ಕೊರೋನಾ ಕರಿಛಾಯೆಯ ನಡುವೆ ಮಂಕಾದಂತಿದ್ದ ಒಂದಷ್ಟು ಚಿತ್ರಗಳೀಗ ಸಾವರಿಸಿಕೊಂಡು ಬಿಡುಗಡೆಯ ಅಂಚಿಗೆ ಬಂದು ನಿಂತಿದೆ. ಹಾಗೆ ನೋಡಿದರೆ, ಹೀಗೆ ಕೊರೋನಾ ಕಾಲದಲ್ಲಿ ಗ್ರಹಣ ಕವುಚಿಕೊಂಡ ಸಿನಿಮಾಗಳದ್ದೇ ಮತ್ತೊಂದು ಸಿನಿಮಾಕ್ಕಾಗುವಷ್ಟು ದುರಂತ ಕಥೆಗಳಿದ್ದಾವೆ. ಅರೆಬರೆ ಚಿತ್ರೀಕರಣಗೊಂಡಿದ್ದ ಸಿನಿಮಾಗಳದ್ದೇ ಒಂದು ಕಥೆಯಾದರೆ, ಇನ್ನೇನು ಬಿಡುಗಡೆಗೆ ದಿನಾಂಕ ನಿಗಧಿಯಾಗಿದ್ದ ಚಿತ್ರಗಳದ್ದು ಮತ್ತೊಂದು ವ್ಯಥೆ. ಹಾಗೆ ೨೦೨೦ರ ಏಪ್ರಿಲ್ ತಿಂಗಳ ಆಸುಪಾಸಲ್ಲಿ ಬಿಡುಗಡೆಗೆ ಸಿದ್ಧವಾಗಿ, ಹಠಾತ್ ಲಾಕ್‌ಡೌನಿನಿಂದಾಗಿ ಮರೆಗೆ ಸರಿದಿದ್ದ ಚಿತ್ರಗಳ ಸಾಲಿನಲ್ಲಿ ‘೯ ಸುಳ್ಳು ಕಥೆಗಳು’ ಚಿತ್ರ ಪ್ರಧಾನವಾಗಿ ಗುರುತಿಸಿಕೊಳ್ಳುತ್ತದೆ. ವರ್ಷಗಳ ಹಿಂದಿನಿಂದಲೇ ರಿಷಭ್ ಶೆಟ್ಟಿ ಹಾಡಿದ್ದೊಂದು ಹಾಡು ಮತ್ತು, ಟೀಸರ್, ಟ್ರೈಲರ್‌ಗಳ ಮೂಲಕ ಭರವಸೆ ಮೂಡಿಸಿದ್ದ ಈ ಚಿತ್ರ ಮುಂದಿನ ವಾರ ಅಂದರೆ, ೯ನೇ ತಾರೀಕಿನಂದು ರಾಜ್ಯಾದ್ಯಂತ ಬಿಡುಗಡೆಗೊಳ್ಳುತ್ತಿದೆ. ನವರಸಗಳ ಆಧಾರದಲ್ಲಿ ಒಂಬತ್ತು ದಿಕ್ಕಿನ, ಒಂಬತ್ತು ಬಗೆಯ ವಿಭಿನ್ನ ಕಥಾಗುಚ್ಛಗಳನ್ನೊಳಗೊಂಡಿರುವ ಚಿತ್ರ ‘೯ ಸುಳ್ಳು ಕಥೆಗಳು’. ಶೃಂಗಾರ, ಹಾಸ್ಯ, ಕರುಣ, ರೌಧ್ರ, ವೀರ, ಭಯಾನಕ, ಅದ್ಭುತ, ಬೀಭತ್ಸ ಹಾಗೂ ಶಾಂತರಸಗಳ ಒಂಬತ್ತು ಕಥೆಯೊಂದಿಗೆ ಮಂಜುನಾಥ್…
Author: Santhosh Bagilagadde
ಯಾವುದೇ ಆಡಂಬರದ ಹಂಗಿಲ್ಲದೆ ಕೆಲ ಚಿತ್ರಗಳು ಸೈಲೆಂಟಾಗಿ ತಯಾರುಗೊಂಡು ಬಿಡುಗಡೆಗೆ ಸನ್ನದ್ಧವಾಗುತ್ತವೆ. ಆ ಮೂಲಕವೇ ಪರಿಣಾಮಕಾರಿಯಾಗಿ ಪ್ರೇಕ್ಷಕರನ್ನು ಸೆಳೆದುಕೊಳ್ಳುವಲ್ಲಿಯೂ ಯಶಸ್ವೀಯಾಗುತ್ತವೆ. ಆ ಯಾದಿಯಲ್ಲಿ ರಣವ್ಯೂಹ ಚಿತ್ರವೂ ಸೇರಿಕೊಳ್ಳುತ್ತೆ. ಇದೀಗ ರಣವ್ಯೂಹದ ಟ್ರೈಲರ್ ಮತ್ತು ಹಾಡುಗಳು, ಕಲಾವಿದರ ಸಂಘದಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದ ಮೂಲಕ ಬಿಡುಗಡೆಗೊಂಡಿವೆ. ಖ್ಯಾತ ನಿರ್ಮಾಪಕರೂ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರೂ ಆಗಿರುವ ಭಾ.ಮಾ ಹರೀಶ್ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಟ್ರೈಲರ್ ಮತ್ತು ಹಾಡುಗಳು ಮೂಡಿಬಂದಿರುವ ರೀತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಲೇ, ಇಡೀ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಶ್ರೀ ಶಿರಡಿ ಸಾಯಿಬಾಬಾ ಮೀವೀಸ್ ಬ್ಯಾನರಿನಡಿಯಲ್ಲಿ ವೇಣುಕುಮಾರ್ ಎಂ.ಜಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಶ್ರೀಪತಿ ಪೂಜಾರಿ, ಶ್ರುತಿ ಹರೀಶ್ ಮತ್ತು ಮಂಜುಳಾ ಸಹ ನಿರ್ಮಾಪಕರಾಗಿ ಸಾಥ್ ಕೊಟ್ಟಿದ್ದಾರೆ. ಎಸ್.ಎಸ್ ಶಂಕರ್‌ನಾಗ್ ವಿಭಿನ್ನವಾದ, ಸಂಕೀರ್ಣವಾದ ಕಥಾ ಹಂದರದೊಂದಿಗೆ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರಂತೆ. ಮನುಷ್ಯರೆಲ್ಲರಲ್ಲಿ ಅಡಕವಾಗಿರುವಂಥಾ ಅಸಂಗತವಾದ ವ್ಯಕ್ತಿತ್ವ, ಮನಃಸ್ಥಿತಿಗಳ ಗಹನ ವಿಚಾರಗಳೊಂದಿಗೆ ರಣವ್ಯೂಹದ ಕಥೆ ಸುತ್ತಿಕೊಂಡಿದೆ. ಯಾವುದೇ…
ಆಗಾಗ ನಾನಾ ಅವತಾರಗಳಲ್ಲಿ ಪ್ರತ್ಯಕ್ಷರಾಗುತ್ತಾ, ಒಂದಷ್ಟು ವಿವಾದದ ಮೂಲಕ ಸದ್ದು ಮಾಡುತ್ತಿರುವಾತ ಕಾಳಿಮಠದ ಸ್ವಾಮೀಜಿಯಾಗಿ ಗುರುತಿಸಿಕೊಂಡಿರುವ ರಿಷಿಕುಮಾರ. ಮೂಲರ್ತ ಡ್ಯಾನ್ಸರ್ ಕೂಡಾ ಆಗಿರುವ ರಿಷಿ, ಒಂದು ಸಿನಿಮಾದ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ ಅಂತೊಂದು ಸುದ್ದಿ ವರ್ಷಗಳ ಹಿಂದೆಯೇ ಹಬ್ಬಿಕೊಂಡಿತ್ತು. ಆ ನಂತರದಲ್ಲಿ ಸದ್ದೇ ಇಲ್ಲದೆ ಒಪ್ಪ ಓರಣವಾಗಿ ಚಿತ್ರೀಕರಣ ಮುಗಿಸಿಕೊಂಡಿದ್ದ ಈ ಚಿತ್ರವೀಗ ಇದೇ ವಾರ ಬಿಡುಗಡೆಗೊಳ್ಳಲು ಸನ್ನದ್ಧವಾಗಿದೆ. ಸದ್ಯದ ಮಟ್ಟಿಗೆ ಸಮಾಜಮುಖಿಯಾದ, ಒಂದೊಳ್ಳೆ ಕಥಾಹಂದರದೊಂದಿಗೆ ತಯಾರುಗೊಂಡಿರುವ ‘ಸರ್ವಂ ನಾಟ್ಯಮಯಂ’ ಎಂಬ ಈ ಚಿತ್ರ ಎಲ್ಲಾ ವರ್ಗದ ಪ್ರೇಕ್ಷಕರಿಗೂ ಹಿಡಿಸುವಂತೆ ಮೂಡಿ ಬಂದಿದೆಯಂತೆ. ಡಿಎಂಕೆ ಆಡ್ ಜೋನ್ ಬ್ಯಾನರಿನಡಿಯಲ್ಲಿ ಮನೋಜ್ ವರ್ಮಾ ನಿರ್ಮಾಣ ಮಾಡಿರುವ ಈ ಚಿತ್ರವನ್ನು, ವಿಜಯನಗರ ಮಝು ಅಂತಲೇ ಹೆಸರಾಗಿರುವ ಮಂಜುನಾಥ್ ಬಿ.ಎನ್ ನಿರ್ದೇಶನ ಮಾಡಿದ್ದಾರೆ. ಶೀರ್ಷಿಕೆ ಕೇಳಿದಾಕ್ಷಣವೇ ಇದು ನಾಟ್ಯದ ಭೂಮಿಕೆಯಲ್ಲಿ ಜರುಗುವ ಕಥಾನಕವನ್ನೊಳಗೊಂಡ ಚಿತ್ರವೆಂಬ ವಿಚಾರ ಸ್ಪಷ್ಟವಾಗುತ್ತದೆ. ಈಗ ಒಂದೇ ಆವೇಗದ ಚಿತ್ರಗಳ ಜಮಾನ. ಇಂಥಾದ್ದರ ನಡುವೆ ಯಾವುದೋ ಗಹನವಾದ ವಿಚಾರಗಳೊಂದಿಗೆ, ಮನಮುಟ್ಟುವಂತೆ ಈ ಚಿತ್ರ ಮೂಡಿ…
ಶೋಧ ನ್ಯೂಸ್ ಡೆಸ್ಕ್: ಹೊತ್ತಿನ ಕೂಳಿಗಾಗಿ ಮೈ ಬಗ್ಗಿಸಿ ದುಡಿಯೋ ಅದೆಷ್ಟೋ ಜೀವಗಳ ಮೇಲೆ ಉಳ್ಳವರು ಪ್ರಹಾರ ನಡೆಸುವಂಥಾ ಘಟನಾವಳಿಗಳು ಆಗಾಗ ನಡೆಯುತ್ತಿರುತ್ತವೆ. ಇಂಥಾ ಬಡಪಾಯಿ ಜೀವಗಳ ಮೇಲೆ ಆಕ್ರಮಣ ನಡೆಸಿ, ಹಿಂಸಿಸಿದರೆ ಖದೀಮರಿಗೆ ಅದೆಂಥಾ ಸುಖ ಸಿಗುತ್ತದೋ ಗೊತ್ತಿಲ್ಲ. ಅಂತೂ ಕಷ್ಟಪಟ್ಟು ದುಡಿದು ತಿನ್ನುವವರನ್ನು ಪರಿ ಪರಿಯಾಗಿ ಕಾಡುವಂಥಾ ವಿಕೃತಿ ಎಲ್ಲೆಡೆ ಮೇಳೈಸಿಕೊಂಡಿದೆ. ಇಂಥಾದ್ದೇ ಒಂದು ಘಟನೆಯೀಗ ಉತ್ತರ ಪ್ರದೇಶದಲ್ಲಿಒ ನಡೆದು ಹೋಗಿದೆ. ಹರಿದ ನೋಟನ್ನು ತೆಗೆದುಕೊಳ್ಳಲು ನಿ೮ರಾಕರಿಸಿದ್ದ ಫಿಜ್ಜಾ ಡೆಲಿವರಿ ಹುಡುಗನ ಮೇಲೆ ನಶೆಯೇರಿಸಿಕೊಂಡಿದ್ದ ಗ್ಯಾಂಗೊಂದು ಗುಂಡು ಹಾರಿಸಿಬಿಟ್ಟಿದೆ. ಮೊನ್ನೆ ದಿನ ಎಂದಿನಂತೆ ಶಹಜಹಾನ್ ಪುರದ ಆ ಫಿಜ್ಜಾ ಡೆಲಿವರಿ ಬಾಯ್ ಕಾರ್ಯಾರಂಭ ಮಾಡಿದ್ದಾನೆ. ಶಹಜಹಾನ್‌ಪುರ ಆತನ ಪಾಲಿಗೆ ಚಿರಪರಿಚಿತ. ಸರಿರಾತ್ರಿಯ ಹೊತ್ತಾದರೂ ಕೂಡಾ ಯಾವುದೇ ಅಂಜಿಕೆ, ಹೆದರಿಕೆ ಇಲ್ಲದೆ ಆತ ಫಿಜ್ಜಾ ಡೆಲಿವರಿ ಮಾಡುತ್ತಿದ್ದ. ಹೀಗಿರುವಾಗಲೇ ಮೊನ್ನೆ ದಿನ ಆತನಿಗೊಂದು ಆರ್ಡರ್ ಬಂದಿದೆ. ಹೇಳಿದ ಸಮಯಕ್ಕೆ ಸರಿಯಾಗಿ ಆ ಹುಡುಗ ಡೆಲಿವರಿ ಕೊಟ್ಟಿದ್ದಾನೆ. ಈ ಹಂತದಲ್ಲಿ ಫಿಜ್ಜಾ…
ಮೇರೆ ಮೀರಿಕೊಂಡಿರುವ ರಾಜಕೀಯ ವೈಷಮ್ಯದ ನಡುವೆ ಮನುಷ್ಯತ್ವವೇ ಮರೆಯಾಗಿ ಬಿಟ್ಟಿದೆ. ಇಲ್ಲಿ ಕೊಲೆ, ಹೊಡದಾಟ ಬಡಿದಾಟಗಳೆಲ್ಲವೂ ಸೆನ್ಸಿಟಿವ್ ವಿಚಾರಗಳಾಗುಳಿದಿಲ್ಲ. ಅದೂ ಕೂಡಾ ರಾಜಕೀಯ ಅಸ್ವಿತ್ವಕ್ಕಾಗಿನ ಹೋರಾಟದಂತೆ, ಬಲಪ್ರದರ್ಶನದಂತೆಯೇ ಬಿಂಬಿಸಲ್ಪಡುತ್ತಿದೆ. ಇಂಥಾ ರಾಕ್ಷಸೀಯ ಕೃತ್ಯಗಳನ್ನು ಪಕ್ಷಾಧಾರಿತವಾಗಿ ಬೆಂಬಲಿಸುವಂಥಾ ಹೀನ ಮನಃಸ್ತಿತಿ ನಿಜಕ್ಕೂ ಪ್ರಜ್ಞಾವಂತರಲ್ಲೊಂದು ಆತಂಕ ಹುಟ್ಟಿಸಿಬಿಟ್ಟಿದೆ. ಸೈದ್ಧಾತಿಕ ಭಿನ್ನಾಭಿಪ್ರಾಯ, ಪಕ್ಷ ಭೇದಗಳಿಗೆಲ್ಲ ಕೈ ಮಿಲಾಯಿಸೋದು, ಜೀವ ತೆಗೆಯುವುದೇ ಅಂತಿಮ ಫಲಿತಾಂಶ ಎಂಬಂಥಾ ಅನಾಹುತಕಾರಿ ಮನಃಸ್ಥಿತಿ ವೇಗವಾಗಿ ಹಬ್ಬುತ್ತಿದೆ. ಅದರ ಭಾಗವಾಗಿಯೇ ಇಂದೀಗ ಮಧ್ಯಪ್ರದೇಶದ ಇಂಧೋರ್‌ನಲ್ಲಿ ಕಾಂಗ್ರೆಸ್ ಕಾರ್ಪೋರೇಟರ್ ಒಬ್ಬ ಬಿಜೆಪಿ ಮುಖಂಡನನ್ನು ಕೊಲೆ ಮಾಡಲೆತ್ನಿಸಿದ್ದಾನೆ. ಈ ಪ್ರಕರಣದಲ್ಲಿ ಆರೋಪಿಯಾಗಿರುವಾತ, ಇಂಧೋರ್‌ನ ವಾರ್ಡ್ ನಂಬರ್ ಇಪ್ಪತ್ತೆರಡರ ಕಾಂಗ್ರೆಸ್ ಕಾರ್ಪೋರೇಟರ್ ರಾಜು ಭಡೋರಿಯಾ. ರಾಜುವಿಗೂ ಬಿಜೆಪಿ ಮುಖಂಡ ಚಂದು ಶಿಂಧೆ ಎಂಬಾತನಿಗೂ ರಾಜಕೀಯ ಕಾರಣಗಳಿಗಾಗಿ ವೈಮನಸ್ಯ ಮೂಡಿಕೊಂಡಿತ್ತು. ಇವರಿಬ್ಬರ ನಡುವೆ ಸಾಕಷ್ಟು ಸಲ ಮಾರಾಮಾರಿಗಳೂ ಕೂಡಾ ನಡೆದಿದ್ದವು. ಅದನ್ನೇ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದ ಕಾರ್ಪೋರೇಟರ್ ರಾಜು ಭಡೋರಿಯಾ, ಶಿಂಧೆಯನ್ನು ಮುಗಿಸುವ ಪ್ಲಾನು ಮಾಡಿದ್ದ. ಅದರನ್ವಯ ಕೆಲ ದಿನಗಳ…
ಕೆಲವೊಮ್ಮೆ ಚಿತ್ರರಂಗದಲ್ಲಿ ಹಠಾತ್ ಗೆಲುವು ದಾಖಲಾಗಿ ಬಿಡೋದಿದೆ. ಒಂದಷ್ಟು ಮಂದಿ ಅಪಸ್ವರವೆತ್ತಿದರೂ, ಕಂಟೆಂಟಿನ ಬಗ್ಗೆ ವ್ಯಾಪಕ ತಕರಾರುಗಳಿದ್ದರೂ, ಅವುಗಳೇ ಸಿನಿಮಾ ಮಂದಿರ ಹೌಸ್ ಫುಲ್ಲಾಗುವಂತೆ ಮಾಡೋದೂ ಇದೆ. ಅಂಥಾದ್ದೊಂದು ವಾತಾವರಣಕ್ಕೆ ಇತ್ತೀಚಿನ ಉದಾಹರಣೆಯಾಗಿ ದಾಖಲಾಗುವ ಚಿತ್ರ, ತೆಲುಗಿನ ಪುಷ್ಟ. ಇದರೊಳಗೆ ಹೇಳಿಕೊಳ್ಳುವ ಕಥೆಯಾಗಲಿ, ವೈಶಿಷ್ಟ್ಯವಾಗಲಿ ಏನೂ ಇಲ್ಲ ಎಂಬಂಥಾ ಮಾತುಗಳು ಕೇಳಿ ಬಂದಿದ್ದವು. ಆದರೂ ಅಲ್ಲು ಅರ್ಜುನ್ ನಿರ್ವಹಿಸಿದ್ದ ಪಾತ್ರ, ಡೈಲಾಗುಗಳು ಮತ್ತದರ ಸೆಳೆಯುವಂಥಾ ಚಹರೆಗಳೆಲ್ಲವೂ ಸೇರಿಕೊಂಡು ಪುಷ್ಪಾ ದೊಟ್ಟ ಮಟ್ಟದಲ್ಲಿಯೇ ಗೆಲುವು ದಾಖಲಿಸಿತ್ತು. ಈಗಾಗಲೇ ಒಂದಷ್ಟು ಗೆಲುವು ಕಂಡು ಯಶಸ್ವೀ ನಟನೆನಿಸಿಕೊಂಡಿರುವ ಅಲ್ಲು ಅರ್ಜುನ್‌ಗೆ ಪುಷ್ಪ ಬಹುದೊಡ್ಡ ಬ್ರೇಕ್ ನೀಡಿ ಬಿಟ್ಟಿದೆ. ಪಷ್ಪ ಚಿತ್ರ ಪ್ಯಾನಿಂಡಿಯಾ ಲೆವೆಲ್ಲಿನಲ್ಲಿ ಬಿಡುಗಡೆಯಾಗಿ ಸದ್ದು ಮಾಡಿತ್ತು. ಇದರಲ್ಲಿನ ಅಲ್ಲು ಅರ್ಜುನ್ ಹೇಳಿದ್ದ ಬಹುತೇಕ ಡೈಲಾಗುಗಳು ಟ್ರೆಂಡ್ ಸೆಟ್ ಮಾಡಿದ್ದವು. ಇದಾದ ಬಳಿಕ ಅಲ್ಲು ಮುಂದ್ಯಾವ ಚಿತ್ರದಲ್ಲಿ ನಟಿಸುತ್ತಾನೆಂದು ಅಭಿಮಾನಿ ಬಳಗ ಕಾದು ಕೂತಿದೆ. ಈ ನಡುವೆ ಪುಷ್ಪ ಚಿತ್ರದ ನಂತರ ಪ್ಯಾನಿಂಡಿಯಾ ಲೆವೆಲ್ಲಿನ ಹೀರೋನಂತೆ…
ಶಂಕರಣ್ಣನ ಅಭಿಮಾನಿ ಪ್ರಭಾಕರ್ ಬದುಕಿನ ಹಾದಿ… ಶೀರ್ಷಿಕೆಯಲ್ಲಿನ ಸೆಳೆತದಿಂದಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಚಿತ್ರ ಕೌಟಿಲ್ಯ. ಈಗಾಗಲೇ ಪ್ರೇಕ್ಷಕರನ್ನು ನಾನಾ ದಿಕ್ಕಿನಲ್ಲಿ ಸೆಳೆದಿರುವ ಈ ಸಿನಿಮಾ ನಾಳೆ ರಾಜ್ಯಾದ್ಯಂತ ತೆರೆಗಾಣುತ್ತಿದೆ. ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಬಿಡುಗಡೆಯಾಗಿದ್ದ ಈ ಚಿತ್ರದ ಟ್ರೈಲರ್ ನೋಡಿ ಬಹುತೇಕರು ಬೆರಗಾಗಿದ್ದರು. ಯಾವ ಸದ್ದುಗದ್ದಲವೂ ಇಲ್ಲದೆ ಮುಂದುವರೆದು ಬಂದು, ಬಿಡುಗಡೆಯ ಹೊಸ್ತಿಲಿನಲ್ಲಿ ನಿಂತಿದ್ದ ಈ ಚಿತ್ರ ದೊಡ್ಡ ಮಟ್ಟದಲ್ಲಿ ಟಾಕ್ ಕ್ರಿಯೇಟು ಮಾಡಿದ್ದೇ ಈ ಟ್ರೈಲರ್ ಮೂಲಕ. ಕೌಟಿಲ್ಯ ಎಂಬ ಹೆಸರೇ ಚಿತ್ರದೊಳಗೆ ಅಡಕವಾಗಿರುವ ವಿಭಿನ್ನ ಕಥೆ ಮತ್ತು ವೈಶಿಷ್ಟ್ಯಗಳಿಗೆ ಕನ್ನಡಿ ಹಿಡಿಯುವಂತಿದೆ. ಒಟ್ಟಾರೆ ಕಥೆಯ ಬಗ್ಗೆ ಯಾವೊಂದು ಸುಳಿವನ್ನೂ ಬಿಟ್ಟುಕೊಡದ ಚಿತ್ರತಂಡ ಈ ಮೂಲಕ ಕುತೂಹಲವನ್ನು ಮತ್ತಷ್ಟು ತೀವ್ರಗೊಳಿಸಿದೆ. ಹೀಗೆ ಜನಮಾನಸವನ್ನು ಸೆಳೆದಿರುವ ಕೌಟಿಲ್ಯ ಚಿತ್ರದ ಮೂಲಕವೇ ಉತ್ತರಕರ್ನಾಟಕ ಸೀಮೆಯ ಅಪ್ಪಟ ಪ್ರತಿಭೆ ಪ್ರಭಾಕರ ಶೇರಖಾನೆ ನಿರ್ದೇಶಕರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಅರ್ಜುನ್ ರಮೇಶ್ ಮತ್ತು ಪ್ರಿಯಾಂಕಾ ಚಿಂಚೊಳ್ಳಿ ನಾಯಕ, ನಾಯಕಿಯರಾಗಿ ನಟಿಸಿದ್ದಾರೆ. ಉತ್ತರಕರ್ನಾಟಕದಿಂದ ಬಂದು…
ಚಿತ್ರರಂಗದಲ್ಲಿ ಹಣಕಾಸಿಗೆ ಸಂಬಂಧಿಸಿದಂಥಾ ರಂಕಲುಗಳು ಸಂಭವಿಸೋದು ಮಾಮೂಲು. ಅದಕ್ಕೆ ಭಾಷೆಯ ಗಡಿಗಳ ಹಂಗಿಲ್ಲ. ಎಂತೆಂಥಾ ಕ್ರಿಯಾಶೀಲರೂ ಕೂಡಾ ಇಂಥಾ ಹಣಕಾಸಿನ ಲಫಡಾಗಳಲ್ಲಿ ತಗುಲಿಕೊಂಡು, ಹೆಸರು ಕೆಡಿಸಿಕೊಂಡಿದ್ದಿದೆ. ಇದೀಗ ಆ ಸಾಲಿನಲ್ಲಿ ಒಂದಷ್ಟು ವಿವಾದ ಹುಟ್ಟುಹಾಕುವ ಸರದಿ ತಮಿಳಿನಲ್ಲಿ ನಿರ್ದೇಶಕನಾಗಿ ಪ್ರಖ್ಯಾತಿ ಪಡೆದುಕೊಂಡಿರುವ ಲಿಂಗುಸ್ವಾಮಿ ಅಲಿಯಾಸ್ ನಮ್ಮಾಳ್ವರ್ ಲಿಂಗುಸ್ವಾಮಿ ಅವರದ್ದು. ಸಿನಿಮಾ ಒಂದರ ನಿರ್ಮಾಣಕ್ಕೆಂದು ೧.೩ ಕೋಟಿ ಲೋನ್ ಪಡೆದು ಕೈಯೆತ್ತಿದ್ದ ಲಿಂಗುಸ್ವಾಮಿ ವಿರುದ್ಧ ಚೆಕ್ ಬೌನ್ಸ್ ಕೇಸು ದಾಖಲಾಗಿತ್ತು. ಈ ಸಂಬಂಧ ವಿಚಾರಣೆ ನಡೆಸಿದ್ದ ಕೋರ್ಟ್ ಹತ್ತು ಸಾವಿರ ದಂಡ ಪಾವತಿ ಅಥವಾ ಆರು ತಿಂಗಳ ಜೈಲು ಶಿಕ್ಷೆ ಅನುಭವಿಸುವಂತೆ ತಾಕೀತು ಮಾಡಿತ್ತು. ಕಡೆಗೂ ಲಿಂಗುಸ್ವಾಮಿ ಹತ್ತು ಸಾವಿರ ಫೈನ್ ಕಟ್ಟಿ ಜೈಲು ವಾಸದಿಂದ ತಪ್ಪಿಸಿಕೊಂಡಿದ್ದಾರೆ. ಲಿಂಗುಸ್ವಾಮಿ ಕಾರ್ತಿ ಮತ್ತು ಸಮಂತಾ ನಟನೆಯ ಎನ್ನಿ ಏಜು ನಾಲ್ ಎಂಬ ಚಿತ್ರವನ್ನು ನಿರ್ಮಾಣ ಮಾಡಿ ನಿರ್ದೇಶನವನ್ನೂ ಮಾಡುತ್ತಿದ್ದಾರೆ. ತಿರುಪತಿ ಬ್ರದರ್ಸ್ ಎಂಬ ಬ್ಯಾನರಿನ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡಿದ್ದ ಲಿಂಗುಸ್ವಾಮಿ, ಅದಕ್ಕಾಗಿ…
ಕೊರೋನಾ ವೈರಸ್ಸು ಸೃಷ್ಟಿಸಿ ಇಡೀ ಜಗತ್ತನ್ನೇ ಸೂತಕದ ಮನೆಯಾಗಿಸಿದ್ದ ಪಾಪಿ ದೇಶ ಚೀನಾ. ಎಲ್ಲವನ್ನೂ ವ್ಯಾವಹಾರಿಕ ದೃಷ್ಟಿಯಿಂದಲೇ ನೋಡುವ ಅಲ್ಲಿನ ಆಡಳಿತ ವ್ಯವಸ್ಥೆಯೀಗ ಆಂತರಿಕ ಸ್ಥಿತಿಯನ್ನು ಹಾಳುಗೆಡವಿದೆ. ಕೊರೋನಾದಿಂದ ಅಲ್ಲಿನ ಜನಸಂಖ್ಯೆಯಲ್ಲಿ ಒಂದಷ್ಟು ಪಾಲು ಇಲ್ಲವಾಗಿದೆ. ಜಗತ್ತಿಗೆ ತೋರಿಸಿಕೊಳ್ಳದಿದ್ದರೂ ನಾನಾ ಒಳ ಬೇಗುದಿಗಳಿಂದ ಹೈರಾಣಾಗಿರುವ ಚೀನಾ ಇದೀಗ ಭೀಕರವಾದ ಮಳೆ ಗಾಳಿಯಿಂದ ಅಕ್ಷರಶಃ ನಲುಗಿ ಹೋಗಿದೆ! ಚೀನಾ ದೇಶ ಕಳೆದೊಂದಷ್ಟು ವರ್ಷಗಳಿಂದ ವ್ಯಾಪಕವಾಗಿ ಪ್ರಾಕೃತಿಕ ವಿಕೋಪಗಳನ್ನು ಎದುರಿಸಿಕೊಂಡು ಬರುತ್ತಿದೆ. ವರ್ಷಗಳ ಹಿಂದೆ ಭೀಕರ ಪ್ರವಾಠಹದಿಂದ ಕೊಚ್ಚಿಹೋಗಿದ್ದ ಅಲ್ಲಿನ ಜನರ ಬದುಕು, ಇದೀಗ ರಣಭೀಕರವಾದ ಚಂಡಮಾರುತ ಮತ್ತು ಅದರ ಫಲವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದ ತತ್ತರಿಸಿದೆ. ಮಾ ಆನ್ ಎಂದು ಹೆಸರಿಸಲಾಗಿರುವ ಈ ಚಂಡಮಾರುತದಿಂದಾಗಿ ಚೀನಾದ ಬಹುಪಾಲು ಪ್ರದೇಶಗಳು ಛಿದ್ರಗೊಂಡಿವೆ. ಇಲ್ಲಿನ ಮೀನುಗಾರಿಕಾ ದೋಣಿಗಳು ಕೊಚ್ಚಿ ಹೋಗಿವೆ. ಆ ರಣ ಗಾಳಿ ಎಲ್ಲವನ್ನೂ ಬಾಚಿಕೊಂಡು ಜನರ ಬದುಕನ್ನು ಬರ್ಬಾದಾಗಿಸಿದೆ. ನೀರು ನುಗ್ಗದ ಸೇಫೆಸ್ಟ್ ಪ್ರದೇಶವೆಂದು ಈ ವರೆಗೆ ಅಂದಿಕೊಂಡಿದ್ದ ಒಂದಷ್ಟು ಏರಿಯಾಗಳೂ ಕೂಡಾ…
ಜೈಲೆಂಬುದು ಪರಿವರ್ತನೆಯ ತಾಣವಿದ್ದಂತೆ. ಆಯಾ ಸಮಯ ಸಂದರ್ಭ ಮತ್ತು ಆಂತರಿಕ ವಿಕೃತಿಯಿಂದ ಅಪರಾಧ ಪ್ರಕರಣಗಳು ಸಂಭವಿಸುತ್ತವೆ. ಅಂಥವರನ್ನು ಕಾನೂನು ಸಮ್ಮತವಾಗಿ ಜೈಲಿಗೆ ತಳ್ಳಿ, ಅಲ್ಲಿ ಒಂದಷ್ಟು ವರ್ಷಗಳ ಕಾಲ ಇರುವಂತೆ ಮಾಡಿ, ಮನಃಪರಿವರ್ತನೆಯಾಗುವಂತೆ ನೋಡಿಕೊಳ್ಳೋದೇ ಜೈಲೆಂಬುದರ ಹಿಂದಿರುವ ಕಾನ್ಸೆಪ್ಟು. ಆದರೆ ಪ್ರತಿಯೊಂದರಲ್ಲಿಯೂ ಕಾಸು ಕೀಳುವ ಕೂಳು ಬಾಕ ಅಧಿಕಾರಿಗಳೇ ಎಲ್ಲಡೆ ತುಂಬಿಕೊಂಡಿರೋದರಿಂದ ಈವತ್ತಿಗೆ ಜೈಲೂ ಕೂಡಾ ಐಷಾರಾಮಿ ಪ್ರದೇಶವಾಗಿದೆ. ಅಲ್ಲಿ ಪ್ರಭಾವೀ ಕೈದಿಗಳು ಕೈಚಾಚಿದರೆ, ಹೊರಜಗತ್ತಿನಲ್ಲಿರುವಂಥಾ ಅಷ್ಟೂ ಸೌಕರ್ಯಗಳು ಬಂದು ಬೀಳುತ್ತವೆ. ಇಂಥಾ ವಾತಾವರಣವಿರೋದರಿಂದಲೇ ಇಂದೋರ್ ಜೈಲಿನಲ್ಲಿ ಮಹಿಳಾ ಕೈದಿಯ ಕೈಲಿ ಹೊಚ್ಚ ಹೊಸಾ ಸ್ಮಾರ್ಟ್ ಫೋನ್ ಸದ್ದು ಮಾಡಿದೆ. ಇಂದೋರ್‌ನ ಜಿಲ್ಲಾ ಕಾರಾಗೃಹದಲ್ಲಿ ಇಂಥಾದ್ದೊಂದು ಕೃತ್ಯ ನಡೆದಿದೆ. ತಿಹಾರ್ ಜೈಲಿನಿಂದ ಮೂವತೈದು ವರ್ಷ ವಯಸ್ಸಿನ ಮಹಿಳಾ ಕೈದಿಯನ್ನು ಕೆಲ ದಿನಗಳ ಹಿಂದೆ ವಿಚಾರಣೆಗಾಗಿ ಇಂದೋರ್ ಜೈಲಿಗೆ ಸ್ಥಳಾಂತರ ಮಾಡಲಾಗಿತ್ತು. ಒಂದಷ್ಟು ಪ್ರಭಾವ ಹೊಂದಿದ್ದ ಈ ಕೈದಿ, ಮಹಿಳಾ ಸಿಬ್ಬಂದಿಗೆ ಕಾಸಿನಾಸೆ ತೋರಿಸಿದ್ದಳು. ಅದಕ್ಕೆ ಮರುಳಾದ ಜೈಲಿನ ಮಹಿಳಾ ಸಿಬ್ಬಂದಿ, ಹೊಸಾ…