Author: Santhosh Bagilagadde

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

ಶೋಧ ನ್ಯೂಸ್ ಡೆಸ್ಕ್: ಅಭಿವೃದ್ಧಿ ಶೀಲ ದೇಶವಾಗಿ ಗುರುತಿಸಿಕೊಂಡಿರುವ ಭಾರತದ ಮೈತುಂಬಾ ನಾನಾ ಸಮಸ್ಯೆಗಳ ಗಾಯಗಳಿದ್ದಾವೆ. ಸದ್ಯ ನಾನಾ ಭ್ರಮೆ ಬಿತ್ತಿ ಭಾರತ ಬದಲಾಗಿದೆ ಅಂತೆಲ್ಲ ಪೋಸು ಕೊಟ್ಟರೂ ಕೂಡಾ ಈವತ್ತಿಗೂ ಭಾರತ ಬಡ ದೇಶವೇ. ತೀರಾ ಸವಲತ್ತು, ಸೌಕರ್ಯಗಳು ಬೇಡ; ಕನಿಷ್ಠ ಮೂಲಭೂತ ಸೌಕರ್ಯಗಳಿಗೂ ತತ್ವಾರ ಬಂದು, ಅದೆಷ್ಟೋ ಜನರು ಜೀವವನ್ನೇ ಕಳೆದುಕೊಳ್ಳುತ್ತಿದ್ದಾರೆ. ದುರಂತವೆಂದರೆ ಸ್ವತಂತ್ರ ಭಾರತವಾಗಿ ಇಷ್ಟು ವರ್ಷ ಕಳೆದರೂ ಕೂಡಾ ಅಪಘಾತವಾದಾಗ ಸೂಕ್ತವಾದೊಂದು ಆಂಬುಲೆನ್ಸ್ ಸೇವೆ ಸಿಗೋ ವ್ಯವಸ್ಥೆ ಇನ್ನೂ ಇಂಡಿಯಾದ ಮೂಲೆ ಮೂಲೆಗಳಿಲ್ಲ. ಇಂಥಾದ್ದೊಂದು ಅವ್ಯವಸ್ಥೆಗೆ ಕನ್ನಡಿ ಹಿಡಿಯುವಂಥಾ ವೀಡಿಯೋವೊಂದು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅಪಘಾತದಲ್ಲಿ ತೀವ್ರಥರವಾಗಿ ಗಾಯಗೊಂಡಿರುವ ರೋಗಿಯೋರ್ವನನ್ನು ಜಿಸಿಬಿಬಿಯಲ್ಲಿ ಕೊಂಡೊಯ್ಯುತ್ತಿರುವ ಆ ವೀಡಿಯೋವನ್ನು ವ್ಯಕ್ತಿಯೋರ್ವರು ಹಂಚಿಕೊಂಡಿದ್ದಾರೆ. ಅದು ಮಧ್ಯಪ್ರದೇಶದ ಕಟ್ನಿ ಎಂಬಲ್ಲಿಯದ್ದೆಂದು ಹೇಳಲಾಗುತ್ತಿದೆ. ಅದರ ಅಸಲೀಯತ್ತೇನು? ಅದರ ಹಿಂದಿರೋ ವಸ್ತುಸ್ಥಿತಿಯೇನೆಂಬ ಬಗ್ಗೆ ಇನ್ನಷ್ಟೇ ಮಾಹಿತಿ ಹೊರಬೀಳಬೇಕಿದೆ. ಸದರಿ ವೀಡಿಯೋದ ಹಿಂದೆ ಅದೇನೇನಿದೆಯೋ ಗೊತ್ತಿಲ್ಲ. ಆದರೆ ಅಂಥಾ ಪರಿಸ್ಥಿತಿ ಈವತ್ತಿಗೂ ಭಾರತದ…

Read More

ಶೋಧ ನ್ಯೂಸ್ ಡೆಸ್ಕ್: ಪದೇ ಪದೆ ಎದುರಾಗುವ ಪ್ರಾಕೃತಿಕ ವಿಪತ್ತುಗಳ ನಡುವೆಯೂ, ಅಡಿಗಡಿಗೆ ಫೀನಿಕ್ಸಿನಂತೆ ಎದ್ದು ನಿಲ್ಲುತ್ತಾ ಬಂದಿರುವ ವಿಶಿಷ್ಟ ದೇಶ ಜಪಾನ್. ಇದುವರೆಗೂ ಆ ದೇಶದ ಮಂದಿ ಅದೆಷ್ಟು ಪ್ರಾಕೃತಿಕ ಅವಘಡಗಳಿಗೀಡಾದರು, ಅದೆಷ್ಟು ತಲ್ಲಣಿಸಿದರೆಂದರೆ, ಜಗತ್ತಿನ ಬೇರ‍್ಯಾವುದೇ ದೇಶವಾದರೂ ಸರ್ವನಾಶವಾಗಿ ಬಿಡುತ್ತಿತ್ತೇನೋ. ಆದರೆ, ಇಂಥಾ ಸವಾಲುಗಳೆದುರಾದಾಗ ಅದಕ್ಕೆ ಎದೆಯೊಡ್ಡಿ ಜೈಸಿಕೊಳ್ಳುವ ಕಲೆಯನ್ನು ಪ್ರಕೃತಿಯೇ ಆ ಜನರಿಗೆ ಕೊಟ್ಟಂತಿದೆ. ಹೀಗೆ ಪ್ರಾಕೃತಿಕ ವಿಪತ್ತುಗಳಿಂದ ನಲುಗುತ್ತಿರುವ ಜಪಾನಿಗರಿಗೀಗ ಮತ್ತೊಂದು ಕಂಟಕ ಎದುರಾಗಿದೆ. ಅದು ರಣಭೀಕರ ಚಂಡಮಾರುತದ ರೂಪದಲ್ಲಿ ಜಪಾನಿಗೆ ಲಗ್ಗೆಯಿಟ್ಟಿದೆ. ಗಂಟೆಗೆ ಇನ್ನೂರೈವತ್ತು ಕಿಲೋಮೀಟರ್‌ಗೂ ಅಧಿಕ ವೇಗದಲ್ಲಿ ಅಪ್ಪಳಿಸುತ್ತಿರುವ ಈ ಭೀಕರ ಚಂಡಮಾರುತ, ಜಪಾನಿನ ಕರಾವಳಿ ಸೇರಿದಂತೆ ಕೆಲ ಪ್ರದೇಶಗಳನ್ನು ಅಕ್ಷರಶಃ ಸ್ಮಶಾನವನ್ನಾಗಿಸಿದೆ. ಕಡಲ ತೀರದ ಮಂದಿತಯ ಬದುಕಂತೂ ಬೀದಿಗೆ ಬಂದುಬಿಟ್ಟಿದೆ. ಅದೆಷ್ಟೋ ಜನರು ಜೀವ ಕಳೆದುಕೊಂಡಿದ್ದಾರೆ. ಒಂದಷ್ಟು ಪ್ರದೇಶಗಳಿಗೆ ಅಲ್ಲಿನ ಆಡಳಿತ ರೆಡ್ ಅಲರ್ಟ್ ಘೋಶಿಸಿದೆ. ಆದರೆ ಅದೆಂಥಾದ್ದೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದರೂ ಕೂಡಾ ರಣ ವೇಗದ ಗಾಳಿ ಎಲ್ಲವನ್ನೂ ಛಿದ್ರವಾಗಿಸುತ್ತಿದೆ.…

Read More

ಸಿನಿಮಾ ರಂಗದಲ್ಲಿ ಏನಾದರೊಂದು ಸಾಧನೆ ಮಾಡಬೇಕೆಂಬುದು ಹಲವರ ಕನಸು. ಅದಕ್ಕಾಗಿ ಪಡುವ ಪರಿಶ್ರಮ, ಆ ಹಾದಿ ತಂದೊಡ್ಡುವ ಸವಾಲುಗಳು ಸಲೀಸಾದುವೇನಲ್ಲ; ಅದನ್ನು ಎದುರಿಸಿ ದಾಟಿಕೊಳ್ಳದಿದ್ದರೆ ಗೆಲುವೆಂಬುದು ದಕ್ಕುವುದು ಕನಸಿನ ಮಾತು. ಆದರೆ, ಅಷ್ಟೆಲ್ಲವನ್ನೂ ಮೀರಿಕೊಂಡು ಬಣ್ಣದ ಜಗತ್ತಿಗೆ ಬಂದ ಹೆಣ್ಣುಮಕ್ಕಳ ಪಾಲಿಗೆ ಮತ್ತೊಂದು ಆಯಾಮದ ಕಂಟಕಗಳು ಹೆಜ್ಜೆ ಹೆಜ್ಜೆಗೂ ಎದುರಾಗುತ್ತಲೇ ಹೋಗುತ್ತವೆ. ಅದರಲ್ಲಿಯೂ ಸಿನಿಮಾ ರಂಗದ ಆಯಕಟ್ಟಿನ ಜಾಗಗಳಲ್ಲಿ ಕೂತಿರುವ ಕೆಲ ಮಂದಿ, ಅವಕಾಶ ಕೇಳಿ ಬಂದ ಹುಡುಗೀರನ್ನು ಮಂಚ ಹತ್ತಿಸಿಕೊಳ್ಳುವ ಖಯಾಲಿ ಇಟ್ಟುಕೊಂಡಿರುತ್ತಾರೆ. ಇಂಥಾ ಹೀನ ಮನಃಸ್ಥಿತಿಯ ವಿರುದ್ಧ ವರ್ಷಗಳ ಹಿಂದೆ ಕಾಸ್ಟಿಂಗ್ ಕೌಚ್ ಅಂತೊಂದು ವಿಚಾರ ಮುನ್ನೆಲೆಗೆ ಬಂದಿತ್ತು. ಕೊರೋನಾ ಕಾಲಘಟ್ಟದಲ್ಲಿ ತಣ್ಣಗಾದಂತಿದ್ದ ಕಾಸ್ಟಿಂಗ್ ಕೌಚ್‌ಗೀಗ ಮತ್ತೆ ಜೀವ ಬಂದಿದೆ. ಇದೀಗ ಕನ್ನಡವೂ ಸೇರಿದಂತೆ ನಾನಾ ಚಿತ್ರರಂಗಗಳಲ್ಲಿ ಮತ್ತೆ ಕಾಸ್ಟಿಂಗ್ ಕೌಚ್ ವೃತ್ತಾಂತ ಗರಿಬಿಚ್ಚಿಕೊಳ್ಳಲಾರಂಭಿಸಿದೆ. ಅದರ ಭಾಗವಾಗಿಯೇ ಮಧ್ಯಪ್ರದೇಶ ಮೂಲದ ಬಾಲಿವುಡ್ ನಟಿ ಹಾಗೂ ರಂಗಭೂಮಿಯ ಪ್ರತಿಭಾನ್ವಿತ ಕಲಾವಿದೆ ಪೂಜಾ ಪಾಂಡೆ ಕಾಸ್ಟಿಂಗ್ ಕೌಚ್ ಅನುಭವಗಳನ್ನು ತೆರೆದಿಟ್ಟಿದ್ದಾಳೆ. ಆಕೆಯ…

Read More

ಹೆಚ್ಚೇನಲ್ಲ; ಹದಿನೈದಿಪ್ಪತ್ತು ಅಡಿಯಿಂದ ಕೆಳಕ್ಕೆ ಬಿದ್ದರೂ ಸೊಂಟವೂ ಸೇರಿದಂತೆ, ದೇಹದ ನಾನಾ ಭಾಗದ ಮೂಳೆಗಳು ಮುರಿಯೋ ಸಂಭವವಿದೆ. ತಲೆ ಕೆಳಗಾಗಿ ಬಿದ್ದರಂತೂ ಬದುಕೋದೇ ಡೌಟು. ಇನ್ನು ನೂರಾರು ಅಡಿಯಿಂದ ಬಿದ್ದರಂತೂ ಮೇಲೆದ್ದು ಬರೋ ಸಾಧ್ಯತೆಗಳೇ ಕಡಿಮೆ. ಹಾಗಿದ್ದ ಮೇಲೆ ಸಾವಿರಾರು ಅಡಿಯಿಂದ ಕೆಳಕ್ಕೆ ಬಿದ್ದರೆ ಬದುಕೋದು ಸಾಧ್ಯವೇ? ಇಂಥಾ ಪ್ರಶ್ನೆ ಎದುರಾದ್ರೆ ಸಾರಾಸಗಟಾಗಿ ಸಾಧ್ಯವಿಲ್ಲ ಎಂಬ ಉತ್ತರವೇ ಎದುರುಗೊಳ್ಳುತ್ತೆ. ಆದರೆ ಅದನ್ನು ಸುಳದ್ಳು ಮಾಡುವಂಥಾ ಘಟನೆಯೊಂದು ೧೯೭೦ರ ದಶಕದಲ್ಲಿಯೇ ನಡೆಯಲಾಗಿದೆ. ಅದು ಗಿನ್ನಿಸ್ ರೆಕಾರ್ಡಿನಲ್ಲಿಯೂ ದಾಖಲಾಗಿ ಬಿಟ್ಟಿದೆ! ಸರ್ಬಿಯಾ ದೇಶದ ಪ್ಲೈಟ್ ಅಟೆಂಡೆಂಟ್ ವೆಸ್ನಾ ವುಲೋವಿಕ್ ಎಂಬ ಗಟ್ಟಿಗಿತ್ತಿ ಹೆಣ್ಣು ಮಗಳು ಈ ಪವಾಡಸದೃಶ ಘಟನೆಯ ಕೇಂದ್ರಬಿಂದು. ಹಲವಾರು ವರ್ಷಗಳಿಂದಲೂ ವಿಮಾನ ಯಾನದ ಬಗ್ಗೆ ಕನಸು ಕಂಡು ಕಡೆಗೂ ಪ್ಲೈಟ್ ಅಟೆಂಡೆಂಟ್ ಆಗಿದ್ದ ಆಕೆ ವಿಮಾನ ಪತನದ ಆಘಾತ ಎದುರಿಸುವಂತಾಗಿತ್ತು. ಗಡಿಬಿಡಿಯಲ್ಲಿ ಪ್ಯಾರಾಚೂಟ್ ಅನ್ನೂ ಹಿಡಿದುಕೊಳ್ಳದೆ ಕ್ರ್ಯಾಶ್ ಆಗಿದ್ದ ವಿಮಾನದಿಂದ ಹಾರಿಕೊಂಡ ಆಕೆ ಮೂವತ್ಮೂರು ಸಾವಿರ ಅಡಿಗಳಷ್ಟು ಎತ್ತರದಿಂದ ಭೂಮಿಗೆ ಬಿದ್ದಿದ್ದಳು.…

Read More

ರೇವ್ ಪಾರ್ಟಿಗಳ ಸರದಾರ ಶ್ರೀನಿ ಪಕ್ಕಾ ಪಿಂಪ್! ಕೊರೋನಾ ಕಾಲಘಟ್ಟದಲ್ಲಿ ಸ್ಯಾಂಡಲ್‌ವುಡ್ಡಿನ್ನ ಡ್ರಗ್ಸ್ ವ್ಯಸನದ ಕುರಿತಾದ ಸುದ್ದಿಗಳು ಬಹುದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿದ್ದವು. ಸಿಸಿಬಿ ಪೊಲೀಸರು ಕನ್ನಡ ಚಿತ್ರರಂಗವನ್ನು ಗುರಿಯಾಗಿಸಿಕೊಂಡು ಕಾರ್ಯಾಚರಣೆ ನಡೆಸಿ, ರಾಗಿಣಿ ಮತ್ತು ಸಂಜಾನಾರನ್ನು ಬಂಧಿಸಿದ್ದರು. ಹಾಗೆ ತಿಂಗಳುಗಟ್ಟಲೆ ಜೈಲಿನಲ್ಲಿ ಬಂಧಿಯಾಗಿದ್ದಾಕೆ ತುಪ್ಪದ ಹುಡುಗಿ ರಾಗಿಣಿ ದ್ವಿವೇದಿ. ಜೈಲೊಳಗೇ ನಾನಾ ರೀತಿಯ ಡ್ರಾಮಾ ನಡೆಸಿ ಕಡೆಗೂ ಬೇಲ್ ಪಡೆದು ಹೊರ ಬಂದಿರುವ ರಾಗಿಣಿಗೆ, ಈ ಕ್ಷಣಕ್ಕೂ ಕಂಟಕದ ಕತ್ತಿಯ ಮೊನೆ ನೆತ್ತಿಯ ಮೇಲೆ ತೂಗುತ್ತಲೇ ಇದೆ. ಅತ್ತ ಸಿಸಿಬಿ ಪೊಲೀಸರ ಗಮನ ಬೇರೆಡೆಯತ್ತ ಹೊರಳಿಕೊಂಡಿರುವಂತಿರೋದರಿಂದ, ಹೇಗೋ ಬಚಾವಾದೆ ಅಂತಿದ್ದ ರಾಗಿಣಿಗೀಗ ಅನಿರೀಕ್ಷಿತ ಶಾಕ್ ಒಂದು ಎದುರಾಗಿದೆ; ಖುದ್ದು ಸಿಸಿಬಿ ಪೊಲೀಸರೇ ತನ್ನ ಖಾಸಾ ಗೆಣೆಕಾರ, ಕುಖ್ಯಾತ ಡ್ರಗ್ ಪೆಡ್ಲರ್ ಶಿನೀವಾಸ್ ಸುಬ್ರಮಣ್ಯ ಅಲಿಯಾಸ್ ಶ್ರೀನಿಯನ್ನು ಬಂಧಿಸುವ ಮೂಲಕ! ವೀರಮದಕರಿ ಚಿತ್ರದ ಮೂಲಕ ಸುದೀಪ್‌ಗೆ ನಾಯಕಿಯಾಗಿ ಕನ್ನ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದವಳು ರಾಗಿಣಿ. ಆ ನಂತರದಲ್ಲಿ ಕನ್ನಡದ ನೆಲದಲ್ಲಿಯೇ ಭರಪೂರ…

Read More

ರೀಮೇಕೆಂಬ ಸತ್ಯ ಮುಚ್ಚಿಡಲು ಕಾರಣವೇನು? ಮಾನ್ಸೂನ್ ರಾಗ… ಹೀಗೊಂದು ಸಿನಿಮಾ ಅಣಿಗೊಳ್ಳುತ್ತಿರುವ ವಿಚಾರ ಕೇಳಿಯೇ ಪ್ರೇಕ್ಷಕರೆಲ್ಲ ಥ್ರಿಲ್ ಆಗಿ ಹೋಗಿದ್ದರು. ನಂತರ ಹೆಸರಿಗೆ ತಕ್ಕುದಾದ ಆರ್ಧ್ರ ಛಾಯೆ ಹೊಂದಿದ್ದ ಪೋಸ್ಟರುಗಳು ಕಂಡ ಮೇಲಂತೂ ಪ್ರೇಕಲ್ಷಕರು ನಿರೀಕ್ಷೆಯ ಅಗ್ಗಿಷ್ಠಿಕೆಯ ಮುಂದೆ ನಿಂತು ಬೆಚ್ಚಗಾಗಲಾರಂಭಿಸಿದ್ದರು; ಈ ಸಿನಿಮಾ ಬಗ್ಗೆ ಇನ್ನೂ ಹೆಚ್ಚೆಚ್ಚು ಮಾಹಿತಿ ಪಡೆಯಲು ಕಾತರರಾಗಿದ್ದರು. ಅದರಲ್ಲಿಯೂ ವಿಶೇಷವಾಗಿ, ವಿಲನ್ ಆಗಿ ಅಬ್ಬರಿಸಿ ಸದ್ದು ಮಾಡಿದ್ದ ಡಾಲಿ ಧನಂಜಯ್ ಹೀರೋ ಆಗಿ, ಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆಂಬ ಸುಳಿವು ಸಿಕ್ಕಿದ್ದೇ ಮಾನ್ಸೂನಿನ ಹನಿಗಳು ಪ್ರತೀ ಮನಸುಗಳಲ್ಲಿಯೂ ತೊಟ್ಟಿಕ್ಕಲು ಶುರುವಿಟ್ಟುಕೊಂಡಿತ್ತು. ಒಟ್ಟಾರೆಯಾಗಿ ಇದೊಂದು ಭಿನ್ನ ಕಥಾನಕ, ಮಾನ್ಸೂನಿನಲ್ಲಿ ತೋಯ್ದ ಗಹನವಾದ ಕಥೆ ಇದರೊಳಗಿದೆ ಎಂಬೆಲ್ಲ ನಂಬಿಕೆಗಳು ತಂತಾನೇ ಮೂಡಿಕೊಂಡಿದ್ದವು. ಆದರೆ ಮಾನ್ಸೂನಿನ ಮೊದಲ ಮಳೆಯ ಮಣ್ಣ ಘಮಲಿನಂಥಾದ್ದೇ ತಾಜಾ ಅನುಭೂತಿಯ ನಿರೀಕ್ಷೆಯೊಂದಿಗೆ ಸಿನಿಮಾ ಮಂದಿರ ಹೊಕ್ಕ ಮಂದಿಗೆ ಎದುರಾಗಿರೋದು, ಮುಗ್ಗಲು ಹಿಡಿದ ಕಮಟು ಮತ್ತು ಲಯ ತಪ್ಪಿದ ರಾಗ! ನಿಮಗೆಲ್ಲ ಗೊತ್ತಿಲ್ಲದಿರುವುದೇನಲ್ಲ; ಮಳೆ ಅಂದರೇನೇ ವಿಭಿನ್ನ ಅನುಭೂತಿ.…

Read More

ಎಲ್ಲವೂ ನಿರೀಕ್ಷೆಯಂತೆಯೇ ಘಟಿಸುತ್ತಿರುವ ಅಪಾರ ಖುಷಿ ಬನಾರಸ್ ಚಿತ್ರತಂಡವನ್ನು ತಬ್ಬಿಕೊಂಡಿದೆ. ಓರ್ವ ನವ ನಾಯಕನ ಚಿತ್ರವೊಂದು ಈ ಪರಿಯಾಗಿ, ತಾನೇತಾನಾಗಿ ಸೌಂಡು ಮಾಡಲು ಸಾಧ್ಯವಾ ಅತೊಂದು ಅಚ್ಚರಿ ಮೂಡುವಂತೆ ಬನಾರಸ್ ಟಾಕ್ ಕ್ರಿಯೇಟ್ ಮಾಡುತ್ತಿದೆ. ಗಮನೀಯ ಅಂಶವೆಂದರೆ, ಇಂಥಾದ್ದೊಂದು ಸಕಾರಾತ್ಮಕ ವಾತಾವರಣಕ್ಕೆ ಕಾರಣವಾಗಿರೋದು ಚೆಂದದ ಹಾಡುಗಳ ಹಂಗಾಮಾ. ಇತ್ತೀಚೆಗಷ್ಟೇ ಬಿಡುಗಡೆಗೊಂಡಿದ್ದ ಮಾಯಗಂಗೆ ಎಂಬ ಹಾಡನ್ನು ಬಹುತೇಕರು ಮತ್ತೆ ಮತ್ತೆ ಕೇಳುತ್ತಾ ಸುಖಿಸುತ್ತಿದ್ದಾರೆ. ಈ ಕಾರಣದಿಂದಲೇ ಅದು ದೊಡ್ಡ ಮಟ್ಟದಲ್ಲಿ ಟ್ರೆಂಡ್ ಸೆಟ್ ಮಾಡಿದೆ. ಆ ಮೆಲೋಡಿಯ ಮಾಧುರ್ಯವಿನ್ನೂ ಚಾಲ್ತಿಯಲ್ಲಿರುವಾಗಲೇ, ಟಪ್ಪಾಂಗುಚ್ಚಿ ಶೈಲಿಯ ಮತ್ತೊಂದು ಲಿರಿಕಲ್ ವೀಡಿಯೋ ಸಾಂಗ್ ಬಿಡುಗಡೆಗೊಂಡಿದೆ. ನಿರ್ದೇಶಕ ಜಯತೀರ್ಥ ಸಿನಿಮಾ ಅಂದ ಮೇಲೆ ಅಲ್ಲಿ ಮತ್ತೆ ಮತ್ತೆ ಕೇಳುವಂಥಾ ಹಾಡುಗಳ ಹಾಜರಿ ಇದ್ದೇ ಇರುತ್ತದೆ. ಹಾಗೊಂದು ನಂಬಿಕೆ ಪ್ರೇಕ್ಷಕ ವಲಯದಲ್ಲಿ ಪಡಿಮೂಡಿಕೊಂಡಿದೆ. ಆ ನಂಬಿಕೆ ಬನಾರಸ್ ಮೂಲಕ ಮತ್ತಷ್ಟು ಹೊಳಪುಗಟ್ಟಿಕೊಂಡಿದೆ. ಈ ಹಿಂದೆ ಮಾಯಗಂಗೆ ಹಾಡು ಬರೆದಿದ್ದ ವಿ. ನಾಗೇಂದ್ರ ಪ್ರಸಾದ್ ಅವರೇ ಈಗ ಬಿಡುಗಡೆಯಾಗಿರೋ ಟ್ರೋಲ್ ಸಾಂಗಿಗೂ…

Read More

ಜೈಲಲ್ಲಿಟ್ಟರೂ ಆತ ಹೇಗೆ ಎಸ್ಕೇಪ್ ಆಗ್ತಿದ್ದ ಗೊತ್ತಾ? ಈಗ ಎಲ್ಲಿ ನೋಡಿದ್ರೂ ಬರೀ ಡ್ರಗ್ಸ್‌ನದ್ದೇ ಸುದ್ದಿ. ಕರ್ನಾಟಕದಲ್ಲಿ ಅದ್ಯಾವ ಕಾಲದಿಂದ್ಲೋ ಹಬ್ಬಿಕೊಂಡಿದ್ದ ಡ್ರಗ್ಸ್ ದಂಧೆಯ ಬೇಸಿಗೇ ಈಗ ಬೆಂಕಿ ಬಿದ್ದಿದೆ. ಸಿಸಿಬಿ ಅಧಿಕಾರಿಗಳಂತೂ ಈ ಬಾರಿ ಈ ದಂಧೆಯನ್ನ ಥಂಡಾ ಹೊಡೆಸೋ ಸಂಕಲ್ಪದೊಂದಿಗೆ ಕಾರ್ಯಾಚರಣೆ ನಡೆಸ್ತಿದ್ದಾರೆ. ಹಾಗಾದ್ರೆ ಇದರ ಬೇರುಗಳಿರೋದು ಕರ್ನಾಟದಲ್ಲಿ ಮಾತ್ರವಾ? ಯಾಕೆ ಈ ಬಾರಿ ಬರೀ ಕರ್ನಾಟಕದಲ್ಲಿ ಮಾತ್ರವೇ ಇದರ ಸದ್ದಾಗ್ತಿದೆ ಅನ್ನೋ ಹತ್ತಾರು ಪ್ರಶ್ನೆಗಳಿದ್ದಾವೆ. ಆದ್ರೆ ಡ್ರಗ್ಸ್ ದಂಧೆಯ ಆಳ ಅಗಲ ಅರಿಯಬೇಕಾದ್ರೆ ಇಂಟರ್‌ನ್ಯಾಷನಲ್ ಡ್ರಗ್ಸ್ ಮಾಫಿಯಾದ ಭೀಕರ ಸ್ವರೂಪವನ್ನೊಮ್ಮೆ ಜಾಲಾಡಲೇ ಬೇಕು. ಕೊಕೇನ್, ಮರಿಜುವಾನ ಸೇರಿದಂತೆ ಡ್ರಗ್ಸ್‌ನಲ್ಲಿ ನಾನಾ ವಿಧಗಳಿದ್ದಾವೆ. ಅದೊಂದು ನಶೆಯೇರಿಸೋ ಮಾಯಾಲೋಕ. ಈವತ್ತಿಗೆ ಕರ್ನಾಟಕದಲ್ಲಿ ಪಡ್ಡೆ ಹುಡುಗರ ಕೈಗೂ ಸಲೀಸಾಗಿ ಸಿಗೋ ಡ್ರಗ್ಸ್ ದೂರದ ದೇಶಗಳಿಂದ ಲೀಲಾಜಾಲವಾಗಿಯೇ ಸರಬರಾಜಾಗುತ್ತೆ. ಇಂದು ಅಂತಾರಾಷ್ಟ್ರೀಯ ಭದ್ರತಾ ವ್ಯವಸ್ಥೆ ಬಿಗುವಾಗಿದೆ. ಆದ್ರೂ ದೇಶದಿಂದ ದೇಶಕ್ಕೆ ಸಲೀಸಾಗಿ ಅದು ಸಾಗಾಟವಾಗ್ತಿರೋದೇ ಆ ದಂಧೆ ಬೆಳೆದು ನಿಂತಿರೋ ರೀತಿಗೆ ಸಾಕ್ಷಿ.…

Read More

ಆರ್ಯಭಟ ಪ್ರಶಸ್ತಿ ವಿಜೇತನೊಂದಿಗೆ ಸ್ವರ್ಣಲತಾ ಆರ್ಭಟ! ನಟಿ ಶ್ರೀಲೀಲಾ ಮತ್ತೆ ಸುದ್ದಿಯಲ್ಲಿದ್ದಾಳೆ. ಸದ್ಯದ ಮಟ್ಟಿಗೆ ಆಕೆ ಕನ್ನಡ ಚಿತ್ರರಂಗದಲ್ಲಿ ಒಂದಷ್ಟು ಬೇಡಿಕೆ ಹೊಂದಿರುವ ನಟಿ. ಆಕೆ ಸುದ್ದಿಯಲ್ಲಿರೋದರಲ್ಲಿ ಏನು ವಿಶೇಷವಿದೆ ಅಂತ ನಿಮಗನ್ನಿಸೋದರಲ್ಲಿ ಅಚ್ಚರಿಯೇನಿಲ್ಲ. ಆದರೆ, ಈಗ ಆಕೆ ಸುದ್ದಿಕೇಂದ್ರಕ್ಕೆ ಬಂದಿರುವುದು ಅಮ್ಮನ ಡಾನ್‌ಗಿರಿಯ ಕಾರಣದಿಂದ. ವೃತ್ತಿಯಲ್ಲಿ ಡಾಕ್ಟರ್ ಆಗಿದ್ದುಕೊಂಡು, ಮಗಳು ಶ್ರೀಲೀಲಾ ಏಳಿಗೆಯಲ್ಲಿ ಮಹತ್ತರವಾದ ಪಾತ್ರ ವಹಿಸುತ್ತಿರುವ ಸ್ವರ್ಣಲತಾ ಇದೀಗ ಎಲ್ಲರೂ ಅವಾಕ್ಕಾಗುವ ರೀತಿಯಲ್ಲಿ ವಿವಾದವೊಂದರ ಕೇಂದ್ರಬಿಂದುವಾಗಿದ್ದಾರೆ. ಅಲೆಯನ್ಸ್ ವಿವಿಯ ಮಾಜೀ ಸಂಸ್ಥಾಪಕ ಚಾನ್ಸಲರ್ ಆಗಿರುವ ಮಧುಕರ್ ಅಂಗೂರ ತನ್ನದೇ ವಿವಿಯೊಳಗೆ ನುಗ್ಗಿ ದಾಂಧಲೆಯೆಬ್ಬಿಸಿದ್ದಾನೆ. ಆತನ ಮಗ್ಗುಲಲ್ಲಿ ನಿಂತು ಅಕ್ಷರಶಃ ಲೇಡಿ ಡಾನ್ ಅವತಾರವೆತ್ತುವ ಮೂಲಕ ಇದೀಗ ಬಂಧನದ ಭೀತಿ ಎದುರಿಸುತ್ತಿರುವಾಕೆ ಶ್ರೀಲೀಲಾಳ ಅಮ್ಮ ಸ್ವರ್ಣಲತಾ! ಈ ವಿಚಾರ ಕೇಳಿದೇಟಿಗೆ ವಂಚಕ ಕಂ ಕಚ್ಚೆಹರುಕ ಮಧುಕರ ಅಂಗೂರನಿಗೂ, ನಟಿ ಶ್ರೀಲೀಲಾಳ ತಾಯಿಗೂ ಎತ್ತಣಿಂದೆತ್ತಣ ಸಂಬಂಧ ಎಂಬಂಥಾ ಅಚ್ಚರಿ ಕಾಡೋದು ಸಹಜ. ಆದರೆ, ಹಣ ಮದದಿಂದ ಮೆರೆಯುವ ಇಂಥಾ ಹೈಫೈ ಆಸಾಮಿಗಳಿಗೆ…

Read More

ಹಲವಾರು ಧಾರಾವಾಹಿಗಳಲ್ಲಿ ನಟಿಸುತ್ತಾ, ಕಿರುತೆರೆ ಜಗತ್ತಿನಲ್ಲಿ ಹೆಸರು ಮಾಡಿದ್ದ ನಟ ರವಿಪ್ರಸಾದ್ ಮಂಡ್ಯ ನಿಧನ ಹೊಂದಿದ್ದಾರೆ. ಜಾಂಡಿಸ್ ಖಾಯಿಲೆ ಉಲ್ಬಣಿಸಿ, ಅದು ತೀವ್ರವಾಗಿ ಬಹು ಅಂಗಾಂಗ ವೈಫಲ್ಯದಿಂದ ನರಳಾಡುತ್ತಿದ್ದ ರವಿ, ಈಗ್ಗೆ ಒಂದು ತಿಂಗಳಿಂದೀಚೆಗೆ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲಿಂದೀಚೆಗೆ ಕುಟುಂಬ ವರ್ಗ ಅವರನ್ನು ಉಳಿಸಿಕೊಳ್ಳಲು ಹೆಣಗಾಡಿತ್ತು. ಆಸ್ಪತ್ರೆಯ ವೈದ್ಯರೂ ಕೂಡಾ ರವಿಯನ್ನು ಉಳಿಸಿಕೊಳ್ಳಲು ಶತಾಯಗತಾಯ ಪ್ರಯತ್ನಿಸುತ್ತಿದ್ದರು. ಆದರೆ ದಿನದಿಂದ ದಿನಕ್ಕೆ ನಿತ್ರಾಣವಾಗುತ್ತಾ ಸಾಗಿದ್ದ ರವಿ ಉಳಿಯೋದು ಕಷ್ಟವೆಂದು ಇಂದು ಬೆಳಗ್ಗೆ ವೈದ್ಯರು ದೃಢಪಡಿಸಿದ್ದರು. ಇಂದೇ ಹುಟ್ಟೂರು ಮಂಡ್ಯಕ್ಕೆ ಅವರನ್ನು ಕರೆದೊಯ್ಯಲಾಗಿತ್ತು. ಕಡೆಗೂ ರವಿ ಎಲ್ಲ ಹರಕೆ ಹಾರೈಕೆಗಳನ್ನು ಮೀರಿ ಶಾಶ್ವತವಾಗಿ ಕಣ್ಮುಚ್ಚಿದ್ದಾರೆ. ಈ ಮೂಲಕ ಕನ್ನಡ ಚಿತ್ರರಂಗ, ಕಿರುತೆರೆ ಜಗತ್ತು ಓರ್ವ ಪ್ರತಿಭಾನ್ವಿತ ಕಲಾವಿದನನ್ನು ಕಳೆದುಕೊಂಡಂತಾಗಿದೆ. ರವಿಪ್ರಸಾದ್ ಕಿರುತೆರೆ ಲೋಕದಲ್ಲಿ ರವಿ ಎಂದೇ ಪರಿಚಿತರಾಗಿದ್ದರು. ಖ್ಯಾತ ನಿರ್ದೇಶಕ ಟಿಎನ್ ಸೀತಾರಾಮ್ ನಿರ್ದೇಶನದ ಪ್ರಸಿದ್ಧ ಧಾರಾವಾಹಿಗಳಲ್ಲಿ, ಪ್ರಧಾನ ಪಾತ್ರಗಳನ್ನು ನಿರ್ವಹಿಸುವ ಮೂಲಕ ಹೆಸರು ಮಾಡಿದ್ದರು. ಚಿತ್ರಲೇಖ, ಮಿಂಚು, ಮುಕ್ತ…

Read More