ಆನ್‌ಲೈನ್ ಯುಗ ಶುರುವಾದಾಕ್ಷಣ ಇಡೀ ಬದುಕು ಬೆರಳ ಮೊನೆಗೆ ಬಂದು ಕುಣಿದಾಡಿದಂತೆಯೇ ಬಹುತೇಕರಿಗೆ ಭಾಸವಾಗಿತ್ತು. ಒಂದು ಕಾಲದಲ್ಲಿ ಗಂಟೆಗಟ್ಟಲೆ ಕಾದು, ಬ್ಯಾಂಕ್ ಸಿಬ್ಬಮದಿಯೊಂದಿಗೆ ಕಾದಾಡಿ ಸುಸ್ತಾದವರ ಪಾಲಿಗಂತೂ, ನೆಟ್ ಬ್ಯಾಂಕಿಂಗ್ ಅನ್ನೋದು ಸಾಕ್ಷಾತ್ತು ಭಗವಂತನೇ ಕರುಣಿಸಿದ ವರವೆಂಬಂತೆ ಕಂಡಿತ್ತು. ಯಾವಾಗ ಹೀಗೆ ಜನರ ಹಣಕಾಸಿನ ವ್ಯವಹಾರವೆಲ್ಲ ಆನ್‌ಲೈನಿಗೆ ಶಿಫ್ಟಾಯಿತೋ, ಆಗ ವಂಚಕರ ಹಿಂಡೊಂದು ಅಲ್ಲಿಗೇ ಬಂದು ಹೊಂಚಿ ಕೂತು ಬಿಟ್ಟಿದೆ. ಅದರ ಫಲವಾಗಿಯೇ ಈಗ ನಾವು ಕಷ್ಟಪಟ್ಟು ಕೂಡಿಟ್ಟುಕೊಂಡ ಕಾಸಿಗೆ ಕಂಟಕ ಬಂದೆರಗಿದೆ. ಅಕೌಂಟಿನಲ್ಲಿದ್ದ ಕಾಸು ಯಾವ ಮಾಯಕದಲ್ಲಿ ಬೇಕಾದರೂ ಮತ್ಯಾರದ್ದೋ ಅಕೌಂಟಿಗೆ ಎಗರಿಕೊಳ್ಳುವ ಆತಂಕದಲ್ಲಿಯೇ ಬಹುತೇಕರು ಬದುಕುವಂತಾಗಿಬಿಟ್ಟಿದೆ! ಮೇಲ್ಕಂಡ ವಿವರಗಳಿಗೆ ಪಕ್ಕಾ ಸಾಕ್ಷಿಯಂಥಾ ವಿದ್ಯಮಾನಗಳು ದೇಶಾದ್ಯಂತ ಮಾಮೂಲಿಯಾಗಿ ಬಿಟ್ಟಿದೆ. ಇದೀಗ ಅಂಥಾದ್ದೇ ಒಂದು ಘಟನೆ ಮುಂಬೈನಲ್ಲಿ ನಡೆದಿದೆ. ಇಲ್ಲಿನ ಕಾಪೆಂಟರ್ ಒಬ್ಬ ಕಷ್ಟಪಟ್ಟು ದುಡಿದು ಕೂಡಿಟ್ಟಿದ್ದ ಮೂರು ಲಕ್ಷಕ್ಕೆ ಆನ್‌ಲೈನ್ ಚೋರರು ಕನ್ನ ಹಾಕಿದ್ದಾರೆ. ಆರಂಭದಲ್ಲಿ ತನ್ನ ಅಕೌಂಟಿನಿಂದ ಒಂದು ಲಕ್ಷದಷ್ಟು ಹಣ ಮಾಯವಾಗಿದ್ದನ್ನು ಕಂಡು ಕಾಪೆಂಟರ್ ಕಂಗಾಲಾಗಿದ್ದು. ತದ…
Author: Santhosh Bagilagadde
ಇದೀಗ ಸಾಮಾಜಿಕ ಜಾಲತಾಣವೆಂಬ ಮಾಯೆಗೆ ಎಲ್ಲರೂ ಮರುಳಾಗಿದ್ದಾರೆ. ದಿನದ ಬಹುಪಾಲು ಸಮಯವನ್ನು ಸಾಮಾಜಿಕ ಜಾಲತಾಣದ ಸಾಹಚರ್ಯದಲ್ಲಿಯೇ ಕಳೆಯುವ ಗೀಳು ಬಹುತೇಕರಿಗೆ ಅಂಟಿಕೊಂಡಿದೆ. ಆರಂಭ ಕಾಲದಲ್ಲಿ ಒಂದಷ್ಟು ರೋಮಾಂಚಕ ಫೀಲ್ ಹುಟ್ಟಿಸಿದ್ದ ಸಾಮಾಜಿಕ ಜಾಲತಾಣಗಳಿಂದು ನಾನಾ ವಂಚನೆಗಳ ಅಡ್ಡೆಯಂತಾಗಿ ಹೋಗಿದೆ. ಇದುವರೆಗೆ ಹೊರ ಜಗತ್ತಿನಲ್ಲಿ ನಡೆಯುತ್ತಿದ್ದ ಕಾನೂನು ಬಾಹಿರ ದಂಧೆ, ವಿಕೃತಿಗಳೆಲ್ಲವೂ ಸಾಮಾಜಿಕ ಜಾಲತಾಣದಲ್ಲಿಂದು ಝಾಂಡಾ ಊರಿವೆ. ಇಂಥಾದ್ದರಿಂದಾಗಿ ಮಹಿಳೆಯರು, ಹೆಣ್ಣುಮಕ್ಕಳಿಗಂತೂ ಆನ್‌ಲೈನ್ ಕಂಟಕ ಬಹುವಾಗಿಯೇ ಕಾಡಲು ಶುರುವಿಟ್ಟಿದೆ. ಅದರ ಪರಿಣಾಮವೀಗ ಭಾರತದ ತುಂಬೆಲ್ಲ ದಟ್ಟವಾಗಿಯೇ ಕಾಣಿಸಿಕೊಳ್ಳಲು ಶುರುವಿಟ್ಟುಕೊಂಡಿದೆ. ಫೇಸ್ ಬುಕ್ ಎಂಬುದು ಎಲ್ಲರ ಪಾಲಿಗೂ ವರವಾಗಿ ಬಂದಿರುವಂಥಾ ಅಭಿವ್ಯಕ್ತಿ ಮಾಧ್ಯಮ. ಈ ಮೂಲಕದಿಂದಲೇ ಹೊರಜಗತ್ತಿಗೆ ತೆರೆದುಕೊಂಡ ಪ್ರತಿಭೆಗಳು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅಂಥವರಲ್ಲಿ ಮಹಿಳೆಯರೂ ಸೇರಿದ್ದಾರೆ. ಆದರೆ, ಫೇಸ್ ಬುಕ್ ಜಗತ್ತಿನಲ್ಲಿ ಮಹಿಳೆಯರಿಗೆ ಅಂಥಾ ರಕ್ಷಣೆಯೇನಿಲ್ಲ. ಇಂಥಾ ಸಾಮಾಜಿಕ ಜಾಲತಾಣಗಳಲ್ಲಿ ಬಹುತೇಕ ಮಹಿಳೆಯರು ಒಂದು ಕಾಲದಲ್ಲಿ ತಮ್ಮ ಫೋಟೋಗಳನ್ನು ಹಾಕಿಕೊಂಡು ಸಂಭ್ರಮಿಸುತ್ತಿದ್ದರು. ಆದರೀಗ ಅದಕ್ಕೂ ಭಯ ಪಡುವಂಥಾ ದುಃಸ್ಥಿತಿ ಎದುರಾಗಿದೆ. ಇಂಥಾ ಫೋಟೋಗಳನ್ನು…
ತೆಲುಗಿಗೆ ಹೋದರೂ ತಗ್ಗಲಿಲ್ಲ ಧಿಮಾಕು! ಒಂದೇ ಒಂದು ಸಿನಿಮಾ, ಸೀರಿಯಲ್ಲುಗಳಲ್ಲಿ ಮುಸುಡಿ ತೋರಿಸಿದಾಕ್ಷಣವೇ ಕೆಲ ನಟ ನಟಿಯರು ಸೀಮೆಗಿಲ್ಲದ ಸ್ಟಾರುಗಳಂತೆ ಮೆರೆದಾಡಿ ಬಿಡುತ್ತಾರೆ. ತಾವೇನೋ ಮಹಾನ್ ಸೆಲೆಬ್ರಿಟಿಗಳೆಂಬಂತೆ ಪೋಸು ಕೊಡುತ್ತಾರೆ. ನಂತರದಲ್ಲಿ ಯಾವ ಸೂಪರ್ ಸ್ಟಾರ್‌ಗಳಿಗೂ ಕಮ್ಮಿಯಿಲ್ಲದಂತೆ ದೌಲತ್ತು ಪ್ರದರ್ಶಿಸಲಾರಂಭಿಸುತ್ತಾರೆ. ಹೀಗೆ ಮೆರೆದ ಬಹಳಷ್ಟು ಮಂದಿ ಸಣ್ಣದೊಂದು ಕುರುಹೂ ಉಳಿಯದಂತೆ ಸೋತು ಸುಣ್ಣವಾಗಿ ಬಿಲ ಸೇರಿಕೊಂಡಿದ್ದಾರೆಂಬ ವಾಸ್ತವಿಕ ಇತಿಹಾಸವನ್ನು ಇಂಥಾ ತಿರ್ಕೆ ದೌಲತ್ತಿನ ಮಂದಿ ಮರೆತೇ ಬಿಡುತ್ತಾರೆ. ಇಂಥಾ ಮೆರೆದಾಟಕ್ಕೆ ಇತ್ತೀಚಿನ ಉದಾಹರಣೆಯಾಗಿ ನಿಲ್ಲುವಾತ ಲಕ್ಷ್ಮಿ ಬಾರಮ್ಮ ಸೀರಿಯಲ್ಲಿನ ಚಂದು ಖ್ಯಾತಿಯ ನಟ ಚಂದನ್! ಹೀರೋ ಆಗಲು ಬೇಕಾದಂಥಾ ಎಲ್ಲ ಗುಣ ಲಕ್ಷಣಗಳನ್ನು, ದೈಹಿಕ ಚಹರೆ ಮತ್ತು ಒಂದಷ್ಟು ಪ್ರತೀಬೆಯನ್ನು ಹೊಂದಿರುವಾತ ಚಂದನ್. ಲಕ್ಷ್ಮಿ ಬಾರಮ್ಮ ಸೀರಿಯಲ್ಲಿನ ಮೂಲಕ ಮನೆ ಮಾತಾಗಿದ್ದ ಈತ, ಆ ಬಳಿಕ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದನಾದರೂ ಅದ್ಯಾವುದೂ ಬರಖತ್ತಾಗಲಿಲ್ಲ. ಹೀರೋ ಆಗಿ ನೆಲೆನಿಲ್ಲಬೇಕಾದ ಈ ಹುಡುಗ ಹೀಗೇಕಾದ ಅಂತ ತಲಾಶು ನಡೆಸಿದರೆ ಆತನ ದುರಹಂಕಾರದ ವರ್ತನೆಗಳ ಹೊರತಾಗಿ…
ನಾವು ಪ್ರಾಕೃತಿಕವಾಗಿ ಕಣ್ಣಳತೆಯಲ್ಲಿ ಎದುರುಗೊಳ್ಳುವ ಅಚ್ಚರಿಗಳನ್ನು ಕಂಡು ಆಗಾಗ ತಬ್ಬಿಬ್ಬಾಗುತ್ತೇವೆ. ನಮ್ಮೊಳಗೂ ಒಂದು ಅಚ್ಚರಿ ತುಂಬಿಕೊಂಡು ರೋಮಾಂಚಿತರಾಗುತ್ತೇವೆ. ಆದರೆ ನಮ್ಮೆಲ್ಲರ ಕಣ್ಣಾಚೆಗಿರುವ ಅದ್ಭುತ ವಿಚಾರಗಳದ್ದೊಂದು ವಿಶಾಲ ಸಾಗರವೇ ಇದೆ. ಅದೇನೇ ಅಧ್ಯಯನಗಳು, ಸಂಶೋಧನೆಗಳಾದರೂ ನಮಗೆ ದಕ್ಕುವುದು ಅದರಲ್ಲೊಂದು ಹನಿ ಮಾತ್ರ. ಇದೀಗ ಜಾಗತಿಕ ಮಟ್ಟದಲ್ಲಿ ಕೆಲವಾರು ನಿಗೂಢ ಸ್ಥಳಗಳ ಬಗ್ಗೆ ಅನೇಕ ವಿಚಾರಗಳು ಜಾಹೀರಾಗಿವೆ. ಆದರೆ ಬಹುತೇಕವು ವಿಜ್ಞಾನದ ನಿಲುಕಿಗೂ ಸಿಗದೆ ಸತಾಯಿಸುತ್ತಿವೆ. ಇದೀಗ ಕೆಂಪು ಸಮುದ್ರದ ಗರ್ಭದಲ್ಲಿ ಪತ್ತೆಯಾಗಿರುವ ಡೆತ್ ಪೂಲ್ ಕೂಡಾ ಅಂಥಾ ನಿಗೂಢಗಳ ಸಾಲಿಗೆ ಹೊಸಾ ಸೇರ್ಪಡೆಯಂತಿದೆ. ಕೆಂಪು ಸಮುದ್ರವೆಂದರೇನೇ ಅಚ್ಚರಿಗಳ ಕೊಂಪೆ. ಅದರ ನಾನಾ ಬಗೆಗಳನ್ನು ಈಗಾಗಲೇ ಸಂಶೋಧನೆಗಳು ಮತ್ತು ಅನ್ವೇಷಣೆಗಳ ಮೂಲಕ ಜಾಹೀರುಗೊಳಿಸಲಾಗಿದೆ. ಮಿಯಾಮಿ ವಿಶ್ವವಿದ್ಯಾಲಯದ ಸ್ಯಾಮ್ ಪುರ್ಕಿಸ್ ಸಾರಥ್ಯದಲ್ಲಿ ಒಂದು ಸಮರ್ಥವಾದ ತಂಡ ಕೆಂಪು ಸಮುದ್ರದ ಆಳ ಪ್ರದೇಶದಲ್ಲಿನ ಈ ಕೊಳವನ್ನು ಪತ್ತೆಹಚ್ಚಿದೆ. ವಿದ್ಯುತ್ ಚಾಲಿತವಾದ ಪರಿಕರದ ಸಹಾಯದಿಂದ ಈ ಸಂಶೋಧನೆಯನ್ನು ನಡೆಸಲಾಗಿದೆ. ಇಂಥಾದ್ದೊಂದು ಅನ್ವೇಷಣೆ ನಡೆದದ್ದು ಕೆಂಪು ಸಮುದ್ರದ ೧೭೭೦ ಅಡಿ…
ಈ ಪ್ರಕೃತಿಯ ಒಡಲಿನಲ್ಲಿ, ನದಿ, ಸಮುದ್ರಗಳ ಗರ್ಭದಲ್ಲಿ ಅದೆಂತೆಂಥಾ ಅಚ್ಚರಿಗಳಿವೆಯೋ ಹೇಳಲು ಬರುವುದಿಲ್ಲ. ಈ ಬಗ್ಗೆ ಒಂದು ದಿಕ್ಕಿನಿಂದ ಸಂಶೋಧನೆ, ಆದ್ಯಯನಗಳು ನಡೆಯುತ್ತಿರುವಾಗಲೇ, ಮತ್ತೊಂದು ಕಡೆಯಿಂದ ಅನಾಯಾಸವಾಗಿ ಚಿತ್ರವಿಚಿತ್ರವಾದ ಜೀವಿಗಳು ಧುತ್ತನೆ ಪ್ರತ್ಯಕ್ಷವಾಗುತ್ತವೆ. ಅದರಲ್ಲಿಯೂ ಕೆಲವೊಂದು ಜೀವಿಗಳ ಚಹರೆಗಳಂತೂ ತೀರಾ ಭಿನ್ನವಾಗಿರುತ್ತವೆ. ಊಹೆಗೂ ನಿಲುಕದಂತೆ ವಿಚಿತ್ರವಾಗಿರುತ್ತವೆ. ಸಾಮಾನ್ಯವಾಗಿ ಇಂಥ ಚಿತ್ರವಿಚಿತ್ರವಾದ ಜೀವರಾಶಿಗಳು ಪ್ರತ್ಯಕ್ಷವಾಗೋದು ಕಡಲ ತೀರಗಳಲ್ಲಿ. ಮೀನುಗಾರಿಕೆಯ ಸಂದರ್ಭದಲ್ಲಿ ಈ ಥದದ ಜೀವಿಗಳು ಆಗಾಗ ಕಾಣ ಸಿಗೋದಿದೆ. ರಷ್ಯಾ ದೇಶದ ಸಮುದ್ರದಲ್ಲಿಯೂ ಇದೀಗ ಅಂಥಾದ್ದೇ ಒಂದು ವಿಚಿತ್ರ ಏಡಿ ಪತ್ತೆಯಾಗಿದೆ. ಏಡಿ ಅಂದಾಕ್ಷಣ ನಿಮ್ಮ ಮನಸಿನಲ್ಲಿ ಒಂದಷ್ಟು ಚಿತ್ರಗಳು ಮೂಡಿಕೊಳ್ಳುತ್ತವೆ. ಎರಡು ಆಕ್ರಮಣಕಾರಿ ಆಯುಧದಂಥಾ ಕೊಂಬು ಮತ್ತು ಒಂದಷ್ಟು ನೀಳ ಕಾಲುಗಳ ಜೀವಿ ಕಣ್ಣೆದುರು ಬರುತ್ತದೆ. ಆದರೆ ರಷ್ಯಾದ ಮೀನುಗಾರಿಕಾ ಹಡಗೊಂದರಲ್ಲಿ ಕಂಡ ಈ ಏಡಿ ಅಂಥಾ ಚಿತ್ರಣವನ್ನೇ ಅದಲು ಬದಲು ಮಾಡುವಂತಿದೆ. ಯಾಕೆಂದರೆ, ಯಾರಿಗೇ ಆದರೂ ನಂಬಲು ಕಷ್ಟವಾಗುವಂತೆ ಈ ಏಡಿಗೆ ಮನುಷ್ಯರಂತೆಯೇ ಹಲ್ಲುಗಳಿದ್ದಾವೆ! ಪಶ್ಚಿಮ ರಶ್ಯಾದಲ್ಲಿನ ಮೀನುಗಾರಿಕಾ ಹಡಗೊಂದರಲ್ಲಿ…
ದಕ್ಷಿಣ ಭಾರತೀಯ ಚಿತ್ರರಂಗದ ಯಶಸ್ವೀ ನಟಿ ಸಾಯಿಪಲ್ಲವಿ. ಪ್ರೇಮಂ ಚಿತ್ರದ ಮೂಲಕ ಚಿತ್ರಪ್ರೇಮಿಗಳಿಗೆ ಅಕ್ಷರಶಃ ಹುಚ್ಚು ಹಿಡಿಸಿದ್ದ ಮಲರ್ ಅವತಾರ ಇದೇ ಸಾಯಿ ಪಲ್ಲವಿಯದ್ದು. ಯಾವುದೇ ಎಕ್ಸ್‌ಪೋಸ್ ಮುಂತಾದ ಚೀಪ್ ಗಿಮಿಕ್ಕುಗಳಾಚೆಗೆ ನೈಜ ಪ್ರತಿಭೆಯಿಂದಲೇ ಮುನ್ನೆಲೆಗೆ ಬಂದ ಹೆಗ್ಗಳಿಕೆ ಈ ನಟಿಯದ್ದು. ಮಲೆಯಾಳಂ, ತೆಲುಗು ಮುಂತಾದ ಭಾಷೆಗಳಲ್ಲಿ ಪಸಿದ್ಧಿ ಪಡೆದಿರುವ ಈಕೆ ತಮಿಳುನಾಡಿನ ಪಾಲಿಗೂ ಫೇವರಿಟ್ ನಟಿ. ನಮ್ಮದೇ ಕರ್ನಾಟಕದಲ್ಲಿಯೂ ಈಕೆಯನ್ನು ಮನಸಾರೆ ಮೆಚ್ಚಿಕೊಂಡು ಆರಾಧಿಸುವವರಿದ್ದಾರೆ. ನಿಖರವಾಗಿ ಹೇಳಬೇಕೆಂದರೆ, ಸದಾ ಕಾಲವೂ ಹೊಸಾ ಬಗೆಯ ಪಾತ್ರಗಳಿಗೆ ತುಡಿಯುವ ಮನಃಸ್ಥಿತಿಯ ಸಾಯಿಪಲ್ಲವಿ, ಓರ್ವ ಪರಿಪೂರ್ಣ ಕಲಾವಿದೆ. ಈ ಥರದ ನಟಿಯರು ಪ್ರತೀ ಹೆಜ್ಜೆಯಲ್ಲಿಯೂ ಮಹತ್ತರವಾದ ಪಾತ್ರಗಳನ್ನು ಧ್ಯಾನಿಸುತ್ತಾ ಸಾಗುತ್ತಾರೆ. ಈ ಕ್ಷಣಕ್ಕೂ ಸಾಯಿಪಲ್ಲವಿ ನಿರ್ವಹಿಸಿದ್ದ ಪಾತ್ರಗಳು ತಮಗೆ ಸಿಗಬಾರದಿತ್ತಾ ಅಂತ ಅದೆಷ್ಟೋ ನಟಿಯರು ಪರಿತಪಿಸುತ್ತಿರಬಹುದು. ಆದರೆ ಖುದ್ದು ಸಾಯಿಪಲ್ಲವಿಗೆ ಮತ್ಯಾರೋ ನಟಿಯರು ನಿಭಾಯಿಸಿದ ಪಾತ್ರಗಳ ಬಗ್ಗೆ ಮೋಹವಿದೆ. ಈ ಬಗ್ಗೆ ಆಕೆ ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಮನಬಿಚ್ಚಿ ಮಾತಾಡಿದ್ದಾಳೆ. ಸೂಪರ್ ಹಿಟ್ ಚಿತ್ರಗಳಾದ…
ಇತ್ತೀಚೆಗಷ್ಟೇ ರಕ್ಷಿತ್ ಶೆಟ್ಟಿ ನಿರ್ದೇಶನದ ಚಾರ್ಲಿ ಚಿತ್ರ ಬಿಡುಗಡೆಗೊಂಡಿತ್ತಲ್ಲಾ? ಅದು ಮಾಡಿದ್ದ ಮೋಡಿ ಸಣ್ಣ ಮಟ್ಟದ್ದೇನಲ್ಲ. ಬಹುತೇಕ ಮಂದಿ ಅದನ್ನು ಮತ್ತೆ ಮತ್ತೆ ನೋಡಿ ಮರುಳಾದ ಕಥೆ ಕಣ್ಣಮುಂದಿದೆ. ಚಾರ್ಲಿ ನಂತರದಲ್ಲಿ ಅಂಥಾದ್ದೇ ಮೋಹ ಮೂಡಿಸೋ ಮತ್ತೊಂದು ಚಿತ್ರಕ್ಕಾಗಿ ಪ್ರೇಕ್ಷಕರು ಕಾದು ಕೂತಿದ್ದರು. ಆ ಕ್ಷಣದಲ್ಲಿ ಎಂಟ್ರಿ ಕೊಟ್ಟಿದ್ದು ವಿಲೋಕ್ ಶೆಟ್ಟಿ ನಿರ್ದೇಶನದ ಚೇಸ್. ಅಷ್ಟಕ್ಕೂ ಇದು ವರ್ಷಾಂತರಗಳ ಕಾಲದಿಂದಲೂ ಕುತೂಹಲವನ್ನು ಜತನದಿಂದ ಕಾಪಿಟ್ಟುಕೊಂಡು ಬಂದಿದ್ದ ಚಿತ್ರ. ಅದರ ಬಗ್ಗೆ ಪ್ರೇಕ್ಷಕರಲ್ಲಿ ಭಾರೀ ಪ್ರಮಾಣದ ನಿರೀಕ್ಷೆಗಳಿದ್ದವು. ಒಂದಷ್ಟು ಅಮೋಘವಾದ ಕಲ್ಪನೆಗಳೂ ಇದ್ದವು. ಅಂಥಾ ಎಲ್ಲ ಕಲ್ಪನೆಗಳ ಪರಿಧಿಯಾಚೆಗೆ ಹರಡಿಕೊಂಡಿದ್ದ ಚೇಸ್, ಪ್ರೇಕ್ಷಕರ ಮುಂದೆ ಅವತರಿಸಿ ಅಚ್ಚರಿ ಮೂಡಿಸಿತ್ತು. ಬಿಡುಗಡೆಗೊಂಡ ಕ್ಷಣದಿಂದಲೇ ಚೇಸ್ ಬಗ್ಗೆ ಒಳ್ಳೆ ಅಭಿಪ್ರಾಯಗಳು ಮೂಡಿಕೊಳ್ಳುತ್ತಾ ಬಂದಿದ್ದವು. ಗಟ್ಟಿಯಾದ ಕಥೆ, ಕ್ಷಣ ಕ್ಷಣವೂ ಕೌತುಕದ ದಿಕ್ಕಿನತ್ತ ಹೊರಳಿಕೊಳ್ಳುತ್ತಾ ಮುಂದುವರೆಯುವ ಚೇತೋಹಾರಿ ನಿರೂಪಣೆಯೊಂದಿಗೆ ಚೇಸ್ ಪ್ರತೀ ನೋಡುಗರಲ್ಲಿಯೂ ಥ್ರಿಲ್ಲಿಂಗ್ ಭಾವ ಮೂಡಿಸುವಲ್ಲಿ ಯಶಸ್ವಿಯಾಗಿತ್ತು. ಹೀಗೆ ನೋಡಿ ಬಂದ ಜನರ ಕಡೆಯಿಂದ ಹೊಮ್ಮಿಕೊಂಡಿದ್ದ…
ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕಿಯಾಗಿ ಆಗಮಿಸಿದ್ದ ಹುಡುಗಿ ಸಂಜನಾ ಆನಂದ್. ಭಿನ್ನವಾದ ಕಥೆ, ಅದಕ್ಕೆ ತಕ್ಕುದಾದ ಪಾತ್ರದ ಮೂಲಕ ಸಂಜನಾ ಆ ನಂತರದ ದಿನಗಳಲ್ಲಿ ನಾಯಕಿಯಾಗಿ ಕಾಲೂರಿ ನಿಂತುಕೊಂಡಿದ್ದಳು. ಬಹುಶಃ ಪ್ರತಿಭೆಯೆಂಬುದು ಇರದೇ ಹೋಗಿದ್ದರೆ ಸಾಲು ಸಾಲು ಅವಕಾಶಗಳು ಆಕೆಯನ್ನು ಅರಸಿ ಬರಲು ಸಾಧ್ಯವಾಗುತ್ತಿರಲಿಲ್ಲವೇನೋ. ತಾನಾಯಿತು, ತನ್ನ ಸಿನಿಮಾವಾಯಿತೆಂಬ ಮನಃಸ್ಥಿತಿಯ ಸಂಜನಾ, ನೋಡ ನೋಡುತ್ತಲೇ ಎಲ್ಲರೂ ಅಚ್ಚರಿ ಪಡುವಂಥಾ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಾ ಸಾಗಿದ್ದಳು. ಸಲಗ ಚಿತ್ರದ ಮೂಲಕ ಮತ್ತಷ್ಟು ಭದ್ರವಾಗಿ ನೆಲೆ ಕಂಡುಕೊಂಡು, ಇದೀಗ ತೆಲುಗಿನಲ್ಲಿಯೂ ಬಹುಬೇಡಿಕೆಯ ನಾಯಕಿಯಾಗಿ ಮಿಂಚುತ್ತಿದ್ದಾಳೆ. ಹೀಗೆ ಪರಭಾಷೆಗಳಲ್ಲಿಯೂ ಅವಕಾಶಗಳ ಸುರಿಮಳೆಯಾಗುತ್ತಿರುವಾಗಲೇ ಸಂಜನಾ ಕಿಸ್ ಖ್ಯಾತಿಯ ವಿರಾಟ್‌ಗೆ ಜೋಡಿಯಾಗಿರುವ ಸುದ್ದಿ ಬಂದಿದೆ! ಕನ್ನಡದ ಮಟ್ಟಿಗೆ ಹೇಳುವುದಾದರೆ, ಸಂಜನಾ ಇದೀಗ ಒಂದಷ್ಟು ಹೊಸಾ ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾಳೆ. ಆ ಸಾಲಿಗೆ ವಿರಾಟ್ ನಾಯಕನಾಗಿರುವ ಹೊಸಾ ಚಿತ್ರವೂ ಸೇರ್ಪಡೆಗೊಂಡಿದೆ. ಅಂದಹಾಗೆ, ಈ ಚಿತ್ರವನ್ನು ದಿನಕರ್ ತೂಗುದೀಪ ನಿರ್ದೇಶನ ಮಾಡಲಿದ್ದಾರೆ. ಖುದ್ದು ದಿನಕರ್ ಅವರೇ ನಾಯಕಿಯ ಪಾತ್ರಕ್ಕೆ…
ಬಿಹಾರವೆಂಬುದು ಭಾರತದ ಅತ್ಯಂತ ಬಡ ರಾಷ್ಟ್ರ. ಆಳುವ ಮಂದಿಯ ಇಚ್ಛಾಶಕ್ತಿಯ ಕೊರತೆಯಿಂದಾಗಿ ಇತ್ತೀಚಿನವರೆಗೂ ಅದೊಂದು ಶಾಪಗ್ರಸ್ತ ರಾಜ್ಯವಾಗಿಯೇ ಗುರುತಿಸಿಕೊಳ್ಳುತ್ತಾ ಬಂದಿದೆ. ನಮ್ಮ ರಾಜ್ಯವೂ ಸೇರಿದಂತೆ ಬೇರೆ ಬೇರೆಡೆಗಳಲ್ಲಿ ಅಲ್ಲಿನ ಮಂದಿ ಕಾರ್ಮಿಕರಾಗಿ ಹಂಚಿ ಹೋಗಿದ್ದಾರೆಂದರೆ ಅದಕ್ಕೆ ಕಾರಣ ಬಡತನವಲ್ಲದೇ ಬೇರೇನೂ ಅಲ್ಲ. ಅಂಥಾ ಬಡತನದ ಮೂಲವ್ಯಾವುದು ಅಂತ ಹುಡುಕಿ ಹೊರಟರೆ ಸಾಕಷ್ಟು ಕಾರಣಗಳು ಸಿಗುತ್ತವೆ. ರಕ್ಕಸ ರಾಜಕಾರಣಿಗಳೇ ವಿಲನ್ನುಗಳ ಸ್ಥಾನದಲ್ಲಿ ನಿಲ್ಲುತ್ತಾರೆ. ಇಂಥವರೆಲ್ಲರ ದೆಸೆಯಿಂದ ದರಿದ್ರ ಸ್ಥಿತಿಗೆ ಜಾರಿದ್ದ ಬಿಹಾರದಲ್ಲಿ ಸಹಜವಾಗಿಯೇ ಕಳ್ಳತನ, ದರೋಡೆ, ಕೊಲೆ ಸುಲಿಗೆಯಂಥಾದ್ದೂ ಮೇರೆ ಮೀರಿತ್ತು. ಇದೆಲ್ಲದರ ಮೂಲವಿದ್ದದ್ದು ಎಣ್ಣೆಯಲ್ಲಿ! ಕುಡಿತದ ಚಟವೆಂಬುದು ಆ ಭಾಗದಲ್ಲಿ ಬಡತನದ ಬೆಂಕಿ ಮತ್ತಷ್ಟು ಧಗಧಗಿಸುವಂತೆ ಮಾಡಿತ್ತು. ಈ ಕುಡಿತದ ಚಟದಿಂದಲೇ ಅಲ್ಲಿನ ಎಷ್ಟೋ ಮಂದಿ ಬೀದಿಗೆ ಬಂದರು. ಇನ್ನೊಂದಷ್ಟು ಜನ ಮನೆಯ ಯಜಮಾನನೇ ಕುಡಿತದ ದಾಸನಾಗಿದ್ದರಿಂದ ಒಪ್ಪೊತ್ತಿನ ಊಟಕ್ಕೂ ಗತಿಯಿಲ್ಲದೆ, ಸಂಸಾರವನ್ನು ಸಂಭಾಳಿಸಲಾಗದೆ ನೇಣಿಗೆ ಶರಣಾದರು. ಈ ಕಾರಣದಿಂದಲೇ ವರ್ಷಗಳ ಹಿಂದೆ ಬಿಹಾರದಲ್ಲಿ ಮಧ್ಯಪಾನ ನಿಷೇಧ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೆ…
ಬೆಂಗಳೂರಲ್ಲಿ ಮತ್ತೆ ಡ್ರಗ್ಸ್ ಮಾಫಿಯಾ ಸದ್ದು ಮಾಡಿದೆ. ಐವರು ಡ್ರಗ್ಸ್ ದಂಧೆಕೋರರನ್ನು ಬಂಧಿಸಿರುವ ಪೊಲೀಸರು ನಾಲಕ್ಕು ಕೋಟಿ ಮೌಲ್ಯದ ಡ್ರಗ್ಸ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ದಂಧೆಯ ಮಂದಿ ಮಕ್ಕಳು ಮರಿಗಳನ್ನು, ಮಾನಸಿಕ ಅಸ್ವಸ್ಥರನ್ನೂ ಕೂಡಾ ಬಳಸಿಕೊಳ್ಳುತ್ತಿರುವ ಅಂಶ ಈಗಾಗಲೇ ಜಾಹೀರಾಗಿದೆ. ಇದೀಗ ಬಡ ಮಹಿಳೆಯರನ್ನೂ ಅದಕ್ಕೆ ಬಳಸಿಕೊಳ್ಳುತ್ತಿರೋ ವಿಚಾರ ಈ ಪ್ರಕರಣದ ಮೂಲಕ ಬಯಲಾಗಿದೆ. ಈ ಗ್ಯಾಂಗಿನೊಂದಿಗೆ ಇಬ್ಬರು ಮಹಿಳೆಯರೂ ತಗುಲಿಕೊಂಡಿದ್ದಾರೆ. ಸಿಲಿಕಾನ್ ಸಿಟಿ, ಉದ್ಯಾನ ನಗರಿ ಎಂದೆಲ್ಲಾ ಜಾಗತಿಕ ಮಟ್ಟದಲ್ಲಿ ಖ್ಯಾತಿ ಹೊಂದಿರುವ ಬೆಂಗಳೂರು ನಗರಕ್ಕೆ ಮಾದಕದ್ರವ್ಯ ಲೋಕದಲ್ಲಿ ಬಳಕೆಯಲ್ಲಿರುವ ಹೆಸರು ಡ್ರಗ್ಸ್ ಯಾರ್ಡ್ ಆಫ್ ಕರ್ನಾಟಕ. ಈ ಕಳಂಕ ರಾಜಧಾನಿಗೆ ಸುಮ್ಮನೆ ಮೆತ್ತಿಕೊಂಡಿಲ್ಲ. ದೇಶ ವಿದೇಶಗಳ ಡ್ರಗ್ ಪೆಡ್ಲರ್‌ಗಳೊಂದಿಗೆ ನೇರ ಸಂಪರ್ಕ ಹೊಂದಿರುವ ಬೆಂಗಳೂರಿನ ಡ್ರಗ್ ಮಾಫಿಯಾ ವಾರ್ಷಿಕ ಕೋಟಿಗಟ್ಟಲೆ ಮೌಲ್ಯದ ಮಾದಕದ್ರವ್ಯವವನ್ನು ಅಮದು ಮಾಡಿಕೊಂಡು ಅನಂತರ ರಾಜ್ಯದಲ್ಲಿ ಬೇಡಿಕೆ ಇರುವ ನಗರಗಳಿಗೆ ಕಳುಹಿಸುವ ವ್ಯವಸ್ಥಿತ ಜಾಲದ ಹೃದಯವನ್ನಾಗಿ ಈ ನಗರವನ್ನು ಬಳಸಿಕೊಳ್ಳುತ್ತಿದೆ. ಇದಕ್ಕೆ ಸಾಕ್ಷಿ ಕಳೆದ ಮೂರು ವರ್ಷಗಳಲ್ಲಿ…