Author: Santhosh Bagilagadde

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

ನಿಯಾನ್ ದೀಪಗಳಾಚೆ ಕಾಮದ ಪರಿಷೆ! ಬೆಂಗಳೂರಿನ ತುಂಬಾ ಹರಡಿಕೊಂಡಿರುವ ಬಹುತೇಕ ಪಾರ್ಲರ್ ಹಾಗೂ ಸ್ಪಾಗಳ ಅಸಲೀ ರೂಪವೇ ಬೇರೆಯದ್ದಿದೆ. ಹೊರಗೆ ಸೌಂದರ್ಯ ಕಾಳಜಿಯ ರಂಗು ರಂಗಿನ ಬೋರ್ಡು, ಒಳಗೆ ಕಾಮದ ಕಥಕ್ಕಳಿ… ಇದು ಬೆಂಗಳೂರಿನ ತುಂಬಾ ಹಬ್ಬಿಕೊಂಡಿರುವ ಮಸಾಜ್ ಸೆಂಟರ್ ಅರ್ಥಾತ್ ಸ್ಪಾಗಳ ಅಸಲಿ ಅಂತರಾಳ. ಐಟಿ ಸಿಟಿಯ ನಿಯಾನ್ ದೀಪಗಳಾಚೆಗಿನ ಮಿಣುಕು ಕತ್ತಲಲ್ಲಿ ನಡೆಯುವ ವೇಶ್ಯಾ ದಂಧೆಯದ್ದೇ ಒಂದು ತೂಕವಾದರೆ, ಬೃಹತ್ ಮಹಲುಗಳಲ್ಲಿ ನಡೆಯುವ ಇಂಥಾ ಮಸಾಜ್ ಪಾರ್ಲರುಗಳಲ್ಲಿ ಚಾಲ್ತಿಯಲ್ಲಿರುವ ಸೆಕ್ಸ್ ರ‍್ಯಾಕೆಟ್ಟಿನದ್ದೇ ಮತ್ತೊಂದು ತೂಕ. ಇತ್ತೀಚೆಗಂತೂ ನಗರದ ತುಂಬಾ ಇಂಥಾ ಹೈಟೆಕ್ ವೇಶ್ಯಾ ಅಡ್ಡೆಗಳು ಎಗ್ಗಿಲ್ಲದೆ ದಂಧೆ ನಡೆಸುತ್ತಿವೆ. ಪಿಂಪ್‌ಗಳಂತೂ ಯಾವುದೇ ಭಯವಿಲ್ಲದೆ ಗಿರಾಕಿ ಹುಡುಕಿ ಕಾಸು ಪೀಕುವ ಕೆಲಸದಲ್ಲಿ ಫುಲ್ ಬ್ಯುಸಿ. ಬೆಂಗಳೂರಿನ ಸಖಲ ಏರಿಯಾಗಳಲ್ಲಿಯೂ ಇಂಥಾ ಮಸಾಜ್ ಸೆಂಟರುಗಳು ತಲೆಯೆತ್ತಿವೆ. ಅದರಲ್ಲಿ ಬಹುತೇಕ ವೇಶ್ಯಾ ದಂಧೆಯ ಕಾರಸ್ಥಾನಗಳಾಗಿ ಬದಲಾಗಿವೆ. ಮರ್ಯಾದಸ್ಥರು ವಾಸಿಸುವ ಪ್ರದೇಶಗಳಲ್ಲಿ ಇಂಥಾ ಅಡ್ಡೆಗಳು ತಲೆಯೆತ್ತಿ ನೆಮ್ಮದಿಯಾಗಿ ಓಡಾಡಲೂ ಆಗದ ಪರಿಸ್ಥಿತಿ ಇದೆ. ಇಂಥಾ…

Read More

ಇನ್ನೊಂದಷ್ಟು ವರ್ಷ ಕಳೆಯುತ್ತಲೇ ಬೆಂಗಳೂರಿನ ಬದುಕು ಮತ್ತಷ್ಟು ದುಸ್ತರವಾಗಲಿದೆಯಾ? ಇಂಥಾದ್ದೊಂದು ಪ್ರಶ್ನೆ ಹುಟ್ಟಿಕೊಂಡು ಒಂದಷ್ಟು ವರ್ಷಗಳೇ ಕಳಿದಿವೆ. ಅದರ ಜೊತೆ ಜೊತೆಗೇ ಬೆಂಗಳೂರು ಮತ್ತಷ್ಟು ನಿಗೂಢ ವಾಗುತ್ತಾ, ವಿಕ್ಷಿಪ್ತವಾಗುತ್ತಲೇ ಸಾಗುತ್ತಿದೆ. ಇಲ್ಲಿನ ಯುವಕ ಯುವತಿಯರಲ್ಲಿ ಒಂದಷ್ಟು ಮಂದಿ ಈಗಾಗಲೇ ನಶೆಯ ಜಗತ್ತಿಗೆ ಶರಣೆಂದಿದ್ದಾರೆ. ತೀರಾ ಕಟ್ಟುನಿಟ್ಟಿನ ನೀತಿ ನಿಯಮಾವಳಿ ಜಾರಿಯಿರುವ ಶಾಲಾ ಕಾಲೇಜುಗಳಲ್ಲಿ ಕೂಡಾ ಕುಂತಲ್ಲೇ ಕೈಚಾಚಿದರೂ ಸಲೀಸಾಗಿಯೇ ಬೇಕಿನ್ನಿಸಿದ ಬ್ರಾಂಡಿನ ಡ್ರಗ್ಸ್ ಸಿಗುವಂಥಾ ವಾತಾವರಣವಿದೆ. ಡ್ರಗ್ಸ್ ಚಟಕ್ಕೆ ತುತ್ತಾದವರನ್ನು ಹಾದಿ ಬಿಟ್ಟವರೆಂದು ಜರಿದು ಸುಮ್ಮನಾಗುವುದು ಸಲೀಸಿನ ಸಂಗತಿ. ಆದರೆ ಅದೆಂಥಾ ಮಡಿವಂತಿಕೆಯಕೋಟೆಯನ್ನಾದರೂ ಬೇಧಿಸಿ ಒಳ ನುಗ್ಗಿ ಬಿಡುವಂಥಾ ತೀವ್ರ ಸ್ವರೂಪದಲ್ಲಿ ಡ್ರಗ್ಸ್ ದಂಧೆ ಬೆಳೆದು ನಿಂತಿದೆ. ಯಾವುದು ನಿಶೇಧಿತವೋ ಅಂಥಾದ್ದರ ಕಡೆಗೇ ಹೆಚ್ಚು ಆಕರ್ಷಿತಗೊಳ್ಳುವ ಎಳೇ ಮನಸುಗಳಿರುವ ಶಾಲಾ ಕಾಲೇಜುಗಳಲ್ಲಿಯೂ ಈವತ್ತಿಗೆ ಮಾದಕ ವಸ್ತುಗಳು ಅತ್ಯಂತ ಸಲೀಸಾಗಿಯೇ ಸಿಗುತ್ತಿದೆ. ಇಂದು ನೈಜೀರಿಯಾ, ಆಫ್ರಿಕಾ, ಸೊಮಾಲಿಯಾದಂಥ ದೇಶಗಳ ವಿದ್ಯಾರ್ಥಿಗಳು ಬೆಂಗಳೂರಲ್ಲಿ ಓದಲು ಬಂದರೆ, ಅಂಥವರ ಆರ್ಥಿಕ ಸ್ಥಿತಿಯನ್ನೇ ಎನ್‌ಕ್ಯಾಶ್ ಮಾಡಿಕೊಂಡು ಡೀಲರುಗಳಾಗಿ…

Read More

ಈ ನಟನ ಕಥೆ ಕೇಳಿದರೆ ಕಣ್ಣಾಲಿಗಳು ಹನಿಗೂಡುತ್ತವೆ! ಕೊರೋನಾ ಮಾರಿ ಈ ಮುಂಗಾರಿನಲ್ಲಿ ಮೈಕೈ ತೊಳೆದುಕೊಂಡು ಮಟ್ಟಸವಾಗಿ ಇಡೀ ಜಗತ್ತಿನ ಜನಸಖ್ಯೆಯನ್ನು ಆದಷ್ಟು ಕಡಿಮೆ ಮಾಡಿಯೇ ತೊಲಗಬಹುದಾದ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ. ಎಲ್ಲರೆದೆಯೊಳಗಿನ ಆಶಾವಾದವೆಂಬುದೀಗ ವಾರಗಳ ಗಡಿ ದಾಟಿ ತಿಂಗಳುಗಳಾಚೆಗೆ ಕೈಚಾಚಿಕೊಂಡಿದೆ. ಜನಜೀವನ ಅದ್ಯಾವತ್ತು ಮತ್ತೆ ಸಹಜ ಸ್ಥಿತಿಗೆ ಮರಳಬಹುದೆಂಬ ಆಲೋಚನೆಗಿಳಿದರೆ ಯಾರಿಗೇ ಆದರೂ ಕಿಬ್ಬೊಟ್ಟೆಯಾಳದಿಂದ ಭಯದ ಛಳುಕಲ್ಲದೆ ಬೇರ‍್ಯಾವ ಭರವಸೆಯ ಬೆಳಕೂ ಗೋಚರಿಸುತ್ತಿಲ್ಲ. ಒಂದು ತಿಂಗಳು ಆರ್ಥಿಕವಾಗಿ ಹಿನ್ನಡೆಯಾದರೆ ವರ್ಷಗಟ್ಟಲೆ ಅದರ ಪರಿಣಾಮ ಅನುಭವಿಸುವ ಮಂದಿ ತಿಂಗಳುಗಟ್ಟಲೆ ಖಾಲಿ ಕೂತರೆ ಏನಾಗಬಹುದೆಂಬುದು ಯಾರಿಗಾದರೂ ಅರ್ಥವಾಗೋ ಸಂಗತಿ. ನಿಖರವಾಗಿ ಹೇಳಬೇಕೆಂದರೆ ಈ ಕೊರೋನಾ ಎಲ್ಲ ರೀತಿಯಲ್ಲಿಯೂ ಮನುಷ್ಯಮಾತ್ರರಿಗೆ ಕೇಡುಗಾಲ ತಂದಿಟ್ಟಿದೆ. ಈವತ್ತಿಗೆ ಕೊರೋನಾ ಮಾರಿ ಕೊಂಚ ಶಾಂತವಾದಂತೆ ಕಾಣುತ್ತಿದ್ದರೂ, ಎರಡು ವರ್ಷಗಳ ಅವ್ಯಾಹರತ ಪ್ರಹಾರದಿಂದ ಜಗತ್ತು ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಸದ್ಯ ಪರಿಸ್ಥಿತಿ ಹೇಗಿದೆಯೆಂದರೆ, ಲಾಕ್‌ಡೌನಿನ ಪ್ರಹಾರದ ಆಘಾತದಿಂದ ಜನ ಇನ್ನೂ ಹೊರ ಬಂದಿಲ್ಲ. ಪ್ರಿಯೊಬ್ಬರ ಬದುಕನ್ನೂ ಕೊರೋನಾ ನೆರಳು ಬಾಧಿಸುತ್ತಿದೆ;…

Read More

ನಮ್ಮ ಸುತ್ತ ಪಾಸಿಟಿವ್ ಎನರ್ಜಿ ಇದೆ ಎಂದ ಮೇಲೆ ನೆಗೆಟಿವ್ ಎನರ್ಜಿಯೂ ಇದ್ದೇ ಇರುತ್ತೆ ಅನ್ನೋದು ಹಲವರ ವಾದ. ಈ ನೆಗೆಟಿವ್ ಎನರ್ಜಿ ಅನ್ನೋದು ನಮ್ಮ ನಡುವೆ ದೆವ್ವ, ಭೂತ ಪ್ರೇತ ಬಾಧೆಗಳಾಗಿ ಹಾಸು ಹೊಕ್ಕಾಗಿವೆ. ಅದು ಮೂಢ ನಂಬಿಕೆಗಳ ಸಾಲಿಗೆ ಸೇರಿರೋದರಿಂದ ಅಂಥಾ ಶಕ್ತಿಯೇ ಈ ಜಗತ್ತಿನಲ್ಲಿಲ್ಲ ಎಂಬುದನ್ನು ಸಾಬೀತ ಪಡಿಸುವ ಪ್ರಯತ್ನಗಳೂ ಅವ್ಯಾಹತವಾಗಿ ನಡೆಯುತ್ತಿವೆ. ಅದೆಲ್ಲವನ್ನೂ ಮೀರಿಕೊಂಡು ಇಂಥಾ ನಂಬಿಕೆಗಳು ಆರ್ಭಟಿಸುತ್ತಲೇ ಇದ್ದಾವೆ. ಈವತ್ತಿಗೆ ಅಂಥಾ ನಂಬಿಕೆಗಳು, ಭೂತ ಚೇಷ್ಟೆಗಳು ಹಿಂದಿನ ಪ್ರಮಾಣದಲ್ಲಿಲ್ಲ ಅಂತ ನಾವೆಲ್ಲ ಅಂದುಕೊಳ್ಳುತ್ತೇವೆ. ಅದನ್ನು ಸುಳ್ಳು ಮಾಡುವಂಥಾ ವಿಚಾರಗಳು ಸಾಕಷ್ಟಿವೆ. ಗುಜರಾತ್ ರಾಜ್ಯದ ಕಡಲ ಕಿನಾರೆಯೊಂದು ಈ ಮಾತನ್ನು ಸಾಕ್ಷೀಕರಿಸುವಂತಿದೆ. ಅದು ಗುಜರಾತಿನ ಪ್ರಸಿದ್ಧ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದಾಗಿರೋ ಡುಮಾಸ್ ಕಡಲ ತೀರ. ಕಣ್ಣಿಗೆ ತಂಪೆನಿಸುವ, ಮನಸಿಗೆ ಹಾಯೆನಿಸುವ ವಾತಾವರಣದಿಂದಲೇ ಈ ಬೀಚ್ ವೀಕ್ಯಾತಿ ಗಳಿಸಿಕೊಂಡಿದೆ. ಅರೇಬಿಯನ್ ಸಮುದ್ರದ ಈ ಕಿನಾರೆ ಸೂರತ್ ನಗರದಿಂದ ಇಪ್ಪತ್ತೊಂದು ಕಿಲೋಮೀಟರ್ ದೂರದಲ್ಲಿದೆ. ಈ ಬೀಚ್ ಯಾವಾಗಲೂ ಪ್ರವಾಸಿಗರಿಂದ…

Read More

ನಟ ನಟಿಯರ ಖಾಸಗೀ ಬದುಕಿನ ಬಗ್ಗೆ ಜನಸಾಮಾನ್ಯರಲ್ಲೊಂದು ಕುತೂಹಲ ಸದಾ ಇದ್ದೇ ಇರುತ್ತದೆ. ಈ ಕಾರಣದಿಂದಲೇ ಇವರ ಬದುಕುಗಳು ಆಗಾಗ ರೂಮರ್‌ಗಳಿಗೂ ಆಹಾರವಾಗುತ್ತಲೇ ಇರುತ್ತದೆ. ಆದರೆ ಇಲ್ಲಿನ ಬಹುತೇಕರ ವೈಯಕ್ತಿಕ ಬದುಕು ಅಧ್ವಾನವೆದ್ದುಬಿಟ್ಟಿರುತ್ತೆ. ಇಲ್ಲಿ ಪ್ರೀತಿ, ಪ್ರೇಮ, ಸಂಸಾರ ಸೇರಿದಂತೆ ಯಾವುದೂ ಕೂಡಾ ಹೆಚ್ಚು ದಿನ ಬಾಳಿಕೆ ಬರುವುವಂಥಾದದ್ದಲ್ಲ ಎಂಬ ಮಾತಿದೆ. ಇದಕ್ಕೆ ಅಪವಾದದಂತೆ ಕೆಲವರಿರೋದು ಹೌದಾದರೂ ಮತ್ತುಳಿದವರ ಕಥೆಗಳು ಅದಕ್ಕೆ ಪೂರಕವಾಗಿವೆ. ಅದರಲ್ಲಿಯೂ ನಟಿಯರಂತೂ ಗುಟ್ಟಾಗಿ ಮದುವೆಯಾಗಿ ಸಂಸಾರ ನಡೆಸೋದರಲ್ಲಿ ಫೇಮಸ್ಸು. ಇಲಿಯಾನಾ ಮದುವೆಯಾದ ಸುದ್ದಿ ಇತ್ತೀಚೆಗೆ ಡಿವೋರ್ಸ್ ರೂಮರ್‌ನೊಂದಿಗೇ ಜಾಹೀರಾಗಿತ್ತು. ಇದೀಗ ಮೈನಾ ಖ್ಯಾತಿಯ ನಿತ್ಯಾ ಮೆನನ್ ಸುತ್ತಲೂ ಮದವೆ ವಿಚಾರವಾಗಿ ಅಂಥಾದ್ದೇ ರೂಮರ್ ಹಬೆಯಾಡಲಾರಂಭಿಸಿದೆ. ನಿತ್ಯಾ ಮೆಲನನ್ ಮೂಲ ಕೇರಳದವಳೇ ಆದರೂ ಕನ್ನಡದ ಹುಡುಗಿ. ಕನ್ನಡದ ನಟಿಯರೇ ಕನ್ನಡದಲ್ಲಿ ಮಾತಾಡಲು ತಿಮಿರು ತೋರಿಸುವ ಈ ದಿನಮಾನದಲ್ಲಿ ಅರಳು ಹುರಿದಂತೆ ಸ್ಪಷ್ಟವಾಗಿಯೇ ಕನ್ನಡ ಮಾತಾಡೋ ನಿತ್ಯಾ ಕನ್ನಡಿಗರಿಗೆ ಅಚ್ಚುಮೆಚ್ಚಿನ ನಟಿ. ವಿವಾದಗಳಿಂದ ಸಾಕಷ್ಟು ದೂರವಿರಲು ಪ್ರಯತ್ನಿಸುತ್ತಲೇ ಸಿನಿಮಾ ಮೂಲಕ…

Read More

ದಕ್ಷಿಣಾಫ್ರಿಕಾ ಮೂಲದ ಮಂದಿ ಬೆಂಗಳೂರಲ್ಲಿ ನಡೆಸುತ್ತಿರುವ ಅಕ್ರಮ ದಂಧೆಗಳ ಪಟ್ಟಿ ದೊಡ್ಡದಿದೆ. ಬೆಂಗಳೂರಿನ ಮಂದಿ ಇವರ ಹಾವಳಿ ತಡೆದುಕೊಳ್ಳಲಾರದೆ ಹಿಡಿದು ಬಾರಿಸಿದರೆ ಬೆಂಗಳೂರಲ್ಲಿ ವಾಸ ಮಾಡುತ್ತಿರುವ ದಕ್ಷಿಣಾಫ್ರಿಕಾ ಖಂಡದ ಮಂದಿ ವಿಶ್ವದ ಮಾಧ್ಯಮಗಳ ಮುಂದೆ ನಿಂತು ಅಮಾಯಕರಂತೆ ಪೋಜು ಕೊಡುತ್ತಾರೆ. ಒಂದು ಮಗ್ಗುಲನ್ನೇ ಮುಂದಿಟ್ಟುಕೊಂಡು ಚರ್ಚೆ ನಡೆಸುತ್ತಿರುವ ಭಾರತೀಯ ಮಾಧ್ಯಮಗಳೇ ಬೆಂಗಳೂರಿಗರ ಅಖಂಡ ಸೈರಣೆಗೆ ಮಹಾ ಅವಮಾನ ಎಸಗುತ್ತವೆ. ಆದರೆ ದಕ್ಷಿಣಾಫ್ರಿಕಾ ಮೂಲದ ಆಸಾಮಿಗಳು ಇಲ್ಲಿ ಎಂತೆಂಥಾ ದಂಧೆ ನಡೆಸುತ್ತಿದ್ದಾರೆ, ಅವರು ತಮ್ಮ ಖಂಡದಿಂದ ಇಲ್ಲಿಗೆ ಓದಲು ಬಂದ ವಿದ್ಯಾರ್ಥಿಗಳನ್ನೂ ಹೇಗೆಲ್ಲಾ ಅದಕ್ಕೆ ಬಳಸಿಕೊಳ್ಳುತ್ತಿದ್ದಾರೆಂಬ ಬಗ್ಗೆ ತಲಾಶ್ ನಡೆಸಿದರೆ ಆಘಾತಕಾರಿ ಮಾಹಿತಿಗಳೇ ಹೊರ ಬೀಳುತ್ತವೆ. ವ್ಯಾಪಾರ ವಹಿವಾಟು ಸೇರಿದಂತೆ ನಾನಾ ನೆಪದಿಂದ ಇಲ್ಲಿಗೆ ಬರುವ ಆಫ್ರಿಕಾ ಮೂಲದವರು ವಿಸಾ ಅವಧಿ ಮುಗಿದ ಮೇಲೂ ಇಲ್ಲಿಯೇ ಝಾಂಡಾ ಊರುತ್ತಾರೆ. ಮೊದಲಿಗೆ ಬೆಂಗಳೂರಿಗೆ ಬಂದು ವಿಸಾ ಅವಧಿ ಮುಗಿದ ಮೇಲೆ ಕಾನೂನಿನ ಕಣ್ಣಿಂದ ತಪ್ಪಿಸಿಕೊಳ್ಳಲು ರಾಜ್ಯದ ನಾನಾ ಮೂಲೆಗಳಲ್ಲಿ ಚದುರಿಕೊಳ್ಳುತ್ತಾರೆ. ಈ ನಿಟ್ಟಿನಲ್ಲಿ ಮಾಹಿತಿ…

Read More

ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡುಗಳ ವಂಚನಾ ಜಾಲ ಮತ್ತೊಮ್ಮೆ ಸದ್ದು ಮಾಡಿದೆ. ದೇಶದ ಕೋಟ್ಯಾಂತರ ಬ್ಯಾಂಕ್ ಖಾತೆಗಳಲ್ಲಿನ ಅಷ್ಟೂ ಹಣ ಏಕಾಏಕಿ ಕರಗಿ ಹೋಗಿದ್ದೇ ಗ್ರಾಹಕರೆಲ್ಲ ಕಂಗಾಲೆದ್ದು ಹೋಗಿದ್ದಾರೆ. ರಿಸರ್ವ್ ಬ್ಯಾಂಕ್ ನಯಮಾವಳಿಯ ಪ್ರಕಾರ ಯಾವುದೇ ಬ್ಯಾಂಕ್ ಖಾತೆಯಿಂದ ಗ್ರಾಹಕರಿಗೆ ಗೊತ್ತಿಲ್ಲದಂತೆಬ ಹಣ ಖಾಲಿಯಾದರೆ ಆಯಾ ಬ್ಯಾಂಕುಗಾಳೇ ಆ ಮ,ಒತ್ತ ಭರಿಸಬೇಕೆಂದಿದೆ. ಆ ನಿಯಮದ ಪ್ರಕಾರವೇ ಹೋದರೆ ಬ್ಯಾಂಕುಗಳೇ ಬರಿದಾಗುವ ರೇಂಜಿಗೆ ಇಂಥಾ ಖಾಸಗಿ ಖಾತೆಗಳ ಹಣ ಹೀರಿಕೊಂಡಿದ್ದು ಚಾಲಾಕಿ ಹ್ಯಾಕರ್ಸ್. ಹೈಟೆಕ್ ತಂತ್ರಜ್ಞಾನಗಳನ್ನೆಲ್ಲ ಒಂದು ಹೆಜ್ಜೆ ಮುಂದೆ ನಿಂತು ವಂಚನೆಗೆ ಬಳಸಿಕೊಳ್ಳುವ ಹೈಟೆಕ್ ವಂಚಕರು ತಿಂಗಳೀಚೆಗೆ ದೇಶಾದ್ಯಂತ ನಡೆಸಿರುವ ಕೈಚಳಕ ಕಂಡು ದೇಶಕ್ಕೆ ದೇಶವೇ ಥಂಡಾ ಹೊಡೆದು ಹೋಗಿದೆ. ಅಂದಹಾಗೆ ಈ ವಂಚನಾ ಜಾಲದ ಕಿಂಗ್‌ಪಿನ್ ಭಾರತದವನೇ ಎಂಬುದು ಯಾವತ್ತೋ ಜಾಹೀರಾಗಿದೆ! ಈಗ ಜೇಬಲ್ಲಿ ಹಣ ಇಟ್ಟುಕೊಂಡು ಹೋಗಿ ವ್ಯವಹಾರ ಮಾಡುವವರೇ ಅನಾಗರಿಕರು ಎಂಬಂಥಾ ವಾತಾವರಣವಿದೆ. ದೊಡ್ಡ ದೊಡ್ಡ ಶಾಪಿಂಗ್ ಮಾಲ್‌ಗಳಿಂದ ಮೊದಲ್ಗೊಂಡು ದಿನಸಿ ಅಂಗಡಿ, ಪೆಟ್ರೋಲ್ ಬಂಕ್‌ಗಳವರೆಗೂ ಕ್ರೆಡಿಟ್…

Read More

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಐರಾವತ ಚಿತ್ರದ ಮೂಲಕ ಕನ್ನಡಕ್ಕೆ ಪರಿಚಯವಾಗಿದ್ದ ನಟಿ ಊರ್ವಶಿ ರೌಟೇಲಾ. ಅದಾಗಲೇ ಬಾಲಿವುಡ್‌ನಲ್ಲಿ ಒಂದಿಷ್ಟು ಹೆಸರು ಮಾಡಿಕೊಂಡಿದ್ದ ಊರ್ವಶಿ ಮೊದಲ ಚಿತ್ರದಲ್ಲಿಯೇ ಕನ್ನಡ ಪ್ರೇಕ್ಷಕರಿಗೂ ಇಷ್ಟವಾಗಿ ಬಿಟ್ಟಿದ್ದಳು; ಒಂದಷ್ಟು ಅಭಿಮಾನಿ ಬಳಗವನ್ನೂ ತನ್ನದಾಗಿಸಿಕೊಂಡಿದ್ದಳು. ಐರಾವತ ಹೇಳಿಕೊಳ್ಳುವಂಥಾ ಸಕ್ಸಸ್ ಕಾಣದಿದ್ದರೂ ದರ್ಶನ್ ಮತ್ತು ಊರ್ವಶಿ ರಾಟೇಲಾ ಜೋಡಿ ಮಾತ್ರ ಅಭಿಮಾನಿ ಪ್ರೇಕ್ಷಕರನ್ನು ಸೆಳೆದುಕೊಂಡಿತ್ತು. ಆದರೆ ಆ ನಂತರ ಮತ್ತೆಂದೂ ಊರ್ವಶಿ ಕನ್ನಡದಲ್ಲಿ ಕಾಣಿಸಿಕೊಂಡಿರಲೇ ಇಲ್ಲ. ಹಾಗಾದರೆ ಊರ್ವಶಿ ಐರಾವತ ಚಿತ್ರದ ನಂತರದಲ್ಲಿ ಮತ್ತೆಲ್ಲಿ ಹೋದಳು, ಬಾಲಿವುಡ್ ಸೇರಿದಂತೆ ಬಹುಭಾಷಾ ತಾರೆಯಾಗಿ ಮಿಂಚುತ್ತಿದ್ದಾಳಾ ಎಂಬಿತ್ಯಾದಿ ಪ್ರಶ್ನೆಗಳು ಒಂದಷ್ಟು ಮಂದಿಯಲ್ಲಾದರೂ ಇರಬಹುದು. ಅಷ್ಟಕ್ಕೂ ಹಾಗೆ ಯಾವುದೇ ಭಾಷೆಯಲ್ಲಿ ಮಿಂಚುವಂಥಾ ಎಲ್ಲ ಗುಣ ಲಕ್ಷಣಗಳನ್ನೂ ಹೊಂದಿದ್ದ ಊರ್ವಶಿ ಈಗ ಅವಕಾಶಗಳ ಕೊರತೆ ಎದುರಿಸುತ್ತಿದ್ದಾಳೆ. ಆಕೆಗೆ ಒಂದಷ್ಟು ಅವಕಾಶಗಳು ಸಿಗುತ್ತಿವೆಯಾದರೂ ಅದರಲ್ಲಿನ ಪಾತ್ರಗಳು ಬಟ್ಟೆ ಬಿಚ್ಚ ಪೋಸು ಕೊಡೋದಪಕ್ಕೆ ಮಾತ್ರವೇ ಸೀಮಿತವಾಗಿ ಬಿಟ್ಟಿವೆಯಂತೆ. ಗ್ರೇಟ್ ಗ್ರ್ಯಾಂಡ್ ಮಸ್ತಿ, ಹೇಟ್ ಸ್ಟೋರಿ ೪ ಮುಂತಾದ…

Read More

ಕನ್ನಡದ ಗಿಲ್ಲಿ ಎಂಬೊಂದು ಚಿತ್ರದ ಮೂಲಕ ನಟಿಯಾಗಿ ಪಾದಾರ್ಪಣೆ ಮಾಡಿದ್ದಾಕೆ ರಕುಲ್ ಪ್ರೀತ್ ಸಿಂಗ್. ಜಗ್ಗೇಶ್ ಮಗ ಹೀರೋ ಆಗಿದ್ದ ಆ ಚಿತ್ರ ಹೀನಾಯವಾಗಿ ಗೋತಾ ಹೊಡೆದರೂ, ಅದಾಗಲೇ ಮಾಡೆಲಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿದ್ದ ರಕುಲ್ ಮಾತ್ರ ಭರಪೂರ ಅವಕಾಶಗಳನ್ನು ಗಿಟ್ಟಿಸಿಕೊಂಡಿದ್ದಳು. ತೆಲುಗು, ತಮಿಳು ಸೇರಿದಂತೆ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯಾಗಿ ರೂಪುಗೊಂಡಿದ್ದಳು. ಹೀಗೆ ಏಕಾಏಕಿ ನಟಿಯಾಗಿ ಆಗಮಿಸಿ, ಆ ನಂತರದಲ್ಲಿ ಯಶಸ್ಸಿನ ಉತ್ತುಂಗಕ್ಕೇರಿದ್ದ ರಕುಲ್, ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದದ್ದು ತೆಲುಗು ಚಿತ್ರರಂಗದಲ್ಲಿ. ಬಹುಕಾಲದ ನಂತರ ಮಾಧ್ಯಮವೊಂದರಲ್ಲಿ ಕಾಣಿಸಿಕೊಂಡಿರುವ ರಕುಲ್, ತೆಲುಗು ಚಿತ್ರರಂಗದ ತನ್ನ ವೈಭೋಗದ ದಿನಗಳನ್ನು ಮೆಲುಕು ಹಾಕಿದ್ದಾಳೆ. ಇತ್ತೀಚೆಗೆ ಮಾಧ್ಯಮ ಸಂದರ್ಶನವೊಂದರಲ್ಲಿ ಮಾತಾಡುತ್ತಿದ್ದ ರಕುಲ್, ತೆಲುಗು ಚಿತ್ರರಂಗದಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿದ್ದ ತನ್ನ ವೃತ್ತಿ ಬದುಕಿನ ಬಗ್ಗೆ ಮಾತಾಡಿದ್ದಾಳೆ. ಒಂದು ಕಾಲದಲ್ಲಿ ಬಳುಕುವ ಬಳ್ಳಿಯಂತಿದ್ದ ಈ ಹುಡುಗಿ ತೆಲುಗು ಚಿತ್ರರಂಗದಲ್ಲಿ ಭಾರೀ ಬೇಡಿಕೆ ಹೊಂದಿದ್ದಳು. ವರ್ಷವೊಂದಕ್ಕೆ ಏನಿಲ್ಲವೆಂದರೂ ನಾಲಕೈದು ಚಿತ್ರಗಳಲ್ಲಿಯಾದರೂ ನಟಿಸುತ್ತಿದ್ದಳು. ಹಾಗೆ ನಟಿಸಿದ ಬಹುತೇಕ ಚಿತ್ರಗಳು…

Read More

ಇದ್ದು ಭಿನ್ನ ಜಾಡಿನ ಕ್ರೈಂ ಥ್ರಿಲ್ಲರ್! ರಗಡ್ ಕಥಾನಕದ ಚಿತ್ರವೊಂದು ಸದ್ದೇ ಇಲ್ಲದೆ ಚಿತ್ರೀಕರಣ ಮುಗಿಸಿಕೊಂಡು ಬಿಡುಗಡೆಗೆ ರೆಡಿಯಾಗಿ ನಿಂತಿದೆ. ಈ ಚಿತ್ರ ಪ್ರೇಕ್ಷಕರ ಗಮನ ಸೆಳೆದಿದ್ದು, ಭಾರೀ ಸದ್ದು ಮಾಡಿದ್ದು ಒಂದು ಪೋಸ್ಟರ್ ಮೂಲಕ. ಹೀಗೆ ಅಚ್ಚರಿದಾಯಕವಾಗಿ ಪ್ರೇಕ್ಷಕರನ್ನು ಸೆಳೆದುಕೊಂಡಿರುವ ಚಿತ್ರ ಯೆಲ್ಲೋ ಗ್ಯಾಂಗ್. ಶೀರ್ಷಿಕೆಯಲ್ಲಿಯೇ ನಿಗೂಢವೇನನ್ನೋ ಬಚ್ಚಿಟ್ಟುಕೊಂಡಂತಿರುವ ಯೆಲ್ಲೋ ಗ್ಯಾಂಗ್ಸ್ ಮೂಲಕ ರವೀಂದ್ರ ಪರಮೇಶ್ವರಪ್ಪ ಸ್ವತಂತ್ರ ನಿರ್ದೇಶಕರಾಗಿ ಅಡಿಯಿರಿಸುತ್ತಿದ್ದಾರೆ. ಯೆಲ್ಲೋ ಗ್ಯಾಂಗ್ ಎಂಬ ಶೀರ್ಷಿಕೆಯೇ ಕಥೆಯ ಸುತ್ತಾ ಒಂದಷ್ಟು ಕುತೂಹಲ ಮೂಡಿಸುವಂತಿದೆ. ಈ ಬಗ್ಗೆ ನಿರ್ದೇಶಕ ರವೀಂದ್ರ ಪರಮೇಶ್ವರಪ್ಪ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಒಂದು ಡ್ರಗ್ ಡೀಲ್ ಸುತ್ತಾ ತೆರೆದುಕೊಂಡು, ಆ ನಂತರ ಕಾಸಿನ ಕೇಂದ್ರಿತವಾಗಿ ಬಿಚ್ಚಿಕೊಳ್ಳುವ ರಗಡ್ ಕಥೆಯನ್ನು ಯೆಲ್ಲೋ ಗ್ಯಾಂಗ್ಸ್ ಹೊಂದಿದೆಯಂತೆ. ಇತ್ತೀಚೆಗಷ್ಟೇ ಇದರ ಟೀಸರ್ ಒಂದು ಬಿಡುಗಡೆಗೊಂಡಿತ್ತು. ಈವತ್ತಿಗೆ ಯೆಲ್ಲೋ ಗ್ಯಾಂಗ್ ಬಿಡುಗಡೆಯ ಹೊಸ್ತಿಲಲ್ಲಿ ಈ ಪರಿಯಾಗಿ ನಿರೀಕ್ಷೆ ಮೂಡಿಸಿದೆಯೆಂದರೆ, ಅದರಲ್ಲಿ ಟೀಸರ್ ಪಾಲು ಬೆಟ್ಟದಷ್ಟಿದೆ. ಇದರೊಂದಿಗೆ ಹಬ್ಬಿಕೊಂಡಿರುವ ಕಥೆಯೆಡೆಗಿನ ಕುತೂಹಲವಿದೆಯಲ್ಲಾ? ಅದನ್ನು ಅಕ್ಷರಶಃ…

Read More