ವಿಶ್ವದಾದ್ಯಂತ ಕೊರೋನಾ ವೈರಸ್ ಜನರನ್ನೆಲ್ಲ ಭೀತಿಗೀಡುಮಾಡಿದೆ. ಇಡೀ ಜಗತ್ತಿನ ವ್ಯಾಪಾರ ವಹಿವಾಟು ಸೇರಿದಂತೆ ಎಲ್ಲವೂ ಅಯೋಮಯ ಸ್ಥಿತಿಗೆ ಬಂದು ನಿಂತಿದೆ. ಇನ್ನೂ ಒಂದಷ್ಟು ಕಾಲ ಇದೇ ರೀತಿ ಮುಂದುವರೆದರೆ ಜಾಗತಿಕ ಅರ್ಥವ್ಯವಸ್ಥೆಯನ್ನೆಲ್ಲ ಮತ್ತೆ ಹೊಸದಾಗಿ ಕಟ್ಟಿ ನಿಲ್ಲಿಸುವ ಸವಾಲೆದುರಾಗೋದರಲ್ಲಿ ಯಾವ ಸಂಶಯವೂ ಇಲ್ಲ. ಇದೆಲ್ಲದರಿಂದಾಗಿ ಅಮೆರಿಕದಂಥಾ ಸ್ಥಿತಿವಂತ ದೇಶಗಳಲ್ಲಿಯೇ ನಿರುದ್ಯೋಗ ಪ್ರಮಾಣದಲ್ಲಿ ಏರುಗತಿ ಕಾಣಿಸಿಕೊಂಡಿದೆ. ಇದರ ಬಿಸಿ ಎಂಥಾದ್ದಿದೆಯೆಂದರೆ ಥಾಯ್ಲೆಂಡಿನ ಆನೆಗಳಿಗೂ ನಿರುದ್ಯೋಗದ ಬಾಧೆ ಶುರುವಾಗಿದೆ. ಅದುವೇ ಆ ಮೂಕ ಜೀವಿಗಳಿಗೆ ಮತ್ತೆ ತಮ್ಮ ತವರು ಸೇರಿ ಸ್ವಚ್ಛಂದವಾಗಿರುವ ಭಾಗ್ಯವನ್ನೂ ಕರುಣಿಸಿದೆ! ಥಾಯ್ಲೆಂಡಿನಲ್ಲಿ ಆನೆಗಳನ್ನು ಪಳಗಿಸಿಕೊಂಡು ನಾನಾ ಕೆಲಸ ಕಾರ್ಯಗಳಿಗೆ, ಸರ್ಕಸ್ಸಿನಂಥಾ ಮನೋರಂಜನಾತ್ಮಕ ಚಟುವಟಿಕೆಗಳಿಗೆ ಒಗ್ಗಿಸಿಕೊಳ್ಳುತ್ತಾ ಬರಲಾಗುತ್ತಿದೆ. ಅದು ಪ್ರವಾಸೋದ್ಯಮದ ಭಾಗವಾಗಿಯೂ ಅಲ್ಲಿ ಚಾಲನೆಯಲ್ಲಿದೆ. ಆದರೆ ಏಕಾಏಕಿ ಲಾಕ್ಡೌನ್ ಶುರುವಾದ್ದರಿಂದಾಗಿ ಥಾಯ್ಲೆಂಡಿನ ಆನೆ ಮಾಲೀಕರು ಕಂಗಾಲಾಗಿದ್ದಾರೆ. ವ್ಯವಹಾರ ಚಾಲೂ ಆಗಿದ್ದಾಗ ಆನೆಗಳನ್ನು ಹೇಗೋ ಸಂಭಾಳಿಸಬಹುದು. ಕೊರೋನಾದಿಂದಾಗಿ ಎಲ್ಲವೂ ಸ್ತಬ್ಧಗೊಂಡಿರುವಾಗ ಜನರೇ ಹೊಟ್ಟೆ ಪಾಡಿಗೆ ಪರದಾಡುವಂತಾಗಿದೆ. ಹಾಗಿರುವಾಗು ಟನ್ನುಗಟ್ಟಲೆ ಆಹಾರ ಒದಗಿಸಿ ಆನೆಗಳ…
Author: Santhosh Bagilagadde
ಒಂದು ಕಾಲಘಟ್ಟವನ್ನು ತಮ್ಮ ಅಬ್ಬರದ, ವಿಶಿಷ್ಟವಾದ ನಟನೆಯ ಮೂಲಕ ಕಳೆಗಟ್ಟಿಸಿದ್ದ ಖಳನಟರೆಲ್ಲ ಕನ್ನಡ ಚಿತ್ರರಂಗದಿಂದ ದೂರವಾಗಿದ್ದಾರೆ. ಹಾಗೆ ಖಳನ ಪಾತ್ರಗಳಿಗೆ ಜೀವ ತುಂಬುತ್ತಲೇ ಕನ್ನಡ ಸಿನಿಮಾಗಳಿಗೆ ಹೊಸಾ ಖದರ್ ತುಂಬಿದ್ದವರಲ್ಲಿ ವಜ್ರಮುನಿಯವರ ಹೆಸರು ಮೊದಲ ಸಾಲಿನಲ್ಲಿ ದಾಖಲಾಗುತ್ತದೆ. ದಶಕಗಳಷ್ಟು ಹಿಂದಿನ ಸಿನಿಮಾಗಳನ್ನು ಇಂದಿನ ಪೀಳಿಗೆ ನೋಡಿ, ಅದರಲ್ಲಿ ವಜ್ರಮುನಿಯವರ ಪಾತ್ರಗಳನ್ನು ಕಣ್ತುಂಬಿಕೊಂಡರೆಂದರೆ ಖಂಡಿತಾ ಈ ತಲೆಮಾರಿನ ಅದೆಂಥಾ ಅಬ್ಬರದ ಖಳನಟನೂ ಸಪ್ಪೆ ಅನ್ನಿಸಿ ಬಿಡುತ್ತಾನೆ. ಹಾಗೆ ಕಣ್ಣುಗಳಲ್ಲಿ ಕೆಂಡವುಗುಳುತ್ತಾ, ನಿಜ ಜೀವನದಲ್ಲಿ ಅಬೋಧ ಮಗುವಿನಂಥ ಮನಸ್ಥಿತಿಯನ್ನು ರೂಢಿಸಿಕೊಂಡು ಜೀವಿಸಿದ್ದವರು ವಜ್ರಮುನಿ. ಎಂಥವರ ಅಳ್ಳೆಯನ್ನೂ ತನ್ನ ಭಾವ ಭಂಗಿ, ಅಬ್ಬರಗಳ ಮೂಲಕವೇ ಅದುರಿಸಿ ಬಿಡುವಂತೆ ನಟಿಸುತ್ತಿದ್ದ ವಜ್ರಮುನಿ ಕನ್ನಡ ಚಿತ್ರರಂಗದ ವಜ್ರದಂಥ ಪ್ರತಿಭೆ. ಖುದ್ದು ತನ್ನ ಮಕ್ಕಳೇ ಬೆಚ್ಚಿಬಿದ್ದು ಅವುಸಿಟ್ಟುಕೊಳ್ಳುವಂಥ ಪಾತ್ರಗಳನ್ನು ನಿರ್ವಹಿಸಿದ್ದ ವಜ್ರಮುನಿಯವರದ್ದು ನಿಜ ಜೀವನದಲ್ಲಿ ಅದಕ್ಕೆ ತದ್ವಿರುದ್ಧವಾದ ವ್ಯಕ್ತಿತ್ವ. ತೀರಾ ಚಿತ್ರರಂಗಕ್ಕೆ ಎಂಟ್ರಿ ಕೊಡುವ ಮುನ್ನ ಮಾತ್ರವಲ್ಲದೇ, ನಟನಾಗಿ ಮೆರೆದ ತರುವಾಯವೂ ಬದುಕಿನ ಏರಿಳಿತಗಳನ್ನು ಕಂಡ, ಒಳಗೊಳಗೇ ನೊಂದು ಬೆಂದ…
ಭಾರತದಂಥಾ ಅಗಾದ ವಿಸ್ತಾರದ, ಅಗೋಚರ ರೀತಿ ರಿವಾಜುಗಳಿರೋ ದೇಶದಲ್ಲಿ ಅದಕ್ಕೆ ತಕ್ಕುದಾದ ಒಂದಷ್ಟು ನಂಬಿಕೆಗಳೂ ಬೆಸೆದುಕೊಂಡಿರುತ್ತವೆ. ಅದರಲ್ಲಿ ಒಂದಷ್ಟು ಮೂಢ ನಂಬಿಕೆಯ ಲಿಸ್ಟು ಸೇರಿಕೊಂಡು ಕಣ್ಮರೆಯಾಗಿವೆ ಅನ್ನಲಾಗುತ್ತೆ. ಆದರೆ ಆ ಲಿಸ್ಟಿನಲ್ಲಿರೋ ಎಲ್ಲ ಮೂಢ ನಂಬಿಕೆಗಳೂ ಸಂಪೂರ್ಣವಾಗಿ ನಾಮಾವಶೇಷ ಹೊಂದಿವೆ ಅನ್ನಲಾಗೋದಿಲ್ಲ. ಯಾಕೆಂದರೆ ಒಂದು ವೇಳೆ ಅಂಥವೆಲ್ಲ ಮರೆಯಾಗಿದ್ದೇ ಹೌದಾಗಿದ್ದರೆ ದೆವ್ವ ಭೂತಗಳೆಂಬ ವಿಲಕ್ಷಣ ನಂಬಿಕೆಗಳು ನಮ್ಮೆಲ್ಲರ ಜೀವನದ ಪಥದ ಇಕ್ಕೆಲದಲ್ಲಿ ಈ ಪಾಟಿ ಗಸ್ತು ಹೊಡೆಯುತ್ತಿರಲಿಲ್ಲ! ಈಗಲೂ ನಮ್ಮಲ್ಲಿ ದೆವ್ವ ಭೂತಗಳ ಹಾಟ್ ಸ್ಪಾಟುಗಳಿದ್ದಾವೆ. ಅದೆಷ್ಟೋ ಕೋಟೆ ಕೊತ್ತಲಗಳು, ಕೆಲ ಪ್ರದೇಶಗಳ ಭೂತ ಬಾಧೆಯಿಂದ ಪಾಳು ಬಿದ್ದಿವೆ. ಇನ್ನೂ ಕೆಲ ಪ್ರದೇಶಗಳು ಆ ಭಯದ ನೆರಳಲ್ಲಿಯೇ ಇದ್ದಾವೆ. ಅಂಥಾ ಪ್ರದೇಶಗಳಲ್ಲಿ ದೆಹಲಿ ಕಂಟೋನ್ಮೆಂಟ್ ಏರಿಯಾ ಕೂಡಾ ಒಂದು. ಈ ಪ್ರದೇಶವನ್ನು ದೆಹಲಿ ಕ್ಯಾಂಟ್ ಎಂದೂ ಕರೆಯಲಾಗುತ್ತದೆ. ಈ ಪ್ರದೇಶದಲ್ಲಿ ನಿರಾಳವಾಗಿ ಮೈ ಚಾಚಿಕೊಂಡಂತಿರೋ ಒಂದು ರಸ್ತೆ ಇದೆ. ಇದು ಸಖಲ ಮಾಲೀನ್ಯಗಳಿಂದ ಗಬ್ಬೆದ್ದಿರೋ ದೆಹಲಿಯ ಅತೀ ಸ್ವಚ್ಛ ರಸ್ತೆ ಎಂದೂ…
ಈಜಿಫ್ಟ್‌ನ ಅಂಚಿನಲ್ಲಿ ಹರಡಿಕೊಂಡಿರುವ ಕೆಂಪು ಸಮುದ್ರ ತನ್ನೊಡಲ ನಾನಾ ನಿಗೂಢಗಳಿಂದ, ವಿಶಿಷ್ಟವಾದ ಜೀವ ಸಂಕುಲಗಳಿಂದ ಜಗತ್ತಿನ ಗಮನ ಸೆಳೆದಿದೆ. ಭಾರೀ ಗಾತ್ರದ ಶಾರ್ಕ್‌ಗಳ ಸಂಖ್ಯೆಯೂ ಕೂಡಾ ಈ ಸಾಗರದಲ್ಲಿ ವಿಪರೀತವಾಗಿವೆ. ಸಾಮಾನ್ಯವಾಗಿ ಇತರೇ ಸಮುದ್ರಗಳಲ್ಲಿ ಶಾರ್ಕ್‌ಗಳು ಬೀಚ್ ಏರಿಯಾಗಳಿಗಿಂತಲೂ ಹೆಚ್ಚು ದೂರದ ಆಳ ಪ್ರದೇಶಗಳಲ್ಲಿ ವಾಸಿಸುತ್ತವೆ. ಆದರೆ ಕೆಂಪು ಸಮುದ್ರದ ಶಾರ್ಕ್‌ಗಳಿಗೆ ತೀರ ಪ್ರದೇಶಗಳೆಂದರೆ ಅದೆಂಥಾದ್ದೋ ಪ್ರೀತಿ. ಅದುವೇ ಈಜಿಫ್ಟಿನ ಸೆಹಲ ಹಶೀಶ್ ಬೀಚ್‌ನಲ್ಲಿ ಓಡಾಡುವ ಪ್ರವಾಸಿಗರ ಪಾಲಿಗೆ ಮರಣಕಂಟಕವಾಗಿ ಮಾರ್ಪಟ್ಟಿದೆ. ಈಜಿಫ್ಟ್‌ನಲ್ಲಿರುವ ಅದೊಂದು ಪ್ರದೇಶದ ತುಂಬೆಲ್ಲ ಕೆಂಪು ಸಮುದ್ರ ಮೈಚಾಚಿಕೊಂಡಿದೆ. ವಿಹಂಗಮವಾದ ಈ ಕಡಲಂಚೊಂದಕ್ಕೆ ಸೆಹಲ್ ಹಶೀಶ್ ಅಂತ ಕರೆಯಲಾಗುತ್ತದೆ. ಪ್ರವಾಸಿಗರು ಅಡ್ಡಾಡು ಹೇಳಿ ಮಾಡಿಸಿದಂತಿರುವ ಸೆಹಲ್ ಹಶೀಶ್, ಲಾಗಾಯ್ತಿನಿಂದಲೂ ಅಂತಾರಾಷ್ಟರೀಯ ಮಟ್ಟದಲ್ಲಿ ಪ್ರವಾಸಿಗರನ್ನು ಸೆಳೆಯುತ್ತಾ ಬಂದಿದೆ. ದುರಂತವೆಂದರೆ, ಈ ಕಡಲ ತೀರದಲ್ಲಿ ಶಾರ್ಕ್ ದಾಳಿಗೊಳಗಾಗಿ ಇದುವರೆಗೂ ನೂರಾರು ಪ್ರವಾಸಿಗರು ಪ್ರಾಣ ತೆತ್ತಿದ್ದಾರೆ. ಇದೀಗ ಇಬ್ಬರು ಮಹಿಳೇ ಪ್ರವಾಸಿಗರ ಮೇಲೆರಗಿದ ದೈತ್ಯ ಶಾರ್ಕ್ ಒಂದು ಪ್ರಾಣ ತೆಗೆದಿದೆ.’ಆಸ್ಟ್ರೇಲಿಯಾದ ಈ ಮಹಿಳಾ…
ಭಾರತದ ರಾಜಕೀಯ ವ್ಯವಸ್ಥೆ ಇನ್ನೊಂದಷ್ಟು ವರ್ಷ ಕಳೆದರೂ ಸರಿಯಾಗದಷ್ಟು ಹಡಾಲೆದ್ದು ಹೋಗಿದೆ. ಅಧಿಕಾರವೊಂದೇ ಉದ್ದೇಶ ಎಂಬಂತೆ ಮೆರೆಯುತ್ತಿರುವ ಮಂದಿ ಗ್ರಾಮ ಪಂಚಾಯ್ತಿ ಮಟ್ಟಕ್ಕೂ ಭ್ರಷ್ಟಾಚಾರ, ರಾಜಕೀಯ ಅವ್ಯವಸ್ಥೆಗಳನ್ನು ಹಬ್ಬಿಕೊಳ್ಳುವಂತೆ ಮಾಡಿದ್ದಾರೆ. ಈ ಕಾರಣದಿಂದಾಗಿಯೇ ಇದೀಗ ವಿಧಾನಸೌಧ ಮಟ್ಟದ ಅಂದಾದುಂದಿ, ಅವ್ಯವಹಾರ ಮತ್ತು ಅಸಂಬಂದ್ಧ ನಡವಳಿಕೆಗಳು ಗ್ರಾಮ ಪಂಚಾಯ್ತಿ ಮಟ್ಟದಲ್ಲಿಯೂ ಸಾಂಘವಾಗಿಯೇ ನಡೆಯುತ್ತಿದೆ. ಅಂಥಾ ಬೇಜವಾಬ್ದಾರಿ ಇಲ್ಲದೇ ಹೋಗಿದ್ದರೆ ಮಧ್ಯಪ್ರದೇಶದ ಗ್ರಾಮ,ವೊಂದರಲ್ಲಿ ಸತ್ತ ವ್ಯಕ್ತಿಯೋರ್ವ ಚುನಾವಣೆಯಲ್ಲಿ ಗೆಲ್ಲುವಂಥಾ ಚೋದ್ಯ ಸಂಭವಿಸಲು ಸಾಧ್ಯವಿರುತ್ತಿರಲಿಲ್ಲ. ಇಂಥಾದ್ದೊಂದು ಅಚ್ಚರಿದಾಯಕ ಘಟನೆ ನಡೆದಿರುವುದು ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ಹಳ್ಳಿಯೊಂದರಲ್ಲಿ. ಆ ಭಾಗದಲ್ಲಿ ಗ್ರಾಮ ಪಂಚಾಯ್ತಿ ಚುನಾವಣೆ ನಡೆದಿತ್ತು. ರವೀಂದ್ರ ಠಾಕೂರ್ ಎಂಬ ವ್ಯಕ್ತಿಯೂ ಆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ. ಭಾರೀ ಉತ್ಸಾಹದಿಂದ ಪ್ರಚಾರ ಕಾರ್ಯದಲ್ಲಿಯೂ ಭಾಗಿಯಾಗಿದ್ದ. ಆ ಊರಿಗೆಲ್ಲ ಬೇಕಾಗಿದ್ದ ವ್ಯಕ್ತಿಯಾಗಿದ್ದ ಆತನತ್ತಲೇ ಆ ಗ್ರಾಮದ ಮತದಾರರ ಒಲವಿತ್ತು. ಆದರೆ ವಿಧಿಯೆಂಬುದು ಕಳೆದ ತಿಂಗಳ ೨೨ರಂದು ಆತನ ಭಾಳಲ್ಲಿ ಘೋರವಾಗಿಯೇ ಆಟವಾಡಿತ್ತು. ಆ ವ್ಯಕ್ತಿ ಹೃದಯಾಘಾತದಿಂದ ಮೃತ ಪಟ್ಟಿದ್ದ. ಅದಾಗಿ…
ಮುಂಗಾರು ಆರಂಭವಾಗುತ್ತಲೇ ಮುದಗೊಳ್ಳುವ ಕಾಲ ಸರಿದು ಹೋಗಿ ಎರಡ್ಮೂರು ವರ್ಷಗಳೇ ಕಳೆದು ಹೋಗಿವೆ. ಇದು ಮುಂಗಾರಿನ ಹಿಮ್ಮೇಳದಲ್ಲಿ ಎಂಥಾ ದುರ್ಘಟನೆಗಳು ನಡೆಯಲಿವೆಯೋ ಅಂತ ಬೆಚ್ಚಿಬಿದ್ದು ಮುದುರಿ ಕೂರುವ ಕಾಲಮಾನ. ನಮ್ಮ ರಾಜ್ಯ ಮಾತ್ರವಲ್ಲ; ಒಂದಿಡೀ ದೇಶದ ಬಹುತೇಕ ರಾಜ್ಯಗಳಲ್ಲಿ ಮಳೆಯೆಂಬುದು ಮರಣಮೃದಂಗವನ್ನೇ ಬಾರಿಸುತ್ತಿವೆ. ಇದೀಗ ನಮ್ಮ ದಕ್ಷಿಣ ಕನ್ನಡದಂಥಾ ಕಡೆಗಳಲ್ಲಿ ಊರುಗಳು ಮುಳುಗಡೆಯಾಗುತ್ತಿವೆ. ಆದರೆ ಒಂದಷ್ಟು ಬಡತನವನ್ನು ಹಾಸಿ ಹೊದ್ದಿರುವ ಅಸ್ಸಾಂ ಮುಂಗಾರು ಪೂರ್ವ ಮಳೆಯಲ್ಲಿಯೇ ಸಂಪೂರ್ಣವಾಗಿ ಮುಳುಗೆದ್ದಿದೆ. ಅದೆಷ್ಟೋ ಜನರು ಪ್ರಾಣ ಕಳೆದುಕೊಂಡರೆ, ಬದುಕುಳಿದ ಮಂದಿಗೊಂದು ಸೂರಿಗೂ ಗತಿಯಿಲ್ಲದಂಥಾ ದಾರುಣ ಪರಿಸ್ಥಿತಿ ಅಸ್ಸಾಂ ಅನ್ನು ಅಕ್ಷರಶಃ ಆಳುತ್ತಿದೆ. ಅಸ್ಸಾಂನಲ್ಲಿ ಜನ ಬಡತನದಿಂದ ನರಳುತ್ತಿದ್ದರೂ ಪ್ರಾಕೃತಿಕವಾಗಿ ಅತ್ಯಂತ ಶ್ರೀಮಂತವಾಗಿದೆ. ಆದರೆ ಇತ್ತೀಚಿನ ಕೆಲ ವರ್ಷಗಳಲ್ಲಿ ಮಳೆಗಾಲ ಶುರುವಾದರೆ ಸಾಕು; ಜನರ ಬದುಕು ಮೂರಾಬಟ್ಟೆಯಾಗುತ್ತಿದೆ. ಅಸ್ಸಾಂನ ಬಹುತೇಕ ಪ್ರದೇಶಗಳಲ್ಲಿ ವ್ಯಾಪಕ ಮಳೆ ಹಾನಿಗಳು ಸಂಭವಿಸಿವೆಯಾದರೂ ಬಾರ್ಪೇಟಾ ಜಿಲ್ಲೆಯ ಕಚುಮಾರಾ ಪ್ರದೇಶದಲ್ಲಿ ಹೇಳತೀರದಷ್ಟು ಹಾನಿಗಳಾಗಿವೆ. ಪದೇ ಪದೆ ಬಂದೆರಗಿದ ನೆರೆ ಹಾವಳಿಯಿಂದಾಗಿ ಅಲ್ಲಿನ ಜನ…
ಭಾರತದ ರಾಜಕೀಯ ವ್ಯವಸ್ಥೆ ಇನ್ನೊಂದಷ್ಟು ವರ್ಷ ಕಳೆದರೂ ಸರಿಯಾಗದಷ್ಟು ಹಡಾಲೆದ್ದು ಹೋಗಿದೆ. ಅಧಿಕಾರವೊಂದೇ ಉದ್ದೇಶ ಎಂಬಂತೆ ಮೆರೆಯುತ್ತಿರುವ ಮಂದಿ ಗ್ರಾಮ ಪಂಚಾಯ್ತಿ ಮಟ್ಟಕ್ಕೂ ಭ್ರಷ್ಟಾಚಾರ, ರಾಜಕೀಯ ಅವ್ಯವಸ್ಥೆಗಳನ್ನು ಹಬ್ಬಿಕೊಳ್ಳುವಂತೆ ಮಾಡಿದ್ದಾರೆ. ಈ ಕಾರಣದಿಂದಾಗಿಯೇ ಇದೀಗ ವಿಧಾನಸೌಧ ಮಟ್ಟದ ಅಂದಾದುಂದಿ, ಅವ್ಯವಹಾರ ಮತ್ತು ಅಸಂಬಂದ್ಧ ನಡವಳಿಕೆಗಳು ಗ್ರಾಮ ಪಂಚಾಯ್ತಿ ಮಟ್ಟದಲ್ಲಿಯೂ ಸಾಂಘವಾಗಿಯೇ ನಡೆಯುತ್ತಿದೆ. ಅಂಥಾ ಬೇಜವಾಬ್ದಾರಿ ಇಲ್ಲದೇ ಹೋಗಿದ್ದರೆ ಮಧ್ಯಪ್ರದೇಶದ ಗ್ರಾಮ,ವೊಂದರಲ್ಲಿ ಸತ್ತ ವ್ಯಕ್ತಿಯೋರ್ವ ಚುನಾವಣೆಯಲ್ಲಿ ಗೆಲ್ಲುವಂಥಾ ಚೋದ್ಯ ಸಂಭವಿಸಲು ಸಾಧ್ಯವಿರುತ್ತಿರಲಿಲ್ಲ. ಇಂಥಾದ್ದೊಂದು ಅಚ್ಚರಿದಾಯಕ ಘಟನೆ ನಡೆದಿರುವುದು ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ಹಳ್ಳಿಯೊಂದರಲ್ಲಿ. ಆ ಭಾಗದಲ್ಲಿ ಗ್ರಾಮ ಪಂಚಾಯ್ತಿ ಚುನಾವಣೆ ನಡೆದಿತ್ತು. ರವೀಂದ್ರ ಠಾಕೂರ್ ಎಂಬ ವ್ಯಕ್ತಿಯೂ ಆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ. ಭಾರೀ ಉತ್ಸಾಹದಿಂದ ಪ್ರಚಾರ ಕಾರ್ಯದಲ್ಲಿಯೂ ಭಾಗಿಯಾಗಿದ್ದ. ಆ ಊರಿಗೆಲ್ಲ ಬೇಕಾಗಿದ್ದ ವ್ಯಕ್ತಿಯಾಗಿದ್ದ ಆತನತ್ತಲೇ ಆ ಗ್ರಾಮದ ಮತದಾರರ ಒಲವಿತ್ತು. ಆದರೆ ವಿಧಿಯೆಂಬುದು ಕಳೆದ ತಿಂಗಳ ೨೨ರಂದು ಆತನ ಭಾಳಲ್ಲಿ ಘೋರವಾಗಿಯೇ ಆಟವಾಡಿತ್ತು. ಆ ವ್ಯಕ್ತಿ ಹೃದಯಾಘಾತದಿಂದ ಮೃತ ಪಟ್ಟಿದ್ದ. ಅದಾಗಿ…
ಈಗ ಕನ್ನಡವೂ ಸೇರಿದಂತೆ ಐದು ಭಾಷೆಗಳಲ್ಲಿ ಬನಾರಸ್‌ನ ಮಾಯಗಂಗೆ ಹಾಡು ಮ್ಯಾಜಿಕ್ ಮಾಡಿದೆ. ಒಂದರ್ಥದಲ್ಲಿ ಈ ಹಾಡಿನೊಂದಿಗೆ ಬನಾರಸ್ ದೇಶವ್ಯಾಪಿ ತಲುಪಿಕೊಂಡಿದೆ. ಸಾಮಾನ್ಯವಾಗಿ ಹಾಡುಗಳ ಮೂಲಕವೇ ಪ್ರೇಕ್ಷಕರನ್ನು ಸೆಳೆದುಕೊಂಡು, ಆ ನಂತರ ಸೂಪರ್ ಹಿಟ್ಟಾದ ಸಾಕಷ್ಟು ಉದಾಹರಣೆಗಳಿದ್ದಾವೆ. ಜಯತೀರ್ಥ ನಿರ್ದೇಶನದ ಬನಾರಸ್ ಕೂಡಾ ಆ ಸಾಲಿಗೆ ಸೇರಿಕೊಳ್ಳುತ್ತದೆಂಬಂಥಾ ವಾತಾವರಣ ದಟ್ಟವಾಗಿದೆ. ವಿಶೇಷವೆಂದರೆ, ಈ ಸಿನಿಮಾ ಮೂಲಕ ಶಾಸಕ ಜಮೀರ್ ಅಹ್ಮದ್ ಖಾನ್ ಪುತ್ರ ಝೈದ್ ಖಾನ್ ನಾಯಕನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಹಾಗೊಂದು ವೇಳೆ ಝೈದ್ ಅವಕಾಶ ಸಿಕ್ಕಿತೆಂಬ ಕಾರಣದಿಂದ ಸೀದಾ ಎದ್ದು ಬಂದು ನಾಯಕನಾಗಿದ್ದರೆ, ಆತನ ಬಗ್ಗೆ ಈ ಪಾಟಿಯಾಗಿ ನಿರೀಕ್ಷೆ ಮೂಡಿಕೊಳ್ಳುತ್ತಿರಲಿಲ್ಲ. ಬಹುಶಃ ಹಾಡೊಂದರ ಕೆಲವೇ ಕೆಲ ಸನ್ನಿವೇಶಗಳ ಮೂಲಕ ಪಾಸಿಟಿವ್ ಟಾಕ್ ಕ್ರಿಯೇಟ್ ಮಾಡಲೂ ಸಾಧ್ಯವಾಗುತ್ತಿರಲಿಲ್ಲ. ನಿದೇರ್ಧಶಕ ಜಯತೀರ್ಥ ಮಾಯಗಂಗೆ ಹಾಡು ಬಿಡುಗಡೆಯ ಸಂದರ್ಭದಲ್ಲಿಯೇ ಒಂದು ಮಾತು ಹೇಳಿದ್ದರು. ಝೈದ್ ಖಾನ್ ಶಾಸಕ ಜಮೀರ್ ಅಹ್ಮದ್ ಮಗ ಅನ್ನೋದರ ಬಗ್ಗೆ ಪ್ರಚಾರ ಮಾಡಬೇಕಿಲ್ಲ, ಆತನನ್ನು ಓರ್ವ ಕಲಾವಿದನಾಗಿ ಕಂಡರೆ…
ವೈಯಕ್ತಿಕ ಬದುಕಿನ ತಿಕ್ಕಾಟವೊಂದರ ವಿಚಾರದಲ್ಲಿ ನಟಿ ಪವಿತ್ರಾ ಲೋಕೇಶ್ ವಿವಾದದ ಕೇಮದ್ರಬಿಂದುವಾಗಿದ್ದಾರೆ. ತೆಲುಗು ನಟ ನರೇಶ್ರೊಂದಿಗಿನಿ ಅಫೇರ್ ಸಂಬಂಧವಾಗಿ ಪವಿತ್ರಾ ಲೋಕೇಶ್ರನ್ನು ಮೀಡಿಯಾ ಮಂದಿ ಹೋದಲ್ಲಿ ಬಂದಲ್ಲಿ ಕಾಡುತ್ತಿದ್ದಾರೆ. ಇತ್ತ ಸಭ್ಯ ನಟ, ಪವಿತ್ರಾರ ಮಾಜೀ ಪತಿ ಸುಚೇಂದ್ರ ಪ್ರಸಾದ್ ಕೂಡಾ ಮಾಧ್ಯಮಗಳ ಮೂಲಕ ಪುಂಖಾನುಪುಂಖವಾಗಿ ಬಿತ್ತರವಾಗುತ್ತಿರುವ ಸುದ್ದಿಗಳನ್ನು ನೋಡಿ ಪೆಚ್ಚಾಗಿದ್ದಾರೆ. ಇದೆಲ್ಲದರ ನಡುವೆ ಅವನ್ಯಾರೋ ಬುರುಡೆ ವಾಸ್ತು ತಜ್ಞನೊಬ್ಬ ಬರ್ಬರವಾಗಿ ಹತನಾಗುವುದರೊಂದಿಗೆ ಪವಿತ್ರಾ ಲೋಕೇಶ್ ಪ್ರಕರಣಕ್ಕೆ ಒಂದಷ್ಟು ವಿರಾಮ ಬಿದ್ದಿದೆ. ಎಲ್ಲ ತಣ್ಣಗಾದಂತೆ ಕಾಣುತ್ತಿರುವ ಈ ಹೊತ್ತಿನಲ್ಲಿ ಹರಿದಾಡುತ್ತಿರುವ ಒಂದಷ್ಟು ಫೋಟೋಗಳನ್ನು ನೋಡಿದರೆ, ಅರೇ ನಟಿ ಪವಿತ್ರಾ ಲೋಕೇಶ್ ಅವರನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆಯಾ? ಅವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆಯಾ ಅಂತೆಲ್ಲ ಪ್ರಶ್ನೆಗಳು ಮೂಡಿಕೊಳ್ಳುತ್ತವೆ. ಅಷ್ಟಕ್ಕೂ ಪವಿತ್ರಾ ಲೋಕೇಶ್ ಪ್ರಕರಣದ ಬಗ್ಗೆ ಮೀಡಿಯಾ ಮಂದಿ ಅದೇನೇ ಬಾಯಿ ಬಡಿದುಕೊಂಡರೂ, ಅದು ಪವಿತ್ರಾರ ಖಾಸಗೀ ವಿಚಾರವಷ್ಟೇ. ಯಾರಿಂದ ದೂರಾಗಬೇಕು, ಯಾರೊಂದಿಗೆ ಬದುಕಬೇಕೆಂಬುದೆಲ್ಲ ಅವರವರ ವೈಯಕ್ತಿಕ ಆಯ್ಕೆ. ಈ ಸೆಲೆಬ್ರಿಟಿಗಳ ವಿಚಾರದಲ್ಲಿಯೂ ಅದು…
ಸಿನಿಮಾ ಕನಸೆಂಬುದು ಅದೆಲ್ಲಿಂದ, ಅದ್ಯಾರನ್ನು ಕೈ ಬೀಸಿ ಕರೆಯುತ್ತದೋ… ಕೈ ಹಿಡಿದು ಕರೆ ತರುತ್ತದೋ ಹೇಳಲು ಬರುವುದಿಲ್ಲ. ಸಿನಿಮಾ ಜಗತ್ತೆಂಬ ಮಾಯೆಗೆ ಅಂಥಾದ್ದೊಂದು ಶಕ್ತಿ ಇಲ್ಲದೇ ಹೋಗಿದ್ದಿದ್ದರೆ ಖಂಡಿತವಾಗಿಯೂ ಈ ನಾಡಿನ ಮೂಲೆ ಮೂಲೆಯಿಂದ ಪ್ರತಿಭಾನ್ವಿತರು ಮೇಲೆದ್ದು ನಿಲ್ಲಲು ಸಾಧ್ಯವಾಗುತ್ತಿರಲಿಲ್ಲ. ಅದಕ್ಕೆ ತಕ್ಕುದಾಗಿ ಕಡಲ ತೀರದ ಊರಾದ ಕುಂದಪುರದಿಂದ ಈಗಾಗಲೇ ಸಾಕಷ್ಟು ಮಂದಿ ಸಿನಿಮಾ ರಂಗಕ್ಕೆ ಬಂದಿದ್ದಾರೆ. ಮಹತ್ತರವಾದ ಕೊಡುಗೆಗಳನ್ನೂ ಕೊಟ್ಟಿದ್ದಾರೆ. ಆ ಸಾಲಿನಲ್ಲಿ ಸೇರ್ಪಡೆಯಾಗೋ ಭರವಸೆ ಮೂಡಿಸಿರುವವರು ಅಭಿಷೇಕ್ ಶೆಟ್ಟಿ. ಈಗಾಗಲೇ ನಮ್ ಗಣಿ ಬಿಕಾಂ ಪಾಸ್ ಮತ್ತು ಗಜಾನನ ಆಂಡ್ ಗ್ಯಾಂಗ್ ಚಿತ್ರಗಳ ಮೂಲಕ ನಿರ್ದೇಶಕನಾಗಿ, ನಾಯಕ ನಟನಾಗಿ ಛಾಪು ಮೂಡಿಸಿರುವ ಅಭಿಷೇಕ್ ಇದೀಗ ಮತ್ತೊಂದು ಮಹಾ ಕನಸಿನ ಕಿರುಬೆರಳು ಹಿಡಿದು ಹೊರಟಿದ್ದಾರೆ. ಮೂಲ ಕುಂದಾಪುರವಾದರೂ ಅಭಿಷೇಕ್ ಬೆಳೆದಿದ್ದು, ಓದಿದ್ದೆಲ್ಲವೂ ಬೆಂಗಳೂರಿನಲ್ಲಿಯೇ. ಆದರೆ ಊರ ಕಡೆಯ ಭಾಷೆ, ಭಾವನೆಗಳನ್ನು ಮನಸಲ್ಲಿ ಕಾಪಿಟ್ಟುಕೊಂಡು ಬಂದಿದ್ದ ಅವರಿಗೆ ಆರಂಭದಿಂದಲೂ ಸಿನಿಮಾ ಸೆಳೆತವಿತ್ತು. ಶಾಲಾ ಕಾಲೇಜು ದಿನಗಳಲ್ಲಿ ಸಹಜವಾಗಿಯೇ ಸಿನಿಮಾ ಹೀರೋ ಆಗಬೇಕೆಂಬ…