Author: Santhosh Bagilagadde

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

ಪ್ರಪಂಚದ ಉದ್ದಗಲಕ್ಕೂ ಮನುಷ್ಯನ ಕ್ರೌರ್ಯ, ಸ್ವಾರ್ಥ, ಲಾಲಸೆಗಳು ಹಬ್ಬಿಕೊಂಡಿವೆ. ಕಾಡು ಮೇಡುಗಳನ್ನು ಆವರಿಸಿಕೊಂಡು ಮುನ್ನುಗ್ಗುತ್ತಿರೋ ನಮಗೆಲ್ಲ ಪ್ರಾಣಿ ಪಕ್ಷಿಗಳ ಬಗ್ಗೆ, ಜೀವ ಸಂಕುಲದ ಬಗ್ಗೆ ಕಿಂಚಿತ್ತು ಕಾಳಜಿಯೂ ಇಲ್ಲ. ನಾವು ಹಾಗೆ ಆಕ್ರಮಿಸಿಕೊಂಡು ಉಳಿದ ಕಾಡಿನಿಂದ ಆನೆಗಳು ಆಹಾರ ಅರಸಿ ನುಗ್ಗಿ ಬಂದರೆ ಹುಯಿಲೆಬ್ಬಿಸುತ್ತೇವೆ. ಮನೆಯ ಆಸುಪಾಸಲ್ಲಿ ಹುಲಿ, ಚಿರತೆಗಳು ಕಂಡರೆ ಜೀವ ಭಯದಿಂದ ಹೌಹಾರುತ್ತೇವೆ. ಆದರೆ ನಮ್ಮ ಆಕ್ರಮಣ ಅವುಗಳಿಗೆ ಅದೆಂಥಾ ಜೀವ ಭಯ ತಂದಿರಬಹುದೆಂಬುದನ್ನ ಮಾತ್ರ ಅಪ್ಪಿತಪ್ಪಿಯೂ ಆಲೋಚಿಸೋದಿಲ್ಲ. ಇಂಥಾ ದುರಂತಗಳಾಚೆಗೂ ಜಗತ್ತಿನ ಕೆಲ ಪ್ರದೇಶಗಳಲ್ಲಿ ಪ್ರಾಣಿ ಪಕ್ಷಿಗಳು ಸ್ವಚ್ಛಂದವಾಗಿ ಬದುಕುತ್ತಿವೆ. ಅಂಥಾ ಪ್ರದೇಶಗಳಿಗೊಂದು ಉದಾಹರಣೆ ಕೊಡಬೇಕೆಂದರೆ ಕ್ರಿಸ್‌ಮಸ್ ಐಲ್ಯಾಂಡಿಗಿಂತಲೂ ಸೂಕ್ತವಾದದ್ದು ಬೇರೊಂದಿಲ್ಲ. ಪ್ರಾಕೃತಿಕ ಸೌಂದರ್ಯದ ಗಣಿಯಂತಿರೋ ಈ ಪ್ರದೇಶದಲ್ಲಿ ನಜ ವಸತಿ ಇದೆ. ಆದರೆ ಜನರಿಗಿಂತಲೂ ಹೆಚ್ಚು ಸಂಖ್ಯೆಯಲ್ಲಿ ಅಲ್ಲಿರೋದು ಏಡಿಗಳು. ಅವು ಆ ಪ್ರದೇಶದಲ್ಲಿ ಅದೆಷ್ಟೋ ವರ್ಷಗಳಿಂದ ಜೀವಿಸುತ್ತಿದ್ದಾವೆ. ಅವುಗಳ ಸಂಖ್ಯೆಯೇನು ಸಾಮಾನ್ಯ ಮಟ್ಟದ್ದಲ್ಲ. ಸರಿಸುಮಾರು ಐದು ಕೋಟಿಗೂ ಹೆಚ್ಚು ಏಡಿಗಳು ಆ ದ್ವೀಪದಲ್ಲಿವೆ. ಅಚ್ಚರಿಯೆಂದರೆ,…

Read More

ಕನ್ನಡ ಚಿತ್ರರಂಗದಲ್ಲೀಗ ಹೊಸಾ ಸಂಚಲನ ಸೃಷ್ಟಿಯಾಗಿದೆ. ಕೊರೋನಾ ಕಾಲದಲ್ಲುಂಟಾಗಿದ್ದ ಬಹಳಷ್ಟು ಸವಾಲುಗಳು, ಹಿನ್ನಡೆಗಳನ್ನು ದಾಟಿಕೊಂಡಿರುವ ಸಿನಿಮಾ ಮಂದಿ, ನವೋತ್ಸಾಹದೊಂದಿಗೆ ಮುಂದಡಿ ಇಡಲಾರಂಭಿಸಿದ್ದಾರೆ. ಅಷ್ಟಕ್ಕೂ ಸಿನಿಮಾವನ್ನು ಧ್ಯಾನದಂತೆ, ಆತ್ಮಕ್ಕಂಟಿಸಿಕೊಂಡ ಮನಸುಗಳು ಕೊರೋನಾವೂ ಸೇರಿದಂತೆ ಯಾವ ವಾಲುಗಳಿಗೂ ಬೆನ್ನು ಹಾಕಲು ಸಾಧ್ಯವಿಲ್ಲ. ಈ ಮಾತಿಗೆ ತಕ್ಕುದಾಗಿ, ಅತ್ಯಂತ ಕಡಿಮೆ ಅವಧಿಯಲ್ಲಿ ಚಿತ್ರರಂಗ ಚೇತರಿಸಿಕೊಂಡಿದೆ. ಅತ್ತ ಕಾಂತಾರ ಚಿತ್ರದ ನಾಗಾಲೋಟ ಚಾಲ್ತಿಯಲ್ಲಿರುವಾಗಲೇ, ಇತ್ತ ಅಂಥಾದ್ದೇ ಭರವಸೆ ಮೂಡಿಸಿರುವ ಒಂದಷ್ಟು ಸಿನಿಮಾಗಳು ಸರತಿಯಲ್ಲಿವೆ. ಪ್ರಚಾರ ಅಂತೆಲ್ಲ ಹೈಪು ಸೃಷ್ಟಿಸದೆಯೇ ಕೆಲವಾರು ಸಿನಿಮಾಗಳು ಈಗಾಗಲೇ ಜನಮನ ಸೆಳೆದುಕೊಂಡಿವೆ. ಆ ಸಾಲಿನಲ್ಲಿ ಪ್ರಧಾನವಾಗಿ ಗುರುತಿಸಿಕೊಳ್ಳುವ ಚಿತ್ರ ರವೀಂದ್ರ ಪರಮೇಶ್ವರಪ್ಪ ನಿರ್ದೇಶನದ ಯೆಲ್ಲೋ ಗ್ಯಾಂಗ್ಸ್! ಸದ್ದೇ ಇಲ್ಲದಂತೆ ಚಿತ್ರೀಕರಣ ಮುಗಿಸಿಕೊಂಡಿದ್ದ ಈ ಚಿತ್ರ, ಇದೀಗ ತಾನೇತಾನಾಗಿ ಮುನ್ನೆಲೆಗೆ ಬಂದಿದೆ. ಯೋಗರಾಜ್ ಭಟ್ ಗರಡಿಯಲ್ಲಿ ಬಹುಕಾಲದಿಂದ ಪಳಗಿಕೊಂಡಿದ್ದ, ಸಿನಿಮಾ ರೂಪಿಸುವ ಎಲ್ಲ ಪಟ್ಟುಗಳನ್ನೂ ಕರಗತ ಮಾಡಿಕೊಂಡಿದ್ದ ರವೀಂದ್ರ ಪರಮೇಶ್ವರಪ್ಪ ಯೆಲ್ಲೋ ಗ್ಯಾಂಗ್ಸ್ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಡ್ರಗ್ಸ್ ಮತ್ತು ಕಾಸುಗಳ ಕೇಂದ್ರಿತವಾಗಿ ಬಿಚ್ಚಿಕೊಳ್ಳುವ…

Read More

ಬನಾರಸ್ ಚಿತ್ರದ ಮೂಲಕ ನಾಯಕನಾಗಿ ಪ್ಯಾನಿಂಡಿಯಾ ಮಟ್ಟದಲ್ಲಿ ಎಂಟ್ರಿ ಕೊಡುತ್ತಿರುವವರು ಝೈದ್ ಖಾನ್. ಈ ಚಿತ್ರ ಬಿಡುಗಡೆಗೆ ಇನ್ನು ಕೆಲವೇ ಕೆಲ ದಿನಗಳು ಮಾತ್ರವೇ ಬಾಕಿ ಉಳಿದುಕೊಂಡಿವೆ. ಈ ಹೊತ್ತಿಗೆಲ್ಲಾ ಝೈದ್ ಯಾವುದೇ ತಟವಟಗಳಿಲ್ಲದ ತಮ್ಮ ನಡವಳಿಕೆಯ ಮೂಲಕವೇ ಎಲ್ಲರ ಇಷ್ಟದ ಹೀರೋ ಆಗಿ ಹೊರಹೊಮ್ಮಿದ್ದಾರೆ. ಅದಕ್ಕೆ ಕಾರಣವಾಗಿರೋದು ಎಲ್ಲವನ್ನೂ ಜಾತಿ ಧರ್ಮಗಳ ಭೂಮಿಕೆಯಲ್ಲಿ ನೋಡುವಂಥಾ ಇಂದಿನ ಕಾಲಘಟ್ಟದಲ್ಲಿ ಝೈದ್ ಖಾನ್ ಮುಂದುವರೆಯುತ್ತಿರುವ ರೀತಿಯಷ್ಟೇ. ಇದೀಗ ಬೇರೆ ರಾಜ್ಯಗಳಲ್ಲಿ ಬನಾರಸ್ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಝೈದ್, ಆ ಹಾದಿಯಲ್ಲೆದುರಾಗೋ ದೇವಸ್ಥಾನಗಳಿಗೆಲ್ಲ ಭೇಟಿ ಕೊಟ್ಟು ಭಕ್ತಿ ಭಾವದಿಂದ ನಡೆದುಕೊಳ್ಳುತ್ತಿದ್ದಾರೆ. ಬಹುಶಃ ಅಂಥಾದ್ದೊಂದು ಸಹಜವಾದ ನಡವಳಿಕೆಯ ಫಲವಾಗಿಯೇ ಏನೋ… ಝೈದ್‌ಗೆ ಕುಂಭ ಮೇಳದ ಸಂದರ್ಭದಲ್ಲಿ ನಡೆಯುವ ಗಂಗಾರತಿಯಲ್ಲಿ ಭಾಗಿಯಾಗೋ ಸದವಕಾಶ ಕೂಡಿ ಬಂದಿದೆ. ಈಗೊಂದಷ್ಟು ದಿನಗತಳಿಂದ ಝೈದ್ ಖಾನ್ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಬಿಡುವಿರದೆ ಸುತ್ತುತ್ತಿದ್ದಾರೆ. ಬನಾರಸ್ ಬಿಡುಗಡೆಗೆ ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿರುವ ಈ ಹೊತ್ತಿನಲ್ಲಿ, ಎಲ್ಲವೂ ಸಾರ್ಥಕ್ಯ ಕಾಣುವಂತೆ ಮಾಡಲು…

Read More

ಝೈದ್ ಖಾನ್ ನಾಯಕನಾಗಿ ನಟಿಸಿರುವ ಪ್ಯಾನಿಂಡಿಯಾ ಚಿತ್ರ ಬನಾರಸ್. ಒಂದು ಯಶಸ್ವೀ ಸಿನಿಮಾ ಹೇಗೆಲ್ಲ ಸದ್ದು ಮಾಡಬಹುದೋ, ಆ ದಿಕ್ಕಿನಲ್ಲೆಲ್ಲ ವ್ಯಾಪಕವಾಗಿ ಸುದ್ದಿ ಮಾಡುತ್ತಾ ಬನಾರಸ್ ಬಿಡುಗಡೆಯ ಹಾದಿಯಲ್ಲಿದೆ. ಸಾಮಾನ್ಯವಾಗಿ ಪ್ಯಾನಿಂಡಿಯಾ ಮಟ್ಟದಲ್ಲಿ ಯಾವ ಸಿನಿಮಾವನ್ನಾದರೂ ನೆಲೆಗಾಣಿಸಬೇಕೆಂದರೆ, ಅದರಲ್ಲಿ ವಿತರಣೆಯ ಜವಾಬ್ದಾರಿ ಪಡೆಯುವ ಸಂಸ್ಥೆಗಳ ಪಾತ್ರವೂ ಬಹು ಮುಖ್ಯವಾಗುತ್ತದೆ. ಈ ವಿಚಾರದಲ್ಲಿ ಬನಾರಸ್‌ನದ್ದು ಯಶಸ್ವೀ ಯಾನ. ಯಾಕೆಂದರೆ, ನಾನಾ ಭಾಷೆಗಳಲ್ಲಿ ಈಗಾಗಲೇ ಸೂಪರ್ ಹಿಟ್ ಸಿನಿಮಾಗಳನ್ನು ವಿತರಿಸಿ ಸೈ ಅನ್ನಿಸಿಕೊಂಡಿರುವ ಸಂಸ್ಥೆಗಳೇ ಬನಾರಸ್ ಸಾರಥ್ಯ ವಹಿಸಿಕೊಂಡಿವೆ. ಇದೀಗ ಅಖಂಡ ತಮಿಳುನಾಡಿನಲ್ಲಿ ಬನಾರಸ್ ಅನ್ನು ತೆರೆಗಾಣಿಸುವ ಜವಾಬ್ದಾರಿಯನ್ನು ಪ್ರತಿಷ್ಠಿತ ವಿತರಣಾ ಸಂಸ್ಥೆಯಾಗಿರುವ ಶಕ್ತಿ ಫಿಲಂ ಫ್ಯಾಕ್ಟರಿ ವಹಿಸಿಕೊಂಡಿದೆ. ಈಗಾಗಲೇ ಕರ್ನಾಟಕ, ಕೇರಳ ಮತ್ತು ಉತ್ತರ ಭಾರತದ ಬನಾರಸ್ ವಿತರಣಾ ಹಕ್ಕುಗಳು ಖ್ಯಾತ ಸಂಸ್ಥೆಗಳ ಪಾಲಾಗಿವೆ. ಈ ಮೂಲಕವೇ ಆ ರಾಜ್ಯಗಳಲ್ಲಿ ಬನಾರಸ್ ಸುದ್ದಿ ಕೇಂದ್ರದಲ್ಲಿರುವಾಗಲೇ, ತಮಿಳುನಾಡಿನ ದಿಕ್ಕಿನಿಂದ ಈ ಶುಭ ಸಮಾಚಾರ ಜಾಹೀರಾಗಿದೆ. ಹೀಗೆ ಶಕ್ತಿ ಫಿಲಂ ಫ್ಯಾಕ್ಟರಿ ಬನಾರಸ್ ವಿತರಣಾ ಹಕ್ಕುಗಳನ್ನು…

Read More

ಬದುಕೋದಕ್ಕೆ ನಾನಾ ದಾರಿಗಳಿವೆ. ಕೊಂಚ ಕಷ್ಟವಾದರೂ ಕೂಡಾ ಸರಿದಾರಿಯಲ್ಲಿ ನಡೆದು ಹಾಳಾದೋರು ಕಡಿಮೆ. ಆದರೆ ಅಡ್ಡಹಾದಿಯ ಘೋರ ಪರಿಣಾಮಗಳು ಕಣ್ಣೆದುರೇ ಇದ್ದರೂ ಹೆಚ್ಚಿನ ಜನ ಸರಿದಾರಿಯಲ್ಲಿ ಹೆಜ್ಜೆಯಿರಿಸಲು ಹಿಂದೆ ಮುಂದೆ ನೋಡುತ್ತಾರೆ. ಹೇಗಾದರೂ ಮಾಡಿ ಬೇಗನೆ ಕಾಸು ಸಂಪಾದಿಸಬೇಕೆಂಬ ಅವಸರದಲ್ಲಿ ಕಳ್ಳತನದಂಥಾ ಹಾದಿ ಹಿಡಿಯುವವರೂ ಇದ್ದಾರೆ. ಇಡೀ ಪ್ರಪಂಚದ ತುಂಬೆಲ್ಲ ಇಂಥ ಅಡ್ಡಕಸುಬಿಗಳ ಸಂಖ್ಯೆ ಮಿತಿ ಮೀರಿಕೊಂಡಿದೆ. ಹೀಗೆ ಕಳ್ಳತನಕ್ಕಿಳಿದವರಲ್ಲಿ ಎಂತೆಂಥಾ ಚಾಲಾಕಿಗಳಿದ್ದಾರೆಂದರೆ ನುರಿತ ಪೊಲೀಸ್ ಅಧಿಕಾರಿಗಳೇ ಅಂಥವರ ಆಟಗಳ ಮುಂದೆ ತಬ್ಬಿಬ್ಬುಗೊಂಡಿದ್ದಿದೆ. ಜಗತ್ತಿನಲ್ಲಿ ಚಾಲಾಕಿ ಕಳ್ಳರ ರಸವತ್ತಾದ ಅನೇಕ ಕಥೆಗಳಿದ್ದಾವೆ. ಎಂಥವರನ್ನೂ ಯಾಮಾರಿಸಿ ಕದ್ದು ಬಿಡುವ, ಪೊಲೀಸರ ಕಣ್ಣು ತಪ್ಪಿಸಲೆಂದೇ ಬುದ್ಧಿವಂತಿಕೆಯ ರೂಟು ಕಂಡುಕೊಂಡಿರೋ ಅನೇಕ ಕಳ್ಳರಿದ್ದಾರೆ. ಆದರೆ ಬಾಂಬೆಯ ಐನಾತಿ ಕಳ್ಳನೊಬ್ಬ ಚೈನು ಕದ್ದು ಪೊಲೀಸರಿಂದ ತಪ್ಪಿಸಿಕೊಳ್ಳಲು ಮಾಡಿದ ಸರ್ಕಸ್ಸು ಮಾತ್ರ ತುಂಬಾನೇ ವಿಚಿತ್ರ. ಆತ ಮುಂಬೈನ ನಾನಾ ಕಡೆಗಳಲ್ಲಿ ಚಿನ್ನದ ಚೈನುಗಳನ್ನು ಎಗರಿಸುತ್ತಿದ್ದ. ಈ ಬಗ್ಗೆ ದಿನ ನಿತ್ಯ ಹತ್ತಾರು ಕೇಸುಗಳು ನಾನಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ…

Read More

ಈಗಿನ ಮಕ್ಕಳು ಊಟ ತಿಂಡಿ ಬಿಟ್ಟರೂ ಮೊಬೈಲ್ ಬಿಡೋದಿಲ್ಲ ಅನ್ನೋದು ಸರ್ವವ್ಯಾಪಿಯಾಗಿರೋ ಅಪವಾದ. ಆದರೆ ಯುವ ಸಮುದಾಯ ಮಾತ್ರ ಈ ಅಪವಾದದ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಹಾಗೆ ಯಾರೇನು ಅಂದುಕೊಳ್ಳುತ್ತಾರೆ, ತಮ್ಮ ಬಗ್ಗೆ ಏನು ಮಾತಾಡಿಕೊಳ್ಳುತ್ತಾರೆ ಎಂಬ ಬಗ್ಗೆ ಆಲೋಚಿಸುವಷ್ಟು ಪುರಸೊತ್ತೂ ಅವರಿಗಿಲ್ಲ. ಯಾಕಂದ್ರೆ ವೆಬ್ ಸರಣಿಗಳನ್ನು ಬೇಗ ಬೇಗನೆ ನೋಡಿ ಮುಗಿಸುವ, ಥರ ಥರದ ಗೇಮುಗಳಲ್ಲಿ ಮುಳುಗೇಳುತ್ತಾ, ಆನ್‌ಲೈನ್‌ನಲ್ಲೇ ಚೆಂದದ ಹುಡುಗೀರಿಗೆ ಬಲೆ ಬೀಸೋ ತುರ್ತು ಅವರೆಲ್ಲರಿಗಿದೆ. ಆದರೆ ರಾತ್ರಿಯೆಲ್ಲ ನಿದ್ದೆಗೆಟ್ಟು ಎದ್ದು ಕೂರಿಸೋ ಮೊಬೈಲ್ ಮೋಹವೇ ಅದೆಷ್ಟೋ ಮಂದಿಯ ಜೀವ ಉಳಿಸಲೂ ಬಹುದೆಂಬುದಕ್ಕೆ ಉದಾಹರಣೆಯಂಥ ಘಟನೆಯೊಂದು ಮಹರಾಷ್ಟ್ರದಲ್ಲಿ ನಡೆದಿದೆ. ಈಗ ಎಲ್ಲ ಗೇಮುಗಳನ್ನೂ ನುಂಗಿಕೊಂಡಂತೆ ವೆಬ್ ಸೀರೀಸ್‌ಗಳು ಜನರನ್ನ ಆವರಿಸಿಕೊಂಡಿವೆ. ಅಂಥಾದ್ದೇ ವೆಬ್ ಸೀರೀಸ್ ಹುಚ್ಚಿಗೆ ಬಿದ್ದಿದ್ದ ಹುಡುಗ ಕುನಾಲ್ ಮೊಹೈಟ್. ಆತನಿಗಿನ್ನೂ ಹದಿನೆಂಟು ವರ್ಷ ವಯಸ್ಸು. ಆತನಿಗೆ ವೆಬ್ ಸೀರೀಸ್ ಮೇಲೆ ಅದೆಂಥಾ ಮೋಹವಿತ್ತೆಂದರೆ ಅದಕ್ಕಾಗಿ ಹದಿನೆಂಟು ತಾಸು ಸಿಕ್ಕರೂ ಸಾಲುತ್ತಿರಲಿಲ್ಲ. ಆದ್ದರಿಂದಲೇ ಅಹೋರಾತ್ರಿ ಹೆಚ್ಚೂ ಕಮ್ಮಿ…

Read More

ಹ್ಯಾಂಡ್ಸಮ್ ಹೀರೋ ಝೈದ್ ಖಾನ್ ಬನಾರಸ್ ಮೂಲಕ ಪ್ರೇಕ್ಷಕರನ್ನು ಮುಖಾಮುಖಿಯಾಗುಲು ಇನ್ನು ಕೆಲವೇ ಕೆಲ ದಿನಗಳು ಮಾತ್ರ ಬಾಕಿ ಉಳಿದುಕೊಂಡಿವೆ. ಅದಾಗಲೇ ಈ ಸಿನಿಮಾದ ಪ್ರಭೆ ದೇಶದ ಉದ್ದಗಲಕ್ಕೂ ಸಮ್ಮೋಹಕವಾಗಿ ಹಬ್ಬಿಕೊಳ್ಳುತ್ತಿದೆ. ಅತ್ತ ಝೈದ್ ಖಾನ್ ಅತ್ಯುತ್ಸಾಹದಿಂದ ಬೇರೆ ಬೇರೆ ರಾಜ್ಯಗಳನ್ನು ಸುತ್ತುತ್ತಾ, ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಮಾಧ್ಯಮ ಸಂದರ್ಶನವೂ ಸೇರಿದಂತೆ ಕೆಲವಾರು ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ಅದೇ ಹೊತ್ತಿನಲ್ಲಿ ಮತ್ತೊಂದು ದಿಕ್ಕಿನಿಂದ ಬನಾರಸ್ ಬಗೆಗಿನ ಬೆರಗಾಗುವಂಥಾ ಒಂದಷ್ಟು ವಿಚಾರಗಳು ಒಂದರ ಹಿಂದೊಂದರಂತೆ ಜಾಹೀರಾಗುತ್ತಿದ್ದಾವೆ. ಕರ್ನಾಟಕ ಮತ್ತು ಕೇರಳಗಳಲ್ಲಿ ಬನಾರಸ್ ವಿತರಣಾ ಹಕ್ಕು ಡಿ ಬೀಟ್ಸ್ ಹಾಗೂ ಮಲಕುಪ್ಪಡಮ್ ಪಾಲಾದ ಸುದ್ದಿಯ ಬೆನ್ನಲ್ಲಿಯೇ ಹಿಂದಿಯ ವಿತರಣಾ ಹಕ್ಕು ಯಾರ ಪಾಲಾಗಲಿದೆ ಅಂತೊಂದು ಪ್ರಶ್ನೆ ಮೂಡಿಕೊಂಡಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ! ಬನಾರಸ್ ಹೇಳಿಕೇಳಿ ಪ್ಯಾನಿಂಡಿಯಾ ಚಿತ್ರ. ಆದ್ದರಿಂದಲೇ ಉತ್ತರ ಭಾರತದ ತುಂಬೆಲ್ಲ ಸಮರ್ಥವಾಗಿ ಬಿಡುಗಡೆಯಾಗುವಂತೆ ನೋಡಿಕೊಳ್ಳಲೇ ಬೇಕಾದ ಅನಿವಾರ್ಯತೆ ಇದೆ. ಯಾಕೆಂದರೆ, ಒಟ್ಟಾರೆ ಗೆಲುವಿನಲ್ಲಿ ಉತ್ತರದ ಪಾಲು ದೊಡ್ಡದಿದೆ. ಈ ಸಂಬಂಧವಾಗಿ ಬನಾರಸ್ ಚಿತ್ರತಂಡ ಅತ್ಯಂತ…

Read More

ಹ್ಯಾಂಡ್ಸಮ್ ಹೀರೋ ಝೈದ್ ಖಾನ್ ನಾಯಕನಾಗಿ ಎಂಟ್ರಿಕೊಡುತ್ತಿರುವ ಬಹುನಿರೀಕ್ಷಿತ ಚಿತ್ರ ಬನಾರಸ್. ಜಯತೀರ್ಥ ನಿರ್ದೇಶನದಲ್ಲಿ ಮೂಡಿ ಬಂದಿರೋ ಈ ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಈ ಹೊತ್ತಿನಲ್ಲಿ ನಾನಾ ದಿಕ್ಕಿನಲ್ಲಿ ಈ ಚಿತ್ರದ ಬಗ್ಗೆ ಪ್ರೇಕ್ಷಕರ ವಲಯದಲ್ಲಿ ವ್ಯಾಪಕ ಚರ್ಚೆಗಳು ಹುಟ್ಟುಕೊಂಡಿವೆ. ಅದೆಲ್ಲದರ ಒಡ್ಡೋಲಗದಲ್ಲಿ ದಿನದಿಂದ ದಿನಕ್ಕೆ ಶೈನಪ್ ಆಗುತ್ತಾ ಸಾಗುತ್ತಿರುವ ಬನಾರಸ್ ಕಡೆಯಿಂದ ಒಂದರ ಹಿಂದೊಂದರಂತೆ ಖುಷಿಯ ಸಂಗತಿಗಳು ಜಾಹೀರಾಗುತ್ತಿವೆ. ಕೇರಳದ ಪ್ರಖ್ಯಾತ ಸಂಸ್ಥೆ ಬನಾರಸ್ ವಿತರಣಾ ಹಕ್ಕು ಖರೀದಿಸಿದ ಸುದ್ದಿ ಹೊರ ಬಿದ್ದ ಬೆನ್ನಲ್ಲಿಯೇ, ಕರ್ನಾಟಕದಲ್ಲಿ ವಿತರಣಾ ಹಕ್ಕುಗಳನ್ನು ಯಾವ ಸಂಸ್ಥೆ ಪಡೆದುಕೊಳ್ಳುತ್ತೆ ಅಂತೊಂದು ಪ್ರಶ್ನೆ ಮೂಡಿಕೊಂಡಿತ್ತು. ಅದಕ್ಕೀಗ ನಿಖರವಾದ ಉತ್ತರ ಸಿಕ್ಕಿದೆ! ಶೈಲಜಾ ನಾಗ್ ಮತ್ತು ಬಿ ಸುರೇಶ್ ಒಡೆತನದ ಡಿ ಬೀಟ್ಸ್, ಬನಾರಸ್ ಚಿತ್ರದ ವಿತರಣಾ ಹಕ್ಕುಗಳನ್ನು ಖರೀದಿಸಿದೆ. ಈ ಸಂಸ್ಥೆಯ ಮೂಲಕವೇ ನವೆಂಬರ್ ನಾಲಕ್ಕರಂದು ಬನಾರಸ್ ಕರ್ನಾಟಕದ ಉದ್ದಗಲಕ್ಕೂ ಅದ್ದೂರಿಯಾಗಿ ಬಿಡುಗಡೆಗೊಳ್ಳಲಿದೆ. ಡಿ ಬೀಟ್ಸ್ ಕರ್ನಾಟಕದ ಮಟ್ಟಿಗೆ ಪ್ರತಿಷ್ಠಿತ ಸಂಸ್ಥೆ. ಅದರ ಕಡೆಯಿಂದ ಈಗಾಗಲೇ…

Read More

ದಿನದಿಂದ ದಿನಕ್ಕೆ ಬನಾರಸ್ ಕ್ರೇಜ್ ದೇಶದ ಉದ್ದಗಲಕ್ಕೂ ವ್ಯಾಪಿಸಿಕೊಳ್ಳುತ್ತಿದೆ. ಝೈದ್ ಖಾನ್ ಈ ಸಿನಿಮಾ ಮೂಲಕ ಮೊದಲ ಬಾರಿ ನಾಯಕನಾಗಿ ಲಾಂಚ್ ಆಗುತ್ತಿದ್ದಾರೆಂಬುದನ್ನೂ ಮರೆಸುವಂತೆ ಬನಾರಸ್ ಪ್ರಭೆ ಮಿರುಗುತ್ತಿದೆ. ಇದೀಗ ಎತ್ತ ಕಣ್ಣು ಹಾಯಿಸಿದರೂ, ಅಷ್ಟ ದಿಕ್ಕುಗಳಲ್ಲಿಯೂ ಬನಾರಸ್ ಸೂಪರ್ ಹಿಟ್ಟಾಗೋದು ಗ್ಯಾರೆಂಟಿ ಎಂಬಂಥಾ ವಾತಾವರಣ ಢಾಳಾಗಿ ಪಡಿಮೂಡಿಕೊಂಡಿದೆ. ಇಂಥಾ ಘಳಿಗೆಯಲ್ಲಿಯೇ ಚಿತ್ರತಂಡದ ಕಡೆಯಿಂದ ಖುಷಿಯ ಸಂಗತಿಯೊಂದು ಜಾಹೀರಾಗಿದೆ. ಕೇರಳದ ಪ್ರಖ್ಯಾತ ವಿತರಣಾ ಸಂಸ್ಥೆಯಾದ ಮುಲಕುಪ್ಪಡಮ್, ಬನಾರಸ್‌ನ ವಿತರಣಾ ಹಕ್ಕುಗಳನ್ನು ಖರೀದಿಸಿದೆ. ಈಗಾಗಲೇ ಹಲವಾರು ಹಿಟ್ ಸಿನಿಮಾಗಳನ್ನು ವಿತರಿಸಿರುವ ಹೆಗ್ಗಳಿಕೆ ಹೊಂದಿರುವ ಈ ಸಂಸ್ಥೆಯ ಮೂಲಕ ಕೇರಳದಾದ್ಯಂತ ನವೆಂಬರ್ ನಾಲಕ್ಕರಂದು ಬನಾರಸ್ ಬಿಡುಗಡೆಗೊಳ್ಳಲಿದೆ. ತೋಮಿಚನ್ ಮುಲಕುಪ್ಪಡಮ್ ಅಂತಲೇ ದೇಶಾದ್ಯಂತ ಉದ್ಯಮಿಯಾಗಿ ಹೆಸರುವಾಸಿಯಾಗಿರುವವರು ತೋಮಿಚನ್ ಮಲಕುಪ್ಪಡಮ್. ಅವರು ಕೇರಳದಲ್ಲಿ ನಿರ್ಮಾಪಕರಾಗಿಯೂ ಯಶಸ್ವಿಯಾಗಿದ್ದಾರೆ. ಮುಲಕುಪ್ಪಡಮ್ ಸಂಸ್ಥೆಯನ್ನು ತೆರೆದಿದ್ದ ತೋಮಿಚನ್, ಮಮ್ಮುಟ್ಟಿ ಮುಂತಾದವರು ನಟಿಸಿರುವ ಚಿತ್ರಗಳೂ ಸೇರಿದಂತೆ ಒಂದಷ್ಟು ಹಿಟ್ ಸಿನಿಮಾಗಳ ವಿತರಕರಾಗಿಯೂ ಗೆದ್ದಿದ್ದಾರೆ. ವಿಶೇಷವೆಂದರೆ, ತೋಮಿಚನ್ ಪ್ರಧಾನವಾಗಿ ಸಿನಿಮ ಆವೊಂದರ ಕಂಟೆಂಟು ಮತ್ತು ಕ್ಲಾಲಿಟಿಯ ಮಾನದಂಡವನ್ನು…

Read More

ನಾವು ಭಾರತದಲ್ಲಿ ಮಾತ್ರವೇ ಭೂತ ಪ್ರೇತಗಳ ಬಾಧೆ ಇರುತ್ತೆ ಅಂದುಕೊಂಡಿರುತ್ತೇವೆ. ಅದಕ್ಕೆ ಕಾರಣವಾಗಿರೋದು ನಮ್ಮ ಸಮಾಜದಲ್ಲಿ ಶತ ಶತಮಾನಗಳಿಂದಲೂ ಹಾಸುಹೊಕ್ಕಾಗಿರೋ ಕೆಲವಾರು ನಂಬಿಕೆಗಳು. ಆದರೆ ಯಾವ ದೇಶಗಳನ್ನೂ ಕೂಡಾ ಈ ಭಯ ಆವರಿಸಿಕೊಳ್ಳದೆ ಬಿಟ್ಟಿಲ್ಲ. ಬಹುತೇಕ ಎಲ್ಲ ಪ್ರದೇಶಗಳಲ್ಲಿಯೂ ಕೂಡಾ ಭೂತ ಪ್ರೇತಗಳ ಭಯ ತೀವ್ರವಾಗಿದೆ. ಅಲ್ಲೆಲ್ಲ ಭೂತ ಚೇಷ್ಟೆಯ ಪ್ರದೇಶಗಳು, ಅದರ ಸುತ್ತ ಬೆಚ್ಚಿ ಬೀಳಿಸುವಂಥಾ ದೃಷ್ಟಾಂತಗಳೂ ಹೇರಳವಾಗಿದ್ದಾವೆ. ಕೆನಡಾದಲ್ಲಿರೋ ಸ್ಟೀಮಿಂಗ್ ಟನಲ್ ಅದಕ್ಕೊಂದು ತಾಜಾ ಉದಾಹರಣೆ. ಸ್ಟೀಮಿಂಗ್ ಟನಲ್ ಇರೋದು ಕೆನಡಾದ ಒಂಟಾರಿಯೋ ಪ್ರದೇಶದಲ್ಲಿ. ಅಲ್ಲಿಂದ ವಾಯುವ್ಯ ದಿಕ್ಕಿನಲ್ಲಿಯೇ ವಿಶ್ವ ಪ್ರಸಿದ್ಧ ನಯಾಗರ ಜಲಪಾತವಿದೆ. ಈ ಟನಲ್ ಸುತ್ತ ಹತ್ತಾರು ಕಥೆಗಳೇ ಇದ್ದಾವೆ. ಅವೆಲ್ಲವೂ ಬೆಚ್ಚಿ ಬೀಳಿಸುವಂಥವುಗಳು. ಅದು ಸುಣ್ಣದ ಕಲ್ಲುಗಳಿಂದ ನಿರ್ಮಿಸಲಾಗಿರೋ ಪುರಾತನ ಸುರಂಗ. ಅದರ ಮೇಲೆ ರೂಲು ಹಳಿಗಳಿದ್ದಾವೆ. ಅದರೊಳಗೆ ರಾತ್ರಿ ಹೊತ್ತು ಹೋಗಿ ಕ್ಯಾಂಡಲ್ಲು ಹಚ್ಚಿದರೆ ಬೆಂಕಿಯ ಕೆನ್ನಾಲಿಗೆಗೆ ಬಿದ್ದ ಹುಡುಗಿಯೊಬ್ಬಳ ಆಕ್ರಂದನ ಸ್ಪಷ್ಟವಾಗಿಯೇ ಕೇಳಿಸುತ್ತದೆಯಂತೆ. ಅಲ್ಲಿ ಅಂಥಾ ಹಾರರ್ ಶಬ್ಧ ಕೇಳಿಸೋದರ ಹಿಂದೆಯೂ…

Read More