Author: Santhosh Bagilagadde

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

ಶೋಧ ನ್ಯೂಸ್ ಡೆಸ್ಕ್: ಭಾರತದಲ್ಲಿ ನಡೆಯುತ್ತಾ ಬಂದಿರುವ ಭಯೋತ್ಪಾದಕ ಕೃತ್ಯಗಳಲ್ಲಿ ಪಾಪಿ ಪಾಕಿಸ್ತಾನದ ಕೈವಾಡವಿದೆ ಎಂಬ ಸತ್ಯ ಯಾವತ್ತೋ ಬಟಾಬಯಲಾಗಿದೆ. ಭಾರತದೊಳಗಿನ ಶಾಂತಿಯನ್ನು ಹೇಗಾದರೂ ಮಾಡಿ ಕದಡಬೇಕೆಂಬ ಉದ್ದೇಶದಿಂದ, ಪಾಕ್‌ನ ಆಡಳಿಕಾರರೇ ಒಂದಿಲ್ಲೊ ಂದು ಸಂಚು ರೂಪಿಸುತ್ತಿರುತ್ತಾರೆ. ಇಂಥವರ ಕುಮ್ಮಕ್ಕಿಲ್ಲದೆ ಭಯೋತ್ಪಾದಕ ಕ್ರಿಮಿಗಳು ಭಾರತಡ ಗಡಿಯ ಸುತ್ತ ಸುಳಿಯಲೂ ಸಾಧ್ಯವಿಲ್ಲ. ಈ ಮಾತಿಗೆ ಇದೀಗ ಮತ್ತೊಮ್ಮೆ ಸಾಕ್ಷಿ ಸಿಕ್ಕಿದೆ; ಭಾರತೀಯ ಸೇನೆಯ ಮೇಲೆ ಆತ್ಮಾಹುತಿ ದಾಳಿ ಮಾಡಲು ನೋಡಿ ಬಂಧಿಯಾದ ಉಗ್ರನೊಬ್ಬನ ಸ್ಫೋಟಕ ಹೇಳಿಕೆಯ ಮೂಲಕ! ಹೀಗೆ ಭಾರತೀಯ ಸೇನೆಯ ಮೇಲೆ ಗುಂಡಿನ ದಾಳಿ ನಡೆಸಲೆತ್ನಿಸಿ ತಗುಲಿಕೊಂಡವನು, ಲಷ್ಕರ್ ಎ ತೊಯ್ಬಾ ಸಂಘಟನೆಯ ಭಯೋತ್ಪಾದಕ ತಬಾರಕ್ ಹುಸೇನ್. ಇದೀಗ ಸಾಯ ಒದೆ ತಿಂದು ಆಸ್ಪತ್ರೆಯಲ್ಲಿ ಮಲಗಿರುವ ಹುಸೇನ್ ಒಂದಷ್ಟು ವಿಚಾರವನ್ನು ಅರುಹಿಕೊಂಡಿದ್ದಾನೆ. ಅದರ ಆಧಾರವಾಗಿ ಹೇಳೋದಾದರೆ, ಈತನಿಗೆ ಮೂವತ್ತು ಸಠಾವಿರ ಕೊಟ್ಟು ಇಂಥಾದ್ದೊಂದು ಕೃತ್ಯ ಎಸಗುವಂತೆ ಸುಪಾರಿ ಕೊಟ್ಟವನು ಪಾಕಿಸ್ತಾನ ಸೇನೆಯ ಕರ್ನಲ್. ಆತ ಯೂನಸ್! ಇದೇ ತಿಂಗಳ ಇಪ್ಪತ್ತೊಂದರಂದು ನೌಶೇರಾ…

Read More

ವಿಕ್ರಾಂತ್ ರೋಣ ಚಿತ್ರದಲ್ಲಿ ರಾರಾ ರಕ್ಕಮ್ಮ ಸಾಂಗಿಗೆ ಮೈ ಬಳುಕಿಸುತ್ತಾ, ಕರ್ನಾಟಕದಲ್ಲಿಯೂ ಪ್ರಸಿದ್ಧಿ ಪಡೆದುಕೊಂಡಾಕೆ ಜಾಕ್ವೆಲಿನ್ ಫರ್ನಾಂಡಿಸ್. ಬಾಲಿವುಡ್ಡಲ್ಲಿ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದರೂ ಈಕೆಗೆ ಅಂದುಕೊಂಡಂತೆ ನೆಲೆಗಾಣಲು ಸಾಧ್ಯವಾಗಿರಲಿಲ್ಲ. ಆ ಬಳಿಕ ಈಕೆ ಸುದ್ದಿಯಲ್ಲಿದ್ದದ್ದೆಲ್ಲ ನಟ ಸಲ್ಮಾನ್ ಖಾನ್ ಜೊತೆಗಿಒನ ಅಫೇರಿನ ವಿಚಾರದಲ್ಲಿಯೇ. ಇಂಥಾ ಜಾಕ್ವೆಲಿನ್ ಇದೀಗ ಇನ್ನೂರು ಕೋಟಿ ಕಿಮ್ಮತ್ತಿನ ಮಹಾ ಮೋಸವೊಂದರಲ್ಲಿ ತಗುಲಿಕೊಂಡಿದ್ದಾಳೆ. ಈ ಇನ್ನೂರು ಕೋಟಿ ವಂಟನೆಯ ಇಕ್ಕಳದಿಂದ ಬಿಡಿಸಿಕೊಳ್ಳಲಾರದೆ ಒದ್ದಾಡುತ್ತಿದ್ದಾಳೆ. ಸದ್ಯಕ್ಕೆ ಈ ಕೇಸಿನ ಸುತ್ತ ಇಡಿ ಅಧಿಕಾರಿಗಳು ಗಸ್ತು ಹೊಡೆಯುತ್ತಿರೋದನ್ನು ಗಮನಿಸಿದರೆ ರಾರಾ ರಕ್ಕಮ್ಮ ಅಂದವಳಿಗೆ ಜೈಲುವಾಸ ಫಿಕ್ಸಾದಂತಿದೆ! ರಾಷ್ಟ್ರೀಯ ಮಟ್ಟದಲ್ಲಿ ಹೈ ಪ್ರೊಫೈಲ್ ವಂಚಕನಾಗಿ ಕುಖ್ಯಾತಿ ಪಡೆದಿರುವವನು ಸುಕೇಶ್ ಚಂದ್ರಶೇಖರ್. ಹೈಫೈ ಜನರನ್ನು ಪರಿಚಯ ಮಾಡಿಕೊಂಡು, ನಾನಾ ರೂಪದಲ್ಲಿ ಯಾಮಾರಿಸಿ ಕಾಸು ಪೀಕುವುದು ಸುಕೇಶನ ವಂಚನೆಯ ವರಸೆ. ಇಂಥಾ ಸುಕೇಶ ಇತ್ತೀಚೆಗೆ ಇನ್ನೂರು ಕೋಟಿ ವಂಚನೆ ಪ್ರಕರಣದಲ್ಲಿ ಇಡಿ ಕಣ್ಣಿಗೆ ಬಿದ್ದಿದ್ದ. ಈ ಪ್ರಕರಣದ ಸಂಬಂಧವಾಗಿ ವಿಸ್ತೃತವಾದ ತನಿಖೆ ನಡೆಸಿರುವ ಇಡಿ ಅಧಿಕಾರಿಗಳು…

Read More

ತನ್ನ ಸಮ್ಮೋಹಕ ಗಾಯನದಿಂದ ದೇಶ ವಿದೇಶಗಳಲ್ಲಿಯೂ ಹೆಸರುವಾಸಿಯಾಗಿರುವವರು ಅರಿಜಿತ್ ಸಿಂಗ್. ಪ್ರೇಮ, ವಿರಹ ಸೇರಿದಂತೆ ಎಲ್ಲ ಭಾವಗಳಿಗೂ ಸಾಥ್ ಕೊಡುವಂಥಾ ಹಾಡುಗಳ ಮೂಲಕವೇ ಮಿಲಿಯಾಂತರ ಅಭಿಮಾನಿಗಳನ್ನೂ ಅರಿಜಿತ್ ಸಿಂಗ್ ಪಡೆದುಕೊಂಡಿದ್ದಾರೆ. ಈವತ್ತಿಗೂ ವಿದೇಶಗಳಲ್ಲಿಯೂ ಭಾರೀ ಬೇಡಿಕೆ ಹೊಂದಿರುವ ಈ ಗಾಯಕನ ಹೊಸಾ ಹಾಡೊಂದಕ್ಕಾಗಿ ಹಾತೊರೆಯುವ ಮನಸುಗಳಿದ್ದಾವೆ. ಆತ ಹಾಡಿರುವ ಹಾಡುಗಳಲ್ಲಿ ಕಳೆದು ಹೋಗಿ ಮೈಮರೆಯುವ ಸಂಗೀತ ಪ್ರೇಮಿಗಳಿದ್ದಾರೆ. ಹೀಗೆ ಜನಪ್ರಿಯತೆಯ ಅಲೆಯಲ್ಲಿ ಮಿಂದೇಳುತ್ತಿರುವ ಅರಿಜಿತ್ ಸಿಂಗ್ ಇದೀಗ ಸಮಾಜಮುಖಿ ಕಾರ್ಯವೊಂದಕ್ಕೆ ಮುಂದಾಗುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅರಿಜಿತ್ ಸಿಂಗ್ ಇಂಗ್ಲಿಶ್ ಕಲಿಕಾ ಕ್ಲಾಸ್‌ಗಳನ್ನು ಆರಂಭಿಸಿ, ಆ ಮೂಲಕ ಅವಶ್ಯಕತೆ ಇರುವ ಯುವಕ ಯುವತಿಯರಿಗೆಲ್ಲ ದಾರಿ ದೀಪವಾಗುವಂಥಾ ನಿರ್ಧಾರವನ್ನು ಕೈಗೊಂಡಿದ್ದಾರೆ. ಇದಕ್ಕಾಗಿ ಮುರ್ಶಿದಾಬಾದ್‌ನ ಪ್ರಸಿದ್ಧ ನರ್ಸಿಂಗ್ ಕಾಲೇಜೊಂದನ್ನು ಸಂಪರ್ಕಿಸಿದ್ದಾರೆ. ಅರಿಜಿತ್ ಸಿಂಗ್ ಅವರ ಒಳ್ಳೆ ಉದ್ದೇಶವನ್ನು ಮನಗಂಡಿರುವ ಆ ಕಾಲೇಜಿನ ಆಡಳಿತ ಮಂಡಳಿಯವರು, ತಮ್ಮ ಕಾಲೇಜಿನ ಒಂದಷ್ಟು ಕೊಠಡಿಗಳನ್ನು ಬಿಟ್ಟುಕೊಡಲು ಒಪ್ಪಿಗೆ ಕೊಟ್ಟಿದ್ದಾರಂತೆ. ಅಂದಹಾಗೆ ಈ ಕೊಠಡಿಗಳಲ್ಲಿ ಸಂಜೆ ಆರರಿಂದ, ರಾತ್ರಿ…

Read More

ಪ್ರಧಾನಿ ನರೇಂದ್ರ ಮೋದಿ ದರ್ಬಾರಿನಲ್ಲಿ ಪ್ರಜಾಪ್ರಭುತ್ವದ ಅಸಲೀ ಆಶಯಗಳು ಮಣ್ಣುಪಾಲಾಗುತ್ತಿವೆ ಅಂತೊಂದು ಆರೋಪ ದೇಶವ್ಯಾಪಿ ಕೇಳಿ ಬರುತ್ತಿದೆ. ಪ್ರಜಾಪ್ರಭುತ್ವದಲ್ಲಿ ಆಡಳಿತ ಪಕ್ಷದಷ್ಟೇ ಪ್ರತಿಪಕ್ಷಗಳ ಅವಶ್ಯಕತೆಯೂ ಇದೆ. ಪ್ರತಿಪಕ್ಷಗಳು ದುರ್ಬಲಗೊಂಡರೆ, ಆಡಳಿತಪಕ್ಷ ಹಗ್ಗ ಕಡಿದ ಗೂಳಿಯಂತಾಗುತ್ತದೆ ಎಂಬುದು ವಾಸ್ತವ. ಸೂಕ್ಷ್ಮವಾಗಿ ಗಮನಿಸಿದರೆ, ಮೋದಿ ಪಟಾಲಮ್ಮು ವಿಪಕ್ಷಗಳನ್ನು ದುರ್ಬಲಗೊಳಿಸೋದನ್ನೇ ಪ್ರಧಾನ ಉದ್ದೇಶವಾಗಿಸಿಕೊಂಡಂತಿದೆ. ಈ ಪ್ರಕ್ರಿಯೆಗೆ ಬಿಜೆಪಿ ಅತ್ಯಂತ ಪರಿಣಾಮಕಾರಿಯಾಗಿ ಐಟಿ ಸೆಲ್ ಅನ್ನು ಬಳಸಿಕೊಳ್ಳುತ್ತಿದೆ. ಅದರ ಫಲವಾಗಿಯೇ ರಾಹುಲ್ ಗಾಂಧಿಯನ್ನು ಅಸಮರ್ಥ, ಪಪ್ಪು ಅಂತೆಲ್ಲ ಮೂದಲಿಸುವ ಪ್ರಯತ್ನಗಳು ಅವ್ಯಾಹತವಾಗಿ ನಡೆಯುತ್ತಿವೆ. ಇದೀಗ ರಾಹುಲ್ ಗಾಂಧಿಗೆ ಅಂಟಿಕೊಂಡಿರುವ ಪಪ್ಪು ಎಂಬ ಮೂದಲಿಕೆಯ ಬಗ್ಗೆ ಬಾಲಿವುಡ್ ನಟಿ ಸ್ವರ ಭಾಸ್ಕರ್ ಬಿಡುಬೀಸಾಗಿ ಮಾತಾಡಿದ್ದಾಳೆ. ಎಲ್ಲರೂ ಕೂಡಾ ರಾಹುಲ್ ಗಾಂಧಿಯನ್ನು ಪಪ್ಪು ಅಂತ ಕರೆಯಲಾರಂಭಿಸಿದ್ದರು. ಈ ಮೂಲಕವೇ ರಾಜಕೀಯವಾಗಿ, ವ್ಯಕ್ತಿಗತವಾಗಿ ಅವರನ್ನು ಹಣಿಯಲು ಪ್ರಾರಂಭಿಸಿದ್ದರು. ಆದರೀಗ ಜನರಿಗೆ ಮೆಲ್ಲಗೆ ವಾಸ್ತವಾಂಶದ ಅರಿವಾಗುತ್ತಿದೆ. ಪಪ್ಪುವಿನ ಮೇಲೀಗ ಎಲ್ಲರಿಗೂ ನಂಬಿಕೆ ಮೂಡಿಕೊಂಡಿದೆ ಅನ್ನೋದು ಸ್ವರ ಭಾಸ್ಕರ್ ಮಾತಿನ ಸಾರಾಂಶ. ಮುಂದುವರೆದು ಮಾತಾಡಿರುವ…

Read More

ಸೂಪರ್ ಸ್ಟಾರ್ ರಜನೀಕಾಂತ್ ಸದಾ ಸುದ್ದಿ ಕೇಂದ್ರದಲ್ಲಿರುವ ನಟ. ಅವರು ಸಿನಿಮಾವೊಂದರಲ್ಲಿ ಬ್ಯುಸಿಯಾಗಿದ್ದರೂ, ಅದರ ನಡುವೆ ಕೊಂಚ ಬಿಡುವಾಗಿದ್ದರೂ ಅವರ ಸುತ್ತ ಒಂದಷ್ಟು ಸುದ್ದಿಗಳು ಗಿರಕಿ ಹೊಡೆಯುತ್ತಲೇ ಇರುತ್ತವೆ. ಇತ್ತೀಚಿನ ದಿನಗಳಲ್ಲಿ ರಜನಿ ಮಾನಸಿಕವಾಗಿ ನೊಂದು ಮಾತಾಡುವ ಮೂಲಕ ಒಂದಷ್ಟು ಚರ್ಚೆಗೀಡಾಗಿದ್ದರು. ಝೀರೋ ಪರ್ಸೆಂಟಿನಿಂದ ನಟನಾಗಿ ಮೇಲೆದ್ದು ಬಂದು, ಸೂಪರ್ ಸ್ಟಾರ್ ಆದ ರಜನೀಕಾಂತ್ ಬಾಯಲ್ಲಿ ಅಂಥಾ ಮಾತುಗಳನ್ನು ಕೇಳಿದ ಮಂದಿ ಒಂದಷ್ಟು ಕಸಿವಿಸಿಗೊಳಗಾದದ್ದು ನಿಜ. ಆದರೆ, ಇಂಥಾ ಯಾವುದೇ ತೊಳಲಾಟಗಳೂ ತನ್ನ ವೃತ್ತಿ ಬದುಕಿಗೆ ಬ್ರೇಕ್ ಹಾಕದಂತೆ ಎಚ್ಚರ ವಹಿಸುತ್ತಲೇ ಬಂದವರು ರಜನೀಕಾಂತ್. ಅವರೀಗ ಎಲ್ಲ ತಳಮಳಗಳನ್ನೂ ಕೊಡವಿಕೊಂಡು, ಮತ್ತದೇ ಹುರುಪಿನೊಂದಿಗೆ ಎದ್ದು ನಿಂತಿದ್ದಾರೆ. ಅದರ ಫಲವಾಗಿಯೇ ಅವರ ಮುಂದಿನ ಚಿತ್ರ ‘ಜೈಲರ್’ ದೊಡ್ಡ ಮಟ್ಟದಲ್ಲಿ ಸೌಂಡು ಮಾಡಲಾರಂಭಿಸಿದೆ! ರಜನೀಕಾಂತ್ ಈಗೊಂದಷ್ಟು ವರ್ಷಗಳಿಂದ ಪುಷ್ಕಳವಾದೊಂದು ಗೆಲುವು ಕಾಣದೆ ತತ್ತರಿಸಿದಂತಿತ್ತು. ಅವರನ್ನು ಅತೀವವಾಗಿ ಮೆಚ್ಚಿಕೊಳ್ಳುವ, ಆರಾಧಿಸುವ ಮಂದಿಗೂ ಅದೊಂದು ಕೊರಗು ಬಿಡದೇ ಕಾಡುತ್ತಿರೋದು ಸತ್ಯ. ಇಂಥಾ ಹೊತ್ತಿನಲ್ಲಿಯೇ ರಜನೀ ಆಂತರಿಕ ತೊಳಲಾಟದಿಂದ…

Read More

ಕೊರೋನಾ ಬಾಧೆ ಕನ್ನಡ ಚಿತ್ರರಂಗವನ್ನು ಅದ್ಯಾವ ಪರಿಯಾಗಿ ಹಣಿದು ಹಾಕಿದೆಯೆಂದರೆ, ಆ ಕಾಲಘಟ್ಟದಲ್ಲಿ ಚಿತ್ರರಂಗದಲ್ಲಿಯೇ ಅನ್ನ ಕಂಡುಕೊಂಡಿದ್ದ ಬಹುತೇಕ ಮಂದಿ ಪಡಿಪಾಟಲು ಪಟ್ಟಿದ್ದರು. ಅದೆಷ್ಟೋ ಮಂದಿಯ ಕನಸುಗಳು ಮಿಸುಕಾಡಲೂ ಸಾಧ್ಯವಾಗದೆ ಅಸುನೀಗಿದ್ದವು. ಅರ್ಧಂಬರ್ಧ ಚಿತ್ರೀಕರಣವಾಗಿದ್ದ ಚಿತ್ರಗಳು ಮುಂದುವರೆಯಲಾರದೆ ಮುಗ್ಗರಿಸಿದವು. ನಿಖರವಾಗಿ ಹೇಳಬೇಕೆಂದರೆ, ಕೊರೋನಾ ಎಂಬುದು ಜೀವದ ಜೊತೆಗೆ ಕನಸುಗಳನ್ನೂ ಕೂಡಾ ಕೊಂದು ಕೆಡವಿತ್ತು. ಇಂಥಾ ವಿಷಮ ವಾತಾವರಣದಲ್ಲಿಯೂ ಉಸಿರುಳಿಸಿಕೊಂಡ, ಸಾವರಸಿಕೊಂಡು ಮೇಲೆದ್ದು ನಿಂತ ಒಂದಷ್ಟು ಸಿನಿಮಾಗಳೀಗ ಬಿಡುಗಡೆಯ ಹಾದಿಯಲ್ಲಿವೆ. ಹಾಗೆ ಸಂದಿಗ್ಧ ವಾತಾವರಣದ ಎಲ್ಲ ಪ್ರಹಾರಗಳನ್ನೂ ದಕ್ಕಿಸಿಕೊಂಡು, ಮೇಲೆದ್ದು ನಿಂತು ಹ್ಞೂಂಕರಿಸಲು ಅಣಿಯಾಗಿರುವ ಚಿತ್ರ ‘ಮರ್ದಿನಿ’! ಹೀಗೆ ಸಾಗಿ ಬಂದು ಇದೇ ಸೆಪ್ಟೆಂಬರ್ ಹದಿನಾರರಂದು ಬಿಡುಗಡೆಗೊಳ್ಳುತ್ತಿರುವ ಮರ್ದಿನಿ, ಕಿರಣ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರ. ಹೊಸಬರ ಆಗಮನವಾದರೆ, ಅದರೊಂದಿಗೆ ಹೊಸತನದ ಆಗಮನವೂ ಆಗುತ್ತದೆಂಬ ನಂಬಿಕೆ ಇದೆಯಲ್ಲಾ? ಅದನ್ನು ಮತ್ತೆ ನಿಜವಾಗಿಸುವಂತೆ ಕಿರಣ್ ಶೆಟ್ಟಿ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರಂತೆ. ಮರ್ದಿನಿ ಎಂಬ ಹೆಸರಿನಲ್ಲಿಯೇ ಒಂದು ರಗಡ್ ಫೀಲ್ ಇದೆ. ಅದುವೇ…

Read More

ಎಲ್ಲರನ್ನೂ ಮರುಳಾಗಿಸಲಿದೆ ಮಾಯಾಜಾಲದ ಕಥೆ! ಕನ್ನಡ ಚಿತ್ರರಂಗದಲ್ಲೀಗ ಹೊಸತನದ ಪರ್ವಕಾಲ ಆರಂಭವಾಗಿದೆ. ಒಂದಷ್ಟು ಅಡಚಣೆಗಳಾಚೆಗೂ ಇದೀಗ ಚಿತ್ರರಂಗ ಕಳೆಗಟ್ಟಿಕೊಂಡಿದೆ. ಕೊರೋನಾ ಕಂಟಕ ಕಾಡಿಸಿದರೂ ದೃತಿಗೆಡದೆ ತಯಾರಾದ ಒಂದಷ್ಟು ಭಿನ್ನ ಚಿತ್ರಗಳೀಗ ಬಿಡುಗಡೆಗೆ ತಯಾರಾಗಿ ನಿಂತಿವೆ. ಇದೇ ಹೊತ್ತಿನಲ್ಲಿ ಮತ್ತೊಂದಷ್ಟು ವಿಶಿಷ್ಟ ಕಥಾನಕದ ಸಿನಿಮಾಗಳು ಆರಂಭವಾಗುತ್ತಿವೆ. ಇತ್ತೀಚೆಗಷ್ಟೇ ಮುಹೂರ್ತ ಕಂಡಿರುವ ‘ಇತ್ಯಾದಿ’ ಎಂಬ ಚಿತ್ರ ಆ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತದೆ. ಇತ್ಯಾದಿ ಎಂಬುದೇ ಯಾವುದೋ ಹೊಸಾ ಹೊಳಹೊಂದರ ಆದಿಯಂತೆ ಧ್ವನಿಸೋದು ಅಚ್ಚರಿಯೇನಲ್ಲ. ಈ ಟೈಟಲ್ಲು ಕೇಳುತ್ತಲೇ ಪರಿಚಿತ ಭಾವವೊಂದು ಮೂಡಿಕೊಳ್ಳುತ್ತೆ. ಆದರೆ ಅದರಳಗಿನ ಕಥೆ ಮತ್ತು ಅದನ್ನು ನಿರೂಪಿಸ ಹೊರಟಿರುವ ರೀತಿಗಳೆಲ್ಲವೂ ಮಾಮೂಲಿ ಧಾಟಿಯದ್ದಲ್ಲ! ಇದೇ ತಿಂಗಳ ಹತ್ತೊಂಬತ್ತನೇ ತಾರೀಕಿನಂದಿ ಇತ್ಯಾದಿ ಚಿತ್ರದ ಮುಹೂರ್ತ ಸಮಾರಂಭ ನೆರವೇರಿದೆ. ಇದು ಯುವ ನಿರ್ದೇಶಕ ವಿಕಾಸ್ ನಾಗರಾಜ್ ಬಿ.ಎನ್ ಅವರ ಎರಡನೇ ಹೆಜ್ಜೆ. ಈ ಹಿಂದೆ ‘ಬೆಟ್ಟದಾಸೆ’ ಅಂತೊಂದು ಆರ್ಟ್ ಮೂವಿ ನಿರ್ದೇಶನ ಮಾಡಿ ಸೈ ಅನ್ನಿಸಿಕೊಂಡಿದ್ದ ವಿಕಾಸ್, ಈ ಬಾರಿ ಸಸ್ಪೆನ್ಸ್ ಥ್ರಿಲ್ಲರ್, ಮಿಸ್ಟೀರಿಯಸ್…

Read More

ಶೋಧ ನ್ಯೂಸ್ ಡೆಸ್ಕ್: ಇಡೀ ದೇಶದಲ್ಲಿಂದು ಹವಾಮಾನ ವೈಪರೀತ್ಯದ ಮನ್ಸೂಚನೆಗಳು ವ್ಯಾಪಕವಾಗಿಯೇ ಕಾಣಿಸಲಾರಂಭಿಸಿದೆ. ಏಕಾಏಕಿ ಮೇಘಸ್ಫೋಟದಂಥಾ ವಿದ್ಯಮಾನಗಳು ಇತ್ತೀಚಿನ ವರ್ಷಗಳಲ್ಲಿ ವ್ಯಾಪಕವಾಗಿ ಘಟಿಸುತ್ತಿವೆ. ಇದೆಲ್ಲವೂ ಮುಂದೆ ಬಂದೆರಗಲಿರುವ ಘನ ಘೋರ ದಿನಗಳ ಸ್ಯಾಂಪಲ್ಲುಗಳೆಂಬಂತೆ ಪರಿಸರವಾದಿಗಳು, ವಿಜ್ಞಾನಿಗಳು ಅಭಿಪ್ರಾಯ ಪಡುತ್ತಿದ್ದಾರೆ. ಇದಕ್ಕೆ ಸ್ಪಷ್ಟ ಸಾಕ್ಷಿ ಎಂಬಂತೆ ಇದೀಗ ಹಿಮಾಚಲ ಪ್ರದೇಶವೂ ಸೇರಿದಂತೆ ನಾನಾ ಕಡೆಗಳಲ್ಲಿ ಮೇಘಸ್ಫೋಟಗಳಾಗುತ್ತಿವೆ. ಹಿಮಾಚಲ ಪ್ರದೇಶದ ಧರ್ಮಶಾಲಾ ಪ್ರದೇಶದಲ್ಲಿ ಕೇವಲ ಹನ್ನೆರಡು ಗಂಟೆಗಳ ಅವಧಿಯಲ್ಲಿ ಸುರಿದ ಮಳೆಯ ಪ್ರಮಾಣ ಕಂಡು ಸರ್ವರೂ ಹೌಹಾರಿದ್ದಾರೆ! ಇದೀಗ ಇಡೀ ಹಿಮಾಚಲ ಪ್ರದೇಶದಾದ್ಯಂತ ಬಾರೀ ಮಳೆಯಾಗುತ್ತಿದೆ. ಅದರಲ್ಲಿಯೂ ಧಮ ಶಾಲಾದಲ್ಲಿ ರಾತ್ರಿ ಒಂಬತ್ತರಿಂದ ಬೆಳಗ್ಗೆ ಒಂಬತ್ತು ಗಂಟೆಯ ಅವಧಿಯಲ್ಲಿ ೩೩೩ ಮಿಲಿ ಮೀಟರ್ ಮಳೆಗಾಗಿ ಬಿಟ್ಟಿದೆ. ಇದು ನಿಜಕ್ಕೂ ಅಚ್ಚರಿದಾಯಕ ಬೆಳವಣಿಗೆಯೇ. ಇದನ್ನಿಟ್ಟುಕೊಂಡು ಹವಾಮಾನ ತಜ್ಞರು ನಾನಾ ದಿಕ್ಕಿನಲ್ಲಿ ವಿಶ್ಲೇಷಣೆ ನಡೆಸುತ್ತಿದ್ದಾರೆ. ಹಾಗಾದರೆ, ಇಂಥಾ ವರ್ಷಧಾರೆ ಹಿಮಾಚಲ ಪ್ರದೇಶದಲ್ಲಿ ಈ ಹಿಂದೆಂದೂ ಸುರಿದಿಲ್ಲವಾ ಎಂಬ ನಿಟ್ಟಿನಲ್ಲಿಯೂ ಒಂದು ಸರ್ವೆ ನಡೆಸಿದ್ದಾರೆ. ಅದರ ಫಲಿತಾಂಶ ಇದು…

Read More

ಶೋಧ ನ್ಯೂಸ್ ಡೆಸ್ಕ್: ದೇಶಾದ್ಯಂತ ಅಬ್ಬರಿಸಿದ್ದ ಮುಂಗಾರು ಮಳೆ, ಹಿಂಗಾರು ಆರಂಭವಾಗುತ್ತಲೇ ತುಸು ಶಾಮತವಾದಂತಿತ್ತು. ಮೊದಲ ಮಳೆಯಿಂದಲೇ ಗರಿಬಿಚ್ಚಿಕೊಂಡಿದ್ದ ಅನಾಹುತಗಳಿಂದಾಗಿ ತತ್ತರಿಸಿ ಹೋಗಿದ್ದ ದೇಶವಾಸಿಗಳು ಇದೀಗ ಕೊಂಚ ನಿರಾಳವಾದಂತಿದ್ದರು. ಆದರೆ ವರುಣ ಅದೇಕೋ ಆ ನೆಮ್ಮದಿಯನ್ನು ಮತ್ತೆ ಕಸಿದುಕೊಳ್ಳುವ ಶಪಥ ಮಾಡಿದಂತಿದೆ. ಇದರ ಭಾಗವಾಗಿಯೇ ದೇಶಾದ್ಯಂತ ಅಲ್ಲಲ್ಲಿ ಮತ್ತೆ ಮಳೆ ಆರ್ಭಟಿಸುತ್ತಾ, ಜನ ಜೀವನವನ್ನು ಆಪೋಶನ ತೆಗೆದುಕೊಳ್ಳುತ್ತಿದೆ. ಈ ಮುಂಗಾರು ಹಿಮಾಚಲಪ್ರದೇಶಕ್ಕೆ ಆರಂಭದಲ್ಲಿಯೇ ಶಾಕ್ ಕೊಟ್ಟಿತ್ತು. ಅದರಿಂದ ಜನ ಚೇತರಿಸಿಕೊಳ್ಳುವ ಮುನ್ನವೇ ಇದೀಗ ಮತ್ತೆ ಅಲ್ಲಿ ಅನಾಹುತಗಳ ಸರಣಿ ಶುರುವಾಗಿದೆ. ಅದರಲ್ಲಿಯೂ ಪ್ರವಾಸಿಗರನ್ನು ಸದಾ ಸೆಳೆಯುವ ಸುಂದರ ತಾಣವಾದ ಕುಲುವಿನಲ್ಲೀಗ ಭೂ ಕುಸಿತದ ಪ್ರಮಾಣ ಅತಿಯಾಗುತ್ತಿದೆ. ಅಲ್ಲಿ ಕೊಡಗನ್ನೇ ಮೀರಿಸುವ ಪ್ರಮಾಣದಲ್ಲಿ ವ್ಯಾಪಕವಾಗಿ ಭೂ ಕುಸಿತ ಸಂಭವಿಸುತ್ತಿವೆ. ಇದರಿಂದಾಗಿ ಇಲ್ಲಿನ ಪ್ರಮುಖ ಸಂಪರ್ಕ ರಸ್ತೆಗಳು ಕುರುಹೂ ಇಲ್ಲದಂತೆ ಕುಸಿತ ಕಂಡಿವೆ. ಅದೆಷ್ಟೋ ಮನೆಗಳ ಮೇಲೆ ಗುಡ್ಡ ಕುಸಿದಿದೆ. ಮತ್ತಷ್ಟು ಮನೆಗಳು ಧರಾಶಾಯಿಯಾಗಿವೆ. ಇದೆಲ್ಲದರಿಂದಾಗಿ, ದಿನದೊಪ್ಪತ್ತಿನಲ್ಲಿಯೇ ಕುಲು ಪ್ರದೇಶದಲ್ಲಿ ಭೂಕುಸಿತಕ್ಕೆ ಇಪ್ಪತ್ತೇಳಕ್ಕೂ ಅಧಿಕ…

Read More

ಆವಿಷ್ಕಾರಗಳು ಹೆಚ್ಚಾದಂತೆಲ್ಲ ನಿಷ್ಟ ಪ್ರವೃತ್ತಿಗಳೂ ಮೇರೆ ಮೀರುತ್ತಿವೆ. ಇದರಿಂದಾಗಿ ಜನ ಸಾಮಾನ್ಯರ ಖಾಸಗೀ ಬದುಕೂ ಕೂಡಾ ಸೇಫ್ ಅಲ್ಲ ಎಂಬಂಥಾ ವಾತಾವರಣವೂ ಸೃಷ್ಟಿಯಾಗಿ ಬಿಟ್ಟಿದೆ. ಅದರಲ್ಲಿಯೂ ವಿಶೇಷವಾಗಿ ಸ್ಮಾರ್ಟ್ ಆದ ಸ್ಪೈ ಕ್ಯಾಮೆರಾಗಳನ್ನು ಬಳಸಿ, ಮಹಿಳೆಯರ ಖಾಸಗೀ ದೃಷ್ಯಗಳನ್ನು ಸೆರೆ ಹಿಡಿದು ಬ್ಲಾಕ್‌ಮೇಲ್ ಮಾಡುವ ದುಷ್ಟ ಮನಃಸ್ಥಿತಿ ದೇಶಾದ್ಯಂತ ಮೇರೆ ಮೀರುತ್ತಿದೆ. ಅದೆಷ್ಟೇ ಕಠಿಣ ಕಾನೂನು ಕ್ರಮಗಳನ್ನು ಕೈಗೊಂಡರೂ ಇಂಥಾ ವಿಕೃತಿ ವಿಜೃಂಭಿಸುತ್ತಲೇ ಇದೆ. ಅದರ ಭಾಗವಾಗುವಂಥಾ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ. ತನ್ನೊಂದಿಗೆ ಕೆಲಸ ಮಾಡುತ್ತಿದ್ದ ಸಹೋದ್ಯೋಗಿ ಸ್ನೇಹಿತೆಯನ್ನೇ ಇಂಥಾದ್ದೊಂದು ವಿಕೃತಿಯ ಮೂಲಕ ವ್ಯಕ್ತಿಯೋರ್ವ ಕಾಡಿದ್ದಾನೆ. ಮೂವತ್ತು ವರ್ಷದ ಆ ಆಸಾಮಿಗೆ ಉದ್ಯೋಗದ ಸ್ಥಳದಲ್ಲಿಯೇ ಮಹಿಳೆಯೊಬ್ಬರು ಸ್ನೇಹಿತೆಯಾಗಿದ್ದರು. ಬೆಳ್ಳೂರಿನಲ್ಲಿ ವಾಸಜವಿದ್ದ ಆ ಮಹಿಳೆ ಕೂಡಾ ಅವನನ್ನು ಗೆಳೆಯ ಎಂದೇ ಹಚ್ಚಿಕೊಂಡಿದ್ದರು ಹಾಗೆ ಕೊಟ್ಟ ಸಲುಗೆಯನ್ನೇ ದುರುಪಯೋಗಪಡಿಸಿಕೊಂಡಿದ್ದ ಆ ಕ್ರಿಮಿ, ಮೊಬೈಲ್ ಚಾರ್ಜರಿನಲ್ಲಿ ಸ್ಪೈ ಕ್ಯಾಮೆರಾ ಅಳವಡಿಸಿ, ಆ ಮೂಲಕ ಆ ಮಹಿಳೆಯ ಖಾಸಗೀ ವೀಡಿಯೋಗಳನ್ನು ಸೆರೆ ಹಿಡಿದಿದ್ದಾನೆ. ನಂತರ ಅದನ್ನಿಟ್ಟುಕೊಂಡು ಪರಿ…

Read More