ಜಯತೀರ್ಥ ನಿರ್ದೇಶನದ ಬನಾರಸ್ ಇದೀಗ ಮಾಯಗಂಗೆಯ ಮೂಲಕ ಪ್ರೇಕ್ಷಕರನ್ನೆಲ್ಲ ಮೆಲುವಾಗಿ ಮುಟ್ಟಿದೆ. ಒಂದೊಳ್ಳೆ ಹಾಡು ಅದೆಷ್ಟು ಬೇಗ ಎಲ್ಲೆಡೆ ಪಸರಿಸಿಕೊಂಡು ಮೋಡಿ ಮಾಡಲಾದೀತೋ ಅದೆಲ್ಲವನ್ನೂ ಮಾಯಗಂಗೆ ಹಾಡು ಮಾಡಿ ಬಿಟ್ಟಿದೆ. ಆ ಹಾಡಿನಲ್ಲಿರುವ ದೃಷ್ಯ ವೈಭವ, ಕಾಡುವ ಸಾಲುಗಳು ಮತ್ತು ಕಥೆಯ ಬಗ್ಗೆ ಮೂಡಿಕೊಂಡಿರುವ ಕ್ಯೂರಿಯಾಸಿಟಿ… ಇದೆಲ್ಲವನ್ನೂ ಕಂಡು ಚಿತ್ರತಂಡ ಖುಷಿಗೊಂಡಿದೆ. ಅದರಲ್ಲಿಯೂ ವಿಶೇಷವಾಗಿ, ನವನಾಯಕ ಝೈದ್ ಖಾನ್ ಬಗ್ಗೆಯೂ ವ್ಯಾಪಕ ಮೆಚ್ಚುಗೆಗಳು ಕೇಳಿ ಬರುತ್ತಿವೆ. ಇದೆಲ್ಲವನ್ನೂ ಕಂಡ ಪ್ರೇಕ್ಷಕರು ನಿರ್ದೇಶಕ ಜಯತೀರ್ಥ ಈ ಬಾರಿ ಬನಾರಸ್ ಮೂಲಕ ಮತ್ತೆ ಮೋಡಿ ಮಾಡೋದು ಗ್ಯಾರೆಂಟಿ ಎಂಬಂಥಾ ಭವಿಷ್ಯ ಹೇಳಲಾರಂಭಿಸಿದ್ದಾರೆ. ಹಾಗಾದರೆ ಈ ಸಿನಿಮಾದ ಹಾಡಿನ ಪ್ರಭಾವಳಿ ಕರ್ನಾಟಕಕ್ಕೆ ಮಾತ್ರ ಸೀಮಿತವಾ? ಮಾಯಗಂಗೆ ಹಾಡು ಹಿಟ್ ಆಗಿರೋದು ಬರೀ ನಮ್ಮ ರಾಜ್ಯದಲ್ಲಿ ಮಾತ್ರವಾ? ಎಂಬೆಲ್ಲ ಪ್ರಶ್ನೆಗಳು ನಿಮ್ಮ ಮನಸಲ್ಲಿರಬಹುದು. ಅದಕ್ಕುತ್ತರವಾಗಿ ಜಾಹೀರಾಗುವ ಒಂದಷ್ಟು ಸಂಗತಿಗಳು ಅಕ್ಷರಶಃ ರೋಮಾಂಚಕವಾಗಿವೆ. ಮಾಯಗಂಗೆ ಹಾಡು ನಮ್ಮಲ್ಲಿ ಮಾತ್ರವಲ್ಲ; ಬೇರೆ ಭಾಷೆಗಳಲ್ಲಿಯೂ ಸೂಪರ್ ಹಿಟ್ಟಾಗಿದೆ. ಕನ್ನಡ ಹಾಗೂ ಮಲೆಯಾಳಂ…
Author: Santhosh Bagilagadde
ಬಾಲಿವುಡ್‌ನ ಸ್ಟಾರ್ ನಟರ ಸಾಲಿನಲ್ಲಿ ರಣ್‌ಬೀರ್ ಕಪೂರ್ ಹೆಸರು ಕೂಡಾ ನಿರ್ಣಾಯಕವಾಗಿ ದಾಖಲಾಗುತ್ತದೆ. ಈವರೆಗೂ ಸಾಕಷ್ಟು ಚಿತ್ರಗಳಲ್ಲಿ ನಾನಾ ಪಾತ್ರ ನಿರ್ವಹಿಸಿರುವ ಆತ ದೇಶಾದ್ಯಂತ ತನ್ನದೇ ಆದ ಅಭಿಮಾನಿ ವರ್ಗವನ್ನೂ ಸಂಪಾದಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ನಟಿ ಆಲಿಯಾಳನ್ನು ಮದುವೆಯಾಗಿ ಒಂದು ಮಗುವಿನ ಅಪ್ಪನೂ ಆಗಿರುವ ರಣ್‌ಬೀರ್ ಇದೀಗ ತನ್ನೊಳಗಿನ ವಿಚಿತ್ರವಾದ ಆಸೆಯೊಂದರ ಬಗ್ಗೆ ಬಹಿರಂಗವಾಗಿ ಮಾತಾಡಿದ್ದಾರೆ. ಅದರನ್ವಯ ಹೇಳುವುದಾದರೆ ಜೀವನದಲ್ಲಿ ಒಂದೇ ಒಂದು ಸಾರಿಯಾದರೂ ಭಯಾನಕ ಛಾಯೆಯಿರುವಂಥಾ ವಿಲನ್ ಪಾತ್ರ ಮಾಡಬೇಕೆಂಬುದು ರಣ್‌ಬೀರ್ ಕಪೂರ್ ಜೀವಮಾನದ ಆಸೆಯಂತೆ. ಈ ಬಗ್ಗೆ ಆತ ಸಂದರ್ಶನವೊಂದರಲ್ಲಿ ಒಂದಷ್ಟು ಲವಲವಿಕೆ, ಉತ್ಸಾಹದಿಂದಲೇ ಮಾತಾಡಿದ್ದಾರೆ. ಜೀವನದಲ್ಲಿ ಒಂದು ಬಾರಿಯಾದರೂ ವಿಲನ್ ಪಾತ್ರವನ್ನು ಮಾಡಲೇ ಬೇಕು. ಅದು ಅಂತಿಂಥ ಪಾತ್ರವಾಗಿರಬಾರದು; ಸದಾ ಕಾಲವೂ ಅದು ನೋಡುಗರಲ್ಲಿ ನಡುಕ ಹುಟ್ಟಿಸಬೇಕು. ಅದರ ಪ್ರಭಾವ ಹೇಗಿರಬೇಕೆಂದರೆ, ಮಕ್ಕಳು ರಚ್ಚೆ ಹಿಡಿದಾಗ ಭಾರತೀಯ ತಾಯಂದಿರು ರಣಬೀರ್ ಮಾಮಾ ಬರ‍್ತಾನೆ ಅಂತ ಹೆದರಿಸುವಂತಿರಬೇಕೆಂಬುದು ರಣ್‌ಬೀರ್ ಅಭಿಲಾಶೆಯಂತೆ. ಈತನ ಈ ಅಭಿಪ್ರಾಯಕ್ಕೆ ಸಾಮಾಜಿಕ ಜಾಲತಾಣಗಳ ತುಂಬೆಲ್ಲ ಒಳ್ಳೆ…
ಈಗಾಗಲೇ ಪ್ರೇಕ್ಷಕರೆಲ್ಲರ ಚಿತ್ತವನ್ನು ತನ್ನೆಡೆಗೆ ಸೆಳೆದುಕೊಂಡಿರುವ ಚಿತ್ರ ಚೇಸ್. ಕನ್ನಡದ ಮಟ್ಟಿಗೆ ಅಪರೂಪದ ಚಿತ್ರವಾಗಿ ದಾಖಲಾಗುವಂಥಾ ಗುಣಲಕ್ಷಣಗಳನ್ನು ಒಳಗೊಂಡಿರುವ ಚೇಸ್, ಇದೇ ತಿಂಗಳ ಹದಿನೈದರಂದು ತೆರೆಗಾಣಲಿದೆ. ಕೊರೋನಾ ಕಂಟಕದಿಂದಾಗಿ ಕೊಂಚ ತಡವಾದರೂ ಕ್ಯೂರಿಯಾಸಿಟಿಯನ್ನು ಯಥಾಪ್ರಕಾರವಾಗಿ ಕಾಯ್ದಿಟ್ಟುಕೊಂಡ ಹೆಗ್ಗಳಿಕೆಯೂ ಈ ಚಿತ್ರಕ್ಕೆ ಸಲ್ಲುತ್ತದೆ. ಈವರೆಗೂ ಚೇಸ್‌ಯಿಂದ ಸಮ್ಮೋಹಕವಾದ ಒಂದಷ್ಟು ವಿಚಾರಗಳು ಹೊರಬೀಳುತ್ತಲೇ ಬಂದಿವೆ. ಇದೀಗ ಚಿತ್ರತಂಡ ಹಂಚಿಕೊಂಡಿರುವ ವಿಚಾರವಿದೆಯಲ್ಲಾ? ಅದು ಕನ್ನಡ ಚಿತ್ರಪ್ರೇಮಿಗಳನ್ನು ಪಟ್ಟಂಪೂರಾ ಥ್ರಿಲ್ ಆಗಿಸುವಂತಿದೆ. ಯಾಕೆಂದರೆ, ಚೇಸ್ ವಿತರಣಾ ಹಕ್ಕುಗಳನ್ನು ಭಾರತದ ಪ್ರಮುಖವಾದ ಸ್ಟ್ರೀಮಿಂಗ್ ಹಾಗೂ ಡಿಸ್ಟ್ರಿಬ್ಯೂಟಿಂಗ್ ಸಂಸ್ಥೆಯಾದ ಯುಎಫ್‌ಒ ದಾಖಲೆ ಮೊತ್ತಕ್ಕೆ ಖರೀದಿಸಿದೆ. ಭಾರತೀಯ ಚಿತ್ರರಂಗದಲ್ಲಿ ಘನತೆ, ಗೌರವ ಹೊಂದಿರುವಂಥಾ ಸಂಸ್ಥೆ ಯುಎಫ್‌ಒ. ಮೂವಿ ಸ್‌ಟರೀಮಿಂಗ್ ಕ್ಷೇತ್ರದಲ್ಲಿ ತನ್ನದೇ ಆದ ಕಿಮ್ಮತ್ತು ಹೊಂದಿರುವ ಈ ಸಂಸ್ಥೆ, ಇತ್ತೀಚಿನ ದಿಬನಗಳಲ್ಲಿ ವಿತರಣಾ ಕ್ಷೇತ್ರಕ್ಕೂ ಹೆಜ್ಜೆಯಿಟ್ಟಿದೆ. ಕ್ವಾಲಿಟಿ ಹೊಂದಿರುವಂಥಾ ಚಿತ್ರಗಳನ್ನು ಮಾತ್ರವೇ ಆಯ್ದುಕೊಂಡು ಅದರಲ್ಲಿಯೂ ಗುಣಮಟ್ಟ ಕಾಯ್ದುಕೊಂಡಿದೆ. ಹೀಗಿರೋದರಿಂದಲೇ ಯುಎಫ್‌ಒ ಒಂದು ಚಿತ್ರದ ವಿತರಣಾ ಹಕ್ಕುಗಳನ್ನು ಖರೀದಿಸಿತೆಂದರೆ, ಆ ಚಿತ್ರದ ಬಗ್ಗೆ…
ಕಳೆದ ಎರಡ್ಮೂರು ವರ್ಷಗಳಿಂದ ಪ್ರಿಯಾಂಕಾ ಉಪೇಂದ್ರ ತಮ್ಮ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ. ಮಮ್ಮಿ ಚಿತ್ರದ ಮೂಲಕ ಮತ್ತೆ ಹೆಸರು ಮಾಡಿದ ಪ್ರಿಯಾಂಕಾ, ಆ ನಂತರದಲ್ಲಿ ತಿರುಗಿ ನೋಡದೆ ಹೊಸಾ ಬಗೆಯ ಪಾತ್ರಗಳಲ್ಲಿ ನಟಿಸುತ್ತಾ ಮತ್ತೆ ಪ್ರೇಕ್ಷಕರನ್ನು ಮೋಡಿಗೀಡು ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಎರಡನೇ ಇನ್ನಿಂಗ್ಸ್ ಅನ್ನು ಹೀಗೆ ತಾನಿಷ್ಟ ಪಟ್ಟಂತೆಯೇ ಮುಂದುವರೆಸೋ ಭಾಗ್ಯ ಬಹಳಷ್ಟು ಕಲಾವಿದರಿಗೆ ಸಿಗುವುದಿಲ್ಲ. ಈ ನಿಟ್ಟಿನಲ್ಲಿ ನೋಡ ಹೋದರೆ ಪ್ರಿಯಾಂಕಾ ನಿಜಕ್ಕೂ ಲಕ್ಕಿ. ಹೀಗೆ ಮುಂದುವರೆಯುತ್ತಿರುವ ಅವರೀಗ ಮತ್ತೊಮ್ಮೆ ಪೊಲೀಸ್ ಗೆಟಪ್ಪಿನಲ್ಲಿ, ಡಿಫರೆಂಟಾದೊಂದು ಪಾತ್ರದ ಮೂಲಕ ಪ್ರೇಕ್ಷಕರನ್ನು ಮುಖಾಮುಖಿಯಾಗುವ ಖುಷಿಯಿಂದಿದ್ದಾರೆ. ಪ್ರಿಯಾಂಕಾ ಉಪೇಂದ್ರ ಈ ಹಿಂದೊಂದು ಚಿತ್ರದಲ್ಲಿ ಖಡಕ್ ಪೊಲೀಸ್ ಅಧಿಕಾರಿಣಿಯಾಗಿ ಕಾಣಿಸಿಕೊಂಡಿದ್ದರು. ಅದುವರೆಗೂ ಸಾಫ್ಟ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಅವರು ಉಗ್ರಾವತಾರಕ್ಕೈ ಸೈ ಎಂಬುದನ್ನು ಸಾಬೀತುಪಡಿಸಿಕೊಂಡಿದ್ದರು. ಆ ಚಿತ್ರದಲ್ಲಿ ಅವರು ಅಭಿನಯಿಸಿದ್ದ ರೀತಿಯೇ ಇದೀಗ ಅವರಿಗೆ ಮತ್ತೊಮ್ಮೆ ಪೊಲೀಸ್ ಆಗುವ ಅವಕಾಶವನ್ನು ಒದಗಿಸಿದೆ. ಬಹುಶಃ ಖುದ್ದು ಪ್ರಿಯಾಂಕಾ ಅವರೇ ಇಂಥಾದ್ದೊಂದು ಪಾತ್ರ ಮತ್ತ ತಮಗೆ ಸಿಗುತ್ತದೆ…
ಕುಟುಂಬ ಸಮೇತರಾಗಿ ಕೂತು ನೋಡುವಂಥಾ ಥರ ಥರದ ಪಾತ್ರಗಳ ಮೂಲಕ ಬೆಳ್ಳಿತೆರೆಯನ್ನು ಶ್ರೀಮಂತಗೊಳಿಸಿದ್ದವರು ನಟಿ ಪ್ರೇಮಾ. ಅವರ ಹೆಸರು ಕೇಳಿದರೂ ಪುಳಕಿತರಾಗಿ, ಪ್ರೇಮಾ ನಟಿಸಿದ ಚಿತ್ರಗಳನ್ನು ನೆನಪು ಮಾಡಿಕೊಂಡು ಮದಗೊಳ್ಳುವ ಕೋಟ್ಯಂತರ ಅಭಿಮಾನಿಗಳು ಕರುನಾಡಿನಲ್ಲಿದ್ದಾರೆ. ಹಾಗೆ ಪ್ರೇಕ್ಷಕರ ಪ್ರೀತಿ ಸಂಪಾದಿಸಿಕೊಂಡು, ತಮ್ಮದೇ ಆದ ಅಭಿಮಾನಿ ವರ್ಗವೊಂದನ್ನು ಸೃಷ್ಟಿಸಿಕೊಂಡಿದ್ದವರು ಪ್ರೇಮಾ. ತೊಂಭತ್ತರ ದಶಕದಲ್ಲಿ ಮುಖ್ಯನಾಯಕಿಯಾಗಿ ಮಿಂಚಿ ಸ್ಟಾರ್ ನಟರೊಂದಿಗೆ ತೆರೆಹಂಚಿಕೊಂಡಿದ್ದ ಅವರು ದಶಕಗಳ ಕಾಲ ಆ ಅಲೆಯನ್ನು ಹಾಗೆಯೇ ಕಾಪಿಟ್ಟುಕೊಂಡಿದ್ದರು. ಆ ನಂತರದಲ್ಲಿ ಒಂದು ಸುದೀರ್ಘವಾದ ಗ್ಯಾಪ್‌ನ ನಂತರ ಆಗಾಗ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಪ್ರೇಮಾ, ಇದೀಗ ಹೊಸಾ ಆವೇಗದೊಂದಿಗೆ, ಹೊಸಾ ಬಗೆಯ ಪಾತ್ರದೊಂದಿಗೆ ವೆಡ್ಡಿಂಗ್ ಗಿಫ್ಟ್ ಚಿತ್ರದ ಮೂಲಕ ಮತ್ತೆ ಮರಳಿದ್ದಾರೆ. ವಿಕ್ರಂ ಪ್ರಭು ನಿರ್ಮಾಣ ಮಾಡಿ ನಿರ್ದೇಶಿಸಿರುವ ವೆಡ್ಡಿಂಗ್ ಗಿಫ್ಟ್ ಒಂದಷ್ಟು ಕಾತರ ಮೂಡಿಸಿರೋದಕ್ಕೆ ಪ್ರೇಮಾ ಪುನರಾಗಮನವೂ ಪ್ರಧಾನ ಕಾರಣ. ಪ್ರೇಮಾ ಆರಂಭ ಕಾಲದಿಂದಲೂ ಕುಟುಂಬ ಸಮೇತರಾಗಿ ಕೂತು ನೋಡುವಂಥಾ ಪಾತ್ರಗಳಲ್ಲಿ ನಟಿಸುತ್ತಾ ಬಂದಿದ್ದಾರೆ. ಬಲು ತೂಕದ ಪಾತ್ರಗಳನ್ನೇ ಆವಾಹಿಸಿಕೊಳ್ಳುತ್ತಾ ಪ್ರೇಕ್ಷಕರಿಗೆ…
ಗಾಂಜಾದಂಥಾ ನಶೆಗೆ ಇಂದು ಯುವ ಸಮೂಹವೇ ಒಂದು ಕಡೆಯಿಂದ ಬಲಿ ಬೀಳುತ್ತಿದೆ. ಹೇಗಾದರೂ ಮಾಡಿ ಅದನ್ನು ಮಟ್ಟ ಹಾಕುವಂತೆ ಜನಸಾಮಾನ್ಯರ ಕಡೆಯಿಂದಲೇ ಒಕ್ಕೊರಲಿನ ಕೂಗು ಕೇಳಿ ಬರುತ್ತಿದೆ. ಆದರೆ ಈ ಸಮಾಜದಲ್ಲಿ ಬಹು ಹಿಂದಿನಿಂದಲೂ ಗಾಂಜಾ ನಾನಶಾ ಸ್ವರೂಪದಲ್ಲಿ ಚಾಲ್ತಿಯಲ್ಲಿದೆ. ಒಂದರ್ಥದಲ್ಲಿ ಅದು ನಮ್ಮ ಆಧ್ಯಾತ್ಮಿಕ ವಲಯದ ಭಾಗವೂ ಆಗಿದೆ. ಸಾಧುಗಳೇ ಗಾಂಜಾ ಹೊಡೆದು ಆತ್ಮ ಪರಮಾತ್ಮನ ಬಗ್ಗೆ ಪ್ರಲಾಪಿಸೋ ಪರಂಪರೆಯೂ ನಮ್ಮಲ್ಲಿದೆ. ಕೆಲ ಸಾಧುಗಳ ಕಠೋರ ಆಧ್ಯಾತ್ಮಿಕ ಸಿದ್ಧಿಗೂ ಗಾಂಜಾವನ್ನೇ ವಾಹಕವಾಗಿಸಿಕೊಂಡಿರುವಂಥಾ ಕುರುಹುಗಳೂ ಕೂಡಾ ಸಿಗುತ್ತವೆ. ಅದುವೇ ಹೈಟೆಕ್ ರೂಪ ಧರಿಸಿ ಇದೀಗ ನಮ್ಮವರನ್ನೇ ಬಲಿ ಪಡೆದುಕೊಳ್ಳುತ್ತಿವೆ. ಈ ಡ್ರಗ್ಸ್‌ನಲ್ಲೀಗ ನಾನಾ ನಮೂನೆಗಳಿದ್ದಾವೆ. ಎಂಥಾದ್ದೇ ಪರಿಸ್ಥಿತಿ ಇದ್ದರೂ ಬೇರೆಯದ್ದೇ ಲೋಕದಲ್ಲಿ ತೇಲಾಡಿಸುವ ಡ್ರಗ್ಸ್ ಯುವ ಜನರನ್ನು ಆಯಸ್ಕಾಂತದಂತೆ ಆಕರ್ಶಿಸುತ್ತಿದೆ. ಕೆಲ ಮಂದಿ ಮೋಜಿಗೆಂದು ಡ್ರಗ್ಸ್ ಸಂಪರ್ಕಕ್ಕೆ ಬಂದು ದಾಸರಾಗುತ್ತಾರೆ. ಮತ್ತೆ ಮಂದಿ ಮಾನಸಿಕ ತೊಳಲಾಟಗಳನ್ನು ಮೀರಿಕೊಳ್ಳಲಾಗದೆ ನಶೆಗೆ ವಶವಾಗಿ ಬದುಕನ್ನು ಕೈಯಾರೆ ಹಾಳುಗೆಡವಿಕೊಳ್ಳುತ್ತಾರೆ. ಅವರೆಲ್ಲರನ್ನೂ ಸಂತೃಪ್ತಗೊಳಿಸುವಂಥಾ ಸರಕುಗಳೀಗ ಎಲ್ಲೆಡೆ ಹರಿದಾಡುತ್ತಿವೆ.…
ಮತ್ತೆ ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾದ ಸದ್ದು ಮೊಳಗಿದೆ. ಈ ಮಾಫಿಯಾಕ್ಕೆ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಸಂಪರ್ಕಗಳಿದ್ದಾವೆಂಬ ಬಗ್ಗೆ ಈ ಹಿಂದಿನಿಂದಲೇ ಗುಮಾನಿಗಳಿದ್ದವು. ಅದು ಯಾವ ಸಂಶಯಗಳಿಗೂ ಎಡೆ ಮಾಡಿಕೊಡದಂತೆ ಈಗಾಗಲೇ ನಿಜವಾಗಿದೆ. ಅದು ಮತ್ತೊಮ್ಮೆ ಸಾಬೀತಾಗಿರೋದು ಬಾಲಿವುಡ್ಡಿನ ಖ್ಯಾತ ನಟ ಶಕ್ತಿ ಕಪೂರ್ ಪುತ್ರ ಸಿದ್ಧಾಂತ್ ಕಪೂರ್ ಬೆಂಗಳೂರಿನಲ್ಲಿ ತಗುಲಿಕೊಳ್ಳುವ ಮೂಲಕ. ಹಲಸೂರು ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಮಂಜುನಾಥ್ ನೇತೃತ್ವದಲ್ಲಿ ಎಂಜಿ ರಸ್ತೆಯ ಐಶಾರಾಮಿ ಹೊಟೇಲಿನಲ್ಲಿ ನಡೆಯುತ್ತಿದ್ದ ಪಾರ್ಟಿಯೊಂದಕ್ಕೆ ರೇಡು ನಡೆಸಿದಾಗ ನಶೆಗೆ ವಶವಾಗಿ ತೇಲಾಡುತ್ತಿದ್ದ ಗ್ಯಾಂಗೊಂದು ರೆಡ್ ಹ್ಯಾಂಡಾಗಿಯೇ ತಗುಲಿಕೊಂಡಿದೆ. ಆ ಪಾರ್ಟಿಯಲ್ಲಿ ಭಾಗಿಯಾಗಿದ್ದ ಮೂವತೈದಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆದುಕೊಂಡು ವೈದ್ಯಕೀಯ ತಪಾಸಣೆ ನಡೆಸಲಾಗಿದೆ. ಅದರಲ್ಲಿ ನಟ ಸಿದ್ಧಾಂತ್ ಕಪೂರ್ ಮಾದಕ ವಸ್ತುಗಳನ್ನು ಸೇವಿಸಿದ್ದಾನೆಂಬುದೂ ಪಕ್ಕಾ ಆದಂತಿದೆ. ನಿಮಗೆಲ್ಲ ಮರೆತು ಹೋಗಲು ಸಾಧ್ಯವೇ ಇಲ್ಲ. ಕಳೆದ ಒಂದೆರಡು ವರ್ಷಗಳಿಂದ ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ದೊಡ್ಡ ಮಟ್ಟದಲ್ಲಿಯೇ ಸದ್ದು ಮಾಡುತ್ತಿದೆ. ರಾಗಿಣಿ, ಸಂಜನಾರಂಥ ನಟೀಮಣಿಯರು ಜೈಲುಪಾಲಾಗಿ ವಾಪಾಸಾದದ್ದೂ ಆಗಿದೆ. ಸದ್ಯಕ್ಕೆ…
ಅದ್ಯಾವ ದೇಶ, ಭಾಷೆಗಳ ಮಂದಿಯೇ ಇರಲಿ; ತಾಯ್ತನ, ತಂದೆಯಾಗೋ ಸಂಭ್ರಮವೆಲ್ಲ ಒಂದೇ ಆಗಿರುತ್ತೆ. ಮದುವೆ ಮುಂತಾದ ಸಂಪ್ರದಾಯಗಳಲ್ಲಿ ವ್ಯತ್ಯಾಸವಿದ್ದರೂ ಅದರ ಪುಳಕಗಳಲ್ಲಿ ಸಾಮ್ಯತೆ ಇದ್ದೇ ಇದೆ. ಹಾಗಿದ್ದ ಮೇಲೆ ನಮ್ಮಲ್ಲಿರೋ ಒಂದಷ್ಟು ನಂಬಿಕೆಗಳೂ ಕೂಡಾ ಪರಸ್ಪರ ಮ್ಯಾಚ್ ಆಗೋದ್ರಲ್ಲಿ ಅಚ್ಚರಿಯೇನಿಲ್ಲ. ನಮ್ಮದು ಹೇಳಿ ಕೇಳಿ ಸಂಪ್ರದಾಯ, ನಂಬಿಕೆಗಳಿಂದ ತುಂಬಿಕೊಂಡಿರೋ ನೆಲ. ಇಲ್ಲಿ ಅದಕ್ಕೆ ತಕ್ಕುದಾದ ಅನೇಕಾನೇಕ ಆಚರಣೆಗಳಿವೆ, ನಂಬಿಕೆಗಳಿವೆ. ಆದ್ರೆ ನಮ್ಮತನದ ಬಗ್ಗೆ ನಮಗೆ ತಾತ್ಸಾರ ಹೆಚ್ಚು. ಆದ್ದರಿಂದಲೇ ಅದೆಲ್ಲವನ್ನೂ ಒಂದೇ ದೃಷ್ಟಿಕೋನದಿಂದ ನೋಡಿ ಮೂಢನಂಬಿಕೆಯೆಂಬ ಲೇಬಲ್ಲು ಅಂಟಿಸಿ ಕಡೆಗಣಿಸಿ ಬಿಡುತ್ತೇವೆ. ನಂಬಲೇ ಬೇಕಾದ ವಿಚಾರ ಅಂದ್ರೆ, ಕೆಲವಾರು ನಂಬಿಕೆಗಳು ನಮಗೆ ಮಾತ್ರವೇ ಸೀಮಿತವಲ್ಲ. ಕೆಲ ಮೂಢ ನಂಬಿಕೆಗಳಂಥವು ಬೇರೆ ದೇಶಗಳಲ್ಲಿಯೂ ಇವೆ. ಈ ಮಾತಿಗೆ ಉದಾಹರಣೆಯಾಗಿ ನಿಲ್ಲೋದು ಚೀನಾ. ಕೊರೋನಾ ವೈರಸ್ಸಿನ ಮೂಲಕ ಚೀನಾ ಇಡೀ ವಿಶ್ವದಲ್ಲಿ ವಿಲನ್ ಸ್ಥಾನ ಪಡೆದುಕೊಂಡಿದೆ. ಸದಾ ಒಂದಿಲ್ಲೊಂದು ಕಿತಾಪತಿಗೆ ಹೆಸರಾಗಿರೋ ಈ ದೇಶ ಹೆಚ್ಚಿನ ಜನಸಂಖ್ಯೆಗೂ ಫೇಮಸ್ಸು. ಬೇರೆಲ್ಲವನ್ನೂ ಬದಿಗಿಟ್ಟು ನೋಡಿದರೆ ಆ…
ಕೊರೋನಾ ಮೂರನೇ ಅಲೆಯನ್ನೂ ಕರ್ನಾಟಕದ ಮಟ್ಟಿಗೆ ಡ್ರಗ್ ಕೇಸ್ ತಡೆದು ನಿಲ್ಲಿಸಿತ್ತು. ದೃಷ್ಯ ಮಾಧ್ಯಮಗಳ ಚಿತ್ತವೆಲ್ಲ ಏಕಾಏಕಿ ಸಂಜನಾ ಹಾಗೂ ರಾಗಿಣಿಯತ್ತಲೇ ಕೀಲಿಸಿಕೊಂಡಿತ್ತು. ಅಫ್ಘಾನಿಸ್ಥಾನದ ಉಗ್ರರ ಅಟ್ಟಹಾಸವನ್ನೂ ಮೆಟ್ಟಿ ನಿಂತು ಸುದ್ದಿಕೇಂದ್ರಕ್ಕೆ ಬಂದ ಖ್ಯಾತಿ ಈ ನಟಿಯರಿಗೆ ಸಲ್ಲುತ್ತೆ. ಇರಲಿ, ಇದು ನಮ್ಮ ರಾಜ್ಯದ ವಿಚಾರ. ಆದ್ರೆ, ಈ ಡ್ರಗ್ ಡೀಲಿಂಗ್ ವಿಚಾರದಲ್ಲಿ ಮಾತ್ರ ಬಗೆದಷ್ಟೂ ಚಿತ್ರವಿಚಿತ್ರವಾದ ಸಂಗತಿಗಳು ಹೊರಬೀಳುತ್ತವೆ. ಡ್ರಗ್ ಡೀಲರ್ಗಳು ಪೊಲೀಸರನ್ನೇ ಯಾಮಾರಿಸಿ ದಂಧೆ ನಡೆಸೋದರಲ್ಲಿ ಪಂಟರುಗಳು. ನಶೆಯ ಏಟಿನಲ್ಲಿ, ಕಾಸಿನ ಮೋಹದಲ್ಲಿ ಎಂಥಾ ರಿಸ್ಕಿಗಾದರೂ ಸೈ ಅನ್ನೋ ಕಿರಾತಕರ ಲೋಕವದು. ಸದಾ ಖಾಕಿ ಪಡೆ ಪಹರೆ ಕಾಯುತ್ತಿದ್ದರೂ ಅದರಾಚೆಗೆ ನಶೆ ಹಬ್ಬಿಸೋ ಈ ಮಂದಿಯದ್ದು ನಿಜಕ್ಕೂ ಪ್ರಳಯಾಂತಕ ಬುದ್ಧಿ. ಇಂಥಾ ಡ್ರಗ್ ಕಾರ್ಟಲ್ಗಳು ವಿಶ್ವಾದ್ಯಂತ ಆಕ್ಟೀವ್ ಆಗಿರೋದು ಹೊಸಾ ವಿಚಾರವೇನಲ್ಲ. ಯಾಕಂದ್ರೆ, ಆ ದಂಧೆಗೆ ಭಾರೀ ಇತಿಹಾಸವಿದೆ. ಮುಂದುವರೆದ ರಾಷ್ಟ್ರಗಳಲ್ಲಿಯಂತೂ ನಾವೆಲ್ಲ ಕಣ್ಣು ಬಿಡುವ ಮುನ್ನವೇ ನಶೆಯ ನರ್ತನ ಶುರುವಾಗಿ ಹೋಗಿತ್ತು. ಸಾಮಾನ್ಯವಾಗಿ ಈ ಡ್ರಗ್ ಡೀಲಿಂಗ್…
ಒಂದರೆಕ್ಷಣ ಮೊಬೈಲು ಕಾಣಿಸದಿದ್ದರೆ ದೇಹದ ಅಮೂಲ್ಯ ಅಂಗವೇ ಆದೃಷವಾದಂತೆ ಕಂಗಾಲಾಗಿ ಬಿಡುತ್ತೇವೆ. ಜೊತೆಯಲ್ಲಿ ಯಾರೆಂದರೆ ಯಾರೂ ಇಲ್ಲದ ಒಂಟಿ ಪಿಶಾಚಿಯಂಥ ಕ್ಷಣಗಳನ್ನೂ ನಾವು ಎಂಜಾಯ್ ಮಾಡಬಹುದೇನೋ. ಆದರೆ ಮೊಬೈಲೆಂಬ ಮಾಯಾವಿಯಿಲ್ಲದ ಕ್ಷಣಗಳನ್ನು ಬಹುತೇಕರು ಕಲ್ಪಿಸಿಕೊಳ್ಳಲೂ ಹಿಂಜರಿಯುತ್ತಾರೆ. ಮೊಬೈಲಿನ ಅನಾಹುತಗಳ ಬಗ್ಗೆ ಮಣಗಟ್ಟಲೆ ಮಾತಾಡುವವರು, ಮೊಬೈಲಿನ ಸಂಗಕ್ಕೆ ಬಿದ್ದವರನ್ನು ಗೇಲಿ ಮಾಡುವವರೂ ಕೂಡಾ ಮೊಬೈಲಿಲ್ಲದೆ ಬದುಕೋದು ಕಷ್ಟವಿದೆ. ಹೀಗೆ ಇಡೀ ವಿಶ್ವವನ್ನೇ ಆವರಿಸಿಕೊಂಡಿರೋ ಮೊಬೈಲು ನಾನಾ ಕಾಯಿಲೆಗಳಿಗೆ, ಗೀಳುಗಳಿಗೆ ಕಾರಣವಾಗಿದೆ ಅನ್ನೋದು ಗೊತ್ತಿರುವಂಥಾದ್ದೇ. ಆದರೆ ಸದಾ ನಮ್ಮ ಅಂಗೈಯನ್ನು ಆಲಂಗಿಸಿಕೊಳ್ಳುವ ಮೊಬೈಲು ಅದೆಷ್ಟು ಗಲೀಜಿನ ಕೊಂಪೆ ಅನ್ನೋದು ಮಾತ್ರ ಹೆಚ್ಚಿನ ಮಂದಿಗೆ ಗೊತ್ತಿರಲಿಕ್ಕಿಲ್ಲ! ಮೊಬೈಲಿಂದಾಗೋ ಸಾಕಷ್ಟು ವ್ಯತಿರಿಕ್ತ ಪರಿಣಾಮಗಳ ಬಗ್ಗೆ ಚರ್ಚೆಯಾಗುತ್ತಲೇ ಇದ್ದಾವೆ. ಅವೆಲ್ಲವೂ ಮೊಬೈಲುಗಳ ಮೂಲಕವೇ ಹರಿದಾಡುತ್ತಿವೆ ಅನ್ನೋದು ಮಾತ್ರ ನಿಜಕ್ಕೂ ವಿಕಟ ವಾಸ್ತವ. ದಿನಾ ಬೆಳಗೆದ್ದು ಶುರುಹಚ್ಚಿಕೊಂಡರೆ ರಾತ್ರಿ ಹಾಸಿಗೆಗೆ ಒರಗಿಕೊಳ್ಳುವಾಗಲೂ ಮೊಬೈಲು ಜೊತೆಗೇ ಇರುತ್ತೆ. ಅದೊಂಥರಾ ದುಬಾರಿ ವೆಚ್ಚ ಮಾಡಿ ಕೊಳೆತು ನಾರೋ ಪಾಯಿಖಾನೆಯನ್ನೇ ಎದೆ ಮೇಲಿಟ್ಟುಕೊಂಡಂತೆ ಅಂದ್ರೆ…