ಪ್ರತೀ ಜೀವ ಸಂಕುಲಗಳ ಮೇಲೂ ಪ್ರಹಾರ ನಡೆಸುತ್ತಾ ಸರ್ವನಾಶ ಮಾಡುವ ಮನುಷ್ಯರನ್ನೂ ಕೂಡಾ ಕೆಲ ಪ್ರಾಣಿಗಳು, ಹುಳ ಹುಪ್ಪಟೆಗಳು ಬೆಚ್ಚಿ ಬೀಳಿಸುತ್ತವೆ. ಗಾತ್ರದಲ್ಲಿ ತುಂಬಾನೇ ಪುಟ್ಟದಾದ ಜೀವಿಗಳೂ ಕೂಡಾ ನಮ್ಮನ್ನು ಕನಸಲ್ಲಿಯೂ ಕಾಡಿ ಕಂಗಾಲು ಮಾಡುತ್ತವೆ. ಯಾಕಂದ್ರೆ ಅವುಗಳ ಮೈ ತುಂಬಾ ಒಂದಷ್ಟು ಮಂದಿಯನ್ನು ಒಂದೇ ಸಲಕ್ಕೆ ಕೊಂದು ಬಿಡುವಷ್ಟು ವಿಷವಿರುತ್ತೆ. ಮತ್ತೆ ಕೆಲ ಜೀವಿಗಳು ಆತ್ಮ ರಕ್ಷಣೆಗಾಗಿ ಕಚ್ಚಿ, ಕುಟುಕಿದರೂ ಕೂಡಾ ಆ ನೋವನ್ನು ಸಹಿಸಿಕೊಂಡು ಸುಧಾರಿಸಿಕೊಳ್ಳೋದಕ್ಕೆ ವಾರಗಟ್ಟಲೆ ಬೇಕಾಗುತ್ತೆ. ಮತ್ತೆ ಕೆಲ ಜೀವಿಗಳು ಕಚ್ಚಿದರೆ ಆ ಭಾಗವೇ ಕೊಳೆತು ನಾರುತ್ತೆ. ಅಂಥಾ ಭಯಾನಕ ವಿಷ ತುಂಬಿಕೊಂಡಿರೋ ಜೀವಿಗಳಲ್ಲಿ ಚೇಳು ಪ್ರಧಾನವಾದದ್ದು. ಚೇಳು ಎಂಬುದು ಯಾರನ್ನೇ ಆದರೂ ನಡುಗಿಸಿ ಹಾಕುವಂಥಾ ಗುಣ ಲಕ್ಷಣಗಳನ್ನು ಹೊಂದಿರೋ ಜೀವಿ. ಅದು ಕೊಂಚ ಪೊದೆ ಪ್ರದೇಶದಲ್ಲಿದ್ದುಕೊಂಡು ಮನುಷ್ಯರು ವಾಸವಿರೋ ಪ್ರದೇಶದಲ್ಲಿಯೇ ಕಾಣಿಸಿಕೊಳ್ಳುತ್ತವೆ. ಕೊಂಚ ಯಾಮಾರಿದರೂ ಕುಟುಕಿ ಒಂದಷ್ಟು ದಿನ ನೋವಲ್ಲಿ ವಿಲಗುಡುವಂತೆ ಮಾಡಿ ಬಿಡುತ್ತವೆ. ಒಂದೇ ಒಂದು ಸಲ ಕುಟುಕಿದರೆ ಅಷ್ಟೆಲ್ಲ ಪರಿಣಾಮ ಬೀರೋ…
Author: Santhosh Bagilagadde
ಮಳೆಗೆ ಅದೆಂಥಾ ಮುನಿಸಿತ್ತೋ… ಥೇಟು ನಿನ್ನಂತೆಯೇ ಕಾಡಿ, ಬಾರದೆ ಸತಾಯಿಸಿ ಮತ್ತೆ ಲಯ ಹಿಡಿದಿದೆ. ಮಾಮೂಲಿಯಂತಿದ್ದರೆ ಈ ಹೊತ್ತಿಗೆಲ್ಲಾ ಪೇಪರು ತಿರುವಿದರೂ, ಟಿವಿ ಆನ್ ಮಾಡಿದ್ದರೂ ಮಳೆಯದ್ದೇ ಸುದ್ದಿ. ಅಲ್ಲೆಲ್ಲೋ ಸೇತುವೆಯ ಮೇಲೆ ಹರಿದ ತೊರೆ, ಮತ್ತೆಲ್ಲೋ ಊರಿಗೂರೇ ದ್ವೀಪ, ಅಣೆಕಟ್ಟೆಗಳೆಲ್ಲ ಭರ್ತಿಯಾದ ಸಂತಸ, ಮುಖ್ಯಮಂತ್ರಿಯೋ, ಸಚಿವನೋ ತುಂಬಿದ ಆಣೆಕಟ್ಟೆಗೆ ಬಾಗೀನ ಬಿಡುವ ಸಾಲು ಸಾಲು ಪೋಸು… ಅಂಥಾ ಮುಂಗಾರು ಈ ಸಾರ್ತಿ ಮಾತ್ರ ನಿನ್ನ ಬುದ್ಧಿಯನ್ನೇ ಫಾಲೋ ಮಾಡಿದಂತಿತ್ತು. ಆದರೀಗ ಮತ್ತೆ ಮೋಡಗಟ್ಟಿದೆ. ಮತ್ತೆ ವರ್ಷಧಾರೆಗೆ ಮೈಕೈಚಾಚಿ ನಡೆಯುವ ಸಂಭ್ರಮ. ಮನಸು ಮಂಕಾದಾಗೆಲ್ಲಾ ಕೆನ್ನೆ ಕೆಂಪಾಗಿಸಿಕೊಂಡು ಕಾಯುತ್ತಿದ್ದಂತಿದ್ದ ನನ್ನಿಷ್ಟದ ಸಂಜೆಗಳೂ ಶೀತಲ ಸ್ಪರ್ಶದಿಂದ ತಂಪು ತಂಪು. ಇಂಥಾ ಸಂಜೆಗಳ ಸನ್ನಿಧಾನದಲ್ಲಿ ನಿನ್ನ ಸಾನಿಧ್ಯವೂ ಇದ್ದಿದ್ದರೆ ಅದರ ರಂಗೇ ಬೇರೆಯದ್ದಿರುತ್ತಿತ್ತು! ತುಂಬಾ ಇಷ್ಟದ ಜೀವದ ಧ್ಯಾನದಲ್ಲಿಯೇ ಈ ಮಳೆ ಜಿಬುರುವ ಸಂಜೆಗಳನ್ನ ಕಳೆಯುವುದು, ಮಧುರ ನೀರವದ ರಾತ್ರಿಗಳನ್ನು ಆಸ್ವಾದಿಸುವ ಆಹ್ಲಾದವೇ ಬೇರೆ. ಬಹುಶಃ ನೀ ನಂಗಿಂಥಾದ್ದೊಂದು ಶಿಕ್ಷೆ ಕೊಟ್ಟಿದ್ದೀಯೆಂದು ಬೀಗುತ್ತಿದ್ದಿರಬಹುದೇನೋ. ಈ…
ಹಿರಿ ಜೀವದ ಒಡಲೊಳಗಿದೆ ಬೇರೆಯದ್ದೇ ಲೆಕ್ಕಾಚಾರ! ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣರಿಗೆ ಭಾರತೀಯ ಜನತಾ ಪಾರ್ಟಿಯೂ ಬೋರು ಹೊಡೆಸಿತೇ? ಸದ್ಯ ರಾಜಕೀಯ ಪಡಸಾಲೆಯಲ್ಲಿ ಹರಿದಾಡುತ್ತಿರುವ ರೂಮರುಗಳ ಪ್ರಕಾರವಾಗಿ ನೋಡ ಹೋದರೆ ಕೃಷ್ಣ ಬಿಜೆಪಿ ವಿರುದ್ಧ ಅಸಮಾಧಾನಗೊಂಡಿರೋದು ನಿಜ. ಅದು ಬೋರೋ, ತಮ್ಮ ಲೆಕ್ಕಾಚಾರ ಬೋರಲು ಬಿದ್ದುದರ ವಿರುದ್ಧದ ಅಸಹನೆಯೋ… ಅಂತೂ ಹೈಟೆಕ್ ಕೃಷ್ಣ ಮೆತ್ತಗೆ ಬಿಜೆಪಿ ಹೊಸಿಲಾಚೆ ಕಾಲಿಟ್ಟಿದ್ದಾರೆ. ಅಷ್ಟಕ್ಕೂ ವಯೋವೃದ್ಧರಾದ ಎಸ್.ಎಂ ಕೃಷ್ಣ ಬಿಜೆಪಿ ತೊರೆದರೆ ಆ ಪಕ್ಷಕ್ಕೇನು ನಷ್ಟವಿಲ್ಲ. ಕಾಂಗ್ರೆಸ್‌ಗೆ ಬಂದರೆ ಆಗುವ ಲಾಭವೂ ಅಷ್ಟಕ್ಕಷ್ಟೇ. ಆದರೆ ಕೃಷ್ಣ ಹಿರಿಯ ಮುತ್ಸದ್ಧಿಯಾಗಿರೋದರಿಂದ ಅವರ ನಡಾವಳಿಗಳ ಬಗೆಗೊಂದು ಕುತೂಹಲ ಇದ್ದೇ ಇದೆ! ಕಾಂಗ್ರೆಸ್ ಪಕ್ಷದಲ್ಲಿದ್ದುಕೊಂಡು ರಾಜ್ಯದ ಮುಖ್ಯಮಂತ್ರಿಯಾಗಿ ಕೇಂದ್ರ ಸಚಿವರಾಗಿಯೂ ಅಧಿಕಾರ ಅನುಭವಿಸಿದ್ದವರು ಎಸ್.ಎಂ ಕೃಷ್ಣ. ಆದರೆ ಈ ಅಧಿಕಾರ ಲಾಲಸೆ ಎಂಬುದು ಅಷ್ಟು ಸುಲಭಕ್ಕೆ ತಣಿಯುವಂಥಾದ್ದಲ್ಲ ಎಂಬುದಕ್ಕೆ ಕೃಷ್ಣ ಅವರಿಗಿಂತಲೂ ಉತ್ತಮ ಉದಾಹರಣೆ ಬೇರೊಂದಿಲ್ಲ. ಬಹುಶಃ ತಮ್ಮ ದೇಹವೇ ತಮ್ಮ ಮಾತು ಕೇಳದ ಸ್ಥಿತಿ ತಲುಪಿರುವಾಗ ಘನತೆಯಿಂದ…
ಇಡೀ ಭಾರತವೇ ಇದೀಗ ನಾನಾ ಸಮಸ್ಯೆಗಳ ಸಂಕೋಲೆಯಲ್ಲಿ ಸಿಲುಕಿ ನರಳಾಡುತ್ತಿದೆ. ಕೊರೋನಾದಂಥಾ ಮಹಾಮಾರಿ ಬಂದಾದ ಮೇಲಂತೂ, ಇಚ್ಛಾಶಕ್ತಿಯುಳ್ಳ ನಾಯಕತ್ವ ಇದ್ದರೆ ಮಾತ್ರವೇ ಚೇತರಿಸಿಕೊಳ್ಳಲು ಸಾಧ್ಯ. ಆದರೆ, ಆ ಜಾಗವನ್ನು ನರೇಂದ್ರ ಮೋದಿಯಂಥಾ ಶೋಮ್ಯಾನುಗಳು ಆವರಿಸಿಕೊಂಡಿರುವಾಗ, ಪರಿಸ್ಥಿತಿ ತಹಬಂದಿಗೆ ಬರುತ್ತದೆಂಬ ನಿರೀಕ್ಷೆ ಇಟ್ಟುಕೊಳ್ಳುವುದೂ ಮೂರ್ಖತನವೆನ್ನಿಸುತ್ತೆ. ಇಡೀ ಇಂಡಿಯಾದ ಆತ್ಮದಂತಿರುವ ಹಳ್ಳಿಗಳಲ್ಲಿ ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆದರೂ ಅವ್ಯವಸ್ಥೆಗಳು ಕಾಲು ಚಾಚಿ ಕೂತಿವೆ. ಮೂಲಭೂತ ಸೌಕರ್ಯಗಳು ಇನ್ನೂ ಅಂಥಾ ಹಳ್ಳಿ ಹಾದಿಯತ್ತ ಮುಖ ಮಾಡಿಲ್ಲ. ವಾಸ್ತವ ಹೀಗಿರುವಾಗ ಮೋದಿ ಭಕ್ತರು ಭಾರತ ವಿಶ್ವಗುರು ಎಂಬಂತೆ ಪುಂಗುತ್ತಿರೋದೇ ಪರಮ ಕಾಮಿಡಿಯಂತೆ ಕಾಣುತ್ತಿರೋದರಲ್ಲಿ ಅತಿಶಯವಾದ್ದೇನೂ ಇಲ್ಲ! ಬಡ ಭಾರತವನ್ನು ಬಲಿಷ್ಟವಾಗಿದೆಯೆಂದು ತೋರಿಸುವ ಕಸರತ್ತನ್ನು ಎರಡನೇ ಅವಧಿಯ ನಂತರ ಮೋದಿ ಪಡೆ ವ್ಯವಸ್ಥಿತವಾಗಿಯೇ ಮಾಡುತ್ತಾ ಬಂದಿದೆ. ಅದರ ನಡುವೆಯೂ ಸಾಮಾಜಿಕ ಜಾಲತಾಣಗಳ ದೆಸೆಯಿಂದ ಅಸಲೀ ಭಾರತದ ದಾರುಣಗಾಥೆಗಳು ಆಗಾಗ ಜಾಹೀರಾಗುತ್ತಿರುತ್ತವೆ. ಅಷ್ಟಾದರೂ ಮೋದಿ ಪ್ರಣೀತ ಮುಸುರೆ ಮಾಧ್ಯಮಗಳು ಅದರತ್ತ ಮೌನ ತಾಳುತ್ತವೆ. ಅದೇ ಹೊತ್ತಿನಲ್ಲಿ ಪ್ರಧಾನ ಸೇವಕನನ್ನು…
ಭಾರತೀಯ ಚಿತ್ರರಂಗದ ಮೇರು ನಿರ್ದೇಶಕ ಮಣಿರತ್ನಂ. ತಾನೇ ಮುರಿಯಲು ಕಷ್ಟವಾಗುವಂಥಾ ಹಿಟ್ ದಾಖಲೆಗಳನ್ನು ಹೊಂದಿರುವ ಮಣಿರತ್ನಂ ನಮ್ಮ ನಡುವಿನ ಕ್ರಿಯಾಶೀಲ ನಿರ್ದೇಶಕರಲ್ಲಿಯೇ ಮುಂಚೂಣಿಯಲ್ಲಿರುವವರು. ಸಾಮಾನ್ಯವಾಗಿ ಒಂದು ಹಿಟ್ ಚಿತ್ರದಾಚೆಗೆ, ಆ ಗೆಲುವಿನ ಪ್ರಭೆಯನ್ನು ಮುಂದುವರೆಸಿಕೊಂಡು ಹೋಗುವುದು ಯಾರ ಪಾಲಿಗಾದರೂ ಸವಾಲಿನ ಸಂಗತಿಯೇ. ಕೆಲವರಂತೂ ಒಂದು ಹಿಟ್ ನಂತರದಲ್ಲಿ ಎದುರಾಗೋ ಆಘಾತದಿಂದ ತತ್ತರಿಸಿ ಅಕ್ಷರಶಃ ಮೂಲೆಗುಂಪಾಗಿಬಿಡೋದಿದೆ. ಆದರೆ ಮಣಿರತ್ನಂ ವೃತ್ತಿ ಬದುಕಿನ ಗ್ರಾಫಿನಲ್ಲಿ ಸಾಕಷ್ಟು ಏರಿಳಿತಗಳು ಕಾಣಿಸುತ್ತವೆ. ಅದ್ಯಾವುದರಿಂದಲೂ ವಿಚಲಿತರಾಗದೆ ಮತ್ತೆ ಹೊಸ ಹೊಸಾ ಅಚ್ಚರಿಗಳ ಮೂಲಕ ಮೇಲೆದ್ದು ನಿಲ್ಲುತ್ತಾ ಬಂದಿರೋದು ನಿಜವಾದ ವಿಶೇಷ. ಅಂಥಾದ್ದೊಂದು ಮಹಾನ್ ಅಚ್ಚರಿಯಂಥಾ ಚಿತ್ರ ‘ಪೊನ್ನಿಯಿನ್ ಸೆಲ್ವನ್’! ‘ಪೊನ್ನಿಯಿನ್ ಸೆಲ್ವನ್’ ಭಾರತೀಯ ಚಿತ್ರರಂಗವೆಲ್ಲ ಸಾರಾಸಗಟಾಗಿ ಕಣ್ಣರಳಿಸಿ ನೋಡುತ್ತಿರುವ, ಪ್ರೇಕ್ಷಕರಲ್ಲಿ ಗಾಢವಾದ ನಿರೀಕ್ಷೆ ಮೂಡಿಸಿರುವ ಚಿತ್ರ. ಒಂದು ಸಿನಿಮಾ ಆರಂಭಿಸಿದರೆಂದರೆ, ಅದನ್ನೊಂದು ಧ್ಯಾನದಂತೆ ಪರಿಭಾವಿಸುವವರು ಮಣಿರತ್ನಂ. ಅಂಥಾದ್ದೊಂದು ತಾದಾತ್ಮ್ಯದ ಶಿಖರ ಸ್ಥಿತಿಯಲ್ಲಿ ಅವರು ನಿರ್ದೇಶನ ಮಾಡಿರುವ ಚಿತ್ರ ‘ಪೊನ್ನಿಯಿನ್ ಸೆಲ್ವನ್’. ಬಹು ದೊಡ್ಡ ತಾರಾಗಣ, ಸ್ಟಾರ್ ನಟ ನಟಿಯರ…
ವಯಸ್ಸು ಅರವತ್ಮೂರರ ಗಡಿಯಲ್ಲಿ ಗಸ್ತು ಹೊಡೆಯುತ್ತಿದ್ದರೂ ಹದಿನೆಂಟರ ಹುಮ್ಮಸ್ಸನ್ನು ಆವಾಹಿಸಿಕೊಂಡಿರುವವರು ನಟ ಸಂಜಯ್ ದತ್. ಈತನ ಹೆಸರು ಕೇಳಿದಾಕ್ಷಣವೇ ಬಗೆ ಬಗೆಯ ಶೇಡುಗಳುಳ್ಳ, ವಿಕ್ಷಿಪ್ತ ಪರ್ಸನಾಲಿಟಿಗಳು ಕಣ್ಮುಂದೆ ಚಲಿಸಲಾರಂಭಿಸುತ್ತವೆ. ಈ ಆಸಾಮಿ ಬೇಕೆಂತಲೇ ಸೃಷ್ಟಿಕೊಂಡ ವಿವಾದಗಳು, ರಗಳೆ ರಾಮಾಯಣಗಳ ಸುರುಳಿ ಬಿಚ್ಚಿಕೊಳ್ಳುತ್ತವೆ. ಆದರೆ, ಸಂಜು ಬಾಬಾ ಈವತ್ತಿಗೂ ನಟನಾಗಿ ಚಾಲ್ತಿಯಲ್ಲಿರುವುದು, ಬೇಡಿಕೆ ಉಳಿಸಿಕೊಂಡಿರೋದು ತನ್ನೊಳಗಿನ ನಟನೆಯ ಕಸುವಿನಿಂದ ಮಾತ್ರ ಎಂಬುದು ನಿರ್ವಿವಾದ. ಕೆಜಿಎಫ್‌ನಲ್ಲಿ ಅಧೀರನಾಗಿ ಅಬ್ಬರಿಸಿದ ನಂತರವಂತೂ, ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಸಂಜು ಬಾಬಾನ ಬೇಡಿಕೆ ದುಪ್ಪಟ್ಟುಗೊಂಡಿದೆ. ಅದಕ್ಕೆ ಸರಿಯಾಗಿ ಅವರ ಸಂಭಾವನೆಯೂ ಅಚ್ಚರಿದಾಯಕವಾಗಿ ಹೆಚ್ಚಾಗಿದೆ. ಸಂಜು ಸ್ನೇಹ ಅಂತ ಬಂದಾಗ ಭಲೇ ಉದಾರಿ; ವ್ಯವಹಾರ ಅಂತ ಬಂದಾಗ ಅಷ್ಟೇ ಕಟ್ಟುನಿಟ್ಟಿನ ಆಸಾಮಿ. ಈ ಕಾರಣದಿಂದಲೇ ಅವರು ಬೇಡಿಕೆ ಹೆಚ್ಚಾಗುತ್ತಿದ್ದಂತೆಯೇ ಸಂಭಾವನೆಯ ಮೀಟರ್ ಅನ್ನೂ ಏಕಾಏಕಿ ರೈಸ್ ಮಾಡಿಬಿಟ್ಟಿದ್ದಾರೆ. ಇದೆಲ್ಲವನ್ನೂ ಏಕೆ ಹೇಳಬೇಕಾಯಿತೆಂದರೆ, ಸಂಜು ಬಾಬಾ ಇದೀ ಮತ್ತೊಮ್ಮೆ ದಕ್ಷಿಣ ಭಾರತೀಯ ಚಿತ್ರವೊಂದರಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ಈಗಾಗಲೇ ಕಮಲ್ ಹಾಸನ್ ನಟನೆಯ…
ಗಾಯಕಿಯಾಗಿಯೂ ಗಮನ ಸೆಳೆದ ಬಿಗ್‌ಬಾಸ್ ಹುಡುಗಿ! ಕಿರುತೆರೆಯಲ್ಲಿ ಮಿಂಚಿ, ತನ್ನ ಮುದ್ದಾದ ಅಭಿನಯದ ಮೂಲಕ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡುರುವಾಕೆ ಚಂದನಾ ಅನಂತಕೃಷ್ಣ. ಬರೀ ಕಿರುತೆರೆಯಲ್ಲಿಯೇ ಕಳೆದು ಹೋಗದೆ, ಬೇರೆ ಬೇರೆ ಹವ್ಯಾಸಗಳತ್ತ ಕೈಚಾಚುತ್ತಾ, ಥರ ಥರದ ಪ್ರಯೋಗಳಿಗೆ ಒಗ್ಗಿಕೊಳ್ಳುತ್ತಿರುವುದು ಈ ಹುಡುಗಿಯ ಹೆಚ್ಚುಗಾರಿಕೆ. ಪ್ರತಿಭೆ ಮತ್ತು ಅದಕ್ಕಾಗಿನ ನಿರಂತರ ಪರಿಶ್ರಮಗಳಿದ್ದರೆ ಕೊಂಚ ತಡವಾದರೂ ಗೆಲುವೆಂಬುದು ನಾನಾ ಬಗೆಯಲ್ಲಿ ಕೈ ಹಿಡಿಯುತ್ತದೆ ಎಂಬುದಕ್ಕೆ ಚಂದನಾ ನಿಜಕ್ಕೂ ಉದಾಹರಣೆಯಂಥವರು. ಇತ್ತೀಚಿನ ದಿನಗಳಲ್ಲಿ ಕೊಂಚ ಮರೆಯಾದಂತಿದ್ದ ಚಂದನಾ ಅಭಿಮಾನಿಗಳಲ್ಲಿ ಕೊಂಚ ದಿಗಿಲು ಮೂಡಿಸಿದ್ದರು. ಆದರೀಗ ಮತ್ತೊಂದು ಅಚ್ಚರಿಯೊಂದಿಗೆ ವಾಪಾಸಾಗಿದ್ದಾರೆ! ಹಾಗೆ ಚಂದನಾ ಅಚ್ಚರಿ ಮೂಡಿಸಿರೋದು ‘ಎದುರಲಿ ಇರುವಾಗ ನೀನು’ ಎಂಬ ಮೋಹಕವಾದೊಂದು ಆಲ್ಬಂ ಸಾಂಗ್ ಮೂಲಕ. ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಈ ಆಲ್ಬಂ ಸಾಂಗ್ ದೊಡ್ಡ ಮಟ್ಟದಲ್ಲಿಯೇ ಸದ್ದು ಮಾಡುತ್ತಿದೆ. ಹಾಗೆ ನೋಡಿದರೆ, ಆಲ್ಬಂ ಸಾಂಗುಗಳು ಕನ್ನಡದಲ್ಲಿ ಬಹು ಬೇಗನೆ ಆವರಿಸಿಕೊಂಡಿದ್ದು, ಯಶಸ್ವಿಯಾದದ್ದು ಕಡಿಮೆಯೇ. ಅಂಥಾದ್ದೊಂದು ನಿರ್ವಾತ ಸ್ಥಿತಿಯಲ್ಲಿ ಸದರಿ ಆಲ್ಬಂ ಸಾಂಗ್ ಸಖತ್ತಾಗಿಯೇ ಸೌಂಡು ಮಾಡುತ್ತಿದೆ.…
ಭಾರತೀಯ ಚಿತ್ರರಂಗದಲ್ಲಿ ವಿಶಿಷ್ಟ ನಟನಾಗಿದ್ದುಕೊಂಡು, ಸಾರ್ವಕಾಲಿಕ ಪ್ರೀತಿ ಸಂಪಾದಿಸಿಕೊಂಡಿರುವವರು ಕಮಲ್ ಹಾಸನ್. ಈ ಕಾರಣದಿಂದಲೇ ಕಮಲ್ ಒಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆಂಬ ಸುದ್ದಿ ಹೊರ ಬೀಳುತ್ತಲೇ ಅದರ ಸುತ್ತ ನಿರೀಕ್ಷೆಗಳು ತಂತಾನೇ ಜಮಾವಣೆಯಾಗಿರುತ್ತವೆ. ಯಾವಾಗ ಕಮಲ್ ವಿಕ್ರಮ್ ಎಂಬ ಸಿನಿಮಾದಲ್ಲಿ ನಟಿಸಲಿದ್ದಾರೆಂಬ ಸುದ್ದಿ ಹೊರ ಬಿದ್ದಿತ್ತೋ, ಆವಾಗಿನಿಂದಲೇ ಪ್ರೇಕ್ಷಕರ ಕಣ್ಣಲ್ಲಿ ಹೊಳಪು ಮೂಡಿಕೊಂಡಿತ್ತು. ಆ ಚಿತ್ರವೀಗ ಬಿಡುಗಡೆಗೊಂಡು ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಹಲವಾರು ಏಳುಬೀಳುಗಳು ಮತ್ತು ಮಿಶ್ರ ಪ್ರತಿಕ್ರಿಯೆಗಳ ನಡುವೆಯೂ ವಿಕ್ರಮ್ ನೂರರ ಗಡಿ ದಾಟಿಕೊಂಡಿದೆ. ಆ ಕಾರಣದಿಂದಲೇ ಬಹುಕಾಲದ ನಂತರ ಕಮಲ್ ಕಣ್ಣಲ್ಲಿ ಖುಷಿಯ ಕಿಡಿ ಕಾಣಿಸಿಕೊಂಡಿದೆ! ಇದು ಕಮಲ್ ಪಾಲಿಗೆ ನಿಜಕ್ಕೂ ಸಂಭ್ರಮದ ಸಂಗತಿ. ವಿಕ್ರಮ್ ಬಹಳಷ್ಟು ಭಿನ್ನವಾಗಿ, ರಿಚ್ ಆಗಿ ಮೂಡಿ ಬಂದಿದ್ದರೂ ಕೂಡಾ ಬಿಡುಗಡೆಯ ಕ್ಷಣಗಳಲ್ಲಿ ಗ್ರಹಣದಂಥಾ ವಾತಾವರಣವೂ ಇದ್ದಿದ್ದು ನಿಜ. ಯಾಕೆಂದರೆ, ವಿಕ್ರಮ್ ಚೆನ್ನಾಗಿದೆ ಎಂಬ ಅಭಿಪ್ರಾಯಗಳೇ ಮುಸುಕಾಗುವಂತೆ ಮಿಶ್ರ ಪ್ರತಿಕ್ರಿಯೆಗಳ ಒಡ್ಡೋಲಗ ಆರಂಭವಾಗಿತ್ತು. ಇದರಿಂದಾಗಿ ಕೊಂಚ ಗೊಂದಲದ ವಾತಾವರಣ ಸೃಷ್ಟಿಯಾಗಿದ್ದರೂ, ವಿಕ್ರಮ್ ಬಹುಬೇಗನೆ ಚೇತರಿಸಿಕೊಂಡು…
ಅರಣ್ಯನಾಶದ ಭೀಕರ ಪರಿಣಾಮದ ಮುನ್ಸೂಚನೆ! ನೀರಿಲ್ಲದೆ ಈ ಜಗತ್ತಿನ ಯಾವ ಜೀವರಾಶಿಯ ಬದುಕನ್ನೂ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಅದರ ಅರಿವಿರುವ ಮನುಷ್ಯರೇ ಮಾಡುತ್ತಿರುವ ಮಹಾ ಯಡವಟ್ಟುಗಳಿಂದಾಗಿ ದಿನೇ ದಿನೆ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಕಣ್ಣೆದುರೇ ವ್ಯಾಪಕ ಮಳೆಯಾಗಿ, ಪ್ರವಾಹದಿಂದ ಜನರ ಬದುಕು ಕೊಚ್ಚಿ ಹೋಗುತ್ತಿರೋದು ನಿಜ; ಆದರೆ ಅದರ ಬೆನ್ನ ಹಿಂದೆಯೇ ಭೀಕರ ಕ್ಷಾಮದ ಚಹರೆಯೊಂದು ತಣ್ಣಗೆ ನಿಂತಂತಿದೆ. ಯಾಕೆ ಹೀಗಾಗುತ್ತಿದೆ? ಅತ್ತ ಅತೀ ಮಳೆಯಾಗುತ್ತಿದೆ, ಇತ್ತ ಕುಡಿಯುವ ನೀರಿಗೆ ಇಷ್ಟರಲ್ಲಿಯೇ ಹಾಹಾಕಾರವೇಳೋ ಲಕ್ಷಣಗಳಿದ್ದಾವೆ. ಒಳ್ಳೆ ಮಳೆಯಾದರೆ ನೀರಿಗೆ ಕೊರತೆಯಿಲ್ಲ ಎಂಬಂಥಾ ಸಾರ್ವಕಾಲಿಕ ಸತ್ಯವೂ ಯಾಕೆ ಸುಳ್ಳಾಗುತ್ತಿದೆ? ಹೀಗೊಂದು ಭಯಮಿಶ್ರಿತ ಪ್ರಶ್ನೆ ಎಲ್ಲರೊಳಗೂ ಇದೆ. ಅದಕ್ಕೆ ಉತ್ತರವಾಗಿ ನಿಲ್ಲೋದು ವ್ಯಾಪಕ ಅರಣ್ಯ ನಾಶವಲ್ಲದೆ ಬೇರೇನೂ ಅಲ್ಲ! ಈ ಅರಣ್ಯ ನಾಶದಿಂದಾಗಿ ಜಾಗತಿಕ ವಾತಾವರಣವೇ ಇದೀಗ ಅದಲುಬದಲಾಗುತ್ತಿದೆ. ಅತ್ತ ನೀರಿನ ಹಾಹಾಕಾರದ ಲಕ್ಷಣಗಳು ಗೋಚರಿಸುತ್ತಿರುವಾಗಲೇ, ಇತ್ತ ಇರುವ ನೀರಿನ ಗುಣಮಟ್ಟವೂ ಹಾಳಾಗುತ್ತಿದೆ. ಹೀಗೆ ಕುಡಿಯುವ ನೀರಿನ ಗುಣಮಟ್ಟದ ಬಗ್ಗೆ ಜರ್ಮನಿಯ ಸಂಶೋಧರಕ ತಂಡವೊಂದು…
ಮನೆಯೆದುರು ನಿಲ್ಲಿಸಿದ್ದ ಕಾರು, ಬೈಕುಗಳು ರಾತ್ರಿ ಬೆಳಗಾಗೋದರೊಳಗೆ ಮಾಯವಾಗೋದು ಬೆಂಗಳೂರಿನಂಥಾ ಮಹಾ ನಗರಗಳಲ್ಲಿ ಮಾಮೂಲಿ. ಆದರೆ, ಈ ಬಗ್ಗೆ ಪೊಲೀಸ್ ದೂರು ನೀಡಿ, ಪದೇ ಪದೆ ಠಾಣೆಗೆ ಅಂಡಲೆದು ಗೋಗರೆದರೂ ಮಾಯವಾದ ವಾಹನ ಮತ್ತೆ ಸಿಗುತ್ತದೆಂಬ ಖಾತರಿಯೇನಿಲ್ಲ. ಹೀಗೆ ವಾಹನಗಳು ಕಳುವಾದಾಗೆಲ್ಲ ನಮ್ಮೆಲ್ಲರ ಗುಮಾನಿ ಸ್ಥಳೀಯ ಕಾರುಗಳ್ಳರ ಸುತ್ತಲೇ ಗಿರಕಿ ಹೊಡೆಯಲಾರಂಭಿಸುತ್ತೆ. ಇದು ಅಂಥವರ ಕೆಲಸವೇ ಎಂಬ ತೀರ್ಮಾನಕ್ಕೂ ಬಂದು ಬಿಡುತ್ತವೆ. ವಾಸ್ತವವೆಂದರೆ, ನೀವು ಹಾಗೆ ಆಲೋಚಿಸುವ ಹೊತ್ತಿಗೆಲ್ಲಾ ನಿಮ್ಮ ಕಾರು ರಾಜ್ಯದ ಗಡಿ ದಾಟಿ, ನಂಬರ್ ಪ್ಲೇಟ್ ಬದಲಾಯಿಸಿಕೊಂಡು ಮತ್ಯಾರದ್ದೋ ಕೈ ಸೇರಿಬಿಟ್ಟಿರಲೂ ಬಹುದು. ಯಾಕೆಂದರೆ, ಇಂಥಾ ಕಾರುಗಳವಿನ ಹಿಂದೆ ಕುಖ್ಯಾತ ಅಂತಾರಾಜ್ಯ ಕಳ್ಳರ ಕೈಚಳಕ ಇರುವ ಸಾಧ್ಯತೆಗಳೇ ಹೆಚ್ಚಿರುತ್ತವೆ! ಹೀಗೆ ಬೆಂಗಳೂರೂ ಸೇರಿದಂತೆ, ದೇಶದ ನಾನಾ ಭಾಗಗಳಿಂದ ಕಾರು ಕಳ್ಳತನವಾದಾಗ ಅದರ ಹಿಂದೆ ರಾಷ್ಟ್ರ ಮಟ್ಟದ ಮಾಫಿಯಾ ಇರುವ ಗುಮಾನಿ ಪೊಲೀಸ್ ಇಲಾಖೆಯನ್ನು ಕಾಡುತ್ತಿತ್ತು. ನಾನಾ ರಾಜ್ಯಗಳ ಮಂದಿ ಈ ಬಗ್ಗೆ ತನಿಖೆಗಿಳಿದಾಗ ಎದುರುಗೊಂಡಿದ್ದದ್ದು ಅನಿಲ್ ಚೌವ್ಹಾಣ್ ಎಂಬಾತನ…