ಸುಚೇಂದ್ರ ಪ್ರಸಾದ್ (suchendra prasad) ನಿರ್ದೇಶನದ `ಮಾವು ಬೇವು’ (maavu bevu) ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ. ಒಂದೊಳ್ಳೆ ಕಂಟೆಂಟು ಹೊಂದಿರುವ ಚಿತ್ರ ಪ್ರಚಾರದ ಪಟ್ಟುಗಳಾಚೆಗೂ ಪ್ರೇಕ್ಷಕರನ್ನು ಸೆಳೆಯುತ್ತದೆ, ಆಕರ್ಷಣೆಯ ಕೇಂದ್ರಬಿಂದುವಾಗುತ್ತದೆ ಎಂಬುದಕ್ಕೆ ಬಹುಶಃ ಮಾವು ಬೇವು ಚಿತ್ರಕ್ಕಿಂತಲೂ ಬೇರೆ ಉದಾಹರಣೆ ಬೇಕಿಲ್ಲ. ತನ್ನ ಆಂತರ್ಯ ಕಸುವಿನ ಕಾರಣದಿಂದಲೇ ಹೀಗೆ ಸದ್ದು ಮಾಡುತ್ತಿರುವ `ಮಾವು ಬೇವು’ (maavu bevu) ಹಲವಾರು ವಿಶೇಷತೆಗಳನ್ನೊಳಗೊಂಡಿದೆ. ಇಲ್ಲಿ ಈ ಕಾಲಮಾನಕ್ಕೆ ಕನ್ನಡಿ ಹಿಡಿಯುವಂಥಾ ಅದ್ಭುತ ಕಥಾನಕವಿದೆ. ನಮ್ಮ ಜೊತೆಯಲ್ಲೇ ಹೆಜ್ಜೆ ಹಾಕುವಂತೆ ಭಾಸವಾಗೋ ಪಾತ್ರಗಳಿವೆ. ಅಂಥಾದ್ದೊಂದು ವಿಶಿಷ್ಟವಾದ ಪಾತ್ರಕ್ಕೆ ಕನ್ನಡ ಕಿರುತೆರೆ ಮತ್ತು ಚಿತ್ರರಂಗದ ಪ್ರತಿಭಾನ್ವಿತ ನಟ ನೀನಾಸಂ ಸಂದೀಪ್ (neenasam sandeep) ಜೀವ ತುಂಬಿದ್ದಾರೆ. ಈ ಮೂಲಕ ಎಸ್. ರಾಜಶೇಖರ್ ನಿರ್ಮಾಣ ಮಾಡಿರುವ ##ಮಾವು ಬೇವು ಚಿತ್ರದ ನಾಯಕನಾಗಿ ನಟಿಸಿರುವ ತುಂಬು ತೃಪ್ತಿಯೊಂದು ಸಂದೀಪ್ ಅವರಲ್ಲಿದೆ. ನೀನಾಸಂ ಸಂದೀಪ್ ರಂಗಭೂಮಿಯಿಂದ ಬಂದ ಗಟ್ಟಿ ಪ್ರತಿಭೆ. ಯಾವ ಪಾತ್ರವಾದರೂ ಸೈ ಎಂಬಂಥಾ ಛಾತಿ ಹೊಂದಿರುವ…
Author: Santhosh Bagilagadde
ಸದ್ಯದ ಮಟ್ಟಿಗೆ ಬಿಜೆಪಿ (bjp) ಎಂಬುದು ಅಕ್ಷರಶಃ ಮುರಿದ ಮನೆಯಂತಾಗಿದೆ. ಉತ್ತರದ ಬಿಜೆಪಿ ದೊರೆಗಳ ಸಾರಥ್ಯದಲ್ಲಿ ಅದೆಂಥಾದ್ದೋ ಕ್ರಾಂತಿ ಮಾಡಲು ಹೋಗಿ, ಬಿಜೆಪಿ ಬುಡದಲ್ಲೇ ಕ್ಷಣಕ್ಕೊಂದು ಬಾಂಬುಗಳು ಭಡಾರೆನ್ನಲಾರಂಭಿಸಿವೆ. ಹಾಗೆ ನೋಡಿದರೆ, ದಶಕಗಳ ಹಿಂದಿದ್ದ ಸ್ಥಿತಿಯತ್ತಲೇ ಬಿಜೆಪಿ (bjp) ಭಾರೀ ವೇಗದಿಂದ ಹಿಮ್ಮುಖ ಚಲನೆ ಮಾಡುತ್ತಿರುವಂತೆಯೂ ಭಾಸವಾಗುತ್ತಿದೆ. ಇಂಥಾ ಹೊತ್ತಿನಲ್ಲಿ ಮುರಿದ ಮನೆಯ ಮ್ಲಾನ ವದನದ ಹಿರೀಕನಂತೆ ಕಾಣಿಸುತ್ತಿರುವರು (yadiyurappa) ಯಡಿಯೂರಪ್ಪ. ತಾವೇ ಶ್ರಮ ಪಟ್ಟು ಬೆಳೆಸಿದ ಬಿಜೆಪಿ ತನ್ನ ಕಣ್ಣೆದುರೇ ಮುರುಟಿಕೊಳ್ಳುತ್ತಿರುವ ಧಾರುಣ ಕಂಡು ಮರುಗಲೂ ಆಗದೆ, ಸಂಭ್ರಮಿಸಲೂ ಆಗದೆ ಯಡ್ಡಿ (yadiyurappa) ವಿಲಗುಡುತ್ತಿದ್ದಾರೆ! ಕಳೆದ ಬಾರಿ ಆಪರೇಷನ್ನಿನ ಮೂಲಕವೇ ಮತ್ತೆ ಸಿಎಂ ಆಗೋ ಆಸೆಯನ್ನು ಪೂರೈಸಿಕೊಂಡಿದ್ದವರು ಯಡಿಯೂರಪ್ಪ. ಈ ಬಾರಿಯಾದರೂ ಕೊಂಚ ನಿರಾಳವಾಗಿ ಅಧಿಕಾರ ನಡೆಸಬೇಕೆಂಬ ಅವರ ಕನಸಿಗೆ ಬಹಳ ಬೇಗನೆ ತಣ್ಣೀರೆರಚಿದಂತಾಗಿತ್ತು. ಖುದ್ದು ಬಿಜೆಪಿಯಲ್ಲಿಯೇ ಅವರನ್ನು ಅಧಿಕಾರದಿಂದಿಳಿಸುವಂಥಾ ಕಸರತ್ತುಗಳು ಚಾಲನೆ ಪಡೆದುಕೊಂಡಿದ್ದವು. ಕಡೆಗೂ ವರ್ಷ ಬಾಕಿ ಇರುವಾಗಲೇ ಯಡಿಯೂರಪ್ಪ ಕಣ್ಣೀರುಗರೆಯುತ್ತಾ ಸಿಎಂ ಕುರ್ಚಿಯಿಂದ ಇಳಿದು ಹೋಗುವಂತಾಗಿತ್ತು. ಈ…
actress ramola: ಕಿರುತೆರೆಯಲ್ಲಿ ಒಂದಷ್ಟು ಪ್ರಸಿದ್ಧಿ ಪಡೆಯುತ್ತಲೇ ಏಕಾಏಕಿ ಹಿರಿತೆರೆಗೆ ಲಗ್ಗೆಯಿಡೋದು ಅನೇಕ ನಟ ನಟಿಯರ ಮಹಾ ಕನಸು. ಆದರೆ, ಆ ಯೋಗ ಮಾತ್ರ ಅಷ್ಟು ಸಲೀಸಾಗಿ ಎಲ್ಲರಿಗೂ ದಕ್ಕುವಂಥಾದ್ದಲ್ಲ. ಆದರೆ, ಹಿರಿತೆರೆಯಲ್ಲಿ (film industry) ಮಿಂಚುವ ಸೆಳೆತವಿರುತ್ತದಲ್ಲಾ? ಅದು ನಾನಾ ಆಟ ಆಡಿಸುತ್ತೆ. ಕೆಲವರನ್ನು ಹತ್ತಿದ ಏಣಿಯನ್ನೇ ಒದ್ದು ಕೆಡವಿ ಬಿಡುವಂತೆಯೂ ಪ್ರೇರೇಪಿಸುತ್ತೆ. ಹಾಗೆ ತಿಮಿರು ತೋರಿಸಿ ಸೀರಿಯಲ್ಲುಗಳಿಂದ ಅರ್ಧಕ್ಕೇ ಎದ್ದು ಬಂದವರನೇಕರು ಹೇಳ ಹೆಸರಿಲ್ಲದಂತೆ ಮಾಯವಾಗಿದ್ದಾರೆ. ಇನ್ನೂ ಕೆಲ ಮಂದಿ ಗಾಂಧಿನಗರದ ಸಂದಿಗೊಂದಿಗಳಲ್ಲಿ ಅಂತರ್‍ಪಿಶಾಚಿಗಳಂತೆ ಅಂಡಲೆಯುತ್ತಿದ್ದಾರೆ. ಈ ಹುಡುಗಿ (ramola) ರಮೋಲಾ ಕನ್ನಡತಿ (kannadathi) ಎಂಬ ಹಿಟ್ ಸೀರಿಯಲ್ಲಿನಿಂದ ಇದ್ದಕ್ಕಿಂದಂತೆ ಮಾಯವಾಗಿ, ಸಿನಿಮಾದಲ್ಲಿ ಪ್ರತ್ಯಕ್ಷಳಾದಾಗ ಬಹುತೇಕರು ಈಕೆಯೂ ಸೋತವರ ಸಾಲಿಗೆ ಸೇರುತ್ತಾಳೆಂದೇ ಅಂದುಕೊಂಡಿದ್ದರು. ಆದರೆ, ಆಕೆಯೀಗ ಅಕ್ಷರಶಃ ಅವಕಾಶಗಳ ಒಡ್ಡೋಲಗದಲ್ಲಿ ಮಿಂಚಲಾರಂಭಿಸಿದ್ದಾಳೆ! ವರ್ಷದ ಹಿಂದೆ ಕನ್ನಡತಿ ಅಂತೊಂದು ಧಾರಾವಾಹಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿತ್ತು. ಪ್ರತಿಭಾನ್ವಿತ ನಟಿ ರಂಜನಿ ರಾಘವನ್ ಆ ಸೀರಿಯಲ್ಲಿನ ನಾಯಕಿಯಾಗಿ ನಟಿಸಿದ್ದಳು. ಆಕೆಗೆ ಸದಾ…
Lizard wine: ಇದೀಗ ಎಲ್ಲೆಡೆ ನಶೆಯ ಬಗ್ಗೆ ಚರ್ಚೆಗಳಾಗುತ್ತಿವೆ. ಇತ್ತೀಚೆಗಂತೂ ತೀರಾ ಚಿಕ್ಕ ವಯಸ್ಸಿನವರೇ ನಾನಾ ಥರಗಳಲ್ಲಿ ನಶೆಯತ್ತ ಕೈ ಚಾಚಲಾರಂಭಿಸಿದ್ದಾರೆ. (drugs) ಡ್ರಗ್ಸ್‍ನಂಥಾ ಚಟ ಯಾಪಾಟಿ ಆವರಿಸಿದೆ ಅಂದ್ರೆ, ನಶೆಯ ಮೋಹ ಇಡೀ ಜಗತ್ತನ್ನೇ ಓಲಾಡಿಸುತ್ತಿದೆ. ನಮ್ಮ ಪಾಲಿಗೆ ನಶೆ ಅಂದ್ರೆ ಒಂದಷ್ಟು ಡ್ರಿಂಕ್ಸು ಮಾತ್ರ. ಅದರಲ್ಲಿ ಕೆಲ ವೆರೈಟಿಗಳು ನಮಗೆ ಪರಿಚಯವೇ ಇಲ್ಲ. ಆದ್ರೆ ಈ ಜಗತ್ತಿನ ಬೇರೆ ಬೇರೆ ದೇಶಗಳಲ್ಲಿನ ಮದ್ಯಗಳ ಬಗ್ಗೆ ಕೇಳಿದರೆ ಯಾರೇ ಆದ್ರೂ ಕಂಗಾಲಾಗದಿರೋಕೆ ಸಾಧ್ಯಾನೇ ಇಲ್ಲ. ಡ್ರಗ್ಸ್, ಅಫೀಮಿನಂಥಾ ಚಟಕ್ಕೆ ಬಿದ್ದವರು ನಶೆಯ ಉತ್ತುಂಗಕ್ಕೇರ್ತಾರೆ. ಬರ ಬರುತ್ತಾ ಹೈ ಡೋಸೇಜುಗಳೂ ಕೂಡಾ ಅಂಥವರಿಗೆ ತಾಕೋದಿಲ್ಲ. ಮತ್ತಷ್ಟು ಮಗದಷ್ಟು ನಶೆಗಾಗಿ ಕೈಚಾಚುತ್ತಾ ಅಂಥವರು ಕಟ್ಟ ಕಡೇಯದಾಗಿ ವಿಷ ಭರಿತ ಹಾವಿನಿಂದ ಕಚ್ಚಿಸಿಕೊಳ್ಳುವ ಹಂತವನ್ನೂ ತಲುಪ್ತಾರೆ. ಆ ಹಾದಿಯಲ್ಲಿ ಕಡೆಗೂ ಹೆಚ್ಚಿನವರು ದುರಂತದ ಸಾವು ಕಾಣ್ತಾರೆ. ಆದ್ರೆ ವಿಯೆಟ್ನಾಂ ದೇಶದಲ್ಲಿನ ಎಣ್ಣೆ ಪ್ರಿಯರದ್ದು ಮಾತ್ರ ಭಯಾನಕ ಟೇಸ್ಟು. ಅಲ್ಲಿ ಸತ್ತ ಹಲ್ಲಿಯಿಂದ ತಯಾರಾದ ಮದ್ಯ ಒಂದಕ್ಕೆ…
wonder matter: ಈಗ ನಮ್ಮ ಮಾತುಗಳೆಲ್ಲವೂ ಬೆರಳಂಚಿಗೆ ಬಂದು ನಿಂತಿವೆ. (communication) ಸಂಭಾಷಣೆ, (thinking) ಆಲೋಚನೆ, ವ್ಯವಹಾರಗಳೆಲ್ಲವೂ ಬೆರಳ ತುದಿಯಲ್ಲಿ ನಿಂತು ಲಾಸ್ಯವಾಡಲಾರಂಭಿಸಿವೆ. ಒಂದು ಕಾಲದಲ್ಲಿ (freinds) ಸ್ನೇಹಿತರು, ಸಂಬಂಧಿಕರು ವರ್ಷಕ್ಕೊಂದು ಸಾರಿ ಸೇರಿದರೆ ಅದೇ ಹೆಚ್ಚು. ಆ ನಂತರದ ಸಂಭಾಷಣೆ, ಹಾರೈಕೆಗಳೆಲ್ಲವೂ ಮನಸಲ್ಲಿಯೇ ಸಂಭವಿಸುತ್ತಿತ್ತು. ಈಗ ಮೊಬೈಲು (mobile) ಎಲ್ಲರನ್ನೂ ಹತ್ತಿರ ಬೆಸೆದಿದೆ. ದಿನಾ ಬೆಳಗ್ಗೆ ಒಂದು ಗುಡ್ ಮಾರ್ನಿಂಗ್, ಗುಡ್ ನೈಟ್ ಮೆಸೇಜು (messages) ಬಿಟ್ಟರೇನೇ ಸಂಬಂಧ ಗಟ್ಟಿಯಾಗಿರುತ್ತೆಂಬಂತೆ ಬಹುತೇಕರು ಅದಕ್ಕೆ ಅಡಿಕ್ಟ್ (addiction ಆಗಿಬಿಟ್ಟಿದ್ದಾರೆ. ತೀರಾ ಕೆಲಸ ಕಾರ್ಯಕ್ಕೆ ಸಂಬಂಧಿಸಿದ ಮೆಸೇಜುಗಳೇ ಕಿರಿಕಿರಿ ಉಂಟು ಮಾಡುತ್ತವೆ. ಅಂಥಾ ಒತ್ತಡದಲ್ಲಿರುವವರ ಪಾಲಿಗೆ ಗುಡ್ ಮಾರ್ನಿಂಗ್ ಮತ್ತು ಗುಡ್‍ನೈಟ್‍ಗಳಂಥ ಯಾಂತ್ರಿಕ ಮೆಸೇಜುಗಳಂದ್ರೆ ಅಲರ್ಜಿ. ಕಸುಬಿಲ್ಲದವರು ಮಾತ್ರವೇ ಅಂಥಾದ್ದನ್ನು ವಿನಿಮಯ ಮಾಡಿಕೊಳ್ತಾರೆ ಅನ್ನೋದು ಆ ವೆರೈಟಿಯ ಜನರ ಅಚಲ ನಂಬಿಕೆ. ಇಂತಿಂಥವರಿಗೇ ಅಂತೇನಿಲ್ಲ; ಇಂಥಾ ಯಾಂತ್ರಿಕ ಮೆಸೇಜುಗಳ ವಿನಿಮಯ ನಮಗೆಲ್ಲರಿಗೂ ಒಂದಲ್ಲ ಒಂದು ಹಂತದಲ್ಲಿ ರೇಜಿಗೆ ಹುಟ್ಟಿಸಿರುತ್ತೆ. ಆದರೆ ಸೈಕಾಲಜಿ ಮಾತ್ರ…
120 islands: ಈ ಜಗತ್ತಿನ ಅಷ್ಟೂ ಪ್ರೇಕ್ಷಣೀಯ ಸ್ಥಳಗಳನ್ನು ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಸುತ್ತಿ ಬಿಡಬೇಕೆಂಬುದು ಹಲವರ ಮಹಾ ಕನಸು. ಈಗಿನ ಯುವ ಸಮೂಹವಂತೂ ಗಂಡು ಹೆಣ್ಣೆಂಬ ಬೇಧವಿಲ್ಲದೆ ಇಂಥಾ ಆಸೆಯನ್ನು ಬಚ್ಚಿಟ್ಟುಕೊಳ್ತಾರೆ. ಅದಕ್ಕೆಂದೇ ಸಾಕಷ್ಟು ಹಣವನ್ನೂ ಕೂಡಾ ಪ್ರತೀ ತಿಂಗಳು ಕೂಡಿಸಿಟ್ಟುಕೊಂಡು ಕಾಯುವವರೂ ಇದ್ದಾರೆ. ಆದರೆ ಅವರ ಅಂದಾಜಿಗೇ ನಿಲುಕದಂಥಾ ಅನೇಕ ಅಚ್ಚರಿದಾಯಕ ತಾಣಗಳು ಈ ಭೂಮಿಯ ಮೇಲೆ, ಸಾಗರಗಳ ಮೇಲಿದೆ. ಅದರಲ್ಲೊಂದಿಷ್ಟು ನೈಸಗೀಕ. ಮತ್ತೊಂದಷ್ಟು ಮಾನವ ನಿರ್ಮಿತ. ಈಗ ಹೇಳ ಹೊರಟಿರೋದು ಅಂಥಾದ್ದೇ ಒಂದು ಅಚ್ಚರಿದಾಯಕ ದ್ವೀಪ ಸಮೂಹದ ಬಗ್ಗೆ. ದ್ವೀಪ ಸಮೂಹಗಳೆಂದರೇನೇ ಭೂಲೋಕದ ಸ್ವರ್ಗದಂಥವುಗಳು. ಸುತ್ತಲೂ ಕಣ್ಣ ನಿಲುಕಿಗೆ ಮೀರಿದಷ್ಟು ಜಲರಾಶಿ. ಅದರ ಮಧ್ಯೆ ಭೂಮಿಯ ತುಣುಕು. ಅದರ ಮೇಲೊಂದು ಸುಂದರ, ಸಮೃದ್ಧವಾದ ಊರು… ಇಂಥಾ ಗುಣ ಲಕ್ಷಣಗಳಿರೋ ದ್ವೀಪ ಅಂದ್ರೆ ಯಾರಿಗೇ ಆದರೂ ಇಷ್ಟವಾಗದಿರಲು ಸಾಧ್ಯವೇ ಇಲ್ಲ. ಆದರೆ ಅವು ಹೆಚ್ಚಾಗಿ ಸಿಂಗಲ್ ಆಗಿರುತ್ತವೆ. ಒಂದೇ ಕಡೆ ಒಂದಷ್ಟು ದ್ವೀಪಗಳು ಕಾಣೋದು ವಿರಳ. ಆದ್ರೆ ಪೆರು…
ಕೇವಲ ಕನ್ನಡ ಚಿತ್ರರಂಗದ ವಿಚಾರದಲ್ಲಿ ಮಾತ್ರವಲ್ಲ; ಸಾಹಿತ್ಯಕ ವಲಯದಲ್ಲಿಯೂ ಮಹತ್ವದ್ದಾಗಿ ಗುರುತಿಸಿಕೊಂಡಿರುವ ಚಿತ್ರ (maavu bevu) `ಮಾವು ಬೇವು’. ಒಂದು ಬಗೆಯ ಚಿತ್ರಗಳ ಗುಂಗು ಹತಿರುವಾಗ, ಆ ಚೌಕಟ್ಟು ಮೀರಿದ ಚಿತ್ರವೊಂದು ತಯಾರಾಗಿದೆ ಎಂಬುದೇ ತಂಗಾಳಿ ತೀಡಿದಂಥಾ ಅನುಭೂತಿ. ಅಂಥಾದ್ದೊಂದು ದಿವ್ಯ ಭಾವವೀಗ ಸದಭಿರುಚಿಯ ಪ್ರೇಕ್ಷಕರ ಮೈ ಮನಸುಗಳನ್ನಾವರಿಸಿಕೊಂಡಿದೆ. ಅದೆಲ್ಲವೂ ಸಾಧ್ಯವಾಗಿರೋದು (suchendra prasad) ಸುಚೇಂದ್ರ ಪ್ರಸಾದ್ ನಿರ್ದೇಶನದಲ್ಲಿ ಮೂಡಿ ಬಂದಿರುವ `ಮಾವು ಬೇವು’ ಚಿತ್ರದ ಮೂಲಕ. ಒಂದರ್ಥದಲ್ಲಿ ಇದು ಸದರಿ ಚಿತ್ರಕ್ಕೆ ಲಭಿಸಿರುವ ಆರಂಭಿಕ ಯಶವೆಂದರೂ ಅತಿಶಯವೇನಲ್ಲ. ಅಷ್ಟಕ್ಕೂ ಮಾವು ಬೇವು ಚಿತ್ರ ಆರಂಭವಾದ ರೀತಿ, ಅದಕ್ಕೆ ಕಾರಣವಾದ ಸ್ಫೂರ್ತಿ, ಅದಕ್ಕಾಗಿ ನಡೆದ ದಿಗ್ಗಜರ ಪ್ರಯತ್ನಗಳೆಲ್ಲವೂ ಸಮ್ಮೋಹಕ ಅಧ್ಯಾಯ. ಅದೆಲ್ಲವೂ ದೃಷ್ಯ ರೂಪ ಧರಿಸಿ ಸಾರ್ಥಕ್ಯಗೊಂಡಿದ್ದರಲ್ಲಿ (producer) ನಿರ್ಮಾಪಕರಾದ (s rajashekhar) ಎಸ್.ರಾಜಶೇಖರ್ ಅವರ ಪಾತ್ರ ನಿಜಕ್ಕೂ ಮಹತ್ತರವಾದದ್ದು! ಸಿನಿಮಾ ನಿರ್ಮಾಣವೆಂಬುದೇ ಅಪ್ಪಟ ವಾಣಿಜ್ಯಕ ವ್ಯವಹಾರ. ಕಾಸು ಹಾಕಿ ದುಪ್ಪಟ್ಟಾಗಿ ವಾಪಾಸು ಪಡೆಯೋದರತ್ತಲೇ ಬಹುತೇಕರ ಕಣ್ಣು ನೆಟ್ಟಿರುತ್ತದೆ. ಬಹುಶಃ ಇಂಥಾ…
ಬಹುತೇಕ ಎಲ್ಲ ಪಕ್ಷಗಳಲ್ಲೀಯೂ ಇದೀಗ ಟಿಕೆಟ್ ಹಂಚಿಕೆಯ ಬೇಗುದಿ ಮೇರೆ ಮೀರಿಕೊಂಡಿದೆ. ಬಿಜೆಪಿಯಂತೂ (bjp) ಸದ್ಯಕ್ಕೆ ಅಂಥಾ ಅಸಹನೆಗಳ ದಾವಾನಲವಾಗಿ ಬದಲಾಗಿ ಬಿಟ್ಟಿದೆ. ಸೂಕ್ಷ್ಮವಾಗಿ ಗಮನಿಸಿದರೆ, ಚುನಾವಣೆಯ ಸಂಧಿ ಕಾಲದಲ್ಲಿ ಮಾತ್ರವೇ ಎಚ್ಚೆತ್ತುಕೊಳ್ಳುವ ಜಾಯಮಾನದ ಜೆಡೆಎಸ್‍ನೊಳಗೂ (jds) ಈ ಬಾರಿ ಟಿಕೆಟ್‍ಗಾಗಿನ ಕೋಲಾಹಲ ಜೋರಾಗಿದೆ. ಬಹುಶಃ (devegowda) ದೇವೇಗೌಡರ ಕುಟುಂಬದ ಹೊರಗಿನ ಮಂದಿ ಹೀಗೆ ಟಿಕೆಟಿಗಾಗಿ ಮುಸುಕಿನ ಗುದ್ದಾಟ ನಡೆಸಿದ್ದರೆ ಅದಕ್ಕೆ ಈ ಪರಿಯಾಗಿ ಪ್ರಾಶಸ್ತ್ಯ ಸಿಗುತ್ತಿರಲಿಲ್ಲವೇನೋ… ಆದರೆ, ಅಲ್ಲೀಗ ಅಣ್ಣ ತಮ್ಮನ ನಡುವೆ, ಅತ್ತಿಗೆ ನಾದಿನಿಯರ ನಡುವೆ ಕಾದಾಟ ಶುರುವಾಗಿದೆ! ಇದರ ಭಾಗವಾಗಿಯೇ ಭವಾನಿ ರೇವಣ್ಣ ಬಹು ಹಿಂದಿನಿಂದಲೇ ಜೋರು ಧ್ವನಿಯಲ್ಲಿ ಅಖಾಡಕ್ಕಿಳಿದಿದ್ದರು. ಹೀಗೆ ಅಣ್ಣ ತಮ್ಮ, ಅವರ ಹೆಂಡಿರು ಮಕ್ಕಳಿಗೆಲ್ಲ ಟಿಕೆಟು ಕೊಟ್ಟು ಕೊಟ್ಟೇ ಜೆಡಿಎಸ್ ಇದ್ದ ನೆಲೆಯನ್ನೂ ಕಳೆದುಕೊಂಡು ಬರುತ್ತಿದೆ. ಹಾಗೇನಾದರೂ ಈ ಬಾರಿ ಹಾಸನ ಕ್ಷೇತ್ರದಿಂದ ಭವಾನಿ ರೇವಣ್ಣಗೆ ಟಿಕೇಟು ಕೊಟ್ಟಿದ್ದರೆ, ಅದು ಜೆಡಿಎಸ್‍ಗೆ ಮತ್ತಷ್ಟು ಹಿನ್ನಡೆ ತಂದೊಡ್ಡುತ್ತಿತ್ತು. ವಿರೋಧಿ ಪಾಳೆಯಕ್ಕೆ ಆಡಿಕೊಳ್ಳಲೊಂದು ಅಸ್ತ್ರ ಖುದ್ದು…
ಸುಚೇಂದ್ರ ಪ್ರಸಾದ್ ನಿರ್ದೇಶನದಲ್ಲಿ ಮೂಡಿ ಬಂದಿರುವ `ಮಾವು ಬೇವು’ (maavu bevu) ಚಿತ್ರ ಇದೇ ತಿಂಗಳ 21ರಂದು ರಾಜ್ಯಾದ್ಯಂತ ತೆರೆಗಾಣುತ್ತಿದೆ. ಪ್ರಚಾರದ ಅಬ್ಬರಗಳಿಲ್ಲದೆ ತಾನೇತಾನಾಗಿ ಪ್ರೇಕ್ಷಕರ ಮನಸಿನಲ್ಲಿ ಪ್ರತಿಷ್ಟಾಪನೆಗೊಂಡಿರುವ ಈ ಸಿನಿಮಾ (movie) ಬಗ್ಗೆ ಗಾಂಧಿನಗರದಲ್ಲಿಯೇ ಬೆರಗು ಮೂಡಿಕೊಂಡಿದೆ. ಒಂದು ಕಡೆಯಲ್ಲಿ ಪ್ಯಾನಿಂಡಿಯಾ ಸಿನಿಮಾಗಳ ಜಪ ಜೋರಾಗಿರುವಾಗಲೇ, ಮತ್ತೊಂದು ದಿಕ್ಕಿನಿಂದ ಈ ಕಾಲಘಟ್ಟದ ತುರ್ತಿಗನುಗುಣವಾದ ಪ್ರಯತ್ನಗಳೂ ಆಗುತ್ತಿವೆ. ಅದು ಚಿತ್ರರಂಗವನ್ನು ಸಂಪನ್ನಗೊಳಿಸಬಲ್ಲ ಸಕಾರಾತ್ಮಕ ಚಲನೆ. ಈ ನಿಟ್ಟಿನಲ್ಲಿ ನೋಡಹೋದರೆ, (suchendra prasad) ಸುಚೇಂದ್ರ ಪ್ರಸಾದ್ `ಮಾವು ಬೇವು’ ಮೂಲಕ ಮಹತ್ವದ್ದೊಂದು ಹೆಜ್ಜೆಯಿಟ್ಟಿದ್ದಾರೆ. ವಾರದೊಪ್ಪೊತ್ತಿನಲ್ಲಿಯೇ ಆ ಭಿನ್ನ ಪ್ರಯತ್ನ ಪ್ರೇಕ್ಷಕರನ್ನು ಮುಖಾಮುಖಿಯಾಗಲಿದೆ! ಒಂದು ಹುಮ್ಮಸ್ಸಿನ ಪ್ರವಾಹವೆದ್ದಿರುವಾಗ, ಅದರ ಜೊತೆ ಜೊತೆಯಾಗಿ ಸಾಗುವ ಜಾಣ ನಡೆಯನ್ನು ಅನೇಕರು ಅನುಸರಿಸುತ್ತಾರೆ. ಆದರೆ, ಪ್ರವಾಹಕ್ಕೆದುರಾಗಿ ಈಜುವ ಧೈರ್ಯ ಪ್ರದರ್ಶಿಸುವವರ ಸಂಖ್ಯೆ ಕಡಿಮೆ. ಅಂಥಾದ್ದೊಂದು ಧೈರ್ಯ ಇದ್ದರೂ ಬಂಡವಾಳ ಹೂಡಿ ಸಾಥ್ ಕೊಡಬಲ್ಲ ಸದಭಿರುಚಿಯ ನಿರ್ಮಾಪಕರ ಸಂಖ್ಯೆಯೂ ವಿರಳವಾಗಿದೆ. ಒಂದೊಳ್ಳೆ ಕಥೆ, ಬದುಕಿಗೆ ಹತ್ತಿರಾದ ಚಹರೆಗಳು, ಪ್ರತಿಭಾನ್ವಿತ ನಿರ್ದೇಶಕರು,…
rat brain toothpaste: ಈಗಂತೂ ಮಾರುಕಟ್ಟೆಗೆ ತೆರಳಿದರೆ, ಅಂಗಡಿ ಹೊಕ್ಕರೆ ಯಾವುದನ್ನು ತೆಗೆದುಕೊಳ್ಳಬೇಕೆಂದೇ ಕನ್ಪ್ಯೂಸ್ ಆಗುವಷ್ಟು (toothpaste) ಟೂತ್ ಪೇಸ್ಟುಗಳಿವೆ. ಟಿವಿ ಚಾನೆಲ್ಲುಗಳನ್ನ ಆನ್ ಮಾಡಿದರೆ ಆನ್ ಏರಲ್ಲೇ ಬಕರಾ ಮಾಡುವಂಥ ಥರ ಥರದ ಜಾಹೀರಾತುಗಳೂ ಮೇಳೈಸುತ್ತವೆ. ನೀವೊಮ್ಮೆ ಸುಮ್ಮನೆ ಕಲ್ಪಿಸಿಕೊಳ್ಳಿ; ಯಾವ ಆವಿಷ್ಕಾರಗಳೂ ಆಗದಿದ್ದ ಕಾಲದಲ್ಲಿ ಜನ ಟೂತ್ ಪೇಸ್ಟಿನಂತೆ ಏನನ್ನು ಬಳಸುತ್ತಿದ್ದರು. ಇಜ್ಜಿಲು, ಬೇವಿನ ಕಡ್ಡಿಯಂಥಾ ಪಾರಂಪರಿಕ ಮಾರ್ಗಗಳಾಚೆಗೆ ಟೂತ್ ಪೇಸ್ಟ್ ಅನ್ನೋ ಕಲ್ಪನೆ ಮೂಡಿಕೊಂಡಿದ್ದು ಹೇಗೆ ಎಂಬೆಲ್ಲ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಆನ ಪಾರಂಪರಿಕವಾದ ಕ್ರಮಗಳಾಚೆಗೆ ಹಲ್ಲುಜ್ಜೋದಕ್ಕಾಗಿ ಹಲವಾರು ಪ್ರಯೋಗಗಳನ್ನ ಮಾಡಲಾರಂಭಿಸಿದ್ದರು. ಹುಡುಕುತ್ತಾ ಹೋದರೆ ಒಂದಷ್ಟು ಚಿತ್ರವಿಚಿತ್ರವಾದ ಆವಿಷ್ಕಾರಗಳು ನಡೆದಿರೋದು ಪತ್ತೆಯಾಗುತ್ತೆ. ಅದು ಒಂದು ದೇಶಕ್ಕಿಂತ ದೇಶಕ್ಕೆ ಬದಲಾಗುತ್ತಾ ಸಾಗೋದೂ ಕೂಡಾ ಗಮನಕ್ಕೆ ಬರುತ್ತೆ. ಆದ್ರೆ ಕೆಲವೊಂದು ದೇಶಗಳಲ್ಲಿನ ಆರಂಭಿಕ ಟೂತ್ ಪೇಸ್ಟುಗಳಂತೂ ನಿಜಕ್ಕೂ ವಾಕರಿಕೆ ಹುಟ್ಟಿಸುವಂತಿವೆ. ರೋಮನ್ನರು ಒಂದು ಕಾಲದಲ್ಲಿ ಬಳಸುತ್ತಿದ್ದ ಟೂತ್ ಪೇಸ್ಟಿನ ಬಗ್ಗೆ ಕೇಳಿದರಂತೂ ಯಾರಿಗೇ ಆದರೂ ಬವಳಿ ಬಂದಂತಾಗದಿರೋದಿಲ್ಲ. ರೋಮನ್ನರು ಅಂಥಾ ವೆರೈಟಿಯ…