ಅಮೇಜಾನ್ ಕಾಡುಗಳ ಬಗ್ಗೆ ಇಡೀ ಜಗತ್ತಿನ ತುಂಬೆಲ್ಲ ನಿರಂತರ ಆಕರ್ಷಣೆಯೊಂದು ಸದಾ ಪ್ರವಹಿಸುತ್ತಿರುತ್ತದೆ. ಅದಕ್ಕೆ ಕಾರಣವಾಗಿರೋದು ಅಮೇಜಾನ್ ಕಾಡುಗಳೊಳಗಿರೋ ಅಸೀಮ ನಿಗೂಢ. ಲೆಕ್ಕವಿರದಷ್ಟು ಜೀವ ಸಂಕುಲಗಳನ್ನು ಒಡಲಲ್ಲಿಟ್ಟುಕೊಂಡಿರೋ ಈ ಕಾಡು ಈ ಕ್ಷಣಕ್ಕೂ ನಿಗೂಢವಾಗಿಯೇ ಉಳಿದುಕೊಂಡಿದೆ. ಮನುಷ್ಯರು ಅದೆಂಥಾದ್ದೇ ಅತ್ಯಾಧುನಿಕ ಆವಿಷ್ಕಾರಗಳೊಂದಿಗೆ ಈ ಕಾಡು ಹೊಕ್ಕರೂ ಅದರ ನಿಗೂಢಗಳನ್ನ ಸಂಪೂರ್ಣವಾಗಿ ಭೇಧಿಸಲು ಸಾಧ್ಯವಾಗಿಲ್ಲ. ಬಹುಶಃ ಇನ್ನೆಷ್ಟೇ ವರ್ಷ ಕಳೆದರೂ ಅದು ಸಾಧ್ಯವಾಗೋದೂ ಇಲ್ಲವೇನೋ… ಅಮೇಜಾನ್ ನದಿಯ ಬಗ್ಗೆ, ಅದರ ಜೀವ ಜಲ ಹೀರಿಕೊಂಡು ಸೊಂಪಾಗಿ ಹಬ್ಬಿಕೊಂಡಿರೋ ಕಾಡುಗಳ ಬಗ್ಗೆ ಬಹುತೇಕರು ಕೇಳಿರುತ್ತಾರೆ. ಆದರೆ ಅದರ ಬಗ್ಗೆ ತಿಳಿದುಕೊಳ್ಳಲೇ ಬೇಕಾದ ಸಾಕ್ಷು ವಿಚಾರಗಳಿದ್ದಾವೆ. ಅಮೇಜಾನ್ ಕಾಡಿರೋದು ದಕ್ಷಿಣ ಅಮೇರಿಕಾದ ಮೂಲದಲ್ಲಿ. ಹಾಗಂತ ಆ ಕಾಡು ಆದೇಶಕ್ಕೆ ಮಾತ್ರವೇ ಸೀಮಿತವಾಗಿಲ್ಲ. ಅದರ ವಿಸ್ತಾರವನ್ನು ನಿಖರವಾಗಿ ಬಾಯಿ ಮಾತಲ್ಲಿ ಹೇಳಲೂ ಸಾಧ್ಯವಿಲ್ಲ. ಯಾಕಂದ್ರೆ ಈ ಕಾಡು ಒಂಭತ್ತು ದೇಶಗಳಲ್ಲಿ ವ್ಯಾಪಕವಾಗಿ ಹಬ್ಬಿಕೊಂಡಿದೆ. ವಿಶೇಷ ಅಂದ್ರೆ ಬ್ರೆಜಿಲ್ ದೇಶ ಒಂದರಲ್ಲಿಯೇ ಶೇಖಡಾ ಅರವತ್ತರಷ್ಟು ಅಮೇಜಾನ್ ಕಾಡಿದೆಯಂತೆ. ಅಂದಹಾಗೆ…
Author: Santhosh Bagilagadde
ಇದು ಎಲ್ಲದಕ್ಕೂ ಪಾರಂಪರಿಕ ರೀತಿ ರಿವಾಜುಗಳಾಚೆಗೆ ಹೊಸ ಆವಿಷ್ಕಾರಗಳು ಕೆನೆದಾಡುತ್ತಿರೋ ಆಧುನಿಕ ಜಮಾನ. ಇಲ್ಲಿ ಎಲ್ಲವೂ ಫಟಾ ಫಟ್ ಎಂಬಂತಾಗಬೇಕು. ಅಷ್ಟೇ ಸಲೀಸಾಗಿಯೂ ಆಗಬೇಕು. ಈ ಧಾವಂತದಲ್ಲಿ ಯಾವುದಕ್ಕೋ ಜೋತು ಬಿದ್ದಿರೋ ನಾವುಗಳೆಲ್ಲ ನಾವೇ ಬುದ್ಧಿವಂತರೆಂಬಂತೆ ಬೀಗುತ್ತೇವೆ. ಆದರೆ ಅಂಥಾ ಆಧುನಿಕ ಸವಲತ್ತುಗಳಿಂದ ನಮ್ಮದೇ ದೇಹದ ಮೇಲಾಗಬಹುದಾದ ಭಯಾನಕ ಪರಿಣಾಮಗಳತ್ತ ಅಕ್ಷರಶಃ ಕುರುಡಾಗಿದ್ದೇವೆ. ಇದೀಗ ಪಾಶ್ಚಾತ್ಯ ದೇಶಗಳು ಮಾತ್ರವಲ್ಲದೇ ನಮ್ಮಲ್ಲಿಯೂ ವ್ಯಾಪಕವಾಗುತ್ತಿರೋ ಟಾಯ್ಲೆಟ್ ಪೇಪರ್ ಸುತ್ತ ನಡೆದಿರೋ ಅಧ್ಯಯನವೊಂದು ಹೊರಹಾಕಿರೋ ವಿಚಾರ ಈ ಬಗ್ಗೆ ಆಲೋಚನೆಗೆ ಹಚ್ಚುವಂತಿದೆ. ಟಾಯ್ಲೆಟ್ ಪೇಪರ್ ಬಳಸಿದರೆ ಎಲ್ಲವೂ ಸಲೀಸಾಗುತ್ತೆ ಅನ್ನೋ ನಂಬಿಕೆಯಿದೆ. ಸ್ವಚ್ಛತೆಯ ವಿಚಾರದಲ್ಲಿಯೂ ಅದನ್ನೊಂದು ಸರಿಯಾದ ಆಯ್ಕೆ ಎಂಬಂತೆ ಬಿಂಬಿಸಲಾಗುತ್ತಿದೆ. ಆದರೆ ಅದು ಸುಳ್ಳೆಂಬುದನ್ನ ಸದರಿ ಅಧ್ಯಯನ, ಸಂಶೋಧನೆ ಸಾಬೀತು ಪಡಿಸುತ್ತಿದೆ. ಯಾಕಂದ್ರೆ ಟಾಯ್ಲೆಟ್ ಪೇಪರ್ ಯಾವುದೇ ಸೋಂಕುಗಳನ್ನು ತಡೆಯುವ ತಾಕತ್ತನ್ನೂ ಹೊಂದಿಲ್ಲ. ಬಹುಕಾಲ ಟಾಯ್ಲೆಟ್ ಪೇಪರುಗಳನ್ನೇ ಬಳಸಿದರೆ ಮೂತ್ರ ಸಂಬಂಧಿ ಸೋಂಕು ತಗುಲೋ ಸಾಧ್ಯತೆ ಹೆಚ್ಚಾಗಿದೆ. ಅದು ಟಾಯ್ಲೆಟ್ ಪೇಪರಿನಿಂದ ಹರಡುತ್ತೆ ಅನ್ನೋದಕ್ಕಿಂತಲೂ…
ಆಧುನಿಕತೆಯ ಭರಾಟೆಯಲ್ಲಿ ಒಂದಿಡೀ ವಿಶ್ವವೇ ತೀರಾ ಪುಟ್ಟದೆನಿಸುತ್ತೆ. ಎಲ್ಲವೂ ಈಗ ಬೆರಳ ಮೊನೆಯಲ್ಲಿಯೇ ಇದೆ. ಇಲ್ಲಿ ಯಾವುದೂ ಅಸಾಧ್ಯವಲ್ಲ. ಎಂಥಾ ಅದ್ಭುತವೂ ಅಚ್ಚರಿಯಾಗುಳಿದಿಲ್ಲ. ಕಾಸೊಂದಿದ್ದರೆ ಯಾವ ಊರಿಗಾದರೂ ಪಾದವೂರ ಬಹುದು. ಕೈಗೆಟುಕದ್ದನ್ನೂ ಮುಟ್ಟಿ ಸಂಭ್ರಮಿಸಬಹುದು. ಆದರೆ ಇಡೀ ವಿಶ್ವದ ನಾನಾ ಭಾಗಗಳಲ್ಲಿ ಚಾಲ್ತಿಯಲ್ಲಿರುವ ರೀತಿ ರಿವಾಜುಗಳನ್ನು, ಚಿತ್ರವಿಚಿತ್ರವಾದ ಆಚರಣೆಗಳನ್ನು ಮಾತ್ರ ಅಷ್ಟು ಸಲೀಸಾಗಿ ಅರಗಿಸಿ ಕೊಳ್ಳಲು ಸಾಧ್ಯವೇ ಇಲ್ಲ. ಹಾಗಿದೆ ಅಂಥಾ ಆಚರಣೆಗಳ ಆಳ, ವಿಸ್ತಾರ. ನಮ್ಮ ದೇಶದಲ್ಲಿ ಚಾಲ್ತಿಯಲ್ಲಿರೋ ಎಲ್ಲಾ ಆಚರಣೆಗಳನ್ನ ಅರಗಿಸಿಕೊಳ್ಳೋದಕ್ಕೆ, ಅವುಗಳ ಬಗ್ಗೆ ಕೊಂಚ ತಿಳಿದುಕೊಳ್ಳೋದಕ್ಕೆ ಒಂದು ಜನುಮ ಸಾಲದೇನೋ. ಆದ್ರೆ ಇಡೀ ದೇಶಕ್ಕೆ ಅನ್ವಯ ವಾಗುವಂಥಾ ಕೆಲವಾರು ಆಚರಣೆಇಗಳು ಇದ್ದಾವೆ. ಅದರಲ್ಲಿ ಒಬ್ಬರಿಗೆ ಒಂದೇ ಮದುವೆ ಅನ್ನೋ ರಿವಾಜೂ ಒಂದಾಗಿದೆ. ಒಂದು ವೇಳೆ ನಮ್ಮಲ್ಲಿ ಯಾರಾದರೂ ಅದನ್ನು ಬ್ರೇಕ್ ಮಾಡಿ ಮತ್ತೊಂದು ಮದುವೆಯಾದ್ರೆ ಅಂಥವರ ಬಗ್ಗೆ ರಂಗು ರಂಗಾದ ಕಥೆಗಳು ಹುಟ್ಟಿಕೊಳ್ಳುತ್ತವೆ. ಕಾನೂನುಗಳೂ ಕೂಡಾ ಅದನ್ನು ಮಾನ್ಯ ಮಾಡೋದಿಲ್ಲ. ಆದರೆ ಚೀನಾದ ಒಂದೂರಿನಲ್ಲಿ ಒಬ್ಬ ಹುಡುಗ…
ಹುಟ್ಟಿನಿಂದಲೇ ಮೂಗರಾದವರು, ಕಿವಿ ಕೇಳಿಸದ ಸಮಸ್ಯೆಯಿರುವವರು ಕೈ ಸನ್ನೆಯಲ್ಲಿಯೇ ಮಾತಾಡೋದು ಗೊತ್ತೇ ಇದೆ. ಅದು ಮೂಗರ ಕಥೆಯಾಯ್ತು. ಇನ್ನುಳಿದಂತೆ ಮಾತು ಬರುವವರಿಗೆ ಸಂವಹನ ನಡೆಸೋದಕ್ಕಾಗಿ ಇಡೀ ವಿಶ್ವದಲ್ಲಿ ನಾನಾ ಭಾಷೆಗಳಿದ್ದಾವೆ. ಈ ಭಾಷೆಗಳೇ ಯಾವ ಸಂಶೋಧನೆಗಳಿಗೂ ನಿಲುಕದಷ್ಟು ಸಂಖ್ಯೆಯಲ್ಲಿವೆ. ನಮ್ಮ ದೇಶವನ್ನೇ ತೆಗೆದುಕೊಂಡರೆ ಗ್ರಾಮೀಣ ಭಾಗಗಳಲ್ಲಿಯೂ ಹರಡಿಕೊಂಡಿರೋ ಭಾಷೆಗಳು ಮತ್ತವುಗಳ ಶೈಲಿಗಳು ಅಚ್ಚರಿಯ ಗುಡಾಣದಂತಿವೆ. ಆದರೆ ಮಾತು ಬಂದರೂ ಕೂಡಾ ಕೈ ಸನ್ನೆಯಲ್ಲಿಯೇ ಮಾತಾಡೋ ಜನರೂ ಈ ಭೂಮಿಯ ಮೇಲಿದ್ದಾರೆ. ಅವರ ಪಾಲಿಗೆ ಅಂಥಾ ಸನ್ನೆಗಳೇ ಭಾಷೆ! ಈ ವಿಚಾರವನ್ನ ಕೇಳಿದ್ರೆ ನಿಜಕ್ಕೂ ಅಚ್ಚರಿಯಾಗುತ್ತೆ. ಇದು ನಿಜಾನಾ ಎಂಬಂಥಾ ಸಂದೇಹವೂ ಕಾಡದಿರೋದಿಲ್ಲ. ಮಾತಾಡೋ ಶಕ್ತಿ ಇದ್ದರೂ ಜನ ಸನ್ನೆಗಳ ಮೂಲಕವೇ ಮಾತಾಡ್ತಾರೆ ಅಂದ್ರೆ ಸಹಜವಾಗಿಯೇ ಗುಮಾನಿ ಮೂಡಿಕೊಳ್ಳುತ್ತೆ. ಆದರಿದನ್ನ ನಂಬದೇ ವಿಧಿಯಿಲ್ಲ. ಯಾಕಂದ್ರೆ ಅಂಥಾ ವಿಚಿತ್ರ ಜನ ಪ್ರಸಿದ್ಧ ಪ್ರವಾಸಿಗರ ಸ್ವರ್ಗ ಎಂದೆನಿಸಿರೋ ಬಾಲಿಯಲ್ಲಿದೆ. ಇಲ್ಲಿನ ಬಿಂಕಲಾ ಎಂಬ ಒಂದಿಡೀ ಹಳ್ಳಿಯ ಜನ ಸನ್ನೆಗಳಲ್ಲಿಯೇ ಪರಸ್ಪರ ಮಾತಾಡಿಕೊಳ್ತಾರೆ. ಬಾಲಿ ಅಂದರೆ ಭೂಲೋಕದ…
ನಾವೆಲ್ಲ ನಮ್ಮ ಕಣ್ಣ ಪರಿಧಿಗೆ, ಅರಿವಿನ ನಿಲುಕಿಗೆ ಸಿಕ್ಕಿದಷ್ಟನ್ನೇ ಬೆರಗೆಂದು ಸಂಭ್ರಮಿಸುತ್ತೇವೆ. ಆದರೆ ಅದರಾಚೆಗೆ ಅಡಕವಾಗಿರೋ ಅಂಶಗಳು ಮಾತ್ರವೇ ನಿಜವಾದ ನಿಗೂಢ. ಈ ವಿಶ್ವದಲ್ಲಿ ಅಂಥಾ ಅನೇಕಾನೇಕ ಅಂಶಗಳಿದ್ದಾವೆ. ನಮಗೆ ಗೊತ್ತೇ ಇಲ್ಲದ ಜನ ಜೀವನ ಸಂಪ್ರದಾಯಗಳಿವೆ. ನೈಸರ್ಗಿಕ ನಿಗೂಢಗಳಿದ್ದಾವೆ. ಈಗ ನಿಮ್ಮೆದುರು ಇಡುತ್ತಿರೋದು ಅಂಥಾದ್ದೇ ಒಂದು ವಿಶೇಷ ಸಂಗತಿಯನ್ನು! ಹೆಣ್ಣು ಮಕ್ಕಳ ಪಾಲಿಗೆ ಉದ್ದ ತಲೆಗೂದಲು ಸೌಂದರ್ಯವನ್ನ ಇಮ್ಮಡಿಗೊಳಿಸುತ್ತೆ ಎಂಬಂಥಾ ನಂಬಿಕೆಗಳಿವೆ. ಭಾರತೀಯ ಸಂಸ್ಕೃತಿಯಲ್ಲಂತೂ ಈ ಉದ್ದ ಜಡೆಗೆ ತನ್ನದೇ ಆದೊಂದು ಪರಂಪರೆ ಖಂಡಿತಾ ಇದೆ. ಆದರೀಗ ಆಧುನಿಕತೆ ಎಂಬುದು ಹಂತ ಹಂತವಾಗಿ ಉದ್ದ ಜಡೆಗಳಿಗೆ ಕತ್ತರಿ ಹಾಕುತ್ತಿದೆ. ಇನ್ನುಳಿದಂತೆ ಒಟ್ಟಾರೆ ನೈಸರ್ಗಿಕ ಕೊಳಕುಗಳು ಉದ್ದ ಜಡೆಗಳನ್ನು ಉದುರಿಸುತ್ತಲೂ ಇದ್ದಾವೆ. ಹೀಗಿರೋದರಿಂದಲೇ ಕೂದಲು ಸೊಂಪಾಗಿ ಬೆಳೆಯೋ ತೈಲಗಳು, ಫೇಕು ಜಾಹೀರಾತುಗಳು ಎಗ್ಗಿಲ್ಲದೆ ಮೇಳೈಸುತ್ತಿವೆ. ಅಂಥಾ ಜಾಹೀರಾತುಗಳ ಪ್ರಧಾನ ಆಕರ್ಷಣೆ ನೆಲಕ್ಕೆ ಮುಟ್ಟುವಂಥ ಉದ್ದ ಜಡೆ. ಅದು ನಿಜಕ್ಕೂ ಸಾಧ್ಯಾನಾ. ಈವಾಗಲೂ ಅಂಥಾ ಉದ್ದ ಜಡೆಗಳನ್ನು ಸಂಭಾಳಿಸಲಾಗುತ್ತಾ ಅನ್ನೋ ಸಂಶಯ ಇದ್ದೇ…
ವಿಕ್ರಾಂತ್ ರೋಣ ಚಿತ್ರದಲ್ಲಿ ರಾರಾ ರಕ್ಕಮ್ಮ ಸಾಂಗಿಗೆ ಮೈ ಬಳುಕಿಸುತ್ತಾ, ಕರ್ನಾಟಕದಲ್ಲಿಯೂ ಪ್ರಸಿದ್ಧಿ ಪಡೆದುಕೊಂಡಾಕೆ ಜಾಕ್ವೆಲಿನ್ ಫರ್ನಾಂಡಿಸ್. ಬಾಲಿವುಡ್ಡಲ್ಲಿ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದರೂ ಈಕೆಗೆ ಅಂದುಕೊಂಡಂತೆ ನೆಲೆಗಾಣಲು ಸಾಧ್ಯವಾಗಿರಲಿಲ್ಲ. ಆ ಬಳಿಕ ಈಕೆ ಸುದ್ದಿಯಲ್ಲಿದ್ದದ್ದೆಲ್ಲ ನಟ ಸಲ್ಮಾನ್ ಖಾನ್ ಜೊತೆಗಿಒನ ಅಫೇರಿನ ವಿಚಾರದಲ್ಲಿಯೇ. ಇಂಥಾ ಜಾಕ್ವೆಲಿನ್ ಇದೀಗ ಇನ್ನೂರು ಕೋಟಿ ಕಿಮ್ಮತ್ತಿನ ಮಹಾ ಮೋಸವೊಂದರಲ್ಲಿ ತಗುಲಿಕೊಂಡಿದ್ದಾಳೆ. ಈ ಇನ್ನೂರು ಕೋಟಿ ವಂಟನೆಯ ಇಕ್ಕಳದಿಂದ ಬಿಡಿಸಿಕೊಳ್ಳಲಾರದೆ ಒದ್ದಾಡುತ್ತಿದ್ದಾಳೆ. ಸದ್ಯಕ್ಕೆ ಈ ಕೇಸಿನ ಸುತ್ತ ಇಡಿ ಅಧಿಕಾರಿಗಳು ಗಸ್ತು ಹೊಡೆಯುತ್ತಿರೋದನ್ನು ಗಮನಿಸಿದರೆ ರಾರಾ ರಕ್ಕಮ್ಮ ಅಂದವಳಿಗೆ ಜೈಲುವಾಸ ಫಿಕ್ಸಾದಂತಿದೆ! ರಾಷ್ಟ್ರೀಯ ಮಟ್ಟದಲ್ಲಿ ಹೈ ಪ್ರೊಫೈಲ್ ವಂಚಕನಾಗಿ ಕುಖ್ಯಾತಿ ಪಡೆದಿರುವವನು ಸುಕೇಶ್ ಚಂದ್ರಶೇಖರ್. ಹೈಫೈ ಜನರನ್ನು ಪರಿಚಯ ಮಾಡಿಕೊಂಡು, ನಾನಾ ರೂಪದಲ್ಲಿ ಯಾಮಾರಿಸಿ ಕಾಸು ಪೀಕುವುದು ಸುಕೇಶನ ವಂಚನೆಯ ವರಸೆ. ಇಂಥಾ ಸುಕೇಶ ಇತ್ತೀಚೆಗೆ ಇನ್ನೂರು ಕೋಟಿ ವಂಚನೆ ಪ್ರಕರಣದಲ್ಲಿ ಇಡಿ ಕಣ್ಣಿಗೆ ಬಿದ್ದಿದ್ದ. ಈ ಪ್ರಕರಣದ ಸಂಬಂಧವಾಗಿ ವಿಸ್ತೃತವಾದ ತನಿಖೆ ನಡೆಸಿರುವ ಇಡಿ ಅಧಿಕಾರಿಗಳು…
ಸಿನಿಮಾ ಹಾಡೊಂದಕ್ಕಾಗಿ ಮೈ ತುಂಬಾ ಬೆರಗು ತುಂಬಿಕೊಂಡು ಕಾಯೋದಿದೆಯಲ್ಲಾ? ಕನ್ನಡ ಚಿತ್ರರಂಗದ ಇದುವರೆಗಿನ ಹಾದಿಯ ತುಂಬಾ ಅಂಥಾದ್ದೊಂದು ರೋಮಾಂಚಕ ಸನ್ನಿವೇಶಗಳ ಗಂಧ ಹರಡಿಕೊಂಡಿದೆ. ಸಿನಿಮಾ ರಂಗ ಒಂದಷ್ಟು ಮಜಲುಗಳನ್ನು ಸವರಿಕೊಂಡು ಬಂದು, ಈವತ್ತಿಗೆ ಯಶದ ಪರ್ವದತ್ತ ಹೊರಳಿಕೊಂಡಿದೆ. ಈ ಯಾನದಲ್ಲಿ ಹಾಡುಗಳಿಗಾಗಿ ಕಾಯುವ, ಎದೆಗೆ ತಾಕಿಸಿಕೊಂಡು ಸಂಭ್ರಮಿಸುವ ಖುಷಿ ಮಾತ್ರ ಸವಕಲಾಗದೆ ಹಾಗೇ ಉಳಿದುಕೊಂಡಿದೆ. ಅಂಥಾದ್ದೊಂದು ನವಿರು ಭಾವಗಳನ್ನು ಮತ್ತೊಮ್ಮೆ ತೀವ್ರವಾಗಿಸಿದ ಖ್ಯಾತಿ ನಿಸ್ಸಂದೇಹವಾಗಿಯೂ ಜಯತೀರ್ಥ ನಿರ್ದೇಶನದ ಬನಾರಸ್ ಚಿತ್ರಕ್ಕೆ ಸಲ್ಲುತ್ತದೆ. ಮಾಯಗಂಗೆ ಅಂತೊಂದು ಹಾಡಿನ ಮೂಲಕ ಮನಗೆದ್ದಿದ್ದ ಬನಾರಸ್ ಕಡೆಯಿಂದೀಗ, ಬೆಳಕಿನ ಕವಿತೆ ಎಂಬ ಮುದ್ದಾದ ಹಾಡು ಬಿಡುಗಡೆಗೊಂಡಿದೆ. ಹಾಡಿಗಿರುವ ಶಕ್ತಿಯನ್ನು ಸಮರ್ಥವಾಗಿ ಬಳಿಸಿಕೊಳ್ಳೋದೂ ಒಂದು ಕಲೆ. ನಿರ್ದೇಶಕ ಜಯತೀರ್ಥ ಆರಂಭದಿಂದ ಇಲ್ಲಿಯ ವರೆಗೂ ಆ ನಿಟ್ಟಿನಲ್ಲಿ ಸೈ ಅನ್ನಿಸಿಕೊಂಡು ಬಂದಿದ್ದಾರೆ. ಬನಾರಸ್ ವಿಚಾರದಲ್ಲಿ ಅಜನೀಶ್ ಲೋಕನಾಥ್ ಸಾಥ್ ಸಿಕ್ಕಿರೋದರಿಂದ ಹಾಡುಗಳಿಗೆ ಮತ್ತಷ್ಟು ಆವೇಗ ಬಂದಂತಾಗಿದೆ. ಅದೇ ಹಾದಿಯಲ್ಲಿ ರೂಪುಗೊಂಡಿರುವ ಬೆಳಕಿನ ಕವಿತೆ ಹಾಡು, ಸಂಜಿತ್ ಹೆಗ್ಡೆ ಮತ್ತು ಸಂಗೀತಾ…
ಝೈದ್ ಖಾನ್ ನಾಯಕನಾಗಿ ನಟಿಸಿರೋ ಪ್ಯಾನಿಂಡಿಯಾ ಚಿತ್ರ ಬನಾರಸ್. ಐದು ಭಾಷೆಗಳಲ್ಲಿ ತಯಾರಾಗಿರುವ ಈ ಸಿನಿಮಾ ಪ್ರಭೆಯೀಗ ದೇಶದ ಉದ್ದಗಲಕ್ಕೂ ಹಬ್ಬಿಕೊಂಡಿದೆ. ಎತ್ತ ಕಣ್ಣು ಹಾಯಿಸಿದರೂ ಬನಾರಸ್ ಬಗೆಗಿನ ಕ್ರೇಜ್, ಹಾಯೆನಿಸುವಂಥಾ ನಿರೀಕ್ಷೆಗಳೇ ಕಾಣಿಸುತ್ತಿವೆ. ಅಷ್ಟರಮಟ್ಟಿಗೆ ಬನಾರಸ್ ಪ್ರೇಕ್ಷಕರೆಲ್ಲರ ಆಸಕ್ತಿ ಕೇಂದ್ರದ ಮುನ್ನೆಲೆಗೆ ಬಂದು ನಿಂತಿದೆ. ಇನ್ನೇನು ಈ ಚಿತ್ರ ನವೆಂಬರ್ ನಾಲಕ್ಕರಂದು ತೆರೆಗಾಣಲಿದೆ. ಈ ಹೊತ್ತಿನಲ್ಲಿ ಅದ್ದೂರಿಯಾದ, ಅರ್ಥಪೂರ್ಣವಾದ ಪ್ರೀ ರಿಲೀಸ್ ಇವೆಂಟ್ ಒಂದನ್ನು ಚಿತ್ರತಂಡ ಆಯೋಜಿಸಿದೆ. ಇದೇ 22ನೇ ತಾರೀಕು ಶನಿವಾರದಂದು ಸಂಜೆ 7.30ಕ್ಕೆ ಹುಬ್ಬಳ್ಳಿಯ ರೈಲ್ವೇ ಸ್ಪೋರ್ಟ್ಸ್ ಗ್ರೌಂಡ್‌ನಲ್ಲಿ ಈ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಲಿದೆ. ವಿಶೇಷವೆಂದರೆ, ಅದರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಭಾಗಿಯಾಗಲಿದ್ದಾರೆ. ಆರಂಭದಿಂದಲೂ ಬನಾರಸ್ ಹೀರೋ ಝೈದ್ ಖಾನ್‌ಗೆ ಸ್ಟಾರ್ ನಟರೊಬ್ಬರ ನೆರಳಿದೆ ಎಂಬರ್ಥದ ಸುದ್ದಿಗಳು ಹರಿದಾಡುತ್ತಿದ್ದವು. ಬನಾರಸ್‌ಗೆ ಆ ನಟನ ಬೆಂಬಲ ಇರಲಿದೆ ಅಂತೆಲ್ಲ ಗಾಂಧಿನಗರದಲ್ಲಿ ಮಾತುಕತೆಗಳು ನಡೆದಿದ್ದವು. ಇದೀಗ ಆ ಸ್ಟಾರ್ ನಟ ಯಾರೆಂಬುದು ಜಾಹೀರಾಗಿದೆ. ನಟನಾಗಬೇಕೆಂಬ ಆಸೆ ಮೂಡಿಕೊಂಡಾಕ್ಷಣವೇ ಅದಕ್ಕಾಗಿನ ತಯಾರಿ…
ಕಾಂತಾರ ಬಂದ ನಂತರ ಹಠಾತ್ ಹವಾಮಾನ ಬದಲಾವಣೆ! ಇಲ್ಲಿ ಯಾವುದೂ ಶಾಶ್ವತವಲ್ಲ. ಸೋಲಿನಿಂದ ಕಂಗೆಟ್ಟು ನಿಂತವರಿಗೂ ಕೂಡಾ ಸತತ ಪ್ರಯತ್ನಕ್ಕೊಂದು ಗೆಲುವು ಒಲಿಯುತ್ತೆ. ಸಿಕ್ಕ ಗೆಲುವೊಂದನ್ನು ನೆತ್ತಿಗೇರಿಸಿಕೊಂಡು ಮೆರೆಯಲು ನಿಂತರೆ ಹೀನಾಯ ಸೋಲೊಂದು ಬಡಿಗೆಯೇಟು ಕೊಡುತ್ತೆ. ಹಾಗೆ ದಕ್ಕಿದ ಒಂದು ಗೆಲುವನ್ನು ಮುದ್ದುಮಾಡಿ, ಮೆರೆದು, ವಾಸ್ತವಕ್ಕೆ ಮರಳೋದರೊಳಗಾಗಿ ಸೋಲೆಂಬುದು ಹೆಬ್ಬಾಗಿಲ ಬಳಿಯೇ ಬಂದು ನಿಲ್ಲುತ್ತೆ. ಅದಕ್ಕಾಗಿಯೇ ಗೆಲುವನ್ನು ಮ್ಯಾನೇಜು ಮಾಡೋದೂ ಒಂದು ಕಲೆ ಅಂತ ತಿಳಿದವರು ಹೇಳಿದ್ದಾರೇನೋ… ದುರಂತವೆಂದರೆ, ಗಾಢ ಬೆಳಕಿನ ಪ್ರಭೆಯಲ್ಲಿ ಮೈಮರೆಯೋ ಸಿನಿಮಾ ಜಗತ್ತಿನ ಪ್ರಬೃತ್ತಿಗಳಿಗೆ ಈ ವಾಸ್ತವ ಅರಿವಾಗೋದೇ ಇಲ್ಲ. ಸೋಲಿನ ಶೀತಲ ಹಸ್ತ ಬೆನ್ನು ಸವರೋವರೆಗೂ ಮೆರೆದಾಡುತ್ತಾರೆ. ಗೆದ್ದಷ್ಟೇ ವೇಗವಾಗಿ ಪಾತಾಳ ಕಾಣುತ್ತಾರೆ. ಇಷ್ಟನ್ನೆಲ್ಲ ಈ ಕ್ಷಣದಲ್ಲಿ ಹೇಳಲು ಕಾರಣವಾಗಿರೋದು ನಮ್ಮದೇ ಕನ್ನಡ ಚಿತ್ರರಂಗದ ಈವತ್ತಿನ ವಾತಾವರಣ! ನೀವೆಲ್ಲ ಮರೆತಿರಲಿಕ್ಕಿಲ್ಲ; ಕೆಜಿಎಫ್ ಎಂಬೊಂದು ಚಿತ್ರ ಅದೆಂಥಾ ದಾಖಲೆ ಬರೆಯಿತೆಂಬ ರೋಚಕ ವಿದ್ಯಮಾನವನ್ನ. ಆರಂಭದಲ್ಲಿ ಕಾಡಿಬೇಡಿ ಸೀರಿಯಲ್ಲುಗಳಲ್ಲಿ ನಟಿಸುತ್ತಿದ್ದ, ಕಡುಗಷ್ಟದಿಂದಲೇ ಚಿತ್ರರಂಗದಲ್ಲಿ ನಾಯಕನಾಗಿದ್ದ ಯಶ್ ಎಂಬ ಹುಡುಗ…
ಮನುಷ್ಯರಷ್ಟು ಹುಚ್ಚಿನ ಪ್ರಮಾಣ ಅತಿಯಾಗಿರೋ ಮತ್ತೊಂದು ಪ್ರಾಣಿ ಈ ಭೂಮಿ ಮೇಲೆ ಸಿಗಲು ಸಾಧ್ಯವೇ ಇಲ್ಲ. ಈ ಮಾತಿಗೆ ತಕ್ಕುದಾಗಿ ಸಾವಿರಾರು ಉದಾಹರಣೆಗಳನ್ನು ಕೊಡಬಹುದೇನೋ. ನಮಗೆಲ್ಲ ಕ್ರಿಯೇಟಿವ್ ಆಗಿ ಆಲೋಚಿಸುವ, ಅಂಥಾದ್ದನ್ನೇ ಮಾಡಿ ಭೇಷ್ ಅನ್ನಿಸಿಕೊಳ್ಳುವ ಬಯಕೆ ಇರುತ್ತೆ. ಆದರೆ ಈ ಜಗತ್ತಿನ ವಿದ್ಯಮಾನಗಳತ್ತ ಒಮ್ಮೆ ಕಣ್ಣು ಹಾಯಿಸಿದ್ರೆ ನಮ್ಮ ಕಲ್ಪನೆಯನ್ನೂ ಮೀರಿ ಜಗತ್ತು ಮುಂದುವರೆದಿದೆ ಅನ್ನಿಸಿ ಬಿಡುತ್ತೆ. ಆ ಹುಡುಕಾಟದಲ್ಲಿಯೇ ಕ್ರಿಯೇಟಿವಿಟಿಯ ಹೆಸರಲ್ಲಿ ವಿಕೃತಿಗಳೂ ಸಂಭವಿಸುತ್ತಿವೆ ಅನ್ನಿಸದಿರೋದಿಲ್ಲ. ಪ್ಯಾರಿಸ್‌ನಲ್ಲಿರೋ ವಿಚಿತ್ರ ರೆಸ್ಟೋರೆಂಟ್ ಒಂದರ ಕಥೆ ಕೇಳಿದರೆ ಈ ಮಾತಲ್ಲಿ ನಿಮಗೂ ಕೂಡಾ ನಂಬಿಕೆ ಹುಟ್ಟದಿರೋದಿಲ್ಲ. ಪ್ಯಾರಿಸ್ ಅನ್ನೋದು ಪ್ರವಾಸ ಪ್ರಿಯರ ಹಾಟ್ ಫೇವರಿಟ್ ದೇಶ. ಜೀವಮಾನದಲ್ಲಿ ಆ ದೇಶಕ್ಕೊಮ್ಮೆ ಹೋಗಿ ಸುತ್ತಾಡಿಕೊಂಡು ಬರಬೇಕನ್ನೋದು ಅದೆಷ್ಟೋ ಸಹಸ್ರ ಜನರ ಆಸೆ. ಪಟ್ಟಿ ಮಾಡಿದರೆ ಆ ದೇಶದಲ್ಲಿ ಸಾವಿರಾರು ಸಂಖ್ಯೆಯಲ್ಲಿ ನೋಡಲೇ ಬೇಕಾದ ಸ್ಥಳಗಳಿರೋದು ಪತ್ತೆಯಾಗುತ್ತೆ. ಅಂಥಾ ಪ್ರವಾಸಿಗರ ಪಾಲಿನ ಸ್ವರ್ಗದೊಳಗೇ ಒಂದು ವಿಚಿತ್ರದಲ್ಲೇ ವಿಚಿತ್ರವಾದ ರೆಸ್ಟೋರೆಂಟ್ ಒಂದಿದೆ. ಅದೇನು ಅಂತಿಂಥ ರೆಸ್ಟೋರಾಂಟ್…