ಉತ್ತರ ಪ್ರದೇಶದಲ್ಲೊಂದು ಅಚ್ಚರಿಯ ಘಟನೆ! ಶೋಧ ನ್ಯೂಸ್ ಡೆಸ್ಕ್: ಕೆಲವೊಮ್ಮೆ ಸಣ್ಣ ಪುಟ್ಟ ಸಮಸ್ಯೆಗಳೂ ದೊಡ್ಡದಾಗಿ ಬೆಳೆದುಕೊಂಡು ಪೊಲೀಸು, ಕೋರ್ಟು ಕಚೇರಿ ಅಂತೆಲ್ಲ ಅಲೆದಾಡುವ ಸಂದರ್ಭಗಳು ಸೃಷ್ಟಿಯಾಗೋದಿದೆ. ಬಹುಶಃ ರೈತಾಪಿ ವರ್ಗದ ಇರುವಿಕೆ ಇರುವ ಕಡೆಯಲ್ಲೆಲ್ಲ ಬೇಲಿ ಸಮಸ್ಯೆ, ಜನ ಜಾನುವಾರುಗಳ ಸಮಸ್ಯೆ ಇದ್ದಿದ್ದೇ. ಕೆಲವೊಂದು ಸಲ ಯಾರ ಮನೆಯ ಜಾನುವಾರುಗಳನ್ನೋ ಇನ್ಯಾರೋ ಕಟ್ಟಿ ಹಾಕಿ ಹಳ್ಳಿಗಳ ಲೆವೆಲ್ಲಿನಲ್ಲಿ ಅದೊಂದು ದೊಡ್ಡ ರಾದ್ಧಾಂತ, ರಾಮಾಯಣವಾಗೋದೂ ಇದೆ. ಅದು ಎಲ್ಲರ ಅಂಕೆ ಮೀರಿಕೊಂಡು ಪೊಲೀಸ್ ಠಾಣಾ ಮೆಟ್ಟಿಲೇರಿ ರಂಪವಾಗೋದೂ ಇದೆ. ಸದ್ಯ ಉತ್ತರ ಪ್ರದೇಶದ ಹಳ್ಳಿಯೊಂದರಲ್ಲಿಯೂ ಇಂಥಾದ್ದೇ ಪ್ರಕರಣವೊಂದು ನಡೆದಿದೆ. ಇಲ್ಲಿನ ಹಳ್ಳಿಯೊಂದರಲ್ಲಿ ರೈತನಾಗಿ ದುಡಿಯುತ್ತಿದ್ದ ಓರ್ವನ ಎಮ್ಮೆ ಕೆಲ ತಿಂಗಳುಗಳ ಹಿಂದೆ ನಾಪತ್ತೆಯಾಗಿತ್ತು. ಒಳ್ಳೇ ಹಾಲು ಕೊಡುತ್ತಿದ್ದ ಪ್ರೀತಿಯ ಎಮ್ಮೆ ಏಕಾಏಕಿ ನಾಪತ್ತೆಯಾಗಿದ್ದನ್ನು ನೋಡಿದ ಆ ರೈತನ ಇಡೀ ಸಂಸಾರವೇ ದುಃಖದಲ್ಲಿ ಮುಳುಗಿ ಹೋಗಿತ್ತು. ಯಥಾ ಪ್ರಕಾರವಾಗಿ ಆ ಕ್ಷಣದಿಂದಲೇ ಹುಡುಕಾಟದ ಕಾರ್ಯಕ್ಕೆ ಚಾಲನೆ ಸಿಕ್ಕಿತ್ತು. ಸುತ್ತಲ ಹತ್ತೂರುಗಳಲ್ಲಿ ಅಲೆದಲೆದು ಸಾಕಾದ…
Author: Santhosh Bagilagadde
ಇಡೀ ವಿಶ್ವಕ್ಕೇ ಕೊರೋನಾ ಸಾಂಕ್ರಾಮಿಕವೆಂಬ ಮಾಹಾ ಮಾರಿಯನ್ನು ಹಂಚಿದ ಪರಮ ಪಾಪಿಷ್ಟ ದೇಶ ಚೀನಾ. ಪ್ರತಿಯೊಂದನ್ನೂ ಕೂಡಾ ಲಾಭದ ದೃಷ್ಟಿಯಿಂದಲೇ ದಿಟ್ಟಿಸುವ ನಾಯಕತ್ವವಿರೋ ಚೀನಾ ಮಂದಿ ಈ ವೈರಸ್ಸಿನ ವಿಚಾರದಲ್ಲಿ ಏನೋ ಮಾಡಲು ಹೋಗಿ ಮತ್ತೇನನ್ನೋ ಮಾಡಿಕೊಂಡಿದೆ. ಅಮೆರಿಕಾ ಮಂದಿಯೊಂದಿಗೆ ಶಾಮೀಲಾಗಿ ಮೆಡಿಕಲ್ ಮಾಫಿಯಾದ ಮೂಲಕ ಕಾಸು ಗುಂಜುವ ಉದ್ದೇಶದೊಂದಿಗೇ ಚೀನಾ ಕೊರೋನಾ ವೈರಸ್ ಅನ್ನು ಸೃಷ್ಟಿ ಮಾಡಿತ್ತು. ಅದೇನೋ ಯಡವಟ್ಟು ನಡೆದು ಮೊದಲ ಸಲ ಚೀನಾದ ವುಹಾಂಗ್‌ನಲ್ಲಿಯೇ ಈ ವೈರಸ್ಸು ಜನರ ಮೇಲೆರಗಿ ಹೋಗಿತ್ತು. ಹೀಗೆ ಮಾಡಿದ ಪಾಪದಿಂದ ಆ ದೇಶಕ್ಕೆ ಈ ಕ್ಷಣಕ್ಕೂ ಮುಕ್ತಿಯೆಂಬುದೇ ಸಿಗುತ್ತಿಲ್ಲ. ಇಡೀ ಜಗತ್ತು ಈ ಕ್ಷಣದಲ್ಲಿಯೂ ನಾಲಕನ್ನೇ ಅಲೆಯ ಆಘಾತ ಕಾಡುವ ಭಯದಲ್ಲಿದೆ. ಅಷ್ಟರಲ್ಲಾಗಲೇ ಚೀನಾದ ತುಂಬೆಲ್ಲ ನಾಲಕ್ಕನೇ ಅಲೆ ಹಬ್ಬಿಕೊಂಡಾಗಿತ್ತು. ವಿಶ್ವದಿಂದ ಇದೆಲ್ಲವನ್ನೂ ಮರೆಮಾಚಿ ಒಳಗಿಂದೊಳಗೇ ಎಲ್ಲವನ್ನೂ ತಹಬಂಧಿಗೆ ತರುವಂಥಾ ಚೀನಾದ ಕಸರತ್ತು ವ್ಯರ್ಥವಾಗಿದೆ. ಯಾವ್ಯಾವ ಪ್ರದೇಶದಲ್ಲಿ ಕೊರೋನಾ ಕೇಸುಗಳು ಹೆಚ್ಚಳವಾಗುತ್ತವೋ ಅಲ್ಲೆಲ್ಲ ಲಾಕ್‌ಡೌನ್ ಮಾಡಿ ಕೊರೋನಾವನ್ನು ಅಂಕೆಗೆ ತರುವ ಪ್ರಯತ್ನ…
ಈ ಖ್ಯಾತನಾಮರು ಯಾವುದಾದರೊಂದು ಕೇಸಿನಲ್ಲಿ ತಗುಲಿಕೊಂಡಾಗ ಬಚಾವಾಗಲು ನಾನಾ ಪಟ್ಟುಗಳನ್ನು ಹಾಕೋದು ಮಾಮೂಲು. ಕಡೇ ಕ್ಷಣದವರೆಗೂ ಪವರನ್ನೆಲ್ಲ ಒಗ್ಗೂಡಿಸಿಕೊಂಡು ಆ ಪ್ರಕರಣದಿಂದ ಗಾಯಬ್ ಆಗಲು ಹರಸಾಹಸ ಪಡುತ್ತಾರೆ. ಇಂಥಾದ್ದರಾಚೆಗೂ ಪಂಜಾಬಿನಲ್ಲಿ ಕಾಂಗ್ರೆಸ್ಸಿನ ಮುಂಚೂಣಿ ನಾಯಕರಾಗಿದ್ದ ಮಾಜೀ ಕ್ರಿಕೆಟಿಗನೂ ಆಗಿದ್ದ ಪ್ರಭಾವಿ ಆಸಾಮಿ ನವಜೋತ್ ಸಿಂಗ್ ಸಿಧು ಬೇರೇನೂ ಮಾಡಲಾಗದೆ ಜೈಲು ಪಾಲಾಗಿದ್ದಾರೆ. ತನ್ನೆಲ್ಲ ಪ್ರಭಾವವನ್ನು ಧಾರೆ ಎರೆದರೂ ಬಚಾವಾಗಲಾಗದ ಸಂಕಟ ಹೊತ್ತು ಜೈಲಿನಲ್ಲಿರುವ ಸಿಧುಗೀಗ ಆರೋಗ್ಯ ಸಮಸ್ಯೆ ಉಲ್ಬಣಿಸಿದೆ. ಅವರಿಗೆ ಯಕೃತ್ತಿನ ಸಮಸ್ಯೆ ತೀವ್ರವಾಗಿ ಕಾಡುತ್ತಿರೋದರಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೊಂಚ ತಡವಾದರೂ ಕೂಡಾ ಮಾಡಿದ ಅಪರಾಧ ಪ್ರಕರಣದಿಂದ ಆರೋಪಿಗಳು ಪಾರಾಗಲು ಸಾಧ್ಯವೇ ಇಲ್ಲ ಎಂಬಂಥಾ ವ್ಯವಸ್ಥೆ ನಮ್ಮ ನ್ಯಾಯಾಂಗದಲ್ಲಿದೆ. ಈ ನಿಧಾನಗತಿಯ ಚಲನೆ ಅನೇಕಾರು ಸಂದರ್ಭಗಳಲ್ಲಿ ತೀವ್ರವಾದ ಟೀಕೆಗೂ ಕಾರಣವಾಗೋದಿದೆ. ಅದರ ಭಾಗವಾಗಿಯೇ ೧೯೮೮ರಲ್ಲಿ ನಡೆದಿದ್ದ ಆಕ್ಸಿಡೆಂಟ್ ಒಂದರ ಪ್ರಕರಣದಲ್ಲಿ ನವಜೋತ್ ಸಿಂಗ್ ಸಿಧುಗೆ ಇದೀಗ ಒಂದು ವರ್ಷದ ಜೈಲು ಶಿಕ್ಷೆ ವಿಧಿಸಲಾಗಿದೆ. ಒಂದು ಕಡೆಯಲ್ಲಿ ಸಿಧು ರಾಜಕೀಯ ಬದುಕೇ ಡೋಲಾಯಮಾನವಾಗಿತ್ತು.…
ಶೋಧ ನ್ಯೂಸ್ ಡೆಸ್ಕ್: ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಪ್ರವಾದಿ ಮಹಮದ್‌ರನ್ನು ಅವಹೇಳನ ಮಾಡಿದ ವಿಚಾರ, ಆಕೆಯ ತಲೆದಂಡವಾಗೋದರ ಜೊತೆಗೆ ಬಿಜೆಪಿಗೂ ಪೀಕಲಾಟ ತಂದಿಟ್ಟಿದೆ. ಇಡೀ ದೇಶದ ತುಂಬೆಲ್ಲ ಇದೀಗ ಹಿಂದೂ ಮುಸ್ಲಿಂ ಎಂಬಂಥಾ ವಾರ್ ನಡೆಯುತ್ತಿದೆ. ಅದಕ್ಕೆ ಕಿಚ್ಚು ಹಚ್ಚುತ್ತಾ ಬಂದ ಬಿಜೆಪಿ ಸರ್ಕಾರಕ್ಕೆ ವಕ್ತಾರೆಯ ಹೇಳಿಕೆಯೀಗ ತೀವ್ರವಾದ ಮುಜುಗರ ತಂದಿಟ್ಟಿದೆ. ಇಂಥಾದ್ದೊಂದು ಹೇಳಿಕೆ ನೀಡಿರುವ ನೂಪುರ್ ಶರ್ಮಾರನ್ನು ಬಿಜೆಪಿ ಮಂದಿ ಅಮಾನತುಗೊಳಿಸಿ ಸಂಕಷ್ಟದಿಂದ ಪಾರಾಗುವಂಥಾ ತಂತ್ರಗಾರಿಕೆ ಅನುಸರಿಸಿದ್ದಾರೆ. ಆದರೂ ಕೂಡಾ ಇಸ್ಲಾಮಿಕ್ ದೇಶಗಳು ಇದರ ವಿರುದ್ಧ ಕಠಿಣ ಕ್ರಮ ಅನುಸರಿಸುವ ಮೂಲಕ ಪ್ರತಿಭಟನೆ ನಡೆಸುತ್ತಿದೆ. ಧರ್ಮ ಧರ್ಮಗಳ ನಡುವೆ ಬೆಂಕಿ ಹಚ್ಚೋದನ್ನೇ ಗುರಿಯಾಗಿಸಿಕೊಂಡಂತಿರುವ ಬಿಜೆಪಿ ಮಂದಿ ಈಗೊಂದಷ್ಟು ದಿನಗಳಿಂದ ಬರೀ ಅಂಥಾದ್ದೇ ಕೆಲಸ ಮಾಡುತ್ತಿದೆ. ಅದರ ಭಾಗವಾಗಿಯೇ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಪ್ರವಾದಿ ಮಹಮದ್ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿದ್ದರು. ಇದರ ಪರಿಣಾಮವಾಗಿ ಇದೀಗ ಮುಸ್ಲಿಂ ರಾಷ್ಟ್ರ ದುಬೈನ ಸೂಪರ್ ಮಾರ್ಕೆಟ್ಟುಗಳಲ್ಲಿ ಭಾರತೀಯ ಉತ್ಪನ್ನಗಳನ್ನು ಮಾರಾಟ ಮಾಡದಂತೆ ತಡೆ…
ಮುದ್ದಾದ ಪ್ರೇಮಕಥೆ ಬೆರೆತ ಮರ್ಡರ್ ಮಿಸ್ಟ್ರಿ? ಶೀತಲ್ ಶೆಟ್ಟಿ ನಿರ್ದೇಶನದ ವಿಂಡೋ ಸೀಟ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಈ ಮೂಲಕ ಸುದೀರ್ಘವಾದೊಂದು ನಿರೀಕ್ಷೆ ನಿರ್ಣಾಯಕ ಘಟ್ಟ ತಲುಪಿಕೊಂಡಂತಾಗಿದೆ. ಅಷ್ಟಕ್ಕೂ ಇದುವರೆಗೂ ಕೂಡಾ ಕೌತುಕದ ಕಾವು ಒಂದಿನಿತೂ ಆರದಂತೆ ಶೀತಲ್ ಶೆಟ್ಟಿ ಜಾಣ್ಮೆಯಿಂದಲೇ ಸಾಗಿ ಬಂದಿದ್ದಾರೆ. ಫಸ್ಟ್ ಲುಕ್, ಮೇಕಿಂಗ್ ವೀಡಿಯೋ, ಟೀಸರ್, ಹಾಡು ಅಂತೆಲ್ಲ ನಿರೀಕ್ಷೆಯೆಂಬುದು ನಿಗಿನಿಗಿಸುವಂತೆ ಮಾಡಿದ್ದಾರೆ. ಇತ್ತೀಚೆಗಷ್ಟೇ ಟ್ರೈಲರ್ ಪ್ರೋಮೋ ಮೂಲಕ ಟಾಕ್ ಕ್ರಿಯೇಟ್ ಮಾಡಿದ್ದ ಶೀತಲ್ ಇದೀಗ ಚೆಂದದ ಟ್ರೈರಲ್ ಅನ್ನು ಲಾಂಚ್ ಮಾಡಿದ್ದಾರೆ. ಮಳೆ, ನಾಯಕನನ್ನು ಆವರಿಸಿಕೊಂಡ ದುಃಖದ ಕಾರ್ಮೋಡ, ನನಗೇ ಯಾಕೆ ಪದೇ ಪದೆ ಹೀಗಾಗುತ್ತದೆಂಬಂಥಾ ಯಾತನೆ ಮತ್ತು ಶೀತಲ್ ಶೆಟ್ಟಿಯವರ ಹಿನ್ನೆಲೆಯ ನಿರೂಪಣೆಯೊಂದಿಗೆ ಸಾಗುವ ಈ ಟ್ರೈಲರ್ ನಾನಾ ದಿಕ್ಕಿನಲ್ಲಿ ಈ ಕಥೆಯ ಬಗ್ಗೆ ಆಲೋಚಿಸುವಂತೆ ಮಾಡಿದೆ. ಇದರ ಜೊತೆ ಜೊತೆಗೇ ಮುದ್ದಾದೊಂದು ಪ್ರೇಮ ಕಥಾನಕ ಸುಳಿವಿನೊಂದಿಗೆ, ಇದು ರೋಚಕವಾಗಿ ಸಾಗುವ ಮರ್ಡರ್ ಮಿಸ್ಟ್ರಿ ಇರಬಹುದಾ ಎಂಬ ದಿಕ್ಕಿನಲ್ಲಿಯೂ ಆಲೋಚನೆಗೆ ಹಚ್ಚಿದೆ. ಅದೆಲ್ಲಕ್ಕಿಂತಲೂ…
ಬಿಗ್ ಬಾಸ್ ಶೋಗಳು ಈ ದೇಶದ ನಾನಾ ಭಾಷೆಗಳಲ್ಲಿ ಪ್ರಸಾರವಾಗುತ್ತಿವೆ. ಇದರಲ್ಲಿ ಒಮ್ಮೆ ಮುಸುಡಿ ತೋರಿಸಿದರೆ ಲಕ್ಕೆಂಬುದು ಬದಲಾಗಿ. ದಂಡಿ ದಂಡಿ ಅವಕಾಶಗಳು ಮನೆ ಮುಂದೆ ಬಂದು ಬಿದ್ದಿರುತ್ತವೆಂಬಂಥ ಭ್ರಮೆ ಅನೇಕರಲ್ಲಿದೆ. ಆದರೆ ಕನ್ನಡವೂ ಸೇರಿದಂತೆ ನಾನಾ ಬಾಷೆಗಳಲ್ಲಿ ಅದು ಕೇವಲ ಭ್ರಮೆ ಎಂಬುದು ಈಗಾಗಲೇ ಸಾಬೀತಾಗಿದೆ. ಯಾಕೆಂದರೆ ಬಿಗ್‌ಬಾಸ್ ಸ್ಪರ್ಧಿಗಳಲ್ಲಿ ಬಹುತೇಕರ ಬದುಕು ಆರಕ್ಕೇರದೆ ಮೂರಕ್ಕಿಳಿಯದೆ ಹೊಯ್ದಾಡುತ್ತಿದೆ. ಆದರೆ ಕೆಲವರ ವಿಚಾರದಲ್ಲಿ ಮಾತ್ರ ಅದು ಸುಳ್ಳಾಗಿ ನಿಜಕ್ಕೂ ಲಕ್ಕು ಕುದುರಿಕೊಳ್ಳುತ್ತೆ. ಬಿಗ್ ಬಾಸ್ ಸ್ಪರ್ಧಿಗಳಾಗಿ ಹಾಗೆ ಅದೃಷ್ಟ ಕುಲಾಯಿಸಿಕೊಂಡವರಲ್ಲಿ ನಟಿ, ರೂಪದರ್ಸಿ ಮತ್ತು ಕಿರುತೆರೆ ನಟಿಯಾಗಿ ಮಿಂಚಿದ್ದ ಜಾಸ್ಮಿನ್ ಭಾಸಿನ್ ಕೂಡಾ ಸೇರಿಕೊಳ್ಳುತ್ತಾಳೆ! ರಾಜಸ್ತಾನ್ ಮೂಲದ ಜಾಸ್ಮಿನ್ ಭಾಸಿನ್ ತುಂಬಾ ಚಿಕ್ಕ ವಯಸ್ಸಿಗೆಲ್ಲ ಮಾಡೆಲ್ ಆಗಿ ಮಿಂಚಿದಾಕೆ. ಪ್ರಸಿದ್ಧ ರಿಯಾಲಿಟಿ ಶೋಗಳಲ್ಲಿ ಪಾಲ್ಗೊಂಡು ತನ್ನತನದಿಂದಲೇ ಎಲ್ಲರ ಗಮನ ಸೆಳೆದಿದ್ದವಳು ಜಾಸ್ಮಿನ್ ಭಾಸಿನ್. ಇಂಥಾ ಜಾಸ್ಮಿನ್ ಬಿಗ್ ಬಾಸ್ ಶೋ ಸ್ಪರ್ಧಿಯಾಗಿಯೂ ಒಂದಷ್ಟು ಹೆಸರು ಮಾಡಿಕೊಂಡಿದ್ದಳು. ಇಂಥಾ ನಾನಾ ಸರ್ಕಸ್ಸುಗಳನ್ನು ನಡೆಸುತ್ತಿದ್ದ…
ಪಾದರಸದಂಥಾ ಹುಡುಗಿಗೆ ರಫ್ ಆಂಡ್ ಟಫ್ ಪಾತ್ರ ಸಿಕ್ಕ ಖುಷಿ! ಒಂದು ಆಸೆ ಉತ್ಕಟ ವ್ಯಾಮೋಹವಾಗಿ, ಬದುಕಿನ ಪರಮೋಚ್ಛ ಗುರಿಯಾಗಿ ಎದೆಗಿಳಿದು ಬೇರು ಬಿಟ್ಟರೆ ಖಂಡಿತಾ ಮುಂದೊಂದು ದಿನ ಅದು ಚಿಗುರಿ, ಕನಸೆಲ್ಲವೂ ಸಾಕಾರಗೊಳ್ಳುತ್ತವೆ. ಎಲ್ಲೆಲ್ಲಿಯೋ ಚದುರಿ ಹೋಗ ಬೇಕಿದ್ದ ಬದುಕು ತಂತಾನೇ ಗುರಿಯ ನೇರಕ್ಕೆ ಬಂದು ನಿಲ್ಲುತ್ತದೆ. ಸದ್ಯ ಸಿನಿಮಾ ರಂಗದಲ್ಲಿ ಈ ಮಾತಿಗೆ ಅನ್ವರ್ಥ ಎಂಬಂಥಾ ಅನೇಕ ಸಜೀವ ಸಾಕ್ಷಿಗಳಿದ್ದಾವೆ. ಆ ಸಾಲಿನಲ್ಲಿ ಸೇರ್ಪಡೆಯಾಗುವಂಥಾ ನವ ಪ್ರತಿಭೆ ರಚನಾ ಇಂದರ್. ರಚನಾ ಲವ್ ಮಾಕ್ಟೈಲ್ ಎಂಬ ಸೂಪರ್ ಹಿಟ್ ಮೂವಿಯ ಮೂಲಕವೇ ಕರುನಾಡ ತುಂಬೆಲ್ಲ ಮನೆಮಾತಾದವರು. ಹೆಂಗೆ ನಾವೂ ಅನ್ನುತ್ತಲೇ ಕನ್ನಡದ ಚಿತ್ರಪ್ರೇಮಿಗಳ ಮನಸನ್ನಾವರಿಸಿಕೊಂಡಿದ್ದ ರಚನಾ ಇದೀಗ ಹರಿಕಥೆ ಅಲ್ಲ ಗಿರಿಕಥೆ ಚಿತ್ರದ ಮೂಲಕ ಎರಡನೇ ಹೆಜ್ಜೆ ಎತ್ತಿಟ್ಟಿದ್ದಾರೆ. ಈ ಚಿತ್ರದಲ್ಲಿಯೂ ಬಯಸದೇ ಬಂದ ಭಾಗ್ಯವೆಂಬಂತೆ ಡಿಫರೆಂಟ್ ಆದೊಂದು ಪಾತ್ರ ಸಿಕ್ಕಿರುವ ಖುಷಿ ರಚನಾರಲ್ಲಿದೆ. ಭಾಗಮಂಡಲದಲ್ಲಿ ಹುಟ್ಟಿ, ಬೆಂಗಳೂರಿನಲ್ಲಿ ಬೆಳೆದು ಅಲ್ಲಿಯೇ ವಿದ್ಯಾಭ್ಯಾಸವನ್ನೂ ಮುಂದುವರೆಸುತ್ತಿರುವ ರಚನಾ ಇದೀಗ ಎಂಬಿಎ…
ಒಂದು ಕಡೆಯಿಂದ ಪ್ರಕೃತಿಯ ಮೇಲೆ ಒಂದು ಕಡೆಯಿಂದ ದೌರ್ಜನ್ಯ ನಡೆಯುತ್ತಿದೆ. ಇನ್ನೊಂದು ಕಡೆಯಿಂದ ಸಮಾನ ಮನಸ್ಕ ಪ್ರಕೃತಿ ಪ್ರಿಯರು ಪರಿಸರದ ಉಳಿವಿಗಾಗಿ ಅವಿರತವಾಗಿ ಶ್ರಮಿಸುತ್ತಿದ್ದಾರೆ. ನಟಿಯಾಗಿ ಬ್ಯುಸಿಯಾಗಿದ್ದರೂ ಕೂಡಾ ಅದರ ನಡುವಲ್ಲಿಯೇ ಸಂಯುಕ್ತಾ ಹೊರನಾಡು ಪರಿಸರ ಕಾಳಜಿಯ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ಅವರು ಕಾರ್ಯ ನಿರ್ವಹಿಸುತ್ತಿರೋದು ‘ಕೇರ್ ಮೋರ್’ ಫೌಂಡೇಶನ್ ಮೂಲಕ. ಇದೀಗ ಈ ಸಂಸ್ಥೆ ಸೌಲಭ್ಯ ವಂಚಿತ ಮಕ್ಕಳಿಗಾಗಿ ವಿನೂತನವಾದ, ಸಾರ್ಥಕವಾದ ಅಭಿಯಾನವೊಂದಕ್ಕೆ ಚಾಲನೆ ನೀಡಿದೆ. ಇದರಲ್ಲಿ ಪ್ರತಿಯೊಬ್ಬರೂ ಭಾಗಿಯಾಗಿ ಸದರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಕೊಡುವಂತೆ ಕರೆನೀಡಿದೆ. ದೀಗ ರಾಜ್ಯಾದ್ಯಂತ ಶಾಲೆಗಳು ಆರಂಭವಾಗಿವೆ. ಅದು ಪ್ರತೀ ಮಕ್ಕಳ ಪಾಲಿಗೂ ಖುಷಿಯ ಸಂಗತಿ. ಆದರೆ ಅದೆಷ್ಟೋ ಬಡ ಮಕ್ಕಳಿಗೆ ಶಾಲೆಗೆ ಬೇಕಾದ ಅಗತ್ಯ ಸಾಮಾಗ್ರಿಗಳಿಗೂ ದಿಕ್ಕಿರೋದಿಲ್ಲ. ಇಂಥಾ ಮಕ್ಕಳನ್ನು ಗಮನದಲ್ಲಿಟ್ಟುಕೊಂಡೇ ‘ಕೇರ್ ಮೋರ್’ ಫೌಂಡೇಶನ್ ಬಳಸದೇ ಉಳಿದ ಬ್ಯಾಗುಗಳನ್ನು ದಾನವಾಗಿ ನೀಡಲು ಉತ್ತೇಜನ ಕೊಡುವಂಥಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ಮೂಲಕ ನೀವು ನಿಮ್ಮ ಮನೆಯಲ್ಲಿ ಬಳಸದೇ ಉಳಿದ ಶಾಲಾ ಬ್ಯಾಗುಗಳನ್ನು ಈ ಸಂಸ್ಥೆಗೆ…
ಶೋಧ ನ್ಯೂಸ್ ಡೆಸ್ಕ್: ಒಂದು ಕಾನೂನು ಜಾರಿಗೆ ಬಂದರೆ ಅದರಲ್ಲಿರೋ ಜನಹಿತವನ್ನೇ ಮರೆ ಮಾಚುವಂತೆ ಯಾರ್ಯಾರದ್ದೋ ಸ್ವಾರ್ಥಕ್ಕೆ ಬಳಕೆಯಾಗೋದೇ ಹೆಚ್ಚು. ಅರಲ್ಲಿ ಮಾಹಿತಿ ಹಕ್ಕು ಕಾಯ್ದೆ ಪ್ರಧಾನವಾಗಿ ಸೇರಿಕೊಳ್ಳುತ್ತೆ. ಮಾಹಿತಿ ಹಕ್ಕು ಕಾಯ್ದೆ ಬಂದ ನಂತರದಲ್ಲಿ ಆಳೋ ಮಂದಿಯ ಹುಳುಕುಗಳು, ನಾನಾ ಸರ್ಕಾರಿ ಇಲಾಖೆಗಳ ಹಕೀಕತ್ತುಗಳು ದಂಡಿ ದಂಡಿಯಾಗಿ ಹೊರಬರುತ್ತಿವೆ. ದೇಶದ ತುಂಬೆಲ್ಲ ಅಕ್ಷರಶಃ ಯೋಧರಂತೆ ಬಡಿದಾಡುತ್ತಾ ಆರ್ಟಿಐ ಎಂಬ ಅಸ್ತ್ರದ ಮೂಲಕ ಸಮಾಜದ ಹಿತ ಕಾಯುವ ಕೆಲಸವನ್ನು ಅನೇಕರು ಮಾಡುತ್ತಾ ಬಂದಿದ್ದಾರೆ. ಅದೇ ಹೊತ್ತಿನಲ್ಲಿ ಒಂದಷ್ಟು ಮಂದಿ ಅದೇ ಆರ್ಟಿಐ ಅನ್ನು ಎತ್ತುವಳಿಯ ಅಸ್ತ್ರವಾಗಿಸಿಕೊಂಡಿದ್ದಾರೆ. ಈ ದೆಸೆಯಿಂದಲೇ ಒಂದಷ್ಟು ಕೊಲೆಗಳೂ ನಡೆಯುತ್ತಿವೆ. ಹಾಗಂತೆ ಆಗುತ್ತಿರುವ ಆರ್ಟಿಐ ಕಾರ್ಯಕರ್ತರ ಕೊಲೆಗಳಿಗೆಲ್ಲ ಎತ್ತುವಳಿಯೇ ಕಾರಣ ಅನ್ನುವಂತಿಲ್ಲ. ದಿಟ್ಟವಾಗಿ, ನ್ಯಾಯ ಸಮ್ಮತವಾಗಿರುವವರೂ ಉಸಿರು ಚೆಲ್ಲಿದ್ದಾರೆ. ಇದೀಗ ಮದ್ಯಪ್ರದೇಶದಲ್ಲಿಯೂ ಹಾಡ ಹಗಲೇ ಆರ್ಟಿಐ ಕಾರ್ಯಕರ್ತನೊಬ್ಬನನ್ನು ಗುಂಡಿಟ್ಟು ಕೊಲ್ಲಲಾಗಿದೆ.ಈ ಕೊಲೆ ನಡೆದ ರೀತಿ ಕಂಡು ಇಡೀ ದೇಶವೇ ಬೆಚ್ಚಿ ಬಿದ್ದಿದೆ. ಇಂಥಾದ್ದೊಂದು ಕೃತ್ಯ ನಡೆದಿರೋದು ಮಧ್ಯಪ್ರದೇಶದ ವಿದಿಶಾ…
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾತಾಡುತ್ತಲೇ ಪ್ರವರ್ಧಮಾನಕ್ಕೆ ಬಂದಿದ್ದವನು ಹಾರ್ದಿಕ್ ಪಟೇಲ್. ಗುಜರಾತಿನ ಪಾಟಿದಾರ್ ಸಮುದಾಯದ ಪರವಾಗಿ ಮಾತಾಡುತ್ತಾ, ಅದರ ನಾಯಕನಾಗಿಯೂ ಗುರುತಿಸಿಕೊಂಡಿದ್ದ ಈತನ ಮೇಲೆ ಬಿಜೆಪಿ ಐಟಿ ಸೆಲ್ಲಿನ ಮಂದಿ ಪ್ರಹಾರವನ್ನೇ ನಡೆಸಿದ್ದರು. ಮೋದಿ ವಿರುದ್ಧ ಮಾತಾಡಿದವರೆಲ್ಲ ದೇಶದ್ರೋಹಿಗಳೆಂಬ ಕಾನ್ಸೆಪ್ಟಿನಲ್ಲಿ ಶತಾಯಗತಾಯ ಪಟೇಲನ ಮೇಲೆರಗಿದ್ದರು. ಇದೀಗ ಅದೇ ಹಾರ್ದಿಕ್ ಪಟೇಲನನ್ನು ಬಿಜೆಪಿ ಮಂದಿ ಹಾರ್ದಿಕವಾಗಿ ಪಕ್ಷದೊಳಗೆ ಬಿಟ್ಟುಕೊಂಡಿದ್ದಾರೆ. ಪಾಟಿದಾರ್ ಸಮುದಾಯಕ್ಕಾಗುತ್ತಿರುವ ಅನ್ಯಾಯದ ವಿರುದ್ಧ ಭುಗಿಲೇಳುತ್ತಲೇ ಚಿಕ್ಕ ವಯಸ್ಸಿನಲ್ಲಿಯೇ ಭಾರೀ ಪಬ್ಲಿಸಿಟಿ ಪಡೆದುಕೊಂಡಿದ್ದವನು ಹಾರ್ದಿಕ್. ಅದರೊಂದಿಗೇ ಮೋದಿ ವಿರುದ್ಧ ಹರಿಹಾಯುತ್ತಾ ಬಂದಿದ್ದ ಈತ ಏಕಾಏಕಿ ಕಾಂತಿಕಾರಿ ಯವ ಮುಖಂಡನೆನಿಸಿಕೊಂಡಿದ್ದ. ಯಾವಾಗ ಈ ಸಂಬಂಧವಾಗಿ ಎಲ್ಲಾ ದಿಕ್ಕುಗಳಿಂದಲೂ ಪ್ರತಿರೋಧ ಆರಂಭವಾಯ್ತೋ, ಆಗ ಬಚಾವಾಗಬೇಕೆಂದರೆ ಯಾವುದಾದರೊಂದು ಪಕ್ಷದ ನೆರಳಿರಬೇಕೆಂಬುದು ಪಟೇಲನಿಗೆ ಪಕ್ಕಾ ಆಗಿತ್ತು. ಆಗ ಆತ ಬಂದು ನಿಂತಿದ್ದದ್ದು ಕಾಂಗ್ರೆಸ್ ಪಡಸಾಲೆಗೆ. ಹಾಗೆ ಪಟೇಲ ಕಾಂಗ್ರೆಸ್ ಸೇರಿಕೊಳ್ಳುತ್ತಲೇ ರಾಸಲೀಲೆ ಮುಂತಾದವುಗಳ ಮೂಲಕ ಆತನನ್ನು ಹಣಿಯುವ ಪ್ರಯತ್ನ ನಡೆದಿತ್ತು. ಬಿಜೆಪಿ ಮಂದಿ ಆತನಿಗೆ ನಾಡದ್ರೋಹಿ, ದೇಶ…