ಅವಳ ಸಂಕಟದ ಕಥೆ ಕೇಳಿದ್ರೆ ನಿಮ್ಮ ಕಣ್ಣುಗಳೂ ಹನಿಗೂಡುತ್ತವೆ! ಲೆಕ್ಕಾಚಾರ ಹಾಕಿ ಪ್ರೀತಿಸಿದಂತೆ ಮಾಡುತ್ತಲೇ ಕಂಫರ್ಟ್ ಝೋನ್ ನೋಡಿಕೊಂಡು ಬೆಚ್ಚಗಿರ ಬಯಸೋ ಮನಸುಗಳೇ ತುಂಬಿರೋ ಪ್ರಸ್ತುತ ಜಗತ್ತಿನಲ್ಲಿ ಅಪೂರ್ವ ಪ್ರೇಮ ಕಥಾನಕಗಳು ವಿರಳ. ಆದರೂ ಇಲ್ಲಿಯೇ ಹೃದಯ ಬೆಚ್ಚಗಾಗಿಸುವ, ಕಣ್ಣು ತೋಯಿಸುವಂಥಾ ಅಪ್ಪಟ ಪ್ರೇಮವೊಂದು ಪ್ರವಹಿಸುತ್ತಲೇ ಇರುತ್ತೆ. ಅಂಥಾದ್ದೊಂದು ಪ್ರಾಂಜಲ ಪ್ರೀತಿಯ ಸೆಳೆತಕ್ಕೆ ಸಿಕ್ಕ ಪ್ರೇಮಿಗಳಿಬ್ಬರ ಕಥೆ ಎಂಥಾ ಗಟ್ಟಿಗರ ಕಣ್ಣುಗಳನ್ನೂ ತೇವಗೊಳಿಸುವಂತಿದೆ! ಈ ಅಪೂರ್ವ ಪ್ರೇಮಕಥೆ ನಡೆದದ್ದು ದೂರದ ಲಂಡನ್ನಿನಲ್ಲಿ. ಅಲ್ಲಿನ ಡೇವಿಡ್ ಎಂಬಾತ ಅಚಾನಕ್ಕಾದೊಂದು ಸಂದರ್ಭದಲ್ಲಿ ದೇವತೆಯಂಥಾ ಕ್ರಿಸ್ಟಿನಾ ಲೀ ಎಂಬಾಕೆಯನ್ನು ನೋಡುತ್ತಾನೆ. ಆ ನಂತರ ಪ್ರೇಮಿಗಳ ಮಾಮೂಲಿ ಪಡಿಪಾಟಲಿನಂತೆಯೇ ನಾನಾ ಸರ್ಕಸ್ಸು ನಡೆಸಿ ಆಕೆಯನ್ನು ಮಾತಾಡಿಸುತ್ತಾನೆ. ೨೦೧೫ರ ಡಿಸೆಂಬರ್ ತಿಂಗಳ ಕೊನೆಯಲ್ಲಿ ಅಂತೂ ಡೇವಿಡ್ ಕ್ರಿಸ್ಟಿನಾಳನ್ನು ಮಾತಾಡಿಸಿದ್ದ. ಆ ನಂತರ ಇವರಿಬ್ಬರ ನಡುವೆ ಆತ್ಮೀತೆ ಬೆಳೆದು ಮಾತು, ಭೇಟಿಗಳೆಲ್ಲ ಮುಂದುವರೆದಿದ್ದವು. ಕ್ರಿಸ್ಟಿನಾ ಮೇಲೆ ಬೆಟ್ಟದಷ್ಟು ಪ್ರೀತಿ ಹೊಂದಿದ್ದ ಡೇವಿಡ್ ಭಿನ್ನವಾಗಿ ಪ್ರಪೋಸ್ ಮಾಡಬೇಕೆಂಬ ಆಸೆಯಿಂದ ಕಾಯುತ್ತಲೇ ಇದ್ದ.…
Author: Santhosh Bagilagadde
ಎಲ್ಲರ ಬದುಕಿಗೂ ಅನ್ವಯವಾಗುವಂಥಾ ಕಥೆಗಳು ದೃಷ್ಯರೂಪಕ್ಕಿಳಿದಾಗ ಅದರತ್ತ ಪ್ರೇಕ್ಷಕರ ದೃಷ್ಟಿ ಬಹು ಬೇಗನೆ ನೆಟ್ಟುಕೊಳ್ಳುತ್ತೆ. ಅಷ್ಟಕ್ಕೂ ಅಂಥಾ ಅಪರೂಪದ ನೈಜ ಕಥಾನಕಗಳನ್ನು ದೃಷ್ಯದ ಚೌಕಟ್ಟಿಗೆ ಒಗ್ಗಿಸಿಕೊಳ್ಳೋದು ಕಷ್ಟದ ಕೆಲಸ. ಅಂಥಾದ್ದೊಂದು ಸವಾಲನ್ನು ನವ ನಿರ್ದೇಶಕ ವಿಕ್ರಂ ಪ್ರಭು ಸಮರ್ಥವಾಗಿಯೇ ಗೆದ್ದುಕೊಂಡಿದ್ದಾರೆ. ಆ ಗೆಲುವಿನ ಚಹರೆ ಇದೀಗ ಬಿಡುಗಡೆಗೊಂಡಿರೋ ವೆಡ್ಡಿಂಗ್ ಗಿಫ್ಟ್ ಚಿತ್ರದ ಟ್ರೈಲರ್‌ನಲ್ಲಿ ಸ್ಪಷ್ಟವಾಗಿಯೇ ಗೋಚರಿಸುತ್ತಿದೆ. ಇದೀಗ ಸಮಾಜದ ಒಂದಷ್ಟು ಕುಟುಂಬಗಳ ನೆಮ್ಮದಿಗೆ ಎರವಾಗಿರುವ, ಅಮಾಯಕ ಗಂಡಸರ ಬದುಕನ್ನೇ ಕಿತ್ತುಕೊಳ್ಳುತ್ತಿರುವ ಸಮಸ್ಯೆಯೊಂದಕ್ಕೆ ಇಲ್ಲಿ ಪರಿಣಾಮಕಾರಿಯಾಗಿ ದೃಷ್ಯ ರೂಪ ಕೊಡಲಾಗಿದೆ. ಅದರ ಪ್ರಭಾವ ಎಂಥಾದ್ದಿದೆ ಎಂಬುದಕ್ಕೆ ಟ್ರೈಲರ್‌ಗೆ ಸಿಗುತ್ತಿರುವ ಭರಪೂರ ಮೆಚ್ಚುಗೆಗಳಿಗಿಂತಲೂ ಬೇರೆ ಸಾಕ್ಷಿ ಬೇಕಿಲ್ಲ! ಇತ್ತೀಚೆಗಷ್ಟೇ ಚೆಂದದ್ದೊಂದು ಟೀಸರ್ ಮೂಲಕ ವೆಡ್ಡಿಂಗ್ ಗಿಫ್ಟ್ ಚರ್ಚೆಯ ಕೇಂದ್ರಕ್ಕೆ ಬಂದು ನಿಂತಿತ್ತು. ಅದನ್ನು ನೋಡಿದವರಿಗೆಲ್ಲ ಈ ಚಿತ್ರದಲ್ಲಿ ಗಹನವಾದುದೇನೋ ಇದೆಯೆಂಬ ವಿಚಾರ ಮನವರಿಕೆಯಾಗಿತ್ತು. ಇದೀಗ ಬಿಡುಗಡೆಗೊಂಡಿರುವ ಟ್ರೈಲರ್ ಆ ಭಾವವನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಅದುವೇ ಜುಲೈ ೮ರಂದು ಬಿಡುಗಡೆಯಾಗಲಿರುವ ವೆಡ್ಡಿಂಗ್ ಗಿಫ್ಟ್ ಅನ್ನು ಬಹುನಿರೀಕ್ಷಿತ…
ಕರಣ್ ಅನಂತ್ ಮತ್ತು ಅನಿರುದ್ಧ್ ಮಹೇಶ್ ನಿರ್ದೇಶನದ ಹರಿಕಥೆ ಅಲ್ಲಿ ಗಿರಿಕಥೆ ಚಿತ್ರದ ಟ್ರೈಲರ್ ಲಾಂಚ್ ಆಗಿದೆ. ಅದು ಬಿಡುಗಡೆಯಾಗಿ ದಿನ ಕಳೆಯೋದರೊಳಗೇ ಹಬ್ಬಿಕೊಂಡಿರುವ ಕ್ರೇಜ್, ಹರಿದು ಬರುತ್ತಿರುವ ಸದಭಿಪ್ರಾಯಗಳನ್ನು ಕಂಡು ಒಂದಿಡೀ ಚಿತ್ರತಂಡ ಖುಷಿಗೊಂಡಿದೆ. ಈ ಟೈಟಲ್ ಅನೌನ್ಸ್ ಆದಂದಿನಿಂದ ಈವರೆಗೂ ಸಾಕಷ್ಟು ಪಲ್ಲಟಗಳು ಸಂಭವಿಸಿವೆ. ಯಾರೂ ನಿರೀಕ್ಷಿಸದಂತೆ ಕೊರೋನಾ ಬಂದು ಹೋಗಿದೆ. ಆ ಕಾಲಘಟ್ಟದಲ್ಲಿ ಭಾರೀ ಸಂಕಷ್ಟಕ್ಕೀಡಾಗಿದ್ದ ಸಿನಿಮಾಗಳಲ್ಲಿ ಹರಿಕಥೆ ಅಲ್ಲ ಗಿರಿಕಥೆಯೂ ಸೇರಿಕೊಂಡಿದೆ. ಅದೆಲ್ಲವನ್ನೂ ಸಮರ್ಥವಾಗಿ ದಾಟಿಕೊಂಡು ಅಂದುಕೊಂಡದ್ದಕ್ಕಿಂತಲೂ ಚೆಂದಗೆ ಸಿನಿಮಾ ಮಾಡಿ ಮುಗಿಸಿರುವ ತೃಪ್ತ ಭಾವ ಚಿತ್ರತಂಡದಲ್ಲಿದೆ. ಇತ್ತೀಚೆಗಷ್ಟೇ ಹರಿಕಥೆ ಅಲ್ಲ ಗಿರಿಕಥೆಯ ಟೀಸರ್ ಬಿಡುಗಡೆಗೊಂಡಿತ್ತು. ಅದರಲ್ಲಿ ಮಿಂಚಿದ್ದ ಒಂದಷ್ಟು ವಿಚಾರಗಳೇ ನಾನಾ ದಿಕ್ಕುಗಳಲ್ಲಿ ಕುತೂಹಲ ಹುಟ್ಟು ಹಾಕಿತ್ತು. ಇದೀಗ ಈ ಟ್ರೈಲರ್‌ನಲ್ಲಿ ಕಥೆಯ ಸುಳಿವು ಬಿಟ್ಟುಕೊಡದಂತೆಯೇ ಪಾತ್ರ ಪರಿಚಯ ಮಾಡಿಸುವಲ್ಲಿ ನಿರ್ದೇಶಕರು ಯಶ ಕಂಡಿದ್ದಾರೆ. ಈ ಹಿಂದೆ ಗಿರಿಕಥೆ ಎಂದರೇನು? ಇದರಲ್ಲಿ ರಿಶಭ್ ಶೆಟ್ಟಿ ಮುಂತಾದವರ ಪಾತ್ರಗಳು ಹೇಗಿವೆ ಅಂತೆಲ್ಲ ಜನ ತಲೆ ಕೆಡಿಸಿಕೊಂಡಿದ್ದರು.…
ನಮ್ಮ ದೇಶದಲ್ಲಿ ಆನ್‌ಲೈನ್ ಶಾಪಿಂಗ್ ಮಾಡಿದವರನ್ನು ವೆರೈಟಿ ವೆರೈಟಿಯಾಗಿ ವಂಚಿಸಲಾಗುತ್ತಿದೆ. ಮೊಬೈಲ್ ಕೊಂಡವರಿಗೆ ಕಲ್ಲು ಕಳಿಸಿ, ದುಬಾರಿ ಬೆಲೆಯ ಸೀರೆಯ ಜಾಗದಲ್ಲಿ ಲೋ ಕ್ವಾಲಿಟಿ ಸೀರೆ ಇಟ್ಟು ಏನೇನೋ ದೋಖಾ ಚಾಲ್ತಿಯಲ್ಲಿದೆ. ಆದರೆ ಇಲ್ಲಿನ ಜನ ಛೇ ಹೀಗಾಯ್ತಲ್ಲಾ ಅಂತ ಮರುಗಿ, ನಾಲಕ್ಕು ಮಂದಿಯ ಮುಂದೆ ಗೋಳು ತೋಡಿಕೊಂಡು ಮತ್ತೆ ಕುಯ್ಯಿಸಿಕೊಳ್ಳಲು ರೆಡಿಯಾಗ್ತಾರೆ. ಇನ್ನು ಆನ್‌ಲೈನ್ ಸೇರಿದಂತೆ ಯಾವ ಥರದ ಮಾರುಕಟ್ಟೆಯ ಮಂದಿಯೂ ತಮ್ಮ ವಿರುದ್ಧ ಗ್ರಾಹಕರು ಕೊಡೋ ದೂರಿಗೆ ಕ್ಯಾರೇ ಅನ್ನೋದಿಲ್ಲ.ಆದರೆ ಚೀನಾದ ಏರಿಯಾವೊಂದರಲ್ಲಿ ಪ್ರಖ್ಯಾತ ಆನ್‌ಲೈನ್ ಶಾಪಿಂಗ್ ಸಂಸ್ಥೆಯಾದ ಆಲಿಬಾಬಾದ ಬ್ರ್ಯಾಂಚ್ ಓನರ್ ಫುಲ್ ಡಿಫರೆಂಟು. ಆತ ತನ್ನ ಬ್ರ್ಯಾಂಚಿನ ವಿರುದ್ಧ ಮಹಿಳಾ ಗ್ರಾಹಕಿಯೊಬ್ಬಳು ಮಾಡಿದ ಆರೋಪದಿಂದ ಕೆರಳಿ ಮಾಡಿದ ಸಾಹಸ ಕೋಲಿದರೆ ಎಂಥವರಿಗೂ ಅಚ್ಚರಿಯಾಗುತ್ತದೆ! ನಡೆದದ್ದೇನೆಂದರೆ, ಕಳೆದ ವರ್ಷದ ಡಿಸೆಂಬರ್ ಇಪ್ಪತ್ತರಂದು ಕ್ಷಿಯೋ ಎಂಬಾಕೆ ಆಲಿಬಾಬಾದಲ್ಲಿ ೩೦೦ ಯುವಾನ್ ಬೆಲೆಯ ಒಂದಷ್ಟು ಬಟ್ಟೆಗಳನ್ನು ಆರ್ಡರ್ ಮಾಡಿದ್ದಳು. ಹಾಗೆ ಬುಕ್ ಮಾಡೋವಾಗ ಅದಾಗಿ ಮೂರು ದಿನದೊಳಗೆ ಆ ಬಟ್ಟೆಗಳು…
ಹುಟ್ಟೋ ಮಗು ಏನಿಲ್ಲವೆಂದರೂ ಎರಡು ಕೇಜಿ ಮೇಲಿರುತ್ತೆ ಅನ್ನೋದು ಸಾಮಾನ್ಯ ವಿಚಾರ. ಇದಕ್ಕಿಂತ ತೂಕ ಕೊಂಚ ಕಡಿಮೆ ಇದ್ದರೂ ಅಂಥಾ ಕೂಸು ಉಸಿರುಳಿಸಿಕೊಳ್ಳೋದು ಕಷ್ಟ. ಆದರೆ ಅಂಥಾ ನಂಬಿಕೆಯನ್ನೆಲ್ಲ ಸುಳ್ಳು ಮಾಡುವಂಥಾ ಮಗುವೊಂದು ಅರಬ್ ರಾಷ್ಟ್ರದಲ್ಲಿ ಹುಟ್ಟಿ ವೈದ್ಯಲೋಕವೇ ಅಚ್ಚರಿಗೊಳ್ಳುವಂತೆ ಮಾಡಿದೆ. ಈ ಮಗು ಹುಟ್ಟಿದಾಗ ಇದರ ತೂಕ ಇದ್ದದ್ದು ಕೇಲವ ೬೩೧ ಗ್ರಾಂ ಮಾತ್ರ. ಅಂದರೆ ಪುಟ್ಟದೊಂದು ಐಪಾಡ್‌ನ ತೂಕದಷ್ಟಿದ್ದ ಈ ಮಗುವನ್ನು ಪವಾಡ ಸದೃಷವಾಗೇ ಉಳಿಸಿಕೊಂಡ ಸಂಪೂರ್ಣ ಮೆಚ್ಚುಗೆ ಕರ್ನಾಟಕ ಮೂಲದ ವೈದ್ಯ ಡಾ.ಗೋವಿಂದ ಶೇಣೈ ಅವರಿಗೆ ಸಲ್ಲುತ್ತದೆ. ಅಬುದಾಬಿಯ ಒeಜeoಡಿ೨೪x೭ ಎಂಬ ಆಸ್ಪತ್ರೆಯಲ್ಲಿ ಈ ಮಗು ಜನಿಸಿದೆ. ಇದರ ತಾಯಿ ಈ ಆಸ್ಪತ್ರೆಗೆ ದಾಖಲಾಗುತ್ತಲೇ ನಾನಾ ಅಪೌಷ್ಟಿಕತೆಯಿಂದ ಬಳಲುತಿದ್ದಳು. ಗರ್ಭಾವಸ್ಥೆಯಲ್ಲಿ ಬರುವ ಪ್ರೀಕ್ಲಂಸಿಯಾ ಎಂಬ ಖಾಯಿಲೆಯಿಂದ ಬಳಲುತಿದ್ದ ಆ ತಾಯಿಗೆ ಶೆಣೈ ದೇಖಾರೇಖಿಯಲ್ಲಿ ಗೆರಿಗೆ ಮಾಡಿಸಲಾಗಿತ್ತು. ಆದರೆ ಗುಟ್ಟಿದ್ದು ಅಂಗೈಯಗಲದ ಕೂಸು. ಇದನ್ನು ಸವಾಲಗಿ ಸ್ವೀಕರಿಸಿದ ವೈದ್ಯರ ತಂಡ ಈ ಮಗುವನ್ನು ನಿಗಾದಲ್ಲಿಟ್ಟು ನಿರಂತರವಾದ ಚಿಕಿತ್ಸೆ ನೀಡಿ…
ಈವತ್ತಿನ ಸ್ಥಿತಿಯಲ್ಲಿ ಮೊಬೈಲ್ ಎಂಬೋ ಮಾಯೆಯನ್ನು ಒಂದೆರಡು ಘಂಟೆ ಬಿಟ್ಟಿರೋದನ್ನೂ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆ ತೆರೆನಾಗಿ ಎಲ್ಲರನ್ನೂ ಆವರಿಸಿಕೊಂಡಿರೋ ಈ ಮೊಬೈಲ್ ಸೇರಿದಂತೆ ಸಾಮಾಜಿಕ ಜಾಲತಾಣಗಳನ್ನು ತೊರೆದು ಬದುಕೋದೆಂದರೆ ಆಧುನಿಕ ಸನ್ಯಾಸವಿದ್ದಂತೆ. ಅಂಥಾದ್ದರಲ್ಲಿ ವಿಶ್ವಾಧ್ಯಂತ ಅಭಿಮಾನಿಗಳನ್ನು ಹೊಂದಿರೋ ಸೆಲೆಬ್ರಿಟಿಯೊಬ್ಬ ಅಖಂಡ ಎರಡು ವರ್ಷಗಳಿಂದ ಮೊಬೈಲ್ ತೊರೆದು ಬದುಕಿದ್ದಾನೆಂದರೆ ನಂಬಲು ತುಸು ಕಷ್ಟವಾದೀತು. ಆದರೆ ಎಡ್ ಶಿರನ್ ಇಂಗ್ಲಿಷ್‌ನ ಖ್ಯಾತ ಗಾಯಕ, ಗೀತರಚನೆಕಾರ ಮತ್ತು ಗಿಟಾರ್ ವಾದಕನ ವಿಚಾರದಲ್ಲಿ ಈ ಅಚ್ಚರಿಯನ್ನು ನಂಬದಿರಲು ಸಾಧ್ಯವೆ ಇಲ್ಲ. ಎಡ್ ಹಾಡುಗಳಿಗೆ ಹುಚ್ಚೇಳೋ ಅಭಿಮಾನಿ ವಲಯ ವಿಶ್ವಾಧ್ಯಂತ ಇದೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಈತ ಸೆಲೆಬ್ರಿಟಿಯೇ. ಒಂದು ಕಾಲದಲ್ಲಿ ಸಾಮಾಜಿಕ ಜಾಲತಾಣದ ಮೂಲಕವೇ ಅಭಿಮಾನಿಇಗಳ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದ ಈತ ಈಗ್ಗೆ ಎರಡು ವರ್ಷಗಳ ಹಿಂದೆ ಸರಿಯಾಗಿ ಡಿಸೆಂಬರ್ ೧೯ನೇ ತಾರೀಕಿನಂದು ತಾನು ಇನ್ನು ಮುಂದೆ ಮೊಬೈಲ್ ಬಳಸೋದಿಲ್ಲ, ಟ್ವಿಟರ್, ಈ ಮೇಲ್ ಯಾವುದನ್ನೂ ಬಳಸೋದಿಲ್ಲ ಅಂತ ಘೋಶಿಸಿದ್ದ. ಆದರೆ ಅಭಿಮಾನಿಗಳು ಇದನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಆದರೆ…
ಸಣ್ಣ ಸಣ್ಣ ಕೊರತೆಗಳಿಗೂ ಕೊರಗುತ್ತಾ ಕೂತಲ್ಲೇ ಕೊಳೆಯುತ್ತಿರೋ ಅದೆಷ್ಟು ಬದುಕುಗಳಿವೆಯೋ ಜಗತ್ತಿನಲ್ಲಿ? ಆದರೆ ಈ ಜಗತ್ತು ಚೆಂದ ಅನ್ನಿಸೋದು ಬದುಕಲು ಸಾಧ್ಯವೇ ಇಲ್ಲ ಎಂಬಂಥಾ ಕೊರತೆಗಳಿದ್ದರೂ ಏನಾದರೊಂದನ್ನು ಸಾಧಿಸೋ ಬಯಕೆಯ ಜೀವಗಳಿಂದ. ಸಾಧಿಸೋ ಛಲಕ್ಕೆ ಸ್ಫೂರ್ತಿಯಂತಿರೋ ಇಂಥವರ ಬದುಕಿನ ಪುಟಗಳೂ ರೋಚಕ! ಇಂಥಾದ್ದೇ ಅಪರೂಪದ ವ್ಯಕ್ತಿ ರಿಚಿ ಪಾರ್ಕರ್. ಯುಎಸ್ ಮೂಲದ ಪ್ರಖ್ಯಾತ ಕಾರು ತಯಾರಿಕಾ ಸಂಸ್ಥೆಯಾದ ಓಂSಅಂಖ ನಲ್ಲಿ ಎಂಜಿನೀಯರ್ ಆಗಿರೋ ರಿಚಿ ಪಾರ್ಕರ್ ಕಾರಿನ ನವೀನ ಡಿಸೈನ್‌ಗಳಲ್ಲಿ ಪಳಗಿದಾತ. ಎಂಥವರೂ ಅಚ್ಚರಿಗೊಳ್ಳುವಂಥಾ ಕ್ರಿಯೇಟಿವಿಟಿಯ ಮೂಲಕವೇ ಇದುವರೆಗೂ ಸಾಕಷ್ಟು ಡಿಸೈನ್‌ಗಳ ರೂವಾರಿಯಾಗಿರೋ ಈತನಿಗೆ ಎರಡೂ ಕೈಗಳಿಲ್ಲ! ಹುಟ್ಟುತ್ತಲೇ ಎರಡೂ ಕೈಯಿಲ್ಲದ ರಿಚಿ ಪಾರ್ಕರ್ ಆತ್ಮವಿಶ್ವಾಸ ತುಂಬಿಕೊಂಡು ಬೆಳೆದು ನಿಲ್ಲುವಂತೆ ಮಾಡಿದ್ದು ಹೆತ್ತವರು ಮತ್ತು ಮನೆ ಮಂದಿ. ಕೈ ಇಲ್ಲ ಎಂಬ ಕೊರಗನ್ನೂ ಮೀರಿಕೊಂಡು ಬದುಕೋ ಕಲೆಯನ್ನು ಮನೆಯವರಿಂದಲೇ ಕಲಿತುಕೊಂಡ ರಿಚಿಗೆ ಆರಂಭದಿಂದಲೂ ವಿಪರೀತವಾದ ಕಾರಿನ ಹುಚ್ಚು. ಎರಡೂ ಕೈಗಳಿದ್ದಿದ್ದರೆ ಥರ ಥರದ ಕಾರುಗಳನ್ನು ಡ್ರೈ ಮಾಡುತ್ತಿದ್ದೆ ಅಂತ ಆಗಾಗ ಮೌನಕ್ಕೆ…
ಚಲನ ಚಿತ್ರಗಳು ಮಾಡೋ ಮೋಡಿಯೇ ವಿಚಿತ್ರವಾದದ್ದು. ಯಾವುದೋ ಚಿತ್ರದಲ್ಲಿನ ಪಾತ್ರಗಳನ್ನು ಅನುಕರಿಸಲು ನೋಡಿ ಜೀವ ಕಳೆದುಕೊಂಡವರ ಅನೇಕ ಉದಾಹರಣೆಗಳು ಸಿಗುತ್ತವೆ. ಆದರೆ ಇಂಥಾ ಅನುಕರಣೆಯನ್ನೇ ಅವಕಾಶದ ಹೆಬ್ಬಾಗಿಲಾಗಿಸಿಕೊಂಡ ಉದಾಹರಣೆಗಳು ಮಾತ್ರ ವಿರಳ. ಪಾಕಿಸ್ತಾನದ ಕರಾಚಿಯ ಮಹಮದ್ ಸಮೀರ್ ಎಂಬ ಹುಡುಗ ಇಂಥಾ ವಿರಳ ಉದಾಗರಣೆಗಳ ಸಾಲಿನಲ್ಲಿ ಒಬ್ಬನಾಗಿ ದಾಖಲಾಗಿದ್ದಾನೆ. ಈ ಹುಡುಗನಿಗೆ ಈಗಿನ್ನೂ ಹದಿನಾಲಕ್ಕು ವರ್ಷ ವಯಸ್ಸು. ಈತ ತನ್ನ ತಲೆಯನ್ನು ಸಂಪೂರ್ಣವಾಗಿ ಹಿಂದಕ್ಕೆ ತಿರುಗಿಸೋ ಕಲೆಯ ಮೂಲಕ ಜಗತ್ತಿನಾಧ್ಯಂತ ಸದ್ದು ಮಾಡಿದ್ದಾನೆ. ಇದಲ್ಲದೆ ಹಾಲಿವುಡ್ ಚಿತ್ರವೊಂದರಲ್ಲಿ ನಟಿಸೋ ಅವಕಾಶವನ್ನೂ ಗಿಟ್ಟಿಸಿಕೊಂಡಿದ್ದಾನೆ. ಸಾಮಾನ್ಯವಾಗಿ ಕತ್ತನ್ನು ಕೊಂಚ ಆಚೀಚೆ ತಿರುಗಿಸೋ ಸಾಹಸ ಮಾಡಿದರೂ ಉಳುಕಿ ನೋವಾಗುತ್ತೆ. ಆದರೆ ಈ ಹುಡುಗ ತನ್ನ ಕತ್ತನ್ನು ೧೮೦ ಡಿಗ್ರಿಗೆ ಸಲೀಸಾಗಿ ತಿರುಗಿಸುತ್ತಾನೆ. ಅಂದರೆ ಸಂಪೂರ್ಣವಾಗಿ ಬೆನ್ನಿನ ಮಧ್ಯ ಭಾಗಕ್ಕೆ ಮುಖ ತಿರುಗಿಸುತ್ತಾನೆ! ಈತ ಇಂಥಾದ್ದೊಂದು ವಿಚಿತ್ರ ಅಭ್ಯಾಸ ಮಾಡಿಕೊಂಡಿದ್ದು ಹಾಲಿವುಡ್‌ನ ಹಾರರ್ ಚಿತ್ರಗಳನ್ನು ನೋಡಿಯಂತೆ. ಅದರಲ್ಲಿ ದೆವ್ವಗಳ ತಲೆ ಏಕಾಏಕಿ ಬೆನ್ನಿನತ್ತ ತಿರುಗಿಕೊಳ್ಳುತ್ತದಲ್ಲಾ? ಅದನ್ನು ಕಂಡು…
ತ್ರಿವೇಣಿ ಸಂಗಮದ ಸ್ಥಳದಲ್ಲಿ ಈ ವರ್ಷವೂ ಜನವರಿ ಎರಡನೇ ತಾರೀಕಿನಿಂದ ಮಾಘ ಮೇಳ ನಡೆಯುತ್ತಿದೆ. ಭಾರತೀಯ ಸಂಸ್ಕೃತಿಯಲ್ಲಿ ಅತ್ಯಂತ ಪ್ರಾಧಾನ್ಯತೆ ಪಡೆದುಕೊಂಡಿರೋ ಈ ಮೇಳ ನಾಗಾ ಸಾಧುಗಳ ಪಾಲಿಗೂ ಪುಣ್ಯದ ಆಚರಣೆ. ಒಂದರ್ಥದಲ್ಲಿ ಈ ನಾಗಾ ಸಾಧುಗಳೇ ಈ ಮೇಳದ ಪ್ರಧಾನ ಆಕರ್ಷಣೆ. ಇಂಥಾ ನಾಗಾ ಸಾಧುಗಳು ಅತೀಂದ್ರಿಯ ಶಕ್ತಿ ಸಾಧನೆಗಳ ಮೂಲಕ, ಮನುಷ್ಯ ಸಹಜ ವಾಂಛೆಗಳನ್ನು ಮೀರಿ ನಿಲ್ಲುವ ಹಠ ಯೋಗದ ಮೂಲಕ ಗಮನ ಸೆಳೆಯುತ್ತಾರೆ. ಆದರೆ ಈ ನಾಗಾ ಸಾಧುಗಳಲ್ಲೇ ಹಿರೀ ವಯಸ್ಸಿನ ಸಾಧುವೊಬ್ಬ ತನ್ನ ಗುಪ್ತಾಂಗದ ಬಲ ಪ್ರಯೋಗದ ಮೂಲಕವೇ ಲೋಡಾಗಿ ನಿಂತಿರೋ ಮಿನಿ ಟ್ರಕ್ಕುಗಳನ್ನು ಎಳೆಯೋ ಮೂಲಕ ಎಲ್ಲರನ್ನೂ ದಂಗಾಗಿಸಿದ್ದಾನೆ! ಈ ನಾಗಾ ಸಾಧುಗಳು ಮೈ ಮೇಲೆ ಬಟ್ಟೆ ಧರಿಸೋದಿಲ್ಲ. ಹುಟ್ಟುಡುಗೆಯಲ್ಲೇ ಓಡಾಡಿಕೊಂಡಿರೋ ಈ ಸಾಧುಗಳ ಪಾಲಿಗೆ ಮನುಷ್ಯರನ್ನು ಕ್ಷಣ ಕ್ಷಣವೂ ಕಾಡುವ ಕಾಮವೇ ಚಾಮಲೆಂಜಿಂಗ್ ವಿಚಾರ. ಸಾಮಾನ್ಯವಾಗಿ ಬೆತ್ತಲೆ ಎಂಬುದು ಕಾಮ, ಪ್ರಚೋದಕ. ಆದರೆ ಹಠ ಯೋಗದ ಮೂಲಕ ಅಂಥಾ ಕಾಮ ವಾಂಚೆಗಳನ್ನು ಮೀರಿಕೊಂಡಿರೋದು…
ಸುಡುವ ಮರಳಿನ ಮೇಲೂ ಹರಡಿಕೊಂಡ ಹಿಮ! ಮರುಭೂಮಿ ಎಂಬ ಹೆಸರು ಕೇಳಿದೇಟಿಗೆ ಎದೆಯೆಲ್ಲ ಬಿಸಿಲು ತುಂಬಿಕೊಂಡು ಬಾಯಾರಿದಂಥಾ ಫೀಲ್ ಹುಟ್ಟೋದು ಸಹಜ. ಎತ್ತಲಿಂದ ಯಾವ ದಿಕ್ಕಿನತ್ತ ಕಣ್ಣು ಹಾಯಿಸಿದರೂ ಮರಳು ರಾಶಿ ಬಿಟ್ಟರೆ ಬೇರೇನೂ ಇಲ್ಲದ ಇಂಥಾ ಮರುಭೂಮಿಯಲ್ಲಿ ಮಳೆ ಬೀಳಬೇಕೆಂಬುದು ರೊಮ್ಯಾಂಟಿಕ್ ಕಲ್ಪನೆ. ಇದೀಗ ಇಡೀ ವಿಶ್ವದಲ್ಲೇ ದೊಡ್ಡ ಮರುಭೂಮಿ ಎಂಬ ಖ್ಯಾತಿ ಹೊಂದಿರೋ ಸಹಾರಾದಲ್ಲಿ ಅಂಥಾ ರೊಮ್ಯಾಂಟಿಕ್ ಕಲ್ಪನೆಯೂ ನಿಜವಾಗಿದೆ. ಇದೀಗ ಸಹರಾ ಮೈ ತುಂಬಾ ಹಿಮ ಹೊದ್ದುಕೊಂಡು ಅಕ್ಷರಶಃ ಹಿಮಾಲಯದಂತೆ ಕಂಗೊಳಿಸುತ್ತಿದೆ! ಭೂಮಿಯಿಂದೆದ್ದ ಹಬೆ ಮರಳ ಕಣಗಳನ್ನೂ ಬಿಸಿ ಮಾಡುವಂಥಾ ವಾತಾವರಣವಿರೋ ಸಹಾರಾ ಮರುಭೂಮಿಯಲ್ಲಿ ಹಿಮ ನಿಲ್ಲೋದು ಹೇಗೆ ಸಾಧ್ಯ ಎಂಬ ಅಚ್ಚರಿ ಕಾಡೋದು ಸಹಜ. ಆದರೆ ಇಂಥಾದ್ದೊಂದು ಆಘಾತಕಾರಿ ಬೆಳವಣಿಗೆ ಸಹಾರಾ ಮರುಭೂಮಿಯಲ್ಲಿ ಕಾಣಿಸಲು ಶುರುವಾದದ್ದಕ್ಕೆ ಇದು ಮೂರನೇ ವರ್ಷ. ೨೦೧೬ರಲ್ಲಿಯೇ ಮೊದಲ ಸಲ ಚಳಿಗಾಲದಲ್ಲಿ ಬೆಳಗ್ಗೆ ಇಡೀ ಮರುಭೂಮಿಯ ತುಂಬಾ ಹಿಮ ಹರಡಿಕೊಂಡು ಅಲ್ಲಿನ ಜನ ಬೆಚ್ಚಿ ಬಿದ್ದಿದ್ದರು! ಅದಾದ ಮಾರನೇ ವರ್ಷವೂ ಚಳಿಗಾಲದಲ್ಲಿ…