ಸಿಂಪ್ಲಿ ಫನ್ ಮೀಡಿಯಾ ನೆಟ್‌ವರ್ಕ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿರುವ ಚೇಜ಼್ ಚಿತ್ರ ಬಿಡುಗಡೆಗೆ ಒಂದು ದಿನವಷ್ಟೇ ಬಾಕಿ ಉಳಿದುಕೊಂಡಿದೆ. ವಿಲೋಕ್ ಶೆಟ್ಟಿ ನಿರ್ದೇಶನದ ಈ ಸಿನಿಮಾ ಮೊನ್ನೆ ಬಿಡುಗಡೆಯಾಗಿದ್ದ ಟ್ರೈಲರ್ ಮೂಲಕ ಸೃಷ್ಟಿಸಿರುವ ಕ್ರೇಜ್ ಸಾಮಾನ್ಯವಾದುದೇನಲ್ಲ. ಆರಂಭಿಕ ಹಂತದಿಂದಲೂ ಹೆಜ್ಜೆ ಹೆಜ್ಜೆಗೂ ಟಾಕ್ ಕ್ರಿಯೇಟ್ ಮಾಡುತ್ತಾ ಸಾಗಿ ಬಂದಿದ್ದ ಈ ಸಿನಿಮಾ ಪ್ರತಿಯೊಂದು ವಿಚಾರದಲ್ಲಿಯೂ ವಿಶೇಷತೆಗಳನ್ನೇ ಒಡಲಲ್ಲಿಟ್ಟುಕೊಂಡಿದೆ. ಅದರಲ್ಲಿಯೂ ವಿಲೋಕ್ ಶೆಟ್ಟಿ ತಮ್ಮ ಕನಸಿಗೆ ತಕ್ಕುದಾಗಿಯೇ ಅತ್ಯಂತ ಶ್ರದ್ಧೆಯಿಂದ ಇದರ ಹಾಡುಗಳು ಮೂಡಿ ಬರುವಂತೆ ನೋಡಿಕೊಂಡಿದ್ದಾರೆ. ಈ ಕಾರಣದಿಂದಲೇ ಚೇಸ್‌ನದ್ದು ಇತ್ತೀಚಿನ ದಿನಮಾನದ ಅತ್ಯುತ್ತಮ ಆಲ್ಬಂ ಅಂತ ಹೆಸರಾಗಿದೆ. ಈ ಚಿತ್ರದೊಂದಿಗೆ ಮಾಲಿವುಡ್‌ನ ಖ್ಯಾತ ಗಾಯಕ ಮಖ್ಬೂಲ್ ಮನ್ಸೂರ್ ಮೊಹಮದ್ ಕನ್ನಡ ಚಿತ್ರಪ್ರೇಮಿಗಳಿಗೆ, ಸಂಗೀತಾಸಕ್ತರಿಗೆ ಪರಿಚಯವಾಗಿದ್ದಾರೆ. ಕೇರಳದ ಪ್ರಸಿದ್ಧ ಸಂಗೀತ ನಿರ್ದೇಶಕ ಗೋಪಿ ಸುಂದರ್ ಅವರೊಂಗಿಗೆ ವರ್ಷಾಂತರಗಳ ಕಾಲದಿಂದ ಕಾರ್ಯ ನಿರ್ವಹಿಸಿ ಪಳಗಿಕೊಂಡಿರುವವರು ಮನ್ಸೂರ್. ದೇಶ ವಿದೇಶಗಳಲ್ಲಿಯೂ ಮೋಹಕ ಕಂಠಸಿರಿಯಿಂದ ಪ್ರಸಿದ್ಧಿ ಪಡೆದಿರುವ ಅವರು ಮಲೆಯಾಳದ ಎನ್ನು ನಿಂಟೆ ಮೊಯಿದಿನ್ ಚಿತ್ರದ ಮುಕ್ಕತ್ತಿಪೆನ್ನೆ…
Author: Santhosh Bagilagadde
ಮಂಗಳೂರು ಮೂಲದ ಹುಡುಗಿಯರು ಈಗಾಗಲೇ ನಾನಾ ಭಾಷೆಗಳಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಶಿಲ್ಪಾ ಶೆಟ್ಟಿ, ಐಶ್ವರ್ಯಾ ರೈ ಮತ್ತು ಇತ್ತೀಚಿನ ತಲೆಮಾರಿನ ಪೂಜಾ ಹೆಗ್ಡೆಯ ತನಕ ಆ ಪಟ್ಟಿ ಮುಂದುವರೆಯುತ್ತದೆ. ಆ ಸಾಲಿಗೆ ಬಹು ಹಿಂದೆಯೇ ಸೇರ್ಪಡೆಯಾಗಿರೋ ಹೊಸಾ ಹುಡುಗಿ ಕೃತಿ ಶೆಟ್ಟಿ. ಕೆಲವೊಮ್ಮೆ ಕೆಲ ನಟಿಯರು ಅದೇನೇ ಸರ್ಕಸ್ಸು ನಡೆಸಿದರೂ ಯಾವುದೇ ಭಾಷೆಗಳಲ್ಲಿಯೂ ಬರಖತ್ತಾಗೋದಿಲ್ಲ. ಮತ್ತೆ ಕೆಲ ನಟಿಯರಿಗೆ ಲಕ್ಕೆಂಬುದು ಮೊದಲ ಹೆಜ್ಜೆಯಿಂದಲೇ ಬಲವಾಗಿ ಕುದುರಿಕೊಳ್ಳುತ್ತೆ. ಅದಕ್ಕೆ ತಕ್ಕುದಾದ ಪ್ರತಿಭೆ ಇದ್ದರಂತೂ ಯಶಸ್ಸಿನ ನಾಗಾಲೋಟವನ್ನು ಯಾರಿಂದಲೂ ಕಟ್ಟಿ ಹಾಕಲು ಸಾಧ್ಯವಾಗುವುದಿಲ್ಲ. ಆ ಸಾಲಿಗೆ ಸೇರಿಕೊಳ್ಳುವಾಕೆ ಕೃತಿ ಶೆಟ್ಟಿ. ಈಗಾಗಲೇ ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ದೊಡ್ಡ ಹೆಸರು ಮಾಡಿರುವ ಕೃತಿ, ಇದೀಗ ಸೂರ್ಯನಿಗೆ ಜೋಡಿಯಾಗಿ ತಮಿಳು ಚಿತ್ರರಂಗಕ್ಕೂ ಪಾದಾರ್ಪಣೆ ಮಾಡುತ್ತಿದ್ದಾಳೆ. ಸೂರ್ಯನ ಹೊಸಾ ಚಿತ್ರದ ಬಗ್ಗೆ ತಮಿಳು ಚಿತ್ರ ಪ್ರೇಮಿಗಳ ನಡುವೆ ದೊಡ್ಡ ಮಟ್ಟದಲ್ಲಿ ಚರ್ಚೆಗಳು ನಡೆದಿದ್ದವು. ಆ ಚಿತ್ರವನ್ನು ಸೂರ್ಯ ೪೧ ಎಂದೇ ಈವರೆಗೂ ಗುರುತಿಸಲಾಗುತ್ತಿತ್ತು. ಕಡೆಗೂ ಈಗ…
ವಿಲೋಕ್ ಶೆಟ್ಟಿ ನಿರ್ದೇಶನದ ಚೇಸ್ ಚಿತ್ರ ಈ ವಾರವೇ ಬಿಡುಗಡೆಗೊಳ್ಳಲಿದೆ. ಕೊರೋನಾ ವೈರಸ್ಸಿನ ಘಾತುಕ ವಾತಾವರಣವನ್ನೆಲ್ಲ ದಾಟಿಕೊಂಡು ಬಂದಿದ್ದ ಚೇಸ್, ಅಂಥಾ ವಿಷಮ ಸನ್ನಿವೇಶದಲ್ಲಿಯೂ ಒಂದಲ್ಲೊಂದು ರೀತಿಯಲ್ಲಿ ಸುದ್ದಿ ಮಾಡಿಕೊಂಡೇ ಸಾಗಿ ಬಂದಿತ್ತು. ಇಂಥಾ ಪರಿಸ್ಥಿತಿಯಲ್ಲಿ ಒಂದಷ್ಟು ತಡವಾದಾಗ, ಸಿನಿಮಾ ಪ್ರೇಕ್ಷಕರ ಸ್ಮೃತಿಯಿಂದ ಮರೆಯಾಗದಂತೆ ನೋಡಿಕೊಳ್ಳೋದೇ ಒಂದು ಚಾಲೆಂಜ್. ಅದನ್ನು ವಿಲೋಕ್ ಶೆಟ್ಟಿ ಸಾರಥ್ಯದಲ್ಲಿ ಚಿತ್ರತಂಡ ಸಮರ್ಥವಾಗಿ ಎದುರಿಸಿದೆ. ತಡವಾದಷ್ಟೂ ಚೇಸ್ ಬಗೆಗಿನ ಕುತೂಹಲದ ಮೀಟರ್ ಏರುಗತಿ ಕಾಣುತ್ತಲೇ ಸಾಗುತ್ತಿತ್ತು. ಇದೀಗ ಕಡೇ ಕ್ಷಣದಲ್ಲಿ ಕುತೂಹಲದ ಕಿಚ್ಚು ಹಚ್ಚುವಂಥಾ ಜಬರ್ದಸ್ತ್ ಟ್ರೈಲರ್ ಲಾಂಚ್ ಆಗಿದೆ! ಒಂದಿಡೀ ಚಿತ್ರದ ಸಾರವನ್ನು ಕಥೆಯ ಆಂತರ್ಯ ಬಿಟ್ಟುಕೊಡದೆ, ಕುತೂಹಲವನ್ನಷ್ಟೇ ತೀವ್ರವಾಗಿಸುವಂತೆ ಕಟ್ಟಿ ಕೊಡೋದು ಸಿನಿಮಾ ತಂಡಗಳ ಪಾಲಿಗೆ ಸವಾಲಿನ ಸಂಗತಿ. ಇದುವರೆಗೂ ಟೀಸರ್ ಮುಂತಾದವುಗಳ ಮೂಲಕ ವಿಲೋಕ್ ಶೆಟ್ಟಿ ಅಂಥಾದ್ದೊಂದು ಜಾಣ್ಮೆ ತೋರಿಸಿದ್ದಾರೆ. ಈಗ ಟ್ರೈಲರ್ ವಿಚಾರದಲ್ಲಿಯೂ ಅದುವೇ ಮುಂದುವರೆದಿದೆ. ಒಂದು ಮರ್ಡರ್, ಅದರ ಸುತ್ತ ಹೆಪ್ಪುಗಟ್ಟಿಕೊಳ್ಳುವ ವಿದ್ಯಮಾನಗಳು, ಆ ಬಿಂದುವಿನಿಂದ ಚಿಮ್ಮುವಂಥಾ ಒಂದಷ್ಟು ಪಾತ್ರಗಳು……
ವಿಲೋಕ್ ಶೆಟ್ಟಿ ನಿರ್ದೇಶನದ ಚೇಜ಼್ ಚಿತ್ರ ಈ ವಾರ ಬಿಡುಗಡೆಗೊಳ್ಳಲಿದೆ. ವರ್ಷಾಂತರಗಳ ಕಾಲ ಒಂದಿಡೀ ತಂಡ ಬಲು ಆಸ್ಥೆಯಿಂದ ರೂಪಿಸಿರುವ ಈ ಚಿತ್ರ ಪ್ರತೀ ಕೆಲಸ ಕಾರ್ಯಗಳನ್ನೂ ಮೈಲಿಗಲ್ಲಾಗುವಂತೆ ಮಾಡುತ್ತಾ ಟೀಸರ್ ಮೂಲಕವೇ ಅಗಾಧ ಪ್ರಮಾಣದಲ್ಲಿ ಕ್ರೇಜ್ ಹುಟ್ಟು ಹಾಕಿದೆ. ಪ್ರಚಾರದ ಪಟ್ಟುಗಳಾಚೆಗೆ ತನ್ನ ಹೂರಣ, ಗಟ್ಟಿತನದಿಂದಲೇ ಪ್ರೇಕ್ಷಕರನ್ನು ಆಕರ್ಷಿಸಿಕೊಂಡಿರೋ ಈ ಸಿನಿಮಾದಲ್ಲಿ ಚಿತ್ರವಿಚಿತ್ರವಾದ ಪಾತ್ರಗಳಿವೆ. ಅವೆಲ್ಲವುಗಳಿಗೆ ಪ್ರತಿಭಾವಂತ ಕಲಾವಿದರೇ ಜೀವ ತುಂಬಿದ್ದಾರೆ. ಚೇಜ಼್ ಎಂಬ ದೊಡ್ಡ ಕ್ಯಾನ್ವಾಸಿನ ಸಿನಿಮಾದಲ್ಲಿ ಪ್ರತಿಯೊಬ್ಬರೂ ನೆನಪಿಟ್ಟುಕೊಳ್ಳುವಂಥಾದ್ದೊಂದು ಪಾತ್ರ ನಿರ್ವಹಿಸಿರುವವರು ಅರ್ಜುನ್ ಯೋಗಿ. ಈ ಹಿಂದೆ ಕಿರುತೆರೆಯಲ್ಲಿ ಒಂದಷ್ಟು ಖ್ಯಾತಿ ಹೊಂದಿದ್ದ ಅಕ್ಕ ಧಾರಾವಾಹಿಯ ಅರ್ಜುನ್ ಎಂಬ ಪಾತ್ರದ ಮೂಲಕವೇ ಪ್ರಸಿದ್ಧಿ ಪಡೆದುಕೊಂಡಿದ್ದ ಯೋಗೀಶ್ ತನ್ನ ಮೂಲ ನಾಮಧೇಯವನ್ನು ಮೀರಿ ಆ ಪಾತ್ರವನ್ನೇ ಐಡೆಂಟಿಟಿ ಆಗಿಸಿಕೊಂಡಿರೋದೊಂದು ಸೋಜಿಗ! ತುಮಕೂರಿನ ಅಳಾಲಸಂದ್ರದವರಾದ ಅರ್ಜುನ್ ಯೋಗಿ ಪಾಲಿಗೆ ಸಿನಿಮಾ ಎಂಬುದು ಶಾಲಾ ಕಾಲೇಜು ದಿನಗಳಲ್ಲಿಯೇ ಮೈ ಮನಸುಗಳನ್ನು ಆವರಿಸಿಕೊಂಡಿದ್ದ ಮಹಾ ಕನಸು. ಅದರ ಬೆಂಬತ್ತಿ ರಂಗಭೂಮಿಯ ಮೂಲಕ ತನ್ನ…
ಹಿಂದೂ, ಮುಸಲ್ಮಾನ, ಕ್ರೈಸ್ತ ಎಂಬೆಲ್ಲ ದರ್ಮದ ಪರಿಧಿಯಾಚೆಗೆ ಬೆಸೆದುಕೊಂಡಿರುವ ನೆಲ ನಮ್ಮದು. ಬಹುತ್ವ ಮತ್ತು ಅದನ್ನು ಆತ್ಮದಂತೆ ಹಬ್ಬಿಕೊಂಡಿರುವ ಭ್ರಾತೃತ್ವ ಈ ಮಣ್ಣಿನ ಗುಣ. ಒಂದು ಧರ್ಮದ ಹಬ್ಬವಾದಾಗ ಬೇರೆ ಧರ್ಮಿಯರೂ ಅದರಲ್ಲಿ ಪಾಲ್ಗೊಳ್ಳುವುದು, ಸಂಭ್ರಮಿಸೋದರಲ್ಲಿಯೇ ಈ ದೇಶದ ಐಕ್ಯತೆ ಇದೆ. ಆದರೆ ಎಲ್ಲ ಧರ್ಮಗಳಲ್ಲಿಯೂ ಪಿತಗುಡುತ್ತಿರುವ ಮತೀಯವಾದಿ ಹುಳುಗಳು ಈ ಈ ಒಗ್ಗಟ್ಟನ್ನು ಒಡೆಯೋ ಕೃತ್ಯಗಳಲ್ಲಿ ತಲ್ಲೀನರಾಗಿದ್ದಾರೆ. ಅದೆಲ್ಲದಕ್ಕಿರುವ ಏಕೈಕ ಕಾರಣ ರಾಜಕೀಯ. ಮತೀಯ ಸಂಘರ್ಷಗಳನ್ನೇ ಓಟಾಗಿ ಪರಿವರ್ತಿಸಿಕೊಳ್ಳುವ ವಿಕೃತ ಸೈತಾನರು ಮನಸು ಮನಸುಗಳ ನಡುವೆ ಬೆಂಕಿ ಹಚ್ಚುತ್ತಿದ್ದಾರೆ. ಇಂಥಾ ಒಳ ಮರ್ಮ ಅರಿಯದೆ, ಮೈಲೇಜು ಸಿಕ್ಕರೆ ಸಾಕೆಂಬ ಅತೃಪ್ತ ಆತ್ಮಗಳೊಂದಷ್ಟು ಈ ಬೆಂಕಿಯ ಸುತ್ತ ಕೊಳ್ಳಿ ದೆವ್ವಗಳಂತೆ ಲಾಗಾ ಹಾಕುತ್ತಿವೆ. ಅಂಥಾ ಕೊಳ್ಳಿದೆವ್ವಗಳ ಸಾಲಿಗೆ ಸಾರಾಸಗಟಾಗಿ ಸೇರಿಕೊಳ್ಳುವಾತ ಬಿಗ್‌ಬಾಸ್ ಖ್ಯಾತಿಯ ಅವಿವೇಕಿ ಪ್ರಥಮ್! ಮೊನ್ನೆ ದಿನ ಹತ್ತನೇ ತಾರೀಕಿನಂದು ಮುಸ್ಲಿಂ ಬಾಂಧವರ ಬಕ್ರೀದ್ ಹಬ್ಬವಿತ್ತು. ಈ ಸಂದರ್ಭದಲ್ಲಿ ಮುಸ್ಲಿಮೇತರರನ್ನೂ ಮನೆಗೆ ಕರೆದು ಔತಣ ಕೊಡುವ ಸಂಪ್ರದಾಯ ಇಲ್ಲಿ ಲಾಗಾಯ್ತಿನಿಂದಲೂ…
ವಿಲೋಕ್ ಶೆಟ್ಟಿ ನಿರ್ದೇಶನದ ಚೇಸ್ ಚಿತ್ರ ಇದೇ ೧೫ರಂದು ಬಿಡುಗಡೆಗೊಳ್ಳಲಿದೆ. ಯುಎಫ್‌ಒ ಮೂಲಕ ದೇಶಾದ್ಯಂತ ತಲುಪಿಕೊಳ್ಳಲಿದೆ. ಯಾವುದೇ ಒಂದು ಚಿತ್ರ ಎರಡ್ಮೂರು ವರ್ಷಗಳ ಸುದೀರ್ಘಾವಧಿಯಲ್ಲಿ ಕುತೂಹಲವನ್ನು ಕಾಪಿಟ್ಟುಕೊಂಡು ಸಾಗೋದು ನಿಜಕ್ಕೂ ಸಾಹಸ. ಅದಕ್ಕೆ ಗಟ್ಟಿಯಾದ ಕಂಟೆಂಟು ಮತ್ತು ಹಂತ ಹಂತವಾಗಿ ಅದನ್ನು ಪ್ರೇಕ್ಷಕರಿಗೆ ದಾಟಿಸುವ ಜಾಣ್ಮೆ ಇರಬೇಕಾಗುತ್ತದೆ. ನಿರ್ದೇಶಕ ವಿಲೋಕ್ ಶೆಟ್ಟಿಗೆ ಆ ಕಲೆ ಸಿದ್ಧಿಸಿದೆ. ಅದಿಲ್ಲದೇ ಹೋಗಿದ್ದರೆ, ಕೊರೋನಾ ಕರಿನೆರಳಿನಲ್ಲಿಯೂ ನಿರೀಕ್ಷೆಯನ್ನು ನಿಗಿನಿಗಿಸುವಂತೆ ಕಾಯ್ದಿಟ್ಟುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಈ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವೀಗ ತನ್ನೊಳಗಿನ ಕಥೆ, ತಾರಾಗಣ ಸೇರಿದಂತೆ ನಾನಾ ದಿಕ್ಕಿನಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಅದರಲ್ಲಿಯೂ ನಾಯಕಿಯಾಗಿ ನಟಿಸಿರೋ ರಾಧಿಕಾ ನಾರಾಯಣ್ ಪಾತ್ರದ ಸುತ್ತಾ ಹತ್ತಾರು ಪ್ರಶ್ನೆಗಳು ಹರಳುಗಟ್ಟಿಕೊಂಡಿವೆ. ರಂಗಿತರಂಗ ಚಿತ್ರದ ಗೆಲುವಿನ ಒಡ್ಡೋಲಗದಲ್ಲಿ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರುವವರು ರಾಧಿಕಾ ನಾರಾಯಣ್. ಓರ್ವ ಯಶಸ್ವೀ ನಟಿ ಆಯ್ಕೆಯಲ್ಲಿ ಎಂಥಾ ಗುಣಮಟ್ಟ ಕಾಯ್ದುಕೊಳ್ಳಬೇಕಾಗುತ್ತದೋ ಅದೆಲ್ಲವನ್ನೂ ಮೈಗೂಡಿಸಿಕೊಂಡು ರಾಧಿಕಾ ಮುಂದುವರೆಯುತ್ತಿದ್ದಾರೆ. ಸಂಖ್ಯೆಗಳಿಗಿಂತಲೂ ಗುಣಮಟ್ಟ ಮುಖ್ಯ ಎಂಬ ಧ್ಯೇಯ ರೂಢಿಸಿಕೊಂಡಿರುವ ಅವರು, ಅದರ ನೆರಳಿನಲ್ಲಿಯೇ…
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅರವತ್ತನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಶಿವಣ್ಣನಿಗೆ ಅರವತ್ತಾಯ್ತೆಂಬುದೇ ಕನ್ನಡಿಗರೆಲ್ಲರಿಗೂ ಅಚ್ಚರಿ. ಯಾಕೆಂದರೆ, ಅವರ ಹಾವಭಾವದಲ್ಲಿ, ದೈಹಿಕವಾಗಿ ಸೇರಿದಂತೆ ಯಾವುದರಲ್ಲಿಯೂ ಆದ ವಯಸ್ಸಿನ ಸುಳಿವು ಸಿಕ್ಕುವುದೇ ಇಲ್ಲ. ಈ ಕ್ಷಣಕ್ಕೂ ಯುವಕರನ್ನೇ ನಾಚಿಸುವಂತೆ ಆಕ್ಟಿವ್ ಆಗಿರುವ ಶಿವಣ್ಣನ ಎನರ್ಜಿ ಎಲ್ಲರಿಗೂ ಸ್ಫೂರ್ತಿ. ಯಾವುದೇ ಸ್ಟಂಟ್ ಇರಲಿ, ಅದೆಂಥಾದ್ದೇ ಸ್ಟೆಪ್ಸ್ ಇರಲಿ; ಶಿವಣ್ಣ ಯಾವುದಕ್ಕೂ ಅಂಜುವವರಲ್ಲ. ಒಂದು ಕಡೆಯಿಂದ ಲೆಕ್ಕ ಹಾಕುತ್ತಾ ಬಂದರೆ ಅವರು ಏನಿಲ್ಲವೆಂದರೂ ಇನ್ನೊಂದು ಮೂರ್ನಾಲಕ್ಕು ವರ್ಷಗಳಿಗಾಗುವಷ್ಟು ಬ್ಯುಸಿಯಾಗಿದ್ದಾರೆ. ಅದರ ನಡುವೆಯೂ ಈಗ ಶಿವಣ್ಣ ಮತ್ತೊಂದು ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಅವರ ಹುಟ್ಟುಹಬ್ಬದಂದೇ ಈ ಹೊಸಾ ಚಿತ್ರ ಘೋಷಣೆಯಾಗಿ, ಅದರ ಬಗೆಗಿನ ಒಂದಷ್ಟು ವಿವರಗಳು ಜಾಹೀರಾಗಲಿವೆ. ಶಿವರಾಜ್ ಕುಮಾರ್ ಯಂಗ್ ಆಂಡ್ ಎನರ್ಜಿಟಿಕ್ ಆಗಿರುವುದು ಮಾತ್ರವಲ್ಲ; ಸದಾ ಕಾಲವೂ ಯುವ ಪ್ರತಿಭೆಗಳಿಗೆ ಪ್ರೋತ್ಸಾಹಿಸುವ ಗುಣವನ್ನೂ ಹೊಂದಿದ್ದಾರೆ. ಕಥೆ ಚೆಂದಗಿದ್ದರೆ, ಹೊಸತನದ ಕನಸು ಹೊಂದಿದ್ದರೆ ಅವರು ಹೊಸಬರ ನಿರ್ದೇಶನಕ್ಕೂ ಸೈ ಅಂದು ಬಿಡುತ್ತಾರೆ. ಅಂಥಾ ಮನಸ್ಥಿತಿ ಇಲ್ಲದೇ ಹೋಗಿದ್ದರೆ ಶಿವಣ್ಣ…
ಜಾತಿ, ಧರ್ಮ ಅಂತೆಲ್ಲ ದೊಂದಿ ಹಿಡಿದು ಹೊರಡೋರನ್ನು ಕಂಡು ಪ್ರಜ್ಞಾವಂತರೆಲ್ಲ ನಖಶಿಖಾಂತ ಉರಿದು ಬೀಳ್ತಾರಲ್ಲಾ? ಅದೇನು ಸುಮ್ಮನೆ ಶೋಕಿಗೆ ಹುಟ್ಟಿಕೊಳ್ಳೋ ಆಕ್ರೋಶವಲ್ಲ. ಅದರ ಹಿಂದಿರೋದು ಅಪ್ಪಟ ಮನುಷ್ಯತ್ವ. ಫ್ಯಾಸಿಸ್ಟ್ ಶಕ್ತಿಗಳ ಕೈಲಿರುವ ದೊಂದಿ ಮುಂದೊಂದು ದಿನ ಮನುಷ್ಯತ್ವದ ಬುಡಕ್ಕೇ ಬೆಂಕಿಯಿಡುತ್ತೆಂಬ ಸತ್ಯದಿಂದ ಹುಟ್ಟಿದ ಆಕ್ರೋಶವದು. ಧರ್ಮದ ಅಮಲು ಅದ್ಯಾವ ಮಟ್ಟಕ್ಕೆ ಮನುಷ್ಯನನ್ನು ಕ್ರೂರಿಯಾಗಿಸುತ್ತೆ, ಅದು ಕೊನೆಗೊಮ್ಮೆ ಯಾವ ಹಂತ ತಲುಪಿಕೊಳ್ಳುತ್ತೆ ಅನ್ನೋದಕ್ಕೆ ಅಫ್ಘಾನಿಸ್ತಾನಕ್ಕಿಂತಲೂ ಬೇರೆ ಉದಾಹರಣೆ ಬೇಕಿಲ್ಲ. ಹತ್ತಾರು ವರ್ಷಗಳಿಂದ ಅಬ್ಬರಿಸುತ್ತಾ ಬಂದ ತಾಲಿಬಾನಿ ಉಗ್ರರು ಇದೀಗ ಸರ್ಕಾರವನ್ನೇ ತಮ್ಮದಾಗಿಸಿಕೊಂಡಿದ್ದಾರೆ. ಬೆನ್ನಲ್ಲಿ ಬಂದೂಕು ತಗುಲಿಸಿಕೊಂಡು ನಂಬಿಕೆ ಗಿಟ್ಟಿಸಿಕೊಳ್ಳೋ ಬಣ್ಣದ ಮಾತಾಡುತ್ತಿದ್ದಾರೆ. ಆದರೆ ಈ ತಾಲಿಬಾನಿಗಳ ಆಡಳಿತ ಎಂಥಾದ್ದಿರುತ್ತದೆಂಬ ಅಂದಾಜು ಇದೀಗ ಸ್ಪಷ್ಟವಾಗಿಯೇ ಸಿಕ್ಕಿಬಿಟ್ಟಿದೆ. ತಾಲಿಬಾನ್ ಉಗ್ರರು ಇದುವರೆಗೆ ನಡೆಸಿರೋ ಅನಾಹುತಗಳು ಒಂದೆರಡಲ್ಲ. ಜೀವ ತೆಗೆಯೋದೆಂದ್ರೆ ಆ ಪಾಪಿಗಳಿಗೆ ಸಲೀಸು. ಪುಟ್ಟ ಕಂದಮ್ಮಗಳೆಂಬ ಕರುಣೆಯೂ ಇಲ್ಲದೆ ಅವರು ನಡೆಸಿರೋ ಕ್ರೌರ್ಯವಿದೆಯಲ್ಲಾ? ಅದನ್ನು ಇಸ್ಲಾಂ ಇರಲಿ, ಜಗತ್ತಿನ ಯಾವ ಧರ್ಮಗಳೂ ಕ್ಷಮಿಸಲು ಸಾಧ್ಯವಿಲ್ಲ. ಕ್ಷಮಿಸಿದರೆ…
ವೇಶ್ಯಾ ವೃತ್ತಿಯಲ್ಲಿರುವವರ ಹಿಂದಿದೆ ಕರಾಳ ಕಥೆ, ಕಣ್ಣೀರು! ಬೆಂಗಳೂರಿನಂಥಾ ಮಹಾ ನಗರಗಳಲ್ಲಿ ಬೇರೂರಿಕೊಂಡಿರೋ ದಂಧೆಗಳು ಒಂದೆರಡಲ್ಲ. ಅಲ್ಲಿ ದುಡಿದು ಬದುಕುವವರಿಗೆ ಅಗಾಧ ಅವಕಾಶಗಳಿವೆ. ಬೇರೆಯವರನ್ನ ಹುರಿದು ಮುಕ್ಕುವ ರಕ್ಕಸರಿಗೂ ಕೂಡಾ ಅಂಥಾದ್ದೇ ಅವಕಾಶಗಳಿವೆ. ನೀವೇನಾದರೂ ಬೆಂಗಳೂರಿನಂಥಾ ನಿವಾಸಿಗಳಾಗಿದ್ದರೆ, ಅಪರೂಪಕ್ಕಾದರೂ ಅಲ್ಲಿಗೆ ಹೋಗಿ ಬಂದ ಅನುಭವವಿದ್ದರೆ ಕಂಡ ಕಂಡಲ್ಲಿ ಸನ್ನೆಗಳ ಮೂಲಕ ಸೆಳೆಯೋ ಬೆಲೆವೆಣ್ಣುಗಳನ್ನು ಗಮನಿಸಿರುತ್ತೀರಿ. ಸಿಂಗಾರಗೊಂಡು, ಉದ್ರೇಕಿಸುವಂಥಾ ಮಾದಕ ನೋಟ ಬೀರುತ್ತಾ ಗಿರಾಕಿಗಳಿಗಾಗಿ ಕಾದು ಕೂತ ಈ ಜೀವಗಳಿಗೆ ಸಭ್ಯ ಸಮಾಜ ಸೂಳೆಯರೆಂಬ ಪಟ್ಟ ಕೊಟ್ಟಿದೆ. ಸಭ್ಯ ಭಾಷೆಯಲ್ಲದಕ್ಕೆ ವೇಶ್ಯಾವಾಟಿಕೆ ಅನ್ನಲಾಗುತ್ತೆ. ವಾಸ್ತವವೆಂದರೆ, ಮೇಲುನೋಟಕ್ಕೆ ಆ ಜೀವಗಳ ಬಗ್ಗೆ ಅಸಹ್ಯ ಹೊಂದಿರುವವರೇ ರಾತ್ರಿ ಹೊತ್ತಲ್ಲಿ ಗಿರಾಕಿಗಳಾಗೋದೂ ಇದೆ. ಆದರೆ, ಹಾಗೆ ಬೀದಿಯಲ್ಲಿ ಕೈಚಾಚಿ ನಿಂತವರ ಹಿಂದೆ ಅದೆಂಥಾ ಕರುಣಾಜನಕ ಕಥೆಗಳಿರಬಹುದು, ಅವರ ನೋವೆಂಥಾದ್ದು, ಯಾರದ್ದೋ ಮನೆಯ ಕೂಸಾಗಿ ಹುಟ್ಟಿದ್ದ ಆ ಹೆಣ್ಣುಮಕ್ಕಳನ್ನು ಈ ರೀತಿ ಬೀದಿಗಿಳಿಸಿದ ದುಷ್ಟ ವ್ಯವಸ್ಥೆ ಯಾವುದೆಂಬುದರ ಬಗ್ಗೆ ಬಹುತೇಕರು ಯೋಚಿಸೋ ಗೋಜಿಗೆ ಹೋಗುವುದಿಲ್ಲ. ವೇಶ್ಯಾವಾಟಿಕೆ ಅಂದಾಕ್ಷಣ ಕಾಮದ…
ಬಾಲಿವುಡ್ ನಟಿ ಕಂಗನಾ ರಾಣಾವತ್ ಮತ್ತೆ ಸುದ್ದಿಯಲ್ಲಿದ್ದಾಳೆ. ಈಕೆ ಸುದ್ದಿ ಕೇಂದ್ರಕ್ಕೆ ಬಂದಳೆಂದರೆ ಯಾವುದೋ ವಿವಾದದ ಕಿಡಿ ಹೊತ್ತಿಯೇ ತೀರುತ್ತೆ… ಹೀಗಂತ ಜನಸಾಮಾನ್ಯರೂ ನಿರ್ಧರಿಸುವಷ್ಟರ ಮಟ್ಟಿಗೆ ಕಂಗನಾ ಇತ್ತೀಚಿನ ದಿನಗಳಲ್ಲಿ ಚಾಲ್ತಿಯಲ್ಲಿದ್ದಾಳೆ. ಆರಂಭದ ಕಾಲದಲ್ಲಿ ಈಕೆ ಒಂದಷ್ಟು ಚೆಂದದ ಸಿನಿಮಾಗಳಲ್ಲಿ, ಸವಾಲಿನ ಪಾತ್ರಗಳ ಮೂಲಕ ಸೈ ಅನ್ನಿಸಿಕೊಂಡಿದ್ದು ಹೌದು. ಆದರೆ ಇತ್ತೀಚಿನ ವರ್ಷಗಳಲ್ಲಿ ತನ್ನ ಸಾಮಾಜಿಕ, ರಾಜಕೀಯ ನಿಲುವುಗಳ ಕಾರಣದಿಂದಾಗಿಯೇ ಈಕೆ ಸುದ್ದಿ ಮಾಡುತ್ತಾ ಸಾಗಿದ್ದಳು. ಇಂಥಾ ಕಂಗನಾ ಇದೀಗ ಬಹು ಕಾಲದ ನಂತರ ಮತ್ತೆ ನಟಿಯಾಗಿ ಸದ್ದು ಮಾಡಿದ್ದಾಳೆ. ವಿಶೇಷ ಅಂದ್ರೆ ಅದಕ್ಕೂ ಕೂಡಾ ರಾಜಕೀಯದ ನಂಟು ಥಳುಕು ಹಾಕಿಕೊಂಡಿದೆ. ಕಂಗನಾ ರಾಣಾವತ್ ತಲೈವಿ ಎಂಬ ಸಿನಿಮಾ ಮೂಲಕ ವರ್ಷದಿಂದೀಚೆಗೆ ಸಿನಿಮಾ ಪ್ರೇಮಿಗಳನ್ನ ಸೆಳೆದಿದ್ದಳು. ಅದು ದಕ್ಷಿಣ ಭಾರತದ ಪ್ರಭಾವೀ ರಾಜಕೀಯ ನಾಯಕಿಯಾಗಿದ್ದ, ತಮಿಳುನಾಡು ರಾಜಕೀಯದಲ್ಲಿ ಸಿಎಂ ಆಗಿ ಮಿಂಚಿದ್ದ ಜಯಲಲಿತಾರ ಬದುಕಿನ ಕಥೆಯಾಧಾರಿತ ಚಿತ್ರ. ಖುದ್ದು ನಟಿಯಾಗಿ, ಆ ನಂತರ ರಾಜಕಾರಣುಇಯಾಗಿ ಬದಲಾಗಿದ್ದ ಜಯಲಲಿತಾರದ್ದು ನಿಜಕ್ಕೂ ರೋಚಕ ಕಥನ.…