Author: Santhosh Bagilagadde

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

ಮುಂಗಾರಿನ ಹೊಸ್ತಿಲಲ್ಲಿ ಕನ್ನಡ ಚಿತ್ರರಂಗದ ಪಾಲಿಗೆ ನವ ಮನ್ವಂತರವಾಗುವಂಥಾ ಪಲ್ಲಟಗಳು ಸ್ಪಷ್ಟವಾಗಿಯೇ ಜರುಗುತ್ತಿವೆ. ಬಹುಶಃ ಇದು ಕೊರೋನಾ ಕಂಟಕದ ತರುವಾಯ ನಡೆಯುತ್ತಿರುವ ಮೊದಲ ಸಮ್ಮೋಹಕ ವಿದ್ಯಮಾನ. ಸಕಾರಾತ್ಮಕ ವಾತಾವರಣ ಹರಳುಗಟ್ಟುತ್ತಿರುವ ಈ ಸಂದರ್ಭದಲ್ಲಿ ಒಂದಷ್ಟು ಭರವಸೆಯ ಚಿತ್ರಗಳು ಬಿಡುಗಡೆಗಾಗಿ ಸಾಲುಗಟ್ಟಿ ನಿಂತಿವೆ. ವಿಕ್ರಂ ಪ್ರಭು ನಿರ್ದೇಶನದ ಚೊಚ್ಚಲ ಚಿತ್ರವಾದ ವೆಡ್ಡಿಂಗ್ ಗಿಫ್ಟ್ ಕೂಡಾ ನಿಸ್ಸಂದೇಹವಾಗಿ ಆ ಸಾಲಿನಲ್ಲಿ ನಿಲ್ಲುತ್ತದೆ. ಈಗಗಲೇ ನಾನಾ ದಿಕ್ಕಿನಿಂದ ಸುದ್ದಿಯಾಗುತ್ತಿರುವ ಈ ಚಿತ್ರ ಟೀಸರ್ ಇದೀಗ ಬಿಡುಗಡೆಗೊಂಡಿದೆ. ಟೀಸರ್ ಮೂಲಕವೇ ಕಥೆಯ ಸುಳಿವು ನೀಡಿ, ಚಿತ್ರದ ಬಗ್ಗೆ ಅಗಾಧ ಪ್ರಮಾಣದಲ್ಲಿ ನಿರೀಕ್ಷೆ ಮೂಡಿಕೊಳ್ಳುವಂತೆ ಮಾಡೋದೊಂದು ಸಾಹಸ. ಈ ಚಿತ್ರದ ನಿರ್ದೇಶಕ ಕಂ ನಿರ್ಮಾಪಕ ವಿಕ್ರಂ ಪ್ರಭು ಅದನ್ನು ಲೀಲಾಜಾಲವಾಗಿಯೇ ಜೈಸಿಕೊಂಡಿದ್ದಾರೆ. ಈ ಸಮಾಜವನ್ನು ಕಾಡುತ್ತಿರುವ, ತಣ್ಣಗೆ ಕೊರೆಯುತ್ತಿರುವಂಥಾ ಘನಗಂಭೀರ ವಿಚಾರವೊಂದನ್ನು ವಿಕ್ರಂ ಇಲ್ಲಿ ಕಥೆಯಾಗಿಸಿದಂತಿದೆ. ಆದರೆ ಅದೆಲ್ಲವನ್ನೂ ಪಕ್ಕಾ ಕಮರ್ಶಿಯಲ್ ಹಾದಿಯಲ್ಲಿ ಕೊಂಡೊಯ್ದಿರುವ ಅವರು ಪಕ್ಕಾ ಮನೋರಂಜನಾತ್ಮಕ ಚಿತ್ರವಾಗಿ ವೆಡ್ಡಿಂಗ್ ಗಿಫ್ಟನ್ನು ಅಣಿಗೊಳಿಸಿದ್ದಾರಂತೆ. ನಮ್ಮದು ಪುರುಷ ಪ್ರಧಾನವಾದ…

Read More

ಕಾರಿನ ಮೇಲೆ ಕಕ್ಕ ಮಾಡುತ್ತಿದ್ದ ಹಕ್ಕಿಗಳಿಗೆ ಆ ಜನ ಏನು ಮಾಡಿದ್ದಾರೆ ಗೊತ್ತಾ? ತಾನು ಮಾತ್ರವೇ ಸದಾ ಕಾಲವೂ ಯಾವುದೇ ರಿಸ್ಕಿಲ್ಲದೆ ಸೇಫ್ ಆಗಿರಬೇಕೆಂಬುದು ಮನುಷ್ಯನ ಜಾಯಮಾನ. ಇಂಥಾ ಮನಸ್ಥಿತಿಯೇ ನಮ್ಮ ಸುತ್ತಾ ಸ್ವಚ್ಚಂದವಾಗಿ ಜೀವಿಸುತ್ತಿದ್ದ ಕೋಟ್ಯಂತರ ಜೀವರಾಶಿಗೆ ಕಂಟಕವಾಗಿಯೂ ಮಾರ್ಪಟ್ಟಿದೆ. ಬೇರೆಲ್ಲ ಅಂಕ ಅಂಶಗಳ ಕಥೆಯೇನೋ ಗೊತ್ತಿಲ್ಲ. ಆದರೆ ಮನುಷ್ಯನ ಸ್ವೇಚ್ಛೆ ಮತ್ತು ಸ್ವಾರ್ಥಕ್ಕೆ ಬಲಿಯಾಗುತ್ತಿರೋ ಜೀವರಾಶಿಗಳಲ್ಲಿ ಹಕ್ಕಿಗಳು ಮುಂಚೂಣಿಯಲ್ಲಿವೆ! ಇದೀಗ ಇಂಗ್ಲೆಂಡಿನ ಪ್ರದೇಶವೊಂದರ ಮಂದಿ ತಂತಮ್ಮ ಕಾರುಗಳನ್ನು ಸೇಫ್ ಮಾಡೋ ಉದ್ದೇಶದಿಂದ ಹಕ್ಕಿಗಳಿಗೆ ರಾತ್ರಿ ವಿಶ್ರಾತಿ ಪಡೆಯಲೂ ಒಂದು ನೆಲೆಯಿಲ್ಲದಂತೆ ಮಾಡಿದ್ದಾರೆ. ಈ ವಿಚಾರವೀಗ ಅಂತಾರಾಷ್ಟ್ರೀಯ ಪ್ರಾಣಿದಯಾ ಸಂಘಗಳ ಗಮನಕ್ಕೂ ಬಂದು ವಿಶ್ವಾಧ್ಯಂತ ಚರ್ಚೆ ಹುಟ್ಟು ಹಾಕಿದೆ. ಇಂಗ್ಲೆಂಡ್‌ನ ಬ್ರಿಸ್ಟೋಲ್ ಎಂಬ ಪ್ರದೇಶದಲ್ಲಿ ನಮ್ಮ ಬೆಂಗಳೂರಿನಂಥಾ ಮಹಾನಗರಗಳಲ್ಲಿರುವಂಥಾದ್ದೇ ಸಮಸ್ಯೆ ಒಂದಿತ್ತು. ಮನೆಯೆದುರಿನ ಮರದ ಕೆಳಗೆ ಅಥವ ಪಾರ್ಕಿಂಗ್ ಏರಿಯಾದಲ್ಲಿ ಕಾರು ನಿಲ್ಲಿಸಿದರೆ ಮಾರನೇ ದಿನ ಬೆಳಗ್ಗಿನ ಹೊತ್ತಿಗೆಲ್ಲಾ ಕಾರೆಲ್ಲವೂ ಹಕ್ಕಿ ಪಿಕ್ಕೆಯಿಂದಲೇ ತುಂಬಿ ಹೋಗುತ್ತಿತ್ತು. ದಿನಾ ಬೆಳಗ್ಗೆ ಕಚೇರಿಗೆ…

Read More

ಮಡದಿ ಭಾರವಾಗಿದ್ದಷ್ಟೂ ಬಹುಮಾನಕ್ಕೆ ಕಿಮ್ಮತ್ತು! ನಮ್ಮ ದೇಶಕ್ಕೂ, ಇತರೇ ದೇಶಗಳಿಗೂ ನಾನಾ ವಿಚಾರಗಳಲ್ಲಿ ಸಾಮ್ಯತೆಗಳಿದ್ದಾವೆ. ನಮ್ಮಲ್ಲಿ ಮನರಂಜನೆಗೆಂದು ಆಡುವ, ಕೆಲ ಪ್ರದೇಶಗಳಿಗೆ ಮಾತ್ರವೇ ಸೀಮಿತವಾದ ಕೆಲ ಆಟಗಳು ಕೆಲ ದೇಶಗಳಲ್ಲಿ ಭಲೇ ಪ್ರಸಿದ್ಧಿ ಪಡೆದುಕೊಂಡಿವೆ. ಕೆಲವಂತೂ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಖ್ಯಾತಿ ಗಳಿಸಿಕೊಂಡಿವೆ. ಅದೆಲ್ಲದ್ರಲ್ಲಿ ಭಾರೀ ಖ್ಯಾತಿ ಗಳಿಸಿಕೊಂಡಿರೋದು ಹೆಂಡತಿಯನ್ನು ಎತ್ತಿಕೊಂಡು ಓಡೋ ಓಟ. ನಮ್ಮಲ್ಲಿ ಸ್ಥಳೀಯವಾಗಿ ಕೆಲವೆಡೆಗಳಲ್ಲಿ ಈ ಕ್ರೀಡೆ ಚಾಲ್ತಿಯಲ್ಲಿದೆ. ಆದ್ರೆ ಕೆಲ ಗಂಡಂದಿರು ಬಹುಮಾನದ ಆಸೆಯನ್ನು ಅದುಮಿಟ್ಟುಕೊಂಡು ಈ ಅಪಾಯಕಾರಿ ಆಟದಿಂದ ದೂರವುಳಿದು ಬಿಡ್ತಾರೆ. ಅದೊಂದು ದೇಶದಲ್ಲಿ ಮಾತ್ರ ಅಲ್ಲಿನ ಗಂಡಂದಿರ ಪಾಲಿಗಿದು ಫೇವರಿಟ್ ಗೇಮ್. ಅಂದಹಾಗೆ, ಇಂಥಾದ್ದೊಂದು ಕ್ರೀಡೆ ರಾಜ ಮರ್ಯಾದೆಯೊಂದಿಗೆ ಚಾಲ್ತಿಯಲ್ಲಿರೋದು ಫಿನ್‌ಲ್ಯಾಂಡಿನಲ್ಲಿ. ಇಲ್ಲಿನ ಸೊಂಕಾಜಾರ್ವಿ ಎಂಬ ಪ್ರದೇಶದಲ್ಲಿ ಪ್ರತೀ ವರ್ಷ ಈ ಕ್ರೀಡೆ ನಡೆಯುತ್ತೆ. ಇದರಲ್ಲಿ ಪಾಲ್ಗೊಳ್ಳದು ಕೇವಲ ಫಿನ್ಲ್ಯಾಡಿನಿಂದ ಮಾತ್ರವಲ್ಲದೇ ಬೇರೆ ದೇಶಗಳಿಂದಲೂ ದಂಪತಿಗಳು ಆಗಮಿಸ್ತಾರೆ. ಗಂಡಂದಿರೆಲ್ಲ ತಂತಮ್ಮ ಹೆಂಡತಿಯರನ್ನ ಎತ್ತಿಕೊಂಡು ಓಡಿ ಸಂಬ್ರಮಿಸ್ತಾರೆ. ವಿಶೇಷ ಅಂದ್ರೆ, ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಗಂಡಂದಿರು…

Read More

ನಮ್ಮದು ಕೆಲವಾರು ಚಿತ್ರವಿಚಿತ್ರ ನಂಬಿಕೆಗಳು, ಆಚರಣೆಗಳು ಉಸಿರಾಗಿರೋ ದೇಶ. ಹುಡುಕುತ್ತಾ ಹೋದ್ರೆ ಅಂಥಾ ಸಾವಿರ ಆಚರಣೆಗಳು, ಬದುಕಿನೊಂದಿಗೆ ಹೊಸೆದುಕೊಂಡಿರೋ ಆಚರಣೆಗಳು ಸಿಕ್ಕಾವು. ಆದ್ರೆ ಆಧುನಿಕತೆಯ ಭರಾಟೆಯಲ್ಲಿರೋ ನಾವೆಲ್ಲ ಎಲ್ಲವನ್ನೂ ಮೂಢನಂಬಿಕೆಯ ಮೂಟೆಯೊಳಗೆ ತುರುಕಿ ಮತ್ಯಾವುದರತ್ತಲೋ ಕೈಚಾಚಿ ಹೊರಟು ಬಿಡ್ತೇವೆ. ನಾವು ನಮ್ಮಲ್ಲಿನ ಕೆಲ ನಂಬಿಕೆಗಳನ್ನ ಮೂಢ ನಂಬಿಕೆ ಅಂತೇವೆ. ನಮ್ಮಲ್ಲಿ ಮಾತ್ರವೇ ಇಂಥಾದ್ದೆಲ್ಲ ಇರೋದೇನೋ ಎಂಬಂತೆ ತಕಾರು ತೆಗೀತೇವೆ. ಆದ್ರೆ ಅದೆಲ್ಲವನ್ನೂ ಮೀರಿಸುವಂಥಾ ಚಿತ್ರವಿಚಿತ್ರವಾದ ನಂಬಿಕೆ, ಆಚರಣೆಗಳು ಆಧುನಿಕತೆಗೆ ಒಗ್ಗಿಕೊಂಡ ಮುಂದುವರೆದ ದೇಶಗಳಲ್ಲಿಯೂ ಇದೆ. ಬೇರೆಲ್ಲ ಹಾಗಿರಲಿ, ಮದುವೆ ವಿಚಾರದಲ್ಲಿ ಕೆಲ ದೇಶಗಳಲ್ಲಿರೋ ರೀತಿ ರಿವಾಜುಗಳನ್ನ ನೋಡಿದ್ರೆ ಯಾರೇ ಆದ್ರೂ ಕಂಗಾಲಾಗ್ಬೇಕಾಗುತ್ತೆ. ನಮ್ಮಲ್ಲಿ ಮದುವೆ ಅನ್ನೋದೊಂದು ಮಹತ್ವದ ಘಟ್ಟ ಅಂತಲೇ ಬಿಂಬಿಸಲ್ಪಟ್ಟಿದೆ. ಏನಾಗದೇ ಹೋದ್ರೂ ಮದ್ವೆ ಮಾತ್ರ ಅಚ್ಚುಕಟ್ಟಾಗಿ, ಸರಿಯಾದ ವಯಸ್ಸಿಗೆ ಆಗಲೇ ಬೇಕನ್ನೋ ಮನಃಸ್ಥಿತಿಯೂ ಇದೆ. ಒಂದು ಪ್ರಾಯ ಕ್ರಾಸ್ ಆಗುತ್ತಲೇ ಹುಡುಗ, ಹುಡುಗಿಗೆ ಹಿರೀಕರಿಂದ ಪ್ರಶ್ನೆಗಳು ಶುರುವಾಗುತ್ವೆ. ಕೆಲವರಿಗೆ ಧಾರಾಳವಾಗಿ ಮನೆಮಂದಿಯಿಂದ ಉಗಿತದ ಅಭ್ಯಂಜನವೂ ಆಗಬಹುದು. ಅದಕ್ಕೂ ಕ್ಯಾರೇ…

Read More

ಹುಷಾರು ನಿಮಗೆ ಗೊತ್ತಿಲ್ಲದೆ ನಿಮ್ಮೊಳಗೂ ಅಡಗಿರಬಹುದು ಈ ರೋಗ! ಯಾವುದನ್ನೇ ಆದ್ರೂ ಆಳವಾಗಿ ಹಚ್ಚಿಕೊಳ್ತಾ ಹೋದಂತೆ ಅದೊಂದು ಕಾಯಿಲೆಯಾಗಿ ಬೇರಿಳಿಸೋ ಅಪಾಯವೇ ಹೆಚ್ಚು. ಕೆಲವೊಮ್ಮೆ ನಾವು ಮಾಮೂಲು ಅಂದುಕೊಳ್ಳೋ ಅದೆಷ್ಟೋ ಮಾನಸಿಕ ಪಲ್ಲಟಗಳು ನಮ್ಮನ್ನೇ ಹಿಂಸೆಗೀಡುಮಾಡೋ ಅಪಾಯವಿರುತ್ತೆ. ನಿಮಗೆ ಅಚ್ಚರಿಯಾದೀತು, ಆದ್ರೆ ಸಿನಿಮಾ, ಕ್ರೀಡೆ ಸೇರಿದಂತೆ ನೀವ್ಯಾರನ್ನಾದ್ರೂ ಅಪಾರವಾಗಿ ಹಚ್ಚಿಕೊಂಡ್ರೆ ಅದೂ ಕೂಡಾ ಒಂದು ಮಾನಸಿಕ ವ್ಯಾಧಿಯಾಗಿ ಮಾರ್ಪಾಡಾಗಬಹುದು. ಇದು ವಿಚಿತ್ರವಾದ್ರೂ ಸತ್ಯ. ವಿಶ್ವದಲ್ಲಿ ಅದೆಷ್ಟೋ ಮಂದಿ ಇಂಥಾದ್ದೊಂದು ಹೇಳಿಕೊಳ್ಳಲಾರದ ಕಾಯಿಲೆಯಿಂದ ಪರಿತಪಿಸ್ತಿದ್ದಾರೆ. ಸಾಮಾನ್ಯವಾಗಿ ಸಿನಿಮಾ ತಾರೆಯರ ಬಗ್ಗೆ ವಿಪರೀತ ಅಭಿಮಾನವಿರುತ್ತೆ. ಸಿನಿಮಾಗಳಲ್ಲಿ ಅಂಥವ್ರ ಅಭಿನಯ ನೋಡಿ ಮೆಚ್ಚಿಕೊಳ್ಳೋದು, ಅವರನ್ನೊಮ್ಮೆ ಭೇಟಿಯಾಗಬೇಕಂತ ಹಂಬಲಿಸೋದೆಲ್ಲ ಮಾಮೂಲಿ. ಆದ್ರೆ ಅದನ್ನ ಮೀರಿದ ಮತ್ತೊಂದು ಹಂತವಿದೆ. ಅದು ಸೀರಿಯಸ್ಸಾಗಿ ಅಂಥಾ ತಾರೆಯರೊಂದಿಗೆ ಲವ್ವಲ್ಲಿ ಬೀಳೋ ಹಂತ. ನೀವೇನಾದ್ರು ಆ ಘಟ್ಟ ತಲುಪಿಕೊಂಡಿದ್ದೀರಾದ್ರೆ ಕೊಂಚ ಯೋಚಿಸಿ ಅದ್ರಿಂದ ಹೊರ ಬನ್ನಿ. ಯಾಕಂದ್ರೆ ಅದೊಂದು ಭ್ರಾಮಕ ಕಾಯಿಲೆ! ಇಂಥಾ ಕಾಯಿಲೆಗೆ ಮನೋ ವೈದ್ಯರು ಎರಟೋಮೇನಿಯಾ ಎಂಬ ಹೆಸರಿಟ್ಟಿದ್ದಾರೆ. ಅದೇನಾದ್ರೂ…

Read More

ಹುಡುಗೀರೇ ಹುಷಾರ್… ಅಲ್ಲಿ ವಂಚಕರು, ಕಾಮುಕರಿದ್ದಾರೆ! ಮ್ಯಾಟ್ರಿಮೊನಿ ಹೆಸರಲ್ಲಿ ಎಂತೆಂಥಾ ದಂಧೆಗಳು ನಡೆದಿವೆ ಗೊತ್ತಾ? ಇದು ಚಪ್ಪಲಿಯಿಂದ ಹಿಡಿದು ಪಾಯಿಖಾನೆ ತೊಳೆಯುವ ದ್ರವದವರೆಗೆ ಎಲ್ಲವನ್ನೂ ಆನ್‌ಲೈನ್‌ನಿಂದಲೇ ಪೂರೈಸಿಕೊಳ್ಳುವ ಜಮಾನ. ಹೀಗೆ ಜನ ಅಂತರ್ಜಾಲಕ್ಕೆ ಮುಗಿ ಬಿದ್ದಿರೋದರಿಂದಲೇ ವಂಚನೆಯ ಅಡ್ಡಾಗಳೂ ಅಲ್ಲಿಗೆ ಶಿಫ್ಟ್ ಆಗಿವೆ. ಹೀಗೆ ಗುಂಡಿ ಅಮುಕಿದರೆ ಮನೆಮುಂದೆ ಬಂದು ಬೀಳುವ ವಸ್ತುಗಳಿಗೇ ಗ್ಯಾರೆಂಟಿ ಇಲ್ಲ. ಅಂಥಾದ್ದರಲ್ಲಿ ಆನ್‌ಲೈನಿನಲ್ಲಿ ಕುದುರುವ ಸಂಬಂಧಗಳಿಗೆ ಗ್ಯಾರೆಂಟಿ ಏನಿದ್ದೀತು? ಇಂಥಾದ್ದೊಂದು ಸರಳ ಸತ್ಯದ ಅರಿವಿಲ್ಲದ ಮಂದಿ ಅನಾಯಾಸವಾಗಿ ವಂಚನೆಯ ಅಲಗಿಗೆ ಗೋಣು ಕೊಟ್ಟು ಸಂಕಟ ಪಡುತ್ತಾರೆ. ಪೊಲೀಸ್ ದಾಖಲೆಗಳ ಪ್ರಕಾರ ನೋಡಿದರೆ ಇಂಥಾ ಆನ್‌ಲೈನ್ ಲಫಡಾಗಳಿಗೆ ಈ ಮ್ಯಾಟ್ರಿಮೋನಿಯಲ್ ವೆಬ್‌ಸೈಟುಗಳಷ್ಟು ಮತ್ಯಾವುವೂ ಬಳಕೆಯಾಗಿಲ್ಲ. ಅಂಥಾ ನಿಸ್ಸಂತು ವಧುವರಾನ್ವೇಷಣಾ ಸೈಟುಗಳಲ್ಲಿ ಭಾರತ್ ಮ್ಯಾಟ್ರಿಮೊನಿಯಲ್ ಭಲೇ ಫೇಮಸ್ಸು. ಈ ವೆಬ್‌ಸೈಟಿನ ಗೋಡೆ ಮೇಲೆ ವರನ ಗೆಟಪ್ಪಿನಲ್ಲಿ ಫೋಟೋ ತಗುಲಿಸಿದ ಖದೀಮರನೇಕರು ಹುಡುಗೀರ ಬದುಕನ್ನೇ ಹಾಳುಗೆಡವಿದ ಉದಾಹರಣೆಗಳಿವೆ. ಇತ್ತೀಚೆಗಂತೂ ಹುಡುಗ, ಹುಡುಗಿ ಹುಡುಕೋ ವಿಧಾನವೇ ಬದಲಾಗಿ ಬಿಟ್ಟಿದೆ. ಹೆಣ್ಣುಮಕ್ಕಳೂ ಕೂಡಾ…

Read More

ಕೆದಕಿ ನೋಡುವ ಉತ್ಸಾಹ ಒಳಗಿರದಿದ್ದರೆ ಕಣ್ಣೆದುರು ಕಾಣೋದು ಮಾತ್ರವೇ ಸತ್ಯವಾಗಿ ಬಿಡೋ ಅಪಾಯವಿರುತ್ತೆ. ನಮ್ಮೆಲ್ಲ ಹತಾಶೆ, ಒತ್ತಡಗಳನ್ನೆಲ್ಲ ಒತ್ತಟ್ಟಿಗಿಟ್ಟು ಒಂದೇ ಒಂದು ಸಲ ಕಣ್ಣರಳಿಸಿದರೂ ಈ ಜಗತ್ತಿನ ನಾನಾ ಅಚ್ಚರಿಗಳ ಪರಾಗ ತಂತಾನೇ ಮನಸಿನ ಮಿದುವಿಗೆ ಮೆತ್ತಿಕೊಳ್ಳುತ್ತೆ. ಬೇರೇನೂ ಬೇಡ; ನಿಮ್ಮೆಲ್ಲ ಜಡತ್ವ ಇಳಿದು ಹೋಗಬೇಕಂದ್ರೆ ನಮ್ಮ ಸುತ್ತ ಹಬ್ಬಿಕೊಂಡಿರೋ ಜೀವ ಜಾಲದತ್ತ ಕುತೂಹಲ ಬೆಳೆಸಿಕೊಳ್ಳಿ. ಅಲ್ಲಿಂದ ಹೊಮ್ಮಿಕೊಳ್ಳೋ ಒಂದೊಂದು ಅಚ್ಚರಿಗಳೂ ನಿಮ್ಮೊಳಗೆ ನವೋಲ್ಲಾಸ ತುಂಬುತ್ತವೆ. ಅಚ್ಚರಿಯೆಂಬುದು ಚೈತನ್ಯವಾಗಿ ನಿಮ್ಮ ನರನಾಡಿಗಳನ್ನೆಲ್ಲ ಆವರಿಸಿಕೊಳ್ಳುತ್ತೆ. ಈಗ ಹೇಳ ಹೊರಟಿರೋದು ಜೀವ ಜಗತ್ತಿನ ಅಂಥಾದ್ದೇ ಒಂದು ವಿಸ್ಮಯದ ಬಗ್ಗೆ. ಇದರ ಕೇಂದ್ರಬಿಂದು ಆಕ್ಟೋಪಸ್. ಸಮುದ್ರದ ನಾನಾ ಭಾಗಗಳಲ್ಲಿ ಹಾಗೂ ಹವಳ ದಂಡೆಗಳ ಸಾಮಿಪ್ಯದಲ್ಲಿ ಬದುಕೋ ಜೀವಿಗಳಿವು. ಸೆಫಲಾಫೋಡಾ ಪ್ರಬೇಧಕ್ಕೆ ಸೇರಿರುವ ಆಕ್ಟೋಪಸ್‌ಗಳು ಅಸ್ಥಿಪಂಜರವಿಲ್ಲದ ಜೀವಿಗಳು. ಆಕಾರಕ್ಕಿಂತ ಪುಟ್ಟ ಪ್ರದೇಶದಲ್ಲಿಯೂ ತೂರಿಕೊಳ್ಳುವ ಇವುಗಳನ್ನು ಕಂಡರೆ ಭಯ ಬೀಳುವವರಿದ್ದಾರೆ. ಬಾಯಿ ಚಪ್ಪರಿಸಿಕೊಂಡು ತಿನ್ನುವವರೂ ಸಾಕಷ್ಟಿದ್ದಾರೆ. ಜೆಲ್‌ನಂಥಾ ತನ್ನ ದೇಹದ ಆಕ್ಟೋಪಸ್‌ಗಳು ತನ್ನ ಎಂಟು ಬಾಹುಗಳನ್ನು ಹಿಂದೆ ತೇಲಿಸಿಕೊಂಡು…

Read More

ಇದು ಮಾನವ ಕಳ್ಳಸಾಗಣೆಯ ಭೀಕರ ಮುಖ! ಅದು ಯಾರ ಕಣ್ಣೀರಿಗೂ, ಯಾವ ಯಾಚನೆಗೂ ಕರಗದ ಅಪ್ಪಟ ಕಲ್ಲು ಮನಸಿನವರ ವಿಕೃತ ಲೋಕ. ದೇಶ ವಿದೇಶಗಳ ತುಂಬೆಲ್ಲ ಹಬ್ಬಿಕೊಂಡಿರೋ ಮಾನವ ಕಳ್ಳ ಸಾಗಣೆಯ ಜಾಲವಿದೆಯಲ್ಲಾ? ಅದರ ಒಂದೊಂದು ಮಾಹಿತಿಗಳೂ ಎದೆ ಅದುರಿಸುತ್ತವೆ. ಅದರ ಮುಂದೆ ಇದುವರೆಗೆ ಬಂದ ಅಷ್ಟೂ ಸಿನಿಮಾ ಸೀನುಗಳು ಡಲ್ಲು ಹೊಡೆಯುತ್ತವೆ. ಅಂಥಾ ಅಮಾನವೀಯ, ರಕ್ಕಸರ ಮಾಫಿಯಾ ಲೋಕವದು. ನಮ್ಮ ಸುತ್ತಾ ಆಗಾಗ ಮಿಸ್ಸಿಂಗ್ ಕೇಸುಗಳು ಘಟಿಸುತ್ತಿರುತ್ತವೆ. ಮಕ್ಕಳು ಕಾಣೆಯಾಗುತ್ತವೆ. ಹೆಣ್ಣು ಮಕ್ಕಳು ಕಣ್ಮರೆಯಾಗುತ್ತವೆ. ಹೆಂಗಸರು ಸುಳಿವಿಲ್ಲದಂತೆ ಕಣ್ಮರೆಯಾಗಿ ಬಿಡುತ್ತವೆ. ಅದರ ಸುತ್ತ ಜನರಿಗೆ ತೋಚಿದಂಥಾ ರೂಮರ್‌ಗಳು ಹಬ್ಬಿಕೊಳ್ಳುತ್ತವೆ. ಆದರೆ ನಮ್ಮ ನಡುವಿಂದಲೇ ಹಾಗೆ ಕಾಣೆಯಾದವರು ಮಾನವ ಕಳ್ಳ ಸಾಗಣೆದಾರರ ವಿಷವ್ಯೂಹದಲ್ಲಿ ಸಿಕ್ಕು ಒದ್ದಾಡುತ್ತಿರಬಹುದೆಂಬ ಸಣ್ಣ ಕಲ್ಪನೆಯೂ ನಮಗಿರೋದಿಲ್ಲ. ಈ ಮಾನವ ಕಳ್ಳ ಸಾಗಣೆಯದ್ದು ಸಾಗರದಷ್ಟು ವಿಶಾಲವಾದ ವ್ಯಾಪ್ತಿ ಇದೆ. ಅದರಲ್ಲಿ ಮಕ್ಕಳ ಕಿಡ್ನಾಪ್ ಮತ್ತು ಮಾರಾಟ ಜಾಲದ್ದೊಂದು ಭೀಕರ ಮಜಲು. ನಾಲಕ್ಕರಿಂದ ಹತ್ತರ ಪ್ರಾಯದ ಮಕ್ಕಳೇ ಈ ದಂಧೆಕೋರರ…

Read More

ಚೆನ್ನೈನಲ್ಲಿ ಸಿಗೋದು ಕಾಗೆ ಕಂ ಚಿಕನ್ ಬಿರಿಯಾನಿ! ಇತ್ತೀಚಿನ ದಿನಗಳಲ್ಲಿ ಅಪರಾಧ ಪ್ರಪಂಚವೆಂಬುದು ನಾನಾ ಸ್ವರೂಪದಲ್ಲಿ ಪೊಲೀಸ್ ಇಲಾಖೆಗೇ ಸವಾಲಾಗಿ ಬೆಳೆದು ನಿಂತಿದೆ. ಇದು ಎಲ್ಲ ಕ್ಷೇತ್ರಗಳನ್ನು ಸುತ್ತುವರೆದು ತಿನ್ನುವ ಆಹಾರವನ್ನೂ ಬಿಡದಂತೆ ವ್ಯಾಪಿಸಿಕೊಂಡಿದೆ. ಇದರಿಂದಾಗಿಯೇ ಈವತ್ತು ಯಾವುದೂ ಕೂಡಾ ವಿಶ್ವಾಸಾರ್ಹತೆ ಉಳಿಸಿಕೊಂಡಿಲ್ಲ. ಅದರಲ್ಲಿಯೂ ಈಮಾಂಸಾಹಾರವಂತೂ ಅತ್ಯಂತ ಅಪಾಯಕಾರಿಯಾಗಿಯೇ ರೂಪಾಂತರಗೊಂಡಿದೆ. ನೀವೊಂದು ಚಿಕನ್ ಬಿರಿಯಾನಿ ಆರ್ಡರ್ ಮಾಡಿದರೆ ಅದನ್ನು ನೆಮ್ಮದಿಯಿಂದ ಚಪ್ಪರಿಸುವ ಯೋಗವನ್ನೂ ಕೂಡಾ ಈ ದಂಧೆಯ ಜಗತ್ತು ಕಿತ್ತುಕೊಂಡಿದೆ. ಯಾಕೆಂದರೆ, ಕೋಳಿ ಮಾಂಸವೆಂದು ನಂಬಿಕೊಂಡ ಆ ಬಿರಿಯಾನಿಯಲ್ಲಿ ನಾಯಿ ನರಿಗಳ ಮಾಂಸ ಮಿಕ್ಸ್ ಆಗಿದ್ದರೂ ಅಚ್ಚರಿ ಪಡುವಂತಿಲ್ಲ! ಇಂಥಾದ್ದೊಂದು ಅನುಮಾನಕ್ಕೆ ಮತ್ತಷ್ಟು ಪುಷ್ಠಿ ಕೊಡುವಂಥಾ ಪ್ರಕರಣವೊಂದು ತಮಿಳುನಾಡಿನಲ್ಲಿ ನಡೆದಿದೆ. ಅಲ್ಲಿ ಕೋಳಿ ಮಾಂಸದೊಂದಿಗೆ ಕಾಗೆ ಮಾಂಸವನ್ನು ಬೆರೆಸಿ ಮಾರಾಟ ಮಾಡುವ ಇಬ್ಬರು ದಂಧೆಕೋರರನ್ನು ಬಂಧಿಸುವ ಮೂಲಕ ಕಾಗೆ ಮಾಂಸದ ಮಾಫಿಯಾಯಾ ಎಲ್ಲರೂ ಅವಕ್ಕಾಗುವಂತೆ ಜಾಹೀರಾಗಿದೆ. ಹಿಂದಿ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಕಾಗೆ ಬಿರಿಯಾನಿಯೆಂಬುದು ಕಾಮಿಡಿ ಝಲಕ್ಕುಗಳಾಗಿ ಹರಿದಾಡಿದ್ದವು. ಆದರೆ ತಮಿಳುನಾಡಿನಲ್ಲಿ…

Read More

ಇಲ್ಲಿದೆ ವೈಫ್ ಸ್ವಾಪಿಂಗ್ ಬಗೆಗಿನ ಬೆಚ್ಚಿ ಬೀಳಿಸೋ ಮ್ಯಾಟರ್! ಜಗತ್ತು ಆಧುನಿಕತೆಗೆ ಒಡ್ಡಿಕೊಂಡಂತೆಲ್ಲಾ ಮನುಷ್ಯನ ವಿಕೃತಿಗಳು ಮೇರೆ ಮೀರುತ್ತಿವೆ. ಅದರಲ್ಲಿಯೂ ಲೈಗಿಕ ತೃಷೆಗಾಗಿ ಆಧುನಿಕ ಜಗತ್ತು ಅನುಸರಿಸುತ್ತಿರೋ ಅಡ್ಡದಾರಿಗಳಿವೆಯಲ್ಲಾ? ಅವು ಎಂಥವರನ್ನಾದರೂ ಬೆಚ್ಚಿ ಬೀಳಿಸುವಂತಿವೆ. ಒಂದು ಕಡೆಯಲ್ಲಿ ದೇಶಾದ್ಯಂತ ಅತ್ಯಾಚಾರ ಪ್ರಕರಣಗಳು ಮೇರೆ ಮೀರುತ್ತಿವೆ. ಸನಾನತನವಾದಿಗಳು ಅದಕ್ಕೆ ಹೆಣ್ಣು ಮಕ್ಕಳು ಧರಿಸೋ ಬಟ್ಟೆಯೇ ಕಾರಣ ಎಂಬಂಥಾ ಮತ್ತೊಂದು ಬಗೆಯ ವಿಕೃತಿಯನ್ನ ಪ್ರತಿಪಾದಿಸುತ್ತಿದ್ದಾರೆ. ಹಾಗಾದರೆ ಎಲ್ಲ ಇದ್ದೂ ಮನುಷ್ಯ ಮತ್ತಷ್ಟು ಲೈಂಗಿಕತೆಗಾಗಿ ಯಾಕೆ ಹಾತೊರೆಯುತ್ತಾನೆ? ಮನುಷ್ಯತ್ವವನ್ನೇ ಅಣಕಿಸುವಂಥಾ ವೈಫ್‌ಸ್ವಾಪಿಂಗ್ ದಂಧೆಗಳ ಮೂಲಕ ಯಾಕೆ ಖುಷಿ ಕಾಣಲು ಪ್ರಯತ್ನಿಸುತ್ತಾನೆಂಬುದಕ್ಕೆಲ್ಲ ಸನಾತನಿಗಳ ಬಳಿ ಉತ್ತರವಿಲ್ಲ. ಅಂಥಾ ಅಗಾಧ ವಿಕೃತಿ ಮನಸೊಳಗೇ ಇಲ್ಲದೇ ಹೋಗಿದ್ದರೆ ಕಟ್ಟಿಕೊಂಡ ಹೆಂಡತಿಯರನ್ನೇ ಅದಲು ಬದಲು ಮಾಡಿಕೊಂಡು ಸುಖಿಸುವ ಖೂಳ ಬುದ್ಧಿ ಹಬೆಯಾಡಲು ಸಾಧ್ಯವೇ? ನಮ್ಮದು ಎಲ್ಲಿಯೂ ಸಂಸ್ಕೃತಿ, ಕಟ್ಟುಪಾಡುಗಳ ಎಲ್ಲೆ ಮೀರದ ಸಮಾಜ. ಅದರೊಳಗೇ ಲೈಂಗಿಕ ವಾಂಛೆಗಳೂ ಕೂಡಾ ಹದ ಮೀರದೆ ಮುಂದುವರೆದುಕೊಂಡು ಬಂದಿವೆ. ಅಲ್ಲಲ್ಲಿ, ಆಗಾಗ ಅದು ಹದ್ದು ಮೀರಿ…

Read More