ಆಧುನಿಕ ಜಗತ್ತು ಪ್ರತಿಯೊಬ್ಬರಿಗೂ ಒತ್ತಡದ ಬಳುವಳಿ ಕೊಟ್ಟಿದೆ. ಕೆಲಸ, ಕಾರ್ಯ , ಕಷ್ಟ ಕಾರ್ಪಣ್ಯಗಳು ಸೇರಿದಂತೆ ಇಲ್ಲಿ ಎಲ್ಲವೂ ಉಸಿರುಗಟ್ಟಿಸೋ ಸರಕುಗಳೇ. ರೇಸಿಗಿಳಿದಂತೆ ಪ್ರತೀ ದಿನ ಕಳೆಯೋ ಮಂದಿಯ ಪಾಲಿಗೆ ಕೊಂಚ ಏಕಾಂತ, ತಟುಕು ಸಮಾಧಾನವೂ ಮರೀಚಿಕೆಯಾಗಿ ಬಿಟ್ಟಿದೆ. ಇಂಥಾ ಜಂಜಾಟಗಳಲ್ಲಿ ಸಿಕ್ಕಿಕೊಂಡಿರೋ ಪ್ರತಿಯೊಬ್ಬರೂ ಸಣ್ಣದೊಂದು ಏಕಾಂತದಲ್ಲಿ ಮಿಂದೆದ್ದು ನಿರಾಳವಾಗಲು ಸದಾ ಹಪಾಹಪಿಸ್ತಾರೆ. ಆದ್ರೆ ಅದೇನೇ ಪ್ರಯತ್ನ ಪಟ್ಟರೂ ಅದು ಬಹುತೇಕರಿಗೆ ಸಿಗೋದೇ ಇಲ್ಲ. ಆ ನಿರಾಸೆಯ ಮುಂದೆ ಹೆಚ್ಚಿನವರಿಗೆ ಕಂತೆ ಕಂತೆ ಕಾಸೂ ಕಸದಂತೆ ಕಾಣಿಸಲಾರಂಭಿಸುತ್ತೆ. ಹಾಗಾದ್ರೆ ಈ ಏಕಾಂತ, ಬ್ಯುಸಿ ಲೈಫಿನ ಬಾನಿನಲ್ಲಿ ಮೂಡೋ ಕಾಮನಬಿಲ್ಲಿನಂಥಾ ಒಚಿಟಿ ವಾತಾವರಣ ಅಷ್ಟೊಂದು ಪಾಸಿಟಿವ್ ಎನರ್ಜಿ ತುಂಬುತ್ತಾ ಅನ್ನೋ ಪ್ರಶ್ನೆ ಮೂಡುತ್ತೆ. ಇದಕ್ಕೆ ನಮ್ಮ ನಡುವೆ ಬಿಲ್ಡಪ್ಪುಗಳ ಒಂದಷ್ಟು ಉತ್ತರಗಳು ಸಿದ್ಧವಿರಬಹುದು. ಆದರೆ ವಿಜ್ನಾನ, ಸೈಕಾಲಜಿ ಮತ್ತು ಅದರ ತಳಹದಿಯಲ್ಲಿ ನಡೆದಿರೋ ಒಂದಷ್ಟು ಸಂಶೋಧನೆಗಳು ಮಾತ್ರ ಮತ್ತೊಂದು ಭಯಾನಕ ಸಂಗತಿಯನ್ನ ಜಾಹೀರು ಮಾಡುತ್ತವೆ. lonelinessdangerousಅಂಥಾ ಸಂಶೋಧನೆಗಳು ಏಕಾಂತದ ಡೇಂಜರಸ್ ಮುಖವನ್ನು ಅನಾವರಣಗೊಳಿಸಿದೆ.…
Author: Santhosh Bagilagadde
ಪ್ರತೀ ಸಿನಿಮಾ ಪ್ರೇಮಿಗಳ ಪಾಲಿಗೂ ಒಂದೊಂದು ನಿರ್ದಿಷ್ಟ ಜಾನರಿನ ಸಿನಿಮಾಗಳು ಪ್ರಿಯವಾಗಿರುತ್ತವೆ. ಆದರೆ ಈ ಹಾರರ್ ಸಿನಿಮಾಗಳ ಮೋಹ ಮಾತ್ರ ಬಹುತೇಕ ಎಲ್ಲ ವರ್ಗಗಳ ಪ್ರೇಕ್ಷಕರನ್ನೂ ಬಹುವಾಗಿ ಆವರಿಸಿಕೊಂಡಿದೆ. ಬೇರೆ ಭಾಷೆಗಳ ಕಥೆ ಹಾಗಿರಲಿ; ನಮ್ಮ ಕನ್ನಡ ಸಿನಿಮಾ ಪ್ರೇಮಿಗಳೂ ಕೂಡಾ ಹಾರರ್ ಮೂವಿಗಳನ್ನ ಮುಗಿಬಿದ್ದು ನೋಡ್ತಾರೆ. ಕಥೆ, ನಿರೂಪಣೆ ಕೊಂಚ ಚೆನ್ನಾಗಿದ್ದರೂ ಕೂಡಾ ಇಂಥಾ ಸಿನಿಮಾಗಳು ಭರ್ಜರಿ ಕಲೆಕ್ಷನ್ನಿನೊಂದಿಗೆ ಜಯ ಗಳಿಸಿ ಬಿಡುತ್ತವೆ. ಆದರೆ ಇಂಥ ಹಾರರ್ ಸಿನಿಮಾಗಳು ನಮ್ಮ ಮೇಲೆ ಮಾಡೋ ಪರಿಣಾಮಗಳ ಕಥೆ ಮಾತ್ರ ತುಂಬಾನೇ ಹಾರಿಬಲ್ ಆಗಿದೆ! ಹಾರರ್ ಸಿನಿಮಾ ನೋಡಲು ಒಂದು ರೇಂಜಿಗೆ ಗುಂಡಿಗೆ ಇರಬೇಕಾಗುತ್ತೆ. ಅದರಲ್ಲಿನ ಕೆಲ ಸೀನುಗಳಂತೂ ರೋಮವೆಲ್ಲ ಸೆಟೆದು ನಿಂತು ಭಯವಾಗಿ ಬಾಯಿ ಬಡಿದುಕೊಳ್ಳುವಂತಿರುತ್ತವೆ. ಅಂಥಾ ಭಯದ ಉತ್ತುಂಗದಲ್ಲಿ ನಮ್ಮ ದೇಹದೊಳಗೆ ಎಂತೆಂಥಾ ಬದಲಾವಣೆಗಳಾಗಬಹುದು, ಯಾವ್ಯಾವ ಥರದ ರಾಸಾಯನಿಕಗಳು ಉತ್ಪತ್ತಿಯಾಗಬಹುದೆಂದು ಅರ್ಥವಾಗದಿರುವಂಥಾದ್ದೇನೂ ಅಲ್ಲ. ಆ ಭಯವೇ ನಸೀಬುಗೆಟ್ಟರೆ ಜೀವವನ್ನೇ ಕಿತ್ತುಕೊಳ್ಳುವಷ್ಟು ಅನಾಹುತಕಾರಿಯಾಗಿರುತ್ತದೆ. ಈ ವಿಚಾರವನ್ನು ವೈದ್ಯಕೀಯ ಜಗತ್ತೇ ಸ್ಪಷ್ಟೀಕರಿಸಿದೆ. ಅಂದಹಾಗೆ,…
ಬಹುಶಃ ಜಗತ್ತಿನ ಅಚ್ಚರಿಗಳೆಲ್ಲ ಅದ್ಯಾವ ಕ್ಷಣದಲ್ಲೋ ಒಮ್ಮೆಲೆ ಚಿಮ್ಮಿದಾಗ ಅದರಲ್ಲೊಂದು ಕಣಕ್ಕೆ ಜೀವ ಬಂದು ನೀನು ಸೃಷ್ಟಿಯಾದೆಯೇನೋ. ಕೆಲವೊಮ್ಮೆ ಅಂಥ ಬೆರಗುಗಳೆಲ್ಲವೂ ನಿನ್ನವೆರಡು ಪುಟ್‌ಪುಟ್ಟ ಕಣ್ಣುಗಳಲ್ಲಿಯೇ ಬಿಡಾರ ಹೂಡಿವೆಯೇನೋ ಅನ್ನಿಸುತ್ತೆ. ಇಂಥಾ ಅಪರೂಪದ ಜೀವವೊಂದು ಈ ಬದುಕಿನ ಹೊಸ್ತಿಲೊಳಗೆ ಅಡಿಯಿರಿಸಿದ ಕ್ಷಣದಿಂದಲೇ ಎಲ್ಲವೂ ಅದಲು ಬದಲಾಗಿದೆ. ತಮ್ಮ ಪಾಡಿಗೆ ಕದಲುವ ಋತುಮಾನಗಳಿಗೂ ಈಗ ಬೇರೆಯದ್ದೇ ಬಣ್ಣ. ಏನೇನೂ ಇಲ್ಲ ಅನ್ನಿಸುತ್ತಿದ್ದ ಬದುಕಲ್ಲೀಗ ಮೊಗೆದಷ್ಟೂ ಖುಷಿ. ಕುಣಿದಾಡುವಷ್ಟು ಉನ್ಮಾದ. ಇದೆಲ್ಲವನ್ನು ಒಂದೇ ಪ್ಯಾಕೇಜಿನಲ್ಲಿ ಕೊಟ್ಟುಬಿಟ್ಟ ನಿಂಗೆ ನನ್ನಿಡೀ ಜೀವಿತವನ್ನೇ ಅಡ ಇಟ್ಟಿದ್ದೇನೆ… ಪ್ರೀತಿಯೆಂಬುದು ಸದ್ದಿಲ್ಲದೇ ಹರಿದು ಬಂದಾಗ ಇಂಥಾ ಪವಾಡಗಳು ಸೃಷ್ಟಿಯಾಗುತ್ತವೆ ಅಂತ ಖಂಡಿತವಾಗಿಯೂ ನಾನಂದುಕೊಂಡಿರಲಿಲ್ಲವೇ ಹುಡುಗಿ… ಈ ಜಗ್ಗತ್ತಲ್ಲಿ ತೀರಾ ಒಂದು ಜೀವ ಮಾತ್ರ ನನ್ನ ಸ್ವಂತದ್ದು, ಅದರ ಪ್ರತೀ ಉಸಿರು, ಕದಲಿಕೆಗಳೂ ನನ್ನವೆಂಬ ಭಾವನೆ ಮತ್ತು ಎಂಥಾದ್ದೇ ಸಂದರ್ಭ ಬಂದಾಗಲೂ ಹೆಗಲಿಗಾನಿಸಿಕೊಂಡು ಸಂತೈಸುವ ಜೀವವೊಂದು ಸದಾ ಜೊತೆಗಿರುತ್ತದೆ ಎಂಬ ಭರವೆಸೆ ಇದೆಯಲ್ಲಾ? ಅದನ್ನು ಪದಗಳಲ್ಲಿ ಹಿಡಿದಿಡೋದು ಕಷ್ಟ. ನೀನು ಉಸಿರು…
ಆಟವೆಂದರೆ ಕ್ರಿಕೆಟ್ ಮಾತ್ರ ಎಂಬಂಥಾ ವಿಚಿತ್ರ ಮನಃಸ್ಥಿತಿ ಅವ್ಯಾಹತವಾಗಿ ಹಬ್ಬಿಕೊಂಡಿದೆ. ಆ ಆಟದ ಕಾಲ್ತುಳಿತಕ್ಕೆ ಸಿಕ್ಕು ಈಗಾಗಲೇ ಅನೇಕ ದೇಸೀ ಕ್ರೀಡೆಗಳು ಸಣ್ಣ ಕುರುಹೂ ಇಲ್ಲದಂತೆ ಮಾಯವಾಗಿಬಿಟ್ಟಿವೆ. ಇನ್ನೂ ಒಂದಷ್ಟು ದೇಸೀ ಕ್ರೀಡೆಗಳನ್ನು ಜೀವದಂತೆ ಹಚ್ಚಿಕೊಂಡು, ಮಹತ್ತರವಾದದ್ದೇನನ್ನೋ ಸಾಧಿಸುವ ಛಲ ಹೊತ್ತ ಜೀವಗಳ ನಮ್ಮ ದೇಶದಲ್ಲಿವೆ. ಆದರೆ ಅವರೆಲ್ಲರ ಕಣ್ಣ ಹೊಳಪು ಮಣ್ಣುಪಾಲಾಗೋದೇ ಹೆಚ್ಚು. ಇಂಥಾ ವಾತಾವರಣದ ನಡುವೆಯೂ ಇನ್ನೊಂದಷ್ಟು ಅಪ್ಪಟ ದೇಸೀ ಕ್ರೀಡೆಗಳು ಈ ಕ್ಷಣಕ್ಕೂ ತಟುಕು ಉಸಿರುಳಿಸಿಕೊಂಡಿವೆ. ಆ ಸಾಲಿನಲ್ಲಿ ಪ್ರಧಾನವಾಗಿ ಸೇರಿಕೊಳ್ಳುವ ಕ್ರೀಡೆ ಖೊ ಖೊ. ಆ ಕ್ರೀಡೆಯನ್ನೇ ಜೀವಾಳವಾಗಿಸಿಕೊಂಡಿರುವ, ಶರಣ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಗುರು ಶಿಷ್ಯರು’ ಚಿತ್ರ ಇದೀಗ ಬಿಡುಗಡೆಗೊಂಡಿದೆ. ನೋಡಿದ ಪ್ರತಿಯೊಬ್ಬರ ಕಣ್ಣುಗಳಲ್ಲಿಯೂ ಅಪರೂಪದ್ದೊಂದು ಚಿತ್ರ ನೋಡಿದ ತೃಪ್ತ ಭಾವ ಸ್ಫುರಿಸುವಲ್ಲಿ ಗುರು ಶಿಷ್ಯರು ಯಶ ಕಂಡಿದ್ದಾರೆ! ಒಂದು ಸಿನಿಮಾ ಯಾವ ಅಂಶಗಳೊಂದಿಗೆ ಪರಿಪೂರ್ಣವೆನ್ನಿಸುತ್ತೆ? ಯಾವ ಬಗೆಯಲ್ಲಿ ಭಿನ್ನವಾಗಿ ನೆಲೆ ಕಂಡುಕೊಳ್ಳುತ್ತೆ? ಗಹನವಾದುದೇನನ್ನೋ ಮನೋರಂಜನೆಯ ಚೌಕಟ್ಟಿನಲ್ಲಿ ನಿರೂಪಿಸೋದು ಹೇಗೆ? ಇಂಥಾ ಪ್ರಶ್ನೆಗಳಿಗೆ ಸಿನಿಮಾ ಪರಿಭಾಷೆಯಲ್ಲಿ…
ನಮ್ಮಲ್ಲಿ ಉಗುಳೋದು ಅನ್ನೋದಕ್ಕೆ ನಾನಾ ಅರ್ಥಗಳಿವೆ. ಬಾಯಲ್ಲಿನ ಎಂಜಲನ್ನ ಹೊರ ಹಾಕೋ ಪ್ರಕ್ರಿಯೆಗೆ ಹಾಗನ್ನಲಾಗುತ್ತದೆ. ಆದರೆ ಉಗಿಯೋದು ಎಂಬ ಪದ ಬೈಯೋದಕ್ಕೆ ಪರ್ಯಾಯ ಎಂಬಂತೆ ಚಾಲ್ತಿಯಲ್ಲಿದೆ. ಕೆಲ ಮಂದಿಗೆ ಬೈಯೋದ್ರಲ್ಲಿ ಖುಷಿ ಸಿಗಬಹುದು. ಆದರೆ ಖುಷಿಯಿಂದ ಬೈಸಿಕೊಳ್ಳುವವರು ಸಿಗೋದು ಅಪರೂಪ. ಅದರಲ್ಲಿಯೂ ಮದುವೆ ಮುಂಜಿಗಳಂಥ ಸಂದರ್ಭದಲ್ಲಿ ಯಾರ ಮೇಲಾದರು ಸಿಟ್ಟು ಬಂದರೂ ಅದುಮಿಕೊಂಡಿರಬೇಕಾಗುತ್ತೆ. ಯಾಕಂದ್ರೆ ಬೈದು ಖುಷಿಯ ಮೂಡು ಹಾಳು ಮಾಡಲು ಯಾರಿಗೂ ಇಷ್ಟವಿರೋದಿಲ್ಲ. ಆದ್ರೆ ಅದೊಂದು ದೇಶದಲ್ಲಿ ಮಾತ್ರ ಉಗಿತವೂ ಆಶೀರ್ವಾದದಂತೆ ಬಳಕೆಯಲ್ಲಿದೆ ಅಂದ್ರೆ ನಂಬ್ತೀರಾ? ತುಸು ಕಷ್ಟವಾದರೂ ನಂಬದೆ ಬೇರೆ ದಾರಿಗಳಿಲ್ಲ. ದೂರದ ಗ್ರೀಸ್ ದೇಶದಲ್ಲಿ ಅಂಥಾದ್ದೊಂದು ವಿಚಿತ್ರ ಸಂಪ್ರದಾಯ ಚಾಲ್ತಿಯಲ್ಲಿದೆ. ಆ ದೇಶದಲ್ಲಿ ಉಗಿತ ಎಂಬುದು ಬಹುಶಃ ಯಾರಲ್ಲಿಯೂ ಬೇಸರ ಮೂಡಿಸೋದಿಲ್ಲ. ಯಾಕಂದ್ರೆ ಅದುವೇ ಅವರೆಲ್ಲರ ಪಾಲಿಗೆ ಆಶೀರ್ವಾದ. ಅಲ್ಲಿನ ಜನರಿಗೇನಾದ್ರೂ ಮಾಮೂಲಿಯಾಗಿ ಉಗಿದ್ರೂ ಆಶೀರ್ವಾದ ಮಾಡಿದರು ಅಂತ ನಡ ಬಾಗಿಸಿ ಧನ್ಯವಾದ ಸಮರ್ಪಿಸಬಹುದೇನೋ… ಅಲ್ಲಿ ರೂಢಿಯಲ್ಲಿರುವ ಸಂಪ್ರದಾಯವೇ ಅಂಥಾದ್ದಿದೆ. ಅಲ್ಲಿ ಮದುವೆಯಂಥ ಸಮಾರಂಭಗಳಲ್ಲಿಯೂ ವಧೂವರರಿಗೆ ಉಗಿಯೋ…
ದೇಶದ ತುಂಬೆಲ್ಲ ಇದೀಗ ಮುರುಘಾ ಮಠದ ಶಿವಮೂರ್ತಿ ಶರಣನ ಕಾಮಪುರಾಣದ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈ ಮೂಲಕ ಮಠ ಮಾನ್ಯಗಳು, ಶಾಲಾ ಹಾಸ್ಟೆಲ್ಲುಗಳು ಸೇರಿದಂತೆ ಯಾವುದೂ ಸೇಫ್ ಅಲ್ಲವೆಂಬಂಥಾ ವಾತಾವರಣ ಹಬ್ಬಿಕೊಂಡಿದೆ. ಇದರ ಬೆನ್ನಲ್ಲಿಯೇ ದೇಶದ ನಾನಾ ಹಾಸ್ಟೆಲ್ಲುಗಳಲ್ಲಿ ನಡೆಯುತ್ತಿರುವಂಥಾ ಒಂದಷ್ಟು ಅಮಾನುಷ ಘಟನಾವಳಿಗಳೂ ಕೂಡಾ ಆಗಾಗ ಜಾಹೀರಾಗುತ್ತಿವೆ. ಸಾಮಾನಮ್ಯವಾಗಿ ಎಲ್ಲೆಡೆ ತುಂಬಿಕೊಂಡಿರುವ ಕಾಮಪಿಪಾಸುಗಳಿಂದ ಹೆಣ್ಣುಮಕ್ಕಳು ಮಾತ್ರವೇ ನಲುಗುತ್ತಿದ್ದಾರೆಂಬ ಭಾವನೆಯಿದೆ. ಆದರೆ ಈ ಕಾಮುಕರ ಜಗತ್ತಿನಲ್ಲಿ ಗಂಡುಮಕ್ಕಳೂ ಸೇಫ್ ಅಲ್ಲ! ಈ ಸಮಾಜದ ಕೆಲ ವಿಕೃತಿಗಳ ನಡುವೆ ಗಂಡುಮಕ್ಕಳೂ ಸೇಫ್ ಅಲ್ಲ ಎಂಬಂಥಾ ವಿಚಾರ ಈಗಾಗಲೇ ನಾನಾ ರೀತಿಯಲ್ಲಿ ಬಯಲಾಗಿವೆ. ಇದೀಗ ಹೈದ್ರಾಬಾದ್‌ನ ಹಾಸ್ಟೆಲ್ ಒಂದರಲ್ಲಿ ನಡೆದಿರೋ ಘಟನೆಯೊಂದು ಆ ವಿಚಾರವನ್ನು ಮತ್ತಷ್ಟು ಸ್ಪಷ್ಟವಾಗಿಸಿದೆ. ಇಂಥಾದ್ದೊಂದು ವಿಕೃತ ಕೃತ್ಯ ನಡೆದಿರೋದು ಹೈದ್ರಾಬಾದಿನ ಹಾಸ್ಟೆಲ್ ಒಂದರಲ್ಲಿ. ಏಳು ಮಂದಿ ಬಾಲಕರಿಗೆ ಕೊಡಬಾರದ ಕಾಟ ಕೊಟ್ಟಿದ್ದ ಆ ಹಾಸ್ಟೆಲ್ ವಾರ್ಡನ್‌ನನ್ನೀಗ ಪೊಲೀಸರು ಬಂಧಿಸಿದ್ದಾರೆ. ಪೋಷಕರ ಸ್ಥಾನದಲ್ಲಿ ನಿಂತು ಆ ಮಕ್ಕಳನ್ನು ಪೊರೆಯಬೇಕಿದ್ದ ಆ ವಾರ್ಡನ್…
ಭಕ್ತಿ ಎಂಬುದು ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗ. ಅದಕ್ಕೆ ನಮ್ಮ ದೇಶದ ತುಂಬೆಲ್ಲ ತುಂಬಿಕೊಂಡಿರೋ ಧಾರ್ಮಿಕ ವಾತಾವರಣ, ಅದಕ್ಕೆ ಪೂರಕವಾದ ಪುರಾಣ ಕಾವ್ಯಗಳೆಲ್ಲವೂ ಪ್ರಧಾನ ಕಾರಣವಾಗಿದ್ದಿರಬಹುದು. ಅಂಥಾದ್ದೊಂದು ಭಕ್ತಿಯ ಭಾಗವಾಗಿಯೇ ಇಲ್ಲಿನ ಉದ್ದಗಲಕ್ಕೂ ದೇವಸ್ಥಾನಗಳಿವೆ. ಲೆಕ್ಕವಿಲ್ಲದಷ್ಟು ಪುಣ್ಯ ಕ್ಷೇತ್ರಗಳಿದ್ದಾವೆ. ಅಂಥಾ ಸ್ಥಳಗಳಿಗೆಲ್ಲ ಭೇಟಿ ಕೊಟ್ಟು ಭಕ್ತಿ ಭಾವಗಳಲ್ಲಿ ಮಿಂದೇಳಬೇಕೆಂಬುದು ಅನೇಕರ ಕನಸು. ಆದರೆ ಅಂಥಾ ಸ್ಥಳಗಳಿಗೆ ಹೋಗುವವರಲ್ಲಿ ಬಹುತೇಕರಿಗೆ ಆಯಾ ಕ್ಷೇತ್ರಗಳ ವೈಶಿಷ್ಟ್ಯಗಳೇ ಗೊತ್ತಿರೋದಿಲ್ಲ. ಹುಡುಕುತ್ತಾ ಹೋದರೆ ಆ ವಿವರಗಳೇ ಚೇತೋಹಾರಿಯಾಗಿವೆ. ಈಗ ಅದರಲ್ಲೊಂದು ವಿಶೇಷವಾದ ಕ್ಷೇತ್ರದ ಸ್ಥಳ ಮಹಿಮೆಗಳ ಬಗ್ಗೆ ಹೇಳಹೊರಟಿದ್ದೇವೆ. ಅದು ಕೇರಳ ರಾಜ್ಯದಲ್ಲಿರೋ ಅಬಲಪುಳ ಶ್ರೀ ಕೃಷ್ಣ ದೇವಸ್ಥಾನ. ಕೇರಳವೆಂದರೇನೇ ದೇವರನಾಡೆಂದು ಹೆಸರುವಾಸಿಯಾಗಿರೋ ನೆಲ. ಅಲ್ಲಿಯೂ ಕೂಡಾ ಕಾರಣೀಕ ಹೊಂದಿರೋ ಅನೇಕ ಸ್ಥಳಗಳಿದ್ದಾವೆ. ಅದರಲ್ಲಿ ಅಬಲಪುಳ ಕೃಷ್ಣ ದೇವಳವೂ ಒಂದು. ಇದು ಪ್ರೇಕ್ಷಣೀಯ ಸ್ಥಾನ. ಅಲ್ಲಿಗೆ ಪ್ರತೀ ವರ್ಷ ಸಾಕಷ್ಟು ಭಕ್ತಾಧಿಗಳು ತೆರಳುತ್ತಾರೆ. ಆದರೆ ಅದರ ಪೌರಾಣಿಕ, ಐತಿಹಾಸಿಕ ಹಿನ್ನೆಲೆ ನಿಜಕ್ಕೂ ಸ್ವಾರಸ್ಯಕರವಾಗಿದೆ. ದೇಶಾದ್ಯಂತ ಹಲವಾರು ಕೃಷ್ಣ…
ಮನುಷ್ಯನ ಮನಸೆಂಬುದು ತಡಕಿದಷ್ಟೂ ವೈಚಿತ್ರ್ಯಗಳೇ ಸಿಗೋ ಉಗ್ರಾಣವಿದ್ದಂತೆ. ಅಲ್ಲಿ ರಂಗು ರಂಗಾದ ಅಂಶಗಳ ಜೊತೆಗೆ ಅರಗಿಸಿಕೊಳ್ಳಲಾಗದಂಥಾ ಭಯಾನಕ ಭಯ, ಕಾಯಿಲೆಗಳೂ ಇದ್ದಾವೆ. ಅವುಗಳನ್ನೆಲ್ಲ ಬಗೆದು ತೆಗೆಯುವ ಸಲುವಾಗಿ ಮನಃಶಾಸ್ತ್ರಜ್ಞರು ಸದಾ ಕಾಲವೂ ಪ್ರಯತ್ನಿಸುತ್ತಲೇ ಇದ್ದಾರೆ. ಆದರೆ ಅದರ ಅಗೋಚರ ವಿಸ್ತಾರದ ಮುಂದೆ ತಜ್ಞರೇ ಆಗಾಗ ಸೋತು ಮಂಡಿಯೂರುತ್ತಿದ್ದಾರೆ. ನೀವೇನಾದರೂ ಮನುಷ್ಯನಿಗಿರೋ ಫೋಬಿಯಾಗಳ ಬಗ್ಗೆ ತಲಾಶಿಗಿಳಿದರೆ ಮನುಷ್ಯನ ಮನಸ್ಸಿನ ನಿಜವಾದ ಸಂಕೀರ್ಣತೆ ಕಂಡಿತಾ ಅರಿವಿಗೆ ಬರುತ್ತೆ. ಈಗ ನಾವು ಹೇಳಹೊರಟಿರೋದು ಅದೇ ಥರದ ವಿಚಿತ್ರ ಫೋಬಿಯಾದ ಬಗ್ಗೆ. ಕೆಲ ಮಂದಿಗೆ ಎತ್ತರ, ನೀರು, ಪ್ರಾಣಿಗಳು ಸೇರಿದಂತೆ ಅನೇಕಾನೇಕ ವಿಚಾರದಲ್ಲಿ ಭಯಗಳಿರುತ್ತವೆ. ಆದ್ರೆ ಈಗ ಫ್ಯಾಶನ್ ಆಗಿರೋ ಗಡ್ಡದ ಬಗ್ಗೆಯೂ ಬೆಚ್ಚಿಬೀಳುವಂಥಾ ಫೋಬಿಯಾವೊಂದಿದೆ ಅಂದ್ರೆ ನಂಬಲೇ ಬೇಕು. ಗಡ್ಡ ಬಿಟ್ಟವರನ್ನ ಕಂಡರೆ ಒಂದು ಕಾಲದಲ್ಲಿ ಮಕ್ಕಳು ಹೆದರುತ್ತಿದ್ದವು. ಆದರೆ ಈಗಿನ ಜನರೇಷನ್ನಿನ ಮಕ್ಕಳು ನಿರಾಯಾಸವಾಗಿ ಗಡ್ಡ ನೀವಿ, ಕೆದರಿ ಚೆಲ್ಲಾಪಿಲ್ಲಿ ಮಾಡಿ ಕೇಕೆ ಹಾಕುತ್ತವೆ. ಆದರೆ ಅದೆಷ್ಟೋ ದೊಡ್ಡವರೇ ಗಡ್ಡ ಕಂಡರೆ ಎದೆ ಬಡಿತ…
ಇಂದು ಆವಿಷ್ಕಾರ, ಸಂಶೋಧನೆಗಳ ಭರಾಟೆಯೂ ಹೆಚ್ಚಾಗಿದೆ. ಅದಕ್ಕೆ ಸ್ಪರ್ಧೆಯೊಡ್ಡುವಂತೆ ಮಾನವರನ್ನು ನಾನಾ ಬಗೆಯ ಕಾಯಿಲೆಗಳೂ ಕೂಡಾ ಬಾಧಿಸಲಾರಂಭಿಸಿವೆ. ಆದರೆ ಕಾಸೊಂದಿದ್ದರೆ ಅದೆಂಥಾ ಕಾಯಿಲೆಗಳನ್ನಾದರೂ ವಾಸಿ ಮಾಡುವಂಥ, ಸಾವಿನ ಕ್ಷಣಗಳನ್ನು ಮತ್ತೊಂದಷ್ಟು ಕಾಲಾವಧಿಗೆ ಮುಂದೆ ತಳ್ಳುವಂಥಾ ಔಷಧಿಗಳೂ ಇದ್ದಾವೆ. ಆಧುನಿಕ ಜೀವನಶೈಲಿಯೇ ಜನರನ್ನು ಇಂಥಾ ಕಾಯಿಲೆ ಕಸಾಲೆಗಳ ಕೋರೆ ಹಲ್ಲುಗಳಲ್ಲಿ ಸಿಲುಕಿಸಿವೆ ಅನ್ನೋ ಅಪವಾದವೂ ಇದೆ. ಆಯ್ತು, ಈಗಿನ ದಿನಮಾನದಲ್ಲಿ ಕಲುಷಿತ ವಾತಾವರಣ ಮನುಷ್ಯನ ದೇಹವನ್ನು ಕಾಯಲೆಗಳ ಕೊಂಪೆಯನ್ನಾಗಿಸಿದೆ. ಹಾಗಂತ ನಮ್ಮ ಪೂರ್ವಜರನ್ನು ಇಂಥಾ ಕಾಯಿಲೆಗಳೂ ಬಾಧಿಸುತ್ತಿರಲಿಲ್ಲವಾ ಅನ್ನೋ ಪ್ರಶ್ನೆ ಕಾಡುತ್ತೆ. ಪ್ರಮಾಣ ಕೊಂಚ ಕಡಿಮೆಯಿದ್ದರೂ ಕೂಡಾ ಮಾರಣಾಂತಿಕ ಕಾಯಿಲೆಗಳು ಮತ್ತು ಸಾಂಕ್ರಾಮಿಕಗಳು ಎಲ್ಲ ಕಾಲದಲ್ಲಿಯೂ ಇದ್ದವು. ಈಗಾದರೆ ಅಂಥಾ ಕಾಯಿಲೆಗಳು ಸಲೀಸಾಗಿ ಬಂದೆರಗದಂತೆ ತಡೆಯುವಂಥಾ, ಅದರ ವಿರುದ್ಧ ಹೋರಾಡುವಂಥ ಲಸಿಕೆಗಳಿದ್ದಾವೆ. ಆದರೆ ಅದರ ಕಲ್ಪನೆಯೂ ಇಲ್ಲದಿದ್ದ ಕಾಲದಲ್ಲಿ ಜನ ಏನು ಮಾಡುತ್ತಿದ್ದರು? ಈ ಪ್ರಶ್ನೆಯೇ ಭಯಾನಕ ಸತ್ಯಗಳನ್ನ ಮುಖಾಮುಖಿಯಾಗಿಸುತ್ತೆ. ನಮ್ಮ ಪೂರ್ವಜರು ಅದಕ್ಕಾಗಿ ಒಂದಿಷ್ಟು ವಿಚಿತ್ರ ಎನ್ನಿಸುವ, ಭಯ ಆವರಿಸಿಕೊಳ್ಳುವಂಥಾ ಮಾರ್ಗೋಪಾಯಗಳನ್ನ…
ಶೋಧ ಮ್ಯೂಸ್ ಡೆಸ್ಕ್: ಬ್ರಿಟನ್ ಅನ್ನು ಅತ್ಯಂತ ಸುದೀರ್ಘಾವಧಿಯವರೆಗೆ ಆಳಿದ್ದ, ಪೊರೆದಿದ್ದ ರಾಣಿ ಎಲೆಜಬೆತ್ ತೊಂಬತ್ತಾರನೇ ವರ್ಷದಲ್ಲಿ ನಿಧನರಾಗಿದ್ದಾರೆ. ಆಕೆಯ ಅಂತ್ಯಕ್ರಿಯೆ ಕೂಡಾ ಅತ್ಯಂತ ಗೌರವಪೂರ್ವಕವಾಗಿ, ವಿಶ್ವದ ನಾನಾ ದೇಶಗಳ ನಾಯಕರುಗಳ ಸಮ್ಮುಖದಲ್ಲಿ ನೆರವೇರಿzಶ್ವೀ ಮೂಲಕ ಜಗತ್ತು ಕಂಡ ರಾಜಮನೆತನಗಳ ಅತ್ಯಂತ ಹಿರಿಯ ಕೊಂಡಿಯೊಂದು ಕಳಚಿದಂತಾಗಿದೆ. ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ಬ್ರಿಟನ್ ರಾಣಿಯಾಗಿ ಪಟ್ಟಕ್ಕೇರಿದ್ದ ಎಲಿಜಬೆತ್ ಒಂದು ಥರದಲ್ಲಿ ದಂತಕಥೆ ಇದ್ದಂತೆಂದರೂ ತಪ್ಪೇನಿಲ್ಲ. ಎಜಿಜಬೆತ್ ಕೊನೆಯುಸಿರೆಳೆದಾಕ್ಷಣದಿಂದಲೇ ಆಕೆಯ ಬಗ್ಗೆ ಇಂಟರೆಸ್ಟಿಂಗ್ ಎಂಬಂಥಾ ಒಂದಷ್ಟು ವಿಚಾರಗಳು ಜಾಹೀರಾಗುತ್ತಿವೆ. ಓರ್ವ ಮಹಿಳೆ ಒಂದು ದೇಶವನ್ನೇ ರಾಣಿಯಾಗಿ ಮುನ್ನಡೆಸೋದೆಂದರೆ ಅದು ಸಾಮಾನ್ಯದ ಸಂಗತಿಯೇನಲ್ಲ. ಈ ಹಾದಿಯ ತುಂಬ ತನ್ನದೇ ಆದ ಹೆಜ್ಜೆ ಗುರುತುಗಳನ್ನು ಮೂಡಿಸಿರುವಾಕೆ ರಾಣಿ ಎಲಿಜಬೆತ್. ವಿಶೇಷವೆಂದರೆ, ತೊಂಭತ್ತಾರನೇ ವಯಸ್ಸಿನಲ್ಲಿ ಅಸನೀಗಿದ ಈ ರಾಣಿಯ ಶವ ಪೆಟ್ಟಿಗೆಯ ಸುತ್ತಾ ಇದೀಗ ಒಂದಷ್ಟು ಇಂಟರೆಸ್ಟಿಂಗ್ ಸಂಗತಿಗಳು ಗರಿಬಿಚ್ಚಿಕೊಳ್ಳಲಾರಂಭಿಸಿವೆ. ಸಾಮಾನ್ಯವಾಗಿ, ಇಂಥಾ ಜನಪ್ರಿಯರ ಅಂತಿಮ ವಿಧಿ ವಿಧಾನಗಳ ಸುತ್ತಾ ಒಂದಷ್ಟು ವಿಶೇಷತೆಗಳು ಹಬ್ಬಿಕೊಂಡಿರುತ್ತವೆ. ಹಾಗಿರುವಾಗ ರಾಣಿ ಎಲಿಜಬೆತ್…