Author: Santhosh Bagilagadde

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

ಇನ್ನೇನು ಲೋಕಸಭಾ ಚುನಾವಣೆಗೆ ಎರಡು ವರ್ಷಗಳು ಬಾಕಿ ಇರುವಾಗಲೇ, ರಾಜಕೀಯ ರಂಗದಲ್ಲಿ ಅದಕ್ಕಾಗಿನ ತಯಾರಿಗಳು ತಾರಕಕ್ಕೇರಿವೆ. ಅದರಲ್ಲಿಯೂ ವಿಶೇಷವಾಗಿ, ದೇಶಾದ್ಯಂತ ಅತ್ಯಂತ ಹೀನಾಯ ಸ್ಥಿತಿ ತಲುಪಿಕೊಂಡಿರುವ ರಾಷ್ಟ್ರೀಯ ಪಕ್ಷ ಕಾಂಗ್ರೆಸ್‌ನಲ್ಲಿಯಂತೂ ಸದ್ಯಕ್ಕೆ ಹೊಸಾ ಬಗೆಯ ಸಂಚಲನವೇ ಶುರುವಿಟ್ಟುಕೊಂಡಿದೆ. ಪ್ರತೀ ಬಾರಿಯೂ ಚುನಾವಣೆ ಕಣ್ಣಳತೆಯಲ್ಲಿದ್ದಾಗ ಕಣ್ಣುಜ್ಜಿಕೊಂಡು ಅಖಾಡಕ್ಕಿಳಿಯುತ್ತಿದ್ದ ಕಾಂಗ್ರೆಸ್ ಹೈಕಮಾಂಡ್ ಈ ಬಾರಿ ತುಸು ಮುಂಚೆಯೇ ಎಚ್ಚರಗೊಂಡಿದೆ. ಅದರ ಫಲವಾಗಿಯೇ ಶುರುವಾಗಿರೋದು ಭಾರತ್ ಜೋಡೋ ಯಾತ್ರೆ! ರಾಹುಲ್ ಗಾಂಧಿ ಸಾರಥ್ಯದಲ್ಲಿ ಶುರುವಾಗಿರುವ ಈ ಯಾತ್ರೆ ಎಲ್ಲ ರಾಜ್ಯಗಳನ್ನೂ ಬಳಸಿಕೊಂಡು ಸಾಗುವಂಥಾ ಮಹತ್ವಾಕಾಂಕ್ಷೆ ಹೊಂದಿದೆ. ಈ ಯಾತ್ರಗೆ ಸಿಗುತ್ತಿರುವ ಜನರ ಪ್ರತಿಕ್ರಿಯೆಗಳೇ ಒಂದು ಮಟ್ಟಿಗೆ ಕಾಂಗ್ರೆಸ್ ಪಕ್ಷಕ್ಕೆ ನವೋಲ್ಲಾಸ ತಂದುಕೊಟ್ಟಿದೆ. ಸಾಲು ಸಾಲಾಗಿ ಹಿರಿಯ ನಾಯಕರು ರಾಜೀನಾಮೆ ಕೊಟ್ಟು, ಒಂದಷ್ಟು ನಾಯಕರನ್ನು ಬಿಜೆಪಿ ಆಪರೇಷನ್ ಕಮಲದಲ್ಲಿ ಸೆಳೆದುಕೊಂಡ ಪರಿಣಾಮ ಕಾಂಗ್ರೆಸ್ ನಿತ್ರಾಣ ಸ್ಥಿತಿಯಲ್ಲಿತ್ತು. ಆದರೀಗ ಭಾರತ್ ಜೋಡೋ ಯಾತ್ರೆಯಿಂದ ಕಾಂಗ್ರೆಸ್ ಒಂದಷ್ಟು ನಳನಳಿಸುವಂತೆ ಕಾಣಿಸುತ್ತಿದೆ. ಈ ಬಗ್ಗೆ ಕಾಂಗ್ರೆಸ್‌ನ ಹಿರಿಯ ನಾಯಕ ಜೈರಾಮ್ ರಮೇಶ್…

Read More

ಸಿನಿಮಾ ನಟನಟಿಯರೆಂದರೇನೇ ಅವರದ್ದು ಹೈಫೈ ಬದುಕೆಂಬ ಸಿದ್ಧಸೂತ್ರದ ಚಿತ್ರ ಎಲ್ಲರ ಮನಸುಗಳಲ್ಲಿಯೂ ಮೂಡಿಕೊಳ್ಳುತ್ತೆ. ಸಾಮಾನ್ಯವಾಗಿ ಬಹುತೇಕ ನಟ ನಟಿಯರು ಸಾಕಷ್ಟು ಕಷ್ಟಪಟ್ಟುಕೊಂಡೇ ಮೇಲೆದ್ದು ನಿಂತಿರುತ್ತಾರೆ. ಹಾಗೆ ಸಾಗಿ ಬಂದವರನ್ನು ಯಾವುದೋ ಹಾದಿಯಲ್ಲಿ ಗೆಲುವೆಂಬುದು ತಬ್ಬಿಕೊಳ್ಳುತ್ತೆ. ಆ ಬಿಸಿಯಲ್ಲಿ ಮೈ ಮರೆಯೋ ಮಂದಿ ಬಂದ ಹಾದಿಯತ್ತ ಹಿಂತಿರುಗಿ ನೋಡೋದು, ನಡೆದ ಹಾದಿಯಲ್ಲಿ ಮತ್ತೆ ಹೆಜ್ಜೆಯಿಡುವ ಮನಸು ಮಾಡೋದೆಲ್ಲ ಅತೀ ವಿರಳ. ಬಣ್ಣದ ಲೋಕದ ತುಂಬಾ ಹಬ್ಬಿಕೊಂಡಿರುವ ಇಂಥಾ ವಾತಾವರಣದ ನಡುವೆಯೂ ಕೆಲ ಮಂದಿ ನೆನಪುಗಳ ಪಸೆಯನ್ನು ಮನಸಲ್ಲಿಟ್ಟುಕೊಂಡು, ಹಳೇ ದಿನಗಳನ್ನು ಮೆಲುಕು ಹಾಕುತ್ತಾ, ಮತ್ತೆ ಮತ್ತೆ ಅಲ್ಲಿಗೆ ಮರಳುತ್ತಾ ಮುದಗೊಳ್ಳುತ್ತಾರೆ. ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿರುವ ರಕುಲ್ ಪ್ರೀತ್ ಸಿಂಗ್ ಕೂಡಾ ಆ ಸಾಲಿಗೆ ಸೇರಿಕೊಳ್ಳುತ್ತಾಳೆ! ಇದೀಗ ಅವಕಾಶಗಳಿಗೆ ಕೊಂಚ ಹಿನ್ನಡೆ ಉಂಟಾಗಿದ್ದರೂ ಕೂಡಾ, ರಕುಲ್ ಪ್ರೀತ್ ಸಿಂಗ ಭಾರತೀಯ ಚಿತ್ರರಂಗದ ಪ್ರಮುಖ ನಟಿ. ಮಾಡೆಲಿಂಗ್ ಕ್ಷೇತ್ರದಲ್ಲಿ ಈಗಲೂ ಮಿಂಚುತ್ತಿರುವ ಆಕೆಯದ್ದು ಹೈಫೈ ಬದುಕೆಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಹಣಕಾಸು…

Read More

ನಿನ್ನ ನತ್ತಿನ ಮಿಂಚಿಗೆ, ತುಟಿಯಂಚಿನ ಮಾರ್ಧವತೆಗೊಂದು ಹೂ ಮುತ್ತು. ಕಾಲವೆಂಬುದು ಅದೆಷ್ಟು ಸುತ್ತು ಹಾಕಿದರೂ, ಸಂವತ್ಸರಗಳೆಲ್ಲ ಅದಲು ಬದಲಾದರೂ ನಿನ್ನ ಬದುಕಲ್ಲಿ ಇಂಥಾ ಖುಷಿಯೇ ಗೂಡುಗಟ್ಟಲಿ ಅಂತ ನಾನೆಂದೂ ನಂಬದ ದೇವರಿಗೂ ಒಂದು ಅಪೀಲು ಹಾಕಿಯೇನು… ಯಾಕಂದ್ರೆ, ದಿಕ್ಕುದೆಸೆಯಿಲ್ಲದ ತಿರುಕನಂಥಾ ಈ ಬದುಕಿನ ಶಾಶ್ವತ ಗುರಿಯಂಥವಳು ನೀನು. ಸುಮ್ಮನೆ ಸರಿದು ಹೋಗುವ ಸಕಲ ಸಂವತ್ಸರಗಳೂ ಕೂಡಾ ನನ್ನನ್ನಿಲ್ಲಿ ಕಾಡಿಸುತ್ತಿವೆ, ಕಂಗಾಲಾಗಿಸುತ್ತಿವೆ. ಆದರೆ ಇಂಥಾ ಕ್ಷಣಗಳಲ್ಲೆಲ್ಲ ನಿನ್ನ ಖುಷಿಯನ್ನಷ್ಟೇ ಧ್ಯಾನಿಸುತ್ತ ಅದನ್ನೇ ಆವಾಹಿಸಿಕೊಂಡು ಬದುಕೋದನ್ನು ರೂಢಿಸಿಕೊಂಡಿದ್ದೇನೆ. ನಿನ್ನ ದಯೆಯಿಂದಲೇ ನಾನಿಲ್ಲಿ ಹಾಯಾಗಿದ್ದೇನೆ. ಆದರೆ ಈ ಬೇಸಗೆ ಮತ್ತು ಸುಡು ಸುಡುವ ಬಿಸಿಲೆಂದರೆ ನಂಗ್ಯಾಕೋ ರೇಜಿಗೆ. ಇಂಥಾ ಬೇಸಗೆಯ ಸಂಜೆಗಳಿಗೆ ಮಾತ್ರವೇ ನಾನು ಮುದಗೊಳ್ಳುತ್ತೇನೆ. ಇಂಥಾ ಆರ್ದ್ರ ಸಂಜೆಗಳಿಗೆ ನಿನ್ನ ಜೊತೆಯಿರಬೇಕಿತ್ತೆಂದು ಹಲುಬಾಡುತ್ತೇನೆ. ಆಶದರೇಕೋ ಇತ್ತೀಚೆಗೆ ಇಂಥಾ ಬೇಸಗೆಗಳೂ ಕೂಡಾ ಇಡಿ ಇಡಿಯಾಗಿ ಇಷ್ಟವಾಗುತ್ತಿವೆ. ಯಾಕೋ ಈ ಕಡು ಬೇಸಗೆಗೂ ಸುಡು ಸುಡುವ ನೆನಪುಗಳಿಗೂ ಇತ್ತಿತ್ತಲಾಗಿ ಒಲವಾದಂತಿದೆ! ಇದೊಂಥರಾ ತ್ರಿಶಂಕು ಸ್ಥಿತಿ. ಎದೆಯ ತಲ್ಲಣಗಳನ್ನು…

Read More

ಯೋಗಿ ನಾಡೆಂದು ಕರೆಯಿಸಿಕೊಳ್ಳುತ್ತಿರುವ ಉತ್ತರಪ್ರದೇಶದ ತುಂಬೆಲ್ಲ ಇದೀಗ ನಾನಾ ಕ್ರೈಮುಗಳು ವಿಜೃಂಭಿಸಲಾರಂಭಿಸಿವೆ. ಈ ಹಿಂದೆಯೂ ಉತ್ತರ ಪ್ರದೇಶ ಇಂಥಾದ್ದಕ್ಕೆಲ್ಲ ಕುಖ್ಯಾತಿ ಪಡೆದುಕೊಂಡಿತ್ತು. ಆದರೆ ಯೋಗಿ ಆದಿತ್ಯನಾಥ್ ಸಿಎಂ ಆಗಿ ಎರಡು ಅವಧಿಯತ್ತ ಹೆಜ್ಜೆಯಿಟ್ಟಿದ್ದರೂ ಕೂಡಾ ಕ್ರೈಂ ರೇಟ್ ಏರುಗತಿ ಕಾಣುತ್ತಲೇ ಸಾಗುತ್ತಿದೆ. ಅದರಲ್ಲಿಯೂ ಮನೆಗಳವು, ಸರಗಳವಿನಂಥಾ ಪ್ರಕರಣಗಳಂತೂ ಅಲ್ಲಿನ ಒಂದಷ್ಟು ನಗರಗಳ ನಾಗರಿಕರ ನಿದ್ದೆಗೆಡಿಸಿಬಿಟ್ಟಿದೆ. ಆನಸಾಮಾನ್ಯರ ಕಥೆ ಹಾಗಿರಲಿ; ಖುದ್ದು ಆಡಳಿತಾರೂಢ ಬಿಜೆಪಿ ಪಕ್ಷದ ಶಾಸಕರ ಮನೆ ಮಂದಿಯೇ ಕಳ್ಳರ ಕಣ್ತಪ್ಪಿಸಿಕೊಂಡು ಓಡಾಡಲು ಸಾಧ್ಯವಿಲ್ಲ ಎಂಬಂಥಾ ಪರಿಸ್ಥಿತಿ ಅಲ್ಲಿದೆ. ಬೆಳಗ್ಗೆ ವಾಕಿಂಗ್ ಹೊರಟಿದ್ದ ಪ್ರಭಾವಿ ಶಾಸಕರೊಬ್ಬರ ತಾಯಿಯ ಕಿವಿ ಕೊಯ್ದು ಓಲೆ ದೋಚಲಾಗಿದೆಯೆಂದರೆ ಅಲ್ಲಿನ ಚಿತ್ರಣ ಸ್ಪಷ್ಟವಾಗಿಯೇ ಕಣ್ಮುಂದೆ ಕದಲುತ್ತದೆ! ಇಂಥಾದ್ದೊಂದು ಘಟನೆ ನಡೆದಿರೋದು ಉತ್ತರ ಪ್ರದೇಶದ ಘಾಜಿಯಾಬಾದ್‌ನಲ್ಲಿ. ಬುಲಂದ್ ಶಹರ್ ಸದರ್ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಪ್ರದೀಪ್ ಚೌಧರಿಯವರ ತಾಯಿ ಕಳ್ಳರ ಕೈಚಳಕದ ಮುಂದೆ ಕಂಗಾಲಾದವರು. ಎಂಬತ್ತು ವರ್ಷಗಳ ವೃದ್ಧೆ ಸಂತೋಷಿ ದೇವಿಯವರ ಓಲೆ ಒಂದು ಕಿವಿಯ ಸಮೇತ ಕಳ್ಳರ…

Read More

ಆನ್‌ಲೈನ್ ಜಮಾನ ಶುರುವಾದ ಮೇಲೆ ಮನುಷ್ಯರೊಳಗಿನ ವಿಕೃತಿಗಳೂ ಮೇರೆ ಮೀರಿ ವಿಜೃಂಭಿಸುತ್ತಿರುವಂತಿದೆ. ಎಲ್ಲ ಆವಿಷ್ಕಾರಗಳೂ ಮೊಬೈಲಿನ ಮೂಲಕ ಬೆರಳ ಮೊನೆಗೆ ಬಂದು ಕೂತಿರುವ ಈ ಘಳಿಗೆಯಲ್ಲಿ, ಅದನ್ನೇ ತಮ್ಮ ಮನೋವಿಕಾರಗಳನ್ನು ತಣಿಸಿಕೊಳ್ಳಲು ಬಳಸಿಕೊಳ್ಳುತ್ತಿರುವ ಜನರ ಸಂಖ್ಯೆಯೂ ಹೆಚ್ಚಿಕೊಳ್ಳುತ್ತಿದೆ. ಈವತ್ತಿಗೆ ಸೈಬರ್ ಕ್ರೈಮುಗಳು ನಡೆದಾಗ, ಅದರ ತನಿಖೆ ನಿಧಾನಗತಿಯಲ್ಲಿದ್ದಾಗೆಲ್ಲಾ ನಾವೆಲ್ಲ ಬೈದುಕೊಳ್ಳುತ್ತೇವಲ್ಲಾ? ಆದರೆ ಸೈಬರ್ ಕ್ರೈಮಿನ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಚಟುವಟಿಕೆಗಳು, ಅದರ ಸುತ್ತ ಹಬ್ಬಿಕೊಂಡಿರುವ ದಂಧೆಗಳನ್ನು ನೋಡಿದರೆ ಎಲ್ಲರೂ ಅವಾಕ್ಕಾಗುವಂತಾಗುತ್ತದೆ. ಓರ್ವ ಸಾಮಾನ್ಯ ಟ್ರಕ್ ಡ್ರೈವರ್, ತನ್ನ ಕೈಲಿದ್ದ ಮೊಬೈಲಿನ ಮೂಲಕವೇ ಸಮಾಜ ಕಂಟಕನಾಗುತ್ತಾನೆಂದರೆ, ಆಸುಪಾಸಿನ ಮಹಿಳೆಯರ ಫೋಟೋಗಳನ್ನು ಕಲೆ ಹಾಕಿ ಅದಕ್ಕೆ ಬೆತ್ತಲೆ ದೇಹ ಜೋಡಿಸಿ ಬದ್ಲಾಕ್‌ಮೇಲ್ ಮಾಡುತ್ತಾನೆಂದರೆ ಪರಿಸ್ಥಿತಿ ಹೇಗಿದೆ ಎಂಬುದು ಯಾರಿಗಾದರೂ ಅರ್ಥವಾಗುತ್ತೆ. ಉತ್ತರಪ್ರದೇಶದ ಫರಿದಾಬಾದ್ ಪೊಲೀಸರು ಟ್ರಕ್ ಡ್ರೈವರ್ ಒಬ್ಬನನ್ನು ಬಂಧಿಸಿ ವಿಚಾರಣೆಗೊಳಪಡಿಸುತ್ತಲೇ, ಆತ ಕಾರಿಕೊಂಡ ಸತ್ಯಗಳನ್ನು ಕೇಳಿ ತ್ತರಿಸಿ ಹೋಗಿದ್ದಾರೆ. ಆ ವಿವರಗಳೆಲ್ಲವೂ ಮೊಬೈಲು ಮತ್ತು ಅದರ ಒಡಲಿನಲ್ಲಿರುವ ಸೌಕರ್ಯಗಳು ಅದೆಷ್ಟು ಅನಾಹುತಕಾರಿ ಎಂಬುದಕ್ಕೆ ತಾಜಾ…

Read More

ಒಂದ್ಯಾವುದೋ ಅಪರೂಪದ ಪರಿಮಳ ಅಚಾನಕ್ಕಾಗಿ ಮೂಗಿಗೆ ಬಡಿದಂತಾಗುತ್ತೆ. ಅದೊಂದು ಪರಿಮಳ ನಮ್ಮನ್ನು ಬದುಕಿನ ಯಾವುದೋ ಇರುಕ್ಕು ಗಲ್ಲಿಗಳಲ್ಲಿ ಸುತ್ತಾಡಿಸುವಷ್ಟು ಶಕ್ತವಾಗಿರುತ್ತೆ. ಮೆದುಳೆಂಬುದು ಸೀದಾ ನಮ್ಮನ್ನು ಬಾಲ್ಯಕ್ಕೋ, ಶಾಲಾ ದಿನಗಳಿಗೋ ಕೊಂಡೊಯ್ದು ನಿಲ್ಲಿಸಿ ಬಿಡುತ್ತೆ. ಅಂಥಾ ಅಗೋಚರ ಪರಿಮಳಗಳೇ ಎಳೇ ಮಕ್ಕಳನ್ನಾಗಿಸಿ ಅಜ್ಜಿಯ ಸೆರಗಿನ ಚುಂಗು ಹಿಡಿದು ಅಲೆದಾಡಿಸುತ್ತೆ. ಅಜ್ಜಿಯ ಸುಕ್ಕುಗಟ್ಟಿದ ಕೈಯ ಸ್ಪರ್ಶದ ತಾಜಾ ಅನುಭೂತಿಯನ್ನೂ ಎದೆಗೆ ನಾಟಿಸಿ ಬಿಡುತ್ತೆ. ಜೀವನದ ಒಂದಲ್ಲ ಒಂದು ಹಂತದಲ್ಲಿ ಪ್ರತಿಯೊಬ್ಬರನ್ನೂ ಇಂಥಾ ಅನೂಹ್ಯ ಪರಿಮಳಗಳು ಅಚ್ಚರಿಗೀಡು ಮಾಡುತ್ತವೆ. ಅರೇ… ಈ ಪರಿಮಳಕ್ಕೆ ನೆನಪಿನ ಗರ್ಭಕ್ಕೇ ಕೊಂಡೊಯ್ದು ಬಿಡೋ ತಾಕತ್ತಿದೆಯಾ? ಇದು ನಮ್ಮ ಭ್ರಮೆಯಾ ಅಥವಾ ಅದಕ್ಕೆ ವಾಸ್ತವದ ಭೂಮಿಕೆಯೇನಾದರೂ ಇದೆಯಾ ಅನ್ನೋ ಪ್ರಶ್ನೆ ಸೂಕ್ಷ್ಮ ಮನಸ್ಥಿತಿಯ ಮಂದಿಯನ್ನು ಒಂದಲ್ಲ ಒಂದು ಹಂತದಲ್ಲಿ ಕಾಡಿಯೇ ಕಾಡುತ್ತೆ. ಇಂಥಾ ಪರಿಮಳಗಳ ಮ್ಯಾಜಿಕ್ಕಿಗೆ ವಿಜ್ಞಾನ ನಿಖರವಾದ ಸಾಕ್ಷ್ಯಗಳನ್ನೇ ಕೊಡುತ್ತೆ. ಅಂದಹಾಗೆ ಅದರ ಮೂಲವಿರೋದು ನಮ್ಮ ಮೂಗಿನಲ್ಲಿ ಮತ್ತು ನಮ್ಮದೇ ಮೆದುಳಿಗಿರೋ ಅಗಾಧವಾದ ಶಕ್ತಿಯಲ್ಲಿ! ಮನುಷ್ಯರ ಮೂಗಿಗಿಗಿರೋ ಆಗ್ರಾಣಿಸುವ ಶಕ್ತಿಯೇ…

Read More

ಸೂಳೆಯೆಂದು ಜರಿಯುವ ಮುನ್ನ ನೂರು ಬಾರಿ ಆಲೋಚಿಸಿ! ಬೆಂಗಳೂರಿನಂಥಾ ಮಹಾ ನಗರಗಳಲ್ಲಿ ಬೇರೂರಿಕೊಂಡಿರೋ ದಂಧೆಗಳು ಒಂದೆರಡಲ್ಲ. ಅಲ್ಲಿ ದುಡಿದು ಬದುಕುವವರಿಗೆ ಅಗಾಧ ಅವಕಾಶಗಳಿವೆ. ಬೇರೆಯವರನ್ನ ಹುರಿದು ಮುಕ್ಕುವ ರಕ್ಕಸರಿಗೂ ಕೂಡಾ ಅಂಥಾದ್ದೇ ಅವಕಾಶಗಳಿವೆ. ನೀವೇನಾದರೂ ಬೆಂಗಳೂರಿನಂಥಾ ನಿವಾಸಿಗಳಾಗಿದ್ದರೆ, ಅಪರೂಪಕ್ಕಾದರೂ ಅಲ್ಲಿಗೆ ಹೋಗಿ ಬಂದ ಅನುಭವವಿದ್ದರೆ ಕಂಡ ಕಂಡಲ್ಲಿ ಸನ್ನೆಗಳ ಮೂಲಕ ಸೆಳೆಯೋ ಬೆಲೆವೆಣ್ಣುಗಳನ್ನು ಗಮನಿಸಿರುತ್ತೀರಿ. ಸಿಂಗಾರಗೊಂಡು, ಉದ್ರೇಕಿಸುವಂಥಾ ಮಾದಕ ನೋಟ ಬೀರುತ್ತಾ ಗಿರಾಕಿಗಳಿಗಾಗಿ ಕಾದು ಕೂತ ಈ ಜೀವಗಳಿಗೆ ಸಭ್ಯ ಸಮಾಜ ಸೂಳೆಯರೆಂಬ ಪಟ್ಟ ಕೊಟ್ಟಿದೆ. ಸಭ್ಯ ಭಾಷೆಯಲ್ಲದಕ್ಕೆ ವೇಶ್ಯಾವಾಟಿಕೆ ಅನ್ನಲಾಗುತ್ತೆ. ವಾಸ್ತವವೆಂದರೆ, ಮೇಲುನೋಟಕ್ಕೆ ಆ ಜೀವಗಳ ಬಗ್ಗೆ ಅಸಹ್ಯ ಹೊಂದಿರುವವರೇ ರಾತ್ರಿ ಹೊತ್ತಲ್ಲಿ ಗಿರಾಕಿಗಳಾಗೋದೂ ಇದೆ. ಆದರೆ, ಹಾಗೆ ಬೀದಿಯಲ್ಲಿ ಕೈಚಾಚಿ ನಿಂತವರ ಹಿಂದೆ ಅದೆಂಥಾ ಕರುಣಾಜನಕ ಕಥೆಗಳಿರಬಹುದು, ಅವರ ನೋವೆಂಥಾದ್ದು, ಯಾರದ್ದೋ ಮನೆಯ ಕೂಸಾಗಿ ಹುಟ್ಟಿದ್ದ ಆ ಹೆಣ್ಣುಮಕ್ಕಳನ್ನು ಈ ರೀತಿ ಬೀದಿಗಿಳಿಸಿದ ದುಷ್ಟ ವ್ಯವಸ್ಥೆ ಯಾವುದೆಂಬುದರ ಬಗ್ಗೆ ಬಹುತೇಕರು ಯೋಚಿಸೋ ಗೋಜಿಗೆ ಹೋಗುವುದಿಲ್ಲ. ವೇಶ್ಯಾವಾಟಿಕೆ ಅಂದಾಕ್ಷಣ ಕಾಮದ…

Read More

ರಾಜಮೌಳಿ ನಿರ್ದೇಶನದ ಬಾಹುಬಲಿ ಸರಣಿ ಸಿನಿಮಾಗಳ ಮೂಲಕ ವಿಶ್ವ ಮಟ್ಟದಲ್ಲಿ ಸ್ಟಾರ್ ಆಗಿ ಮಿಂಚುತ್ತಿರುವಾತ ಪ್ರಭಾಸ್. ಆದರೆ, ಅದೆಕೋ ಬಾಹುಬಲಿಯ ಪ್ರಭೆಯಾಚೆಗೊಂದು ಪುಷ್ಕಳ ಗೆಲುವು ದಕ್ಕಿಸಿಕೊಳ್ಳುವಲ್ಲಿ ಅವರಿಗೆ ಕೊಂಚ ಹಿನ್ನಡೆಯಾಗಿದೆ. ಅದೆಲ್ಲವನ್ನೂ ನೀಗಿಕೊಂಡು, ಹೊಸಾ ದಾಖಲೆ ಬರೆಯುವ ಉತ್ಸಾಹವೀಗ ಪ್ರಭಾಸ್ ಕಣ್ಣುಗಳಲ್ಲಿ ಸ್ಪಷ್ಟವಾಗಿಯೇ ಕಾಣಿಸುತ್ತಿದೆ. ಅಂಥಾದ್ದೊಂದು ಆವೇಗಕ್ಕೆ ಕಾರಣವಾಗಿರೋದು ದೇಶಾದ್ಯಂತ ನಿರೀಕ್ಷೆ ಮೂಡಿಸಿರುವ ‘ಆದಿಪುರುಷ’ ಚಿತ್ರ. ಇದರಲ್ಲಿ ಪ್ರಭಾಸ್ ಶ್ರೀರಾಮಚಂದ್ರನಾಗಿ ಅವತಾರವೆತ್ತಿದ್ದಾರೆ. ಈಗಾಗಲೇ ಆ ಸಿನಿಮಾದಲ್ಲಿನ ಪ್ರಭಾಸ್ ಲುಕ್ಕಿಗೆ ಪ್ರೇಕ್ಷಕರೆಲ್ಲ ಸಾರಾಸಗಟಾಗಿ ಫಿದಾ ಆಗಿದ್ದಾರೆ. ಹೀಗೆ ಆದಿಪುರುಷನಾಗಿ ಅಬ್ಬರಿಸಲು ಅಣಿಗೊಂಡಿರುವ ಪ್ರಭಾಸ್, ಇದೀಗ ನಿಜವಾಗಿಯೂ ರಾವಣನ ದಹನಕ್ಕೆ ಮುಂದಾಗಿದ್ದಾರೆ. ಪ್ರತೀ ವರ್ಷವೂ ದೆಹಲಿಯ ಲವ ಕುಶ ರಾಮಲೀಲಾ ಮೈದಾನದಲ್ಲಿ ದಸರಾ ಹಬ್ಬದ ಸಂದರ್ಭದಲ್ಲಿ ರಾವಣನ ಪ್ರತಿಕೃತಿ ದಹಿಸುವ ಸಂಪ್ರದಾಯವೊಂದಿದೆ. ಕಳೆದೆರಡು ವರ್ಷಗಳಲ್ಲಿ ಕೊರೋನಾ ಕಾರಣದಿಂದ ಆ ಆಚರಣೆಗೆ ಒಂದಷ್ಟು ಹಿನ್ನಡೆಯಾಗಿತ್ತು. ಈ ಬಾರಿ ಹಿಂದೆಂದಿಗಿಂತಲೂ ಅದ್ದೂರಿಯಾಗಿ ಈ ಕಾರ್ಯಕ್ರಮವನ್ನು ನಡೆಸಲು ರಾಮ್‌ಲೀಲಾ ಸಮಿತಿ ಯೋಜನೆ ಹಾಕಿಕೊಂಡಿದೆ. ಈ ಬಾರಿ ರಾವಣನ ದುಷ್ಟತನಕ್ಕೆ…

Read More

ಕೆಲ ನಟ ನಟಿಯರು ಒಂದೆರಡು ಸಿನಿಮಾಗಳಲ್ಲಿ ನಟಿಸಿ, ಒಂದಷ್ಟು ಜನಪ್ರಿಯತೆ ಗಳಿಸಿಕೊಳ್ಳುತ್ತಲೇ ಸ್ಟಾರ್‌ಗಿರಿಯ ಗತ್ತು ಪ್ರದರ್ಶಿಸಲಾರಂಭಿಸುತ್ತಾರೆ. ಇನ್ನೂ ಕೆಲ ಮಂದಿ ನೆಟ್ಟಗೆ ಒಂದು ಸಿನಿಮಾದಲ್ಲಿ ನಟಿಸಿ ಸಾವರಿಸಿಕೊಳ್ಳೋ ಮುನ್ನವೇ, ತಮಗೆ ತಾವೇ ಬಿರುದು ಕೊಟ್ಟುಕೊಂಡು, ಪೇಯ್ಡ್ ಅಭಿಮಾನಿಗಳನ್ನು ಸುತ್ತ ಬಿಟ್ಟುಕೊಂಡು ಮೆರೆಯಲಾರಂಭಿಸುತ್ತಾರೆ. ಇಂಥಾ ಜಗತ್ತಿನಲ್ಲಿ ಸಿಕ್ಕ ಖ್ಯಾತಿ, ದಂಡಿ ದಂಡಿ ಅಭಿಮಾನವನ್ನೆಲ್ಲ ವಿನಮ್ರವಾಗಿ ಸ್ವೀಕರಿಸಿ, ಸಾಮಾನ್ಯರಲ್ಲಿ ಸಾಮಾನ್ಯರಂತೆ ಬದುಕೋ ಸ್ಟಾರುಗಳನ್ನು ನೋಡಿದರೆ ನಿಜಕ್ಕೂ ಗೌರವ ಮೂಡಿಕೊಳ್ಳುತ್ತೆ. ಹಾಗೊಂದು ಗೌರವಕ್ಕೆ ಪಾತ್ರರಾಗಿರುವವರಲ್ಲಿ ನಮ್ಮ ರಾಜಣ್ಣ ಪ್ರಮುಖರಾದರೆ, ಈವತ್ತಿಗೆ ಆ ಸಂಖ್ಯೆ ಬೆರಳೆಣಿಕೆಯಷ್ಟಿದೆ. ಇನ್ನುಳಿದಂತೆ, ಪಕ್ಕದ ತಮಿಳು ಚಿತ್ರರಂಗದ ವಿಚಾರಕ್ಕೆ ಬರೋದಾದರೆ, ತನ್ನ ಸಿಂಪ್ಲಿಸಿಟಿಯ ಮೂಲಕವೇ ಭಿನ್ನವಾಗಿ ನಿಲ್ಲುವವರು ಚಿಯಾನ್ ವಿಕ್ರಂ! ಅಭಿಮಾನಿಗಳು ಎದುರು ಬಂದು ನಿಂತರೂ, ಆಸುಪಾಸಲ್ಲಿ ಯಾರೇ ಇದ್ದರೂ ಅತ್ಯಂತ ಆತ್ಮೀಯವಾಗಿ ವರ್ತಿಸೋದು ವಿಕ್ರಂ ಸ್ಪೆಷಾಲಿಟಿ. ಅವರೊಂದಿಗೆ ಯಾರೇ ಸಿನಿಮಾಗಳಲ್ಲಿ ಕೆಲಸ ಮಾಡಿದರೂ ವಿಕ್ರಂ ಬಗೆಗೊಂದು ವಿಶೇಷ ಗೌರವ ಮೂಡಿಕೊಳ್ಳುತ್ತಿದೆ. ಅದರಲ್ಲಿಯೂ ತನ್ನ ಮನೆಯ ವಾತಾವರಣದಲ್ಲಿ ಕಾರ್ಯ ನಿರ್ವಹಿಸುವವರನ್ನೆಲ್ಲ ವಿಕ್ರಂ ತನ್ನ…

Read More

ಊಟ ಮಾಡುವಾಗ ಅನ್ನದಲ್ಲಿ ಕೂದಲು ಬಿದ್ದಿದ್ದರೂ ಮನೆ ಮಂದಿಯ ಮೇಲೆ ಜುಟ್ಟು ಕೆದರಿಕೊಂಡು ಕಾದಾಟಕ್ಕಿಳಿಯುವವರಿದ್ದಾರೆ. ಈ ಕೂದಲು ಸಿಗುವ ಸಿಲ್ಲಿ ಕಾರಣಕ್ಕೇ ಅದೆಷ್ಟೋ ಸಾಂಸಾರಿಕ ಬದುಕಿನಲ್ಲಿ ಅಶಾಂತಿ ನೆಲೆಯೂರಿ ಬಿಡುತ್ತದೆಂದರೆ ನಿಮಗೆ ಅಚ್ಚರಿಯಾದೀತೇನೋ… ಹಾಗೆ ಸಣ್ಣ ಕೂದಲು ಹಿಡಿದುಕೊಂಡು ಜಗ್ಗಾಡುವ ಮಂದಿ, ಹೊಟೇಲುಗಳಿಗೆ ಹೋಗಿ ತೃಪ್ತಿಯಿಂದ ತಿಂದು ಬರುತ್ತಾರೆ. ಆದರೆ, ಹಾಗೆ ನಾವು ಚಪ್ಪರಿಸಿ ತಿನ್ನೋ ತಿನಿಸಿನ ಮೇಕಿಂಗ್ ಸ್ಟೈಲನ್ನು ಕಣ್ಣಾರೆ ಕಂಡರೆ ಜನುಮ ಪೂರ್ತಿ ವಾಂತಿ ಕಂಟ್ರೋಲಿಗೆ ಬರುವುದು ಕಷ್ಟವಿದೆ. ಇದಕ್ಕೆ ಅಪವಾದವೆಂಬಂತೆ ಒಂದಷ್ಟು ಹೊಟೇಲುಗಳಿರಬಹುದಾದರೂ, ಬಹುತೇಕವುಗಳದ್ದು ಅದೇ ಕಥೆ. ತಮಿಳುನಾಡಿನಲ್ಲಾಗಿರುವ ಒಂದು ಘಟನೆಯ ಕಥೆ ಕೇಳಿದರೆ, ಖಂಡಿತಾ ಹೊಟೇಲಿನ ಬಗ್ಗೆ ಭಯ ಆವರಿಸಿಕೊಂಡು ಬಿಡುತ್ತೆ! ದೊಡ್ಡ ಹೊಟೇಲು, ರೆಸ್ಟೋರೆಂಟ್‌ಗಳಲ್ಲಿ ಭಯಂಕರ ಸ್ವಚ್ಛತೆ ಕಾಪಾಡುತ್ತಾರೆ ಅಂತೊಂದು ಭ್ರಮೆ ಜನಸಾಮಾನ್ಯರಲ್ಲಿದೆ. ತಮಿಳುನಾಡಿನ ಗಾಂಧಿನಗರದ ನಿವಾಸಿ ಮುರಳಿ ಎಂಬಾತ ಬಾಲಾಜಿ ಭವನದಲ್ಲಿ ಖಾಸಗಿ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದರು. ಒಂದಷ್ಟು ಜನರಿದ್ದ ಆ ಕಾರ್ಯಕ್ರಮಕ್ಕೆ ತಿರುವಣ್ಣಾಮಲೈ ರೆಸ್ಟೋರೆಂಟಿನಿಂದ ಊಟ ತರಿಸಲಾಗಿತ್ತು. ಅದು ಹೇಳಿಕೇಳಿ ಬಲು ಪ್ರಸಿದ್ಧಿ…

Read More