ಕೊರೋನಾ ಮೂರನೇ ಅಲೆಯನ್ನೂ ಕರ್ನಾಟಕದ ಮಟ್ಟಿಗೆ ಡ್ರಗ್ ಕೇಸ್ ತಡೆದು ನಿಲ್ಲಿಸಿತ್ತು. ದೃಷ್ಯ ಮಾಧ್ಯಮಗಳ ಚಿತ್ತವೆಲ್ಲ ಏಕಾಏಕಿ ಸಂಜನಾ ಹಾಗೂ ರಾಗಿಣಿಯತ್ತಲೇ ಕೀಲಿಸಿಕೊಂಡಿತ್ತು. ಅಫ್ಘಾನಿಸ್ಥಾನದ ಉಗ್ರರ ಅಟ್ಟಹಾಸವನ್ನೂ ಮೆಟ್ಟಿ ನಿಂತು ಸುದ್ದಿಕೇಂದ್ರಕ್ಕೆ ಬಂದ ಖ್ಯಾತಿ ಈ ನಟಿಯರಿಗೆ ಸಲ್ಲುತ್ತೆ. ಇರಲಿ, ಇದು ನಮ್ಮ ರಾಜ್ಯದ ವಿಚಾರ. ಆದ್ರೆ, ಈ ಡ್ರಗ್ ಡೀಲಿಂಗ್ ವಿಚಾರದಲ್ಲಿ ಮಾತ್ರ ಬಗೆದಷ್ಟೂ ಚಿತ್ರವಿಚಿತ್ರವಾದ ಸಂಗತಿಗಳು ಹೊರಬೀಳುತ್ತವೆ. ಡ್ರಗ್ ಡೀಲರ್‌ಗಳು ಪೊಲೀಸರನ್ನೇ ಯಾಮಾರಿಸಿ ದಂಧೆ ನಡೆಸೋದರಲ್ಲಿ ಪಂಟರುಗಳು. ನಶೆಯ ಏಟಿನಲ್ಲಿ, ಕಾಸಿನ ಮೋಹದಲ್ಲಿ ಎಂಥಾ ರಿಸ್ಕಿಗಾದರೂ ಸೈ ಅನ್ನೋ ಕಿರಾತಕರ ಲೋಕವದು. ಸದಾ ಖಾಕಿ ಪಡೆ ಪಹರೆ ಕಾಯುತ್ತಿದ್ದರೂ ಅದರಾಚೆಗೆ ನಶೆ ಹಬ್ಬಿಸೋ ಈ ಮಂದಿಯದ್ದು ನಿಜಕ್ಕೂ ಪ್ರಳಯಾಂತಕ ಬುದ್ಧಿ. ಇಂಥಾ ಡ್ರಗ್ ಕಾರ್ಟಲ್‌ಗಳು ವಿಶ್ವಾದ್ಯಂತ ಆಕ್ಟೀವ್ ಆಗಿರೋದು ಹೊಸಾ ವಿಚಾರವೇನಲ್ಲ. ಯಾಕಂದ್ರೆ, ಆ ದಂಧೆಗೆ ಭಾರೀ ಇತಿಹಾಸವಿದೆ. ಮುಂದುವರೆದ ರಾಷ್ಟ್ರಗಳಲ್ಲಿಯಂತೂ ನಾವೆಲ್ಲ ಕಣ್ಣು ಬಿಡುವ ಮುನ್ನವೇ ನಶೆಯ ನರ್ತನ ಶುರುವಾಗಿ ಹೋಗಿತ್ತು. ಸಾಮಾನ್ಯವಾಗಿ ಈ ಡ್ರಗ್ ಡೀಲಿಂಗ್…
Author: Santhosh Bagilagadde
ಒಂದರೆಕ್ಷಣ ಮೊಬೈಲು ಕಾಣಿಸದಿದ್ದರೆ ದೇಹದ ಅಮೂಲ್ಯ ಅಂಗವೇ ಆದೃಷವಾದಂತೆ ಕಂಗಾಲಾಗಿ ಬಿಡುತ್ತೇವೆ. ಜೊತೆಯಲ್ಲಿ ಯಾರೆಂದರೆ ಯಾರೂ ಇಲ್ಲದ ಒಂಟಿ ಪಿಶಾಚಿಯಂಥ ಕ್ಷಣಗಳನ್ನೂ ನಾವು ಎಂಜಾಯ್ ಮಾಡಬಹುದೇನೋ. ಆದರೆ ಮೊಬೈಲೆಂಬ ಮಾಯಾವಿಯಿಲ್ಲದ ಕ್ಷಣಗಳನ್ನು ಬಹುತೇಕರು ಕಲ್ಪಿಸಿಕೊಳ್ಳಲೂ ಹಿಂಜರಿಯುತ್ತಾರೆ. ಮೊಬೈಲಿನ ಅನಾಹುತಗಳ ಬಗ್ಗೆ ಮಣಗಟ್ಟಲೆ ಮಾತಾಡುವವರು, ಮೊಬೈಲಿನ ಸಂಗಕ್ಕೆ ಬಿದ್ದವರನ್ನು ಗೇಲಿ ಮಾಡುವವರೂ ಕೂಡಾ ಮೊಬೈಲಿಲ್ಲದೆ ಬದುಕೋದು ಕಷ್ಟವಿದೆ. ಹೀಗೆ ಇಡೀ ವಿಶ್ವವನ್ನೇ ಆವರಿಸಿಕೊಂಡಿರೋ ಮೊಬೈಲು ನಾನಾ ಕಾಯಿಲೆಗಳಿಗೆ, ಗೀಳುಗಳಿಗೆ ಕಾರಣವಾಗಿದೆ ಅನ್ನೋದು ಗೊತ್ತಿರುವಂಥಾದ್ದೇ. ಆದರೆ ಸದಾ ನಮ್ಮ ಅಂಗೈಯನ್ನು ಆಲಂಗಿಸಿಕೊಳ್ಳುವ ಮೊಬೈಲು ಅದೆಷ್ಟು ಗಲೀಜಿನ ಕೊಂಪೆ ಅನ್ನೋದು ಮಾತ್ರ ಹೆಚ್ಚಿನ ಮಂದಿಗೆ ಗೊತ್ತಿರಲಿಕ್ಕಿಲ್ಲ! ಮೊಬೈಲಿಂದಾಗೋ ಸಾಕಷ್ಟು ವ್ಯತಿರಿಕ್ತ ಪರಿಣಾಮಗಳ ಬಗ್ಗೆ ಚರ್ಚೆಯಾಗುತ್ತಲೇ ಇದ್ದಾವೆ. ಅವೆಲ್ಲವೂ ಮೊಬೈಲುಗಳ ಮೂಲಕವೇ ಹರಿದಾಡುತ್ತಿವೆ ಅನ್ನೋದು ಮಾತ್ರ ನಿಜಕ್ಕೂ ವಿಕಟ ವಾಸ್ತವ. ದಿನಾ ಬೆಳಗೆದ್ದು ಶುರುಹಚ್ಚಿಕೊಂಡರೆ ರಾತ್ರಿ ಹಾಸಿಗೆಗೆ ಒರಗಿಕೊಳ್ಳುವಾಗಲೂ ಮೊಬೈಲು ಜೊತೆಗೇ ಇರುತ್ತೆ. ಅದೊಂಥರಾ ದುಬಾರಿ ವೆಚ್ಚ ಮಾಡಿ ಕೊಳೆತು ನಾರೋ ಪಾಯಿಖಾನೆಯನ್ನೇ ಎದೆ ಮೇಲಿಟ್ಟುಕೊಂಡಂತೆ ಅಂದ್ರೆ…
ಇನ್ನೊಂದಷ್ಟು ವರ್ಷ ಕಳೆಯುತ್ತಲೇ ಬೆಂಗಳೂರಿನ ಬದುಕು ಮತ್ತಷ್ಟು ದುಸ್ತರವಾಗಲಿದೆಯಾ? ಇಂಥಾದ್ದೊಂದು ಪ್ರಶ್ನೆ ಹುಟ್ಟಿಕೊಂಡು ಒಂದಷ್ಟು ವರ್ಷಗಳೇ ಕಳೆದಿವೆ. ಅದರ ಜೊತೆ ಜೊತೆಗೇ ಬೆಂಗಳೂರು ಮತ್ತಷ್ಟು ನಿಗೂಢ ವಾಗುತ್ತಾ, ವಿಕ್ಷಿಪ್ತವಾಗುತ್ತಲೇ ಸಾಗುತ್ತಿದೆ. ಇಲ್ಲಿನ ಯುವಕ ಯುವತಿಯರಲ್ಲಿ ಒಂದಷ್ಟು ಮಂದಿ ಈಗಾಗಲೇ ನಶೆಯ ಜಗತ್ತಿಗೆ ಶರಣೆಂದಿದ್ದಾರೆ. ತೀರಾ ಕಟ್ಟುನಿಟ್ಟಿನ ನೀತಿ ನಿಯಮಾವಳಿ ಜಾರಿಯಿರುವ ಶಾಲಾ ಕಾಲೇಜುಗಳಲ್ಲಿ ಕೂಡಾ ಕುಂತಲ್ಲೇ ಕೈಚಾಚಿದರೂ ಸಲೀಸಾಗಿಯೇ ಬೇಕಿನ್ನಿಸಿದ ಬ್ರಾಂಡಿನ ಡ್ರಗ್ಸ್ ಸಿಗುವಂಥಾ ವಾತಾವರಣವಿದೆ. ಡ್ರಗ್ಸ್ ಚಟಕ್ಕೆ ತುತ್ತಾದವರನ್ನು ಹಾದಿ ಬಿಟ್ಟವರೆಂದು ಜರಿದು ಸುಮ್ಮನಾಗುವುದು ಸಲೀಸಿನ ಸಂಗತಿ. ಆದರೆ ಅದೆಂಥಾ ಮಡಿವಂತಿಕೆಯ ಕೋಟೆಯನ್ನಾದರೂ ಬೇಧಿಸಿ ಒಳ ನುಗ್ಗಿ ಬಿಡುವಂಥಾ ತೀವ್ರ ಸ್ವರೂಪದಲ್ಲಿ ಡ್ರಗ್ಸ್ ದಂಧೆ ಬೆಳೆದು ನಿಂತಿದೆ. ಯಾವುದು ನಿಶೇಧಿತವೋ ಅಂಥಾದ್ದರ ಕಡೆಗೇ ಹೆಚ್ಚು ಆಕರ್ಷಿತಗೊಳ್ಳುವ ಎಳೇ ಮನಸುಗಳಿರುವ ಶಾಲಾ ಕಾಲೇಜುಗಳಲ್ಲಿಯೂ ಈವತ್ತಿಗೆ ಮಾದಕ ವಸ್ತುಗಳು ಅತ್ಯಂತ ಸಲೀಸಾಗಿಯೇ ಸಿಗುತ್ತಿದೆ. ಇಂದು ನೈಜೀರಿಯಾ, ಆಫ್ರಿಕಾ, ಸೊಮಾಲಿಯಾದಂಥ ದೇಶಗಳ ವಿದ್ಯಾರ್ಥಿಗಳು ಬೆಂಗಳೂರಲ್ಲಿ ಓದಲು ಬಂದರೆ, ಅಂಥವರ ಆರ್ಥಿಕ ಸ್ಥಿತಿಯನ್ನೇ ಎನ್‌ಕ್ಯಾಶ್ ಮಾಡಿಕೊಂಡು…
ಅದ್ಯಾವ ದೇಶ, ಭಾಷೆಗಳ ಮಂದಿಯೇ ಇರಲಿ; ತಾಯ್ತನ, ತಂದೆಯಾಗೋ ಸಂಭ್ರಮವೆಲ್ಲ ಒಂದೇ ಆಗಿರುತ್ತೆ. ಮದುವೆ ಮುಂತಾದ ಸಂಪ್ರದಾಯಗಳಲ್ಲಿ ವ್ಯತ್ಯಾಸವಿದ್ದರೂ ಅದರ ಪುಳಕಗಳಲ್ಲಿ ಸಾಮ್ಯತೆ ಇದ್ದೇ ಇದೆ. ಹಾಗಿದ್ದ ಮೇಲೆ ನಮ್ಮಲ್ಲಿರೋ ಒಂದಷ್ಟು ನಂಬಿಕೆಗಳೂ ಕೂಡಾ ಪರಸ್ಪರ ಮ್ಯಾಚ್ ಆಗೋದ್ರಲ್ಲಿ ಅಚ್ಚರಿಯೇನಿಲ್ಲ. ನಮ್ಮದು ಹೇಳಿ ಕೇಳಿ ಸಂಪ್ರದಾಯ, ನಂಬಿಕೆಗಳಿಂದ ತುಂಬಿಕೊಂಡಿರೋ ನೆಲ. ಇಲ್ಲಿ ಅದಕ್ಕೆ ತಕ್ಕುದಾದ ಅನೇಕಾನೇಕ ಆಚರಣೆಗಳಿವೆ, ನಂಬಿಕೆಗಳಿವೆ. ಆದ್ರೆ ನಮ್ಮತನದ ಬಗ್ಗೆ ನಮಗೆ ತಾತ್ಸಾರ ಹೆಚ್ಚು. ಆದ್ದರಿಂದಲೇ ಅದೆಲ್ಲವನ್ನೂ ಒಂದೇ ದೃಷ್ಟಿಕೋನದಿಂದ ನೋಡಿ ಮೂಢನಂಬಿಕೆಯೆಂಬ ಲೇಬಲ್ಲು ಅಂಟಿಸಿ ಕಡೆಗಣಿಸಿ ಬಿಡುತ್ತೇವೆ. ನಂಬಲೇ ಬೇಕಾದ ವಿಚಾರ ಅಂದ್ರೆ, ಕೆಲವಾರು ನಂಬಿಕೆಗಳು ನಮಗೆ ಮಾತ್ರವೇ ಸೀಮಿತವಲ್ಲ. ಕೆಲ ಮೂಢ ನಂಬಿಕೆಗಳಂಥವು ಬೇರೆ ದೇಶಗಳಲ್ಲಿಯೂ ಇವೆ. ಈ ಮಾತಿಗೆ ಉದಾಹರಣೆಯಾಗಿ ನಿಲ್ಲೋದು ಚೀನಾ. ಕೊರೋನಾ ವೈರಸ್ಸಿನ ಮೂಲಕ ಚೀನಾ ಇಡೀ ವಿಶ್ವದಲ್ಲಿ ವಿಲನ್ ಸ್ಥಾನ ಪಡೆದುಕೊಂಡಿದೆ. ಸದಾ ಒಂದಿಲ್ಲೊಂದು ಕಿತಾಪತಿಗೆ ಹೆಸರಾಗಿರೋ ಈ ದೇಶ ಹೆಚ್ಚಿನ ಜನಸಂಖ್ಯೆಗೂ ಫೇಮಸ್ಸು. ಬೇರೆಲ್ಲವನ್ನೂ ಬದಿಗಿಟ್ಟು ನೋಡಿದರೆ ಆ…
ತಿನ್ನೋ ಅನ್ನವನ್ನೂ ದೇವರೆಂಬಂತೆ ಕಣ್ಣಿಗೊತ್ತಿಕೊಂಡು ಒಳಗಿಳಿಸೋ ಸಂಪ್ರದಾಯ ನಮ್ಮಲ್ಲಿದೆ. ನಮ್ಮ ಪಾಲಿಗೆ ಅನ್ನ ಅನ್ನೋದು ಶ್ರಮದ ಸಂಕೇತ. ಅದು ದುಡಿಮೆಯ ಫಲ. ಆದ್ದರಿಂದಲೇ ತಟ್ಟಿಯಲ್ಲಿ ಆಹಾರವನ್ನು ಒಂದಗುಳೂ ಬಿಡದಂತೆ ತಿನ್ನಬೇಕೆಂಬ ರಿವಾಜಿದೆ. ಹಾಗೆ ತಟ್ಟಿಯಲ್ಲಿ ಉಳಿಸಿದರೆ, ಆಹಾರ ಹಾಳು ಮಾಡಿದರೆ ಖಾಲಿ ಹೊಟ್ಟೆಯಲ್ಲಿ ಮಲಗಿದವರ ಶಾಪ ತಟ್ಟುತ್ತೆ ಅನ್ನೋ ನಂಬಿಕೆಯೂ ನಮ್ಮಲ್ಲಿದೆ. ಹಾಗಿರೋದರಿಂದಲೇ ರುಚಿ ಹತ್ತದಿದ್ದರೂ, ಇಷ್ಟವಾಗದಿದ್ದರೂ ಕಷ್ಟ ಪಟ್ಟಾದರೂ ಕೆಲವೊಮ್ಮೆ ತಟ್ಟಿ ಖಾಲಿ ಮಾಡಿ ಬಿಡುತ್ತೇವೆ. ಇದು ನಮ್ಮ ದೇಶಕ್ಕೆ ಓಕೆ. ಆದ್ರೆ ನೀವೇನಾದರೂ ಚೀನಾಕ್ಕೆ ಹೋಗಿ ಅಲ್ಲಿಯೂ ಈ ಸಂಪ್ರದಾಯ ಪರಿಪಾಲಿಸಿದರೆ ಬೇಸ್ತು ಬೀಳೋದು ಖಂಡಿತಾ! ನಮಗೆಲ್ಲ ಗೊತ್ತಿರುವಂತೆ ಚೀನಾದ ಮಂದಿ ಆಹಾರಪ್ರಿಯರು. ಹುಳು ಹಪ್ಪಟೆ, ಹಾವು ಚೇಳುಗಳನ್ನೂ ಹುರಿದು ತಿನ್ನೋ ಈ ಜನರನ್ನ ನೋಡಿದರೆ ಎಂಥವರಿಗಾದರೂ ಅಚ್ಚರಿಯಾಗುತ್ತೆ. ನಾಯಿ ಮಾಂಸವನ್ನೂ ಚಪ್ಪರಿಸಿ ತಿನ್ನೋ ಜನ ಆ ದೇಶದ ಗಲ್ಲಿ ಗಲ್ಲಿಗಳಲ್ಲಿಯೂ ಕಾಣ ಸಿಗುತ್ತಾರೆ. ಅಲ್ಲೇ ಹುಟ್ಟಿದ ಕೊರೋನಾ ವೈರಸ್ಸು ಅವರನ್ನೇ ಹೆಚ್ಚಾಗಿ ಬಲಿ ತೆಗೆದುಕೊಂಡಿದ್ದರ ಹಿಂದೇಯೂ ಈ…
ಇರಾನಿ ಗ್ಯಾಂಗ್‌ನಲ್ಲಿ ಎಂಥಾ ರಕ್ಕಸರಿದ್ದಾರೆ ಗೊತ್ತಾ? ಇರಾನಿ ಗ್ಯಾಂಗ್ ಮತ್ತು ಬಾವರಿಯಾ ಗ್ಯಾಂಗ್… ಈ ಎರಡು ಹೆಸರು ಕೇಳಿದೇಟಿಗೆ ಖುದ್ದು ಪೊಲೀಸರೇ ಕೊಂಚ ಕಸಿವಿಸಿಗೊಳಗಾಗುತ್ತಾರೆ. ಹಣ ಮಾಡಲು ಕಳ್ಳತನ ಮತ್ತು ದರೋಡೆಯ ಮಾರ್ಗ ಆರಿಸಿಕೊಂಡಿರುವ ಈ ಎರಡೂ ಗ್ಯಾಂಗುಗಳ ಹೆಸರು ರಾಷ್ಟ್ರ ಮಟ್ಟದಲ್ಲಿ ಕುಖ್ಯಾತಿ ಗಳಿಸಿ ಬಹಳಷ್ಟು ವರ್ಷಗಳೇ ಸಂದಿವೆ. ಆದರೆ ಇದೀಗ ಕರ್ನಾಟಕದಲ್ಲಿಯೂ ಇದರ ಪ್ರತಾಪದ ಪತಾಕೆ ಪಟಪಟಿಸಲಾರಂಭಿಸಿದೆ. ಈ ಎರಡೂ ತಂಡಗಳೂ ಸಹ ಒಂದನ್ನೊಂದು ಮೀರಿಸುವಂತಿವೆ. ಕಾರ್ಯಾಚರಣೆಯ ರೀತಿ ರಿವಾಜುಗಳು ಬೇರೆಯದ್ದಾದರೂ ಉದ್ದೇಶ ಒಂದೇ. ಕದ್ದ ಕಾಸಲ್ಲೇ ಬದುಕುವ ಈ ಮಂದಿಯ ಅಟಾಟೋಪ, ಖಯಾಲಿ, ಕಿಲಾಡಿ ಬುದ್ಧಿ ಮತ್ತು ವಿಲಕ್ಷಣ ನಡವಳಿಕೆಗಳೆಲ್ಲವೂ ಪೊಲೀಸ್ ಇಲಾಖೆಗೇ ಸವಾಲಾದರೆ ಜನಸಾಮಾನ್ಯರಿಗೆ ಭಯ ಮತ್ತು ಬೆರಗು ಹುಟ್ಟಿಸಿವೆ. ಅಂದಹಾಗೆ ಇಂಥಾ ನಟೋರಿಯಸ್ ಗ್ಯಾಂಗ್ ಈಗ ನಮ್ಮ ರಾಜ್ಯದ ಹಳ್ಳಿಗಾಡಿನ ಜನರ ಜೀವ ತೆಗೆಯಲು ಹೊಂಚು ಹಾಕಿದಂತಿದೆ. ಅದರಲ್ಲಿಯೂ ಕಾಡಿನ ಇಕ್ಕೆಲದಲ್ಲಿರೋ ದಕ್ಷಿಣ ಕನ್ನಡ, ಮಲೆನಾಡು ಭಾಗಗಳಲ್ಲಿ ಈಗಾಗಲೇ ಈ ಗ್ಯಾಂಗು ವೇಷ ಮರೆಸಿಕೊಂಡು…
ಎಂಥವರಲ್ಲೂ ನಡುಕ ಹುಟ್ಟಿಸುತ್ತೆ ಅವಳ ನಟೋರಿಟಿ! ಇದೀಗ ಕರ್ನಾಟಕದ ತುಂಬೆಲ್ಲ ಮತ್ತೆ ಡ್ರಗ್ಸ್ ಮ್ಯಾಟರ್ ಭಾರೀ ಸದ್ದು ಮಾಡ್ತಿದೆ. ದೃಷ್ಯ ಮಾಧ್ಯಮಗಳ ಟಿಆರ್‌ಪಿ ಹಸಿವಿಗಂತೂ ಡ್ರಗ್ಸ್ ದಂಧೆ ಭೂರೀ ಬೋಜನವನ್ನೇ ಒದಗಿಸಿಬಿಟ್ಟಿದೆ. ಹಾದಿ ಬಿಟ್ಟ ನಟಿಗರಿಬ್ಬರಿಗೆ ಜೈಲೇ ಗಟ್ಟಿ ಎಂಬ ವಾತಾವರಣವೂ ಪ್ರಸ್ತುತ ಚಾಲ್ತಿಯಲ್ಲಿದೆ. ಇದರ ಹಿನ್ನೆಲೆಯಲ್ಲಿಯೇ ಊರು ತುಂಬಾ ಮೈಚಾಚಿಕೊಂಡಿರೋ ಡ್ರಗ್ಸ್ ಮಾಫಿಯಾ ಮತ್ತದರ ಅಪಾಯಗಳ ಬಗೆಗೂ ಒಂದಷ್ಟು ಚರ್ಚೆಗಳಾಗುತ್ತಿವೆ. ಹಾಗಂತ ಇದು ಕೇವಲ ಕರ್ನಾಟಕದಲ್ಲಿ ಮಾತ್ರವೇ ಮೈಚಾಚಿಕೊಂಡಿರೋ ಮಾಫಿಯಾವಲ್ಲ; ಅದು ಇಡೀ ದೇಶವನ್ನೇ ಆವರಿಸಿಕೊಂಡು ಯುವ ಜನಾಂಗದ ನರನಾಡಿಗಳಿಗೆ ತೂರಿಕೊಳ್ಳಲು ಹವಣಿಸ್ತಿರೋ ಭೀಕರ ವಿಷ. ಹಾಗೆ ನೋಡಿದರೆ ಅದಕ್ಕೆ ದೇಶದ ಗಡಿಯ ಹಂಗೂ ಇಲ್ಲ. ಯಾಕಂದ್ರೆ, ಅದು ಇಡೀ ವಿಶ್ವಕ್ಕೇ ಹಬ್ಬಿಕೊಂಡಿರೋ ಸಾಂಕ್ರಾಮಿಕ. ಸಂಜನಾ ಮತ್ತು ರಾಗಿಣಿ ಎಂಬ ಚಿಲ್ರೆ ನಟಿಯರು ಡ್ರಗ್ ಕೇಸಲ್ಲಿ ತಗುಲಿಕೊಳ್ಳುತ್ತಲೇ ಜನ ಎಂಥಾ ಕಾಲ ಬಂತಪ್ಪಾ ಅಂತ ನಿಟ್ಟುಸಿರಿಡುತ್ತಿದ್ದಾರೆ. ಹೆಣ್ಣುಮಕ್ಕಳೂ ಗಾಂಜಾಕ್ಕೆ ವಶವಾಗೋದಂದ್ರೇನು ಅಂತ ಮಡಿವಂತಿಕೆಯ ಮಂದಿ ಅಸಹನೆಗೀಡಾಗಿದ್ದಾರೆ. ಈವತ್ತಿಗೆ ಈ ನಟಿಯರಿಬ್ಬರೂ…
ಗೆಲುವೆಂಬುದು ಅವರ ಪಾಲಿಗೆ ಹೂವ ಹಾದಿಯಲ್ಲ! ಬದುಕೆಂದರೇನೇ ಹಾಗೆ; ಅದು ಯಾವ ಕ್ಷಣದಲ್ಲಿ ಅದ್ಯಾವ ಹೊರಳು ಹಾದಿತ್ತ ಪಥ ಬದಲಿಸುತ್ತದೋ ಹೇಳಲು ಬರುವುದಿಲ್ಲ. ಕೆಲವೊಮ್ಮೆ ಅದೆಷ್ಟು ತೀವ್ರವಾಗಿ ಕನಸು ಕಂಡರೂ ಗುರಿಯತ್ತ ದಾರಿ ತೆರೆದುಕೊಳ್ಳೋದಿಲ್ಲ. ಮತ್ತೆ ಕೆಲವೊಮ್ಮೆ ಬದುಕೇ ಮತ್ಯಾವುದೋ ಗಮ್ಯದತ್ತ ತಾನೇತಾನಾಗಿ ಕೈ ಹಿಡಿದು ಕರೆದೊಯ್ಯುತ್ತೆ. ಶ್ರದ್ಧೆ, ಪರಿಶ್ರಮ ಮತ್ತು ತಾಳ್ಮೆಯ ಗುಣಗಳಿದ್ದರೆ ಎಲ್ಲವನ್ನೂ ಕರುಣಿಸುತ್ತೆ. ಅಂಥಾ ಗುಣಗಳನ್ನು ಮೈಗೂಡಿಸಿಕೊಳ್ಳದೇ ಹೋಗಿದ್ದರೆ ಶೀತಲ್ ಶೆಟ್ಟಿ ಎಂಬ ಪ್ರತಿಭೆ ನಿರೂಪಕಿಯಾಗಿ ಕರುನಾಡಿಗೆ ಪರಿಚಯವಾಗಲು ಸಾಧ್ಯವಾಗುತ್ತಿರಲಿಲ್ಲ. ಅದಾದ ಬಳಿಕ ನಟಿಯಾಗಿ ನೆಲೆಗೊಳ್ಳುವ ಅವಕಾಶಗಳು ಬಂದೊದಗುತ್ತಿರಲಿಲ್ಲ. ಅದರ ಬೆನ್ನಲ್ಲಿಯೇ ನಿರ್ದೇಶಕಿಯಾಗಿ ಅವತರಿಸಿ ಅಚ್ಚರಿ ಮೂಡಿಸೋದೂ ಕೂಡಾ ಅಕ್ಷರಶಃ ಕನಸಿನ ಮಾತಾಗುತ್ತಿತ್ತು! ಬಹುಶಃ ಶೀತಲ್ ಶೆಟ್ಟಿ ಕೂಡಾ ತಮ್ಮ ಬದುಕಿನ ದಿಕ್ಕು ಈ ಪರಿಯಾಗಿ ಹೊರಳಿಕೊಳ್ಳುತ್ತದೆ ಅಂದುಕೊಂಡಿರಲಿಕ್ಕಿಲ್ಲ. ಬದುಕು ತಂದೊಡ್ಡುವ ಆಘಾತ, ಅದು ಸೃಷ್ಟಿಸೋ ಅನಿವಾರ್ಯತೆಗಳಿಗೆಲ್ಲ ಎದೆಗುಂದಬಾರದೆಂಬ ಮಂತ್ರವೊಂದಷ್ಟೇ ಅವರ ಮನಸಲ್ಲಿತ್ತು. ಅಂಥಾದ್ದೊಂದು ಗಟ್ಟಿತನದಿಂದಲೇ ಯಾವುದಕ್ಕೂ ಅಂಜದೆ ಟಿವಿ೯ ನಿರೂಪಕಿಯಾಗಿ ತಮ್ಮ ಸ್ಫುಟವಾದ ಕನ್ನಡ ಉಚ್ಛರಣೆಯಿಂದಲೇ…
ಶೋಧ ನ್ಯೂಸ್ ಡೆಸ್ಕ್: ಭಾರತದಾದ್ಯಂತ ಕೀಟನಾಶಕದ ಹಾವಳಿಯಿಂದಾಗಿ ಇಡೀ ಪ್ರಕೃತಿಯೇ ಸರ್ವನಾಶವಾಗುವ ದುರ್ಗತಿ ಬಂದು ಬಿಟ್ಟಿದೆ. ಆದರೂ ಕೂಡಾ ಕೀಟನಾಶಕ ಮಾರಾಟ ಕಂಪೆನಿಗಳ ಮರ್ಜಿಗೆ ಬಿದ್ದಿರುವ ಸರ್ಕಾರಗಳು ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಯಾವ ಪ್ರಯತ್ನವನ್ನೂ ಮಾಡುತ್ತಿಲ್ಲ. ಆದರೆ ವಿದೇಶಗಳಲ್ಲಿ ಮಾತ್ರ ಕೀಟನಾಶಕಗಳ ಪ್ರತಿಕೂಲ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಕೊಳ್ಳುತ್ತಿದೆ. ಅದರ ಭಾಗವಾಗಿಯೇ ಇದೀಗ ಯುರೋಪಿಯನ್ ಕಮಿಷನ್ ಕೀಟನಾಶಕ ಬಳಕೆಯನ್ನು ಸಂಪೂರ್ಣವಾಗಿ ಬ್ಯಾನ್ ಮಾಡುವಲ್ಲಿ ಪ್ರಥಮ ಹೆಜ್ಜೆಯಿಟ್ಟಿದೆ. ಸಾರ್ವಜನಿಕ ಉದ್ಯಾನವನಗಳಲ್ಲಿ ಕೀಟನಾಶಕ ಬಳಕೆಯನ್ನು ಸಂಪೂರ್ಣವಾಗಿ ನಿಸೇಧಿಸೋದು ಯೂರೋಪಿಯನ್ ಕಮಿಷನ್ ಉದ್ದೇಶ. ಪ್ರಕೃತಿಯನ್ನು ಹಾಳುಗೆಡವಿ, ಜೀವರಾಶಿಗೆ ತೊಂದರೆ ಕೊಡದೆ ಅದನ್ನು ಸಂರಕ್ಷಿಸಿಕೊಂಡು ಸಾಗುವ ಧ್ಯೇಯ ವಾಕ್ಯದೊಂದಿಗೆ ಯುರೋಪಿಯನ್ ಕಮಿಷನ್ ಇಂಥಾದ್ದೊಂದು ನಿರ್ಧಾರ ಕೈಗೊಂಡಿದೆ. ಜಾಗತಿಕ ಮಟ್ಟದಲ್ಲಿ ಈ ನಡೆಗೆ ಸಕಾರಾತ್ಮಕ ಪ್ರತಿಕ್ರಿಯೆಗಳು ಕೇಳಿ ಬರುತ್ತಿವೆ. ಇದೊಂದು ಕ್ರಾಂತಿಕಾರಕ ಹಾಗೂ ಜಗತ್ತಿನ ಇತರೇ ದೇಶಗಳೂ ಅನುಕರಿಸಬೇಕಾಗುವಂಥಾ ಕ್ರಮವೆಂಬ ಮಾತುಗಳೂ ಕೇಳಿ ಬರುತ್ತಿವೆ. ಜಾಗತಿಕ ಮಟ್ಟದಲ್ಲಿ ಇಂಥಾ ಪಲ್ಲಟಗಳು ನಡೆಯುತ್ತಿದ್ದರೂ ಕೂಡಾ ಭಾರತದಲ್ಲಿ ಮಾತ್ರ ಕೀಟನಾಶಕಗಳಿಗೆ ಮುಕ್ತ…
ಸಿನಿಮಾ ನಟ ನಟಿಯರು ಸಾಮಾಜಿಕ ಪಲ್ಲಟಗಳಿಗೆ ಪ್ರತಿಕ್ರಿಯಿಸೋದು ಅಪರೂಪ. ಒಂದು ಘಟನೆ ನಡೆದಾಗ ಅದರ ಬಗ್ಗೆ ಅಭಿಪ್ರಾಯ ಹಂಚಿಕೊಂಡರೆ ಎಲ್ಲಿ ವಿವಾದವಾಗುತ್ತೋ, ಅದೆಲ್ಲಿ ತಮ್ಮ ಫ್ಯಾನ್ ಬೇಸಿನ ಬುಡ ಅಲ್ಲಾಡಿಸುತ್ತೋ ಎಂಬಂಥಾ ಭಯ ಅನೇಕ ಸೆಲೆಬ್ರಿಟಿಗಳಲ್ಲಿದೆ. ಆದರೆ ಅದೆಲ್ಲವನ್ನೂ ಮೀರಿಕೊಂಡು ಕೆಲವೇ ಕೆಲ ಸೆಲೆಬ್ರಿಟಿಗಳು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ. ಆ ಸಾಲಿನಲ್ಲಿ ಮೊದಲಿಗಳಾಗಿ ನಿಲ್ಲುವ ಲಕ್ಷಣಗಳನ್ನು ಹೊಂದಿರುವಾಕೆ ಸ್ವರ ಭಾಸ್ಕರ್. ಈಕೆ ಜೀವಪರವಾದ ಆಶಯಗಳ ಮೂಲಕ ಆಗಾಗ ಸುದ್ದಿಯಾಗುತ್ತಾ ವಿವಾದದ ಕೇಂದ್ರಬಿಂದುವಾಗುತ್ತಿದ್ದಾರೆ. ಈ ಮೂಲಕ ಬಲಪಂಥೀಯ ವಿಚಾರಧಾರೆಗಳವರ ಕೆಂಗಣ್ಣಿಗೂ ಗುರಿಯಾಗುತ್ತಿದ್ದಾರೆ. ಇದೆಲ್ಲದರ ನಡುವೆ ಇದೀಗ ಆಕೆಯ ಮನೆಗೆ ಜೀವ ಬೆದರಿಕೆಯ ಪತ್ರವೊಂದು ರವಾನೆಯಾಗಿದೆ! ಸ್ವರ ಭಾಸ್ಕರ್ ಇತ್ತೀಚೆಗೆ ಸಾವರ್ಕರ್ ಬಗ್ಗೆ ತನ್ನ ವಿಚಾರ ಹಂಚಿಕೊಂಡಿದ್ದರು. ಆ ಬಗ್ಗೆ ಸಾಮಾಜಿಕ ಜಾಲತಾಣಗಳ ತುಂಬೆಲ್ಲ ಪರ ವಿರೋಧಗಳ ಚರ್ಚೆ ನಡೆದಿತ್ತು. ಅದರ ಬೆನ್ನಲ್ಲಿಯೇ ಇದೀಗ ಮುಂಬೈನ ಪರ್ಸೋವಾ ಏರಿಯಾದಲ್ಲಿರುವ ಸ್ವರ ಮನೆಗೊಂದು ಬೆದರಿಕೆ ಪತ್ರ ತಲುಪಿಕೊಂಡಿದೆ. ಹಿಂದಿಯಲ್ಲಿ ಬರೆಯಲಾಗಿರುವ ಆ ಪತ್ರದಲ್ಲಿ ಸಾವರ್ಖರ್ ಅವರ…