Author: Santhosh Bagilagadde

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಭೌತಿಕವಾಗಿ ಮರೆಯಾಗಿ ವರ್ಷವೊಂದು ಉರುಳಿ ಹೋಗಿದೆ. ಕಳೆದ ವರ್ಷ ಸರಿಯಾಗಿ ಈ ಸಮಯಕ್ಕೆ ಹಬ್ಬಿಕೊಂಡಿದ್ದ ಸೂತಕ, ದಿಕ್ಕುದೆಸೆಗಳಿಲ್ಲದೆ ಹರಿದಿದ್ದ ಕಣ್ಣೀರ ಕೋಡಿ ಮತ್ತು ಪ್ರೀತಿಯ ಅಪ್ಪುವನ್ನು ಮರಳಿ ಪಡೆಯುವ ಕೋರಿಕೆಗಳೆಲ್ಲವೂ ಇನ್ನೂ ಹಸಿಯಾಗಿವೆ. ಈ ಕ್ಷಣಕ್ಕೂ ಇಲ್ಲೇ ಎಲ್ಲೋ ಹೋಗಿರೋ ಅಪ್ಪು ಮರಳಿ ಬರಬಹುದೆಂಬಂಥಾ ಭಾವುಕತೆಯ ಪಸೆ ಕೋಟಿ ಮನಸುಗಳಲ್ಲಿ ಹಾಗೆಯೇ ಉಳಿದುಕೊಂಡಿದೆ. ಈ ಹಂತದಲ್ಲಿ ಪುನೀತ್‌ರನ್ನು ನಾನಾ ರೀತಿಯಲ್ಲಿ ಸ್ಮರಿಸಿಕೊಳ್ಳುತ್ತಾ, ಅವರ ಪ್ರಾಂಜಲ ನಗುವನ್ನು ಧ್ಯಾನಿಸುತ್ತಾ ಅಭಿಮಾನಿ ಬಳಗವೂ ಸಮಾಧಾನಿಸಿಕೊಳ್ಳುತ್ತಿದೆ. ಇದೆಲ್ಲದರ ನಡುವಲ್ಲಿಯೇ ಮಗು ಮನಸಿನ ಅಪ್ಪವನ್ನು ಅಷ್ಟು ಬೇಗನೆ ಕಸಿದುಕೊಂಡ ವಿಧಿಯೆಡೆಗಿನ ಕೋಪವೂ ಕೂಡಾ ಕೆಂಡಗಟ್ಟಿಕೊಂಡು ಸುಡಲಾರಂಭಿಸಿದೆ. ಪಾದರಸದಂಥಾ ವ್ಯಕ್ತಿತ್ವ ಹೊಂದಿದ್ದ ಪುನೀತ್ ಯಾನ ಅರ್ಧ ಹಾದಿಯಲ್ಲಿಯೇ ಕೊನೆಗೊಂಡಿದೆ. ಅವೊಳಗಿದ್ದ ಅದೆಷ್ಟೋ ಕನಸುಗಳೂ ಕೂಡಾ ಅವರೊಂದಿಗೇ ಮಣ್ಣಲ್ಲಿ ಮಣ್ಣಾಗಿ ಹೋಗಿವೆ. ಅಪ್ಪು ಅದೆಂಥಾ ಜೀವನಪ್ರೀತಿ ಹೊಂದಿದ್ದರು, ಆಸು ಪಾಸಿನಲ್ಲಿ ಸುಳಿಯುವ ಜೀವಗಳನ್ನು ಅದೆಷ್ಟು ತೀವ್ರವಾಗಿ ಪ್ರೀತಿಸುತ್ತಿದ್ದರೆಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದರೆ, ಪುನೀತ್…

Read More

ನಾವು ಆಗಾಗ ಸುಂದರವಾದ ಪ್ರದೇಶಗಳು, ಭೂಲೋಕದ ಸ್ವರ್ಗದಂಥ ಸ್ಥಳಗಳು ಯಾವ್ಯಾವ ದೇಶದಲ್ಲಿದ್ದಾವೆ ಅಂತ ದುರ್ಬೀನು ಹಾಕಿಕೊಂಡು ಹುಡುಕುತ್ತೇವೆ. ನಮ್ಮ ನಿರೀಕ್ಷೆಯ ಆಸುಪಾಸಲ್ಲಿರೋ ಒಂದು ಪ್ರದೇಶ ಕಣ್ಣಿಗೆ ಬಿದ್ದರೂ ಅದರ ವಿವರಗಳನ್ನು ಜಾಲಾಡಿ ಒಂದೇ ಒಂದು ಸಲ ಅಲ್ಲಿಗೆ ಹೋಗಬೇಕೆಂದು ಹಂಬಲಿಸುತ್ತೇವೆ. ಆದರೆ ನಿಜವಾಗಿಯೂ ಸ್ವರ್ಗವೇ ಧರೆಗಿಳಿದಂಥಾ ದೇಶಗಳೇ ಸಾಕಷ್ಟಿವೆ. ಆ ಸಾಲಿನಲ್ಲಿ ಮೊದಲಿಗೆ ನಿಲ್ಲುವಂಥ ಎಲ್ಲ ಲಕ್ಷಣಗಳನ್ನೂ ಒಳಗೊಂಡಿರೋ ದೇಶ ನ್ಯೂಜಿಲ್ಯಾಂಡ್. ಅದು ನಿಜಕ್ಕೂ ಧರೆಗಿಳಿದ ಸ್ವರ್ಗ. ಈ ಮಾತಿಗೆ ತಕ್ಕುದಾದ ಚಹರೆಗಳನ್ನ ಅದು ತನ್ನೊಡಲ ತುಂಬೆಲ್ಲ ಬಚ್ಚಿಟ್ಟುಕೊಂಡಿದೆ. ಹಾಗಂತ ನ್ಯೂಜಿಲ್ಯಾಂಡಿನ ಯಾವುದೋ ಪ್ರದೇಶದಲ್ಲಿ ಸ್ವರ್ಗದಂಥ ವಾತಾವರಣ ಇದೆ ಅಂದುಕೊಳ್ಳಬೇಕಿಲ್ಲ. ಆ ಇಡೀ ದೇಶವೇ ಸ್ವರ್ಗದಂತಿದೆ. ಕೇವಲ ಅದರ ಅಂದ ಚೆಂದ, ವಾತಾವರಣ, ಪ್ರಾಕೃತಿಕ ಸಿರಿವಂತಿಕೆ ಮಾತ್ರವಲ್ಲ; ಜನಜೀವನ, ಸಮಾಜಿಕ, ರಾಜಕೀಯ ವಿಚಾರಗಳೂ ಕೂಡಾ ಅದಕ್ಕೆ ಪೂರಕವಾಗಿವೆ. ಈ ಕಾರಣದಿಂದಲೇ ಅಲ್ಲಿನ ಜನ ನೆಮ್ಮದಿಯಿಂದಿದ್ದಾರೆ. ಇದೆಲ್ಲ ಅಂಶಗಳೊಂದಿಗೆ ಅದು ಎಲ್ಲ ರೀತಿಯಿಂದಲೂ ಇತರೇ ದೇಶಗಳಿಗೆ ಮಾದರಿಯಂತಿದೆ. ಅದು ಪ್ರಾಕೃತಿಕವಾಗಿಯೇ ಹಲವಾರು ಉಡುಗೊರೆಗಳನ್ನು…

Read More

ನಮ್ಮ ಸುತ್ತಲಿರೋ ಪ್ರಾಣಿ, ಪಕ್ಷಿಗಳು, ಕೀಟಗಳು ಸದಾ ಕಾಲವೂ ನಮ್ಮ ಗಮ ನ ಸೆಳೆಯುತ್ತವೆ. ಅವುಗಳಲ್ಲಿ ಒಂದಷ್ಟನ್ನು ನಾವು ಅಪಾಯಕಾರಿ ಎಂಬ ಲಿಸ್ಟಿಗೆ ಸೇರಿಸಿ ಅವು ಹತ್ತಿರ ಸುಳಿಯದಂತೆ ಎಚ್ಚರ ವಹಿಸುತ್ತೇವೆ. ಮತ್ತೆ ಕೆಲವನ್ನು ಅವುಗಳ ಸೌಂದರ್ಯಕ್ಕೆ ಮಾರು ಹೋಗಿ ಅವುಗಳತ್ತ ಒಂದು ಮೋಹ ಬೆಳೆಸಿಕೊಳ್ಳುತ್ತೇವೆ. ಇಡೀ ಜಗತ್ತಿನಲ್ಲಿ ಬೇಷರತ್ತಾಗಿ ಅಂಥಾದ್ದೊಂದು ಮೋಹವನ್ನು ತನ್ನೆಡೆಗೆ ಕೇಂದ್ರೀಕರಿಸಿಕೊಂಡಿರೋದು ಚಿಟ್ಟೆಗಳು. ಅವುಗಳ ಅಪರಿಮಿತವಾದ ಸೌಂದರ್ಯವೇ ಆ ಮ್ಯಾಜಿಕ್ಕಿನ ಮೂಲ ಎಂದರೂ ತಪ್ಪೇನಿಲ್ಲ.  ಒಂದು ಕಾಲದಲ್ಲಿ ಕಂಬಳಿ ಹುಳವಾಗಿದ್ದ ಚಿಟ್ಟೆ ಆ ಕುರುಹೇ ಇಲ್ಲದಂಥಾ ಸೌಂದರ್ಯವನ್ನು ತನ್ನದಾಗಿಸಿಕೊಂಡಿರುತ್ತೆ. ಇದು ಮನುಷ್ಯನ ರೂಪಾಂತರಕ್ಕೂ ಸ್ಫೂರ್ತಿಯಾಗಿ ಬಳಕೆಯಾಗುತ್ತೆ. ಪೂರ್ವಾಶ್ರಮದಲ್ಲಿ ಕಂಬಳಿ ಹುಳುವಾಗಿದ್ದ ಸಂದರ್ಭದಲ್ಲಿ ಅದೊಂದು ಸುಂದರ ಚಿಟ್ಟೆ ಆಗುತ್ತೆ ಅಂದ್ರೆ ಯಾರಿಗೂ ನಂಬಿಕೆ ಹುಟ್ಟೋದಿಲ್ಲ. ಮೈ ತುಂಬಾ ವಿಷಯುಕ್ತ ಮುಳ್ಳುಗಳನ್ನು ತುಂಬಿಕೊಂಡಿರೋ ಕಂಬಳಿಹುಳು ಭಯ ಮತ್ತು ಅಸಹ್ಯ ಮೂಡಿಸುತ್ತೆ. ಆದರೆ ಅದು ಚಿಟ್ಟೆಯಾದ ನಂತರ ಸಾಧು ಸ್ವರೂಪ ಪಡೆದುಕೊಳ್ಳುತ್ತೆ. ಅದು ಈಗ ಫ್ರೆಂಡ್ಲಿ ಸ್ವರೂಪವೆತ್ತಿದೆ ಎಂದೇ ನಂಬುತ್ತೇವೆ. ಆದರೆ…

Read More

ಹೊರಗೆಲ್ಲೋ ಇರುವ ಒಂದಷ್ಟು ಹುಳ ಹುಪ್ಪಟೆ, ಕ್ರಿಮಿ, ಕೀಟಗಳನ್ನ ನೋಡಿ ಮುಖ ಕಿವುಚುತ್ತೇವೆ. ಬ್ಯಾಕ್ಟೀರಿಯಾಗಳೆಂದರೆ ಹೌಹಾರುತ್ತೇವೆ. ಅಲ್ಲೆಲ್ಲೋ ಗಲೀಜು ಕಂಡರೆ ಮುಖ ಸಿಂಡರಿಸಿ ಕೊಸರಾಡುತ್ತೇವೆ. ಆದರೆ ನಮ್ಮ ದೇಹವೇ ಅಂಥಾದ್ದೆಲ್ಲದರ ಗುಡಾಣ ಅನ್ನೋ ಸತ್ಯವನ್ನ ಮಾತ್ರ ಮರೆತು ಮುನ್ನಡೆಯುತ್ತೇವೆ. ಕೊಂಚ ಸ್ವಚ್ಛತೆಯತ್ತ ಅನಾದರ ತೋರಿದರೂ ಹೊರಗಿನ ಗಲೀಜುಗಳನ್ನೇ ಮೀರಿಸುವಂಥಾ ಅಸಹ್ಯಗಳಿಂದ ನಮ್ಮ ದೇಹ ತುಂಬಿ ತುಳುಕುತ್ತೆ. ಅದುವೇ ನಮ್ಮ ದೇಹವನ್ನು ಕಾಯಿಲೆಯ ಕೊಂಪೆಯಾಗಿಸೋ ಅಪಾಯ ತುಸು ದೂರದಲ್ಲೇ ಹೊಂಚು ಹಾಕಿ ಕೂತಿದೆ ಅನ್ನೋದು ಕಟು ವಾಸ್ತವ. ಮೈ ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳೋ ಪಾಠವನ್ನ ಬುದ್ಧಿ ಬಲಿಯುತ್ತಲೇ ಎಲ್ಲರೂ ಕಲಿತುಕೊಳ್ಳುತ್ತಾರೆ. ಆದರೆ ಒಂದು ಹಂತದಲ್ಲಿ ಬಹುತೇಕರು ಸ್ವಚ್ಛತೆಯನ್ನು ಅಷ್ಟಾಗಿ ಪರಿಪಾಲಿಸೋದಿಲ್ಲ. Siಞಳ್ಲ ಅಂಗಗಳು ಹಾಗಿರಲಿ; ನಾವು ತುಂಬಾ ಮುತುವರ್ಜಿ ವಹಿಸುವ, ಸೌಂದರ್ಯಕ್ಕಾಗಿ ಹಪಾಹಪಿಸುವ ಮುಖವೇ ಎಚ್ಚರ ತಪ್ಪಿದರೆ ಹುಳಗಳಿಂದ ಮಿಜಿಗುಡಬಹುದು. ನಮ್ಮ ದೇಹದಲ್ಲಿನ ಚರ್ಮ ಆಗಾಗ ಹಳತಾಗುತ್ತಿರುತ್ತವೆ. ಹಳೇ ಚರ್ಮದ ಜೀವಕೋಶಗಳು ಒಣಗುತ್ತವೆ. ಹಾಗೆ ಒಣಗಿದ ಚರ್ಮ ಸ್ವಚ್ಛತೆ ಇಲ್ಲದಾಗ ಹುಳಗಳ ಆವಾಸ ಸ್ಥಾನವಾಗುತ್ತೆ.…

Read More

ರಿಷಬ್ ಶೆಟ್ಟಿ ಪಾಲಿಗೀಗ ಒಂದಿಡೀ ನಸೀಬೇ ಪಥ ಬದಲಿಸಿ ಮಹಾ ಗೆಲುವಿನ ಗಮ್ಯ ಸೇರಿಸಿದೆ. ರಿಷಬ್ ಈ ಗೆಲುವಿನ ಅಲೆಯಲ್ಲಿ ನಡೆದುಕೊಂಡಿರೋ ಒಂದಷ್ಟು ರೀತಿಗಳು ಸೈದ್ಧಾಂತಿಕ ಸಂಘರ್ಷಕ್ಕೆ, ಒಂದಷ್ಟು ವಿರೋಧಗಳಿಗೆ ಕಾರಣವಾಗಿರೋದು ನಿಜ. ಆದರೆ, ಈ ಘಳಿಗೆಯಲ್ಲಿ ರಿಷಬ್ ಶೆಟ್ಟಿಯನ್ನು ಓರ್ವ ನಟ ಮತ್ತು ನಿರ್ದೇಶಕನಾಗಿ ಮತ್ತು ಕಾಂತಾರವನ್ನೊಂದು ಚಿತ್ರವನ್ನಾಗಿ ದಿಟ್ಟಿಸಿದರೆ ಅದು ಮೂಡಿಸಿರುವ ಸಂಚಲನ ರೋಮಾಂಚಕ. ನಟನಾಗಬೇಕೆಂಬ ಅತೀವ ತುಡಿತವನ್ನು ನಿರ್ದೇಶನದತ್ತ ಹೊರಳಿಸಿಕೊಂಡಿದ್ದ ರಿಷಬ್ ಈಗ ಎಲ್ಲ ದಿಕ್ಕಿನಲ್ಲಿಯೂ ಗೆದ್ದಿದ್ದಾರೆ. ಈ ಗೆಲುವನ್ನು ದೇಶಾದ್ಯಂತ ಅತಿರಥಮಹಾರಥರೇ ಸಂಭ್ರಮಿಸುತ್ತಿದ್ದಾರೆ. ಸೂಪರ್ ಸ್ಟಾರ್ ರಜನೀಕಾಂತ್ ಕೂಡಾ ಕಾಂತಾರ ಚಿತ್ರವನ್ನು ನೋಡಿ ಬಹುವಾಗಿ ಮೆಚ್ಚಿಕೊಂಡಿದ್ದರು. ಇದೀಗ ರಿಷಬ್ ರಜನೀಕಾಂತ್‌ರ ಮನೆಗೆ ತೆರಳಿ ಮುಖತಃ ಭೇಟಿಯಾಗಿದ್ದಾರೆ. ರಜನೀಕಾಂತ್ ಒಂದು ಸಿನಿಮಾವನ್ನು ನೋಡಿ ಪ್ರತಿಕ್ರಿಯಿಸೋದಿದೆಯಲ್ಲಾ? ಅದು ಸಿನಿಮಾ ರಂಗದ ಮಂದಿಯ ಪಾಲಿಗೆ ಮಹಾನ್ ಪುರಸ್ಕಾರವಿದ್ದಂತೆ. ಕಾಂತಾರ ಕ್ರೇಜ್ ಕರ್ನಾಟಕದ ಗಡಿದಾಟಿ, ದೇಶದ ಉದ್ದಗಲಕ್ಕೂ ಪಸರಿಸುತ್ತಲೇ ರಜನೀಕಾಂತ್ ಅದರತ್ತ ಆಕರ್ಷಿತರಾಗಿದ್ದರು. ಕಡೆಗೂ ಕಾಂತಾರವನ್ನು ನೋಡಿ ಥ್ರಿಲ್ ಆಗಿ ಅಭಿಪ್ರಾಯ…

Read More

ಎಲ್ಲವನ್ನೂ ಪ್ರಾಂಜಲ ನಗುವಿನಿಂದಲೇ ಎದುರುಗೊಳ್ಳುತ್ತಾ, ಬಾಗಿ ನಡೆಯೋದನ್ನೇ ವ್ಯಕ್ತಿತ್ವದ ಶಕ್ತಿಯಾಗಿಸಿಕೊಂಡಿದ್ದವರು ಪುನೀತ್ ರಾಜ್ ಕುಮಾರ್. ತಂದೆಯ ಗುಣಗಳನ್ನೆಲ್ಲ ಎರಕ ಹೊಯ್ದುಕೊಂಡಂತಿದ್ದ ಅಪ್ಪು, ಅಭಿಮಾನದಾಚೆಗೂ ಒಂದಿಡೀ ಕರುನಾಡನ್ನು ಆವರಿಸಿಕೊಂಡಿದ್ದ ದೈತ್ಯ ಶಕ್ತಿ. ಸದಾ ಉತ್ಸಾಹದ ಚಿಲುಮೆಯಂತಿರುತ್ತಿದ್ದ ಅಪ್ಪು ಸಣ್ಣದೊಂದು ಸುಳಿವೂ ನೀಡದೆ ನಿಶ್ಚಲವಾಗಿ ಒಂದು ವರ್ಷ ಕಳೆದಿದೆ. ಬಹುಶಃ ಇನ್ನೊಂದಷ್ಟು ವರ್ಷಗಳು ಕಳೆದರೂ ಕೂಡಾ ನಮ್ಮೆಲ್ಲರ ಮನಸುಗಳಲ್ಲಿ ಆ ಆಘಾತ ಹಸಿಯಾಗಿರುತ್ತದೇನೋ… ಎಲ್ಲವೂ ಕಣ್ಣೆದುರಲ್ಲಿಯೇ ನಡೆದು ಹೋದರೂ ಯಾವುದನ್ನೂ ನಂಬದ ಸ್ಥಿತಿಯೊಂದು ಎಲ್ಲರೊಳಗಿದೆ. ಸಾಮಾನ್ಯವಾಗಿ ಸಾವೊಂದು ಶೂನ್ಯ ವಾತಾವರಣ ಸೃಷ್ಟಿಸುತ್ತೆ. ಇಷ್ಟದ ಜೀವವೊಂದು ಇನ್ನಿಲ್ಲವಾದಾಗ, ಎಂದೂ ತುಂಬಲಾರದಂಥಾ ಖಾಲಿತನವೊಂದು ಎದೆತಬ್ಬಿಕೊಳ್ಳುತ್ತೆ. ಆದರೆ, ಪುನೀತ್ ರಾಜ್‌ಕುಮಾರ್ ಅಗಲಿಕೆಯ ವಿಚಾರದಲ್ಲಿ ಅದೆಲ್ಲವೂ ಅದಲು ಬದಲಾಗಿದೆ! ಯಾಕೆಂದರೆ, ಅಪ್ಪು ನಮ್ಮ ನಡುವಲ್ಲಿಲ್ಲ ಅನ್ನೋದನ್ನ ಈ ಕ್ಷಣಕ್ಕೂ ಯಾರಿಗೂ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇಲ್ಲೇ ಎಲ್ಲೋ ಸಂಚಾರ ತೆರಳಿರೋ ಅಪ್ಪು ಬ್ಯುಸಿಯಾಗಿಬಿಟ್ಟಿದ್ದಾರೆಂಬ ಭಾವವೇ ಎಲ್ಲರೊಳಗೂ ನೆಲೆ ನಿಂತು ಬಿಟ್ಟಿದೆ. ಆ ನಂಬಿಕೆ ಯಾವ ಘಳಿಗೆಯಲ್ಲಿಯೂ ಕದಲಲು ಸಾಧ್ಯವೇ ಇಲ್ಲ. ಬದುಕಿದ್ದಷ್ಟೂ…

Read More

ಮನುಷ್ಯರೆಂದರೆ ಒಂದೇ ತಲೆ, ಒಂದೇ ಮುಖ, ಇಂತಿಂಥಾದ್ದೇ ಅಂಗಗಳು ಮತ್ತು ಅವುಗಳಿಗೊಂದಿಷ್ಟು ನಿಖರ ರಚನೆಗಳಿರುತ್ತವೆ. ಆದರೆ ಪ್ರಕೃತಿಯ ವೈಚಿತ್ರ್ಯ ಮಾತ್ರ ಆ ಗೆರೆ ದಾಟಿಕೊಂಡು ಕೆಲ ಮನುಷ್ಯರನ್ನು ಸೃಷ್ಟಿಸಿ ಬಿಡುತ್ತೆ. ಅದಕ್ಕೆ ಉದಾಹರಣೆಯಾಗಿ ಹತ್ತಾರು ವಿಚಿತ್ರಗಳಿವೆ. ಎರಡು ದೇಹಗಳು ಒಂದಕ್ಕೊಂದು ಹೊಸೆದುಕೊಂಡಿರೋ ಸಯಾಮಿಗಳು ನಮಗೆಲ್ಲ ಪರಿಚಿತ. ಅವುಗಳನ್ನು ನೋಡಿಯೇ ಅದೆಷ್ಟೋ ಸಲ ನಾವೆಲ್ಲ ಹೌಹಾರುತ್ತೇವೆ. ಆದರೆ ಅದನ್ನೇ ಮೀರಿಸುವಂಥ ವಿಚಿತ್ರವಾದ ಮನುಷ್ಯರು ಈ ನೆಲದಲ್ಲಿ ನಡೆದಾಡಿದ್ದಾರೆ. ಅಂಥವರೆಲ್ಲ ಕಡೇಯವರೆಗೂ ವೈದ್ಯಕೀಯ ಜಗತ್ತಿಗೇ ಸವಾಲೆಸೆಯುವಂತೆ ಬದುಕಿ ಹೋಗಿದ್ದಾರೆ. ಹದಿನೆಂಟನೇ ಶತಮಾನದಲ್ಲಿ ಬದುಕಿದ್ದ ಎಡ್ವರ್ಡ್ ಮಾರ್ಡಾರ್ಕ್ ಎಂಬಾತ ವಿಚಿತ್ರದಲ್ಲಿಯೇ ವಿಚಿತ್ರ ಸೃಷ್ಟಿಗೊಂದು ತಾಜಾ ಉದಾಹರಣೆ. ಅಸಾಧ್ಯ ಬುದ್ಧಿವಂತಿಕೆ ಹೊಂದಿದ್ದ ಎಡ್ವರ್ಡ್‌ಗೆ ಪ್ರಾಕೃತಿಕವಾಗಿಯೇ ಶಾಪದಂಥಾ ದೇಹ ರಚನೆ ಬಂದಿತ್ತು. ಹಾಗಂತ ಆತನ ದೇಹದಲ್ಲೇನು ಬೇರೆಯವರಿಗಿಂತ ಭಿನ್ನವಾದ, ವಿಚಿತ್ರವಾದ ರಚನೆಗಳಿರಲಿಲ್ಲ. ನೋಡಿದರೆ ಮಾಮೂಲಿ ಮನುಷ್ಯನಂತೆಯೇ ಕಾಣಿಸುತ್ತಿದ್ದ ಆತನಿಗೆ ತಲೆಯಲ್ಲಿಯೂ ಒಂದು ಮುಖವಿತ್ತು. ಮಾಮೂಲಿಯಾಗಿರೋ ಮುಖದ ಹಿಂಬಾಗದಲ್ಲಿ ಮೂಗು, ಬಾಯಿ, ಕಣ್ಣುಗಳಿರೋ ಮತ್ತೊಂದು ಮುಖವಿತ್ತು! ಮಾಮೂಲಿ ಮುಖವನ್ನೇ ಹೋಲುವಂಥಾ…

Read More

ಈ ಜಗತ್ತಿನ ಅಷ್ಟೂ ಪ್ರೇಕ್ಷಣೀಯ ಸ್ಥಳಗಳನ್ನು ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಸುತ್ತಿ ಬಿಡಬೇಕೆಂಬುದು ಹಲವರ ಮಹಾ ಕನಸು. ಈಗಿನ ಯುವ ಸಮೂಹವಂತೂ ಗಂಡು ಹೆಣ್ಣೆಂಬ ಬೇಧವಿಲ್ಲದೆ ಇಂಥಾ ಆಸೆಯನ್ನು ಬಚ್ಚಿಟ್ಟುಕೊಳ್ತಾರೆ. ಅದಕ್ಕೆಂದೇ ಸಾಕಷ್ಟು ಹಣವನ್ನೂ ಕೂಡಾ ಪ್ರತೀ ತಿಂಗಳು ಕೂಡಿಸಿಟ್ಟುಕೊಂಡು ಕಾಯುವವರೂ ಇದ್ದಾರೆ. ಆದರೆ ಅವರ ಅಂದಾಜಿಗೇ ನಿಲುಕದಂಥಾ ಅನೇಕ ಅಚ್ಚರಿದಾಯಕ ತಾಣಗಳು ಈ ಭೂಮಿಯ ಮೇಲೆ, ಸಾಗರಗಳ ಮೇಲಿದೆ. ಅದರಲ್ಲೊಂದಿಷ್ಟು ನೈಸಗೀಕ. ಮತ್ತೊಂದಷ್ಟು ಮಾನವ ನಿರ್ಮಿತ. ಈಗ ಹೇಳ ಹೊರಟಿರೋದು ಅಂಥಾದ್ದೇ ಒಂದು ಅಚ್ಚರಿದಾಯಕ ದ್ವೀಪ ಸಮೂಹದ ಬಗ್ಗೆ. ದ್ವೀಪ ಸಮೂಹಗಳೆಂದರೇನೇ ಭೂಲೋಕದ ಸ್ವರ್ಗದಂಥವುಗಳು. ಸುತ್ತಲೂ ಕಣ್ಣ ನಿಲುಕಿಗೆ ಮೀರಿದಷ್ಟು ಜಲರಾಶಿ. ಅದರ ಮಧ್ಯೆ ಭೂಮಿಯ ತುಣುಕು. ಅದರ ಮೇಲೊಂದು ಸುಂದರ, ಸಮೃದ್ಧವಾದ ಊರು… ಇಂಥಾ ಗುಣ ಲಕ್ಷಣಗಳಿರೋ ದ್ವೀಪ ಅಂದ್ರೆ ಯಾರಿಗೇ ಆದರೂ ಇಷ್ಟವಾಗದಿರಲು ಸಾಧ್ಯವೇ ಇಲ್ಲ. ಆದರೆ ಅವು ಹೆಚ್ಚಾಗಿ ಸಿಂಗಲ್ ಆಗಿರುತ್ತವೆ. ಒಂದೇ ಕಡೆ ಒಂದಷ್ಟು ದ್ವೀಪಗಳು ಕಾಣೋದು ವಿರಳ. ಆದ್ರೆ ಪೆರು ದೇಶದಲ್ಲಿ ನಿಜಕ್ಕೂ…

Read More

ಟೂತ್ ಬ್ರೆಷ್ ಅನ್ನೋದು ನಮ್ಮ ಬದುಕಿನ ಭಾಗ. ದಿನಾ ಬೆಳಗೆದ್ದು ನಿದ್ದೆಗಣ್ಣಿನಲ್ಲಿಯೇ ಅದಕ್ಕಾಗಿ ತಡಕಾಡಿ ಹಲ್ಲುಜ್ಜಿಕೊಂಡರೇನೇ ಆ ದಿನ ಆರಂಭವಾಗುತ್ತೆ. ಹೀಗೆ ದಿನವನ್ನು ಆರಂಭಿಸದ ಕೊಳಕರ ಸಂಖ್ಯೆಯೂ ಈ ಜಗತ್ತಿನಲ್ಲಿರಬಹುದು. ಆದ್ರೆ ಅದು ನಾನಾ ರೋಗಗಳಿಗೆ ಆಹ್ವಾನ ನೀಡುವಂಥ ಕೆಟ್ಟ ಅಭ್ಯಾಸ. ಇರಲಿ, ನಮ್ಮ ಬದುಕಿನ ಅತ್ಯಾವಶ್ಯಕ ವಸ್ತುಗಳಲ್ಲಿ ಒಂದಾಗಿರೋ ಟೂತ್ ಬ್ರ್ರೆಷ್ ಇದೀಗ ಅತ್ಯಣಂತ ಆಧುನಿಕ ಅವತಾರದಲ್ಲಿ ನಮಗೆಲ್ಲ ಸಿಗುತ್ತಿದೆ. ಆದ್ರೆ ನೀವ್ಯಾವತ್ತಾದರೂ ಅದು ಹುಟ್ಟು ಪಡೆದದ್ದು ಯಾವ ಕಾಲಮಾನದಲ್ಲಿ? ಆ ಹೊತ್ತಿನಲ್ಲಿ ಅದರ ರೂಪುರೇಷೆ ಹೇಗಿತ್ತು ಅಂತೇನಾದರೂ ಆಲೋಚಿಸಿದ್ದೀರಾ? ದಿನಾ ಬೆಳಗೆದ್ದು ಹಲ್ಲುಜ್ಜುವಾಗ ಒಂದು ಪ್ರಸನ್ನ ಘಳಿಗೆ ನಿಮ್ಮನ್ನಾವರಿಸಿಕೊಳ್ಳುತ್ತದಲ್ಲಾ? ಆ ಹೊತ್ತಿನಲ್ಲಿ ಕೆಲ ಮಂದಿಗಾದರೂ ಬ್ರೆಷ್‌ನ ಉಗಮದ ಬಗ್ಗೆ ಕುತೂಹಲ ಮೂಡಿಕೊಂಡಿರಬಹುದು. ಹಾಗೆ ಮೂಡಿಕೊಂಡ ಕೌತುಕದ ಮೂಲ ಹುಡುಕಿದರೆ ಅದು ನಿಮ್ಮನ್ನು ಐದು ಸಾವಿರ ವರ್ಷಗಳಷ್ಟು ಹಿಂದಕ್ಕೆ ಕೈ ಹಿಡಿದು ಕರೆದೊಯ್ಯುತ್ತೆ. ಹಲ್ಲುಗಳ ಆರೋಗ್ಯ, ಸ್ವಚ್ಛತೆಯ ಬಗ್ಗೆ ಐದು ಸಾವಿರ ವರ್ಷಗಳ ಹಿಂದೆಯೇ ಅರಿವು ಮೂಡಿಕೊಂಡಿತ್ತು. ಆ ನಿಟ್ಟಿನಲ್ಲಿ…

Read More

ನಮ್ಮ ದೇಶದಲ್ಲಿ ಜಾತಿಗೊಂದು, ಧರ್ಮಕ್ಕೊಂದರಂತೆ ಒಂದಷ್ಟು ಸ್ಮಶಾನಗಳಿದ್ದಾವೆ. ತೀರಾ ಮಣ್ಣು ಮಾಡೋ ವಿಚಾರದಲ್ಲಿಯೂ ಥರ ಥರದ ಸಂಪ್ರದಾಯಗಳೂ ಇದ್ದಾವೆ. ಆದರೆ ಅದ್ಯಾವುದೇ ಜಾತಿ, ಧರ್ಮಗಳಾದರೂ ಸಾವಿನ ಬಗ್ಗೆ ಇರುವ ಭಯ ಮಾತ್ರ ಬದಲಾಗೋದಿಲ್ಲ. ಸತ್ತವರನ್ನು ಮಣ್ಣು ಮಾಡಿದ ಸ್ಮಾಶನಗಳ ಬಗೆಗಿರೋ ಹಾರರ್ ನಂಬಿಕೆಗಳೂ ಒಂದೇ ತೆರನಾದವುಗಳು. ಸತ್ತ ನಂತರ ದೆವ್ವ ಭೂತಗಳಾಗ್ತಾರೆಂಬ ನಂಬಿಕೆ ಜನರಲ್ಲಿ ಯಾವ ಪರಿ ಬೇರೂರಿದೆ ಅಂದರೆ, ಸ್ಮಶಾನದ ಸುತ್ತ ಯಾವುದೇ ಹೊತ್ತಲ್ಲಿ ಸುಳಿದಾಡಲೂ ಕೂಡಾ ಭಯ ಪಡುವಂಥಾ ವಾತಾವರಣವಿದೆ. ನೀವು ಯಾವುದೇ ದೇಶದ ಯಾವುದೇ ಭಾಗದಲ್ಲಿ ತಡಕಾಡಿದರೂ ಅಲ್ಲೆಲ್ಲ ಇಂಥ ಅತೀವ ಭಯದ ಹಾಜರಿ ಇದ್ದೇ ಇರುತ್ತೆ. ಅಲ್ಲೆಲ್ಲ ಸ್ಮಶಾನಗಳೆಂದರೆ ಅಘೋಶಿತ ನಿಶೇಧಿತ ಪ್ರದೇಶಗಳಾಗಿಯೇ ಅಸ್ತಿತ್ವದಲ್ಲಿರುತ್ತವೆ. ಆದರೆ ಡೆನ್ಮಾರ್ಕ್ ದೇಶದಲ್ಲಿ ಮಾತ್ರ ಇದಕ್ಕೆ ತದ್ವಿರುದ್ಧವಾದ ನಂಬಿಕೆಗಳು ಚಾಲ್ತಿಯಲ್ಲಿವೆ. ಅಲ್ಲಿನ ಜನ ಸಾವಿನ ನಂತರ ತಮ್ಮ ಸಮಾಧಿ ಸಾರ್ವಜನಿಕ ಸ್ಥಳವಾಗಬೇಕೆಂದೇ ಬಯಸುತ್ತಾರಂತೆ. ಆದ್ದರಿಂದಲೇ ಅಲ್ಲಿ ಸ್ಮಶಾನಗಳೂ ಕೂಡಾ ನಮ್ಮಲ್ಲಿಯ ಪಾರ್ಕುಗಳಂತೆ ಜನರಿಂದ ಗಿಜಿಗುಡುತ್ತವೆ. ಅಲ್ಲಿಯೂ ಮತ್ತೊಂದು ಜನ್ಮದ ಬಗ್ಗೆ,…

Read More