Author: Santhosh Bagilagadde

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

ಬಹುನಿರೀಕ್ಷಿತ ಬನಾರಸ್ ಚಿತ್ರ ಬಿಡುಗಡೆಯಾಗಲು ತಿಂಗಳಷ್ಟೇ ಬಾಕಿ ಉಳಿದುಕೊಂಡಿದೆ. ಈ ಹಿನ್ನೆಲೆಯಲ್ಲಿ ಒಂದಿಡೀ ಚಿತ್ರತಂಡ ಪ್ರಚಾರ ವೈಖರಿಯನ್ನು ತೀವ್ರವಾಗಿಸಿದೆ. ಅದರಲ್ಲಿಯೂ ವಿಶೇಷವಾಗಿ, ನಾಯಕ ಝೈದ್ ಖಾನ್ ಅಂತೂ ಪಕ್ಕಾ ಆಕ್ಟೀವ್ ಆಗಿ ಸಿನಿಮಾವನ್ನು ಜನಮಾನಸಕ್ಕೆ ಹತ್ತಿರಾಗಿಸಲು ಏನೇನು ಬೇಕೋ ಅದೆಲ್ಲವನ್ನೂ ಬಲು ಆಸ್ಥೆಯಿಂದಲೇ ಮಾಡುತ್ತಿದ್ದಾರೆ. ಇದೊಂದು ಪ್ಯಾನಿಂಡಿಯಾ ಸಿನಿಮಾ. ಆದರೆ ಝೈದ್ ಖಾನ್ ಆರಂಭದಿಂದಲೂ ಪ್ರಧಾನವಾಗಿ ಗಮನ ಹರಿಸಿದ್ದು ಕರುನಾಡಲ್ಲಿ ಬನಾರಸ್ ಅನ್ನು ನೆಲೆಗಾಣಿಸುವ ನಿಟ್ಟಿನಲ್ಲಿ ಮಾತ್ರ. ಹಾಗೆ ಸಾಂಗ್ ರಿಲೀಸ್, ಟ್ರೈಲರ್ ಲಾಂಚ್ ಅಂತೆಲ್ಲ ಖುದ್ದಾಗಿ ತಾವೇ ಎಲ್ಲದರ ದೇಖಾರೇಖಿ ನೋಡಿಕೊಂಡಿದ್ದ ಝೈದ್, ಇದೀಗ ಉಳಿದ ಆರು ಭಾಷೆಗಳಲ್ಲಿ ಬನಾರಸ್ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಅದರ ಭಾಗವಾಗಿಯೇ ನಾಯಕಿ ಸೋನಲ್ ಮೊಂತೇರೋ ಜೊತೆಗೂಡಿ ಬಾಂಬೆಯಲ್ಲಿ ಬೀಡುಬಿಟ್ಟಿದ್ದಾರೆ! ಹೀಗೆ ಬಾಂಬೆಗೆ ತೆರಳಿರುವ ಝೈದ್ ಖಾನ್ ಮತ್ತು ಸೋನಲ್ ಮೊಂತೇರೋ ಬಿಡುವಿರದಂತೆ ಸಂದರ್ಶನಗಳಲ್ಲಿ ಭಾಗಿಯಾಗುತ್ತಿದ್ದಾರೆ. ಈಗಾಗಲೇ ಕರ್ನಾಟಕದ ತುಂಬೆಲ್ಲ ಬನಾರಸ್ ಬಗೆಗಿನ ಕುತೂಹಲ ವ್ಯಾಪಿಸಿಕೊಂಡಿದೆಯಲ್ಲಾ? ಅದು ಅಷ್ಟೇ ವೇಗವಾಗಿ ಪರಭಾಷೆಗಳಿಗೂ ಹಬ್ಬಿಕೊಂಡಿದೆ. ರಾಷ್ಟ್ರ…

Read More

ಒಂದು ವಯಸ್ಸಿನಲ್ಲಿ ಪ್ರೀತಿ ಅನ್ನೋ ಮಾಯೆ ಯಾರನ್ನೇ ಆದರೂ ಆವರಿಸಿಕೊಳ್ಳುತ್ತೆ. ಅದೇನೇ ಮುಚ್ಚಿಟ್ಟರೂ, ಬಚ್ಚಿಟ್ಟರೂ ಇಂಥಾ ಪ್ರೀತಿಯ ಪರಿಣಾಮ ಹೊರಜಗತ್ತಿಗೆ ಸ್ಪಷ್ಟವಾಗಿ ಗೊತ್ತಾಗುವಂತಿರುತ್ತೆ. ಯಾಕಂದ್ರೆ, ಪ್ರೀತಿಯಲ್ಲಿ ಬಿದ್ದವರ ವರ್ತನೆಗಳೇ ವಿಚಿತ್ರವಾಗಿರುತ್ತವೆ. ಕಾಲಡಿಯಲ್ಲಿ ಸದಾ ಚಿಮ್ಮು ಹಲಗೆಯನ್ನಿಟ್ಟುಕೊಂಡವರಂತೆ ಸದಾ ಕಾಲವೂ ಪುಟಿದೇಳುತ್ತಿರುತ್ತಾರೆ. ತೀರಾ ಮಂಕುದಿಣ್ಣೆಗಳಂತಿರುವವರೂ ಕೂಡಾ ಪಕ್ಕಾ ಆಕ್ಟೀವ್ ಆಗಿ ಬಿಡುತ್ತಾರೆ. ಹಾಗಾದ್ರೆ ಪ್ರೀತಿಗೆ ಆ ಥರದ ಅಗಾಧ ಶಕ್ತಿ ಇದೆಯಾ? ಯಾಕೆ ಪ್ರೀತಿ ಅನ್ನೋ ಮಾಯೆ ಥರ ಥರದಲ್ಲಿ ಕಾಡಿಸುತ್ತೆ ಎಂಬ ಪ್ರಶ್ನೆಗಳಿಗೆಲ್ಲ ಮನೋ ವಿಜ್ಞಾನ ಮಜವಾದ ಉತ್ತರವನ್ನೇ ಆವಿಷ್ಕರಿಸಿದೆ. ಆ ವಿವರಗಳು ನಿಜಕ್ಕೂ ಗಾಬರಿ ಬೀಳುವಂತಿದೆ. ಅದು ಪ್ರೀತಿಯನ್ನು ಡ್ರಗ್ಸ್‌ನೊಂದಿಗೆ ಸಮೀಕರಿಸುವಂತೆಯೂ ಇದೆ. ಯಾಕಂದ್ರೆ, ಪ್ರೀತಿಯ ಭಾವಗಳು ಕೊಕೇನ್‌ನಷ್ಟೇ ಪ್ರಮಾಣದಲ್ಲಿ ಉತ್ಸಾಹವನ್ನ ಪುಟಿದೆಬ್ಬಿಸಿ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆಯಂತೆ. ಕೊಕೇನ್ ಮೆದುಳಿನ ಮೇಲೆ ಯಾವ ಥರದಲ್ಲಿ ಪರಿಣಾಮ ಬೀರುತ್ತದೆಂಬುದು ಗೊತ್ತಿರೋದೇ. ಪ್ರೀತಿಯೂ ಕೂಡಾ ಅದರೊಂದಿಗೆ ಪೈಪೋಟಿಗೆ ಬೀಳುವಂತಿದೆ. ಪ್ರೀತಿ ಕೂಡಾ ನಮ್ಮ ದೇಹದಲ್ಲಿ ಹಲವಾರು ರಾಸಾಯನಿಕಗಳನ್ನು ಉತ್ಪತ್ತಿ ಮಾಡುತ್ತವೆಯಂತೆ. ಅದು…

Read More

ಭಾರತದಂಥಾ ಅಗಾದ ವಿಸ್ತಾರದ, ಅಗೋಚರ ರೀತಿ ರಿವಾಜುಗಳಿರೋ ದೇಶದಲ್ಲಿ ಅದಕ್ಕೆ ತಕ್ಕುದಾದ ಒಂದಷ್ಟು ನಂಬಿಕೆಗಳೂ ಬೆಸೆದುಕೊಂಡಿರುತ್ತವೆ. ಅದರಲ್ಲಿ ಒಂದಷ್ಟು ಮೂಢ ನಂಬಿಕೆಯ ಲಿಸ್ಟು ಸೇರಿಕೊಂಡು ಕಣ್ಮರೆಯಾಗಿವೆ ಅನ್ನಲಾಗುತ್ತೆ. ಆದರೆ ಆ ಲಿಸ್ಟಿನಲ್ಲಿರೋ ಎಲ್ಲ ಮೂಢ ನಂಬಿಕೆಗಳೂ ಸಂಪೂರ್ಣವಾಗಿ ನಾಮಾವಶೇಷ ಹೊಂದಿವೆ ಅನ್ನಲಾಗೋದಿಲ್ಲ. ಯಾಕೆಂದರೆ ಒಂದು ವೇಳೆ ಅಂಥವೆಲ್ಲ ಮರೆಯಾಗಿದ್ದೇ ಹೌದಾಗಿದ್ದರೆ ದೆವ್ವ ಭೂತಗಳೆಂಬ ವಿಲಕ್ಷಣ ನಂಬಿಕೆಗಳು ನಮ್ಮೆಲ್ಲರ ಜೀವನದ ಪಥದ ಇಕ್ಕೆಲದಲ್ಲಿ ಈ ಪಾಟಿ ಗಸ್ತು ಹೊಡೆಯುತ್ತಿರಲಿಲ್ಲ! ಈಗಲೂ ನಮ್ಮಲ್ಲಿ ದೆವ್ವ ಭೂತಗಳ ಹಾಟ್ ಸ್ಪಾಟುಗಳಿದ್ದಾವೆ. ಅದೆಷ್ಟೋ ಕೋಟೆ ಕೊತ್ತಲಗಳು, ಕೆಲ ಪ್ರದೇಶಗಳ ಭೂತ ಬಾಧೆಯಿಂದ ಪಾಳು ಬಿದ್ದಿವೆ. ಇನ್ನೂ ಕೆಲ ಪ್ರದೇಶಗಳು ಆ ಭಯದ ನೆರಳಲ್ಲಿಯೇ ಇದ್ದಾವೆ. ಅಂಥಾ ಪ್ರದೇಶಗಳಲ್ಲಿ ದೆಹಲಿ ಕಂಟೋನ್ಮೆಂಟ್ ಏರಿಯಾ ಕೂಡಾ ಒಂದು. ಈ ಪ್ರದೇಶವನ್ನು ದೆಹಲಿ ಕ್ಯಾಂಟ್ ಎಂದೂ ಕರೆಯಲಾಗುತ್ತದೆ. ಈ ಪ್ರದೇಶದಲ್ಲಿ ನಿರಾಳವಾಗಿ ಮೈ ಚಾಚಿಕೊಂಡಂತಿರೋ ಒಂದು ರಸ್ತೆ ಇದೆ. ಇದು ಸಖಲ ಮಾಲೀನ್ಯಗಳಿಂದ ಗಬ್ಬೆದ್ದಿರೋ ದೆಹಲಿಯ ಅತೀ ಸ್ವಚ್ಛ ರಸ್ತೆ ಎಂದೂ…

Read More

ಕನ್ನಡ ಚಿತ್ರರಂಗದ ಪಾಲಿಗೀಗ ಅಕ್ಷರಶಃ ಸಕಾರಾತ್ಮಕ ಪರ್ವವೊಂದು ಆರಂಭವಾಗಿದೆ. ಇದೀಗ ಚಿತ್ರರಂಗದತ್ತ ತಣ್ಣಗೊಮ್ಮೆ ಕಣ್ಣು ಹಾಯಿಸಿದರೆ ಹಾಯೆನಿಸುವಂಥಾ ವಾತಾವರಣವೇ ಮೇಳೈಸಿಕೊಂಡಿದೆ. ಬಿಡುಗಡೆಗೆ ಸಜ್ಜಾಗಿ ನಿಂತಿರುವ ಒಂದಷ್ಟು ಚಿತ್ರಗಳನ್ನು ಗಮನಿಸಿದರಂತೂ, ಒಂದರ ಹಿಂದೊಂದರಂತೆ ಹಿಟ್ ಆಗಬಲ್ಲ ಸಿನಿಮಾಗಳೇ ಸರತಿಯಲ್ಲಿ ನಿಂತಂತಿವೆ. ವಿಶೇಷವೆಂದರೆ, ಆ ಸಾಲಿನಲ್ಲಿ ಝೈದ್ ಖಾನ್ ನಾಯಕನಾಗಿ ನಟಿಸಿರುವ ಬನಾರಸ್ ಕೂಡಾ ಸೇರಿಕೊಂಡಿದೆ. ಜಯತೀರ್ಥ ನಿರ್ದೇಶನದ ಈ ಚಿತ್ರ ಈಗಾಗಲೇ ಟ್ರೈಲರ್‌ನೊಂದಿಗೆ ವ್ಯಾಪಕ ಪ್ರಚಾರ, ಅದಕ್ಕೆ ತಕ್ಕುದಾದ ನಿರೀಕ್ಷೆ ಮೂಡಿಸಿದೆ. ವಾರದ ಹಿಂದೆ ಬಿಡುಗಡೆಗೊಂಡಿದ್ದ ಬನಾರಸ್ ಟ್ರೈಲರ್ ಈಗ ಹತ್ತು ಮಿಲಿಯನ್ ವೀಕ್ಷಣೆಗಳಾಚೆಗೆ ದಾಪುಗಾಲಿಡಲಾರಂಭಿಸಿದೆ. ಜಯತೀರ್ಥ ಚಿತ್ರವೆಂದ ಮೇಲೆ ಅದರತ್ತ ಕುತೂಹಲವೊಂದು ಹರಳುಗಟ್ಟಿಕೊಂಡು ಬಿಡುತ್ತೆ. ಯಾವಾಗ ಮಾಯಗಂಗೆ ಎಂಬ ಹಾಡು ಬಿಡುಗಡೆಗೊಂಡು ಇದೊಂದು ಪ್ರೇಮ ಕಥಾನಕ ಎಂಬ ವಿಚಾರ ಜಾಹೀರಾಯಿತೋ, ಆ ಕ್ಷಣದಿಂದಲೇ ನಿರೀಕ್ಷೆ ನೂರ್ಮಡಿಸಿತ್ತು. ಬನಾರಸ್ ಅನ್ನು ಪ್ರೇಕ್ಷಕರ ಆಸಕ್ತಿ ಕೇಂದ್ರದಲ್ಲಿ ಪ್ರತಿಷ್ಟಾಪಿಸಿದ್ದರ ಹಿಂದೆ ಮಾಯಗಂಗೆಯ ಪಾಲು ಬಹಳಷ್ಟಿದೆ. ಆ ಹಾಡಿನ ಮೂಲಕವೇ ಸಮ್ಮೋಹಕ ದಾಖಲೆ ಬರೆದಿದ್ದ ಬನಾರಸ್, ಟ್ರೈಲರ್…

Read More

ವಿಜಯ ಪ್ರಸಾದ್ ನಿರ್ದೇಶನದ ತೋತಾಪುರಿ ಚಿತ್ರವೀಗ ನಾನಾ ದಿಕ್ಕುಗಳಲ್ಲಿ ಚರ್ಚೆಗಳನ್ನು ಹುಟ್ಟುಹಾಕಿದೆ. ಒಂದು ಗಹನವಾದ ವಿಚಾರವನ್ನು, ಡೈಲಾಗುಗಳ ಜೀಕಾಟದಲ್ಲಿ ಮೆಲುವಾಗಿ ಹೇಳುವ ರೀತಿ ವಿಜಯ ಪ್ರಸಾದ್‌ರ ಸ್ಪೆಷಾಲಿಟಿಯೂ ಹೌದು. ಈವತ್ತಿನ ಘಳಿಗೆಯಲ್ಲಿ ಧರ್ಮಾಧಾರಿತ ರಾಜಕಾರಣವೆಂಬುದು ನಾನಾ ಥರದಲ್ಲಿ ಅಸಹನೆಗಳನ್ನು ಹುಟ್ಟು ಹಾಕುತ್ತಿದೆ. ಎಲ್ಲಕ್ಕಿಂತಲೂ ಧರ್ಮವೇ ಮುಖ್ಯ ಎಂಬಂಥಾ ಮನೋಭೂಮಿಕೆಯಲ್ಲಿ ಮನಸುಗಳನ್ನು ಕಟ್ಟಿಹಾಕಿ, ಆ ಮೂಲಕ ರಾಜಕೀಯವಾಗಿ ಫಸಲು ತೆಗೆಯುವ ಹುನ್ನಾರದ ರಾಜಕಾರಣ ರಣ ಕೇಕೆ ಹಾಕುತ್ತಿದೆ. ಇಂಥಾ ಹೊತ್ತಿನಲ್ಲಿ ಸಾಮರಸ್ಯ, ಭಾವೈಕ್ಯತೆಯ ಬಗ್ಗೆ ಮಾತಾಡುವುದೇ ದೇಶದ್ರೋಹ, ಧರ್ಮದ್ರೋಹದಂತೆ ಬಿಂಬಿಸಲ್ಪಡುವ ಅಪಾಯವೂ ಇದೆ. ಆದರೆ ವಿಜಯ ಪ್ರಸಾದ್ ಯಾವ ಆತಂಕವೂ ಇಲ್ಲದೆ ಪೋಲಿ ಡೈಲಾಗುಗಳ ಪರದೆಯಾಚೆಗೆ ವಾಸ್ತವಕ್ಕೆ ಕನ್ನಡಿ ಹಿಡಿಯುವಂಥಾ, ಸತ್ಯವನ್ನು ಒರೆಗೆ ಹಚ್ಚುವಂಥಾ ಭಿನ್ನವಾದ ಪ್ರಯತ್ನ ಮಾಡಿದ್ದಾರೆ. ಒಂದು ವೇಳೆ ಈ ಚಿತ್ರದಲ್ಲಿ ಜಗ್ಗೇಶ್ ಬದಲಿಗೆ ಬೇರ‍್ಯಾರೇ ನಾಯಕನಾಗಿ ನಟಿಸಿದ್ದರೂ ತೋತಾಪುರಿಯೊಳಗಿನ ಅಸಲೀ ಸ್ವಾದ ಇಷ್ಟೊಂದು ದಿಕ್ಕಿನಲ್ಲಿ ಚರ್ಚೆಗೆ ಗ್ರಾಸವಾಗುತ್ತಿರಲಿಲ್ಲವೇನೋ. ಇದೀಗ ಬಿಜೆಪಿ ಪಕ್ಷದ ಮುಖಂಡರಾಗಿದ್ದುಕೊಂಡು, ವರ್ಷಾಂತರಗಳ ಕಾಲ ತಿಣುಕಾಡಿರುವ ಜಗ್ಗಣ್ಣ…

Read More

ಝೈದ್ ಖಾನ್ ನಾಯಕನಾಗಿ ನೆಲೆಗೊಳ್ಳೋ ಲಕ್ಷಣ! ಒಂದು ಸಿನಿಮಾ ಹೇಗೆ ಹಂತ ಹಂತವಾಗಿ ಪ್ರೇಕ್ಷಕರ ಮನಸಿಗೆ ಹತ್ತಿರಾಗಬಹುದು, ಹೇಗೆಲ್ಲ ಜನಮಾನಸವನ್ನು ಇಡಿಯಾಗಿ ಆವರಿಸಿಕೊಳ್ಳಬಹುದೆಂಬುದಕ್ಕೆ ಇತ್ತೀಚಿನ ತಾಜಾ ನಿದರ್ಶನವಾಗಬಲ್ಲ ಚಿತ್ರ ಬನಾರಸ್. ಅಷ್ಟಕ್ಕೂ ಒಡಲೊಳಗೆ ಗಟ್ಟಿಯಾದುದ್ದೇನನ್ನೋ ಬಚ್ಚಿಟ್ಟುಕೊಂಡ ಚಿತ್ರವೊಂದು ಮಾತ್ರವೇ ಹೀಗೆ ಸದ್ದು ಮಾಡಲು ಸಾಧ್ಯ. ಅಂಥಾದ್ದೊಂದು ಅಚಲವಾದ ಭರವಸೆಯನ್ನು ಪ್ರೇಕ್ಷಕರ ಮನಸಲ್ಲಿ ಪ್ರತಿಷ್ಟಾಪಿಸಿದ್ದ ಬನಾರಸ್, ಈಗಾಗಲೇ ಹಾಡಿನ ಮೂಲಕ ಮಾಡಿರುವ ಮೋಡಿ ಸಣ್ಣದೇನಲ್ಲ. ಇದೆಲ್ಲದರಿಂದಾಗಿ ಬನಾರಸ್‌ನ ಮತ್ತಷ್ಟು ಅಚ್ಚರಿಗಳನ್ನು ಕಣ್ತುಂಬಿಕೊಳ್ಳಲು ಪ್ರೇಕ್ಷಕರು ಕಾತರರಾಗಿದ್ದರು; ಟ್ರೈಲರ್‌ಗಾಗಿ ಕಾದು ಕೂತಿದ್ದರು. ಕಡೆಗೂ ಆ ಕ್ಷಣವೀಗ ಕೂಡಿ ಬಂದಿದೆ. ಬನಾರಸ್‌ನ ಬಹುನಿರೀಕ್ಷಿತ ಟ್ರೈಲರ್ ಬಿಡುಗಡೆಗೊಂಡಿದೆ! ಗಂಗೆಯ ಸೆರಗಿಂದ ಗರಿಬಿಚ್ಚಿಕೊಳ್ಳುವ ಈ ಟ್ರೈಲರ್ ಗಹನವಾದ ಕಥೆಯೊಂದರ ಸುಳಿವನ್ನು ನಿಖರವಾಗಿಯೇ ಬಿಟ್ಟು ಕೊಟ್ಟಿದೆ. ಅದ್ಭುತ ಪ್ರೇಮಕಥಾನಕದ ಜೊತೆ ಜೊತೆಗೇ, ಮೈನವಿರೇಳಿಸೋ ಅಂಶಗಳೊಂದಿಗೆ ಮೂಡಿ ಬಂದಿರುವ ಈ ಟ್ರೈಲರ್ ಒಂದೇ ಸಲಕ್ಕೆ ಎಲ್ಲ ವರ್ಗದ ಪ್ರೇಕ್ಷಕರಿಗೂ ಹಿಡಿಸುವಂತಿದೆ. ಪ್ರೇಮವೆಂಬುದು ಎಷ್ಟು ಸಲ ದೃಷ್ಯಕ್ಕೆ ಒಗ್ಗಿಸಿದರೂ ಮಾಸಲಾಗದ ಮಾಯೆ. ಅದರಲ್ಲಿಯೂ ನವಿರುಪ್ರೇಮವನ್ನು…

Read More

ಮೀನು ಅಂದ್ರೆ ಬಾಯಲ್ಲಿ ನೀರೂರಿಸಿಕೊಳ್ಳೋರು ವಿಶ್ವದ ತುಂಬೆಲ್ಲ ತುಂಬಿಕೊಂಡಿದ್ದಾರೆ. ನಮಗೆ ಗೊತ್ತಿರೋ ಒಂದಷ್ಟು ಮೀನುಗಳನ್ನು ಹೊರತು ಪಡಿಸಿಯೂ ರುಚಿಕಟ್ಟಾದ ಇನ್ನೆಷ್ಟೋ ಮೀನುಗಳಿದ್ದಾವೆ. ಅದನ್ನು ರುಚಿಕಟ್ಟಾಗಿ ಮತ್ತೆ ಮತ್ತೆ ತಿನ್ನುವಂತೆ ಮಾಡಬಲ್ಲಂಥಾ ನಾನಾ ಪಾಕ ವಿಧಾನಗಳೂ ಇದ್ದಾವೆ. ಅಷ್ಟಕ್ಕೂ ಇಂಥಾ ಮೀನುಗಳು ಬರೀ ಬಾಯಿ ರುಚಿಗೆ ಮಾತ್ರವಲ್ಲದೆ ನಾನಾ ಔಷದೀಯ ಗುಣಗಳನ್ನೂ ಹೊಂದಿವೆ. ಆದರೆ ಕೆಲ ಮೀನುಗಳು ಕಾರ್ಕೋಟಕ ವಿಷವನ್ನೇ ಮೈ ತುಂಬಾ ತುಂಬಿಕೊಂಡಿವೆ. ಆ ಮೀನನ್ನು ತಿಂದರೆ ಮರಣ ಖಚಿತ! ನಾವು ಪ್ರತೀ ಮೀನುಗಳೂ ತಿನ್ನಲು ಯೋಗ್ಯವಾದವುಗಳೇ ಅಂದುಕೊಂಡಿರುತ್ತೇವೆ. ಆದರೆ ವಾಸ್ತವ ಹಾಗಿಲ್ಲ. ಕೊಂಚ ಯಾಮಾರಿದರೂ ಕೆಲ ಮೀನುಗಳು ಜೀವವನ್ನೇ ಕಿತ್ತುಕೊಂಡು ಬಿಡುತ್ತವೆ. ಅದಕ್ಕೆ ತಾಜಾ ಉದಾಹರಣೆಯಂತಿರೋದು ಪಫರ್ ಫಿಶ್. ಇಂಥಾ ಮೀನುಗಳು ಆಗಾಗ ಮೀನುಗಾರರ ಬಲೆಗೆ ಸಿಕ್ಕಿ ಸುದ್ದಿಯಲ್ಲಿರುತ್ತವೆ. ಬಾಲ್‌ನಂಥಾ ಆಕಾರದಲ್ಲಿ ಮೈ ತುಂಬಾ ಮುಳ್ಳುಗಳನ್ನ ಹೊಂದಿರೋ ಈ ಮೀನುಗಳನ್ನ ನೋಡಿದರೇನೇ ಭಯವಾಗುತ್ತೆ. ಒಂದು ವೇಳೆ ಯಾರಾದರೂ ಮೂರ್ಖತನದಿಂದ ಅದನ್ನು ಸಾಂಬಾರು ಮಾಡಿಒಕೊಂಡು ತಿಂದರೆ ಸಾಯೋದು ಗ್ಯಾರೆಂಟಿ. ಯಾಕಂದ್ರೆ ಪಫರ್…

Read More

ಬರಬರುತ್ತಾ ಜನ ತುಂಬಾನೇ ವಿಚಿತ್ರವಾಗ ತೊಡಗಿದ್ದಾರೆ. ಯಾವ ಕಲ್ಪನೆಗೂ ನಿಲುಕದಂಥಾ ವಿಚಿತ್ರ ನಡವಳಿಕೆಗಳ ಮೂಲಕ ಸದ್ದು ಮಾಡಲಾರಂಭಿಸಿದ್ದಾರೆ. ಅದರಲ್ಲಿಯೂ ವಿಶೇಷವಾಗಿ ಆಧುನಿಕ ಮಾನವರು ಸಂಬಂಧಗಳ ಬಗ್ಗೆಯೇ ನಂಬಿಕೆ ಕಳೆದುಕೊಂಡು ಅಕ್ಷರಶಃ ಅಂತರ್ ಪಿಶಾಚಿಗಳಂತಾಡತೊಡಗಿದ್ದಾರೆ. ಹಾಗಿದ್ದ ಮೇಲೆ ಎಲ್ಲ ಬಂಧಗಳನ್ನೂ ಗಟ್ಟಿಗೊಳಿಸುವ, ಒಚಿಟಿ ಬದುಕಿಗೆ ಟಿಸಿಲು ಮೂಡಿಸುವ ಮದುವೆಯೆಂಬೋ ಪಾರಂಪರಿಕ ಸಂಪ್ರದಾಯದ ಮೇಲೆ ಯುವ ಸಮೂಹ ನಂಬಿಕೆ ಇಡೋದು ಸಾಧ್ಯವೇ. ಈಗಂತೂ ಯುವ ಜನತೆ ಮದುವೆಯನ್ನು ಸಂಕೋಲೆ ಎಂದೇ ಭಾವಿಸುತ್ತಿದ್ದಾರೆ. ಯಾವ ಬಂಧನವೂ ಇಲ್ಲದಿರೋ ಸ್ವಚ್ಛಂದ ಜೀವನದತ್ತ ಹಾತೊರೆಯುತ್ತಿದ್ದಾರೆ. ಮದುವೆ, ಗಂಡ ಹೆಂಡತಿ ಅಂದರೆ ಸ್ವಾತಂತ್ರ್ಯದ ಎದೆಗೆ ನಾಟಿಕೊಳ್ಳೋ ಬಂಧನದ ಮುಳ್ಳೆಂದೇ ಭಾವಿಸುತ್ತಿದ್ದಾರೆ. ಅಂಥಾದ್ದೇ ಮನಸ್ಥಿತಿಯಲ್ಲಿ ಮನುಷ್ಯ ಸಂಬಂಧಗಳ ಮೇಲೆ ನಂಬಿಕೆ ಕಳೆದುಕೊಂಡ ಆಸಾಮಿಯೊಬ್ಬ ಇಡೀ ಜಗತ್ತನ್ನೇ ಬೆಚ್ಚಿಬೀಳಿಸುವಂತೆ ಮದುವೆಯಾಗಿಬಿಟ್ಟಿದ್ದಾನೆ. ಆತನ ಮದುವೆ ಆ ಪರಿ ಸೆನ್ಸೇಷನ್ ಆಗಿರೋದಕ್ಕೆ ಕಾರಣವಿದೆ. ಯಾಕಂದ್ರೆ ಇಪ್ಪತ್ತೆರಡು ವರ್ಷದ ಆ ಯುವಕ ಮದುವೆಯಾಗಿರೋದು ಬಹುತೇಕರು ಚಪ್ಪರಿಸಿ ತಿನ್ನೋ ಫಿಜ್ಜಾ ಕೇಕ್ ಅನ್ನು! ರಷ್ಯಾದ ಆ ಪುಣ್ಯಾತ್ಮನಿಗೆ ಇಪ್ಪತ್ತೆರಡರ…

Read More

ಶಿಕ್ಷಕ ವೃತ್ತಿ ಅನ್ನೋದು ಪವಿತ್ರವಾದ ವೃತ್ತಿಗಳಲ್ಲೊಂದಾಗಿ ಗುರುತಿಸಿಕೊಂಡಿದೆ. ನಮ್ಮ ದೇಶದಲ್ಲಿ ಮಾತ್ರವಲ್ಲದೇ ಬೇರೆಲ್ಲ ದೇಶಗಳಲ್ಲಿಯೂ ಕೂಡಾ ಈ ವೃತ್ತಿಯ ಬಗೆಗೊಂದು ಗೌರವಾಧರ ಇದ್ದೇ ಇದೆ. ಈ ವೃತ್ತಿಯನ್ನು ಕೂಡಾ ಬಹುತೇಕರು ಅಂಥಾ ಗೌರವ ಉಳಿಯುವಂತೆಯೇ ನಿರ್ವಹಿಸಿಕೊಳ್ಳುತ್ತಾ ಬರುತ್ತಿದ್ದಾರೆ. ಆದರೆ ಅತಿರೇಕ ಎಂಬುದು ಯಾರಲ್ಲಿ ಯಾವ ಬಗೆಯಲ್ಲಾದರೂ ಉದ್ಭವಿಸಬಹುದು. ಅಂಥಾದ್ದೇ ಅತಿರೇಕದಿಂದ ಟ್ಯಾಟೂ ಹುಚ್ಚಿಗೆ ಬಿದ್ದಿದ್ದ ಪರ್ಶಿಯಾದ ಶಿಕ್ಷಕನೊಬ್ಬ ಕೇಸು ಜಡಿಸಿಕೊಂಡು ಕೆಲಸವನ್ನೇ ಕಳೆದುಕೊಂಡಿದ್ದಾನೆ. ಹೀಗೆ ವಿಚಿತ್ರವಾದ ಟ್ಯಾಟೂ ಹುಟ್ಟಿನಿಂದಲೇ ವಿಶ್ವ ವಿಖ್ಯಾತಿ, ಕುಖ್ಯಾತಿ ಗಳಿಸಿಕೊಂಡಿರುವಾತ ಸಿಲ್ವಾಯ್ನ್ ಹೆಲೈನ್. ಈತ ಆರಂಭದಿಂದಲೂ ಸ್ಟೈಲಿಶ್ ಆಸಾಮಿ. ಆದ್ರೆ ಅದೇಕೋ ಶಿಕ್ಷಕ ವೃತ್ತಿಯನ್ನ ಆರಿಸಿಕೊಂಡಿದ್ದ. ಪ್ರತಿಷ್ಟಿತವಾದ ಶಾಲೆಯೊಂದರಲ್ಲಿ ಆತ ಶಿಕ್ಷಕನಾಗಿ ಸೇರಿಕೊಂಡಿದ್ದ. ಒಂದಷ್ಟು ವರ್ಷಗಳ ಕಾಲ ಚೆಂದಗೆ ಆ ವೃತ್ತಿಯನ್ನ ನಿರ್ವಹಿಸಿದ್ದ.ಇಂಥಾ ಆಸಾಮಿಗೆ ಇತ್ತೀಚೆಗೆ ಅದೇನಾಯ್ತೋ ಗೊತ್ತಿಲ್ಲ, ಇದ್ದಕ್ಕಿದ್ದಂತೆ ಟ್ಯಾಟೂ ಹುಟ್ಟು ಅಂಟಿಕೊಂಡಿತ್ತು. ನಿಧಾನಕ್ಕೆ ದೇಹದ ಒಂದೊಂದೇ ಭಾಗಗಳಿಗೆ ಟ್ಯಾಟೂ ಹಾಕಿಸಲಾರಂಭಿಸಿದೆದ. ಆಡಳಿತ ಮಂಡಳಿ ಟ್ಯಾಟೂ ಬಗ್ಗೆ ಅಷ್ಟಾಗಿಯೇನೂ ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ ಒಂದಷ್ಟು ದಿನ…

Read More

ಇದು ಎಲ್ಲವನ್ನೂ ಧರ್ಮದ ಪರಿಧಿಗೆ ತಂದು ನಿಲ್ಲಿಸಿ, ಅಪ್ಪಟ ಪೂರ್ವಾಗ್ರಹಪೀಡಿತ ಮನಃಸ್ಥಿತಿಯಿಂದ ವಿಶ್ಲೇಷಿಸುವ ಕಾಲ. ಅಂಥಾ ವ್ಯಾಧಿಯೀಗ ಯಾವ ಸೋಂಕೂ ಇಲ್ಲದ ಕಲಾ ಜಗತ್ತಿಗೂ ಹಬ್ಬಿಕೊಂಡಿದೆ. ಇಂಥಾ ಹೊತ್ತಿನಲ್ಲಿಯೂ ಬ್ರಾತೃತ್ವ, ಕೋಮು ಸಾಮರಸ್ಯಗಳೆಲ್ಲ ಯಥಾ ಪ್ರಕಾರವಾಗಿ ಚಾಲ್ತಿಯಲ್ಲಿದೆ ಎಂದರೆ, ಅದಕ್ಕೆ ಈ ಮಣ್ಣಿನ ಗುಣವೆನ್ನದೆ ಬೇರ‍್ಯಾವ ವಿಶೇಷಣಗಳೂ ಸಿಗಲು ಸಾಧ್ಯವಿಲ್ಲ. ಎಲ್ಲ ಧರ್ಮಗಳಲ್ಲಿಯೂ ಅರ್ಬುದದಂತೆ ಆವರಿಸಿಕೊಂಡಿರುವ ಮೂಲಭೂತವಾದದ ನಡುವಲ್ಲಿಯೂ ಇಲ್ಲಿ ಮನಸುಗಳು ಒಂದಾಗುತ್ತವೆ. ಇಷ್ಟೆಲ್ಲವನ್ನೂ ಯಾಕೆ ಹೇಳಬೇಕಾಯಿತೆಂದರೆ, ಬನಾರಸ್ ಚಿತ್ರದ ಹೀರೋ ಝೈದ್ ಖಾನ್ ಇಂದು ಮಹಾಲಯ ಅಮವಾಸ್ಯೆಯ ನಿಮಿತ್ತ ಬೆಂಗಳೂರಿನ ಬಂಡಿ ಮಾಕಾಳಮ್ಮ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಹಕಾಳಮ್ಮನ ಆಶೀರ್ವಾದ ಪಡೆದುಕೊಂಡಿದ್ದಾರೆ. ಈಗಾಗಲೇ ಮಾಯಗಂಗೆ ಹಾಡಿನ ಮೂಲಕ ಬನಾರಸ್ ಎಲ್ಲ ಪ್ರೇಕ್ಷಕರನ್ನೂ ತಲುಪಿಕೊಂಡಿದೆ. ಆ ಮೂಲಕವೇ ಬನಾರಸ್ ಮಹತ್ತರವಾದುದೇನನ್ನೋ ತನ್ನೊಡಲಲ್ಲಿಟ್ಟುಕೊಂಡಿದೆ ಎಂಬ ಗಾಢ ಭರವಸೆಯೊಂದು ಸರ್ವರಲ್ಲಿಯೂ ಮೂಡಿಕೊಂಡಿದೆ. ಇಂದು ಏಕಾಏಕಿ ಝೈದ್ ಖಾನ್ ಬಂಡಿ ಮಹಕಾಳಮ್ಮನ ಸನ್ನಿಧಾನದಲ್ಲಿ ಕಾಣಿಸಿಕೊಂಡಾಗ, ಅಲ್ಲಿ ನೆರೆದಿದ್ದ ಭಕ್ತಗಣ…

Read More