಲ್ಲೀಗ ಉರಿಗೌಡ ಮತ್ತು ನಂಜೇಗೌಡನೆಂಬ ಕಲ್ಪಿತ ವೀರರ ಕಥನಗಳು ಎಗ್ಗಿಲ್ಲದೆ ಹರಿದಾಡುತ್ತಿವೆ. ಈ ಬಗ್ಗೆ ವಾಟ್ಸಪ್ ಯುನಿರ್ಸಿಟಿಯ ಕಸುಬಿಲ್ಲದ ಸಂಶೋಧಕರೊಂದಷ್ಟು ಮಂದಿ ಎಗ್ಗಿಲ್ಲದೆ ಸಂಶೋಧನೆ ನಡೆಸುತ್ತಿದ್ದಾರೆ. ರಾಜಕೀಯ ನೆರಳಿನಲ್ಲಿ ಹಾಯಾಗಿರುವ ಮತ್ತೊಂದಷ್ಟು ಮಂದಿ, ಅದಕ್ಕೆ ಪೂರಕವಾದ ಆಕರ ವಿಚಾರಗಳನ್ನು ಹರಿಯಬಿಡುತ್ತಿದ್ದಾರೆ. ಸನ್ಮಾನ್ಯ ಸಿ.ಟಿ ರವಿಯಂತೂ ಥೇಟು ಇತಿಹಾಸ ತಜ್ಞನಂತೆ ದಿನಕ್ಕೊಂದೊಂದು ವಿಚಾರಗಳನ್ನು ಹರಿಯಬಿಡುತ್ತಿದ್ದಾರೆ. ಹೀಗೆ ಬಿಜೆಪಿ ಮಂದಿ ಚುನಾವಣಾ ದಾಳವಾಗಿಸಿಕೊಂಡಿದ್ದ ಉರಿ ಗೌಡ, ನಂಜೇಗೌಡ ಯಾರು? ಅಷ್ಟಕ್ಕೂ ಅವರು ವೀರರಾ? ಅವರಿಬ್ಬರೂ ಟಿಪ್ಪು ಸುಲ್ತಾನನನ್ನು ಕೊಂದಿದ್ದ ನಿಜವಾ? ಹೀಗೇ ನಾನಾ ದಿಕ್ಕಿನಲ್ಲಿ ಚರ್ಚೆಗಳು ಚಾಲ್ತಿಯಲ್ಲಿವೆ! ಇದೇ ಹೊತ್ತಿನಲ್ಲಿ ಸದ್ದೇ ಇಲ್ಲದೆ ಉರಿಗೌಡ ಮತ್ತು ನಂಜೇಗೌಡನ ಇರುವಿಕೆಗೆ ಅಧಿಕೃತ ಮುದ್ರೆಯೊತ್ತಿವ ಕೆಲಸವೂ ನಡೆದಿತ್ತು; ಅವರಿಬ್ಬರ ಬಗೆಗೊಂದು ಸಿನಿಮಾ ಮಾಡುವ ತಯಾರಿಯೊಂದಿಗೆ. ಒಂದು ಕಲ್ಪಿತ ಕಥೆಯನ್ನು ನಿಜ ಇತಿಹಾಸವೆಂಬಂತೆ ಬಿಂಬಿಸುವುದು, ಆ ಮೂಲಕ ಜನಮಾನಸದಲ್ಲಿ ಸುಳ್ಳನ್ನು ಸತ್ಯವೆಂಬಂತೆ ಪ್ರತಿಷ್ಠಾಪಿಸುವುದೆಲ್ಲ ಅಕ್ಷಮ್ಯ ಅಪರಾಧ. ಆದರೆ, ಅದೇಕೋ ಈ ಬಿಜೆಪಿ ಮಂದಿ ಮಾತ್ರ ಆಗಾಗ ಕಪೋಲ ಕಲ್ಪಿತ…