ಈಗೆಲ್ಲಿದೆ ಅಸ್ಪೃಶ್ಯತೆ, ಜಾತಿಪದ್ಧತಿ? ಅದೆಲ್ಲವೂ ಮುಗಿದು ಹೋಗಿರುವ ವಿಚಾರ ಅಂತೆಲ್ಲ ಆರಾಮ ಕುರ್ಚಿಯಲ್ಲಿ ಪವಡಿಸಿದ ಮಂದಿ ಆಗಾಗ ಬಡಬಡಿಸುತ್ತಿರುತ್ತಾರೆ. ಆದರೆ ಅಂಥವರ ಸಿನಿಮಕತೆಯನ್ನು ಮೀರಿ ಈ ಸಮಾಜದಲ್ಲಿ ಜಾತಿ ಪದ್ಧತಿ ಎಂಬ ಹೇಸಿಗೆ ಈ ಕ್ಷಣಕ್ಕೂ ಜೀವಂತವಿದೆ. ಸಿನಿಕರ ಮುಖಕ್ಕೆ ಹೊಡೆದಂತೆ ಆಗಾಗ ಈ ಸಮಾಜದಲ್ಲಿ ಜಾತಿ ವ್ಯಾಧಿ ಉಲ್ಬಣಿಸುತ್ತದೆ. ಉಚ್ಛ ಜಾತಿಗಳಲ್ಲಿ ಹುಟ್ಟಿದ್ದನ್ನೇ ಕಿರೀಟ ಅಂದುಕೊಂಡ ದುಷ್ಟ ಮನಸುಗಳು ಹಲವಾರು ಸಂದರ್ಭಗಳಲ್ಲಿ ಅಸ್ಪೃಶ್ಯತೆಯನ್ನು ಆರಾಧಿಸುತ್ತವೆ. ತೀರಾ ಸರ್ಕಾರಿ ಕಚೇರಿಗಳಲ್ಲಿಯೇ ಅಂಥಾದ್ದು ನಡೆಯುತ್ತವೆ ಎಂದರೆ ಜನರ ಮನಸ್ಥಿತಿ ಅದೆಷ್ಟು ಕುಲಗೆಟ್ಟಿರಬೇಡ. ಅದರಲ್ಲಿಯೂ ಪೆರಿಯಾರ್‌ರಂಥಾ ಮಹಾನುಭಾವರ ಪ್ರಭಾವಕ್ಕೊಳಗಾದ ತಮಿಳುನಾಡಿನ ಸರ್ಕಾರಿ ಕಚೇರಿಯಲ್ಲಿಯೇ ಜಾತಿ ಪದ್ಧತಿ ವಿಜೃಂಭಿಸುತ್ತದೆಯೆಂದರೆ ಅದಕ್ಕಿಂತಲೂ ನಾಚಿಕೆಗೇಡಿನ ಸಂಗತಿ ಬೇರ‍್ಯಾವುದಿದೆ? ತಮಿಳುನಾಡಿನ ಲೋಕೋಪಯೋಗಿ ಇಲಾಖೆಯಲ್ಲಿ ಇಂಥಾದ್ದೊಂದು ಅನಿಷ್ಟ ವಿಜೃಂಭಿಸಿದೆ. ಇಲ್ಲಿ ಆರು ಮಂದಿ ದಲಿತ ಸಿಬ್ಬಂದಿಗಳಿದ್ದರು. ಅವರಿಗೆಲ್ಲ ಮೇಲ್ಜಾತಿಯ ಅಧಿಕಾರಿಗಳು ಜಾತಿ ಆಧಾರಿತವಾಗಿ ನಿರಂತರವಾಗಿ ಕಿರುಕುಳ ನೀಡುತ್ತಾ ಬರುತ್ತಿದ್ದರು. ಅದು ಇತ್ತೀಚೆಗೆ ಯಾವ ಪರಿಯಾಗಿ ಮೇರೆ ಮೀರಿಕೊಂಡಿತ್ತೆಂದರೆ, ಕುಡಿಯುವ ನೀರು, ಟಾಯ್ಲೆಟ್…
Author: Santhosh Bagilagadde
ರಾಜಮೌಳಿ ಮತ್ತು ಜ್ಯೂನಿಯರ್ ಎನ್‌ಟಿಆರ್ ಕಾಂಭಿನೇಷನ್ನಿನ ಆರ್ ಆರ್ ಆರ್ ಚಿತ್ರ ಭರ್ಜರಿ ಗೆಲುವು ದಾಖಲಿಸಿದೆ. ಇದರ ಬೆನ್ನಲ್ಲಿಯೇ ಜ್ಯೂನಿಯರ್ ಎನ್‌ಟಿಆರ್ ಮುಂದಿನ ನಡೆ ಏನು? ಅವರು ಯಾವ ಸಿನಿಮಾದಲ್ಲಿ ನಟಿಸಲಿದ್ದಾರೆಂಬ ಕೌತುಕವೂ ಹಬ್ಬಿಕೊಂಡಿದೆ. ಅದಕ್ಕೆ ಇತ್ತೀಚಿನ ದಿನಗಳಲ್ಲಿ ಉತ್ತರದ ಸುಳಿವು ದೊರೆತಿತ್ತು. ಅವರ ಮುಂದಿನ ಚಿತ್ರವನ್ನು ಖ್ಯಾತ ನಿರ್ದೇಶಕ ಕೊರಟಾಲ ಶಿವ ನಿರ್ದೇಶನ ಮಾಡಲಿದ್ದಾರೆಂಬ ಸುದ್ದಿ ಇತ್ತೀಚೆಗಷ್ಟೇ ಹೊರಬಿದ್ದಿತ್ತು. ಅಲ್ಲಿಗೆ ಈ ಹೊಸಾ ಚಿತ್ರದ ಬಗ್ಗೆಯೂ ಭರ್ಜರಿ ನಿರೀಕ್ಷೆಗಳು ಚಾಲೂ ಆದಂತಾಗಿವೆ. ಜ್ಯೂನಿಯರ್ ಎನ್‌ಟಿಆರ್‌ರಂಥಾ ನಟರ ಸಿನಿಮಾವೊಂದು ಶುರುವಾಗುತ್ತದೆಯೆಂದರೆ ಅದರ ಸುತ್ತ ನಾನಾ ಊಹಾಪೋಹಗಳು ಹರಳುಗಟ್ಟಿಕೊಳ್ಳಲಾರಂಭಿಸುತ್ತವೆ. ಇನ್ನೂ ಚಿತ್ರದ ಬಗ್ಗೆ ಏನೆಂದರೆ ಏನೂ ಮಾಹಿತಿಗಳು ಹೊರ ಬೀಳದಿದ್ದರೂ ಕೂಡಾ ಪಾತ್ರವರ್ಗ, ತಾಂತ್ರಿಕ ವರ್ಗದ ಬಗೆಗೆಲ್ಲ ಕಪೋಲಕಲ್ಪಿತ ಸುದ್ದಿಗಳು ಹೊರ ಬೀಳಲಾರಂಭಿಸುತ್ತವೆ. ಇಂಥಾ ಸುದ್ದಿಗಳನ್ನು ಸುಮ್ಮನೆ ದಿಟ್ಟಿಸುತ್ತಿರೋದೇ ಒಂದು ಚೆಂದ. ಆದರೆ ಈ ಸೆಲೆಬ್ರಿಟಿಗಳ ವಿಚಾರದಲ್ಲಿ ಹಾಗಾಗೋದಿಲ್ಲ. ಯಾವುದೇ ಕಲಾವಿದರು ಒಂದು ಚಿತ್ರದ ಭಾಗವಾಗುತ್ತಾರೆಂಬ ಸುದ್ದಿ ಹೊರ ಬಿದ್ದಾಕ್ಷಣ ಮಾಧ್ಯಮದ ಮಂದಿ…
ಗಂಗೂಬಾಯಿ ಕಾಠಿವಾಡಿಯ ಹಿಂದಿದೆ ಸೋನಿ ನೆರಳು! ಈ ಚಿತ್ರ ಆಲಿಯಾ ಭಟ್ ವೃತ್ತಿ ಬದುಕಿನ ದಿಕ್ಕು ದೆಸೆಗಳನ್ನೇ ಬದಲಿಸುತ್ತೆ… ಹಾಗಂತ ಬಾಲಿವುಡ್ ಪಂಡಿತರೆಲ್ಲ ಆರಂಭ ಕಾಲದಲ್ಲಿಯೇ ಭವಿಷ್ಯ ನುಡಿದಿದ್ದರು. ಅಂಥಾದ್ದೊಂದು ಸಂಚಲನಕ್ಕೆ ಕಾರಣವಾಗಿದ್ದದ್ದು ಗಂಗೂಬಾಯಿ ಕಾಠಿವಾಡಿ ಎಂಬ ಚಿತ್ರ. ಆ ಚಿತ್ರ ತಿಂಗಳ ಹಿಂದೆಯೇ ಬಿಡುಗಡೆಯಾಗಿದೆ. ಅದರಲ್ಲಿ ರೆಡ್‌ಲೈಟ್ ಏರಿಯಾದ ವೇಶ್ಯೆಯ ಪಾತ್ರವನ್ನು ಮೈಚಳಿ ಬಿಟ್ಟು ಆವಾಹಿಸಿಕೊಂಡಿದ್ದಾಕೆ ಆಲಿಯಾ ಭಟ್. ಮುಖ್ಯ ನಾಯಕಿಯಾಗಿ ಮಿಂಚುತ್ತಿದ್ದ ಆಲಿಯಾ ಇಂಥಾದ್ದೊಂದು ಪಾತ್ರವನ್ನು ಒಪ್ಪಿಕೊಂಡಿದ್ದೇ ಅಚ್ಚರಿಗೆ ಕಾರಣವಾಗಿತ್ತು. ಆ ರೀತಿಯದ್ದೊಂದು ಪಾತ್ರದ ಮೂಲಕವೇ ಆಲಿಯಾ ಪ್ರೇಕ್ಷಕರ ಪ್ರೀತಿ ಗೆದ್ದಿದ್ದಾಳೆ. ಆಕೆಗೀಗ ಮೆಚ್ಚುಗೆಯ ಮಹಾಪೂರವೇ ಮುತ್ತಿಕೊಳ್ಳುತ್ತಿದೆ. ಇದೀಗ ಗಂಗೂಬಾಯಿ ಕಾಠಿವಾಡಿಯ ಭೂಮಿಕೆಯಲ್ಲಿ ಮತ್ತೊಂದು ಇಂಟರೆಸ್ಟಿಂಗ್ ಸಂಗತಿ ಸದ್ದು ಮಾಡುತ್ತಿದೆ! ಆಲಿಯಾ ಭಟ್ ವೇಶ್ಯೆಯ ಪಾತ್ರದಲ್ಲಿ ನಟಿಸಿರುವ ಈ ಚಿತ್ರ ದೊಡ್ಡ ಮಟ್ಟದಲ್ಲಿ ಯಶ ಕಂಡಿದೆ. ಅದರ ಬೆನ್ನಲ್ಲಿಯೇ ಈ ಚಿತ್ರದಲ್ಲಿನ ಆಲಿಯಾ ಲುಕ್ ಬಗ್ಗೆ ಚರ್ಚೆಗಳು ಶುರುವಾಗಿವೆ. ಕೆಲ ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಒಂದಷ್ಟು…
ಈ ಈಶ್ವರಪ್ಪನಿಗೆ ಅದೇಕೋ ವಿವಾದಗಳನ್ನೆಬ್ಬಿಸದಿದ್ದರೆ ಉಂಡ ಅನ್ನ ಅರಗುವುದಿಲ್ಲ ಅನ್ನಿಸುತ್ತೆ. ಬಾಯಿಗೆ ಬಂದದ್ದನ್ನು ಮಾತಾಡುತ್ತಾ ಹರುಕು ಬಾಯಿ ಈಶ್ವರಪ್ಪ ಎಂದೇ ಖ್ಯಾತರಾಗಿರುವ ಸನ್ಮಾನ್ಯರು, ಇತ್ತೀಚೆಗಷ್ಟೇ ಫಾರ್ಟಿ ಪರ್ಸೆಂಟ್ ಕಮಿಷನ್ ತಿಂದ ಆರೋಪದಲ್ಲಿ ಮಂತ್ರಿಗಿರಿ ಕಳಕೊಂಡು ಮನೆ ಸೇರಿದ್ದರು. ಹಾಗೆ ಸುಮ್ಮನೆ ಮನೆಯೊಳಗಿದ್ದರೆ ಜನ ಮರೆಹು ಹೋಗುತ್ತಾರೆಂದೋ, ನಾಲಿಗೆ ಚಪಲವನ್ನು ಹತ್ತಿಕ್ಕಿಕೊಳ್ಳಲಾಗದೆಯೋ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ. ಅದಕ್ಕೆ ಈಗ ಮತ್ತೆ ದಾಳವಾಗಿರೋದು ಭಗವಾಧ್ವಜ. ಈ ಹಿಂದೆ ಭಗವಾಧ್ವಜವೇ ರಾಷ್ಟ್ರದ ಬಾವುಟವಾಗುತ್ತದೆಂದು ಪುಂಗಿಯೂದಿದ್ದ ಈಶ್ವರಪ್ಪ ಇದೀಗ ಮತ್ತದೇ ಮಾತುಗಳನ್ನಾಡಿದ್ದಾರೆ! ಒಂದಿಲ್ಲೊಂದು ದಿನ ಕೇಸರಿ ಧ್ವಜ ಈ ದೇಶದ ಬಾವುಟವಾಗುತ್ತದೆ. ಅದಕ್ಕೆ ಅದೆಷ್ಟೋ ಶತಮಾನಗಳ ಇಹಿಹಾಸ, ಗೌರವವಿದೆ. ಭವಿಷ್ಯದಲ್ಲಿ ಅದೇ ರಾಷ್ಟ್ರ ಧ್ವಜವಾಗೋದರಲ್ಲಿ ಯಾವ ಸಂದೇಹವೂ ಇಲ್ಲ ಅನ್ನೋದು ಈಶ್ವರಪ್ಪನ ಬಡಬಡಿಕೆಯ ಸಾರಾಂಶ. ಈ ಆಸಾಮಿಗೆ ಅದ್ಯಾವ ದೆವ್ವ ಮೆಟ್ಟಿಕೊಂಡಿದೆಯೋ ಗೊತ್ತಿಲ್ಲ. ಫಾರ್ಟಿ ಪರ್ಸೆಂಟ್ ಕಮೀಷನ್ ದಂಧೆಗೆ ಗುತ್ತಿಗೆದಾರನ ಹೆಣ ಹಾಕಿದ ಗಂಭೀರ ಆರೋಪ ಈತನ ಮೇಲಿದೆ. ಅದಕ್ಕೆಂದೇ ಸಚಿವಗಿರಿ ಕಳೆದುಕೊಂಡಿರುವ ಈಶ್ವರಪ್ಪ ಮಾನ…
ಒಂದಷ್ಟು ಹಿಟ್ ಸಿನಿಮಾಗಳ ಮೂಲಕ ಬಾಲಿವುಡ್ಡಿನಲ್ಲಿ ತನ್ನದೇ ಆದ ಸ್ಥಾನವನ್ನು ಭದ್ರಪಡಿಸಿಕೊಂಡಿರುವಾಕೆ ಕಿಯಾರಾ ಅಡ್ವಾಣಿ. ಆಗಾಗ ಪಕ್ಕಾ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುವ ಕಿಯಾರಾ, ಒಂದೇ ಒಂದು ಕೆಸುವಿನೆಲೆಯನ್ನು ಅಡ್ಡ ಹಿಡಿದುಕೊಂಡು ಬೋಲ್ಡ್ ಆಗಿ ಫೋಟೋ ಶೂಟ್ ಮಾಡಿಸಿಕೊಂಡಿದ್ದೂ ಇದೆ. ಆದರೆ ಸಂದರ್ಶನವೊಂದರಲ್ಲಿ ಆಕೆ ತನ್ನೊಳಗಿನ ಅಸಲೀ ತುಮುಲವನ್ನು ಹೇಳಿಕೊಂಡಿದ್ದಾಳೆ. ತಾನು ಇದುವರೆಗೂ ಹೇಗೇ ಕಾಣಿಸಿಕೊಂಡಿದ್ದರೂ ಕೂಡಾ ಮುಂದಿನ ದಿನಗಳಲ್ಲಿ ಕುಟುಂಬಸ್ಥರೆಲ್ಲ ಒಟ್ಟಿಗೆ ಕೂತು ನೋಡುವ ಚಿತ್ರಗಳೇ ತನ್ನ ಪ್ರಧಾನ ಆದ್ಯತೆ ಎಂದಿದ್ದಾಳೆ. ಕಿಯಾರಾ ಅಡ್ವಾಣಿ ಈ ಮೂಲಕ ತನ್ನೊಳಗಿನ ಪ್ರೌಢಿಮೆಯನ್ನು ಜಾಹೀರು ಮಾಡಿದ್ದಾಳೆ. ಕೆಲ ನಟಿಯರು ಯಶಸ್ಸು ಸಿಗುತ್ತಲೇ ಲಂಗು ಲಗಾಮಿಲ್ಲದಂತಾಡುತ್ತಾರೆ. ಆದರೆ ಪರಿಪೂರ್ಣ ನಟಿಯರು ಮಾತ್ರ ಕಾಲದ ಜೊತೆಗೆ, ಯಶಸ್ವಿನ ಜೊತೆಗೆ ಮಾಗುತ್ತಾ, ಪಕ್ವವಾಗುತ್ತಾ ಸಾಗುತ್ತಾರೆ. ಕಿಯಾರಾ ಕೂಡಾ ಆ ಹಾದಿಯಲ್ಲಿರುವಂತಿದೆ. ಸಂದರ್ಶನವೊಂದರಲ್ಲಿ ಆಕೆ ಅಂಥಾದ್ದೊಂದು ಸ್ಪಷ್ಟತೆಯೊಂದಿಗೆ ಮಾತಾಡುತ್ತಾ ಅಭಿಮಾನಿಗಳ ಮನ ಗೆದ್ದಿದ್ದಾಳೆ. ಕಿಯಾರಾ ಅಡ್ವಾಣಿ ಹಾಸ್ಯ ಪ್ರಧಾನ ಚಿತ್ರವಾದ ಫಗ್ಲಿಯ ಮೂಲಕವೇ ಬಾಲಿವುಡ್ಡಿಗೆ ಪ-ಆದಾರ್ಪಣೆ ಮಾಡಿದ್ದಾಕೆ. ಆ ಮೊದಲ…
ಈ ಸಾವೆಂಬುದು ಯಾರಿಗೆ, ಯಾವಾಗ, ಯಾವ ರೂಪದಲ್ಲಿ ಬಂದೆರಗುತ್ತದೆಂದು ಹೇಳಲು ಬರುವುದಿಲ್ಲ. ಕೆವಲೊಮ್ಮೆ ಕೆಲವೇ ಕೆಲ ಮಂದಿಗೆ ಮಾತ್ರ ತಾವು ಧ್ಯಾನದಂತೆ ಮಾಡುವ ಕಾಯಕದಲ್ಲಿಯೇ ಕಣ್ಮುಚ್ಚುವಂಥಾ ಅವಕಾಶ ಸಿಕ್ಕಿದೆ. ಕೇರಳದ ತುಂಬೆಲ್ಲ ಆರ್ಕೇಸ್ಟ್ರಾಗಳಲ್ಲಿ ಹಾಡುತ್ತಾ ಹೆಚ್ಚು ಪ್ರಸಿದ್ಧಿ ಪಡೆದುಕೊಂಡಿದ್ದ ಪ್ರಖ್ಯಾತ ಗಾಯಕ ಎಡವಾ ಬಶೀರ್ ಎಂಬವರಿಗೂ ಅಂಥಾದ್ದೇ ಸಾವು ಬಂದಿದೆ. ಕೇರಳದ ಅಲಪ್ಪುಳ ಜಿಲ್ಲೆಯಲ್ಲಿ ಮೊನ್ನೆ ದಿನ ಆರ್ಕೇಸ್ಟ್ರದ ಗೋಲ್ಡನ್ ಜ್ಯುಬಿಲಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಬಶೀರ್ ಖ್ಯಾತ ಗಾಯಕ ಜೇಸುದಾಸ್ ಹಾಡಿದ್ದ ಹಿಂದಿ ಹಾಡನ್ನು ತನ್ಮಯರಾಗಿ ಹಾಡುತ್ತಿದ್ದರು. ಈ ವೇಳೆಯಲ್ಲಿ ನೋಡ ನೋಡುತ್ತಲೇ ಅವರು ನಿತ್ರಾಣರಾಗಿದ್ದಾರೆ. ಹಾಡನ್ನು ಹಾಡುತ್ತಲೇ ಹತ್ತಿರದಲ್ಲಿ ಕುಳಿತುಕೊಳ್ಳಲು ಯತ್ನಿಸಿದ್ದಾರೆ. ಆದರೆ ಕುಸಿದು ಬಿದ್ದಿದ್ದಾರೆ. ಅವರು ಜೀವನದ ಭಾಗವೆಂದುಕೊಂಡಿದ್ದ ಮೌತ್ ಪೀಸ್ ಕೂಡಾ ಕೈಜಾರಿ ಕೆಳ ಬಿದ್ದಿದೆ. ಇಷ್ಟಾಗುತ್ತಲೇ ನೆರೆದಿದ್ದ ಪ್ರೇಕ್ಷಕರಿಗೆ, ಆಯೋಜಕರಿಗೆ ಅನಾಹುತದ ಅರಿವಾಗಿದೆ. ಆನರೆಲ್ಲ ಕೂಡಲೆ ನುಗ್ಗಿ ಬಂದು ಬಶೀರ್ ಅವರಿಗೆ ಪ್ರಥಮ ಚಿಕಿತ್ಸೆ ಕೊಟ್ಟು ನಂತರ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ…
ಬಿಜೆಪಿ ಪಕ್ಷ ನರೇಂದ್ರ ಮೋದಿ ಸಾರಥ್ಯದೊಂದಿಗೆ ಅಧಿಕಾರ ಕೇಂದ್ರಕ್ಕೆ ಬಂದಾಗ ಈ ನೆಲದ ಮಂದಿಗೆ ಬೇರೆಯದ್ದೇ ರೀತಿಯ ನಿರೀಕ್ಷೆಗಳಿದ್ದವು. ಇನ್ನೇನು ಕೆಲವೇ ದಿನಗಳಲ್ಲಿ ಅಚ್ಛೇದಿನ್ ಎಂಬುದು ಮನೆಬಾಗಿಲಿಗೆ ಬಂದು ನಿಂತುಬಿಡುತ್ತದೆ ಎಂಬಂತೆ ಅನೇಕ ಅಮಾಯಕರು ನಂಬಿಕೊಂಡಿದ್ದರು. ಆದರೆ ಮೋದಿ ಸಾರಥ್ಯದ ಸರ್ಕಾರ ಸಿಕ್ಕ ಅಧಿಕಾರವನ್ನು ಮಂಕುಬೂದಿ ಎರಚಲು ಬಳಸಿಕೊಂಡು ಮುಂದುವರೆಯುತ್ತಿದೆ ಎಂಬ ಕುದಿತ ಪ್ರಜ್ಞಾವಂತರಲ್ಲಿದೆ. ಈ ಕಾರಣದಿಂದಲೇ ಇದೀಗ ವಿಪಕ್ಷದ ಮಂದಿಯ ಕಟು ಟೀಕೆಗಳನ್ನು ಎದುರಿಸುವ ಸಂದರ್ಭ ಮೋದಿ ಸರ್ಕಾರದ ಮುಂದಿದೆ. ಇದೀಗ ಛತ್ತೀಸ್‌ಘಡದ ಮುಖ್ಯಮಂತ್ರಿ ಭೂಪೇಶ್ ಬಘೇಲಾ ಬಿಜೆಪಿ ವಿರುದ್ಧ ತೀಕ್ಣವಾಗಿಯೇ ಹರಿ ಹಾಯ್ದಿದ್ದಾರೆ. ಈ ಬಿಜೆಪಿ ಮಂದಿಗೆ ಕೋಮುವಾದ ಮತ್ತು ಅದರ ಸುತ್ತಲಿನ ವಿಚಾರವನ್ನು ಬಿಟ್ಟರೆ ಮಾತಾಡಲು ಬೇರೆ ಟಾಪಿಕ್ಕೇ ಇಲ್ಲ ಅಂದಿದ್ದಾರೆ. ಬಿಜೆಪಿ ನಾಯಕರು ಕೋಮುವಾದ ಮತ್ತು ಧಾರ್ಮಿಕ ಮತಾಂತರಗಳ ಬಗ್ಗೆಯಷ್ಟೇ ಪದೇ ಪದೆ ಮಾತಾಡುತ್ತಾರೆ. ಅವರು ಬೇರ‍್ಯಾವ ವಿಚಾರಗಳನ್ನೂ ಮಂಡಿಸಲಾಗದಷ್ಟು ಬರಿದಾಗಿದ್ದಾರೆಂದೂ ಬಘೇಲಾ ಹರಿಹಾಯ್ದಿದ್ದಾರೆ. ಇದೇ ಸಂದರ್ಭದಲ್ಲಿ ಬಘೇಲಾ ತಮ್ಮ ರಾಜ್ಯದಲ್ಲಿ ಮತಾಂತರದ ಬಗ್ಗೆ ತಾವು…
ಪಾಕಿಸ್ತಾನವೀಗ ಅಕ್ಷರಶಃ ಬಯೋತ್ಪಾದನೆಯ ನೆಲೆಯಾಗಿ ಬದಲಾಗಿದೆ. ಯಾವ ನೆಲದಲ್ಲಿ ಮತೀಯ ವಾದ ಉಲ್ಬಣಿಸಿ, ಮೂಲಭೂತವಾದ ವಿಜೃಂಭಿಸುತ್ತದೋ, ಆದೇಶವನ್ನು ಖುದ್ದು ದೇವರೇ ಬಂದರೂ ಕಾಪಾಡಲು ಸಾಧ್ಯವಿಲ್ಲ. ಜನರ ಗಮನವೆಲ್ಲ ಮತೀಯವಾದದತ್ತ ಹರಿದಿರುವಾಗಲೇ ಆಳೋ ಮಂದಿ ಲೂಟಿ ಹೊಡೆದು ತೆಪ್ಪಗಿರುತ್ತಾರೆ. ಪರಿಣಾಮವಾಗಿ ಆರ್ಥಿಕತೆ ಕುಸಿದು ಜನರ ಬದುಕು ಅದಃಪಾತಾಳ ತಲುಪಿಕೊಳ್ಳುತ್ತದೆ. ಈ ಮಾತಿಗೆ ತಾಜಾ ಉದಾಹರಣೆಯಂತಿರುವ ರಾಷ್ಟ್ರ ಪಾಕಿಸ್ತಾನ. ಈ ಕಾರಣದಿಂದಲೇ ಅಲ್ಲಿ ಈವತ್ತಿಗೆ ಬಡತನ ತಾಂಡವವವಾಡುತ್ತಿದೆ. ಅದರ ಬೇಗೆಗೆ ಸಿಕ್ಕ ಮನುಷ್ಯ ರಕ್ಕಸನಾಗುತ್ತಿದ್ದಾನೆ. ಈ ಮಾತಿಗೆ ಸಾಕ್ಷಿಯಂಥಾ ಘಟನೆಯೊಂದು ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ನಡೆದಿದೆ. ಇಲ್ಲಿನ ಆಸಾಮಿಯೊಬ್ಬ ಮೈ ತುಂಬಾ ಸಾಲ ಮಾಡಿಕೊಂಡು ಮಗಳನ್ನೇ ಸಾಲ ಕೊಟ್ಟವನಿಗೆ ಮಾರಲು ಮುಂದಾಗಿದ್ದ. ಈ ದಾರುಣಕ್ಕೆ ತಡೆಯಾಗಿ ನಿಂತ ಮಡದಿಯನ್ನೇ ಕೊಂದು ಕೆಡವಿದ್ದಾನೆ. ಇಂಥಾದ್ದೊಂದು ಅಮಾನುಷ ಕೃತ್ಯವೆಸಗಿದಾತ ಜುಲ್ಫೀಕರ್. ಸಂಧ್ ಪ್ರಾಂತ್ಯದಲ್ಲಿ ಹೆಂಡತಿ ಮತ್ತು ಮಕ್ಕಳೊಂದಿಗೆ ಬದುಕುತ್ತಿದ್ದ ಈತ ಮೈ ತುಂಬಾ ಸಾಲ ಮಾಡಿಕೊಂಡಿದ್ದ. ಅದರಲ್ಲಿಯೂ ವ್ಯಕ್ತಿಯೊಬ್ಬನಿಂದ ಒಂದು ಲಕ್ಷ ರೂಪಾಯಿ ಸಾಲ ಇಸಿದುಕೊಂಡಿದ್ದ. ಸಾಲ…
ಒಳ್ಳೆಯದ್ದು ಸಂಭವಿಸಿದೆ ಅಂದರೇಕೆ ವರ್ಮಾ? ಖ್ಯಾತ ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ಅನ್ನಿಸಿದ್ದನ್ನು ಯಾವುದೇ ಫಿಲ್ಟರ್ ಇಲ್ಲದೆ ಹೇಳೋದರಲ್ಲಿ ಭಾರೀ ಪ್ರಸಿದ್ಧರು. ಕೆಲವೊಮ್ಮೆ ಅವರ ನೇರವಂತಿಕೆಯ ಮಾತುಗಳು ಬೆಂಕಿ ಹಚ್ಚುತ್ತವೆ. ಮತ್ತೆ ಕೆಲವೊಮ್ಮೆ ಹೊಸಾ ದಿಕ್ಕಿನಲ್ಲಿ ಆಲೋಚನೆಗೆ ಹಚ್ಚುತ್ತವೆ. ಮೇಲು ನೋಟಕ್ಕೆ ಪಕ್ಷಪಾತದಂತೆ ಕಂಡರೂ, ಆಂತರ್ಯದಲ್ಲಿ ಏನೋ ಅಡಗಿರುವಂತೆಯೂ ವರ್ಮಾ ಒಮ್ಮೊಮ್ಮೆ ಮಾತಾಡುತ್ತಾರೆ. ಇದೀಗ ಅವರ ಕಡೆಯಿಂದ ತೂರಿ ಬಂದಿರೋದು ಅಂಥಾದ್ದೇ ಮಾತು. ಅದಕ್ಕೆ ನೆಪವಾಗಿರುವುದು ಶಾರೂಕ್ ಖಾನ್ ಪುತ್ರನಿಗೆ ಡ್ರಗ್ಸ್ ಕೇಸಿನಲ್ಲಿ ಕ್ಲೀನ್ ಚಿಟ್ ಸಿಕ್ಕಿರೋ ವಿಚಾರ. ಮುಂಬೈನ ಕ್ರೂಸ್ ಡ್ರಗ್ಸ್ ಕೇಸ್ ವಿಚಾರದಲ್ಲಿ ಶಾರೂಖ್ ಖಾನ್ ಪುತ್ರ ಆರ್ಯಾನ್ ಖಾನ್ ಬಂಧಿತನಾಗಿದ್ದ. ಆತನನ್ನು ಬಲೆಗೆ ಕೆಡವಿಕೊಂಡಿದ್ದ ಎನ್‌ಸಿಬಿ ಅಧಿಕಾರಿಗಳು ನಾನಾ ದಿಕ್ಕಿನಲ್ಲಿ ತಿಂಗಳುಗಟ್ಟಲೆ ತನಿಖೆ ನಡೆಸಿದ್ದರು. ಈ ಹೊತ್ತಿನಲ್ಲಿ ಆರ್ಯಾನ್ ಬಗ್ಗೆ ನಾನಾ ಊಹಾಪೋಹಗಳು, ಅಂತೆಕಂತೆಗಳು ಸರಿದಾಡಿದ್ದವು. ಆದರೀಗ ಆತನಿಗೆ ಕ್ಲೀನ್ ಚಿಟ್ ಸಿಕ್ಕಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವರ್ಮಾ, ಇದು ಎನ್‌ಸಿಬಿಯ ಅಸಾಮರ್ಥ್ಯ ಮತ್ತು ವೈಫಲ್ಯವನ್ನು ಸಾರುತ್ತದೆ…
ಇಡೀ ವಿಶ್ವವೇ ಇದೀಗ ಆಧುನೀಕರಣದತ್ತ ವಾಲಿಕೊಂಡಿದೆ. ಎಲ್ಲರೂ ತಂತಮ್ಮ ಗುರಿಗಳತ್ತ ನಾಗಾಲೋಟ ಆರಂಭಿಸಿರುವ ಈ ದಿನಮಾನದಲ್ಲಿ ಪ್ರಕೃತಿಯ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದೆ. ಅದೆಷ್ಟೋ ಕಾಡುಗಳು ಮನುಷ್ಯರ ಶೋಕಿಗೆ ಬಲಿಯಾಗಿವೆ. ಯಾವುದೋ ಮತ್ತಿನಲ್ಲಿರುವ ಮಂದಿಗೆ ತಮ್ಮ ನೆಮ್ಮದಿಯಲ್ಲಿ ಕಾಡು, ಮೇಡು, ಪ್ರಕೃತಿಯ ಪಾಲೆಷ್ಟಿದೆ ಎಂಬ ಅರಿವೇ ಇಲ್ಲ. ಹಾಗೆ ನೋಡಿದರೆ ಇಂಥಾ ದೌರ್ಜನ್ಯಕ್ಕೆ ಅದೆಷ್ಟೋ ವರ್ಷಗಳ ಇತಿಹಾಸವಿದೆ. ಇಂಥಾದ್ದರ ನಡುವೆಯೂ ಒಂದಷ್ಟು ಮಂದಿ ಪ್ರಕೃತಿಯೊಂದಿಗೆ ಅವಿನಾಭಾವ ಸಂಬಂಧವಿಟ್ಟುಕೊಂಡಿದ್ದಾರೆ. ಅಂಥಾ ಮನಸುಗಳೇ ವಿಶ್ವದಲ್ಲಿಯೇ ಅತೀ ಹೆಚ್ಚು ವಯಸ್ಸಿನ ಪುರಾತನ ಮರವೊಂದನ್ನು ಪತ್ತೆಹಚ್ಚಿ ಜಗತ್ತಿಗೆ ಪರಿಚಯಿಸಿದ್ದಾರೆ. ಹೀಗೆ ವಿಶ್ವದಲ್ಲಿಯೇ ಅತ್ಯಂತ ಹಿರಿಯ ಮರವಾಗಿ ಗುರುತಿಸಿಕೊಂಡಿರುವ ಈ ಮರ ದೂರದ ಚಿಲಿ ದೇಶದಲ್ಲಿದೆ. ಈ ಹಳೇ ಮರವನ್ನು ಆಲರ್ಸ್ ಪ್ರಬೇಧದ್ದೆಂದು ಗುರುತಿಸಲಾಗಿದೆ. ಇದರ ವಯಸ್ಸು ಸರಿಸುಮಾರು ೫.೫೦೦ ವರ್ಷವೆಂದು ತಜ್ಞರು ಗುರುತಿಸಿದ್ದಾರೆ. ಈ ಮರ ಫಿಟ್ರೋಝಾ ಎಂಬ ಪ್ರಬೇಧಕ್ಕೆ ಸೇರಿದ ಸಸ್ಯ ಸಂಕುಲದ್ದು. ಈ ಜಾತಿಯ ಮರಗಳು ಅತೀ ಹೆಚ್ಚು ವರ್ಷಗಳ ಕಾಲ ಬದುಕುವ ಗುಣ…