Author: Santhosh Bagilagadde

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

ಕಾಂತಾರ ಚಿತ್ರ ಬಿಡುಗಡೆಯಾಗಿ ತಿಂಗಳಾಗುತ್ತಾ ಬಂದಿದೆ. ಆದರೂ ಅದರ ಹವಾ ಮಾತ್ರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಸಾಗುತ್ತಿದೆ. ಬರೀ ಕರ್ನಾಟಕದಲ್ಲಿ ಮಾತ್ರವಲ್ಲ; ಹಿಂದಿ ಸೇರಿದಂತೆ ಇತರೇ ಭಾಷೆಗಳಲ್ಲಿಯೂ ಕಾಂತಾರ ನಾಗಾಲೋಟದಲ್ಲಿದೆ. ಅಷ್ಟಕ್ಕೂ ಕೇವಲ ಕರ್ನಾಟಕಕ್ಕೆ ಮಾತ್ರವೇ ಸೀಮಿತವಾಗಿ, ಕನ್ನಡದಲ್ಲಷ್ಟೇ ತಯಾರಾಗಿದ್ದ ಚಿತ್ರ ಕಾಂತಾರ. ಅದೀಗ ತನ್ನೊಡಲಲ್ಲಿರುವ ಕಂಟೆಂಟಿನ ಕಸುವಿನಿಂದಲೇ ಗಡಿದಾಟಿಕೊಂಡು ಪಸರಿಸುತ್ತಾ, ಪ್ಯಾನಿಂಡಿಯಾ ಚಿತ್ರವಾಗಿ ನೆಲೆ ಕಂಡುಕೊಂಡಿದೆ. ಹೊಸಾ ವಿಚಾರವೆಂದರೆ, ಹಿಂದಿಯಲ್ಲಿಯೂ ಕೂಡಾ ಸ್ಟಾರ್ ನಟರ ಸಿನಿಮಾಗಳನ್ನೇ ನಿವಾಳಿಸಿ ಎಸೆಯುವಂಥಾ ದಾಖಲೆ ಕಾಂತಾರ ಖಾತೆಗೆ ಜಮೆಯಾಗಿದೆ! ದಕ್ಷಿಣದ ದಿಕ್ಕಿನಿಂದ ಇತ್ತೀಚೆಗೆ ಬೀಸುತ್ತಿರುವ ಹೊಸಾ ಗಾಳಿಯೆದುರಿಗೆ ಬಾಲಿವುಡ್ ಅದುರಲಾರಂಭಿಸಿದೆ. ಅತ್ತ ಬಾಲಿವುಡ್ ಸಿನಿಮಾಗಳು ಒಂದರ ಹಿಂದೊಂದರಂತೆ ತೋಪಾಗುತ್ತಿರುವಾಗ, ದಕ್ಷಿಣದ ಸಿನಿಮಾಗಳು ದಾಂಗುಡಿ ಇಡುತ್ತಿವೆ. ಅಷ್ಟಕ್ಕೂ ಅಂಥಾದ್ದೊಂದು ಬದಲಾವಣೆಯ ಶಖೆಯನ್ನು ಆರಂಭಿಸಿದ್ದೇ ಕನ್ನಡದ ಕೆಜಿಎಫ್ ಅನ್ನೋದರಲ್ಲಿ ಸಂದೇಹವೇನಿಲ್ಲ. ಅದನ್ನೀಗ ಮತ್ತಷ್ಟು ಆವೇಗದೊಂದಿಗೆ ಕಾಂತಾರ ಮುಂದುವರೆಸಿದೆ. ದಿನಗಳೆದಂತೆ ಕಾಂತಾರ ಹಿಂದಿ ಅವತರಣಿಕೆಗೆ ಹೆಚ್ಚೆಚ್ಚು ಚಿತ್ರಮಂದಿರಗಳು ಮತ್ತು ಹೆಚ್ಚೆಚ್ಚು ಶೋಗಳು ಸಿಗುತ್ತಿವೆ. ದಾಖಲೆ ಮಟ್ಟದಲ್ಲಿ ಕಲೆಕ್ಷನ್ನೂ ಆಗುತ್ತಿದೆ.…

Read More

ದೀಪಾವಳಿ ಬಂದು ಹೋಗಿದೆ. ಆ ಹಬ್ಬ ನಮ್ಮ ದೇಶಾದ್ಯಂತ ಸಂಭ್ರಮ ಸಡಗರದಿಂದ ಆಚರಿಸಲ್ಪಡುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಮಾತ್ರ ಈ ಹಬ್ಬ ಬಂತೆಂದರೆ ಬಾಂಬೆ, ಬೆಂಗಳೂರಿನಂಥಾ ಮಹಾ ನಗರದ ಮಂದಿ ತತ್ತರಿಸಿ ಹೋಗುವಂತಾಗಿದೆ. ಮೊದಲೇ ಅಂಥಾ ನಗರಗಳಲ್ಲಿ ವಾಯುಮಾಲಿನ್ಯವೆಂಬುದು ವಿಕೋಪಕ್ಕೆ ಹೋಗಿದೆ. ಅಂಥಾದ್ದರ ನಡುವೆ ಗಲ್ಲಿಗಲ್ಲಿಗಳಲ್ಲಿ ಅವ್ಯಾಹತವಾಗಿ ಪಟಾಕಿ ಸಿಡಿಸುತ್ತಾ ವಾತಾವರಣವನ್ನು ಮತ್ತಷ್ಟು ಹಡಾಲೆಬ್ಬಿಸಲಾಗುತ್ತಿದೆ. ಅದರ ಪರಿಣಾಮ ಎಂಥಾದ್ದಿದೆ ಅನ್ನೋದಕ್ಕೆ ಮುಂಬೈ ನಗರದಲ್ಲಿ ಬೆಚ್ಚಿಬೀಳುವಂಥಾ ಉದಾಹರಣೆಗಳು ಸಿಕ್ಕಿವೆ. ಮುಂಬೈನಲ್ಲಿ ಪಟಾಕಿ ಸಿಡಿತದಿಂದ ವಾತಾವರಣ ಅದೆಷ್ಟು ಹದಗೆಟ್ಟಿದೆ ಎಂದರೆ, ಈ ದೀಪಾವಳಿಯ ನಂತರದಲ್ಲಿ ಅಲ್ಲಿ ಜನ ಉಸಿರಾಟದ ಸಮಸ್ಯೆಯಿಂದ ಬಳಲುತಿದ್ದಾರಂತೆ. ಈ ನಗರದ ವಿವಿಧ ಭಾಗಗಳ ವೈದ್ಯರು ಇಂಥಾದ್ದೊಂದು ಭೀಕರ ಪರಿಣಾಮವನ್ನು ಪತ್ತೆಹಚ್ಚಿದ್ದಾರೆ. ಇಲ್ಲಿನ ಬಹುತೇಕ ವೈದ್ಯರ ಬಳಿಗೆ ದಿನನಿತ್ಯ ಸಾಕಷ್ಟು ಪ್ರಮಾಣದಲ್ಲಿ ಉಸಿರಾಟದ ಸಮಸ್ಯೆಯ ಕೇಸುಗಳುಯ ಬರುತ್ತಿವೆಯಂತೆ. ಆ ಪ್ರಮಾಣ ಉಲ್ಬಣಿಸಿರೋದು ಈ ದೀಪಾವಳಿಯ ನಂತರದಲ್ಲಿಯೇ. ಇನ್ನುಳಿದಂತೆ ಅಸ್ತಮಾ ರೋಗಿಗಳಂತೂ ಈ ದೀಪಾವಳಿಯ ಪಟಾಕಿ ಏಟಿನಿಂದ ಅಕ್ಷರಶಃ ತತ್ತರಿಸಿ ಹೋಗಿದ್ದಾರೆ. ನಿರಂತವಾರ…

Read More

ತಮ್ಮಿಷ್ಟದ ಕ್ಷೇತ್ರದಲ್ಲಿ ಮಹತ್ತರವಾದದ್ದನ್ನು ಸಾಧಿಸಿ ಸೆಲೆಬ್ರಿಟಿಗಳಾಗಬೇಕನ್ನೋದು ಬಹುತೇಕರ ಬಯಕೆ. ಆ ಗೆಲುವಿನ ಪ್ರಭೆ, ಅದರ ಮುದಗಳನ್ನೆಲ್ಲ ಇಂಚಿಂಚಾಗಿ ಅನುಭವಿಸಬೇಕೆಂಬ ಕನಸೇ ಹಲವರನ್ನು ಅದರ ಹತ್ತಿರಕ್ಕಾದರೂ ಕೊಂಡೊಯ್ದು ಬಿಡೋದಿದೆ. ಹಾಗೊಂದು ಸೆಲೆಬ್ರಿಟಿ ಪಟ್ಟ ಸಿಕ್ಕಾದ ಮೇಲಿನ ಫಜೀತಿಗಳಿವೆಯಲ್ಲಾ? ಅವು ಅನುಭವಿಸಿದವರಿಗೆ ಮಾತ್ರವೇ ಗೊತ್ತಿರಲು ಸಾಧ್ಯವೇನೋ. ಇದೀಗ ಪ್ರಸಿದ್ಧ ಕ್ರಿಕೆಟಿಗ ವಿರಾಟ್ ಕೊಹ್ಲಿಗೂ ಅಂಥಾದ್ದೊಂದು ಅನುಭವವಾಗಲಾರಂಭಿಸಿದೆ. ಪ್ರಸಿದ್ಧಿಯೇ ಶಾಪವೇನೋ ಎಂಬಂಥಾ ಭಾವವೊಂದು ಕೊಹ್ಲಿಯನ್ನು ಆವರಿಸಿಕೊಂಡು ಬಿಟ್ಟಿದೆ! ಯಶಸ್ಸಿನ ಉತ್ತುಂಗದಲ್ಲಿರೋ ವಿರಾಟ್‌ಗೆ ಹಾಗನ್ನಿಸಲು ಕಾರಣವೇನೆಂಬ ಪ್ರಶ್ನೆಗೆ, ಖುದ್ದು ಆತನೇ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ವಿಚಾರವೊಂದು ಉತ್ತರವಾಗುತ್ತದೆ. ವಿರಾಟ್ ಇಲ್ಲದ ವೇಳೆಯಲ್ಲಿ ಅಭಿಮಾನಿಯೋರ್ವ ಆತ ಉಳಿದುಕೊಂಡಿದ್ದ ಹೊಟೇಲ್ ರೂಮಿನೊಳಗಿನ ಚಿತ್ರಣಗಳನ್ನು ಸೆರೆ ಹಿಡಿದಿದ್ದಾನೆ. ಅದುವೇ ವಿರಾಟ್ ಒಂದು ಮಟ್ಟಕ್ಕೆ ರೊಚ್ಚಿಗೆದ್ದು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವಂತೆ ಪ್ರೇರೇಪಿಸಿದೆ. ಒಂದು ಮನೆಯಾಗಲೀ, ವಾಸಿಸುವ ಕೋಣೆಯಾಗಲಿ, ಅದೊಂದು ಪಕ್ಕಾ ಖಾಸಗೀ ಸ್ಥಳ. ಸೆಲೆಬ್ರಿಟಿಯಾಗಿದ್ದರೂ, ಸಾಮಾನ್ಯ ಮನುಷ್ಯನೇ ಆಗಿದ್ದರೂ ಅದನ್ನು ಸಾರ್ಜಜನಿಕಗೊಳಿಸಲು ಇಷ್ಟಪಡೋದಿಲ್ಲ. ಹೀಗಿರುವಾಗ ತನ್ನ ಕೋಣೆಯ ದೃಷ್ಯಾವಳಿಗಳನ್ನು ಅಭಿಮಾನದ ಹೆಸರಲ್ಲಿ…

Read More

ಇದೀಗ ವಿಶ್ವಾದ್ಯಂತ ಕಾಂತಾರ ಚಿತ್ರ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಕರ್ನಾಟಕಕ್ಕೆ ಮಾತ್ರವೇ ಸೀಮಿತವಾಗಿ ಈ ಸಿನಿಮಾ ಮಾಡಿ, ಇದೀಗ ಪ್ಯಾನಿಂಡಿಯಾ ಮಟ್ಟದಲ್ಲಿ ಹೀರೋ ಆಗಿ ಮಿಂಚುತ್ತಿರೋ ರಿಷಬ್ ಶೆಟ್ಟಿಯ ಹವಾ ಕಂಡು ಎಲ್ಲರೂ ಅವಾಕ್ಕಾಗಿದ್ದಾರೆ. ಯಾವ ದಿಕ್ಕಿನಿಂದ ನೋಡಿದರೂ ಕೂಡಾ ಇದೊಂದು ಸಮ್ಮೋಹಕ ಗೆಲುವೆಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಅತ್ತ ಬಾಲಿವುಡ್ ಸೇರಿದಂತೆ ಎಲ್ಲ ಚಿತ್ರರಂಗಗಳ ನಟ ನಟಿಯರೂ ಈ ಸಿನಿಮಾ ನೋಡಿ ಅಚ್ಚರಿ ಪಟ್ಟುಕೊಂಡಿದ್ದಾರೆ. ರಿಷಬ್ ಶೆಟ್ಟಿಯನ್ನು ಮನಸಾರೆ ಮೆಚ್ಚಿ ಮಾತಾಡುತ್ತಿದ್ದಾರೆ. ಆದರೆ, ರಿಷಬ್ ಶೆಟ್ಟಿಯ ಸಿನಿಮಾದಿಂದಲೇ ನಟಿಯಾಗಿ, ಈಗ ಪ್ಯಾನಿಂಡಿಯಾ ಮಟ್ಟದಲ್ಲಿ ಮಿಂಚುತ್ತಿರುವ ರಶ್ಮಿಕಾ ಮಂದಣ್ಣ ಮಾತ್ರ ಈವರೆಗೂ ಕಾಂತಾರ ಬಗ್ಗೆ ತುಟಿ ಬಿಚ್ಚಿಲ್ಲ! ರಶ್ಮಿಕಾ ಮಂದಣ್ಣ ಕಾಂತಾರ ಚಿತ್ರವನ್ನು ನೋಡಿ ಅದರ ಬಗ್ಗೆ ಏನೂ ಮಾತಾಡದೆ ಮುಗುಮ್ಮಾಗಿದ್ದಾಳಾ? ನೋಡಲು ಪುರಸೊತ್ತು ಸಿಗದೆ ಸುಮ್ಮನಾಗಿದ್ದಾಳಾ ಅಂತೆಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಬಿಸಿ ಬಿಸಿ ಚರ್ಚೆಗಳಾಗುತ್ತಿದ್ದಾವೆ. ಬಹುತೇಕರು ಇದು ಗೆಲುವೆಂಬುದು ರಶ್ಮಿಕಾಳ ನೆತ್ತಿಗೇರಿರೋದರ ಪರಿಣಾಮ ಅಂತೆಲ್ಲ ಮೂದಲಿಸುತ್ತಿದ್ದಾರೆ. ಆದರೂ ಆ ಬಗ್ಗೆ…

Read More

ಪತಂಜಲಿ ಅಂತೊಂದು ಪ್ರಾಡಕ್ಟ್ ಆರಂಭಿಸಿ, ಅದರಲ್ಲೇ ನಾನಾ ಗಿಮಿಕ್ಕುಗಳನ್ನು ನಡೆಸುತ್ತಾ ಕೈತುಂಬಾ ಕಾಸು ಮಾಡಿಕೊಂಡ ಪಕ್ಕಾ ವ್ಯಾಪಾರಿ ಬಾಬಾ ರಾಮ್‌ದೇವ್. ಯೋಗಗುರು ಅಂತಲೇ ಖ್ಯಾತರಾಗಿದ್ದುಕೊಂಡು, ಆಸನಗಳ ಜೊತೆಗೆ ರಾಜಕಾರಣದೊಂದಿಗೆ ಪದ್ಮಾಸನ ಹಾಕಿ ಕೂಡುವ ಕಲೆಯನ್ನೂ ಕೂಡಾ ರಾಮ್‌ದೇವ್ ಕರಗತ ಮಾಡಿಕೊಂಡಿದ್ದಾರೆ. ದೇಸೀ ಉತ್ಪನ್ನಗಳೆಂಬ ಭ್ರಮೆ ಬಿತ್ತುತ್ತಲೇ ಭರ್ಜರಿಯಾಗಿ ಬೆಳೆ ತೆಗೆದಿರೋ ಬಾಬಾ, ಆಗಾಗ ಒಂದಷ್ಟು ಹೇಳಿಕೆಗಳ ಮೂಲಕ ವಿವಾದಗಳಿಗೂ ಕಾರಣವಾಗೋದಿದೆ. ಇದೀಗ ಸತ್ಯದ ಭೂಮಿಕೆಗೆ ಹತ್ತಿರವಾದ, ವಿವಾದವೊಂದು ತಣ್ಣಗೆ ಹೊತ್ತಿಕೊಳ್ಳುವ ಗುಣಲಕ್ಷಣವಿರುವ ಕೆಲ ಮಾತುಗಳು ಬಾಬಾ ಕಡೆಯಿಂದ ಹೊರಬಿದ್ದಿವೆ. ಉತ್ತರಪ್ರದೇಶದಲ್ಲಿ ಡ್ರಗ್ಸ್ ವಿರೋಧಿ ಅಭಿಯಾನವೊಂದು ನಡೆಯುತ್ತಿದೆ. ಅದಕ್ಕೆ ಬಾಬಾ ರಾಮ್‌ದೇವ್ ಚಾಲನೆ ಕೊಟ್ಟಿದ್ದಾರೆ. ಈ ಸಂದರ್ಭದಲ್ಲಿಯೇ ಡ್ರಗ್ಸ್ ಮಾಫಿಯಾದ ಬಗ್ಗೆ, ಅದು ದೇಶಾದ್ಯಂತ ಹಬ್ಬುತ್ತಿರುವ ಬಗ್ಗೆ ಮಾತಾಡಿರುವ ರಾಮ್‌ದೇವ್, ಕೆಲ ಬಾಲಿವುಡ್ ನಟರಿಗೂ ಡ್ರಗ್ಸ್ ಸೇವಿಸುವ ಚಟವಿದೆ ಅಂತ ನೇರಾನೇರ ಆರೋಪ ಮಾಡಿದ್ದಾರೆ. ಬಾಲಿವುಡ್ ನಟ ನಟಿಯರಲ್ಲಿ ಬಹುತೇಕರು ಡ್ರಗ್ಸ್ ಚಟಕ್ಕೆ ದಾಸರಾಗಿದ್ದಾರೆ ಅಂದಿರುವ ಬಾಬಾ, ಸಲ್ಮಾನ್ ಖಾನ್ ಮೇಲೆ ನೇರವಾಗಿಯೇ…

Read More

ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಂಪರ್ಕ ಸಾಧಿಸುವಲ್ಲಿ ರಸ್ತೆಗಳದ್ದು ಪ್ರಧಾನ ಪಾತ್ರ. ಒಂದು ಬಿಂದುವಿನಿಂದ ಇಂಥಾ ರಸ್ತೆಗಳು ಇಡೀ ಜಗತ್ತಿನ ನಾನಾ ಭಾಗಗಳನ್ನು ಬೆಸೆದಿವೆ. ಆಯಾ ದೇಶಗಳ ಜನ ಜೀವನವನ್ನು ಸಂಪರ್ಕಿಸುತ್ತಿವೆ. ಆದರೆ ಕೆಲವಾರು ಪ್ರದೇಶಗಳಿಗೆ ಸಂಪರ್ಕವೇ ಅಸಾಧ್ಯ ಅನ್ನುವಂತಿರುತ್ತವೆ. ಅದಕ್ಕೆ ಕಾರಣವಾಗಿರೋದು ಪ್ರಾಕೃತಿಕ ರಚನೆ ಮತ್ತು ಅದು ತಂದೊಡುವ ಸವಾಲುಗಳು. ಇಂಥಾದ್ದರಿಂದಲೇ ಅದೆಷ್ಟೋ ಪ್ರದೇಶಗಳು ಶತಮಾನಗಳ ಕಾಲ ನಾಗರಿಕ ಬದುಕಿನ ಸಂಪರ್ಕವೇ ಇಲ್ಲದಂತಿರುತ್ತಿದ್ದವು. ಅಂಥಾ ಕ್ಲಿಷ್ಟಕರ ಪ್ರದೇಶಗಳನ್ನು ಬೆಸೆಯಲೆಂದೇ ಆಧುನಿಕ ಆವಿಷ್ಕಾರಗಳು ಕಂಡುಕೊಂಡಿರೋದು ಸುರಂಗ ಮಾರ್ಗಗಳನ್ನು. ಅಷ್ಟಕ್ಕೂ ಇಂಥಾ ಸುರಂಗ ಮಾರ್ಗಗಳ ಶತ ಶತ ಮಾನಗಳಿಂದಲೂ ಇದ್ದಾವೆ. ಹುಡುಕ ಹೋದರೆ ಅದರ ಹಿಸ್ಟರಿಯೇ ಬಲು ರೋಚಕ. ಆದರೆ ಆಧುನಿಕ ಮನುಷ್ಯ ನಿರ್ಮಿತ ಸುರಂಗಗಳಂತೂ ಎಲ್ಲವನ್ನೂ ಹಿಂದಿಕ್ಕುವಂತಿವೆ. ಇದೀಗ ಪ್ರತೀ ದೇಶಗಳಲ್ಲಿಯೂ ಸುರಂಗ ಮಾರ್ಗಗಳಿವೆ. ಆದರೆ ನಾರ್ವೆ ದೇಶದಲ್ಲಿರೋ ಸುರಂಗ ಮಾರ್ಗ ಮಾತ್ರ ಅವೆಲ್ಲವುಗಳಲ್ಲಿ ಮೊದಲ ಸ್ಥಾನ ಕಾಯ್ದಿಟ್ಟುಕೊಂಡಿದೆ. ಅದು ನಾರ್ವೆಯ ಲಾರ್ಡಾಲ್ ಸುರಂಗ. ಅಲ್ಲಿನ ಬೆಟ್ಟ ಗುಡ್ಡಗಳಿಂದಾವೃತವಾದ ಪ್ರದೇಶಗಳ ಜನರಿಗೆ…

Read More

ಡ್ರಗ್ಸ್ ನಶೆಯೆಂಬುದೀಗ ಒಂದಿಡೀ ದೇಶವನ್ನೇ ಅಪಾದಮಸ್ತಕ ಆವರಿಸಿಕೊಂಡಿದೆ. ಆದರೆ, ನಮ್ಮ ರಾಜ್ಯದಲ್ಲಿ ಪೊಲೀಸರೇಕೋ ಚಿತ್ರರಂಗದ ಮಂದಿಯನ್ನೇ ಗುರಿಯಾಗಿಸಿಕೊಂಡು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇದರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಒಂದಷ್ಟು ಪ್ರಶ್ನೆಗಳಿರೋದು ಸತ್ಯ. ಆದರೆ, ಹಾಗೆ ಚಿತ್ರರಂಗ ಡ್ರಗ್ಸ್ ವಿರುದ್ಧದ ಕಾರ್ಯಾಚರಣೆಯ ಪ್ರಧಾನ ಟಾರ್ಗೆಟ್ ಆಗಿರೋದಕ್ಕೂ ಒಂದಷ್ಟು ನಿಖರ ಕಾರಣಗಳಿದ್ದಾವೆಂಬುದೂ ಅಷ್ಟೇ ಸತ್ಯ. ಯಾಕೆಂದರೆ, ಕಾಸು, ಖ್ಯಾತಿಯ ಮದವೇರಿದ ಬಹುತೇಕ ಎಲ್ಲ ಭಾಷೆಗಳ ಚಿತ್ರರಂಗಗಳಲ್ಲಿಯೂ ನಶೆಯ ರುದ್ರನರ್ತನ ಸಾಂಘವಾಗಿಯೇ ನಡೆಯುತ್ತಿದೆ. ಅದರಲ್ಲಿಯೂ ಬಾಲಿವುಡ್‌ನಲ್ಲಿಯಂತೂ ಡ್ರಗ್ಸ್ ಚಟ ಮಾಮೂಲಿ ಎಂಬಂತಾಗಿದೆ. ಆ ಚಟಕ್ಕೆ ದಾಸಾನುದಾಸನಾಗಿ, ಒಂದು ಹಂತದಲ್ಲಿ ತನ್ನ ಬದುಕನ್ನೇ ಅಧ್ವಾನವೆಬ್ಬಿಸಿಕೊಂಡಿದ್ದಾತ ಸಂಜಯ್ ದತ್. ಇದೀಗ ಖುದ್ದು ಅವರೇ ಡ್ರಗ್ಸ್ ಬಗ್ಗೆ ಜಾಗೃತಿ ಮೂಡಿಸುವಂಥಾ ಮಾತುಗಳನ್ನಾಡಿದ್ದಾರೆ. ಸಂಜಯ್ ದತ್‌ನದ್ದು ವರ್ಣರಂಜಿತ ವ್ಯಕ್ತಿತ್ವ. ಕೇವಲ ಹೆಂಗಳೆಯರ ವಿಚಾರದಲ್ಲಿ ಮಾತ್ರವಲ್ಲ; ಬದುಕಿನ ನಾನಾ ಮಜಲುಗಳಲ್ಲಿಯೂ ಆತನೊಬ್ಬ ಸ್ವೇಚ್ಛೆಯನ್ನೇ ಧರಿಸಿಕೊಂಡಂತೆ ಬದುಕಿದ ಆಸಾಮಿ. ಒಂದು ಹಂತದಲ್ಲಿ ಸಂಜು ಬಾಬಾಗೆ ಡ್ರಗ್ಸ್‌ನ ರುಚಿ ಹತ್ತಿಕೊಂಡಿತ್ತು. ಸಾಮಾನ್ಯವಾಗಿ, ಈ ಡ್ರಗ್ಸ್ ಚಟದ ವಿಚಾರದಲ್ಲಿ…

Read More

ಆಹಾರವನ್ನು ಪ್ರಸಾದವೆಂದೇ ಪರಿಗಣಿಸಿ ಕಣ್ಣಿಗೊತ್ತಿಕೊಂಡು ತಿನ್ನೋ ಪರಂಪರೆ ನಮ್ಮಲ್ಲಿ ಚಾಲ್ತಿಯಲ್ಲಿದೆ. ತಿನ್ನೋ ಆಹಾರದ ವಿಚಾರದಲ್ಲಿ ಸಣ್ಣಗೊಂದು ಅಹಮ್ಮಿಕೆ ತೋರಿಸೋದನ್ನೂ ಪಾಪವೆಂದೇ ಹೇಳಲಾಗುತ್ತೆ. ಅದರಲ್ಲಿ ಯಾವುದೇ ಥರದ ವಿಕೃತಿ ನಡೆಸೋದನ್ನು ನಾವ್ಯಾರೂ ಸಹಿಸಿಕೊಳ್ಳೋದಾಗಲಿ, ಅರಗಿಸಿಕೊಳ್ಳೋದಾಗಲಿ ಸಾಧ್ಯವೇ ಇಲ್ಲ. ಆದರೆ ಕೆಲ ದೇಶಗಳಲ್ಲಿ ಕೇಳಿದರೇನೇ ಅಸಹ್ಯವಾಗುವಂಥಾ ಆಹಾರ ಕ್ರಮಗಳು ಚಾಲ್ತಿಯಲ್ಲಿವೆ. ನಾವು ಚೀನಾದಲ್ಲಿ ರೂಢಿಗತವಾಗಿರೋ ಆಹಾರ ಕ್ರಮಗಳನ್ನು ಕಂಡೇ ವಾಕರಿಕೆ ಬರಿಸಿಕೊಳ್ಳುತ್ತೇವೆ. ಆದರೆ, ಅದನ್ನೇ ಮೀರಿಸುವಂಥಾ ಒಂದಷ್ಟು ಆಹಾರ ಪದ್ಧತಿಗಳೂ ರೂಢಿಯಲ್ಲಿದ್ದಾವೆ. ನಮ್ಮಲ್ಲಿ ಬಾಯಲ್ಲಿ ನೀರೂರಿಸುವಂಥಾ ಆಹಾರ ಮೇಳಗಳು, ಪ್ರದರ್ಶನಗಳು ನಡೆಯೋದು ಮಾಮೂಲು. ಆದರೆ ಸ್ಪೀಡನ್ ದೇಶದ ಮಲ್ಮೋ ಎಂಬಲ್ಲಿ ನಡೆಯೋದು ಮಾತ್ರ ಅತ್ಯಂತ ಅಸಹ್ಯದ ಆಹಾರ ಪ್ರದರ್ಶನ. ಬಹುಶಃ ಅಲ್ಲಿನ ಫುಡ್ ಮ್ಯೂಸಿಯಂನಲ್ಲಿ ವರ್ಷಕ್ಕೊಮ್ಮೆ ಪ್ರದರ್ಶನಕ್ಕಿಡುವ ಚಿತ್ರವಿಚಿತ್ರ ಆಹಾರಗಳ ವಿವರ ಕೇಳಿದರೆ ಒಂದು ವಾರ ಊಟ ಸೇರೋದು ಡೌಟು. ಯಾಕೆಂದರೆ ಅಲ್ಲಿ ನಾವು ಕಲ್ಪಿಸಿಕೊಳ್ಳಲೂ ಆಗದ ಆಹಾರಗಳಿರುತ್ತವೆ. ಅದನ್ನು ಕಂಡು, ತಿಂದು ಕಿಕ್ಕೇರಿಸಿಕೊಳ್ಳಲು ಜನಜಂಗುಳಿಯೇ ನೆರೆಯುತ್ತೆ. ಅಲ್ಲಿ ಇಡೀ ಆಮೆಯ ಸೂಪ್, ಕುರಿಯ…

Read More

ಇದು ಒಂದಕ್ಕಿಂತ ಒಂದು ಭಿನ್ನವಾದ, ಒಂದೊಂದೂ ವಿಸ್ಮಯಕಾರಿಯಾಗ ಕೋಟ್ಯಾನುಕೋಟಿ ಜೀವ ಸಂಕುಲವಿರೋ ಜಗತ್ತು. ಅಮೇಜಾನಿನಂತ ಕಾಡಿನಲ್ಲಿ ವಾಸಿಸೋ ಪ್ರಾಣಿ, ಪಕ್ಷಿ, ಜೀವ ಸಂಕುಲದ ಬಗ್ಗೆ ಈ ಕ್ಷಣಕ್ಕೂ ತಲಾಶು ನಡೆಯುತ್ತಿದೆ. ಆದರೆ ಅದು ಯಾವತ್ತಿಗೂ ಪೂರ್ಣವಾಗೋದು ಸಾಧ್ಯವಿಲ್ಲವೇನೋ. ಯಾಕಂದ್ರೆ ಅದರ ಅಗಾಧತೆಯೇ ಅಂಥಾದ್ದಿದೆ. ಹೀಗೆ ನಮಗೆ ಪರಿಚಯವಿಲ್ಲದ ಜೀವಿಗಳ ಕಥೆಯನ್ನ ಪಕ್ಕಕ್ಕಿಡೋಣ. ಆದ್ರೆ ನಮಗೆ ಪರಿಚಿತವಾಗಿರೋ ಜೀವಿಗಳ ಬಗ್ಗೆ ನಮಗೆ ಗೊತ್ತೇ ಇಲ್ಲದ ಅಸಂಖ್ಯಾತ ಸಂಗತಿಗಳಿದ್ದಾವೆ. ಮುಳ್ಳು ಹಂದಿ ಅನ್ನೋ ಜೀವಿ ಕಾಡಂಚಿನ ಪ್ರದೇಶದಲ್ಲಿರುವವರಿಗೆಲ್ಲ ಪರಿಚಿತ. ಬೇರೆ ಭಾಗಗಳ ಜನ ಕೂಡಾ ಅದರ ಬಗ್ಗೆ ಒಂದಷ್ಟು ಕೇಳಿರಬಹುದು. ದೊಡ್ಡ ಕಾಡು ಹಂದಿಗಳಿರುತ್ತವಲ್ಲಾ? ಅದುಗಳಿಗಿಂತ ತೀರಾ ಚಿಕ್ಕ ದೇಹ ಮುಳ್ಳುಹಂದಿಗಳದ್ದಾಗಿರುತ್ತೆ. ಇವುಗಳಲ್ಲಿನ ವ್ಯತ್ಯಾಸ ಅಷ್ಟಕ್ಕೆ ಮಾತ್ರವೇ ಸೀಮಿತವಾಗಿಲ್ಲ. ಮಾಮೂಲಿ ಕಾಡು ಹಂದಿಗಳಿಗೆ ಮೈ ತುಂಬಾ ಒರಟಾದ ಕೂದಲುಗಳಿದ್ದರೆ, ಈ ಮುಳ್ಳು ಹಂದಿಗಳಿಗೆ ಮಾತ್ರ ಮೈ ತುಂಬಾ ಚೂಪಾದ ಮುಳ್ಳುಗಳಿರುತ್ತವೆ. ಅವು ಶತ್ರುಗಳಿಂದ ತಮ್ಮನ್ನು ಕಾಪಾಡಿಕೊಳ್ಳಲು ಆ ಮುಳ್ಳುಗಳನ್ನ ರಕ್ಷಾ ಕವಚದಂತೆ ಬಳಸಿಕೊಳ್ಳುತ್ತವೆ. ಈ…

Read More

ವೈಜ್ಞಾನಿಕ ಭೂಮಿಕೆಯಲ್ಲಿ ಆಲೋಚಿಸುವವರ ಪಾಲಿಗೆ ಈ ದೆವ್ವ ಭೂತಗಳೆಲ್ಲವೂ ಒಂದು ಭ್ರಮೆ. ಅದರ ಆಚೀಚೆಗೆ ಇರೋದು ಬರೀ ಮಿಥ್ಯ ಮಾತ್ರ. ಆದ್ದರಿಂದ ಅದರ ಬಗ್ಗೆ ಹುಡುಕಾಡೋದಕ್ಕೆ ಏನೆಂದರೆ ಏನೂ ಉಳಿದುಕೊಂಡಿಲ್ಲ. ಒಂದೊಂದು ಪ್ರದೇಶಗಳ ರಚನೆ ಮತ್ತು ಅದು ಹುಟ್ಟಿಸೋ ಭೀತ ಭಾವನೆಗಳೇ ದೆವ್ವ-ಭೂತಗಳೆಂಬೋ ಕಲ್ಪನೆಯ ಮೂಲ ಅನ್ನೋದು ವಿಚಾರವಂತರ ಅಭಿಮತ. ಆದರೆ, ಇಂಥಾ ಸಥ್ಯದಾಚೆಗೂ ಈ ಸಮಾಜದಲ್ಲಿ ಒಂದಷ್ಟು ನಂಬಿಕೆಗಳು ಹಾಸು ಹೊಕ್ಕಾಗಿವೆ. ಕೆಲ ಪ್ರದೇಶಗಳು ಈವತ್ತಿಗೂ ಭೂತ ಪ್ರೇತಗಳ ಆವಾಸ ಸ್ಥಾನಗಳಾಗಿ ಬಿಂಬಿಸಲ್ಪಟ್ಟಿವೆ. ಈ ಕ್ಷಣಕ್ಕೂ ಐತಿಹಾಸಿಕ ಕೋಟೆಯೊಂದು ದೆವ್ವಗಳ ಆವಾಸ ಸ್ಥಾನದಂತಾಗಿ ಜನರಲ್ಲೊಂದು ಖಾಯಂ ಭಯವನ್ನ ಬಿತ್ತಿ ಬಿಟ್ಟಿದೆ. ರಾಜಸ್ಥಾನದ ಪರ್ವತ ಶ್ರೇಣಿಗಳ ತಪ್ಪಲಿನಲ್ಲಿ ಮೈಚಾಚಿಕೊಂಡಿರೋ ಒಂದು ಕೋಟೆಗೂ ಕೂಡಾ ಅಂಥಾದ್ದೇ ಭೀಕರ ಚರ್ಯೆಯೊಂದು ಅಂಟಿಕೊಂಡಿದೆ. ಈ ಕೋಟೆಯಿರೋದು ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಅರಾವಳಿ ಪರ್ವತ ಶ್ರೇಣಿಗಳಲ್ಲಿ. ಭಾನಗಡ್ ಕೋಟೆ ಎಂದೇ ಪ್ರಸಿದ್ಧಿ ಪಡೆದಿರೋ ಈ ಕೋಟೆ ಸುತ್ತಲ ಪ್ರದೇಶಗಳಲ್ಲೊಂದು ಕ್ಯೂರಿಯಾಸಿಟಿಗೆ ಕಾರಣವಾಗಿದೆ. ಯಾಕಂದ್ರೆ ಅಲ್ಲಿ ಅದೆಷ್ಟೋ ದೆವ್ವ…

Read More