Author: Santhosh Bagilagadde

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

ನಮ್ಮ ನಡುವೆ ಸಾಕಷ್ಟು ಜಾನರ್‌ಗಳ ಸಿನಿಮಾಗಳನ್ನು ಬಹುವಾಗಿ ಇಷ್ಟ ಪಡುವವರು ಕಾಣ ಸಿಗುತ್ತಾರೆ. ಆದ್ದರಿಂದಲೇ ಒಂದು ವೆರೈಟಿಯ ಚಿತ್ರ, ಮತ್ತೊಂದು ಅಭಿರುಚಿಯವರಿಗೆ ಪಥ್ಯವಾಗುವುದಿಲ್ಲ. ಹೀಗೆ ಭಿನ್ನ ಅಭಿರುಚಿಗಳನ್ನೆಲ್ಲ ಒಟ್ಟಿಗೆ ಕೂರಿಸಿ, ಮನಸಾರೆ ಮನೋರಂಜನೆಯನ್ನು ಧಾರೆಯೆರೆಯೋ ಛಾತಿ ಇರೋದು ಪಕ್ಕಾ ಕಾಮಿಡಿ ಜಾನರಿನ ಚಿತ್ರಗಳಿಗಷ್ಟೇ. ಒಂದೊಳ್ಳೆ ಕಥೆ, ಅದಕ್ಕೆ ಹೊಸೆದುಕೊಂಡಿರುವ ಕಾಮಿಡಿ… ಇಷ್ಟಿದ್ದುಬಿಟ್ಟರೆ ಗೆಲುವು ದಕ್ಕುವುದು ಕಷ್ಟವೇನಲ್ಲ. ಸದ್ಯದ ಮಟ್ಟಿಗೆ ಅಂಥಾದ್ದೊಂದು ಭರವಸೆ ಮೂಡಿಸಿರುವ ಚಿತ್ರ, ಲಕ್ಷ್ಮಿ ರಮೇಶ್ ನಿರ್ದೇಶನದ ಧಮಾಕ. ಈಗಾಗಲೇ ಟೀಸರ್ ಮತ್ತು ಹಾಡುಗಳಿಂದ ಸೆಳೆದಿದ್ದ ಈ ಚಿತ್ರದ ಟ್ರೈಲರ್ ಇದೀಗ ಬಿಡುಗಡೆಗೊಂಡಿದೆ. ಈ ಮೂಲಕ ಇದೊಂದು ಪಕ್ಕಾ ಭರ್ಜರಿ ಕಾಮಿಡಿಯ ಧಮಾಕಾ ಎಂಬ ವಿಚಾರ ಖಾತರಿಯಾಗಿದೆ. ವಿಶೇಷವೆಂದರೆ, ಈ ಟ್ರೈಲರ್‌ಗೆ ಖ್ಯಾತ ಕಾಮಿಡಿ ನಟ ಚಿಕ್ಕಣ್ಣ ಧ್ವನಿ ನೀಡಿದ್ದಾರೆ. ಘನ ಗಂಭೀರವಾದ ಹಿನ್ನೆಲೆ ಧ್ವನಿಯೊಂದಿಗೆ ತೆರುಕೊಳ್ಳುವ ಟ್ರೈಲರ್, ಅಕ್ಷರಶಃ ನಗುವಿನ ವಠಾರಕ್ಕೆ ಕೊಂಡೊಯ್ದು ಬಿಡುತ್ತೆ. ಇದರೊಂದಿಗೇ ಒಂದಷ್ಟು ಪಾತ್ರಗಳ ಝಲಕ್ಕುಗಳೂ ಹೊಳೆಯುತ್ತವೆ. ಶಿವರಾಜ್ ಕೆ.ಆರ್ ಪೇಟೆಗೆ ಇದರೊಂದಿಗೆ ಒಂದೊಳ್ಳೆ…

Read More

ಪ್ರೇಮತೀವ್ರತೆಯ ಹಾಡೀಗ ಸರ್ವಾಂತರ್ಯಾಮಿ! ಇದೀಗ ಕನ್ನಡ ಚಿತ್ರರಂಗದಲ್ಲಿ ಥರ ಥರದ ಸಿನಿಮಾಗಳ ಹಂಗಾಮಾ ಶುರುವಾಗಿದೆ. ಇದೀಗ, ಹಾಗೆ ಹೊಸತನದ ಗಂಧ ಮೆತ್ತಿಕೊಂಡಿರುವ ಅನೇಕ ಚಿತ್ರಗಳು ಕೆಲಸ ಕಾರ್ಯಗಳನ್ನೆಲ್ಲ ಪೂರೈಸಿಕೊಂಡು ಬಿಡುಗಡೆಗೆ ಅಣಿಯಾಗಿ ನಿಂತಿವೆ. ಈ ಪಟ್ಟಿಯಲ್ಲಿ ದಾಖಲಾಗುತ್ತಲೇ, ಒಂದಷ್ಟು ನಿರೀಕ್ಷೆಗೂ ಕಾರಣವಾಗಿರುವ ಚಿತ್ರ ಧಮಾಕಾ. ಚಿತ್ರೀಕರಣ ಆರಂಭವಾದ ಕ್ಷಣದಿಂದ ಇಲ್ಲಿಯವರೆಗೂ ಧಮಾಕಾ ಒಂದಷ್ಟು ಸುದ್ದಿಯಾಗುತ್ತಾ ಬಂದಿದೆ. ಇತ್ತೀಚಿನ ದಿನಗಳಲ್ಲಿ ಅದು ಸೌಂಡು ಮಾಡುತ್ತಿರೋದು ಒಂದು ಮುದ್ದಾದ ಹಾಡೊಂದರ ಮೂಲಕ. ಪ್ರೇಮದ ಭಾವಗಳು ಹಾಡಾದರೆ ಅದು ಯಾವ ಕಾಲಕ್ಕೂ ಚೆಂದವೇ. ಸಾಮಾನ್ಯವಾಗಿ ಪೀಳಿಗಿಯಿಂದ ಪೀಳಿಗೆಗೆ ಭಾವನೆಇಗಳೂ ಬದಲಾಗುತ್ತಾ ಸಾಗುತ್ತವೆ. ಪ್ರೀತಿ ಕೂಡಾ ಅದರ ವಲಯಕ್ಕೆ ಬರುತ್ತದೆ. ಹಾಗೆ ಬದಲಾದ ಈ ಜನರೇಷನ್ನಿನ ಪ್ರೇಮ ಪುಳಕಗಳನ್ನು ಬಚ್ಚಿಟ್ಟುಕೊಂಡಿರೋ ಈ ಹಾಡೀಗ ಎಲ್ಲೆಡೆ ಹರಿದಾಡುತ್ತಿದೆ. ಈ ಮೂಲಕ ಟ್ರೆಂಡ್ ಸೆಟ್ ಮಾಡಿದೆ. ಇದು ಲಕ್ಷ್ಮಿ ರಮೇಶ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರ. ಅದೀಗ ‘ನಾನು ಹೋಗೋಕೂ ಮೊದಲು’ ಎಂಬ ನವಿರಾದ ಹಾಡಿನ ಮೂಲಕ ಸದ್ದು ಮಾಡುತ್ತಿದೆ.…

Read More

ಬಾಗ್ಲು ತೆಗಿ ಮೇರಿ ಜಾನ್ ಹಾಡಿನ ಮಹಾ ದಾಖಲೆ! ಮಧ್ಯ ಮಳೆಗಾಲದಲ್ಲಿಯೂ ತೋತಾಪುರಿಯ ಸ್ವಾದ ನಾನಾ ಸ್ವರೂಪಗಳಲ್ಲಿ ಘಮಿಸುತ್ತಿದೆ. ಒಂದು ಸಿನಿಮಾವನ್ನು ಇಷ್ಟೊಂದು ದೀರ್ಘ ಕಾಲದವರೆಗೆ ನಿರೀಕ್ಷೆ ಮುಕ್ಕಾಗದಂತೆ ಕಾಪಾಡಿಕೊಳ್ಳೋದೊಂದು ಸವಾಲು. ಆದರೆ ನಿರ್ದೇಶಕ ವಿಜಯಪ್ರಸಾದ್ ಅವರಿಗೆ ಅದು ಲೀಲಾಜಾಲ. ಕೆಲಯ ಕಾರ್ಯಗಳ ಮೂಲಕವೇ ತಮ್ಮ ಸಿನಿಮಾದೆಡೆಗೊಂದು ಕೌತುಕವನ್ನು ಸದಾ ಕಾಪಿಟ್ಟುಕೊಳ್ಳುವ ಕಲೆ ಅವರಿಗೆ ಸಿದ್ಧಿಸಿದೆ. ತೋತಾಪುರಿ ಚಿತ್ರದ ಪ್ರಚಾರಕ್ಕೆ ಅವರು ಅನುಸರಿಸುತ್ತಿರುವ ಕ್ರಮಗಳನ್ನು ಕಂಡವರೆಲ್ಲ ಈ ಮಾತನ್ನು ನಿಸ್ಸಂದೇಹವಾಗಿ ಅನುಮೋದಿಸುತ್ತಾರೆ. ಈ ಸಿನಿಮಾ ಮೂಲಕ ನೀರ್ ದೋಸೆ ನಂತರದಲ್ಲಿ ವಿಜಯ ಪ್ರಸಾದ್ ಮತ್ತು ಜಗ್ಗೇಶ್ ಜೋಡಿ ಒಂದಾಗುತ್ತಿದೆ. ಈ ಕಾಂಬಿನೇಷನ್ನಿನ ಅಸಲೀ ಮಜಾ ಎಂಥಾದ್ದೆಂಬುದನ್ನು ಇತ್ತೀಚೆಗೆ ಬಿಡುಗಡೆಯಾಗಿದ್ದ ‘ಬಾಗ್ಲು ತೆಗಿ ಮೇರಿ ಜಾನ್’ ಎಂಬ ಹಾಡಿನ ಮೂಲಕ ಜಾಹೀರಾಗಿತ್ತು. ಇದೀಗ ಈ ಹಾಡೇ ಒಂದಿಡೀ ಚಿತ್ರತಂಡಕ್ಕೆ ಅಗಾಧ ಪ್ರಮಾಣದಲ್ಲಿ ಖುಷಿ ತಂದು ಕೊಟ್ಟಿದೆ. ಈ ಖುಷಿಯ ಬಗ್ಗೆ ಚಿತ್ರತಂಡ ಥ್ರಿಲ್ಲಿಂಗ್ ಸಂಗತಿಯೊಂದನ್ನು ಹಂಚಿಕೊಂಡಿದೆ. ಅದರನ್ವಯ ಹೇಳೋದಾದರೆ, ಈ ಹಾಡೀಗ ಕೇವಲ…

Read More

ಮಲೆನಾಡ ಪ್ರತಿಭೆ ನವನ್ ನಿರ್ದೇಶನದ ಮೊದಲ ಚಿತ್ರ! ಈಗೊಂದಷ್ಟು ದಿನಗಳಿಂದ ಕಂಬ್ಳಿಹುಳ ಚಿತ್ರದ ಚೆಂದದ ಚಿಟ್ಟೆಯಂಥಾ ಹಾಡೊಂದು ಎಲ್ಲಡೆ ಹರಿದಾಡುತ್ತಿದೆ. ಯಾವುದೇ ಸಿನಿಮಾಗಳ ಸುದ್ದಿ ಹೊರ ಬಂದರೂ, ಅದರ ಹಾಡಿಗಾಗಿ ಕಾದು ಕೂರುವ ಒಂದು ವರ್ಗವೇ ಇದೆ. ಅಂಥಾದ್ದೊಂದು ಕಾಯುವಿಕೆಯನ್ನು ಸಾರ್ಥಕಗೊಳಿಸುವಲ್ಲಿ ಕಂಬ್ಳಿಹುಳ ಚಿತ್ರತಂಡ ಯಶ ಕಂಡಿದೆ. ಈ ಚಿತ್ರ ಟೈಟಲ್ ಲಾಂಚ್ ಆದ ಘಳಿಗೆಯಿಂದಲೇ ಜನರನ್ನು ಸೆಳೆದುಕೊಂಡಿತ್ತು. ಮಲೆನಾಡಿನ ಪ್ರತಿಭೆ ನವನ್ ಶ್ರೀನಿವಾಸ್ ನಿರ್ದೇಶನದ ಚೊಚ್ಚಲ ಚಿತ್ರವಿದು. ಹೊಸಬರ ಹಾಜರಿ ಇರುವಲ್ಲಿ ಹೊಸತೇನೋ ಸೃಷ್ಟಿಯಾಗುತ್ತದೆಂಬುದು ಚಿತ್ರರಂಗದಲ್ಲಿರುವ ನಂಬಿಕೆ. ಕಂಬ್ಳಿಹುಳದ ವಿಚಾರದಲ್ಲಿಯೂ ಅದು ನಿಜವಾಗುವ ನಿರೀಕ್ಷೆಗಳಿದ್ದಾವೆ. ಇದೇ ಬುಧವಾರ ಬಿಡುಗಡೆಗೊಂಡಿರೋ ಹಾಡೊಂದು ಸೃಷ್ಟಿಸಿರುವ ಸಂಚಲನವನ್ನು ಗಮನಿಸಿದರೆ ಕಂಬ್ಳಿಹುಳ ಬೇರೆಯದ್ದೇ ರೀತಿಯ ಕರಾಮತ್ತು ಸೃಷ್ಟಿಸುತ್ತದೆಂಬ ನಂಬಿಕೆ ಗಾಢವಾಗುತ್ತದೆ. ಜಾರಿಬಿದ್ದರೂ ಯಾಕೀ ನಗು, ಚಾಚೂ ತಪ್ಪದೆ ದಿನವೂ ಸಿಗು ಎಂಬ ಈ ಹಾಡು ವಿಜಯ್ ಪ್ರಕಾಶ್ ಮತ್ತು ಸಂಗೀತ ರವೀಂದ್ರನಾಥ್ ಕಂಠಸಿರಿಯಲ್ಲಿ ಚೆಂದಗೆ ಮೂಡಿ ಬಂದಿದೆ. ಈ ಹಾಡಿನಲ್ಲಿಯೇ ಟೈಟಲ್ಲಿನಲ್ಲಿ ಕೂತ ಕಂಬ್ಳಿಹುಳ ಚಿಟ್ಟೆಯಾಗುತ್ತೆ.…

Read More

ಭಿನ್ನ ಅಭಿರುಚಿ ಮತ್ತು ಬೇರೆ ಬೇರೆ ಕ್ಷೇತ್ರಗಳಲ್ಲಿಯೂ ಕೈಯಾಡಿಸಿ ಗೆಲ್ಲಬಲ್ಲ ಛಾತಿ ಇರುವ ಒಂದಷ್ಟು ಮಂದಿ ಬಹುಮುಖ ಪ್ರತಿಭೆಗಳು ಕನ್ನಡ ಚಿತ್ರರಂಗದಲ್ಲಿದ್ದಾರೆ. ಆ ಸಾಲಿಗೆ ನಿಸ್ಸಂದೇಹವಾಗಿ ಸೇರಿಕೊಳ್ಳುವವರು ಚಂದ್ರ ಓಬಯ್ಯ. ಈಗಾಗಲೇ ಪ್ರತಿಭಾನ್ವಿತ ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಅವರು, ಸಾಹಿತಿಯೂ ಹೌದು. ಅಂಥಾದ್ದೊಂದು ಕ್ರಿಯಾಶೀಲ, ಸೂಕ್ಷ್ಮ ಮನಃಸ್ಥಿತಿಯನ್ನೇ ನಿರ್ದೇಶನಕ್ಕೂ ಒಗ್ಗಿಸಿಕೊಂಡಿರುವ ಚಂದ್ರು, ಯೂ ಟರ್ನ್೨ ಎಂಬ ಚಿತ್ರದ ಮೂಲಕ ನಾಯಕನಾಗಿಯೂ ಪಾದಾರ್ಪಣೆ ಮಾಡಲು ಅಣಿಗೊಂಡಿದ್ದಾರೆ. ಈ ಮೂಲಕ ಸಂಗೀತ ನಿರ್ದೇಶಕರಾಗಿದ್ದ ಚಂದ್ರು ಓಬಯ್ಯ ನಿರ್ದೇಶಕರಾಗಿ, ನಾಯಕನಾಗಿ ಮತ್ತು ನಿರ್ಮಾಪಕರಾಗಿಯೂ ಅವತರಿಸುವ ಮೂಲಕ ಎಲ್ಲರ ಅಚ್ಚರಿಗೆ ಕಾರಣರಾಗಿದ್ದಾರೆ. ಈ ವಿಚಾರ ಕೇಳಿದೇಟಿಗೆ, ಒಬ್ಬರೇ ಇಷ್ಟೊಂದು ಜವಾಬ್ದಾರಿಗಳನ್ನು ಏಕಕಾಲದಲ್ಲಿಯೇ ನಿಭಾಯಿಸಲು ಸಾಧ್ಯವೇ ಎಂಬಂಥಾ ಪ್ರಶ್ನೆಗಳೇಳುತ್ತವೆ. ಆದರೆ, ಪ್ರತೀ ಮನುಷ್ಯರಲ್ಲಿಯೂ ಪ್ರತಿಯೊಂದನ್ನು ನಿಭಾಯಿಸುವ ಜಾಣ್ಮೆ ಇರುತ್ತದೆ. ಮನಸು ಮಾಡಿದರೆ ಎಲ್ಲವೂ ಸಾಧ್ಯ ಎಂಬಂಥ ಮನಃಸ್ಥಿತಿ ಹೊಂದಿರುವ ಚಂದ್ರು ಓಬಯ್ಯ ಎಲ್ಲವನ್ನೂ ಲೀಲಾಜಾಲವಾಗಿ ಮಾಡಿ ಮುಗಿಸಿದ್ದಾರೆ. ಹಾಗಾದರೆ, ಯೂ ಟರ್ನ್೨ ಯಾವ ಬಗೆಯ ಚಿತ್ರ? ಇದರ ವಿಶೇಷತೆಗಳೇನೆಂಬ…

Read More

ಕನ್ನಡ ಚಿತ್ರರಂಗದ ಪಾಲಿಗಿದು ಹೊಸತನದ ಶಖೆಯೊಂದು ತೆರೆದುಕೊಂಡಿರುವ ಪರ್ವಕಾಲ. ಅದೇನೇನೋ ಸರ್ಕಸ್ಸು ನಡೆಸುತ್ತಾ, ಯುವ ಮನಸುಗಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿವೆ. ಹಾಗೆ ಬಂದವರು ಎಲ್ಲರೂ ತಿರುಗಿ ನೋಡುವಂತೆ ಸದ್ದನ್ನೂ ಮಾಡುತ್ತಿದ್ದಾರೆ. ಸದ್ಯ ಆ ರೀತಿಯದ್ದೊಂದು ಪಾಸಿಟಿವ್ ಟಾಕ್ ಕ್ರಿಯೇಟ್ ಮಾಡಿರುವ ಚಿತ್ರ ವಿಕಿಪೀಡಿಯಾ. ಈ ಚಿತ್ರದ ಮೂಲಕ ಯಶ್ವಂತ್ ನಾಯಕನಾಗಿ, ನಿರ್ಮಾಪಕನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಸಿನಿಮಾ ಮಾಯೆಯನ್ನು ತೀವ್ರವಾಗಿ ಹಚ್ಚಿಕೊಂಡು, ಬದುಕು ಬೇರೆಡೆಗೆ ವಗಾಯಿಸಿದಾಗಲೂ ಮತ್ತೆ ಗುರಿಯ ನೇರಕ್ಕೆ ಬಂದು ನಿಂತವರು ಯಶ್ವಂತ್. ಅವರ ಕನಸೆಲ್ಲವೂ ವಿಕಿಪೀಡಿಯಾ ಚಿತ್ರದ ಮೂಲಕ ನನಸಾಗುವ ಹಂತದಲ್ಲಿದೆ. ಯಾವುದೇ ಕನಸಾದರೂ ವಾಸ್ತವಿಕವಾಗಿ ಅದನ್ನು ಎದುರುಗೊಳ್ಳಲು ಸಾಕಷ್ಟು ಸರ್ಕಸ್ಸು ನಡೆಸಬೇಕಾಗುತ್ತೆ. ತೀರಾ ಜಿದ್ದಿಗೆ ಬಿದ್ದಂತೆ ಬಂದ ಕಷ್ಟಗಳನ್ನೆಲ್ಲ ಎದೆಯೊಡ್ಡಿ ಹಿಮ್ಮೆಟ್ಟಿಸದಿದ್ದರೆ ಬದುಕು ಬೇರೆಲ್ಲೋ ಕಳೆದು ಹೋಗಿ ಬಿಡುವ ಅಪಾಯಗಳಿರುತ್ತವೆ. ಕನಸಿನ ಹಾದಿಯಲ್ಲಿ ಘಟಿಸುವ ಎಲ್ಲ ಅನಿರೀಕ್ಷಿತ ಘಟನಾವಳಿಗಳನ್ನೂ ಕೂಡಾ ಗುರಿಯ ನೇರಕ್ಕೆ ಪಳಗಿಸಿಕೊಳ್ಳುವ ವಿದ್ಯೆ ಕರಗತ ಮಾಡಿಕೊಳ್ಳದೇ ಹೋದರೆ ಗೆಲುವು ಅಕ್ಷರಶಃ ಮರೀಚಿಕೆಯಾಗಿ ಬಿಡುತ್ತದೆ.…

Read More

ಸಿನಿಮಾ ಸಂಬಂಧಿ ವ್ಯಕ್ತಿಗಳು ಸಾಮಾನ್ಯವಾಗಿ ಸಾಮಾಜಿಕ ವಿಚಾರಗಳಿಗೆ ತಲೆ ಹಾಕೋದು ಕಡಿಮೆ. ಇನ್ನು ಕೆಲ ಮಂದಿ ಸಾಮಾಜಿಕ ಕಾಳಜಿ ಇರುವಂತೆ ತೋರಿಸಿಕೊಂಡು ಯಾವುದೋ ಪಕ್ಷಗಳಿಗೆ ಬಕೀಟು ಹಿಡಿಯುವ, ಆ ಮೂಲಕ ಪುಗಸಟ್ಟೆ ಪ್ರಚಾರ ಗಿಟ್ಟಿಸಿಕೊಳ್ಳುವ ತಂತ್ರಗಾರಿಕೆ ಅನುಸರಿಸೋದೂ ಇದೆ. ತಮಿಳುನಾಡಿನಲ್ಲಿ ಹೋರಾಟಗಾರ, ನಟ ಮತ್ತು ಸ್ಟಂಟ್ ಮಾಸ್ಟರ್ ಆಗಿ ಗುರುತಿಸಿಕೊಂಡಿರುವ ಕನಲ್ ಕಣ್ಣನ್ ಅಂಥಾದ್ದೇ ಕೆಟಗರಿಗೆ ಸೇರಿಕೊಳ್ಳುವ ಆಸಾಮಿ. ತನ್ನನ್ನು ತಾನು ಆಕ್ಟಿವಿಸ್ಟ್ ಅಂತ ಕರೆದುಕೊಳ್ಳುವ ಕಣ್ಣನ್ ಹಲವಾರು ಬಾರಿ ವಿವಾದಾತ್ಮಕ ಹೇಳಿಕೆಗಳ ಮೂಲಕ ಪ್ರಚಾರ ಪಡೆಯುತ್ತಿರುತ್ತಾನೆ. ಇದೀಗ ತಮಿಳುನಾಡಿನ ಅಸ್ಮಿತೆಯಂತಿರುವ, ಕೋಟ್ಯಂತರ ಮಂದಿಯನ್ನು ಪ್ರಭಾವಿಸಿರುವ ಪ್ರಖರ ವಿಚಾರವಾದಿ ಪೆರಿಯಾರ್ ಅವರ ಪ್ರತಿಮೆ ಧ್ವಂಸಗೊಳಿಸುವಂತೆ ಹೇಳಿಕೆ ಕೊಡುವ ಮೂಲಕ ಬಹುತೇಕರ ಕೆಂಗಣ್ಣಿಗೆ ಗುರಿಯಾಗಿದ್ದಾನೆ. ಕಣ್ಣನ್ ಇಂಥಾ ಪ್ರಚೋದನಾಕಾರಿ ಭಾಷಣಗಳ ಮೂಲಕ ಸದ್ದು ಮಾಡುತ್ತಿರೋದು ಇದೇ ಮೊದಲ ಬಾರಿಯೇನಲ್ಲ. ಆದರೆ ಈ ಬಾರಿ ಮಾತ್ರ ಬಹುಪಾಲು ಮಂದಿಯನ್ನು ಪ್ರಭಾವಿಸಿರುವ, ತಮಿಳುನಾಡಿನಾದ್ಯಂತ ಜನರ ಆಚಾರ ವಿಚಾರಗಳಲ್ಲಿ ನೆಲೆಗೊಂಡು ದೇಶಾದ್ಯಂತ ಪ್ರಭಾವ ಬೀರಿರುವ ಪೆರಿಯಾರ್ ಬಗ್ಗೆ…

Read More

ಇದು ಕಿರುತೆರೆ ಕಿಟಕಿಯಿಂದ ತೆರೆದುಕೊಂಡ ಅಚ್ಚರಿ! ಹೊಸತೇನನ್ನೋ ಸೃಷ್ಟಿಸಬೇಕೆಂಬ ಹಂಬಲಿಕೆಯೇ ಕನ್ನಡ ಚಿತ್ರರಂಗದ ದಿಕ್ಕು ದೆಸೆಗಳನ್ನು ಹಂತ ಹಂತವಾಗಿ ಬದಲಾಯಿಸುತ್ತಾ ಬಂದಿದೆ. ಅದರಲ್ಲಿಯೂ ಹೊಸಬರ ಆಗಮನದೊಂದಿಗೇ ಅಂಥಾದ್ದೊಂದು ಹೊಸ ಗಾಳಿ ಬೀಸಿ ಬರಲಾರಂಭಿಸಿದೆ. ಈ ಹಿನ್ನೆಲೆಯಲ್ಲಿ ನೋಡುವುದಾದರೆ, ಕನ್ನಡ ಚಿತ್ರರಂಗವೀಗ ಮನ್ವಂತರವೊಂದರ ಹೊಸ್ತಿಲಲ್ಲಿದೆ. ಅತ್ತ ಒಂದು ಕಡೆಯಿಂದ ದೇಶಾದ್ಯಂತ ಸದ್ದು ಮಾಡಬಲ್ಲ ಪ್ಯಾನಿಂಡಿಯಾ ಸಿನಿಮಾಗಳು ಅಣಿಗೊಳ್ಳುತ್ತಿವೆ. ಇತ್ತ ಸೀಮಿತ ಬಜೆಟ್ಟಿನಲ್ಲಿಯೇ ವಿಶ್ವರೂಪ ದರ್ಶನ ಮಾಡಬಲ್ಲ ಕಸುವಿರುವಂಥಾ ಚಿತ್ರಗಳೂ ತಯಾರಾಗುತ್ತಿವೆ. ಆ ಸಾಲಿನಲ್ಲಿ ದಾಖಲಾಗುವ ಎಲ್ಲ ಗುಣಲಕ್ಷಣಗಳನ್ನೂ ಒಳಗೊಂಡಿರುವ ಚಿತ್ರ ವಿಕಿಪೀಡಿಯಾ. ಸೀರಿಯಲ್ ರೈಟರ್ ಆಗಿ ಯಶಸ್ವಿಯಾಗಿರುವ ಸೋಮು ಹೊಯ್ಸಳ ನಿರ್ದೇಶನದ ಈ ಚಿತ್ರ ಇದೇ ತಿಂಗಳ ಇಪ್ಪತ್ತಾರನೇ ತಾರೀಕಿನಂದು ರಾಜ್ಯಾದ್ಯಂತ ತೆರೆಗಾಣುತ್ತಿದೆ. ಕೆಲವೊಂದಷ್ಟು ಸಿನಿಮಾಗಳು ಶೀರ್ಷಿಕೆಯಿಂದಲೇ ಸೆಳೆದು ಬಿಡುತ್ತವೆ. ಅದರ ಮೂಲಕವೇ ಈ ಸಿನಿಮಾ ಯಾವ ಬಗೆಯದ್ದು? ಅದರ ಕಥೆ ಎಂಥಾದ್ದಿರಬಹುದು? ಅಂತೆಲ್ಲ ಆಲೋಚನೆಗೆ ಹಚ್ಚುತ್ತವೆ. ಸದ್ಯ ವಿಕಿಪೀಡಿಯಾ ಸುತ್ತಲೂ ಅಂಥಾದ್ದೇ ಚರ್ಚೆಗಳು ಹಬ್ಬಿಕೊಂಡಿವೆ. ಇತ್ತೀಚೆಗೆ ಬಿಡುಗಡೆಯಾಗಿದ್ದ ಟ್ರೈಲರ್ ಅಂತೂ ವಿಕಿಪೀಡಿಯಾ…

Read More

ಶಿವಮೊಗ್ಗ ಸುಬ್ಬಣ್ಣನ ನೆನಪಿನಲ್ಲಿ… ಎಂಬತ್ತರ ದಶಕದ ಆಚೀಚಿನ ಕಾಲಘಟ್ಟದಲ್ಲಿ ತಮ್ಮ ಅಮೋಘ ಕಂಠಸಿರಿಯಿಂದ, ಅಗೋಚರವಾಗಿ ಜನಮಾಸವನ್ನು ಕಾಡಿದ ಒಂದಷ್ಟು ಸಂಗೀ ದಿಗ್ಗಜರಿದ್ದಾರೆ. ಆ ಸಾಲಿನಲ್ಲಿ ಮುಂಚೂಣಿಯಲ್ಲಿ ನೆಲೆ ಕಂಡುಕೊಂಡಿದ್ದವರು ಖ್ಯಾತ ಗಾಯಕ ಶಿವಮೊಗ್ಗ ಸುಬ್ಬಣ್ಣ. ಓರ್ವ ಗಾಯಕರಾಗಿ ಮಾತ್ರವಲ್ಲದೇ, ಜೀವಪರ ಚಿಂತನೆಯ ವ್ಯಕ್ತಿಯಾಗಿಯೂ ಗಮನ ಸೆಳೆದಿದ್ದ ಸುಬ್ಬಣ್ಣ ಇನ್ನು ನೆನಪು ಮಾತ್ರ. ತಲೆಮಾರುಗಳಾಚೆಗೂ ತಮ್ಮ ಗಾಯನದಿಂದಲೇ ಪ್ರವಹಿಸುತ್ತಾ ಬಂದಿದ್ದ, ಪ್ರಸ್ತುತವಾಗುಳಿದಿದ್ದ ಅವರು ತಮ್ಮ ಎಂಬತ್ಮೂರನೇ ವಯಸ್ಸಿನಲ್ಲಿ ತೀವ್ರ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಇದು ಸುಗಮ ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಅಂದರೆ ಅದು ಕ್ಲೀಷೆಯಾದೀತೇನೋ. ಅವರ ನಿರ್ಗಮನದಿಂದ ಸೃಷ್ಟಿಯಾಗಿರುವುದು ಎಂದಿಗೂ ನೀಗಲಾರದಂಥಾ ನಿರ್ವಾತ ಸ್ಥಿತಿ. ಸದಾ ಕಾಲವೂ ನಮ್ಮೊಳಗೆಲ್ಲೇ ಅನುರಣಿಸುತ್ತಿದ್ದ ಹಾಡೊಂದು ಇದ್ದಕ್ಕಿದ್ದಂತೆ ಮಾಯವಾದಂಥಾ ವಿಷಾಧವೊಂದು ಶಾಶ್ವತವಾಗಿ ಕನ್ನಡಿಗರ ಎದೆತುಂಬಿಕೊಂಡಿದೆ. ಒಂದು ಕಾಲದಲ್ಲಿ ಈಗಿನಂತೆ ಬೆರಳ ಮೊನೆಗೆ ಹಾಡುಗಳು ಸಿಗುತ್ತಿರಲಿಲ್ಲ. ಅದೊಂಥರಾ ಧ್ಯಾನ. ಆಕಾಶವಾಣಿ ಎಂಬುದು ಸಂಗೀತಾಸಕ್ತರಿಗೆಂದೇ ಸೃಷ್ಟಿಯಾಗಿದ್ದ ವರದಂಥಾ ಮಾಯೆ. ಅದರಲ್ಲಿ ಬರುತ್ತಿದ್ದ ಸುಗಮ ಸಂಗೀತದ ಆಲಾಪ ಆ ಹೊತ್ತಿನಲ್ಲಿ…

Read More

ಕಿರುತೆರೆಯಿಂದ ಹಿರಿತೆರೆಗೆ ಬಂದು ಮಿಂಚಿದ ನಾಯಕ, ನಾಯಕಿಯರದ್ದೊಂದು ದಂಡು ಕನ್ನಡ ಚಿತ್ರರಂಗದಲ್ಲಿದೆ. ಹಾಗೆ ನೋಡಿದರೆ, ಸಿನಿಮಾ ರಂಗಕ್ಕೆ ಹೆಜ್ಜೆಯಿಡುವವರೆಲ್ಲ ಕಿರುತೆರೆಯನ್ನು ಮೊದಲ ಮೆಟ್ಟಿಲೆಂದೇ ಪರಿಭಾವಿಸುತ್ತಾರೆ. ಹಾಗೆ ಧಾರಾವಾಹಿಗಳಲ್ಲಿ ನಟಿಸಿ ಒಂದಷ್ಟು ಹೆಸರು ಮಾಡುತ್ತಲೇ ಸಿನಿಮಾ ರಂಗಕ್ಕೆ ಅಡಿಯಿರಿಸೋದು ಮಾಮೂಲು. ಆದರೆ, ಸಿನಿಮಾ ರಂಗದಲ್ಲಿ ಅದೃಷ್ಟವೆಂಬುದು ಎಲ್ಲರಿಗೂ ಒಲಿದು ಬರೋದಿಲ್ಲ. ಕೆಲವೇ ಕೆಲ ಮಂದಿಯನ್ನು ಮಾತ್ರವೇ ಸಿನಿಮಾರಂಗ ಬರಸೆಳೆದು ಅಪ್ಪಿಕೊಳ್ಳುತ್ತೆ. ಅಂಥಾದ್ದೊಂದು ಬೆಚ್ಚಗಿನ ಅಪ್ಪುಗೆ ಪಡೆಯೋ ಎಲ್ಲ ಲಕ್ಷಣಗಳನ್ನೂ ಹೊಂದಿರುವಾಕೆ ಸುಪ್ರಿತಾ ಸತ್ಯನಾರಾಯಣ್. ಬಹುಶಃ ಈ ಹೆಸರು ಹೇಳಿದರೆ ಬಹುತೇಕರಿಗೀಕೆಯ ಗುರುತು ಹತ್ತೋದು ಕಷ್ಟ. ಸೀತಾವಲ್ಲಭ ಧಾರಾವಾಹಿಯ ನಾಯಕಿ ಎಂದರೆ ಸಾದಾ ಸೀದಾ ಸ್ವರೂಪದ, ಸ್ನಿಗ್ಧ ಸೌಂದರ್ಯದ ಸುಪ್ರಿತಾ ತಮ್ಮ ಮನೆ ಮಗಳೆಂಬಂಥಾ ಭಾವ ಮೂಡಿಕೊಳ್ಳಬಹುದೇನೋ! ಸೀತಾ ವಲ್ಲಭ ಧಾರಾವಾಹಿ ಒಂದಷ್ಟು ಕಂತುಗಳಲ್ಲಿ ಪ್ರಸಾರವಾಗಿತ್ತು. ಅದರ ನಾಯಕಿಯಾಗಿ, ಅನಾಥ ಭಾವ ಹೊದ್ದುಕೊಂಡ ಹುಡುಗಿಯಾಗಿ ನಟಿಸೋ ಮೂಲಕ ಸುಪ್ರಿತಾ ಕಿರುತೆರೆ ಪ್ರೇಕ್ಷಕರ ಮನ ಗೆದ್ದಿದ್ದಳು. ಈ ಹುಡುಗಿ ನಟನೆಯಲ್ಲಿ ದೊಡ್ಡ ಮಟ್ಟಕ್ಕೇರುತ್ತಾಳೆಂಬಂಥಾ ಭರವಸೆ ಕೂಡಾ…

Read More